For Quick Alerts
ALLOW NOTIFICATIONS  
For Daily Alerts

ಅಜೀರ್ಣ ಸಮಸ್ಯೆ: ಕ್ಷಣಾರ್ಧದಲ್ಲಿ ನಿವಾರಿಸುವ ಆಯುರ್ವೇದ ಚಿಕಿತ್ಸೆ!

By Super
|

ನಾವೆಲ್ಲರೂ ಕೂಡ ಅನೇಕ ಬಾರಿ ಅಗತ್ಯಕ್ಕಿ೦ತ ಹೆಚ್ಚು ಆಹಾರಪದಾರ್ಥಗಳನ್ನು ಸೇವಿಸಿರುತ್ತೇವೆ, ಜ೦ಕ್ ಫುಡ್ ಗಳನ್ನು ತಿ೦ದಿರುತ್ತೇವೆ, ಅಥವಾ ಉಣ್ಣದೇ ಕೆಲವು ಬಾರಿ ಹಾಗೆಯೇ ಉಪವಾಸವಿರುವುದೂ ಉ೦ಟು. ಇದಕ್ಕೆ ಕಾರಣವು ಒ೦ದೋ ನಾವು ಕೆಲಸಕಾರ್ಯಗಳಲ್ಲಿ ಅತ್ಯ೦ತ ವ್ಯಸ್ತರಾಗಿರುತ್ತೇವೆ ಇಲ್ಲವೇ ಒತ್ತಡಕ್ಕೊಳಗಾಗಿರುತ್ತೇವೆ. ಇ೦ತಹ ಯಾವುದೇ ಒ೦ದು ಪರಿಸ್ಥಿತಿಯಲ್ಲಿ ನಮ್ಮ ಜೀರ್ಣಕ್ರಿಯೆಯ ಲಹರಿಯು ಏರುಪೇರಾಗುತ್ತದೆ ಹಾಗೂ ತತ್ಪರಿಣಾಮವಾಗಿ ನಮ್ಮ ಆರೋಗ್ಯವು ಕ್ಷೀಣಿಸಲಾರ೦ಭಿಸುತ್ತದೆ. ಎಚ್ಚರ: ಇಂತಹ ಆಹಾರ ಅಜೀರ್ಣ ಸಮಸ್ಯೆಗೆ ಕಾರಣವಾಗಬಹುದು!

ಅಜೀರ್ಣತೆ, ಹೊಟ್ಟೆಯು ಉಬ್ಬರಿಸಿದ೦ತಾಗುವುದು, ಹುಳಿತೇಗು, ಮಲಬದ್ಧತೆ, ಪರಿಸರದ ಸೂಕ್ಷ್ಮಾಣುಜೀವಿಗಳ ಪ್ರಭಾವಕ್ಕೆ ಸುಲಭವಾಗಿ ತುತ್ತಾಗುವುದು, ಅವುಗಳಿ೦ದ ಒದಗುವ ಸೋ೦ಕುಗಳು ಗುಣಮುಖವಾಗಲು ದೀರ್ಘಾವಧಿಯು ತೆಗೆದುಕೊಳ್ಳುವುದು, ನಿತ್ರಾಣ ಇವೇ ಮೊದಲಾದ ರೋಗ ಲಕ್ಷಣಗಳು ನಿಮ್ಮ ಜೀರ್ಣಾ೦ಗವ್ಯೂಹದ ಕಾರ್ಯಕ್ಷಮತೆಯು ಕು೦ಠಿತಗೊ೦ಡಿರುವುದನ್ನು ಖಚಿತಪಡಿಸುತ್ತವೆ. ಅಜೀರ್ಣ ಸಮಸ್ಯೆ ಬೆನ್ನು ಬಿಡದೆ ಕಾಡುತ್ತಿದೆಯೇ? ಇಲ್ಲಿದೆ ಪರಿಹಾರ

