For Quick Alerts
ALLOW NOTIFICATIONS  
For Daily Alerts

ಸರ್ವರೋಗವನ್ನು ಬಗ್ಗುಬಡಿಯುವ ರಾಗಿಮುದ್ದೆಯ ಕರಾಮತ್ತೇನು?

By Super
|

ಯಾವುದೇ ಆಹಾರಧಾನ್ಯದಲ್ಲಿ ಅದರದ್ದೇ ಆದ ಉತ್ತಮ ಅಂಶಗಳಿವೆ. ಪೋಷಕಾಂಶಗಳ ಪಟ್ಟಿಯನ್ನು ತುಲನೆ ಮಾಡಿದರೆ ಇತರ ದೊಡ್ಡ ಧಾನ್ಯಗಳನ್ನೆಲ್ಲಾ ಹಿಂದಿಕ್ಕಬಲ್ಲ ರಾಗಿ ನಮ್ಮ ನೆಚ್ಚಿನ ಆಹಾರವಾಗದಿರುವುದಕ್ಕೆ ಈ ನಮ್ಮ ಪೂರ್ವಾಗ್ರಹ ನಂಬಿಕೆಯೇ ಕಾರಣವಾಗಿದೆ. ಗ್ರಾಮೀಣ ಕರ್ನಾಟಕದ ಸೊವಡು ರಾಗಿ ಮುದ್ದೆ

ಈ ನಂಬಿಕೆಯನ್ನು ದಾಟಿ ರಾಗಿಯನ್ನು ಸೇವಿಸಲು ಸಿದ್ಧರಿದ್ದೀರೆಂದಾದರೆ ರಾಗಿಯಲ್ಲಿ ಹೇರಳವಾಗಿರುವ ಕ್ಯಾಲ್ಸಿಯಂ, ಕರಗುವ ನಾರು, ಪ್ರೋಟೀನ್, ಕಬ್ಬಿಣ ಮತ್ತು ಇತರ ಖನಿಜಗಳನ್ನು ಸುಲಭವಾಗಿ ಪಡೆದುಕೊಳ್ಳುವವರಾಗುತ್ತೀರಿ. ಜೊತೆಗೆ ಇದರಲ್ಲಿ ಕೊಬ್ಬಿನ ಅಂಶ ಅತ್ಯಂತ ಕಡಿಮೆ ಇದೆ. ಜೊತೆಗೇ ಆರೋಗ್ಯಕ್ಕೆ ಅಗತ್ಯವಾದ ಇತರ ಕೊಬ್ಬು ಮತ್ತು ಪೋಷಕಾಂಶಗಳಿವೆ. ಆದರೆ ರಾಗಿಯನ್ನು ಹೀಗೇ ಸೇವಿಸಲು ಸಾಧ್ಯವಿಲ್ಲ. ಇದನ್ನು ಹಿಟ್ಟು ಮಾಡಿಕೊಂಡು ರೊಟ್ಟಿ ಅಥವಾ ಮುದ್ದೆ ಮಾಡಿಕೊಂಡು ಸೇವಿಸಿದರೆ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.

