For Quick Alerts
ALLOW NOTIFICATIONS  
For Daily Alerts

ಥಟ್ಟನೇ ಕಾಡುವ 'ದಿಗಿಲುತನ' ಕಾಯಿಲೆಯ ಲಕ್ಷಣಗಳೇನು?

By Super
|

ಕೆಲವೊಮ್ಮೆ ಕೆಲಜನರು ತಾನು ಇನ್ನೇನು ಸಾಯಲಿದ್ದೇನೆ ಎಂಬಂತೆ ವರ್ತಿಸುತ್ತಾ ನಿಂತಲ್ಲೇ ಕುಸಿದುಬೀಳುತ್ತಾರೆ. ತಕ್ಷಣ ವೈದ್ಯರಲ್ಲಿ ಕೊಂಡು ಹೋದರೆ ವೈದ್ಯರು ಸ್ವಲ್ಪ ತೊಂದರೆ ಇದೆ, ಆದರೆ ಸಾವಿನ ಅಥವಾ ಆಗಲೇ ಕುಸಿದುಬೀಳುವ ಅಪಾಯವಿಲ್ಲ ಎಂದು ಸಂತೈಸುತ್ತಾರೆ. ಹಾಗಾದರೆ ಆ ವ್ಯಕ್ತಿ ಕೆಲ ಕ್ಷಣಗಳ ಹಿಂದೆ ಸುತ್ತಮುತ್ತಲ ಎಲ್ಲರೂ ಆತಂಕಪಟ್ಟುಕೊಳ್ಳುವಂತೆ ಕುಸಿದದ್ದೇಕೆ? ಇದಕ್ಕೆ ವೈದ್ಯಭಾಷೆಯಲ್ಲಿ ಥಟ್ಟನೇ ಕಾಡುವ ದಿಗಿಲುತನ (panic attack) ಎಂದು ಕರೆಯುತ್ತಾರೆ. ಇದು ದೈಹಿಕ ತೊಂದರೆಗಿಂತಲೂ ಹೆಚ್ಚಾಗಿ ಮಾನಸಿಕ ತೊಂದರೆಯಾಗಿದೆ.

ಸಾಮಾನ್ಯವಾಗಿ ಸುಲಭವಾಗಿ ಸ್ಥೈರ್ಯಗೆಡುವ ವ್ಯಕ್ತಿಗಳಲ್ಲಿ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಆ ಹೊತ್ತಿನಲ್ಲಿ ಹೃದಯಬಡಿತ ಹೆಚ್ಚುತ್ತದೆ, ಉಸಿರಾಟ ತಡೆತಡೆದು ನಡೆಯುತ್ತದೆ, ವ್ಯಕ್ತಿ ತಾನು ಇನ್ನೇನು ಸಾಯಲಿದ್ದೇನೆ, ಇದು ತನ್ನ ಅಂತಿಮ ಕ್ಷಣಗಳು ಎಂಬಂತೆ ವರ್ತಿಸುತ್ತಾನೆ. ಒಂದು ವೇಳೆ ಇದಕ್ಕೆ ಸೂಕ್ತ ಚಿಕಿತ್ಸೆ ಕೈಗೊಳ್ಳದೇ ಹೋದರೆ ಈ ರೋಗದ ಉತ್ಕೃಷ್ಟ ರೂಪವಾದ panic disorder ಎಂಬ ಸ್ಥಿತಿಗೂ ತಲುಪಬಹುದು.

ಈ ತೊಂದರೆ ಕಾಣಿಸಿಕೊಳ್ಳುವ ವ್ಯಕ್ತಿಗಳು ತನಗೆ ಕೆಲವು ಸ್ಥಳಗಳಲ್ಲಿ ಅಥವಾ ಪರಿಸ್ಥಿತಿಗಳಲ್ಲಿ ಈ ತೊಂದರೆ ಎದುರಾಗಬಹುದು ಎಂದು ಭಾವಿಸುತ್ತಾರೆ. ಇದಕ್ಕೆ ಅವರು ತಮ್ಮದೇ ಆದ ವ್ಯಾಖ್ಯಾನೆಯನ್ನೂ ಅದಕ್ಕೆ ಪೂರಕ ಪುರಾವೆಯನ್ನೂ ನೀಡಬಹುದು. ಉದಾಹರಣೆಗೆ "ಆ ರಸ್ತೆಯಲ್ಲಿ ಹೋದರೆ ಅಲ್ಲಿರುವ ಒಂದು ಭೂತ ನನ್ನನ್ನು ಸಾಯಿಸಲು ಕಾಯುತ್ತಾ ನಿಂತಿದೆ" ಮೊದಲಾದವು. ಒಳ್ಳೆಯ ಸುದ್ದಿಯೆಂದರೆ ಈ ಮನೋರೋಗಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿದೆ. ಆದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೇ ಇದ್ದರೆ ಮಾತ್ರ ಪರಿಣಾಮ ವಿಕೋಪಕ್ಕೆ ತಿರುಗಬಹುದು. ಮಾನಸಿಕ ರೋಗವಾದ 'ಅನೋರೆಕ್ಸಿಯಾ' ಕಾಯಿಲೆಯ ಲಕ್ಷಣಗಳೇನು?