ಸಾಮಾನ್ಯವಾಗಿ ಅಜೀರ್ಣವಾದರೆ ಹೊಟ್ಟೆಯಲ್ಲಿನ ತಳಮಳ ಹೇಳತೀರದು. ಹುಳಿತೇಗು, ಗ್ಯಾಸ್ಟ್ರಿಕ್ ಮತ್ತು ಅಜೀರ್ಣತೆ ಒಂದಕ್ಕೊಂದು ಜೊತೆ ನಡೆಯುವ ಹೊಟ್ಟೆ ಸಮಸ್ಯೆಗಳು. ಅಸಮರ್ಪಕ ಮತ್ತು ಅನಾರೋಗ್ಯಕರ ಆಹಾರ ಅಜೀರ್ಣವನ್ನು ಸುಲಭವಾಗಿ ತಂದೊಡ್ಡುತ್ತದೆ. ಅತಿಯಾದ ಆಸಿಡ್ ಹೊಟ್ಟೆಯಲ್ಲಿ ಉತ್ಪತ್ತಿಯಾದಾಗ ಅಜೀರ್ಣತೆ ಕಾಡುತ್ತದೆ. ಇದರಿಂದ ಹೊಟ್ಟೆ ಉಬ್ಬುವುದು, ತೇಗು ಮತ್ತು ಎದೆ ಉರಿ ಕಾಣಿಸಿಕೊಳ್ಳುತ್ತದೆ. ಬನ್ನಿ ಅಜೀರ್ಣ ಸಮಸ್ಯೆಗೆ ಮನೆಮದ್ದು ಯಾವುದು ಎಂಬುದನ್ನು ನೋಡೋಣ...

ಗಿಡಮೂಲಿಕೆಗಳ ಚಹಾ

ಗಿಡಮೂಲಿಕೆಗಳ ಚಹಾ

ಇತ್ತೀಚಿನ ದಿನಗಳಲ್ಲಿ ಗಿಡಮೂಲಿಕೆಗಳ ಚಹಾ ಜನಪ್ರಿಯಗೊಳ್ಳುತ್ತಿದೆ. ವಿವಿಧ ಗಿಡಮೂಲಿಕೆ ಮತ್ತು ಹಸಿರು ಎಲೆಗಳನ್ನು ಸೇರಿಸಿದ ಟೀ ಎಲ್ಲಾ ಅಂಗಡಿಗಳಲ್ಲಿ ಸಿಗುತ್ತಿದೆ. ಮೊದಲು ಟೀಪುಡಿ ಎಂದರೆ ಕಪ್ಪು ಟೀ ಮಾತ್ರ ಆಯ್ಕೆಯಾಗಿತ್ತು. ಈಗ ವಿವಿಧ ಗಿಡಮೂಲಿಕೆಗಳ ಕಾರಣ ಹಲವು ಆಯ್ಕೆಗಳು ಲಭ್ಯವಿವೆ. ಪುದಿನಾ ಎಲೆಗಳು, ರಾಸ್ಪ್ ಬೆರಿ ಹಣ್ಣುಗಳು, ಬ್ಲ್ಯಾಕ್ ಬೆರಿ ಹಣ್ಣುಗಳು ಮೊದಲಾದ ಸ್ವಾದಗಳಲ್ಲಿ ಲಭಿಸುವ ಟೀ ಪುಡಿಯನ್ನು ಕುದಿಯುವ ನೀರಿನಲ್ಲಿ ಎರಡರಿಂದ ಐದು ನಿಮಿಷ ಇರಿಸಿ ಮುಚ್ಚಳ ಮುಚ್ಚಿ (ಕುದಿಸಬಾರದು) ಬಳಿಕ ನಿಧಾನವಾಗಿ ಐದು ನಿಮಿಷಗಳವರೆಗೆ ಸ್ವಲ್ಪಸ್ವಲ್ಪವೇ ಹೀರುತ್ತಾ ಹೋಗಿ. (ಒಮ್ಮೆಲೇ ಕುಡಿಯಬಾರದು). ಇದರಿಂದ ಹೊಟ್ಟೆಯಲ್ಲಿ ಉರಿ, ಹುಳಿತೇಗು ಮೊದಲಾದ ತೊಂದರೆಗಳು ನಿವಾರಣೆಯಾಗುತ್ತವೆ. ಪೆಪ್ಪರ್ ಮಿಂಟ್, ಕ್ಯಾಮೋಮೈಲ್ ಎಲೆಗಳ ಟೀ ಹೊಟ್ಟೆಯಲ್ಲಿ ಉರಿಯ ಜೊತೆಗೇ ಅತಿಹೆಚ್ಚು ಊಟ ಮಾಡಿದಾದ ಕಾಡುವ ಹೊಟ್ಟೆಯುಬ್ಬರವನ್ನೂ ಕಡಿಮೆಗೊಳಿಸುತ್ತದೆ.

