For Quick Alerts
ALLOW NOTIFICATIONS  
For Daily Alerts

ಕಾಫಿ ಪ್ರಿಯರಿಗೆ ಇಲ್ಲಿದೆ ಬೊಂಬಾಟ್ 'ಸಿಹಿ' ಸುದ್ದಿ!

|

ಸಾಮಾನ್ಯವಾಗಿ ರಸಪ್ರಶ್ನೆಯಲ್ಲಿ ಹೀಗೊಂದು ಪ್ರಶ್ನೆ ಕೇಳಲಾಗುತ್ತದೆ. ವಿಶ್ವದ ಎಲ್ಲಾ ಭಾಷೆಯಲ್ಲಿಯೂ ಈ ವಸ್ತುವಿಗೆ ಒಂದೇ ಹೆಸರಿದೆ, ಏನದು? ಉತ್ತರ ಕಾಫಿ ಆದರೆ ಈ ಉತ್ತರ ತಪ್ಪು...! ಏಕೆಂದರೆ ಅರೇಬಿಯಾ ದೇಶಗಳಲ್ಲಿ ಬೆಳೆಯುವ ಕಾಫಿಯಿಂದ ಮಾಡಲಾಗುವ ಕಾಫಿಗೆ ಕಹ್ವಾ (ಅಥವಾ ಗಾವಾ, Al-Qahwa) ಎಂದು ಕರೆಯಲಾಗುತ್ತದೆ. ಅಂತೆಯೇ ಕಾಫಿ ವಿಶ್ವದ ಹೆಚ್ಚು ಜನಪ್ರಿಯ ಪೇಯವಾಗಿದೆ. ಆದರೆ ಕುಡಿಯುವ ಪ್ರಮಾಣವನ್ನು ಗಮನಿಸಿದರೆ ಟೀ ಅತಿ ಹೆಚ್ಚು ಕುಡಿಯಲ್ಪಡುವ ಪೇಯ. ಇದಕ್ಕೆ ಕಾರಣ ಕಾಫಿ ಸೇವನೆ ಆರೋಗ್ಯಕ್ಕೆ ಮಾರಕ ಎಂದು ಹರಡಿಸಿದ ತಪ್ಪು ಮಾಹಿತಿ.

ಅತಿಯಾದರೆ ಅಮೃತವೂ ವಿಷ ಎಂಬ ಸತ್ಯಕ್ಕೆ ಕಾಫಿಯೂ ಹೊರತಲ್ಲ. ಆದರೆ ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ ಕಾಫಿ ನಿಜಕ್ಕೂ ಆರೋಗ್ಯಕ್ಕೆ ಉತ್ತಮ. ಆರೋಗ್ಯಕರ ಅಂಶವುಳ್ಳ ಕೆಫೀನ್ ಜೊತೆ caffeic acid, ferulic acid ಮತ್ತು chlorogenic acid ಎಂಬ ಪೋಷಕಾಂಶಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ನೆರವಾಗುತ್ತವೆ. ಮುಖ್ಯವಾಗಿ ನಮ್ಮ ಚಟುವಟಿಕೆಗಳು ಕುಂಠಿತವಾಗಲು ಕಾರಣವಾಗುವ adrenal fatigue ಎಂಬ ಸುಸ್ತನ್ನು ಹೋಗಲಾಡಿಸಲು ಈ ಪೋಷಕಾಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಸೌಂದರ್ಯ ವೃದ್ಧಿಗೆ ಒಂದು ಚಮಚ ಕಾಫಿ ಪುಡಿ ಸಾಕು!

ಹಾಗಾಗಿ ಕಾಫಿ ಕುಡಿದ ಬಳಿಕ ಹಾಯೆನಿಸುವುದು ಇದೇ ಕಾರಣಕ್ಕಾಗಿ. ಆದರೆ ಈ ಪೋಷಕಾಂಶಗಳನ್ನು ಪಡೆಯಲು ಕಾಫಿ ಬೀಜಗಳನ್ನು ಸರಿಯಾದ ಕ್ರಮದಲ್ಲಿ ಮತ್ತು ತಾಪಮಾನದಲ್ಲಿ ಹುರಿದು ಪುಡಿಮಾಡುವುದೂ ಅಗತ್ಯವಾಗಿದೆ. ಕಾಫಿಯ ಉತ್ತಮ ಅಂಶಗಳಲ್ಲಿ ಪ್ರಮುಖವಾದುದನ್ನು ಇಲ್ಲಿ ಸಂಗ್ರಹಿಸಲಾಗಿದೆ. ಹೊಳಪಿನ ಮೈಗಾಗಿ ಕಾಫಿ ಬಾಡಿ ಸ್ಕ್ರಬ್

