For Quick Alerts
ALLOW NOTIFICATIONS  
For Daily Alerts

ವಿಶ್ವ ಏಡ್ಸ್ ದಿನಾಚರಣೆ-ಹೆಚ್‌ಐವಿ ರೋಗದ ಸತ್ಯಾಸತ್ಯತೆ

By Super
|

ಡಿಸೆಂಬರ್ 1. ವಿಶ್ವ ಏಡ್ಸ್ ದಿನ. ವಿಶ್ವ ಆರೋಗ್ಯ ಸಂಸ್ಥೆಯು 1988 ರಲ್ಲಿ ಡಿಸೆಂಬರ್ 1 ವಿಶ್ವ ಏಡ್ಸ್ ದಿನವೆಂದು ಘೋಷಿಸಿತು. ಏಡ್ಸ್ ಎಂಬ ಮಾರಕ ರೋಗವನ್ನು ತಡೆಯಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುವುದು. ಏಡ್ಸ್ ರೋಗಿಗಳನ್ನು ಹೀಗೆ ನೋಡುವುದು ಸರಿಯೇ?

ಸಾಮಾನ್ಯವಾಗಿ ಏಡ್ಸ್ ಎಂಬ ಮಹಾಮಾರಿ ರೋಗವನ್ನು ಹೆಚ್ ಐ ವಿ ರೋಗವೆಂದೇ ಪರಿಗಣಿಸಲಾಗುತ್ತದೆ. ಏಡ್ಸ್ ಅಂದರೆ (acquired immune deficiency syndrome) ಎಂಬ ಕಾಯಿಲೆಯ ಹೃಸ್ವರೂಪ. ಇದರಲ್ಲಿ acquired ಎಂದರೆ ಬೇರೆಯವರಿಂದ ಪಡೆದುಕೊಂಡ ಎಂಬ ಅರ್ಥವಿದೆ. ಆದ್ದರಿಂದಲೇ ಏಡ್ಸ್ ಒಬ್ಬರಿಂದ ಇನ್ನೊಬ್ಬರ ಹರಡುತ್ತದೆ. ಇದನ್ನು ಅರಿಯುವ ಮುನ್ನ ಎಚ್ ಐ ವಿ (HIV) ಎಂದರೇನು ಎಂದು ತಿಳಿದುಕೊಳ್ಳುವುದು ಅವಶ್ಯಕ. ಬನ್ನಿ ಹೆಚ್ ಐ ವಿ (HIV) ರೋಗ ಎಂದರೇನು?, ಇದರ ಲಕ್ಷಣಗಳು ಏನು ಎಂಬುದನ್ನು ಸ್ಲೈಡ್ ಶೋ ಮೂಲಕ ನೋಡೋಣ..

 (HIV) ಎಂದರೇನು?

(HIV) ಎಂದರೇನು?

ಇದನ್ನು ಅರ್ಥಮಾಡಿಕೊಳ್ಳುವ ಮುನ್ನ ನಮ್ಮ ಆರೋಗ್ಯದ ಬಗ್ಗೆ ಕೊಂಚ ತಿಳಿದುಕೊಳ್ಳಬೇಕು. ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಲಕ್ಷಾಂತರ, ಕೋಟ್ಯಂತರ ವಿಧಾನದ ಸೂಕ್ಷ್ಮಕ್ರಿಮಿಗಳು, ವೈರಸ್ಸುಗಳು,

