For Quick Alerts
ALLOW NOTIFICATIONS  
For Daily Alerts

ಮಾರಕ ಕೊಲೆಸ್ಟ್ರಾಲ್ ಬಗ್ಗೆ ಇರುವ ಅಚ್ಚರಿಯ ಸಂಗತಿಗಳು

By Arshad
|

ಕೊಲೆಸ್ಟ್ರಾಲ್ ಬಗ್ಗೆ ನಾವೆಲ್ಲಾ ಕೆಟ್ಟ ಅಭಿಪ್ರಾಯವನ್ನೇ ಹೊಂದಿದ್ದೇವೆ. ಏಕೆಂದರೆ ಅಕ್ಕಪಕ್ಕದವರ ವೈದ್ಯಕೀಯ ತಪಾಸಣಾ ವಿವರಗಳನ್ನು ನೋಡಿದಾದ ಕೊಲೆಸ್ಟ್ರಾಲ್ ಉಂಟಂತೆ, ಮಾತ್ರೆ ಕೊಟ್ಟಿದ್ದಾರೆ ಎಂಬ ಮಾತುಗಳನ್ನೇ ಕೇಳುತ್ತೇವೆ. ಆದರೆ ವರದಿಯಲ್ಲಿ ಕೊಲೆಸ್ಟ್ರಾಲ್ ಮಟ್ಟ ಇಷ್ಟಿರಬೇಕಿದ್ದುದು ಇದಕ್ಕಿಂತ ಹೆಚ್ಚಾಗಿದೆ ಎಂದೇ ಇರುತ್ತದೆ. ಇದನ್ನು ಸರಿಯಾಗಿ ನೋಡದೇ ನಾವು ಕೊಲೆಸ್ಟ್ರಾಲ್ ಇರುವುದೇ ಕೆಟ್ಟದು ಎಂದು ತಿಳಿದುಕೊಂಡುಬಿಟ್ಟಿದ್ದೇವೆ.

ವಾಸ್ತವವಾಗಿ ಕೊಲೆಸ್ಟ್ರಾಲ್ ಎಂದರೆ ಒಂದು ರೀತಿಯ ಜಿಡ್ಡು. ಕಾರಿಗೆ ಇಂಜಿನ್ ಆಯಿಲ್ ಇದ್ದಾ ಹಾಗೆ ನಮ್ಮ ರಕ್ತದ ಹರಿವಿಗೂ ಕೊಲೆಸ್ಟ್ರಾಲ್ ಅಗತ್ಯವಿದೆ. ಹಾರ್ಮೋನುಗಳು ಸೂಕ್ತ ಪ್ರಮಾಣದಲ್ಲಿ ಸ್ರವಿಸಿ ಎಲ್ಲೆಡೆ ಪಸರಿಸಲೂ ಕೊಲೆಸ್ಟ್ರಾಲ್ ಅಗತ್ಯವಿದೆ. ಆದರೆ ಇದು ಎಷ್ಟು ಅಗತ್ಯವಿದೆ ಎಂಬುವುದರ ಮೇಲೆ ಆರೋಗ್ಯಕರವೋ ಅನಾರೋಗ್ಯಕರವೋ ಎಂದು ತಿಳಿದುಬರುತ್ತದೆ.

ಸರಿಸುಮಾರು ಎಲ್ಲಾ ಆಹಾರಗಳಲ್ಲಿ ಕೊಲೆಸ್ಟ್ರಾಲ್ ಇದೆ. ಎಣ್ಣೆಯಲ್ಲಿ ಇದು ಹೆಚ್ಚಿರುತ್ತದೆ ಅಷ್ಟೇ. ಆದ್ದರಿಂದ ನಮಗೆ ಲಭ್ಯವಾದ ಕೊಲೆಸ್ಟ್ರಾಲ್‌ನಲ್ಲಿ ಸಿಂಹಪಾಲು ಎಣ್ಣೆ, ಕೊಬ್ಬು ಪ್ರೋಟೀನುಗಳಿಂದ ದೊರಕುತ್ತದೆ. ಇದರಲ್ಲೂ ಕೆಟ್ಟ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಇದೆ. HDL-(High density lipoproteins) ಎಂಬುದು ಉತ್ತಮ ಕೊಲೆಸ್ಟ್ರಾಲ್ ಎಂದೂ LDL-(Low density lipoproteins) ಕೆಟ್ಟ ಕೊಲೆಸ್ಟ್ರಾಲ್ ಎಂದೂ ಪರಿಗಣಿಸಲ್ಪಟ್ಟಿದೆ.

