For Quick Alerts
ALLOW NOTIFICATIONS  
For Daily Alerts

ಆರೋಗ್ಯವನ್ನು ವೃದ್ಧಿಸಲು ದಿನಕ್ಕೊಂದು ಕಪ್ ಕಾಫಿ ಸಾಕು ಕಣ್ರೀ!

By Super
|

ಅಂದಿನ ದಿನಗಳಲ್ಲಿ ಕಷಾಯದ ಹೊರತಾಗಿ ಬೇರೇನನ್ನೂ ಕುಡಿಯದ ನಮ್ಮ ಹಿರಿಯರಿಗೆ ಬ್ರಿಟಿಷರು ಪುಕ್ಕಟೆ ಕಾಫಿಯನ್ನು ಕುಡಿಸಿ ಕುಡಿಸಿಯೇ ಕಾಫಿಗೆ ದಾಸರನ್ನಾಗಿಸಿದ ಬಳಿಕವೇ ಮಾರಾಟಕ್ಕೆ ಹೊರತಂದರಂತೆ. ಆದರೆ ಕಾಫಿ ಕುಡಿಯುವುದು ಒಳ್ಳೆಯದಲ್ಲ ಎಂದು ಹಲವರು ಅಭಿಪ್ರಾಯ ಪಡುತ್ತಾರೆ.

ಒಂದೇ ಮಾತಿನಲ್ಲಿ ವಿಶ್ವದ ಜನಪ್ರಿಯ ಪೇಯವಾದ ಕಾಫಿಯನ್ನು ತ್ಯಜಿಸುವುದುಂಟೇ? ಅದಕ್ಕೂ ಮೊದಲು ನಿಜವಾಗಿ ಕಾಫಿ ಏಕೆ ಕೆಟ್ಟದ್ದು ಅಥವಾ ಏಕೆ ಒಳ್ಳೆಯದು ಎಂದು ಪರಾಮರ್ಶಿಸಬೇಡವೇ? ಸರಿ, ಈ ಬಗ್ಗೆ ನಡೆದ ಸಂಶೋಧನೆಗಳಿಂದ ಹಲವು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಅದರಂತೆ ಕಾಫಿಯಲ್ಲಿ ಒಳ್ಳೆಯ ಗುಣಗಳೂ ಇರುವಂತೆ ಕೆಲವು ಆರೋಗ್ಯಕರವಲ್ಲದ ಗುಣಗಳೂ ಇವೆ.

ಒಂದರ್ಥದಲ್ಲಿ ಅತಿಯಾದರೆ ವಿಷವಾಗುವ ಅಮೃತದಂತೆ ಚಿಕ್ಕಪ್ರಮಾಣದಲ್ಲಿ ಸೇವಿಸಿದರೆ ಇದು ಆರೋಗ್ಯಕ್ಕೆ ಉತ್ತಮವೇ ಆಗಿದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಕಾಫಿಯ ಉತ್ತಮ ಅಂಶಗಳಲ್ಲಿ ಪ್ರಮುಖವಾದುದನ್ನು ಇಲ್ಲಿ ಸಂಗ್ರಹಿಸಲಾಗಿದೆ. ಮುಂದೆ ಓದಿ...

