For Quick Alerts
ALLOW NOTIFICATIONS  
For Daily Alerts

ಸಾಮಾನ್ಯ ಫ್ಲೂ ಜ್ವರಕ್ಕೂ ಹಂದಿ ಜ್ವರಕ್ಕೂ ಇರುವ ವ್ಯತ್ಯಾಸವೇನು?

By Arshad
|

ಇತ್ತೀಚೆಗೆ ಹಂದಿಜ್ವರಕ್ಕೆ ತುತ್ತಾದವರ ವಿವರಗಳು ಪತ್ರಿಕೆಗಳ ಮುಖಪುಟವನ್ನು ತುಂಬುತ್ತಿವೆ. ಭಾರತದಲ್ಲಿಯೂ ಹಲವೆಡೆ ಹಂದಿಜ್ವರ ಮತ್ತು ಹೆಚ್1ಎನ್1 ಜ್ವರ ವ್ಯಾಪಿಸುತ್ತಿರುವ ಸಂಗತಿ ಕಳವಳಕಾರಿಯಾಗಿದೆ. ವಾಸ್ತವವಾಗಿ ಯಾವುದೇ ರೋಗ ನಿಜವಾಗಿ ಆವರಿಸುವುದಕ್ಕಿಂತ ಇದರ ಕುರಿತಾದ ಭಯವೇ ಹೆಚ್ಚು ಆತಂಕ ಹುಟ್ಟಿಸುತ್ತದೆ.

ಜ್ವರ ಬೇರೆ ಕಾರಣದಿಂದ ಬಂದಿದ್ದು ಲಕ್ಷಣಗಳು ಹಂದಿಜ್ವರಕ್ಕೆ ಹೋಲಿಕೆ ಕಂಡುಬಂದರೆ ಅಕ್ಕಪಕ್ಕದವರು ಇದು ರೋಗಿಯ ಕಡೆಗಾಲ ಎಂಬಂತೆ ವರ್ತಿಸುವುದರಿಂದ ಮಾನಸಿಕವಾಗಿ ಧೃತಿಗೆಡುವ ರೋಗಿ ಜ್ವರಕ್ಕಿಂತ ಹೆಚ್ಚಾಗಿ ಭಯದ ಕಾರಣವೇ ಮರಣವನ್ನಪ್ಪಿರುವ ಎಷ್ಟೋ ಘಟನೆಗಳಿವೆ. ಮಾರಕ ಹಂದಿ ಜ್ವರದ ಹೆಡೆಮುರಿ ಕಟ್ಟಿಹಾಕುವ ಅದ್ಭುತ ಮನೆಮದ್ದು

ಆದ್ದರಿಂದ ಯಾವುದೇ ಜ್ವರದ ಲಕ್ಷಣಗಳು ಕಂಡುಬಂದರೆ ಧೃತಿಗೆಡದೇ ಮೊತ್ತ ಮೊದಲು ವೈದ್ಯಕೀಯ ತಪಾಸಣೆಗೆ ಒಳಗಾಗುವುದು ಅತ್ಯಂತ ಅಗತ್ಯವಾಗಿದೆ. ಸೂಕ್ತ ಪರೀಕ್ಷೆಗಳ ಬಳಿಕ ಪರಿಣಿತರು ಈ ಜ್ವರಕ್ಕೆ ಕಾರಣ ಹಾಗೂ ಜ್ವರದ ಬಗ್ಗೆ ನೀಡುವ ಸ್ಪಷ್ಟ ಮಾಹಿತಿಯನ್ನೇ ಪರಿಗಣಿಸಬೇಕೇ ವಿನಃ ಅಕ್ಕಪಕ್ಕದವರು ನೀಡುವ ಹೋಲಿಕೆಯ ಅಂಶಗಳನ್ನಲ್ಲ. ವಾಸ್ತವವಾಗಿ ಸಾಮಾನ್ಯ ಜ್ವರದ ಲಕ್ಷಣಗಳಿಗೂ ಹಂದಿಜ್ವರದ ಲಕ್ಷಣಗಳಿಗೂ ಹೆಚ್ಚು ವ್ಯತ್ಯಾಸ ಮೇಲ್ನೋಟಕ್ಕೆ ಕಂಡುಬರುವುದಿಲ್ಲ. ಹಾಗಾಗಿ ಸಾಮಾನ್ಯ ಫ್ಲೂ ಜ್ವರವನ್ನೇ ಹಂದಿಜ್ವರವೆಂದೇ ತಪ್ಪಾಗಿ ಅರ್ಥೈಸಿಕೊಂಡ ಪ್ರಕರಣಗಳೂ ನೂರಾರಿವೆ. ವಿಶ್ವವನ್ನೇ ಕಂಗೆಡಿಸಿರುವ ಮಹಾಮಾರಿ ರೋಗ ಹಂದಿಜ್ವರದ ಲಕ್ಷಣಗಳೇನು?