Surprising Facts About Cholesterol

ಹೆಸರೇ ಸೂಚಿಸುವಂತೆ ಮೊದಲಿನದು ಹೆಚ್ಚಿನ ಸಾಂದ್ರತೆಯುಳ್ಳದ್ದಾಗಿದ್ದು ಸುಲಭವಾಗಿ ಅಂಟಿಕೊಳ್ಳುವುದಿಲ್ಲ. ಆದರೆ ಎರಡನೆಯದು ಅಂಟಿಕೊಳ್ಳುತ್ತದೆ. ಇದೇ ಇದಕ್ಕೆ ಕೆಟ್ಟದೆಂಬ ಹೆಸರು ಬರಲಿಕ್ಕೆ ಕಾರಣ. ಮಿತಿ ಹೆಚ್ಚಾದರೆ ಈ ಕೊಲೆಸ್ಟ್ರಾಲ್ ನಮ್ಮ ನರನರಗಳ ಒಳಭಾಗದಲ್ಲೆಲ್ಲಾ, ಕವಲೊಡೆದಿರುವಲ್ಲಿ, ತಿರುವುಗಳಿರುವಲ್ಲೆಲ್ಲಾ ಅಂಟಿಕೊಂಡು ರಕ್ತದ ಪರಿಚಲನೆಗೆ ಅಡ್ಡಿಯುಂಟುಮಾಡುತ್ತವೆ. ಇದು ಹೃದಯದೊತ್ತಡಕ್ಕೆ ಮತ್ತು ಸ್ತಂಭನದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುವ 10 ಆಹಾರಗಳು

ಆದ್ದರಿಂದ ಕೊಲೆಸ್ಟ್ರಾಲ್ ಹೆಚ್ಚು ಇರುವ ಆಹಾರಗಳನ್ನು ತ್ಯಜಿಸಿ ಆರೋಗ್ಯಕರ ಆಹಾರಗಳನ್ನು ಸೇವಿಸಲು ಪರಿಣಿತರು ಸಲಹೆ ಮಾಡುತ್ತಾರೆ. ನಾರಿನ ಪ್ರಮಾಣ ಹೆಚ್ಚಿರುವಮ್ ಆಹಾರಗಳು ಇರುವ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಸಹಕಾರಿ. ಕೊಲೆಸ್ಟ್ರಾಲ್ ಬಗ್ಗೆ ಇನ್ನೂ ಹಲವು ಅಚ್ಚರಿಯ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಕೊಲೆಸ್ಟ್ರಾಲ್ ಆಹಾರದಿಂದ ಬರಬೇಕಾಗಿಲ್ಲ, ದೇಹವೇ ಉತ್ಪಾದಿಸಿಕೊಳ್ಳುತ್ತದೆ
ದೇಹಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್ ಅನ್ನು ಆಹಾರದ ಮೂಲಕ ನಾವು ಬಲವಂತವಾಗಿ ದೇಹಕ್ಕೆ ಉಣಿಸುತ್ತಿದ್ದೇವೆಯೇ ವಿನಃ ದೇಹ ಅಗತ್ಯವಿರುವ ಕೊಲೆಸ್ಟ್ರಾಲ್ ಅನ್ನು ತಾನೇ ಉತ್ಪಾದಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಫಲಾಹಾರಿಗಳು ಕೆಲವೇ ದಿನಗಳಲ್ಲಿ ಭಾರೀ ತೊಂದರೆ ಅನುಭವಿಸಬೇಕಾಗಿತ್ತು. ಆದ್ದರಿಂದ ನಿಮ್ಮ ಆಹಾರ ಸಾಧ್ಯವಾದಷ್ಟು ಕೊಲೆಸ್ಟ್ರಾಲ್ ರಹಿತವಾಗಿರಲಿ.