ಹೃದಯ ಸ್ತಂಭನದಿಂದ ರಕ್ಷಿಸುತ್ತದೆ

ಹೃದಯ ಸ್ತಂಭನದಿಂದ ರಕ್ಷಿಸುತ್ತದೆ

ಕಾಫಿಯ ಮಿತಪ್ರಮಾಣದ ನಿಯಮಿತ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗಿ ಹೃದಯ ಸ್ತಂಭನವಾಗುವ ಸಂಭವತೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ದಿನಕ್ಕೊಂದು ಕಪ್ ಕಾಫಿ ಮತ್ತು ನಾಲ್ಕು ಕಪ್ ಹಸಿರು ಟೀ ಸೇವನೆಯಿಂದ ಹೃದಯಾಘಾತದ ಸಂಭವತೆ 20% ಕಡಿಮೆಯಾಗಿದೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ.

ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ

ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ

ಕೆಫೀನ್‌ನ ಇನ್ನೊಂದು ಉತ್ತಮ ಗುಣವೆಂದರೆ ಇದರ ಸೇವನೆಯಿಂದ ರಕ್ತದಲ್ಲಿ ಅಡ್ರಿನಲಿನ್ ಎಂಬ ಹಾರ್ಮೋನು ಬಿಡುಗಡೆಯಾಗುವುದು. ನಮ್ಮ ದೈಹಿಕ ಚಟುವಟಿಕೆಗಳಿಗೆ ಈ ಹಾರ್ಮೋನು ಅಗತ್ಯವಾಗಿದೆ. ಕಾಫಿ ಸೇವನೆಯ ಮೂಲಕ ಹೆಚ್ಚಿನ ಅಡ್ರಿನಲಿನ್ ಲಭ್ಯವಾಗುವುದರಿಂದ ನಿಮ್ಮ ಹಲವು ದೈಹಿಕ ಚಟುವಟಿಕೆಗಳು ಚುರುಕಾಗುತ್ತವೆ.

ನರಮಂಡಲ ಚುರುಕುಕೊಳ್ಳುವುದು

ನರಮಂಡಲ ಚುರುಕುಕೊಳ್ಳುವುದು

ನಮ್ಮ ಹೆಚ್ಚಿನ ಎಲ್ಲಾ ಕೆಲಸಗಳಿಗೆ ಸ್ನಾಯುಬಲಕ್ಕಿಂತ ಹೆಚ್ಚಾಗಿ ನಮ್ಮ ನರಮಂಡಲದ ಪ್ರತಿಕ್ರಿಯೆಯೇ ಪ್ರಮುಖ ಕಾರ್ಯ ವಹಿಸುತ್ತದೆ. ಮಿತಪ್ರಮಾಣದಲ್ಲಿ ಕಾಫಿ ಕುಡಿಯುವ ಮೂಲಕ ನರಮಂಡಲ ಚುರುಕಾಗಿ ನಿಮ್ಮ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ಉತ್ತಮಗೊಳ್ಳುತ್ತವೆ.

ಬುದ್ದಿಮಾಂದ್ಯತೆಯಾಗುವುದನ್ನು ತಪ್ಪಿಸುತ್ತದೆ

ಬುದ್ದಿಮಾಂದ್ಯತೆಯಾಗುವುದನ್ನು ತಪ್ಪಿಸುತ್ತದೆ

ಮಿತಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ಬುದ್ಧಿಮಾಂದ್ಯತೆ ಮತ್ತು ಅಲ್ಜೀಮರ್ ಕಾಯಿಲೆ ಬರುವುದನ್ನು ತಪ್ಪಿಸಬಹುದು ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

ವಿವಿಧ ಖನಿಜಗಳ ಆಗರವಾಗಿದೆ

ವಿವಿಧ ಖನಿಜಗಳ ಆಗರವಾಗಿದೆ

ಕಾಫಿಯಲ್ಲಿ ವಿವಿಧ ಖನಿಜಗಳು ಮತ್ತು ಪೋಷಕಾಂಶಗಳಿವೆ, ಇದರಲ್ಲಿ ಪೊಟ್ಯಾಶಿಯಂ, ಮ್ಯಾಂಗನೀಸ್, ಪ್ಯಾಂಟೋಥೆನಿಕ್ ಆಮ್ಲ, ನಿಯಾಸಿನ್, ಮೆಗ್ನೀಶಿಯಂ ಮತ್ತು ರೈಬೋಫ್ಲೇವಿನ್ ಮೊದಲಾದ ಪೋಷಕಾಂಶಗಳು ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಲು ನೆರವಾಗುತ್ತವೆ.

