For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!

By Super
|

ಇಂದಿನ ಸೌಲಭ್ಯಗಳ ಮತ್ತು ಆಹಾರಗಳ ಕಾರಣ ಸ್ಥೂಲಕಾಯಕ್ಕೆ ತುತ್ತಾಗಿರುವ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ಇಪ್ಪತ್ತರ ಹರೆಯ ದಾಟುತ್ತಿದ್ದಂತೆಯೇ ದೇಹ ಅಗಲವಾಗುತ್ತಾ ಸಾಗುವುದು ಕಾಳಜಿ ಹುಟ್ಟಿಸುತ್ತಿದೆ. ಈ ಸ್ಥೂಲಕಾಯದಿಂದ ಹೊರಬರಲು, ತಮ್ಮ ಇಪ್ಪತ್ತರ ಹರೆಯದ ಮೈಕಟ್ಟನ್ನು ಮತ್ತೊಮ್ಮೆ ಪಡೆದುಕೊಳ್ಳುವುದು ಎಲ್ಲರ ಕನಸು.

ಇದಕ್ಕಾಗಿ ಉತ್ತಮವಾದ ಆಹಾರಗಳ ಪಟ್ಟಿಯಲ್ಲಿ ಜೇನು ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ. ಅನಗತ್ಯ ಕೊಬ್ಬನ್ನು ಕರಗಿಸುವಲ್ಲಿ ಜೇನು ಪ್ರಮುಖ ಪಾತ್ರ ವಹಿಸುತ್ತದೆ. ಇದರ ಬಳಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದಿರುವುದು ಇದರ ಪ್ರಥಮ ಸ್ಥಾನಕ್ಕೆ ಸಾಕ್ಷಿಯಾಗಿದೆ. ತೂಕ ಇಳಿಸಿಕೊಳ್ಳಬೇಕೇ? ಮೂಸಂಬಿ ಜ್ಯೂಸ್ ಸೇವಿಸಿ!

ಜೇನು ಒಂದು ಸ್ನಿಗ್ಧ ದ್ರವವಾಗಿರುವ ಕಾರಣ ಇದನ್ನು ಬಹುತೇಕ ಯಾವುದೇ ಆಹಾರದೊಡನೆ ಮಿಶ್ರಣ ಮಾಡಿಕೊಂಡು ಸೇವಿಸಬಹುದು. ಹಾಲಿನೊಂದಿಗೆ ಇದು ಬೆರೆಯುವ ಪರಿಯನ್ನು ಕಂಡೇ ಹಿರಿಯ ಕವಿಗಳು ಹಾಲು ಜೇನಿನಂತಹ ಸಂಸಾರ ಎಂದು ವರ್ಣಿಸಿದ್ದಾರೆ. ಅಷ್ಟೇ ಅಲ್ಲದೇ ಸಾಲಾಡ್, ಟೀ, ಕಾಫಿ, ಸಿಹಿತಿಂಡಿಗಳು, ಬ್ರೆಡ್ ಜಾಮ್ ಮೊದಲಾದ ನಿತ್ಯದ ಆಹಾರಗಳ ಮೂಲಕ ಸೇವಿಸಬಹುದು. ಹೃದಯಕ್ಕೆ ಉತ್ತಮವಾದ ಹಸಿರು ಟೀ ಯಲ್ಲಿ ಕೊಂಚ ಜೇನು ಸೇರಿಸಿ ಸೇವಿಸಿದರೆ ಇದು ತೂಕ ಇಳಿಸಲು ನೆರವಾಗುವ ಜೊತೆಗೆ ಇತರ ರೂಪಗಳಲ್ಲಿಯೂ ಆರೋಗ್ಯಕ್ಕೆ ಉತ್ತಮವಾಗಿದೆ. ತೂಕ ಇಳಿಸುವ ತವಕದಲ್ಲಿ ಆರೋಗ್ಯದ ಕಡೆ ಗಮನವಿರಲಿ

ಆದ್ದರಿಂದ ಒಂದು ವೇಳೆ ನೀವು ಶೀಘ್ರವೇ ತೂಕವನ್ನು ಕಳೆದುಕೊಳ್ಳಲು ಇಚ್ಛಿಸಿದರೆ ನಿಮ್ಮ ಆಹಾರದಲ್ಲಿ ಜೇನು ಸಾಕಷ್ಟು ಇರಲು. ನಿಮ್ಮ ನೆರವಿಗೆ ಜೇನಿನ ಉಪಯೋಗದ ವಿಧಾನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಗೋಧಿಯ ಬ್ರೆಡ್‌ಗೆ ಹಚ್ಚಿ ಸೇವಿಸಿ