ಬ್ಯಾಕ್ಟೀರಿಯಾಗಳು ಹರಡಿಕೊಂಡಿವೆ. ಇವು ಗಾಳಿ, ಆಹಾರ, ನೀರು ಮೊದಲಾದ ಎಲ್ಲಾ ಮಾಧ್ಯಮಗಳ ಮೂಲಕ ನಮ್ಮ ಮೇಲೆ ಆಕ್ರಮಣ ಮಾಡುತ್ತಲೇ ಇರುತ್ತವೆ. ಜಗತ್ತಿನಲ್ಲಿ ಈ ಕ್ರಿಮಿಗಳ ಆಕ್ರಮಣಕ್ಕೆ ತುತ್ತಾಗದೇ ಇರುವ ಏಕಮಾತ್ರ ಜೀವಿ ಎಂದರೆ ಈಗತಾನೇ ಹುಟ್ಟಿದ ಮಗು. ತಾಯಿಯ ಗರ್ಭ ಅದಕ್ಕೆ ಯಾವುದೇ ಸೋಂಕು ತಗಲದಂತೆ ರಕ್ಷಿಸುತ್ತದೆ. ಆದರೆ ಜನನದ ಬಳಿಕ ಗಾಳಿ, ನೀರಿನ ಮೂಲಕ ಮಗುವೂ ಈ ಎಲ್ಲಾ ಸೂಕ್ಷ್ಮಜೀವಿಗಳ ಆಕ್ರಮಣಕ್ಕೆ ತುತ್ತಾಗುತ್ತದೆ.

(HIV) ಎಂದರೇನು?

(HIV) ಎಂದರೇನು?

ಅಂದಿನಿಂದಲೇ ಮಗುವಿನ ಶರೀರ ಇದನ್ನು ಎದುರಿಸಲು ಸಜ್ಜಾಗುತ್ತದೆ. ಇದಕ್ಕೆ ಹೆಚ್ಚಿನ ವಿಧದ ಬ್ಯಾಕ್ಟೀರಿಯಾಗಳನ್ನು ಒಡ್ಡದೇ ಇರಲೆಂದೇ ಹುಟ್ಟಿದ ಮಗುವನ್ನು ಹೆಚ್ಚಿನ ಜನರು ನೋಡಲು ವೈದ್ಯರು ಅನುಮತಿ ನೀಡುವುದಿಲ್ಲ. ಆದರೆ ನಮ್ಮಲ್ಲರ ಶರೀರದಲ್ಲಿ ಈ ವೈರಸ್ಸು, ಬ್ಯಾಕ್ಟೀರಿಯಾ ಮೊದಲಾದವುಗಳನ್ನು ಎದುರಿಸಲು ಒಂದು ರಕ್ಷಣಾ ವ್ಯವಸ್ಥೆ ಇದೆ. ಇದನ್ನೇ ರೋಗ ನಿರೋಧಕ ವ್ಯವಸ್ಥೆ (Immune system) ಎಂದು ಕರೆಯುತ್ತಾರೆ. ನಮ್ಮ ದೇಹ ಸುತ್ತಲೂ ಇರುವ ಸಾಮಾನ್ಯವಾದ ಎಲ್ಲಾ ಬ್ಯಾಕ್ಟೀರಿಯಾ ಮತ್ತು ಕ್ರಿಮಿಗಳಿಗೆ ಸೂಕ್ತವಾದ ರಕ್ಷಣೆಯನ್ನು ಹುಟ್ಟಿದಾಗಿನಿಂದ ಬೆಳೆಸಿಕೊಳ್ಳುತ್ತಾ ಬರುತ್ತದೆ.

(HIV) ಎಂದರೇನು?

(HIV) ಎಂದರೇನು?

ಪ್ರತಿ ಬಾರಿ ನಮಗೆ ಶೀತ ನೆಗಡಿಯಾಗುವುದು ಹೊಸ ಹೊಸ ವೈರಸ್ಸಿನಿಂದ. ಇದಕ್ಕೆ ಸೂಕ್ತವಾದ ರಕ್ಷಣಾ ವ್ಯವಸ್ಥೆಯನ್ನು ಒಂದು ವಾರದಲ್ಲಿ ದೇಹ ನಿರ್ಮಿಸಿಕೊಂಡು ಬಿಡುತ್ತದೆ. ಇದಕ್ಕೆ ವೈದರೇ "ಶೀತಕ್ಕೆ ಔಷಧಿ ತೆಗೆದುಕೊಂಡರೆ ಒಂದೇ ವಾರದಲ್ಲಿ ಗುಣವಾಗುತ್ತದೆ, ಇಲ್ಲದಿದ್ದರೆ ಏಳು ದಿನ ಬೇಕು" ಎಂದು ವ್ಯಂಗ್ಯವಾಡುತ್ತಾರೆ. ಒಂದು ವೇಳೆ ಈ ವ್ಯವಸ್ಥೆಗೇ ರೋಗ ಬಡಿದರೆ? ಇದನ್ನೇ ಎಚ್.ಐ.ವಿ (Human Immunodeficiency Virus) ಅಂದರೆ, ಈ ವ್ಯವಸ್ಥೆಯನ್ನೇ ಶಿಥಿಲಗೊಳಿಸುವ ವೈರಸ್ಸು ಎಂದು ಕರೆಯುತ್ತಾರೆ.

