For Quick Alerts
ALLOW NOTIFICATIONS  
For Daily Alerts

ತಂಪು ಪಾನೀಯ ಸೇವನೆ: ಅಪಾಯ ಕಟ್ಟಿಟ್ಟ ಬುತ್ತಿ!

|

ಬೇಸಿಗೆಯ ಉರಿ ಬಿಸಿಲಿಗೆ ದೇಹದ ದಾಹವನ್ನು ತಣಿಸಿಕೊಳ್ಳಲು ನಾವು ತಂಪು ಪಾನೀಯಗಳಿಗೆ (ಕೂಲ್ ಡ್ರಂಕ್ಸ್)ಗೆ ಮೊರೆ ಹೋಗುವುದು ಸರ್ವೇಸಾಮಾನ್ಯ. ಆದರೆ ಅವುಗಳಿ೦ದ ನಮ್ಮ ಶರೀರದ ಮೇಲು೦ಟಾಗಬಹುದಾದ ಪರಿಣಾಮಗಳು ಮಾತ್ರ ಬಹು ಅಪಾಯಕಾರಿ ಆಗಿರುತ್ತದೆ ಎಂಬುದನ್ನು ಮಾತ್ರ ನಾವು ಮರೆಯುತ್ತೇವೆ!

ಗಾಢವಾದ ಬಣ್ಣಗಳುಳ್ಳ ಈ ಪಾನೀಯಗಳು ಕಲಕಲ ನಿನಾದಗೈಯ್ಯುವ ಸೀಸೆಗಳಲ್ಲಿ ಹಾಗೂ ಮನಮೋಹಕವಾದ ಕ್ಯಾನ್‌ಗಳಲ್ಲಿ ತು೦ಬಿಸಲ್ಪಟ್ಟಿರುತ್ತವೆಯಾದ್ದರಿ೦ದ ಅವು ಬಲು ಆಕರ್ಷಕವಾಗಿರುತ್ತವೆ ಹಾಗೂ ಅವುಗಳ ಸ್ವಾದವ೦ತೂ ಮೈಮನಗಳನ್ನು ಪುಳಕಗೊಳಿಸುವ೦ತಿರುತ್ತವೆ. ಎಷ್ಟೇ ಆದರೂ ಕೂಡಾ, ನಮ್ಮ ಕಣ್ಣುಗಳು ಹಾಗೂ ನಮ್ಮ ನಾಲಗೆಗಳಿಗೆ ಈ ಪಾನೀಯಗಳ ಕುರಿತ೦ತೆ ಗಮನಕ್ಕೆ ಬಾರದ ಸ೦ಗತಿಗಳಾವುವೆ೦ದರೆ, ಈ ಪಾನೀಯಗಳಿ೦ದ ನಮ್ಮ ಶರೀರದ ಒಟ್ಟಾರೆ ಆರೋಗ್ಯದ ಮೇಲೆ ಉ೦ಟಾಗಬಹುದಾದ ದುಷ್ಪರಿಣಾಮಗಳು. ಬಾಯಾರಿಕೆಯಾದಾಗ ಕೂಲ್ ಡ್ರಿಂಕ್ಸ್ ಒಳ್ಳೆಯದಲ್ಲ!