ಮನೋಚಿಕಿತ್ಸಕರು ಈ ಸ್ಥಿತಿಗೆ ಕಾರಣವನ್ನು ಹುಡುಕಿ ನಿಧಾನವಾಗಿ ರೋಗಿ ಇದುವರೆಗೆ ತಪ್ಪಾಗಿ ಭಾವಿಸಿಕೊಂಡಿದ್ದ ವಿಚಾರವನ್ನು ತಿಳಿಯಾಗಿಸಿ ಮನೋಸ್ಥೈರ್ಯವನ್ನು ತುಂಬುತ್ತಾರೆ. ಉದಾಹರಣೆಗೆ "ನೀವು ನೋಡಿದ್ದ ಭೂತವನ್ನು ಕೆಲ ದಿನಗಳ ಹಿಂದೆ ಅಲ್ಲಿಂದ ಹಿಡಿದು ಬಾಟಲಿಯಲ್ಲಿ ಹಾಕಿ ಹೂತು ಆಯಿತು, ಈಗ ನೀವು ಆ ರಸ್ತೆಯಲ್ಲಿ ಧೈರ್ಯವಾಗಿ ಹೋಗಬಹುದು" ಎಂದು ಹೇಳಿ ರೋಗಿಯಲ್ಲಿ ಧೈರ್ಯ ತುಂಬುತ್ತಾರೆ. ನಿಧಾನವಾಗಿ ರೋಗಿ ತನ್ನ ಸಹಜಸ್ಥಿತಿಗೆ ಮರಳಲು ಇದರಿಂದ ಸಾಧ್ಯವಾಗುತ್ತದೆ. ಈ ಬಗ್ಗೆ ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಪರಿಹಾರ ಕಾಣದ ಉದ್ವಿಗ್ನತೆ

ಪರಿಹಾರ ಕಾಣದ ಉದ್ವಿಗ್ನತೆ

ಈ ತೊಂದರೆಗೆ ಕಾರಣಗಳೇನು? ಎಂಬ ಪ್ರಶ್ನೆಯ ಮೂಲಕ ಮನೋಚಿಕಿತ್ಸಕರು ಪರಿಹಾರ ಹುಡುಕಲು ಪ್ರಾರಂಭಿಸುತ್ತಾರೆ. ಇದುವರೆಗೆ ಅವರು ಪರಿಹರಿಸಿದ ಉದಾಹರಣೆಗಳಲ್ಲಿ ಅತ್ಯಂತ ಭಯಾನಕ, ಕರುಳು ಕಿವುಚುವ, ದುಃಖಕರ ವಿಷಯಗಳಿವೆ. ಚಿಕ್ಕಂದಿನಲ್ಲಿ ತಮ್ಮವರಿಂದಲೇ ಮಕ್ಕಳು ದೌರ್ಜನ್ಯಕ್ಕೊಳಗಾಗುವುದು, ಆಪ್ತರಿಂದ ಮೋಸ ಹೋಗುವುದು, ಲೈಂಗಿಕವಾಗಿ ಶೋಷಣೆಗೊಳಗಾಗಿ ಯಾರಲ್ಲೂ ಹೇಳದೇ ಕೊರಗುವುದು ಮೊದಲಾದವು ಮನಸ್ಸಿನಾಳದಲ್ಲಿ ಉಳಿದು ಇದಕ್ಕೆ ಪೂರಕವಾದ ಇನ್ನೊಂದು ವಿಷಯ ಅಥವಾ ವ್ಯಕ್ತಿ ಕಂಡುಬಂದಾಗ ರೋಗ ಉಲ್ಬಣಿಸಿರುವುದನ್ನು ಚಿಕಿತ್ಸಕರು ಗಮನಿಸಿದ್ದಾರೆ. ಉದಾಹರಣೆಗೆ ಚಿಕ್ಕವಯಸ್ಸಿನಲ್ಲಿಯೇ ಆಪ್ತರಿಂದ ಶೋಷಣೆಗೊಳಗಾದ ಮಗು ವೃದ್ದಾಪ್ಯ ಸಮೀಪಿಸಿದ ಬಳಿಕ ಇದೇ ವ್ಯಕ್ತಿಯನ್ನು ಹೋಲುವ ಇನ್ನೊಬ್ಬ ವ್ಯಕ್ತಿಯನ್ನು ಕಂಡಾಗ ಈತ ಮತ್ತೆ ತನ್ನ ಶೋಷಣೆ ಮಾಡಲೆಂದೇ ಬಂದಿದ್ದಾನೆ ಎಂದೇ ತಿಳಿದು ದಿಗಿಲುಗೊಳ್ಳುವುದು.