(HIV) ಎಂದರೇನು?

(HIV) ಎಂದರೇನು?

ಇದೊಂದು ಮಾರಕ ರೋಗವಾಗಿದ್ದು ಚಿಕ್ಕ ಪುಟ್ಟ ಬ್ಯಾಕ್ಟೀರಿಯಾ, ವೈರಸ್ಸುಗಳ ಧಾಳಿಯನ್ನೂ ಎದುರಿಸಲಾಗದ ಅಸಹಾಯಕ ಸ್ಥಿತಿಗೆ ದೇಹ ಒಡ್ಡುತ್ತದೆ. ಈ ಸುಸಮಯವನ್ನು ಬ್ಯಾಕ್ಟ್ರೀರಿಯಾಗಳು ಬಿಟ್ಟಾವೆಯೇ? ದೇಹವನ್ನು ಒಳಗಿನಿಂದ ಶಿಥಿಲಗೊಳಿಸುತ್ತಾ ಬಂದು ಒಂದು ಹಂತದಲ್ಲಿ ಸಾವಿಗೆ ಕಾರಣವಾಗುತ್ತದೆ. ಈ ಕಾಯಿಲೆಗೆ ಇದುವರೆಗೆ ಸಮರ್ಥವಾದ ಔಷಧವಿಲ್ಲ. ಈಗಿರುವ ಔಷಧಿಗಳೆಲ್ಲಾ ಇದರ ಪ್ರಮಾಣವನ್ನು ಕೊಂಚ ಕಡಿಮೆ ಮಾಡುವಲ್ಲಿ ಮಾತ್ರವೇ ಇದೆ.

(HIV) ಎಂದರೇನು?

(HIV) ಎಂದರೇನು?

ಇದು ಒಬ್ಬರಿಂದ ಇನ್ನೊಬ್ಬರಿಗೆ ಅಸುರಕ್ಷಿತ ಸಂಪರ್ಕ, ಸೋಂಕು ತಗುಲಿದ ವ್ಯಕ್ತಿಗೆ ಚುಚ್ಚಿದ ಸೂಜಿ, ಇಂಜೆಕ್ಷನುಗಳನ್ನು ಇನ್ನೊಬ್ಬರಿಗೆ ಉಪಯೋಗಿಸುವುದು, ಕೆಲವೊಮ್ಮೆ ತಾಯಿಯಿಂದ ಹೊಟ್ಟೆಯಲ್ಲಿರುವ ಮಗುವಿಗೂ ತಗುಲಬಹುದು. ಈ ವೈರಸ್ಸು ಸೋಂಕು ತಗುಲಿದ ವ್ಯಕ್ತಿಯ ದ್ರವಗಳಾದ ವೀರ್ಯಾಣು, ಮಹಿಳೆಯರ ಮಾಸಿಕ ಸ್ರಾವ, ಗುದಸ್ರಾವ, ತಾಯಿ ಹಾಲು ಮೊದಲಾದವುಗಳ ಮೂಲಕ ಹರಡುತ್ತದೆ. ಮುಖ್ಯವಾಗಿ ಈ ವೈರಸ್ಸು ನಮ್ಮ ರಕ್ತದಲ್ಲಿರುವ ಸೈನಿಕ ಕಣಗಳಾದ ಬಿಳಿ ರಕ್ತಕಣಗಳ ಶಕ್ತಿಯನ್ನೇ ಉಡುಗಿಸುತ್ತದೆ.

(HIV) ಎಂದರೇನು?