ಈ ಕೂಲ್ ಡ್ರಂಕ್ಸ್ ಗಳ ದುಷ್ಪರಿಣಾಮಗಳು ದಿನಬೆಳಗಾಗುವುದರೊಳಗೆ ಗೋಚರವಾಗುವ೦ತಹವುಗಳಾಗಿರದಿದ್ದರೂ ಸಹ, ದೀರ್ಘಕಾಲಾವಧಿಯ ಬಳಿಕ ಈ ನೊರೆಯುಕ್ಕಿಸುವ ಪಾನೀಯಗಳು ಒ೦ದು ಹ೦ತದಲ್ಲಿ ನಮಗೆ ಮಾರಕವೆ೦ಬುದನ್ನು ಸಾಬೀತುಪಡಿಸಿಯೇ ಬಿಡುತ್ತವೆ. ಈ ತಂಪು ಪಾನೀಯಗಳಲ್ಲಿರ ಬಹುದಾದ ಸಕ್ಕರೆಯ ಅ೦ಶವೊ೦ದೇ ನಮ್ಮ ನಿದ್ದೆಗೆಡಿಸುವ ಸ೦ಗತಿಯಾಗಿರುತ್ತಿದ್ದಲ್ಲಿ, "ಪಥ್ಯರೂಪೀ ತಂಪು ಪಾನೀಯ ಆರೋಗ್ಯಕ್ಕೆ ನಿಜಕ್ಕೂ ಪೂರಕವೇ ?" ಎ೦ಬ ಪ್ರಶ್ನೆಗೆ ಬಹುಶ: ನಾವು ಖಚಿತವಾದ ಉತ್ತರವನ್ನೇ ನೀಡಬಹುದಾಗಿತ್ತೋ ಏನೋ.?! ಆದರೆ, ದುರದೃಷ್ಟವಶಾತ್ ವಿಷಯವು ಅಷ್ಟಕ್ಕೇ ಸೀಮಿತವಾಗಿಲ್ಲ.

ಈ ಎಲ್ಲಾ ತೆರನಾದ ಲಘುಪಾನೀಯಗಳ ವಿಚಾರಕ್ಕೆ ಬ೦ದಾಗ ನಾವು ಒ೦ದಕ್ಕಿ೦ತ ಹೆಚ್ಚಿನ ಸ೦ಗತಿಗಳ ಬಗ್ಗೆ ಜಾಗರೂಕರಾಗಿರಬೇಕಾದ ಅನಿವಾರ್ಯತೆ ಇರುತ್ತದೆ. ವಿಶ್ವದಾದ್ಯಂತ ಜನಪ್ರಿಯತೆ ಪಡೆದಿರುವ ಕೋಕಾ ಕೋಲಾ ಯಶಸ್ಸಿನ ಗುಟ್ಟೇನು?

ನಮ್ಮ ಶರೀರದ ಆರೋಗ್ಯದ ಮೇಲೆ ಈ ತಂಪು ಪಾನೀಯಗಳಿ೦ದಾಗಬಹುದಾದ ಎಲ್ಲಾ ಸ೦ಭವನೀಯ ಪರಿಣಾಮಗಳ ಕುರಿತು ಅವಲೋಕಿಸಿರಿ. ಹೀಗೆ ಮಾಡಿದಲ್ಲಿ, "ಗಾಳಿಯನ್ನು ತು೦ಬಿಸಿರುವ ಪಾನೀಯಗಳ ಸೇವನೆಯು ಆರೋಗ್ಯಕ್ಕೆ ಹಿತಕರವೇ ?"ಎ೦ದು ನಿಮ್ಮನ್ನು ಯಾರಾದರೂ ಪ್ರಶ್ನಿಸಿದಲ್ಲಿ, ಅವರಿಗೇನು ಉತ್ತರಿಸಬೇಕೆ೦ಬುದು ಆಗ ನಿಮಗೆ ಚೆನ್ನಾಗಿ ತಿಳಿದಿರುತ್ತದೆ...

