For Quick Alerts
ALLOW NOTIFICATIONS  
For Daily Alerts

ಹುಳಿ ಮಿಶ್ರಿತ ಸಿಹಿ ಹಣ್ಣು ಅನಾನಸ್‌ ನಿಜವಾಗಿಯೂ ಆರೋಗ್ಯಕಾರಿಯೇ?

By Madhumati Hiremath
|

ಹೆಚ್ಚಾಗಿ ಉಷ್ಣವಲಯದ ಹಣ್ಣಾಗಿರುವಂತಹ ಅನಾನಸಿನಲ್ಲಿ ಕಿಣ್ವಗಳು, ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ಇವೆ. ಪ್ರತಿರೋಧಕ ಶಕ್ತಿ ಬಲಗೊಳಿಸುವುದು, ಬಲಿಷ್ಠ ಮೂಳೆಗಳು ಮತ್ತು ಜೀರ್ಣಕ್ರಿಯೆಗೆ ಇದು ನೆರವಾಗುವುದು. ಆದರೆ ಅನಾನಸಿನಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇದೆ. ಇದರ ಬಗ್ಗೆ ಈ ಲೇಖನದಲ್ಲಿ ನಿಮ್ಮೊಂದಿಗೆ ನಾವು ಮಾಹಿತಿಯನ್ನು ವಿವರವಾಗಿ ಹಂಚಿಕೊಳ್ಳಲಿದ್ದೇವೆ.

ಅಲರ್ಜಿ ಪ್ರತಿಕ್ರಿಯೆಗಳು

ಅಲರ್ಜಿ ಪ್ರತಿಕ್ರಿಯೆಗಳು

ಅನಾನಸ್ ತಿನ್ನುವ ಕೆಲವು ಮಹಿಳೆಯರು ಮತ್ತು ಪುರುಷರಲ್ಲಿ ಸೌಮ್ಯ ಅಲರ್ಜಿ ಪ್ರತಿಕ್ರಿಯೆಗಳು ಕಂಡುಬರುತ್ತವೆ. ತುಟಿ ಬಾವು ಮತ್ತು ಗಂಟಲು ಕೆರೆತಗಳಂತಹ ಲಕ್ಷಣಗಳು ಕಂಡುಬರುತ್ತವೆ. ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ, ಶುದ್ಧ ಉಪ್ಪು ನೀರಿನಲ್ಲಿ ಅನಾನಸ್ ಹೋಳುಗಳನ್ನು ಸ್ವಚ್ಛಗೊಳಿಸಿ ನಂತರ ಬಳಸಬೇಕು. ಹೀಗೆ ಮಾಡುವುದರಿಂದ ಹಣ್ಣಿನಲ್ಲಿರುವ ಒರಟು ಪರಿಣಾಮ ಬೀರುವಂತಹ ಕಿಣ್ವಗಳು ನಾಶವಾಗುತ್ತವೆ.

ಗರ್ಭಪಾತದ ಅಪಾಯ

ಗರ್ಭಪಾತದ ಅಪಾಯ

ಸಾಮಾನ್ಯವಾಗಿ ಮಹಿಳೆಯರಲ್ಲಿ ಅನಾನಸ್ ಹಣ್ಣು ತಿಂದರೆ ಗರ್ಭಪಾತವಾಗುವುದೆಂಬ ಭಯವಿದೆ. ಆದ್ದರಿಂದ ಗರ್ಭಿಣಿಯರಿಗೆ ಈ ಹಣ್ಣನ್ನು ತಿನ್ನಬಾರದೆಂದು ಸಲಹೆ ನೀಡಲಾಗುತ್ತದೆ. ಆದರೆ ಮಹಿಳೆಯರು ಗರ್ಭಧಾರಣೆಯ ನಂತರದ ಹಂತಗಳಲ್ಲಿ ಈ ಹಣ್ಣನ್ನು ಸೇವಿಸಬಹುದಾಗಿದೆ.

ಕೀಲು ನೋವು ಹಾಗು ಸಂಧಿವಾತದ ಅಪಾಯ

ಕೀಲು ನೋವು ಹಾಗು ಸಂಧಿವಾತದ ಅಪಾಯ

ನೀವು ತಿಂದ ಅನಾನಸ್ ಹಣ್ಣು ಜೀರ್ಣಾಂಗವ್ಯೂಹ ತಲುಪಿದ ನಂತರ ಮದ್ಯವಾಗಿ ಬದಲಾಗುತ್ತದೆ!. ಪ್ರತಿಯಾಗಿ ಸಂಧಿವಾತ ಹಾಗು ಕೀಲು ನೋವುಗಳನ್ನು ಪ್ರಚೋದಿಸಬಹುದು. ಆದ್ದರಿಂದ, ಸಂಧಿವಾತ ಮತ್ತು ಕೀಲು ನೋವು ಇರುವ ಜನರು ಅನಾನಸ್‌ನ್ನು ಹೆಚ್ಚಾಗಿ ತಿನ್ನದಿರುವುದು ಒಳ್ಳೆಯದು.