 ಆನುವಂಶಿಕವಾಗಿ ಕಾಣಬರುವ ಸಾಧ್ಯತೆ

ಆನುವಂಶಿಕವಾಗಿ ಕಾಣಬರುವ ಸಾಧ್ಯತೆ

ಈ ತೊಂದರೆ ಅನುವಂಶಿಕವಾಗಿಯೂ ಬರಬಹುದು ಎಂಬುದನ್ನು ಮನೋಚಿಕಿತ್ಸಕರು ತಮ್ಮ ಅನುಭವದಲ್ಲಿ ಕಂಡುಕೊಂಡಿದ್ದಾರೆ. ಅದರಲ್ಲೂ ಈ ತೊಂದರೆಯನ್ನು ಕಣ್ಣಿನಿಂದ ಕಂಡ ಕುಟುಂಬದ ಸದಸ್ಯರಿಗೇ ಇರುತ್ತದೆ. ಕಿವಿಯಿಂದ ಕೇಳಿದವರಲ್ಲೂ ಈ ತೊಂದರೆ ಕಂಡುಬಂದಿದ್ದರೂ ಸಾಧ್ಯತೆಗಳು ಕಡಿಮೆ.

ಇತರ ಕಾಯಿಲೆಗಳ ಅಡ್ಡಪರಿಣಾಮ

ಇತರ ಕಾಯಿಲೆಗಳ ಅಡ್ಡಪರಿಣಾಮ

ಕೆಲವೊಮ್ಮೆ ದೀರ್ಘಕಾಲದಿಂದ ವಾಸಿಯಾಗದ ಕಾಯಿಲೆಗಳು, ಅಥವಾ ಇದರ ಬಗ್ಗೆ ಇನ್ನೊಬ್ಬರು ನೀಡಿದ ತಪ್ಪು ಮಾಹಿತಿಯೂ ದಿಗಿಲುತನವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ ಚಿಕ್ಕಂದಿನಲ್ಲಿ ಮಂಡಲದ ಹಾವು ಕಚ್ಚಿದ್ದ ಓರ್ವ ವ್ಯಕ್ತಿಗೆ ಯಾರೋ ಹೇಳಿದ್ದರಂತೆ, ಮಂಡಲದ ಹಾವಿನ ವಿಷ ಹನ್ನೆರಡು ವರ್ಷದ ಬಳಿಕ ಬರುತ್ತದೆ. ಇದನ್ನು ಸಂಪೂರ್ಣವಾಗಿ ನಂಬಿದ ವ್ಯಕ್ತಿ ಹಾವು ಕಚ್ಚಿದ ದಿನದಿಂದ ಹನ್ನೆರಡು ವರ್ಷ ಹತ್ತಿರಾಗುತ್ತಿದ್ದಂತೆಯೇ ತನಗೆ ಸಾವು ಹತ್ತಿರಾಗುತ್ತಿದೆ ಎಂದೇ ಹೆದರುವುದು ಕಾರಣವಾಗಬಹುದು. ಎದೆನೋವು ಎಂದು ವೈದ್ಯರ ಬಳಿ ಬಂದು ಕಾಯುತ್ತಿದ್ದವರಲ್ಲಿ ಯೋಗಕ್ಷೇಮ ವಿಚಾರಿಸಿದ ಪಕ್ಕದವರು "ಅಯ್ಯೋ ನಿಮಗೆ ನೋವು ಬಂದ ರೀತಿಯೇ ನಮ್ಮ ಊರಿನ ಒಬ್ಬರಿಗೂ ನೋವು ಬಂದಿತ್ತು, ಅವರು ಸರಿಯಾಗಿ ಒಂದು ವರ್ಷದ ಮೇಲೆ ತೀರಿಕೊಂಡರು. ಇನ್ನೊಬ್ಬರಿಗೂ ನೋವು ಬಂದಿತ್ತು, ಆದರೆ ದೇವಸ್ಥಾನದಲ್ಲಿ ಪೂಜೆ ಮಾಡಿಸಿಕೊಂಡಿದ್ದರಿಂದ ಇನ್ನೂ ಬದುಕಿದ್ದಾರೆ"ಎಂದು ಕಾಯಿಲೆಗೆ ಧಾರ್ಮಿಕ ಪರಾಕಾಷ್ಠೆಯನ್ನೂ ಸೇರಿಸುವುದು ಇನ್ನೊಂದು ಕಾರಣವಾಗಿದೆ. ವೈದ್ಯರ ಮಾತಿಗಿಂತಲೂ ಈ ಮಾತುಗಳೇ ರೋಗಿಯ ಮನಸ್ಸಿನಾಳದಲ್ಲಿ ಹುದುಗಿ ಅವರು ಯಾವ ದೇವಸ್ಥಾನ ಎಂದು ಹೇಳಿದ್ದುದನ್ನು ಕೇಳದೇ ಇದ್ದುದಕ್ಕೆ ತಮ್ಮನ್ನು ತಾವೇ ಹಳಿಯುತ್ತಾ ದಿಗಿಲುತನದ ಉರುಳಿನಲ್ಲಿ ಬೀಳುತ್ತಾರೆ.