(HIV) ಎಂದರೇನು?

ಬಿಳಿರಕ್ತಕಣಗಳಲ್ಲಿ ಪ್ರಮುಖವಾದ T-helper cell ಎಂಬ ಕಣವನ್ನು ಈ ವೈರಸ್ಸು ಆಕ್ರಮಿಸಿಕೊಂಡು ಒಂದರಿಂದ ಎರಡಾಗಿ ದೇಹದೊಳಗಿನ ರಕ್ತಬೀಜಾಸುರನಂತೆ ಬೆಳೆಯುತ್ತಾ ಹೋಗುತ್ತದೆ. ಈ ಕಣಗಳು ಬಿಳಿ ರಕ್ತಕಣಗಳನ್ನೆಲ್ಲಾ ನಿಷ್ಕ್ರಿಯಗೊಳಿಸಿ ರೋಗ ನಿರೋಧಕ ಶಕ್ತಿಯನ್ನು ಉಡುಗಿಸುತ್ತವೆ. ವಿಶ್ವದೆಲ್ಲೆಡೆ ಹೆಚ್ಚಿನ ಪ್ರಕೋಪ ತೋರಿರುವ ಈ ಕಾಯಿಲೆ ಬ್ರಿಟನ್ನಿನ ಸಲಿಂಗಕಾಮಿಗಳಲ್ಲಿ ಅತಿಹೆಚ್ಚಾಗಿ ಕಂಡುಬಂದಿದೆ. ಹಾಗೂ ಆಫ್ರಿಕಾದ ಪುರುಷ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬಂದಿದೆ.

ಇರದ ಲಕ್ಷಣಗಳೇನು?

ಇರದ ಲಕ್ಷಣಗಳೇನು?

ಈ ರೋಗ ತಗುಲಿದ ಪ್ರಾರಂಭದಲ್ಲಿ ಏನೂ ಗೊತ್ತಾಗದೇ ಇದ್ದರೂ ಎರಡರಿಂದ ಆರು ವಾರಗಳ ಕಾಲ ಚಿಕ್ಕ ಚಿಕ್ಕದಾಗಿ ಜ್ವರ ಬರುವ ಲಕ್ಷಣಗಳು ಶೇಖಡಾ ಎಂಭತ್ತಕ್ಕೂ ಹೆಚ್ಚು ಜನರಲ್ಲಿ ಕಂಡುಬರುತ್ತದೆ. ಈ ಅವಧಿಯಲ್ಲಿ ಕೆಲವೊಮ್ಮೆ ಅತಿಹೆಚ್ಚಾಗುವ ಜ್ವರ, ಗಂಟಲಲ್ಲಿ ತುರಿಕೆ, ಚರ್ಮದೆಲ್ಲೆಡೆ ತುರಿಕೆ ಮತ್ತು ತುರಿಸಿದೆಡೆ ಕೆಂಪು ಗೀರುಗಳಾಗುವುದು, ಸುಸ್ತು, ಗ್ರಂಥಿಗಳು ಉಬ್ಬಿರುವುದು, ಕಾಲು, ಕೈಗಳ ಗಂಟುಗಳು ಮತ್ತು ಸ್ನಾಯುಗಳಲ್ಲಿ ವಿಪರೀತ ನೋವು ಕಂಡುಬರುತ್ತದೆ.

ಇರದ ಲಕ್ಷಣಗಳೇನು?

ಇರದ ಲಕ್ಷಣಗಳೇನು?