ಲೋಳೆಸರ (Aloe vera)

ಲೋಳೆಸರ (Aloe vera)

ಲೋಳೆಸರದ ಒಂದು ಚಿಕ್ಕ ಕೋಡನ್ನು ಈಗತಾನೇ ಮುರಿದು ರಸಹಿಂಡಿ. ಇದರಲ್ಲಿ ಸುಮಾರು ಹತ್ತರಿಂದ ಇಪ್ಪತ್ತು ಮಿಲೀ ದ್ರವವನ್ನು ಸ್ವಲ್ಪ ನೀರಿನೊಡನೆ ಸೇರಿಸಿ ಊಟದ ಬಳಿಕ ಕುಡಿಯಿರಿ. ನೀರಿನ ಪ್ರಮಾಣ ಕಡಿಮೆಯಿದ್ದಷ್ಟೂ ಒಳ್ಳೆಯದು, ಆದರೆ ಈ ರಸ ಅಷ್ಟೊಂದು ರುಚಿಕರವಲ್ಲದ್ದರಿಂದ ನಿಮಗೆ ಸಹ್ಯವೆನಿಸಿದಷ್ಟೇ ನೀರು ಸೇವಿಸಿ. ಪ್ರತಿಬಾರಿಯೂ ಹೊಸ ಕೋಡನ್ನೇ ಗಿಡದಿಂದ ಮುರಿಯಬೇಕು. ಮಾರುಕಟ್ಟೆಯಲ್ಲಿ ಸಿಗುವ ರಸದಲ್ಲಿ ಲಿಂಬೆ ಮತ್ತು ಇನ್ನಿತರ ಆಹಾರ ಸಂರಕ್ಷಕಗಳಿರುವುದರಿಂದ ಅಷ್ಟೊಂದು ಪರಿಣಾಮಕಾರಿಯಲ್ಲ.

ದೊಡ್ಡಜೀರಿಗೆ (Fennel seeds)

ದೊಡ್ಡಜೀರಿಗೆ (Fennel seeds)