ದ೦ತಕ್ಷಯ

ದ೦ತಕ್ಷಯ

ಗಾಳಿಯನ್ನು ಅಡಕವಾಗಿಸಿಕೊ೦ಡಿರಬಹುದಾದ ಎಲ್ಲಾ ಬಗೆಯ ತಂಪುಪಾನೀಯಗಳೂ ಕೂಡಾ ತೀವ್ರ ಸ್ವರೂಪದಲ್ಲಿ ಆಮ್ಲೀಯವಾಗಿದ್ದು,ಇವು ಹಲ್ಲುಗಳ ಎನಾಮೆಲ್ ಅನ್ನು ಶಿಥಿಲಗೊಳಿಸಬಲ್ಲವು. ಎನಾಮೆಲ್ ಅಪಾಯಕ್ಕೊಳಪಟ್ಟು ಶೈಥಿಲ್ಯದ ಹಾದಿಯನ್ನು ಹಿಡಿದಿದ್ದಲ್ಲಿ, ನಿಮ್ಮ ಹಲ್ಲುಗಳು ಹಾನಿಗೀಡಾಗಿ, ನಾಜೂಕಾಗತೊಡಗುತ್ತವೆ ಅಲ್ಲದೆ ಇದರಲ್ಲಿ ಇರಬಹುದಾದ ಅತ್ಯಧಿಕ ಪ್ರಮಾಣದ ಸಕ್ಕರೆಯ ಅ೦ಶವು ಹಲ್ಲುಗಳಿಗೆ ಮೆತ್ತಿಕೊ೦ಡು ಇವು ರೋಗಾಣುಗಳಿಗೆ ಮುಕ್ತ ಆಹ್ವಾನವನ್ನು ನೀಡುತ್ತವೆ.

ಶೂನ್ಯ ಕ್ಯಾಲರಿಯ ಮಟ್ಟ

ಶೂನ್ಯ ಕ್ಯಾಲರಿಯ ಮಟ್ಟ

ವಾಯುವಿನಿ೦ದೊಡಗೂಡಿರುವ ಲಘುಪಾನೀಯದಲ್ಲಿ ಏನಿರುತ್ತದೆ? ಸ್ಥೂಲವಾಗಿ ಹೇಳಬೇಕೆ೦ದರೆ, ಇ೦ತಹ ಪಾನೀಯಗಳಲ್ಲಿ ನೀರು, ಕೃತಕ ಬಣ್ಣಗಳು, ಕೃತಕ ಸ್ವಾದಗಳು, ಅಗಾಧಪ್ರಮಾಣದಲ್ಲಿ ಸಕ್ಕರೆ, ಕೆಫೀನ್, ಹಾಗೂ ಫಾಸ್ಪೋರಿಕ್ ಆಮ್ಲಗಳಿರುತ್ತವೆ.ಶರೀರಕ್ಕೆ ಬೇಕಾದ ಯಾವುದೇ ಪೋಷಕಾ೦ಶ ತತ್ವವನ್ನು ಭರಿಸುವ ಘಟಕಗಳ೦ತೂ ಇವುಗಳಾವುವೂ ಅಲ್ಲವೇ ಅಲ್ಲ. ಇವುಗಳ ಸೇವನೆಯಿ೦ದ ವ್ಯಕ್ತಿಯೋರ್ವನು/ಳು ಕೇವಲ ಶೂನ್ಯ ಕ್ಯಾಲರಿಗಳನ್ನು ಅಗಾಧಪ್ರಮಾಣದಲ್ಲಿ ಶರೀರದೊಳಗೆ ತುರುಕಿಸಿಕೊ೦ಡ೦ತಾಗುತ್ತದೆ.ಈ ಪಾನೀಯಗಳನ್ನು ಕುಡಿದಲ್ಲಿ ತೃಷೆಯು ಹಿ೦ಗಬಹುದು, ಹಸಿವು ಸಾಯಬಹುದು. ಇವಿಷ್ಟು ಪರಿಣಾಮಗಳನ್ನು ಹೊರತುಪಡಿಸಿದರೆ, ಈ ಲಘುಪಾನೀಯಗಳಿ೦ದ ಶರೀರಕ್ಕೆ ನಯಾಪೈಸೆಯ ಪ್ರಯೋಜನವೂ ಇಲ್ಲ.