ಮೂಳೆಗಳ ದೃಢತೆಗೆ ನೆರವಾಗುತ್ತದೆ

ಮೂಳೆಗಳ ದೃಢತೆಗೆ ನೆರವಾಗುತ್ತದೆ

ಮೂಳೆಗಳ ದೃಢತೆಗೆ ಕ್ಯಾಲ್ಸಿಯಂ ಅತಿ ಅಗತ್ಯವಾದ ಧಾತುವಾಗಿದೆ. ಇದರ ಅಗತ್ಯ ಮಕ್ಕಳು ಮತ್ತು ವೃದ್ದರಿಗೆ ಅತಿ ಹೆಚ್ಚು. ಮೂಳೆಗಳು ತಮ್ಮ ದೃಢತೆಯನ್ನು ಕಾಯ್ದುಕೊಳ್ಳಲು ನಿರಂತರ ಕ್ಯಾಲ್ಸಿಯಂ ಪೂರೈಕೆಯಾಗುತ್ತಲೇ ಇರಬೇಕು. ಹಾಲಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ಆದರೆ ನಿರಂತರವಾಗಿ ಹಾಲಿನ ಮೂಲಕ ಲಭ್ಯವಾಗುವ ಕ್ಯಾಲ್ಸಿಯಂ ಅತಿ ಹೆಚ್ಚು ಪ್ರಮಾಣದಲ್ಲಿರುವುದರಿಂದ ಮೂತ್ರಪಿಂಡಗಳಲ್ಲಿ ಕಲ್ಲು ಮೊದಲಾದ ತೊಂದರೆಗಳು ಪ್ರಾರಂಭವಾಗುವ ಸಂಭವವಿದೆ. ಆದರೆ ರಾಗಿಯಲ್ಲಿ ದಿನಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವುದರಿಂದ ಆರೋಗ್ಯವನ್ನು ಪಣಕ್ಕಿಡದೇ ಮೂಳೆಗಳನ್ನು ದೃಢವಾಗಿರಿಸಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಮೂಳೆಗಳು ಟೊಳ್ಳಾಗುವ ಅಥವಾ ಗುಳ್ಳೆಗಳು ತುಂಬಿರುವ (osteoporosis) ಎಂಬ ತೊಂದರೆಯಿಂದ ಕಾಪಾಡುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಸ್ಥೂಲಕಾಯದಿಂದ ಹೊರಬರಲಿಚ್ಛಿಸುವವರಿಗೆ ರಾಗಿ ಉತ್ತಮವಾದ ಪರ್ಯಾಯ ಆಹಾರವಾಗಿದೆ. ಗೋಧಿ ಮತ್ತು ಅಕ್ಕಿಗಳೆರಡರಲ್ಲಿಯೂ ತೂಕವನ್ನು ಹೆಚ್ಚಿಸುವ ಪೋಷಕಾಂಶಗಳಿರುವುದರಿಂದ ಈ ಆಹಾರಗಳನ್ನು ಸೇವಿಸುತ್ತಿರುವಂತೆ ತೂಕ ಕಳೆದುಕೊಳ್ಳುವ ಗತಿ ಅತಿ ನಿಧಾನವಾಗುತ್ತದೆ. ಬದಲಿಗೆ ರಾಗಿಯಲ್ಲಿರುವ ಪೋಷಕಾಂಶಗಳು ನಿಧಾನವಾಗಿ ಶರೀರಕ್ಕೆ ಲಭ್ಯವಾಗುವುದರಿಂದ ಹೆಚ್ಚಿನ ಕೊಬ್ಬು ಖರ್ಚಾಗುತ್ತದೆ. ಜೊತೆಗೇ ಶರೀರದಲ್ಲಿ ಕ್ಯಾಲೋರಿಗಳು ನಿಧಾನವಾಗಿ ಲಭ್ಯವಾಗಿ ದಿನದ ಚಟುವಟಿಕೆ ಸುಲಲಿತವಾಗುವಂತೆ ನೋಡಿಕೊಳ್ಳುತ್ತದೆ. ಇದು ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ

ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ

ರಾಗಿಯ ನಿಯಮಿತ ಸೇವನೆಯಿಂದ ಮೆದುಳಿಗೆ ಪೂರೈಕೆಯಾಗುವ ರಕ್ತ ಮತ್ತು ಇತರ ಪೋಷಕಾಂಶಗಳ ಪ್ರಮಾಣ ಹೆಚ್ಚಾಗಿ ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳಿಗೆ ಆರಾಮ ನೀಡುತ್ತದೆ. ನಿದ್ರಾಹೀನತೆ, ಮೈಗ್ರೇನ್ ತಲೆನೋವು, ಮಂಕು ಕವಿದಿರುವುದು ಮೊದಲಾದ ತೊಂದರೆಗಳಿರುವವರಿಗೂ ರಾಗಿ ಉತ್ತಮ ಆಹಾರವಾಗಿ ಪ್ರಮಾಣಿತವಾಗಿದೆ.

ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ

ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ

ಅಕ್ಕಿ ಮತ್ತು ಗೋಧಿಗಳಲ್ಲಿರುವ ಸಕ್ಕರೆ ಅಂಶ ಅತಿ ಶೀಘ್ರದಲ್ಲಿ ರಕ್ತಕ್ಕೆ ಲಭ್ಯವಾಗುವುದರಿಂದ ಮತ್ತು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದರಿಂದ ಕ್ಲುಪ್ತಕಾಲದಲ್ಲಿ ಬಳಕೆಯಾಗದೇ ಇದ್ದರೆ ಇತರ ತೊಂದರೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಬದಲಿಗೆ ರಾಗಿಯ ಸೇವನೆಯಿಂದ ರಕ್ತಕ್ಕೆ ಅಗತ್ಯವಿರುವಷ್ಟೇ ಪ್ರಮಾಣದಲ್ಲಿ ಸಕ್ಕರೆ ಬಿಡುಗಡೆಯಾಗುವುದರಿಂದ ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಜೊತೆಗೇ ರಾಗಿಯಲ್ಲಿರುವ ಕರಗದ ನಾರು ಜೀರ್‍ಣಕ್ರಿಯೆ ಮತ್ತು ವಿಸರ್ಜನಾ ಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ

ರಾಗಿಯಲ್ಲಿರುವ ಅಮೈನೋ ಆಮ್ಲಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಲೂ ನೆರವಾಗುತ್ತವೆ. ಯಕೃತ್ ನಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸಿ ಹೊರದಬ್ಬಲು ರಾಗಿ ಅತ್ಯುತ್ತಮವಾಗಿದೆ. ಜೊತೆಗೇ ಇನ್ನಷ್ಟು ಕೊಬ್ಬು ಬೆಳೆಯುವುದನ್ನು ತಡೆಗಟ್ಟುತ್ತದೆ. ಪರಿಣಾಮವಾಗಿ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿ ಆರೋಗ್ಯ ಉತ್ತಮಗೊಳ್ಳುತ್ತದೆ.

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರಾಗಿಮುದ್ದೆಯ ನಿರಂತರ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ಉತ್ತಮ ಪ್ರಮಾಣದ ಪ್ರೋಟೀನುಗಳು, ವಿಟಿಮಿನ್ ಮತ್ತು ಇತರ ಖನಿಜಗಳು ಇದಕ್ಕೆ ನೆರವಾಗುತ್ತದೆ. ಪರಿಣಾಮವಾಗಿ ಹುರಿಕಟ್ಟಾದ ಶರೀರ ನಿಮ್ಮದಾಗುತ್ತದೆ ಮತ್ತು ಆರೋಗ್ಯ ಕಳಕಳಿಸುತ್ತದೆ.

ಥೈರಾಯ್ಡ್ ಗ್ರಂಥಿಯ ತೊಂದರೆಗಳನ್ನು ನಿವಾರಿಸುತ್ತದೆ

ಥೈರಾಯ್ಡ್ ಗ್ರಂಥಿಯ ತೊಂದರೆಗಳನ್ನು ನಿವಾರಿಸುತ್ತದೆ

ನಮ್ಮ ಗಂಟಲಿನಲ್ಲಿರುವ ಥೈರಾಯ್ಡ್ ಗ್ರಂಥಿಯಿಂದ ಸ್ರವಿಸುವ ಹಾರ್ಮೋನಿನ ಪ್ರಮಾಣ ಅಗತ್ಯಕ್ಕಿಂತ ಕಡಿಮೆಯಾದರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದಕ್ಕೆ Hypothyroidsm ಎನ್ನುತ್ತಾರೆ. ರಾಗಿಮುದ್ದೆಯನ್ನು ತಿನ್ನುವುದರಿಂದ ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆ ಹೆಚ್ಚುವುದರಿಂದ ಈ ತೊಂದರೆಯಿಂದ ಮುಕ್ತಿ ಪಡೆಯಬಹುದು.

