For Quick Alerts
ALLOW NOTIFICATIONS  
For Daily Alerts

ವಾರಾಂತ್ಯದ ಸಲಹೆ- ಶ್ವಾಸಕೋಶದ ಆರೋಗ್ಯಕ್ಕೆ ಸರಳ ಟಿಪ್ಸ್

By Arshad
|

ನಮ್ಮ ದೇಹದ ಅತಿ ಸೂಕ್ಷ್ಮವಾದ ಅಂಗಗಳಲ್ಲಿ ಶ್ವಾಸಕೋಶವೂ ಒಂದು. ಗಾಳಿಯಲ್ಲಿರುವ ಆಮ್ಲಜನಕವನ್ನು ಹೀರಿ ರಕ್ತಕ್ಕೆ ಸೇರಿಸುವುದು ಮತ್ತು ಮಲಿನ ರಕ್ತದಲ್ಲಿ ಬಂದಿದ್ದ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹೊರಬಿಡುವುದು ಇದರ ಮುಖ್ಯ ಕರ್ತವ್ಯ. ಆದರೆ ನಾವು ಉಸಿರಾಡುವ ಗಾಳಿ ಮೊದಲಿನಷ್ಟು ಸ್ವಚ್ಛವಾಗಿಲ್ಲ. ಇನ್ನೂ ಹಲವರು ಕೆಟ್ಟದೆಂದು ಗೊತ್ತಿದ್ದೂ ಧೂಮಪಾನದ ಮೂಲಕ ವಿಷವಸ್ತುಗಳಿರುವ ಹೊಗೆಯನ್ನು ಬಲವಂತವಾಗಿ ಶ್ವಾಸಕೋಶಕ್ಕೆ ತುಂಬಿಸುತ್ತಾರೆ.

ಇವರ ಶ್ವಾಸಕೋಶಗಳನ್ನು ಪರೀಕ್ಷಿಸಿದರೆ ಆರೋಗ್ಯಕರ ಸ್ಥಿತಿಯಿಂದ ಎಷ್ಟೋ ಹಾಳಾಗಿರುವುದು ಕಂಡುಬರುತ್ತದೆ. ಧೂಮಪಾನಿಗಳಲ್ಲದವರೂ ಪರೋಕ್ಷವಾಗಿ ಇತರರು ಬಿಟ್ಟ ಧೂಮವನ್ನು ಸೇವಿಸಿ ತಮ್ಮ ಶ್ವಾಸಕೋಶಗಳನ್ನು ಕೊಂಚ ಮಟ್ಟಿಗೆ ಹಾಳಾಗಿರಬಹುದು. ಅಲ್ಲದೇ ವಾಹನಗಳ ಹೊಗೆ, ಪ್ರದೂಷಣೆ, ಧೂಳು ಮೊದಲಾದವು ತುಂಬಿರುವ ಹವೆಯನ್ನು ಸೇವಿಸುತ್ತಿರುವ ನಾವು ಕೊಂಚಮಟ್ಟಿಗಾದರೂ ಹಾಳುಮಾಡಿಕೊಂಡೇ ಇದ್ದೇವೆ. ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

ಒಳ್ಳೆಯ ಸುದ್ದಿಯೆಂದರೆ ಶ್ವಾಸಕೋಶಕ್ಕೆ ಆದ ಹಾನಿಯನ್ನು ಕಡಿಮೆಗೊಳಿಸಿದರೆ ಹಿಂದಿನ ಆರೋಗ್ಯ ಪಡೆಯಲು ಸಾಧ್ಯ. ಆದರೆ ಇದಕ್ಕಾಗಿ ಧೂಮಪಾನದಂತಹ ಅಭ್ಯಾಸಗಳನ್ನು ತಕ್ಷಣ ಬಿಡಲು ಪಣತೊಡುವುದು ಅಗತ್ಯ. ಹೇಳುವುದು ಸುಲಭವಾದರೂ ಆಚರಣೆ ಕಷ್ಟ ಎಂದು ಧೂಮಪಾನಿಗಳು ಕುಂಟುನೆಪ ತೋರುತ್ತಾರೆ. ಆದರೆ ಮನೋಬಲಕ್ಕಿಂತ ದೊಡ್ಡ ಶಕ್ತಿಯಿಲ್ಲ.