ಗೋಧಿಯ ಬ್ರೆಡ್‌ಗೆ ಹಚ್ಚಿ ಸೇವಿಸಿ

ರಾತ್ರಿಯೂಟದಲ್ಲಿ ಅಧಿಕ ಕ್ಯಾಲೋರಿಗಳ ಆಹಾರದ ಬದಲಿಗೆ ಸರಳವಾದ ಈ ಹೊಸರುಚಿ ಸವಿಯಿರಿ. ಗೋಧಿಯ ಬ್ರೆಡ್ (whole wheat or brown bread) ನ ಎರಡು ತುಣುಕುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ತುಣುಕಿನ ಒಂದು ಬದಿಗೆ ಮಾತ್ರ ಒಂದು ಚಮಚದಷ್ಟು ಜೇನು ಸವರಿ ಒಂದರ ಮೇಲೊಂದಿಟ್ಟು ಸೇವಿಸಿ. ಬಳಿಕ ಸಾಕಷ್ಟು ನೀರು ಕುಡಿಯಿರಿ. ಬೇರೆ ಯಾವುದೇ ಆಹಾರವನ್ನು ಸೇವಿಸದಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗೋಧಿಯ ಬ್ರೆಡ್‌ಗೆ ಹಚ್ಚಿ ಸೇವಿಸಿ

ಗೋಧಿಯ ಬ್ರೆಡ್‌ಗೆ ಹಚ್ಚಿ ಸೇವಿಸಿ

ಮಲಗುವ ಮುನ್ನ ಕೊಂಚ ದೂರ ಅಡ್ಡಾಡಿ ಬಳಿಕ ಪವಡಿಸಿ. ಇದರಿಂದ ರಾತ್ರಿಯ ಅನೈಚ್ಛಿಕ ಕಾರ್ಯಗಳಲ್ಲಿ ದೇಹಕ್ಕೆ ಅನಿವಾರ್ಯವಾಗಿ ಕರಗಿದ್ದ ಕೊಬ್ಬನ್ನು ಬಳಸಬೇಕಾಗಿ ಬರುವುದರಿಂದ ತೂಕ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.

ಅಡುಗೆಗಳಲ್ಲಿ ಬಳಸಿ

ಅಡುಗೆಗಳಲ್ಲಿ ಬಳಸಿ

ತೂಕ ಇಳಿಸಲು ಇನ್ನೊಂದು ಸುಲಭ ವಿಧಾನವೆಂದರೆ ನಿಮ್ಮ ಅಡುಗೆಗಳಲ್ಲಿ ಎಲ್ಲೆಲ್ಲಿ ಸಕ್ಕರೆ ಮತ್ತು ಎಣ್ಣೆಗಳನ್ನು ಬಳಸುತ್ತೀರೋ ಅಲ್ಲೆಲ್ಲಾ ಜೇನು ಬಳಸಿ. ಉದಾಹರಣೆಗೆ ಚಪಾತಿಯ ಎರಡೂ ಬದಿ ಸವರಲು ಎಣ್ಣೆ ಬಳಸುತ್ತಿದ್ದರೆ ಅದರ ಬದಲಿಗೆ ಕೊಂಚವೇ ಜೇನು ಬಳಸಿದರೆ ಚಪಾತಿ ಚೆನ್ನಾಗಿ ಉಬ್ಬುತ್ತದೆ ಹಾಗೂ ತಿನ್ನಲೂ ರುಚಿಯಾಗಿರುತ್ತದೆ.

ಅಡುಗೆಗಳಲ್ಲಿ ಬಳಸಿ

ಅಡುಗೆಗಳಲ್ಲಿ ಬಳಸಿ

ಎಣ್ಣೆ ಬಳಸುವ ಕೆಲವು ಫ್ರೈ ಗಳಿಗೂ ಜೇನು ಬಳಸಬಹುದು,ಪ್ರಯತ್ನಿಸಿ ನೋಡಿ. ಸಕ್ಕರೆ ಬಳಸುತ್ತಿದ್ದಲ್ಲೆಲ್ಲಾ ಸಕ್ಕರೆಯ ಪ್ರಮಾಣದ ಅರ್ಧದಷ್ಟು ಜೇನು ಬಳಸಿದರೂ ಸಾಕು, ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ತನ್ಮೂಲಕ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

ಹಾಲಿನೊಂದಿಗೆ ಸೇವಿಸಿ

ಹಾಲಿನೊಂದಿಗೆ ಸೇವಿಸಿ

ಒಂದು ಲೋಟ ಬಿಸಿಹಾಲಿಗೆ ಒಂದು ಚಮಚ ಜೇನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಆರೋಗ್ಯ ಉತ್ತಮವಾಗುವ ಜೊತೆಗೇ ತೂಕ ಇಳಿಯಲೂ ನೆರವಾಗುತ್ತದೆ.

ಹಾಲಿನೊಂದಿಗೆ ಸೇವಿಸಿ

ಹಾಲಿನೊಂದಿಗೆ ಸೇವಿಸಿ

ಇದಕ್ಕಾಗಿ ತಾಜಾ ಹಾಲಿಗಿಂತಲೂ ಹಾಲುಪುಡಿಯಿಂದ ತಯಾರಿಸಿದ ಹಾಲು ಉತ್ತಮ (Skimmed milk) ಏಕೆಂದರೆ ಇದರಲ್ಲಿ ಕ್ಯಾಲೋರಿಗಳು ಕಡಿಮೆಯಿದ್ದು ಅನಗತ್ಯ ಕೊಬ್ಬು ಸಂಗ್ರಹವಾಗುವುದರಿಂದ ತಪ್ಪಿದಂತಾಗುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ದೇಹದಾರ್ಢ್ಯ ತಜ್ಞರು ವ್ಯಾಯಾಮಕ್ಕೂ ಮುನ್ನ ಕೊಂಚ ಹಾಲು ಮತ್ತು ಜೇನಿನ ಪೇಯವನ್ನು ಕುಡಿಯುವಂತೆ ಸಲಹೆ ನೀಡುತ್ತಾರೆ.