Why Drinking Coffee Is Good For Your Health

ಫ್ರೀ ರ್‍ಯಾಡಿಕಲ್ ಎಂಬ ವಿಷವಸ್ತುವಿನಿಂದ ರಕ್ಷಣೆ ನೀಡುತ್ತದೆ

ಫ್ರೀ ರ್‍ಯಾಡಿಕಲ್ ಎಂಬ ಕಣಗಳು ನಮ್ಮ ದೇಹದಲ್ಲಿ ಚಲಿಸುತ್ತಾ ಕ್ಯಾನ್ಸರ್, ಮಧುಮೇಹ ಮೊದಲಾದ ತೊಂದರೆಗಳು ಸಂಭವಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಚರ್ಮ ಮತ್ತು ದೇಹದ ಇತರ ಭಾಗಗಲು ಜರ್ಝರಿತವಾಗಿ ವೃದ್ಧಾಪ್ಯ ಬೇಗನೇ ಆವರಿಸುತ್ತದೆ. ಇದರ ವಿರುದ್ದ ಹೋರಾಡಲು ನಮಗೆ ಆಂಟಿ ಆಕ್ಸಿಡೆಂಟುಗಳು ಎಂಬ ಪೋಷಕಾಂಶಗಳ ಅಗತ್ಯವಿದೆ. ಕಾಫಿಯಲ್ಲಿ caffeic acid, ferulic acid ಮತ್ತು chlorogenic acid ಎಂಬ ಆಂಟಿ ಆಕ್ಸಿಡೆಂಟುಗಳು ಹೇರಳವಾಗಿವೆ. ಇವು ಫ್ರೀ ರ್‍ಯಾಡಿಕಲ್ ಗಳ ಪ್ರಭಾವವನ್ನು ತಗ್ಗಿಸಿ ಅರೋಗ್ಯ ವೃದ್ಧಿಸುತ್ತವೆ. ಘಮ ಘಮ ಕಾಫಿಯ ಸ್ವಾದಕ್ಕೆ ಬೆರಗಾಗದವರು ಯಾರಿದ್ದಾರೆ ಹೇಳಿ?

ಹೃದಯಕ್ಕೆ ಉತ್ತಮ

ಕಾಫಿಯಲ್ಲಿರುವ ಕೆಫೀನ್ ಹೃದಯಕ್ಕೆ ಉತ್ತಮವಾಗಿದೆ. ಹೇಗೆಂದರೆ ರಕ್ತನಾಳಗಳ ಒಳಗೆ ಜಿಡ್ಡುಪದಾರ್ಥಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಅಂಟಿಕೊಂಡು ತಿರುವು ಮತ್ತು ಕವಲುಗಳಿರುವ ಸ್ಥಳಗಳಲ್ಲಿ ಒಳಭಾಗದ ವ್ಯಾಸವನ್ನು ಕಿರಿದುಗೊಳಿಸುತ್ತವೆ. ಇದರ ಮೂಲಕ ರಕ್ತ ಹಾದುಹೋಗಲು ಹೃದಯ ಹೆಚ್ಚಿನ ಒತ್ತಡದಿಂದ ನೂಕಬೇಕಾಗುತ್ತದೆ. ಕಾಫಿಯಲ್ಲಿರುವ ಕೆಫೀನ್ ಈ ಜಿಡ್ಡುಗಳನ್ನು ಸಡಿಲಗೊಳಿಸಿ ಹೃದಯದೊತ್ತಡವನ್ನು ಕಡಿಮೆಗೊಳಿಸುತ್ತದೆ.

Why Drinking Coffee Is Good For Your Health

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ವ್ಯಾಯಾಮದಲ್ಲಿ ಹೆಚ್ಚಳ ಮತ್ತು ಆಹಾರದಲ್ಲಿ ಕಡಿಮೆ ಮಾಡುವುದು ಅನಾರೋಗ್ಯಕರ ವಿಧಾನವಾಗಿದೆ. ಆರೋಗ್ಯಕರ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ದೇಹದ ಕೊಬ್ಬನ್ನು ಹೆಚ್ಚು ಬಳಸುವ ಆಹಾರಗಳನ್ನು ಸೇವಿಸುವುದು, ವ್ಯಾಯಾಮವನ್ನು ಹೆಚ್ಚಿಸುವುದು, ಅದಕ್ಕೆ ತಕ್ಕನಾದ ಆಹಾರಗಳನ್ನು ಸೇವಿಸುವುದು ಸಹಾ ಅಗತ್ಯವಾಗಿದೆ. thermogenesis ಎಂಬ ವಿಧಾನದಲ್ಲಿ ಜೀರ್ಣಗೊಳಿಸಲು ಕಠಿಣವಾಗಿದ್ದು ಹೆಚ್ಚಿನ ಕೊಬ್ಬನ್ನು ಬಳಸುವ ಕಾರಣ ದೇಹ ಶೀಘ್ರವಾಗಿ ಅನಗತ್ಯ ಕೊಬ್ಬನ್ನು ಕಳೆದುಕೊಳ್ಳುತ್ತಾ ಬರುತ್ತದೆ. ದಿನಕ್ಕೊಂದು ಕಪ್ ಕಾಫಿ ಕುಡಿಯುವುದರಿಂದ ಹೆಚ್ಚು ಲವಲವಿಕೆ ಉಂಟಾಗುವುದರ ಜೊತೆಗೇ ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ. ಆದರೆ ಈ ಕಾಫಿ ಹಾಲು ಸಕ್ಕರೆ ಇಲ್ಲದ ಕಪ್ಪು ಕಾಫಿಯಾಗಿದ್ದರೆ ಉತ್ತಮ. ದೇಹದ ಆರೋಗ್ಯವನ್ನನುಸರಿಸಿ ದಿನಕ್ಕೆ ಒಂದರಿಂದ ಮೂರು ಕಪ್ ಸೇವಿಸಬಹುದು. ಕಾಫಿ ಸೇವನೆಯಿಂದ ತೂಕ ಇಳಿಕೆ ಸಾಧ್ಯವೇ?

ಯೋಚನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಕಾಫಿಯಲ್ಲಿರುವ ಕೆಫೀನ್ ರಕ್ತದ ಮೂಲಕ ಮೆದುಳನ್ನು ಸೇರಿದ ಬಳಿಕ ಮೆದುಳಿಗೆ Adenosine ಎಂಬ ನಿರಾಶಾದಾಯಕ ಸಂಜ್ಞೆ ತಲುಪದಿರುವಂತೆ ತಡೆಯುತ್ತದೆ. ಪರಿಣಾಮವಾಗಿ ಮೆದುಳು ಸಕಾರಾತ್ಮಕವಾಗಿ ಚಿಂತಿಸಲು ಸಾಧ್ಯವಾಗುತ್ತದೆ. ಕಾರ್ಯಕ್ಷಮತೆ ಹೆಚ್ಚುತ್ತದೆ. ವಿವಿಧ ವಿಟಮಿನ್ನುಗಳಿವೆ

ಕಾಫಿಯಲ್ಲಿ ಈ ಕೆಳಗಿನ ವಿಟಮಿನ್ನುಗಳಿದ್ದು ಆರೋಗ್ಯಕ್ಕೆ ಪೂರಕವಾಗಿವೆ.

ರೈಬೋಫ್ಲೇವಿನ್ (Vitamin B2): ದಿನಕ್ಕೆ ಅಗತ್ಯವಾದ ಪ್ರಮಾಣದ 11%

ಪ್ಯಾಂಟೋಥೆನಿಕ್ ಆಮ್ಲ (Vitamin B5): ದಿನಕ್ಕೆ ಅಗತ್ಯವಾದ ಪ್ರಮಾಣದ 6%

ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ: ದಿನಕ್ಕೆ ಅಗತ್ಯವಾದ ಪ್ರಮಾಣದ 3%

ಮೆಗ್ನೀಶಿಯಂ ಮತ್ತು ನಿಯಾಸಿನ್ (B3): ದಿನಕ್ಕೆ ಅಗತ್ಯವಾದ ಪ್ರಮಾಣದ 2 %

ವಿವಿಧ ರೋಗಗಳನ್ನು ಬಾರದಂತೆ ತಡೆಯುತ್ತದೆ

ಕಾಫಿ ಸೇವನೆಯಿಂದ ಮಧುಮೇಹ (ಎರಡನೆಯ ವಿಧ), ಸಂಧಿವಾತ, ಪಾರ್ಕಿನ್ಸನ್ ಕಾಯಿಲೆ, ಯಕೃತ್ ರೋಗ, ಕ್ಯಾನ್ಸರ್ ಮೊದಲದವುಗಳನ್ನು ಬಾರದಂತೆ ತಡೆಯುತ್ತದೆ. ಹೃದಯ ಸ್ತಂಭನದ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ.

English summary

Why Drinking Coffee Is Good For Your Health

Coffee is an essential beverage for most of the people in the world. In some circles it has obtained a bad reputation with concern over some problems like adrenal fatigue. But coffee in fact carries a lot of health benefits and actually coffee is good for your health. hav a look
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more