ಪ್ರಯೋಗಾಲಯದ ಪರೀಕ್ಷಾ ಫಲಿತಾಂಶವೇ ನಿಜವಾದ ಸ್ಪಷ್ಟನೆಯಾಗಿದೆ

ಪ್ರಯೋಗಾಲಯದ ಪರೀಕ್ಷಾ ಫಲಿತಾಂಶವೇ ನಿಜವಾದ ಸ್ಪಷ್ಟನೆಯಾಗಿದೆ

ಎರಡೂ ವಿಧದ ರೋಗಗಳ ಬಾಹ್ಯ ಲಕ್ಷಣಗಳು ಒಂದೇ ತೆರನಾಗಿ ಕಂಡುಬಂದರೂ ರೋಗಿಯ ರಕ್ತಪರೀಕ್ಷೆಯ ಮೂಲಕ ಹಲವು ಮಾಹಿತಿಗಳನ್ನು ಪಡೆಯಬಹುದು. ಈ ಮಾಹಿತಿಗಳಿಂದ ರೋಗಿಗೆ ಜ್ವರ ಬಂದಿರುವ ಕಾರಣವನ್ನು ಕಂಡುಹಿಡಿದು ಅದಕ್ಕೆ ಸೂಕ್ತವಾದ ಔಷಧಿಗಳನ್ನು ನೀಡುವ ಮೂಲಕ ಖಾಯಿಲೆ ಗುಣಪಡಿಸಬಹುದು. ಒಂದು ವೇಳೆ ಹಂದಿಜ್ವರವೇ ಆಗಿದ್ದರೆ, ಹಾಗೂ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿದೆ. ಇದಕ್ಕೆ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದೆಯೇ ಇಲ್ಲವೇ ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ.

ಪ್ರಯೋಗಾಲಯದ ಪರೀಕ್ಷಾ ಫಲಿತಾಂಶವೇ ನಿಜವಾದ ಸ್ಪಷ್ಟನೆಯಾಗಿದೆ

ಪ್ರಯೋಗಾಲಯದ ಪರೀಕ್ಷಾ ಫಲಿತಾಂಶವೇ ನಿಜವಾದ ಸ್ಪಷ್ಟನೆಯಾಗಿದೆ

ಸಿಡಿಸಿ ನೀಡಿದ ಮಾಹಿತಿಯ ಪ್ರಕಾರ ಅಮೇರಿಕಾ ದೇಶವೊಂದರಲ್ಲಿಯೇ ಸಾಮಾನ್ಯ ಜ್ವರ ಕಂಡು ಬಂದ ಎರಡು ಲಕ್ಷ ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಅದರಲ್ಲಿ ಮೂವತ್ತಾರು ಸಾವಿರ ಜನರ ರೋಗ ಉಲ್ಬಣಗೊಂಡು ಸಾವಿನಲ್ಲಿ ಅಂತ್ಯ ಕಂಡಿದೆ. ಅದರಲ್ಲಿ ಮಕ್ಕಳ ಮತ್ತು ವೃದ್ಧರ ಸಂಖ್ಯೆ ಗಣನೀಯವಾಗಿರುವುದು ಕಂಡುಬಂದಿದೆ. ಅವರ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕುಂಠಿತವಾಗಿರುವುದೇ ಕಾರಣ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.

ನಮ್ಮ ದೇಹದ ರೋಗ ನಿರೋಧಕ ಶಕ್ತಿ ಸಬಲವಾಗಿಲ್ಲ..!

ನಮ್ಮ ದೇಹದ ರೋಗ ನಿರೋಧಕ ಶಕ್ತಿ ಸಬಲವಾಗಿಲ್ಲ..!