ನಿಮಗೆ ನೀವೇ ಕೆಲವು ನಿಯಂತ್ರಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಖಂಡಿತವಾಗಿಯೂ ಉತ್ತಮ ಆರೋಗ್ಯ ಪಡೆಯಬಹುದು. ನಿಮ್ಮ ಮನೋಬಲಕ್ಕೆ ನೆರವು ನೀಡಬಲ್ಲ ಒಂದು ವಿಧಾನವನ್ನು ಹತ್ತು ಹಂತಗಳಲ್ಲಿ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಇದಕ್ಕಾಗಿ ಸುಮಾರು ಮೂರು ದಿನಗಳ ವಿಶ್ರಾಂತಿಯ ದಿನಗಳು ಬೇಕು. ಕನಿಷ್ಠ ಎರಡು ದಿನಗಳಾದರೂ ಬೇಕೇ ಬೇಕು. ಇದಕ್ಕಾಗಿ ವಾರಾಂತ್ಯದ ದಿನಗಳನ್ನು ಆರಿಸಿಕೊಂಡರೆ ಹೆಚ್ಚು ಕಷ್ಟವಾಗದು.

ಮೊದಲ ಹಂತ

ಮೊದಲ ಹಂತ

ಈ ಮೂರು ದಿನಗಳ ಕಾಲ ಯಾವುದೇ ಹಾಲಿನ ಉತ್ಪನ್ನಗಳನ್ನು ಸೇವಿಸದಿರಿ. ಹಾಲು, ಕಾಫಿ, ಟೀ ಯಾವುದೂ ಬೇಡ. ಇದು ನಿಮ್ಮ ಶ್ವಾಸಕೋಶಗಳನ್ನು ಸ್ವಚ್ಛಗೊಳಿಸಲು ಭದ್ರ ತಳಹದಿ ನೀಡುತ್ತದೆ.

ಎರಡನೆಯ ಹಂತ

ಎರಡನೆಯ ಹಂತ

ಈ ದಿನಗಳ ಹಿಂದಿನ ದಿನ ಮಲಗುವ ಮುನ್ನ ಒಂದು ಕಪ್ ಹಸಿರು ಟೀ (ಗ್ರೀನ್ ಟೀ) ಸೇವಿಸಿ. ಇದರಿಂದ ನಿಮ್ಮ ಕರುಳುಗಳಲ್ಲಿ ಉಳಿದಿದ್ದ ವಿಷಕಾರಿ ವಸ್ತುಗಳು ಸುಲಭವಾಗಿ ನಿವಾರಣೆಯಾಗಲು ನೆರವಾಗುತ್ತದೆ.

ಮೂರನೆಯ ಹಂತ

ಮೂರನೆಯ ಹಂತ

ಬೆಳಗ್ಗೆ ಎದ್ದ ತಕ್ಷಣ ಒಂದು ಲಿಂಬೆಯನ್ನು ತಣ್ಣೀರಿನಲ್ಲಿ ಕದಡಿ ಕುಡಿಯಿರಿ. ಲಿಂಬೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ನಿಮ್ಮ ಶರೀರದಲ್ಲಿರುವ ತ್ಯಾಜ್ಯಗಳನ್ನು ಹೊರಹಾಕಲು ನೆರವಾಗುತ್ತವೆ.

ನಾಲ್ಕನೆಯ ಹಂತ

ನಾಲ್ಕನೆಯ ಹಂತ

ಲಿಂಬೆರಸ ಸೇವಿಸಿದ ಬಳಿಕ ಸುಮಾರು ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ. ನಂತರ ಕೇವಲ ಅನಾನಸ್ ಹಣ್ಣೊಂದರ ತುಂಡುಗಳನ್ನು ಸೇವಿಸಿ. ಕಾಫಿ, ಟೀ, ಮತ್ತೇನನ್ನೂ ಸೇವಿಸಬೇಡಿ. ಹಸಿವು ತಣಿಸಲು ಎರಡು ತುಣುಕು ಗೋಧಿಯ ಬ್ರೆಡ್ ಸೇವಿಸಬಹುದು.

ಐದನೆಯ ಹಂತ

ಐದನೆಯ ಹಂತ

ಬೆಳಗ್ಗಿನ ಉಪಾಹಾರ ಮುಗಿದ ಬಳಿಕ ಒಂದು ದೊಡ್ಡ ಲೋಟ ಕ್ಯಾರೆಟ್ ಜ್ಯೂಸ್ ಕುಡಿಯಿರಿ. ಇದು ನಿಮ್ಮ ರಕ್ತವನ್ನು ಕ್ಷಾರವಾಗಿಸುತ್ತದೆ. (ಕ್ಷಾರ ಆಮ್ಲದೊಡನೆ ಸೇರಿದರೆ ಉಪ್ಪು ಮತ್ತು ನೀರಾಗಿ ಬದಲಾಗುವುದರಿಂದ ಹೊಟ್ಟೆಯಲ್ಲಿನ ಅಮ್ಲಗಳನ್ನು ನಿವಾರಿಸಲು ಇದು ಉಪಯುಕ್ತವಾಗಿದೆ)

 ಆರನೆಯ ಹಂತ

ಆರನೆಯ ಹಂತ

ಬಳಿಕ ಮಧ್ಯಾಹ್ನದವರೆಗೆ ನೀರಿನ ಹೊರತಾಗಿ ಏನನ್ನೂ ಸೇವಿಸಬೇಡಿ. ಅಲ್ಪ ಪ್ರಮಾಣದಲ್ಲಿ ಮಧ್ಯಾಹ್ನದ ಊಟವನ್ನು ಸೇವಿಸಿದ ಬಳಿಕ ಒಂದೆರಡು ದೊಡ್ಡ ಬಾಳೆಹಣ್ಣುಗಳನ್ನು ತಿನ್ನಿ. ಇದರಲ್ಲಿರುವ ಪೊಟ್ಯಾಷಿಯಂ ಶ್ವಾಸಕೋಶದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.