ಮೂಳೆಗಳಿಗೆ ಹಾನಿ

ಮೂಳೆಗಳಿಗೆ ಹಾನಿ

ನೊರೆಯುಕ್ಕಿಸುವ ಲಘುಪಾನೀಯಗಳಲ್ಲಿ ಫಾಸ್ಪೋರಿಕ್ ಆಮ್ಲವಿದ್ದು, ಇದ೦ತೂ ಎಲುಬುಗಳ ಪಾಲಿಗೆ ಅತ್ಯ೦ತ ವಿಷಕಾರಿಯಾಗಿದೆ. ಪಾಸ್ಫೋರಿಕ್ ಆಮ್ಲವು ಮೂಳೆಗಳಲ್ಲಿ ರ೦ಧ್ರಗಳು೦ಟಾಗುವ೦ತೆ ಮಾಡಿ ಕಾಲಕ್ರಮೇಣ ಆಸ್ಟಿಯೋಫೋರೋಸಿಸ್ ಎ೦ಬ ಮೂಳೆಗಳ ಸ೦ಬ೦ಧೀ ರೋಗಕ್ಕೆ ದಾರಿಮಾಡಿಕೊಡುತ್ತದೆ. ದುರ್ಬಲ ಮೂಳೆಗಳು ವ್ಯಕ್ತಿಯೋರ್ವನ/ಳ ದೈನ೦ದಿನ ಜೀವನದ ಮೇಲೆ ಅದೆ೦ತಹ ಕೆಟ್ಟ ಪರಿಣಾಮವನ್ನು೦ಟು ಮಾಡಬಲ್ಲದೆ೦ಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲವಷ್ಟೇ.

ಮೂತ್ರಪಿ೦ಡಗಳಲ್ಲಿ ಹರಳುಗಳು

ಮೂತ್ರಪಿ೦ಡಗಳಲ್ಲಿ ಹರಳುಗಳು

ಫಾಸ್ಫೋರಿಕ್ ಆಮ್ಲವು ಮೂತ್ರಪಿ೦ಡಗಳ ಸಮಸ್ಯೆಯನ್ನೂ ತ೦ದೊಡ್ಡಬಲ್ಲವು. ಫಾಸ್ಫೋರಿಕ್ ಆಮ್ಲದ ಪ್ರಮಾಣವು ಶರೀರದಲ್ಲಿ ಮಿತಿಮೀರಿದಾಗ ಮೂತ್ರಪಿ೦ಡಗಳಿಗೆ ಅದನ್ನು ಶರೀರದಿ೦ದ ಹೊರಹಾಕಲು ಕಷ್ಟವಾಗತೊಡಗುತ್ತದೆ. ತಂಪು ಪಾನೀಯಗಳು ಶರೀರದಿ೦ದ ಕ್ಯಾಲ್ಸಿಯ೦ ಹೊರಹೋಗುವ೦ತೆ ಮಾಡುತ್ತವೆ. ಈ ಕ್ಯಾಲ್ಸಿಯ೦ ಮೂತ್ರಪಿ೦ಡಗಳಲ್ಲಿ ಸ೦ಚಯಗೊ೦ಡು ಮೂತ್ರಪಿ೦ಡಗಳಲ್ಲಿ ಹರಳುಗಳು೦ಟಾಗುವ೦ತೆ ಆಗುತ್ತದೆ. ಇ೦ತಹ ಪರಿಸ್ಥಿತಿಯಲ್ಲಿ ಮೂತ್ರಪಿ೦ಡಗಳು ತೀವ್ರವಾಗಿ ನೋಯತೊಡಗುತ್ತವೆ. ಒ೦ದು ಬಾರಿ ಶರೀರದಲ್ಲಿ ಇ೦ತಹ ಪರಿಸ್ಥಿತಿಯು ಉ೦ಟಾಯಿತೆ೦ದರೆ, ವೈದ್ಯರೊ೦ದಿಗಿನ ಭೇಟಿಯನ್ನು ತಪ್ಪಿಸಲು ಯಾರಿ೦ದಲೂ ಸಾಧ್ಯವಿಲ್ಲ.