ಜೇನು ಬೆರೆಸಿದ ಬಿಸಿನೀರು ಕುಡಿಯಿರಿ

ಜೇನು ಬೆರೆಸಿದ ಬಿಸಿನೀರು ಕುಡಿಯಿರಿ

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಜೇನು ಮತ್ತು ಎರಡು ದೊಡ್ಡಚಮಚ ಲಿಂಬೆ ರಸ ಸೇರಿಸಿ. ಈ ಪೇಯವನ್ನು ಬೆಳಿಗ್ಗೆದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಸೇವಿಸಿ. ಇದು ಸಹಾ ತೂಕ ಇಳಿಸುವ ಕ್ರಿಯೆಯನ್ನು ಶೀಘ್ರಗೊಳಿಸುತ್ತದೆ.

ಓಟ್ಸ್‪ನೊಂದಿಗೆ ಸೇವಿಸಿ

ಓಟ್ಸ್‪ನೊಂದಿಗೆ ಸೇವಿಸಿ

ಮುಂಜಾನೆಯ ಆಹಾರವಾಗಿ ಓಟ್ಸ್ ಸೇವಿಸುವ ಅಭ್ಯಾಸವಿದ್ದರೆ ಅದರಲ್ಲಿ ತಾಜಾ ಹಾಲಿನ ಬದಲಿಗೆ ಕೆನೆರಹಿತ ಹಾಲು ಮತ್ತು ಸಕ್ಕರೆಯ ಬದಲಿಗೆ ಜೇನನ್ನು ಸೇರಿಸಿ ಸವಿಯಿರಿ.

 ಚಹಾದೊಂದಿಗೆ ಸೇವಿಸಿ

ಚಹಾದೊಂದಿಗೆ ಸೇವಿಸಿ

ಹಾಲಿಲ್ಲದ ಟೀ ಸೇವಿಸುವವರು ಕೊಂಚ ಲಿಂಬೆರಸವನ್ನು ಸೇರಿಸಿಕೊಳ್ಳುತ್ತಾರೆ. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಿ ನಿಮ್ಮ ದಿನದ ಎರಡು ಅಥವಾ ಮೂರು ಹೊತ್ತಿನ ಚಹಾ ಕಾಫಿಗಳ ಬದಲಿಗೆ ಈ ಆರೋಗ್ಯಕರ ಪೇಯವನ್ನು ಸೇವಿಸಿ. ಇದು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ತೂಕವಿಳಿಸಲೂ ನೆರವಾಗುತ್ತದೆ.

ದಾಲ್ಚಿನ್ನಿ, ಜೇನು ಸೇರಿಸಿದ ಸಾಲಾಡ್ ಸೇವಿಸಿ

ದಾಲ್ಚಿನ್ನಿ, ಜೇನು ಸೇರಿಸಿದ ಸಾಲಾಡ್ ಸೇವಿಸಿ

ನಿಮ್ಮ ನೆಚ್ಚಿನ ಸಾಲಾಡ್ ಗಳಲ್ಲಿ ಕೊಂಚ ದಾಲ್ಚಿನ್ನಿ ಪುಡಿ ಮತ್ತು ಒಂದು ದೊಡ್ಡ ಚಮಚ ಜೇನು ಸೇರಿಸಿ ಕಲಕಿ ಸೇವಿಸಿ.

ದಾಲ್ಚಿನ್ನಿ, ಜೇನು ಸೇರಿಸಿದ ಸಾಲಾಡ್ ಸೇವಿಸಿ

ದಾಲ್ಚಿನ್ನಿ, ಜೇನು ಸೇರಿಸಿದ ಸಾಲಾಡ್ ಸೇವಿಸಿ

ಇದು ಹಣ್ಣುಗಳ ಸಾಲಾಡ್ ಆಗಿರಬಹುದು ಅಥವಾ ತರಕಾರಿಗಳ ಸಾಲಾಡ್ ಸಹಾ ಆಗಿರಬಹುದು. ಇದು ನಿಮ್ಮ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೇ ತೂಕವಿಳಿಸುವ ನಿಮ್ಮ ಶ್ರಮಕ್ಕೆ ತಕ್ಕ ಸಹಕಾರ ನೀಡುತ್ತದೆ.

English summary

Ways To Eat Honey For Weight Loss

Weight loss is the first and last thing on everyone's mind. In order to lose weight quickly and in the most healthy way, turn to honey as your secret ingredient. Honey is one of the best ingredients for weight loss. It helps to cut the fat quickly without any side effects. So, if you've been planning to cut down the pounds with a faster pace method, turn to these seven ways to eat honey.
Story first published: Monday, September 28, 2015, 15:23 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more