ವ್ಯಾಯಾಮದ ನಂತರ

ವ್ಯಾಯಾಮದ ನಂತರ

ಒಂದು ಅಧ್ಯಯನದ ಪ್ರಕಾರ ವ್ಯಾಯಾಮದ ನಂತರ ಕಾಫಿ ಸೇವಿಸುವುದು ಕೆಟ್ಟದ್ದೇನಲ್ಲ. ಇದರಿಂದ ನೀವು ವ್ಯಾಯಾಮ ಮಾಡಿದ ನಂತರ ಸುಸ್ತಾದ ದೇಹಕ್ಕೆ ಲವಲವಿಕೆಯನ್ನು ನೀಡಬಹುದಂತೆ.

ಕೊಬ್ಬು ಕರಗಿಸಲು

ಕೊಬ್ಬು ಕರಗಿಸಲು

ಶಕ್ತವಾಗಿರುವ ಕಾಫಿ ನಿಮ್ಮ ನಿತ್ಯದ ವ್ಯಾಯಾಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನಿಧಾನವಾಗಿ ಕರಗಿಸಿ ಹೆಚ್ಚು ಹೊತ್ತು ವ್ಯಾಯಾಮ ಮಾಡಲು ಕಾಫಿ ನೆರವಾಗುತ್ತದೆ. ಜೊತೆಗೇ ಇದರಲ್ಲಿರುವ ಕೆಫೀನ್, ಥಿಯೋಬ್ರೋಮಿನ್, ಥಿಯೋಫೈಲಿನ್ ಮತ್ತು ಕ್ಲೋರೋಜೆನಿಕ್ ಆಮ್ಲಗಳು ಜಠರದಲ್ಲಿ ಕರಗಲು ಹೆಚ್ಚು ಕೊಬ್ಬನ್ನು ಬೇಡುವುದರಿಂದ ಕೊಬ್ಬು ಶೀಘ್ರವಾಗಿ ಕರಗುತ್ತದೆ.

ಕೂದಲಿನ ಸೌಂದರ್ಯಕ್ಕೂ ಆರೋಗ್ಯಕಾರಿ

ಕೂದಲಿನ ಸೌಂದರ್ಯಕ್ಕೂ ಆರೋಗ್ಯಕಾರಿ

ಪ್ರತಿ ಹದಿನೈದು ದಿನಕ್ಕೊಮ್ಮೆ ಹಳೆಯ ಕಾಫಿ ಬೀಜಗಳ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತಲೆಯನ್ನು ತೊಳೆದುಕೊಳ್ಳಿ. ಇದರಿಂದ ತಲೆಬುರುಡೆಯ ಚರ್ಮದಲ್ಲಿರುವ ಕೊಳೆ, ಹೊಟ್ಟು ಮತ್ತು ಇತರ ಕಲ್ಮಶಗಳು ನಿವಾರಣೆಯಾಗುತ್ತವೆ.

ಕಪ್ಪು ಕಾಫಿ ಅಥವಾ ಹಾಲಿನ ಕಾಫಿ - ಯಾವುದು ಒಳ್ಳೆಯದು?

ಕಪ್ಪು ಕಾಫಿ ಅಥವಾ ಹಾಲಿನ ಕಾಫಿ - ಯಾವುದು ಒಳ್ಳೆಯದು?

ಈ ಬಗ್ಗೆ ವೈದ್ಯರು ಭಿನ್ನ ಅಭಿಪ್ರಾಯ ಪಡುತ್ತಾರೆ. ತೂಕ ಕಳೆದುಕೊಳ್ಳಲು ಕಪ್ಪು ಕಾಫಿ ಉತ್ತಮವಾದರೆ ನರಮಂಡಲ ಚುರುಕುಗೊಳ್ಳಲು ಹಾಲಿನ ಕಾಫಿ ಉತ್ತಮವಾಗಿದೆ. ಹೊಟ್ಟೆಯಲ್ಲಿ ಆಮ್ಲೀಯತೆ ತೊಂದರೆ ಇದ್ದರೆ ಹಾಲಿನ ಕಾಫಿ ಒಳ್ಳೆಯದು. ಕಾಫಿ ಸೇವನೆ ನಿದ್ದೆಯನ್ನು ಕಡಿಮೆಗೊಳಿಸುವುದರಿಂದ ಮಧ್ಯಾಹ್ನದ ಬಳಿಕ ಕಾಫಿ ಕುಡಿಯದಿರುವುದು ವಾಸಿ.

English summary

Surprising Health Benefits of Coffee

Coffee often gets a bad rap, based on everything ranging from its caffeine content to the stains it leaves on your teeth. But the truth is that the benefits to this beverage far outweigh many of the perceived negatives associated with it. What’s often overlooked is the fact that coffee is so much more than just caffeine. In its original form, it’s a whole food that contains a plethora of beneficial nutrients and antioxidants. 
Story first published: Friday, October 16, 2015, 23:26 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more