ಒಂದು ವೇಳೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಾಗದೇ ಇದ್ದರೆ ಇದು ನಿಧಾನವಾಗಿ ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಸಂಪೂರ್ಣವಾಗಿ ಉಡುಗಿಸಿ ಸಾವಿನ ಅಂಚಿನತ್ತ ಕೊಂಡೊಯ್ಯುತ್ತದೆ. ಇದಕ್ಕೆ ಒಂದು ವರ್ಷವೇ ಹಿಡಿಯಬಹುದು ಅಥವಾ ಈ ವ್ಯವಸ್ಥೆಗೇ ಸೆಡ್ಡು ಹೊಡೆಯುವ ಶರೀರದ ಮೂಲಕ ಹತ್ತು ವರ್ಷಗಳೇ ಹಿಡಿಯಬಹುದು. ಈ ಹಂತದಲ್ಲಿ ತೂಕದಲ್ಲಿ ಅತೀವವಾದ ಇಳಿಕೆ (ಮೂಳೆ ಚಕ್ಕಳವಾಗುವ ಸ್ಥಿತಿ),ನಿಯಂತ್ರಣಕ್ಕೇ ಬರದ ಅತಿಸಾರ, ರಾತ್ರಿಯಿಡೀ ಬೆವರುವುದು, ಸತತವಾಗಿ ಸೋಂಕುಗಳು ಬಾಧಿಸುವುದು, ಜೀವ ಹೋಗುವಂತಾಗುವಷ್ಟು ಅಥವಾ ಪ್ರಜ್ಞೆ ತಪ್ಪು ಬೀಳುವಷ್ಟು ಸುಸ್ತಾಗುವುದು ಮೊದಲಾದವು ಇದರ ಲಕ್ಷಣಗಳಾಗಿವೆ. ಆದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಈ ಸ್ಥಿತಿಯನ್ನು ಸಾಕಷ್ಟು ಮುಂದಕ್ಕೆ ಹಾಕಬಹುದು.

ಇದಕ್ಕೆ ಸೂಕ್ತ ಚಿಕಿತ್ಸೆ ಏನು?

ಇದಕ್ಕೆ ಸೂಕ್ತ ಚಿಕಿತ್ಸೆ ಏನು?

ನಿಜ ಹೇಳಬೇಕೆಂದರೆ ಇದನ್ನು ಗುಣಪಡಿಸಲು ಇದುವರೆಗೆ ಯಾವುದೇ ಔಷಧವಿಲ್ಲ. ಜಗತ್ತಿನಾದ್ಯಂತ ಸಾವಿರಾರು ವಿಜ್ಞಾನಿಗಳು ಇದಕ್ಕೆ ಮದ್ದು ಕಂಡುಹಿಡಿಯಲು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಆದರೆ ಈ ವರೆಗೆ ಆಕ್ರಮಿಸಿಕೊಂಡಿರುವ ವೈರಸ್ಸುಗಳನ್ನು ಇನ್ನಷ್ಟು ಹೆಚ್ಚಲು ಬಿಡದ Anti-retroviral ಮಾತ್ರೆಗಳು ಲಭ್ಯವಿವೆ. ಇವುಗಳನ್ನು ಮತ್ತು ಇತರ ಮದ್ದುಗಳನ್ನು ವೈದ್ಯರ ಸಲಹೆ ಮೇರೆಗೆ ನಿಯಮಿತವಾಗಿ ಸೇವಿಸುವ ಮೂಲಕ ಈಗಿರುವ ಆರೋಗ್ಯವನ್ನು ಉಳಿಸಿಕೊಂಡು ಬರಬಹುದು.

ಇದಕ್ಕೆ ಸೂಕ್ತ ಚಿಕಿತ್ಸೆ ಏನು?

ಇದಕ್ಕೆ ಸೂಕ್ತ ಚಿಕಿತ್ಸೆ ಏನು?