ನಮ್ಮೆಲ್ಲರಿಗೂ ಮೈಲಿ ಅಥವಾ ಸೀತಾಳ (small pox) ಎಂಬ ಜ್ವರ ಜೀವಮಾನದಲ್ಲೊಂದು ಬಾರಿ ಬಂದು ಹೋಗಿದೆ. ಒಮ್ಮೆ ಬಂದ ಬಳಿಕ ಇಡಿಯ ಜೀವಮಾನ ಇನ್ನೊಮ್ಮೆ ಬರುವುದಿಲ್ಲ, ಏಕೆಂದರೆ ಈ ರೋಗಕ್ಕೆ ಕಾರಣವಾದ ವೈರಸ್ಸುಗಳನ್ನು ಹೊಡೆದೋಡಿಸಲು ನಮ್ಮ ದೇಹದ ರೋಗನಿರೋಧಕ ಶಕ್ತಿ ಸಫಲವಾಗಿರುತ್ತದೆ. ಇದೇ ರೀತಿ ಹೆಚ್1ಎನ್1 ಜ್ವರ ನಮ್ಮ ದೇಹಕ್ಕೆ ಹೊಸದಾಗಿದೆ. ಇದನ್ನು ನಿಗ್ರಹಿಸುವ ಶಕ್ತಿಯನ್ನು ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ ಇನ್ನೂ ಹೊಂದಿಲ್ಲದ ಕಾರಣ ಈ ಜ್ವರಕ್ಕೆ ನಾವೆಲ್ಲರೂ ಸುಲಭವಾಗಿ ಬಲಿಯಾಗುತ್ತೇವೆ. ಇದರಿಂದ ಈ ಜ್ವರ ಹರಡುವ ವೇಗ ಅತ್ಯಂತ ಹೆಚ್ಚಾಗಿದೆ.

 ಹೆಚ್1ಎನ್1 ವೈರಾಣು

ಹೆಚ್1ಎನ್1 ವೈರಾಣು

ಈ ರೋಗ ಹರಡುವ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೆಚ್1ಎನ್1 ವೈರಾಣುಗಳ ಕಾರಣ viral pneumonia (ವೈರಸ್ಸುಗಳ ಕಾರಣ ಬಂದ ಜ್ವರ) ಹರಡುತ್ತಿದ್ದು ಇದರ ನಿಗ್ರಹ ಕಷ್ಟಕರವಾಗಿದೆ, ಆದರೆ ಸಾಮಾನ್ಯ ಜ್ವರಕ್ಕೆ ಕಾರಣವಾದ ವೈರಾಣು bacterial pneumonia (ಬ್ಯಾಕ್ಟೀರಿಯಾಗಳಿಂದ ಬಂದ ಜ್ವರ) ಕ್ಕೆ ಕಾರಣವಾಗಿದ್ದು ಇದನ್ನು ಸುಲಭವಾಗಿ ನಿಗ್ರಹಿಸಬಹುದು ಎಂದು ತಿಳಿಸುತ್ತಾರೆ.