ನಿಮ್ಮ ಕೊಲೆಸ್ಟ್ರಾಲ್ ಅನ್ನು ಹೇಗೆ ಬಳಸಿಕೊಳ್ಳಬೇಕೆಂದು ನಿಮ್ಮ ವಂಶವಾಹಿನಿ ನಿರ್ಧರಿಸುತ್ತದೆ
ಕೊಲೆಸ್ಟ್ರಾಲ್ ಬಳಕೆಯಲ್ಲಿ ಪ್ರತಿಯೊಬ್ಬರ ದೇಹವೂ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಇದನ್ನು ಅವರ ವಂಶವಾಹಿಸಿ ನಿರ್ಧರಿಸುತ್ತದೆ. ಅಂದರೆ ನಿಮ್ಮ ವಂಶವಾಹಿನಿಯಲ್ಲಿ ಕೊಲೆಸ್ಟ್ರಾಲ್ ತೊಂದರೆ ಇದ್ದರೆ ನಿಮಗೂ ಇರುವ ಸಾಧ್ಯತೆ ಹೆಚ್ಚು.

ಕೊಲೆಸ್ಟ್ರಾಲ್ ತೊಂದರೆ ಯಾವುದೇ ವಯಸ್ಸಿನಲ್ಲಿ ಬರಬಹುದು
ಕೊಲೆಸ್ಟ್ರಾಲ್ ತೊಂದರೆಗೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ, ಇದು ಯಾವುದೇ ವಯಸ್ಸಿನಲ್ಲಿ ಬರಬಹುದು. ಎಷ್ಟೋ ಸಂದರ್ಭದಲ್ಲಿ ಮಕ್ಕಳ ರಕ್ತದಲ್ಲಿಯೂ ಅಘಾತಕಾರಿ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಇರುವುದು ಕಂಡುಬಂದಿದೆ. ಇನ್ನೂ ಕೆಲವು ನರಪೇತಲರು ದಪ್ಪನಾಗಬೇಕೆಂದು ಕೇಜಿಗಟ್ಟಲೆ ತಿಂದರೂ ಅವರ ರಕ್ತದಲ್ಲಿ ಕೊಲೆಸ್ಟ್ರಾಲ್ ಶೇಖರವಾಗದೇ ಇರುವುದು ಇನ್ನಷ್ಟು ಅಚ್ಚರಿ ತರಿಸುತ್ತದೆ.

ತೂಕ ಇಳಿಸಿದರೆ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಸಾಧ್ಯ
ಕೊಲೆಸ್ಟ್ರಾಲ್ ದೇಹದಲ್ಲಿ ಸಂಗ್ರಹವಾಗಿದ್ದು ಕಡಿಮೆಗೊಳಿಸಲು ತೂಕ ಕಳೆದುಕೊಳ್ಳುವುದು ಉತ್ತಮ ಮಾರ್ಗವಾಗಿದೆ. ಸ್ಥೂಲಕಾಯಕ್ಕೂ ಕೊಲೆಸ್ಟ್ರಾಲ್ ಪ್ರಮಾಣಕ್ಕೂ ನಿಕಟ ಸಂಬಂಧವಿರುವುದನ್ನು ವೈದ್ಯಕೀಯ ವರದಿಗಳು ಸಾಬೀತುಪಡಿಸುತ್ತವೆ. ಆದ್ದರಿಂದ ಕೊಲೆಸ್ಟ್ರಾಲ್ ಇದೆ ಎಂದು ನಿಮ್ಮ ವೈದ್ಯಕೀಯ ವರದಿ ತಿಳಿಸಿದರೆ ನಿಮ್ಮ ಜಿಹ್ವೆಗೆ ಸಲಾಂ ಹೇಳಿ ತೂಕ ಕಳೆದುಕೊಳ್ಳಲು ಮನಸ್ಸು ಮಾಡಿ.

English summary

Surprising Facts About Cholesterol

Most of us don't know much about the actual the truth about cholesterol. It is nothing but a fatty substance. It is present in every cell of your body and it has certain roles to play. The human body needs it to prepare various substances and hormones too. Now, let us go through some facts about cholesterol. Surprising Facts About Cholesterol
X
Desktop Bottom Promotion