ನಿದ್ರೆಯ ಕೊರತೆ ಮತ್ತು ದಣಿವು

ನಿದ್ರೆಯ ಕೊರತೆ ಮತ್ತು ದಣಿವು

ಪ್ರತಿಯೊಬ್ಬರಿಗೂ ನಿದ್ರೆ ಅತ್ಯಂತ ಅವಶ್ಯವಾಗಿದೆ. ಯಾವುದೋ ಚಿಂತೆಯಿಂದ ನಿದ್ರೆ ಬರದಿರುವವರ ದೇಹದಲ್ಲಿ ಇಂಗಾಲದ ಡೈ ಆಕ್ಸೈಡ್ ಮತ್ತು ಸೋಡಿಯಂ ಲ್ಯಾಕ್ಟೇಟ್ ಎಂಬ ರಾಸಾಯನಿಕಗಳ ಪ್ರಮಾಣ ಅತಿ ಹೆಚ್ಚುವುದರಿಂದ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಉಸಿರಾಟ ತುಂಬಾ ದೀರ್ಘವಾಗುತ್ತದೆ, ಸೂಕ್ತವಾಗಿ ಯೋಚಿಸಲು ಸಾಧ್ಯವಾಗುವುದಿಲ್ಲ. ಅತೀವ ದಣಿವು ಆವರಿಸಿ ತಲೆಸುತ್ತಿದಂತಾಗುತ್ತದೆ. ಇದು ಸಹಾ ದಿಗಿಲುತನಕ್ಕೆ ಕಾರಣವಾಗಬಹುದು.

ಆಹಾರ ಆಧಾರಿತ ಕಾರಣಗಳು

ಆಹಾರ ಆಧಾರಿತ ಕಾರಣಗಳು

ಕೆಲವರಿಗೆ ಯಾವುದಾದರೂ ತಿಂಡಿ ಇಷ್ಟವಾಗಿಬಿಟ್ಟರೆ ಎಚ್ಚರವಿದ್ದಷ್ಟೂ ಹೊತ್ತು ತಿನ್ನುತ್ತಲೇ ಇರುವ ಚಟ ಉಂಟಾಗುತ್ತದೆ. ಒಂದು ವೇಳೆ ಕಾಫಿ ಮತ್ತು ಸಕ್ಕರೆ ವಿಪರೀತ ಸೇವಿಸುವ ಚಟ ಅಂಟಿಕೊಂಡರೆ ದೇಹದಲ್ಲಿ ಕೆಫೀನ್ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿ ಹಲವಾರು ಅಡ್ಡಪರಿಣಾಮಗಳಿಗೆ ನಾಂದಿಯಾಗುತ್ತದೆ. ಇದರಿಂದ ದುಗುಡ ಹೆಚ್ಚುತ್ತತೆ. ಇನ್ನೂ ಹೆಚ್ಚಾದರೆ ಥಟ್ಟನೇ ಕಾಡುವ ದಿಗಿಲುತನಕ್ಕೂ ಬಲಿಯಾಗುವ ಸಂಭವವಿದೆ.

English summary

What causes panic attacks?

What causes panic attacks? A panic attack is nothing but a sudden feeling of fear in overwhelming levels. The person who suffers this condition will be engulfed in fear all of a sudden. have a look
X
Desktop Bottom Promotion