ಏಳನೆಯ ಹಂತ

ಏಳನೆಯ ಹಂತ

ರಾತ್ರಿಯ ಊಟದವರೆಗೂ ನೀರಿನ ಹೊರತಾಗಿ ಮತ್ತೇನನ್ನೂ ಸೇವಿಸಬೇಡಿ. ರಾತ್ರಿ ಊಟದ ಸಮಯಕ್ಕೆ ಒಂದು ದೊಡ್ಡ ಲೋಟ ಕ್ರ್ಯಾನ್ಬೆರಿ ಹಣ್ಣಿನ ರಸವನ್ನು ಸೇವಿಸಿ. ಇದರಿಂದ ಶ್ವಾಸಕೋಶದಲ್ಲಿದ್ದ ಬ್ಯಾಕ್ಟೀರಿಯಾಗಳು ನಿವಾರಣೆಯಾಗಲು ಸಾಧ್ಯವಾಗುತ್ತದೆ.

ಎಂಟನೆಯ ಹಂತ

ಎಂಟನೆಯ ಹಂತ

ಇಡಿಯ ದಿನ ನಿಮಗೆ ಏದುಸಿರು ಬರಲು ನೆರವು ನೀಡುವ, ನಿಮಗೆ ಸೂಕ್ತವೆನಿಸಿದ ಯಾವುದೇ ವ್ಯಾಯಾಮವನ್ನು ಮಾಡಿ. ವೇಗವಾಗಿ ಓಡುವುದು, ನಿಂತಲ್ಲೇ ಜಿಗಿಯುವುದು, ಬಸ್ಕಿ, ದಂಡ ಹೊಡೆಯುವುದು, ಇತ್ಯಾದಿ ಯಾವುದೂ ಸರಿ. ಇದರಿಂದ ಶ್ವಾಸಕೋಶಗಳ ತಳದಲ್ಲಿ ಹುದುಗಿದ್ದ ಕಲ್ಮಶಗಳೆಲ್ಲಾ ಹೊರಬರಲು ಸಾಧ್ಯವಾಗುತ್ತದೆ.

ಒಂಬತ್ತನೆಯ ಹಂತ

ಒಂಬತ್ತನೆಯ ಹಂತ

ಮರುದಿನ ಬೆಳಿಗೆದ್ದ ಬಳಿಕ ಲಿಂಬೆರಸ ಸೇರಿಸಿದ ನೀರನ್ನು ಕುಡಿದು ಒಂದು ಗಂಟೆಯ ಬಳಿಕ ಹಬೆಯ ಸ್ನಾನ ಮಾಡಿ. ಇದರಿಂದ ಮೈಯಿಂದ ಹೊರಬರುವ ಬೆವರು ತನ್ನೊಂದಿಗೆ ದೇಹದ ಕಲ್ಮಶಗಳನ್ನೂ ಹೊರತರುತ್ತದೆ.

ಹತ್ತನೆಯ ಹಂತ

ಹತ್ತನೆಯ ಹಂತ

ಈ ಎರಡು ಅಥವಾ ಮೂರು ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಬಾರಿ ಬಿಸಿನೀರಿನಲ್ಲಿ ಒಂದೆರಡು ಹನಿ ನೀಲಗಿರಿ ಎಣ್ಣೆಯನ್ನು ಸೇರಿಸಿ ಅದರ ಹಬೆಯನ್ನು ಉಸಿರಿನ ಮೂಲಕ ಒಳಗೆಳೆದುಕೊಳ್ಳಿ. ಇದು ಶ್ವಾಸಕೋಶಗಳ ಒಳಗೆ ಪ್ರಚೋದನೆ ನೀಡಿ ಕಲ್ಮಶಗಳು ಹೊರಬರಲು ನೆರವಾಗುತ್ತದೆ.

English summary

The best remedy to clean the lungs Naturally

If you have been smoking since long, it is time you clean your lungs. The best thing to do is to quit the habit once and for all and follow a lung detox routine that helps your lungs recover a bit from the bombarding chemicals that have devastated them since long.
X
Desktop Bottom Promotion