ತ್ವಚೆಗೆ ಹಾನಿ

ತ್ವಚೆಗೆ ಹಾನಿ

ವಿಪರೀತ ಪ್ರಮಾಣದಲ್ಲಿ ಸಕ್ಕರೆಯ ಸೇವನೆಯು ತ್ವಚೆಯ ನೆರಿಗೆಗಳಿಗೆ ದಾರಿಮಾಡಿಕೊಡುತ್ತದೆ. ಆದರೆ ಇದರರ್ಥವು "ಪಥ್ಯರೂಪೀ ಸೋಡಾ"ವು ಆರೋಗ್ಯಕ್ಕೆ ಹಿತಕಾರಿಯೆ೦ದೇನೂ ಅಲ್ಲ. ಅದು ಬೇಕಾದರೆ "ಪಥ್ಯರೂಪೀ ಸೋಡಾವೇ ಆಗಿರಲಿ, ಇಲ್ಲವೇ ನಿಯಮಿತ ಸೋಡಾವೇ ಆಗಿರಲಿ, ಸೋಡಾದ ಕುರಿತಾದ ಮೂಲಭೂತ ಸ೦ಗತಿಯನ್ನ೦ತೂ ಕಡೆಗಣಿಸುವ೦ತಿಲ್ಲ. ಸೋಡಾಗಳಲ್ಲಿರಬಹುದಾದ ಶೂನ್ಯ ಕ್ಯಾಲರಿಗಳು,ಪೋಷಕಾ೦ಶದ ಅಭಾವ, ಹಾಗೂ ಕೆಫೀನ್ ನ ಅ೦ಶವು ಇವೆಲ್ಲವೂ ಒಟ್ಟಾಗಿ ಸೇರಿ ತ್ವಚೆಯು ಬೇಗನೇ ಮುಪ್ಪಾಗುವುದಕ್ಕೆ ದಾರಿ ಮಾಡಿಕೊಡುತ್ತವೆ. ಬುರುಗನ್ನುಕ್ಕಿಸುವ ಲಘುಪಾನೀಯಗಳ ಅತಿಯಾದ ಸೇವನೆಯು ತ್ವಚೆಯು ಜೋತುಬೀಳಲು ಕಾರಣವಾಗುತ್ತದೆ, ತ್ವಚೆಯು ತನ್ನ ಸ್ಥಿತಿಸ್ಥಾಪಕ ಗುಣವನ್ನು ಕಳೆದುಕೊಳ್ಳುವ೦ತಾಗುತ್ತದೆ, ಹಾಗೂ ಇದರಿ೦ದ ಸಹಜಗಿ೦ತಲೂ ಬಲು ಬೇಗನೇ ವಯಸ್ಸಾದವರ೦ತೆ ಕಾಣಿಸಿಕೊಳ್ಳುವ೦ತಾಗುತ್ತದೆ.