ಫೆರೆಟ್ (ಒಂದು ಜಾತಿಯ ಮುಂಗುಸಿ) ಗಳ ಮೇಲಿನ ಪರೀಕ್ಷೆಯಿಂದ ಹೆಚ್1ಎನ್1 ಪತ್ತೆ

ಫೆರೆಟ್ (ಒಂದು ಜಾತಿಯ ಮುಂಗುಸಿ) ಗಳ ಮೇಲಿನ ಪರೀಕ್ಷೆಯಿಂದ ಹೆಚ್1ಎನ್1 ಪತ್ತೆ

ಇಂಗ್ಲೆಂಡಿನಲ್ಲಿ ಕಾಣಬರುವ ಫೆರೆಟ್ ಎಂದು ಕರೆಯಲಾಗುವ ಒಂದು ಜಾತಿಯ ಮುಂಗುಸಿಯ ಮೇಲೆ ಹಲವು ವೈದ್ಯಕೀಯ ಪ್ರಯೋಗಗಳನ್ನು ಮಾಡಲಾಗುತ್ತದೆ. ಏಕೆಂದರೆ ವೈರಸ್ಸುಗಳ ಪ್ರಭಾವ ಮನುಷ್ಯರ ಮೇಲೆ ಯಾವ ಬೀರುತ್ತದೆಯೋ ಹೆಚ್ಚು ಕಡಿಮೆ ಅದೇ ರೀತಿಯ ಪ್ರಭಾವ ಈ ಫೆರೆಟ್ಟುಗಳ ಮೇಲೆಯೂ ಬೀರುತ್ತದೆ. 2009ರಿಂದ ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳು ಹಲವು ಮಾಹಿತಿಗಳನ್ನು ನೀಡಿದ್ದಾರೆ. ಮೊದಲು ಈ ವೈರಸ್ ಫೆರೆಟ್ಟಿನ ಮೂಗಿನ ಮೂಲಕ ದೇಹ ಪ್ರವೇಶಿಸುತ್ತದೆ.

ಸಾಮಾನ್ಯ ಜ್ವರಕ್ಕೂ ಹಂದಿ ಜ್ವರಕ್ಕೂ ವ್ಯತ್ಯಾಸ

ಸಾಮಾನ್ಯ ಜ್ವರಕ್ಕೂ ಹಂದಿ ಜ್ವರಕ್ಕೂ ವ್ಯತ್ಯಾಸ

ಸಾಮಾನ್ಯ ಜ್ವರದ ವೈರಸ್ ಮೂಗಿನಲ್ಲಿ ಶೇಖರವಾಗಿ ಇನ್ನೂ ಮುಂದಕ್ಕೆ ಹೋಗಲು ಅಸಮರ್ಥವಾದರೆ ಹೆಚ್1ಎನ್1 ವೈರಸ್ಸು ಮೂಗಿನಾಳಕ್ಕೆ ಇಳಿದು ಶ್ವಾಸನಳಿಕೆ, ಶ್ವಾಸಕೋಶಗಳನ್ನು ಬಾಧಿಸುತ್ತದೆ. ಬಳಿಕ ರಕ್ತ ಸೇರಿ ರಕ್ತದ ಮೂಲಕ ಕರುಳುಗಳನ್ನು ಸೇರಿದ ಈ ವೈರಸ್ಸು ಬೇಧಿ, ವಾಂತಿಗೂ ಕಾರಣವಾಗುತ್ತದೆ. ಇದು ಸಾಮಾನ್ಯ ಜ್ವರಕ್ಕೂ ಹಂದಿಜ್ವರಕ್ಕೂ ಇರುವ ಪ್ರಮುಖ ವ್ಯತ್ಯಾಸ. ಈ ಲಕ್ಷಣ ಕಂಡು ಬಂದ ಫೆರೆಟ್ ಗಳ ಮೂಲಕ ಇತರ ಫೆರೆಟ್ ಗಳಿಗೂ ಈ ಜ್ವರ ವ್ಯಾಪಿಸಿರುವುದು ಹೆಚ್1ಎನ್1 ವೈರಸ್ಸಿನ ಪ್ರಬಲತೆಯನ್ನು ಸಾಬೀತುಪಡಿಸುತ್ತದೆ.