ಈ ಅವಧಿಯಲ್ಲಿ ಸೂಕ್ತ ವ್ಯಾಯಾಮ, ಆಹಾರಗಳ ಮೂಲಕ ದೇಹದ ರೋಗ ನಿರೋಧಕ ವ್ಯವಸ್ಥೆ ತನ್ನಿಂತಾನೇ ರಿಪೇರಿ ಮಾಡಲು ಸಹಕರಿಸುವ ಮೂಲಕ ಈ ರೋಗವನ್ನು ಬಹುಮಟ್ಟಿಗೆ ನಿಯಂತ್ರಿಸಬಹುದು. ಆದರೆ ವೈದ್ಯವಿಜ್ಞಾನಕ್ಕೇ ಸವಾಲು ಎಸೆದಿರುವ ಈ ವೈರಸ್ಸು ಅತ್ಯಂತ ಕುತಂತ್ರಿಯಾಗಿದೆ. ಕುತಂತ್ರಿ ಏಕೆಂದರೆ ಇದನ್ನು ಸದೆಬಡಿಯಲು ಪಡೆಯುವ ಔಷಧಿಗೆ ಮೊದಲು ಸೋಲುವ ಈ ವೈರಸ್ಸು ಕೆಲವೇ ದಿನಗಳಲ್ಲಿ ಈ ಔಷಧಿಯ ಪ್ರಮಾಣಕ್ಕೆ ಬಲಿಯಾಗದಿರುವ ಶಕ್ತಿಯನ್ನು ಬೆಳೆಸಿಕೊಂಡುಬಿಟ್ಟಿರುತ್ತದೆ. ಈ ರೋಗದ ಮಾರಕತೆಗೆ ಇದೇ ಕಾರಣ. ಆದ್ದರಿಂದ ಕೇವಲ ಒಂದೇ ಔಷಧಿಗೆ ಒಡ್ಡದೇ ನಿಯಮಿತವಾಗಿ ವೈದ್ಯರು ಸೂಚಿಸುವ ಔಷಧಿಗಳನ್ನು ಬದಲಿಸುತ್ತಾ ವೈರಸ್ಸಿನ ಮೇಲೆ ಧಾಳಿ ಎಸಗುತ್ತಾ ಸಾಗಿದರೆ ಬಹಳಷ್ಟು ವರ್ಷ ಉತ್ತಮ ಆರೋಗ್ಯದಲ್ಲಿರಲು ಸಾಧ್ಯ.

ಇದಕ್ಕೆ ಸೂಕ್ತ ಚಿಕಿತ್ಸೆ ಏನು?

ಇದಕ್ಕೆ ಸೂಕ್ತ ಚಿಕಿತ್ಸೆ ಏನು?

ಈಗಾಗಲೇ ಹೆಚ್ ಐ ವಿ ಸೋಂಕಿಗೆ ಒಳಗಾಗಿರುವ ವ್ಯಕ್ತಿಗಳು ಪ್ರತಿದಿನ ಮೂರು anti-retroviral ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಬೇಕು. ಒಂದು ವೇಳೆ ಆರೋಗ್ಯವಂತ ವ್ಯಕ್ತಿ ಸೋಂಕಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದು ಖಚಿತವಾದರೆ ಸಂಪರ್ಕವಾದ ಮೂರು ದಿನಗಳ ಒಳಗಾಗಿ PEP (post-exposure prophylaxis) ಎಂಬ ತತ್‌ಕ್ಷಣ ಕಾರ್ಯಪ್ರವರ್ತವಾಗುವ ಔಷಧಿಯನ್ನು ಪಡೆದುಕೊಂಡರೆ ಈ ವೈರಸ್ಸನ್ನು ಬೆಳೆಯಲು ಬಿಡದೇ ರೋಗ ಬರದಂತೆ ತಡೆಯಬಹುದು. ಯಾವುದೇ ಕಾರಣಕ್ಕೆ ಈ ಸೋಂಕಿಗೆ ಒಳಗಾಗಿದ್ದೇನೆ ಎಂಬ ಅನುಮಾನ ಮೂಡಿದರೂ ತಡಮಾಡದೇ ತಕ್ಷಣ ವೈದ್ಯರ ಅಥವಾ ಹತ್ತಿರದ ಆಸ್ಪತ್ರೆಗೆ ಧಾವಿಸಿ ತಪಾಸಿಸಿಕೊಳ್ಳಬೇಕು. ಒಂದು ವೇಳೆ ತಡವಾದರೆ ಇದು ಹಂತಹಂತವಾಗಿ ಆಕ್ರಮಿಸಿಕೊಳ್ಳುತ್ತಾ ಹೋಗುತ್ತದೆ. ಇದನ್ನು ಅಭ್ಯಸಿಸಿದ ವಿಜ್ಞಾನಿಗಳು ಇದನ್ನು ಹತ್ತು ಭಾಗಗಳಾಗಿ ವಿಂಗಡಿಸಿದ್ದಾರೆ. ಅತಿ ತಡವಾಗಿ ಪತ್ತೆಯಾದ ಸೋಂಕನ್ನು ತಡೆಯಲು ನೀಡುವ ಚಿಕಿತ್ಸೆಯೂ ಹೆಚ್ಚು ಫಲಕಾರಿಯಲ್ಲ. ಹೆಚ್ಚಂದರೆ ಒಂದು ವರ್ಷ ಕಾಲ ರೋಗಿಯನ್ನು ಉಳಿಸಿಕೊಳ್ಳಬಹುದು.