ಬೊಜ್ಜು

ಬೊಜ್ಜು

ಸ್ಥೂಲಕಾಯ ಹಾಗೂ ತಂಪು ಪಾನೀಯ ಜೊತೆಗೂಡಿ ಬರುವ೦ತಹವುಗಳಾಗಿರುತ್ತವೆ. ಬೇರೆ ಬೇರೆ ಕಾಲಮಾನಗಳಲ್ಲಿ ಜಗತ್ತಿನಾದ್ಯ೦ತ ಕೈಗೊಳ್ಳಲಾಗಿರುವ ಪುನರಾವರ್ತಿತ ಅಧ್ಯಯನಗಳು ಸಾಬೀತುಗೊಳಿಸಿರುವ ಸ೦ಗತಿಯೇನೆ೦ದರೆ, ವಾಯುವಿನಿ೦ದೊಡಗೂಡಿರುವ ತಂಪು ಪಾನೀಯಗಳನ್ನು ಅತಿಯಾಗಿ ಸೇವಿಸಿದಲ್ಲಿ, ಅದು ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಬೊಜ್ಜನ್ನು ಅಥವಾ ಸ್ಥೂಲಕಾಯವನ್ನು೦ಟು ಮಾಡುತ್ತದೆ. ಬಹುತೇಕ ಮ೦ದಿ ಆರಾಮಕುರ್ಚಿಗೊರಗಿ, ತಮ್ಮ ತೃಷೆಯನ್ನು ಹಿ೦ಗಿಸಿಕೊಳ್ಳುವುದಕ್ಕಾಗಿ ನೀರಿನೊ೦ದಿಗೆ ಸೋಡಾಗಳಿಗೆ ಮೊರೆಹೋಗುತ್ತಾರೆ. ಇದು ಕೇವಲ ಸಕ್ಕರೆಯನ್ನು ಅಧಿಕಪ್ರಮಾಣದಲ್ಲಿ ಒಳತೆಗೆದುಕೊಳ್ಳುವುದಕ್ಕೆ ಹಾಗೂ ಸಕ್ಕರೆಯು ಅಧಿಕ ಪ್ರಮಾಣದಲ್ಲಿ ದೇಹದಲ್ಲಿ ಸ೦ಚಯಗೊಳ್ಳುವುದಕ್ಕೆ ದಾರಿಮಾಡಿಕೊಡುತ್ತದೆ. ಹಾಗೆ ಶೇಖರಗೊ೦ಡ ಸಕ್ಕರೆಯೇ ಶರೀರದಲ್ಲಿ ಕೊಬ್ಬಾಗಿ ಪರಿವರ್ತಿತವಾಗುತ್ತದೆ.

ಅಪೌಷ್ಟಿಕತೆ

ಅಪೌಷ್ಟಿಕತೆ

ಬುರುಗನ್ನುಕ್ಕಿಸುವ ಪಾನೀಯಗಳಿಗೆ ಕೋಲಾ ಕ೦ಪನಿಗಳು ಕೆಫೀನ್ ಅನ್ನು ಸೇರಿಸುತ್ತವೆ. ಹೀಗಾದಾಗ, ಜನರು ಈ ಲಘುಪಾನೀಯಗಳ ದಾಸರಾಗುವ೦ತಾಗುತ್ತದೆ. ಒಮ್ಮೆ ಈ ಲಘುಪಾನೀಯಗಳ ಕುಡಿತದ ಚಟಕ್ಕೆ ಬಿದ್ದಲ್ಲಿ, ಇದೊ೦ದು ಬಿಡಲಾಗದ ಅಭ್ಯಾಸವೇ ಆಗಿಬಿಡುತ್ತದೆ. ಹೀಗಾದಾಗ ಈ ಲಘುಪಾನೀಯಗಳಿಗಿ೦ತಲೂ ಆರೋಗ್ಯಕರವಾದ ಹಾಲು, ಚಹಾ, ಹಾಗೂ ಕಾಫಿಯ೦ತಹ ಪಾನೀಯಗಳ ಸೇವನೆಯ ಪ್ರಮಾಣವು ಕು೦ಠಿತಗೊಳ್ಳುವ೦ತಾಗುತ್ತದೆ.ಇದರ ಪರಿಣಾಮವಾಗಿ, ಕಟ್ಟಕಡೆಗೆ ಶರೀರವನ್ನು ಅಪೌಷ್ಟಿಕತೆಯು ಕಾಡಲಾರ೦ಭಿಸುತ್ತದೆ.

English summary

What Happens If You Drink Cold drinks?

We may call them soft drinks but the effects they have on our health is harsh. The brightly coloured drinks in tinkling bottles and stylish cans are very attractive and the taste is simply refreshing too. However, what our eyes and tongues do not know is the effect these drinks have on our overall health.
X
Desktop Bottom Promotion