ಬಾಣಂತಿಯರಿಗೆ ಉತ್ತಮ ಆಹಾರವಾಗಿದೆ

ಬಾಣಂತಿಯರಿಗೆ ಉತ್ತಮ ಆಹಾರವಾಗಿದೆ

ಹೆರಿಗೆಯ ಸಮಯದಲ್ಲಿ ಸಾಕಷ್ಟು ನಿತ್ರಾಣರಾಗಿರುವ ಬಾಣಂತಿಯರಿಗೆ ದೇಹದ ಶಕ್ತಿಯನ್ನು ಮರುಪಡೆಯಲು ರಾಗಿ ಉತ್ತಮ ಆಹಾರವಾಗಿದೆ. ರಕ್ತದ ಉತ್ಪಾದನೆಯಲ್ಲಿ ಹೆಚ್ಚಳವಾಗಿ ಶೀಘ್ರವಾಗಿ ದೇಹ ಚೈತನ್ಯ ಪಡೆಯುತ್ತದೆ. ಹಾಲಿನ ಉತ್ಪಾದನೆಯೂ ಹೆಚ್ಚಾಗಿ ಕಂದನಿಗೆ ಊಡಿಸುವ ಪ್ರಮಾಣದಲ್ಲಿಯೂ ಹೆಚ್ಚಳವಾಗುತ್ತದೆ.

ರಕ್ತಹೀನತೆಯನ್ನು ಹೋಗಲಾಡಿಸುತ್ತದೆ

ರಕ್ತಹೀನತೆಯನ್ನು ಹೋಗಲಾಡಿಸುತ್ತದೆ

ರಕ್ತಹೀನತೆಗೆ ಪ್ರಮುಖ ಕಾರಣ ಆಹಾರದಲ್ಲಿ ಕಬ್ಬಿಣದ ಕೊರತೆ. ಬಸಲೆ ಪಾಲಕ್ ಮೊದಲಾದ ಸೊಪ್ಪುಗಳಲ್ಲಿ ಈ ಅಂಶ ಉತ್ತಮವಾಗಿದೆ. ರಾಗಿಯಲ್ಲಿಯೂ ಉತ್ತಮ ಪ್ರಮಾಣದಲ್ಲಿ ಕಬ್ಬಿಣದ ಅಂಶವಿದೆ. ಈ ಸೊಪ್ಪುಗಳ ಸಾರಿನ ಜೊತೆಗೆ ರಾಗಿಮುದ್ದೆಯನ್ನು ಉಣ್ಣುವುದರಿಂದ ಎರಡೂ ಕಡೆಗಳಿಂದ ಉತ್ತಮ ಪ್ರಮಾಣದ ಕಬ್ಬಿಣ ಲಭ್ಯವಾಗಿ ರಕ್ತಹೀನತೆಯನ್ನು ತೊಲಗಿಸುತ್ತದೆ.

ವಿವಿಧ ಕಾಯಿಲೆಗಳಿಗೆ ಉತ್ತಮ ಔಷಧಿಯಾಗಿದೆ

ವಿವಿಧ ಕಾಯಿಲೆಗಳಿಗೆ ಉತ್ತಮ ಔಷಧಿಯಾಗಿದೆ

ದೇಹವನ್ನು ಬಾಧಿಸುವ ಅಪೌಷ್ಟಿಕತೆ, ವಯಸ್ಸಿಗೂ ಮುನ್ನವೇ ವೃದ್ದಾಪ್ಯ ಆವರಿಸುವುದು, ಅಂಗಾಂಶಗಳು ಘಾಸಿಗೊಂಡು ಹೊಸ ಅಂಗಾಂಶ ಬೆಳೆಯದೇ ದೇಹ ಸೊರಗುವುದು (ಮಧುಮೇಹದ ಒಂದು ಅಡ್ಡಪರಿಣಾಮ) ಮೊದಲಾದ ತೊಂದರೆಗಳಿಗೆ ರಾಗಿಮುದ್ದೆ ಉತ್ತಮವಾಗಿದೆ. ಹಸಿರು ರಾಗಿ (ರಾಗಿ ಹಸಿಯಿದ್ದಾಗಲೇ ಕೊಯ್ಲು ಮಾಡಿದ್ದುದು) ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ, ದುರ್ಬಲವಾಗಿದ್ದ ಹೃದಯ