ಜ್ವರ ಯಾವುದೇ ಇರಲಿ, ವೈದ್ಯರೇ ನಿರ್ಧರಿಸಲಿ

ಜ್ವರ ಯಾವುದೇ ಇರಲಿ, ವೈದ್ಯರೇ ನಿರ್ಧರಿಸಲಿ

ಯಾವುದೇ ಜ್ವರದ ಲಕ್ಷಣ ಕಂಡುಬಂದರೆ ನಿಮಗೆ ನೀವೇ ಅಥವಾ ಅಕ್ಕಪಕ್ಕದವರು ಜ್ವರದ ಲಕ್ಷಣಗಳ ಹೋಲಿಕೆಯ ಮೂಲಕ ನೀಡುವ ಸಲಹೆಗಳನ್ನು ಪಾಲಿಸದೇ ಮೊದಲಾಗಿ ವೈದ್ಯರನ್ನು ಕಂಡು ಪರೀಕ್ಷೆಗೊಳಪಡಿರಿ. ಕೆಲವೊಮ್ಮೆ ಕೇವಲ ಭಯದ ಕಾರಣ ಕೆಲವು ಲಕ್ಷಣಗಳನ್ನು ನಿಮ್ಮ ದೇಹ ಪ್ರಕಟಿಸಿದ್ದು ಅದಕ್ಕೂ ನಿಜವಾದ ಜ್ವರಕ್ಕೂ ಸಂಬಂಧವೇ ಇರುವುದಿಲ್ಲ. (ಉದಾಹರಣೆಗೆ ಜ್ವರದ ಭಯದಿಂದ ಉಂಟಾಗುವ ನಡುಕ). ಆದರೆ ಇವು ಮುಂದೆ ಬರಲಿರುವ ಭಯಾನಕ ಜ್ವರದ ಮುನ್ಸೂಚನೆಯೂ ಆಗಿರಬಹುದು. ಅದರಲ್ಲೂ ಗರ್ಭಿಣಿಯರು ಮತ್ತು ಐದರಿಂದ ಇಪ್ಪತ್ತನಾಲ್ಕು ವರ್ಷದೊಳಗಿರುವ ಯುವಕರಿಗೆ ಹಂದಿ ಜ್ವರ ಬಾಧಿಸುವ ಪ್ರಮೇಯ ಹೆಚ್ಚು. ಸಾಮಾನ್ಯ ಜ್ವರ ವೃದ್ದರಲ್ಲಿ ಮತ್ತು ಐದು ವರ್ಷಕ್ಕೂ ಕಿರಿಯ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಸಮಾಜದ ಎಲ್ಲಾ ಜನರು ಈ ಜ್ವರದ ಬಗ್ಗೆ (ಸಾಮಾನ್ಯವೇ ಇರಲಿ ಹೆಚ್1ಎನ್1 ಇರಲಿ) ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಸಾಮಾನ್ಯ ಮತ್ತು ಹೆಚ್1ಎನ್1 ವೈರಸ್ ಹರಡುವ ಬಗೆ ಒಂದೇ ಆಗಿದೆ

ಸಾಮಾನ್ಯ ಮತ್ತು ಹೆಚ್1ಎನ್1 ವೈರಸ್ ಹರಡುವ ಬಗೆ ಒಂದೇ ಆಗಿದೆ

ರೋಗದ ಲಕ್ಷಣಗಳು ಬೇರೆ ಬೇರೆಯಾಗಿದ್ದರೂ ಈ ಎರಡೂ ಜ್ವರಗಳು ಒಬ್ಬರಿನ್ನೊಂಬ್ಬರಿಗೆ ಒಂದೇ ತೆರನಾಗಿ ಹರಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಸೀನುವುದು, ಕೆಮ್ಮುವುದು, ಕಫ ನಿವಾರಿಸುವುದು ಮೊದಲಾದ ಸಂದರ್ಭಗಳಲ್ಲಿ ಕಡ್ಡಾಯವಾಗಿ ನಿಮ್ಮ ಮುಖವನ್ನು ಬಟ್ಟೆಯಿಂದ ಅಥವಾ ಮುಚ್ಚಿಕೊಳ್ಳಿ. ಮತ್ತು ಈ ಬಟ್ಟೆ ಮತ್ತು ಮಾಸ್ಕ್ ಗಳನ್ನು ಹೆಚ್ಚು ಸಮಯ ಉಪಯೋಗಿಸದೇ ತ್ಯಜಿಸಿ.(ದಾರಿಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಬೇಡಿ, ಸುಟ್ಟುಬಿಡುವುದು ಅತಿ ಉತ್ತಮ ಪರಿಹಾರ). ಸ್ವಚ್ಛತೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಿ. ಕೈತೊಳೆದುಕೊಳ್ಳದೇ ಯಾವುದೇ ಆಹಾರವಸ್ತುಗಳನ್ನು ಮುಟ್ಟಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಜನರು ಮುಟ್ಟುವ ಸ್ಥಳಗಳನ್ನು ಮುಟ್ಟಿದ ಬಳಿಕ ಕಡ್ಡಾಯವಾಗಿ ಕೈ ತೊಳೆದುಕೊಂಡೇ ಮುಂದಿನ ಕಾರ್ಯಗಳನ್ನು ನಡೆಸಿ.

English summary

The Differences Between Seasonal Flu and Swine Flu

Some people already have enough trouble determining if they have a cold or a flu; the symptoms are similar, although the flu's symptoms are a bit more intense. Swine flu patients also report diarrhea and vomiting, not usually present in seasonal flu.
X
Desktop Bottom Promotion