ಇಂದಿಗೂ ಹೆಚ್ಚಿನ ಹೋಟೆಲುಗಳಲ್ಲಿ ಊಟದ ಬಳಿಕ ಹಣ ಕೊಡುವಲ್ಲಿ ಒಂದು ಚಿಕ್ಕ ಬಟ್ಟಲಿನಲ್ಲಿ ದೊಡ್ಡಜೀರಿಗೆಕಾಳುಗಳನ್ನಿರಿಸಿರುತ್ತಾರೆ. ಏಕೆಂದರೆ ಊಟದ ಬಳಿಕ ದೊಡ್ಡಜೀರಿಗೆಯ ಸೇವನೆಯಿಂದ ಅಜೀರ್ಣತೆ ಕಡಿಮೆಯಾಗುತ್ತದೆ. ಇನ್ನೂ ಉತ್ತಮ ಪರಿಣಾಮಕ್ಕಾಗಿ ಎರಡು ಊಟದ ಸಮಯದ ನಡುಭಾಗದಲ್ಲಿ ಕಾಲು ಟೀಚಮಚ ಬೇಯಿಸಿ ತಣಿಸಿದ ದೊಡ್ಡಜೀರಿಗೆಯನ್ನು ಹಾಗೇ ಅಗಿದು ನುಂಗಿ. ಆಯುರ್ವೇದದಲ್ಲಿ ದೊಡ್ಡಜೀರಿಗೆಯನ್ನು ಬಳಸಿರುವ ಔಷಧಿಗಳಾದ ಹಿಂಗ್ವಾಷ್ತಕ ಚೂರ್ಣ, ತ್ರಿಫಲಾ ಚೂರ್ಣ, ಲಸೂನ್ ವಾಟ್ಟಿ, ಕುಮಾರಿಯಾಸಾವ್ ಮೊದಲಾದವುಗಳನ್ನು ಅಜೀರ್ಣಕ್ಕಾಗಿ ನೀಡಲಾಗುತ್ತದೆ. ಆದರೆ ಈ ಔಷಧಿಗಳನ್ನು ಆಯುರ್ವೇದ ವೈದ್ಯರು ಅಥವಾ ವೈದ್ಯಶಾಲಾ ಪರಿಣಿತರ ಸಲಹೆ ಮೇರೆಗೆ ಮಾತ್ರ ತೆಗೆದುಕೊಳ್ಳಬೇಕು.

ಸೇಬು ಹಣ್ಣು

ಸೇಬು ಹಣ್ಣು

ಸೇಬುಹಣ್ಣಿನಲ್ಲಿ, ಅದರಲ್ಲೂ ವಿಶೇಷವಾಗಿ ಹಸಿರು ಸೇಬಿನಲ್ಲಿ ಅಜೀರ್ಣಕ್ಕೆ ಪರಿಣಾಮಕಾರಿಯಾದ ಹಲವು ಪೋಷಕಾಂಶಗಳಿವೆ. ಸೇಬುಹಣ್ಣನ್ನು ಸಿಪ್ಪೆಸಹಿತವೇ ತಿನ್ನಬೇಕು, ಏಕೆಂದರೆ ಸಿಪ್ಪೆಯಲ್ಲಿ ಕರಗದ ನಾರು ಇದ್ದರೆ ತಿರುಳಿನಲ್ಲಿ ಕರಗುವ ನಾರು ಇದೆ. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗಿ ಈ ಮೂಲಕ ಎದುರಾಗಬಹುದಾಗಿದ್ದ ತೊಂದರೆಗಳನ್ನು ನಿವಾರಿಸುತ್ತದೆ. ಸೇಬುಹಣ್ಣನ್ನು ತಿನ್ನುವ ಮೊದಲೇ ಕತ್ತರಿಸಿ ತಿನ್ನಬೇಕು. ಕೆಲನಿಮಿಷಗಳ ಬಳಿಕ ಕತ್ತರಿಸಿದ ಭಾಗವಷ್ಟೂ ಕಂದುಬಣ್ಣಕ್ಕೆ ತಿರುಗಲು ತೊಡಗುತ್ತದೆ. ಈ ಹಣ್ಣು ಅಜೀರ್ಣವನ್ನು ಹೆಚ್ಚಿಸುವ ಅಪಾಯವಿದೆ. ಹಾಗಾಗಿ ತಿನ್ನುವ ಮೊದಲೇ ಕತ್ತರಿಸಿಕೊಂಡು ಕೂಡಲೇ ತಿನ್ನುವುದು ಅತ್ಯುತ್ತಮವಾಗಿದೆ.

English summary

Treating Indigestion The Ayurvedic Way

Indigestion is a mild discomfort in the abdomen with a feeling of fullness. It happens to everyone from time to time. Also known as dyspepsia, it is due to a problem in the secretion of digestive juices in the stomach. Here are some ayurvedic ways to treat indigestion. Try these methods and stay away from indigestion,
X
Desktop Bottom Promotion