ಸಬಲಗೊಳ್ಳುತ್ತದೆ, ಯಕೃತ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಅಸ್ತಮಾ ಮತ್ತು ಹಾಲೂಡಿಸುವ ತಾಯಂದಿರ ದೇಹದಲ್ಲಿ ಹೊಸ ಹಾಲು ಉತ್ಪಾದಿಸಲು ನೆರವಾಗುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ನಾರಿನಂಶ ಕಡಿಮೆ ಇರುವ ಯಾವುದೇ ಆಹಾರ ಮಲಬದ್ದತೆಗೆ ಕಾರಣವಾಗುತ್ತದೆ. ಆದರೆ ರಾಗಿಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವುದರಿಂದ ಮಲಬದ್ಧತೆಯ ತೊಂದರೆಯನ್ನು ಸುಲಭವಾಗಿ ನಿವಾರಿಸುತ್ತದೆ.

ಮಧುಮೇಹಿಗಳಿಗೆ ಸೂಕ್ತ

ಮಧುಮೇಹಿಗಳಿಗೆ ಸೂಕ್ತ

ಮಧುಮೇಹದಿಂದ ನೀವು ಬಳಲುತ್ತಿದ್ದೀರಾ? ನಿಮಗೆ ಸೇವಿಸಲು ಇದೊಂದು ಪರಿಪೂರ್ಣ ಆಹಾರವಾಗಿದೆ. ಮಧುಮೇಹದ ಮೆಲ್ಲಿಟಸ್ ಮತ್ತು ಜೀರ್ಣಾಂಗವ್ಯೂಹದ ಅಸ್ವಸ್ಥತೆಗಳ ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆ ಮಾಡುತ್ತದೆ.

ರಾಗಿ ಮುದ್ದೆ ತಯಾರಿಸುವ ವಿಧಾನ

ರಾಗಿ ಮುದ್ದೆ ತಯಾರಿಸುವ ವಿಧಾನ

ರಾಗಿಯನ್ನು ಅತ್ಯಂತ ನುಣ್ಣಗೂ ಅಲ್ಲದೇ ರವೆಯೂ ಅಲ್ಲದ ಮಟ್ಟಿಗೆ ಹಿಟ್ಟು ಮಾಡಿಕೊಳ್ಳಬೇಕು. ಇದಕ್ಕೆ ಉಗುರುಬೆಚ್ಚನೆಯ ನೀರನ್ನು ಹಾಗಿ ಕೈಯಿಂದ ನವಿರಾಗಿ ಕಲಸುತ್ತಾ ಬಂದರೆ ಸಾಕು, ಕೆಲವೇ ನಿಮಿಷಗಳಲ್ಲಿ ಮುದ್ದೆ ಸಿದ್ಧ. ನಿಮಗೆ ಇಷ್ಟವಾದ ಹದಕ್ಕೆ ಕಲಸಿಕೊಂಡು ಸೊಪ್ಪಿನ ಸಾರು, ಟೊಮೇಟೊ ರಸಂ, ಸಾಂಬಾರು ಅಥವಾ ನಿಮಗಿಷ್ಟದ ಸಾರಿನೊಂದಿಗೆ ಮುದ್ದೆಯನ್ನು ಸೇವಿಸಬಹುದು. ಆದರೆ ಮುದ್ದೆಯನ್ನು ಇತರ ಪದಾರ್ಥಗಳಂತೆ ಕಚ್ಚಿ ತಿನ್ನಲು ಸಾಧ್ಯವಿಲ್ಲ. ಚಿಕ್ಕ ಚಿಕ್ಕ ತುತ್ತನ್ನು ಸಾರಿನೊಂದಿಗೆ ಕಲಸಿ ಬಾಯಿಯಲಿಟ್ಟು ನೇರವಾಗಿ ನುಂಗಿಬಿಡಬೇಕು. ಮೊದಮೊದಲು ಸ್ವಲ್ಪ ವಿಚಿತ್ರವಾದರೂ ಕ್ರಮೇಣ ಈ ಪರಿ ಇಷ್ಟವಾಗತೊಡಗುತ್ತದೆ.

English summary

Wonderful Health Benefits of Ragi mudde

Ragi is rich in calcium, fibre, protein, iron and other minerals. It is a low fat cereal and most of the fats are in the unsaturated form. A few health benefits are: ragi mudde is prepared only with ragi flour and no rice or rice flour is used.
X
Desktop Bottom Promotion