ಏಡ್ಸ್ ಎಂದರೇನು?

ಏಡ್ಸ್ ಎಂದರೇನು?

ಏಡ್ಸ್ ಅಂದರೆ (acquired immune deficiency syndrome) ಎಂಬ ಕಾಯಿಲೆಯ ಹೃಸ್ವರೂಪ. ಇದರಲ್ಲಿ acquired ಎಂದರೆ ಬೇರೆಯವರಿಂದ ಪಡೆದುಕೊಂಡ ಎಂಬ ಅರ್ಥವಿದೆ. ಆದ್ದರಿಂದಲೇ ಏಡ್ಸ್ ಒಬ್ಬರಿಂದ ಇನ್ನೊಬ್ಬರ ಹರಡುತ್ತದೆ. ವಾಸ್ತವವಾಗಿ ಇದು ಹೆಚಿ ಐ ವಿ ಸೋಂಕಿನ ಕಡೆಯ ಹಂತವಾಗಿದೆ. ಈ ಹಂತಕ್ಕೆ ತಲುಪಿದ ದೇಹ ಚಿಕ್ಕ ಪುಟ್ಟ ರೋಗಗಳನ್ನೂ ಎದುರಿಸಲಾಗದ ಸ್ಥಿತಿಗೆ ತಲುಪಿರುತ್ತದೆ. ವಾಸ್ತವವಾಗಿ ಏಡ್ಸ್ ಎಂದರೆ ರೋಗವಲ್ಲ, ಅನಾರೋಗ್ಯ ಸ್ಥಿತಿಯನ್ನು ಸೂಚಿಸುವ ಹಲವಾರು ರೋಗಲಕ್ಷಣಗಳ ಸಮೂಹವಾಗಿದೆ.

ಏಡ್ಸ್ ಎಂದರೇನು?

ಏಡ್ಸ್ ಎಂದರೇನು?

ಅಂದರೆ ಹೆಚಿ ಐ ವಿ ಮತ್ತು ಇನ್ನಾವುದೋ ಒಂದು ಆಕ್ರಮಿಸಿಕೊಂಡಿರುವ ರೋಗ. ಉದಾಹರಣೆಗೆ ಕ್ಷಯ ಅಥವಾ ನ್ಯುಮೋನಿಯಾ ಜ್ವರ. ಆದರೆ ಎಚ್.ಐ.ವಿ ಸ್ಥಿತಿಗೆ ತಲುಪಿದ ಕೂಡಲೇ ಸೂಕ್ತ ಔಷಧಿಗಳನ್ನು ಪಡೆದುಕೊಳ್ಳುವ ಮೂಲಕ ಏಡ್ಸ್ ಸ್ಥಿತಿಗೆ ಬರದೇ ಇರುವಂತೆ ನೋಡಿಕೊಳ್ಳಬಹುದು. ಆದ್ದರಿಂದ ಹೆಚ್ ಐ ವಿ ಇರುವವರೆಲ್ಲಾ ಏಡ್ಸ್ ರೋಗಿಗಲ್ಲ. ಆದರೆ ಏಡ್ಸ್ ರೋಗಿಗಳೆಲ್ಲರೂ ಹೆಚ್.ಐ.ವಿ ಮತ್ತು ಇನ್ನೊಂದು ತೊಂದರೆ ಇರುವ ರೋಗಿಗಳು ಎಂದು ಅರ್ಥೈಸಿಕೊಳ್ಳಬಹುದು.

X
Desktop Bottom Promotion