ಬ್ಲಡ್ ಶುಗರ್ ಬೂಸ್ಟ್

ಬ್ಲಡ್ ಶುಗರ್ ಬೂಸ್ಟ್

ಅನಾನಸ್, ಸಾಕಷ್ಟು ಹೆಚ್ಚು ನೈಸರ್ಗಿಕ ಸಕ್ಕರೆ ಪ್ರಮಾಣವನ್ನು ಹೊಂದಿರುವ ಹಣ್ಣು. ಇದು ಮೂಲತಃ ಸುಕ್ರೋಸ್ ಮತ್ತು ಫ್ರಕ್ಟೋಸ್ ರೋಪದಲ್ಲಿದ್ದು, ಮಧುಮೇಹಿಗಳಿಗೆ ಅಷ್ಟಾಗಿ ಹಿತಕರವಲ್ಲ. ಇದು ರಕ್ತದ ಇನ್ಸುಲಿನ್ ಮಟ್ಟವನ್ನು ವೃದ್ಧಿಸಬಹುದಾಗಿದೆ. ಆದರೂ ನೀವು ಎಷ್ಟು ಗಾತ್ರದ ಹಣ್ಣು ತಿನ್ನುತ್ತೀರಿ ಹಾಗು ಎಷ್ಟು ಅವಧಿಗೊಮ್ಮೆ ತಿನ್ನುತ್ತೀರಿ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಆದ್ದರಿಂದ ರಕ್ತದ ಸಕ್ಕರೆ ಏರಿಕೆ ತಪ್ಪಿಸಲು ದಿನಕ್ಕೆ 2 ತುಂಡುಗಳನ್ನು ಮಾತ್ರ ತಿನ್ನುವುದು ಒಳಿತು.

ಹಣ್ಣಾಗದ ಅನಾನಸ್ ಹಣ್ಣಿನ ಅಡ್ಡ ಪರಿಣಾಮಗಳು

ಹಣ್ಣಾಗದ ಅನಾನಸ್ ಹಣ್ಣಿನ ಅಡ್ಡ ಪರಿಣಾಮಗಳು

ಇನ್ನೂ ಹಣ್ಣಾಗದ ಅನಾನಸ್ ತಿನ್ನುವುದು ಅಥವಾ ಅದರ ರಸ ಸೇವಿಸುವುದು ಅಪಾಯಕಾರಿ. ಇದು ಸೇವಿಸಿದವರ ಆರೂಗ್ಯಕ್ಕೆ ವಿಷಕಾರಿಯಾಗಿ ಪರಿಣಮಿಸಬಹುದು. ಇದರಿಂದ ತೀವ್ರ ವಾಂತಿಯೂ ಉಂಟಾಗಬಹುದು .

ರಕ್ತವನ್ನು ತಿಳಿಯಾಗಿಸುವ ಔಷಧಗಳೊಂದಿಗೆ ಪ್ರತಿಕ್ರಿಯೆ

ರಕ್ತವನ್ನು ತಿಳಿಯಾಗಿಸುವ ಔಷಧಗಳೊಂದಿಗೆ ಪ್ರತಿಕ್ರಿಯೆ

ರಕ್ತವನ್ನು ತಿಳಿಯಾಗಿಸುವ ಔಷಧಗಳನ್ನು ಸೇವಿಸುವ ಜನರು ಈ ಹಣ್ಣನ್ನು ತಿನ್ನಬಾರದು. ಅಲ್ಲದೆ ಈ ಹಣ್ಣು ರಕ್ತ ಹೆಪ್ಪುಗಟ್ಟುವಿಕೆ ಪ್ರಕ್ರಿಯೆಗೂ ಅಡ್ಡಿಯನ್ನುಂಟುಮಾಡುತ್ತದೆ.

ಬ್ರೋಮಿಲಿಯಾನ್ ಪ್ರತಿಕೂಲ ಪ್ರತಿಕ್ರಿಯೆಗಳು

ಬ್ರೋಮಿಲಿಯಾನ್ ಪ್ರತಿಕೂಲ ಪ್ರತಿಕ್ರಿಯೆಗಳು

ಅನಾನಸ್ ಹಣ್ಣಿನ ಪ್ರಮುಖ ಅಂಶವಾಗಿರುವ ಬ್ರೋಮಿಲಿಯಾನ್, ವಾಸ್ತವವಾಗಿ ಪ್ರೋಟೀನ್ ನನ್ನು ಒಡೆಯುತ್ತವೆ. ಕಾರಣ ಕೆಲವರಲ್ಲಿ ಚರ್ಮದ ಅಸಾಮಾನ್ಯ ತುರಿಕೆ ಹಾಗೂ ಅಲರ್ಜಿಗಳನ್ನು ಪ್ರಚೋದಿಸುತ್ತದೆ.

ದಂತಗಳ ಆರೋಗ್ಯ

ದಂತಗಳ ಆರೋಗ್ಯ

ನಿಮ್ಮ ಕಳಪೆ ಹಲ್ಲಿನ ಆರೋಗ್ಯಕ್ಕೆ ಇದು ಪ್ರಮುಖ ಕಾರಣವಲ್ಲದಿದ್ದರೂ, ಅನಾನಸ್‌ನ ಮಿತಿಮೀರಿದ ಬಳಕೆಯಿಂದ ಹಲ್ಲುಗಳ ಮೇಲೆ ಕಲೆಗಳಾಗಬಹುದು. ಈ ಹಣ್ಣು ದಂತಕವಚದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಹಲ್ಲು ಕುಳಿಗಳು ಮತ್ತು ಪರಿದಂತದ ರೀತಿಯ ಬಾಯಿಯ ಸಮಸ್ಯೆಗಳನ್ನು ಹೊಂದಿರುವವರಿಗೆ ಅನಾನಸ್‌ ಅನ್ನು ತಿನ್ನಲು ನೀಡದಿರುವುದೇ ಲೇಸು.

ಈ ಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದಾಗ್ಯೂ, ಹೆಚ್ಚಾದರೆ ಅಮೃತವೂ ವಿಷವಾಗಬಲ್ಲದು. ಆದ್ದರಿಂದ ಅನಾನಸ್‌ನ ಅಮೃತಮಯ ಫಲಿತಾಂಶವನ್ನು ಪಡೆಯಬೇಕಾದರೆ, ಚನ್ನಾಗಿ ಮಾಗಿದ ಹಣ್ಣನ್ನು ಮಿತವಾಗಿ - ಹಿತವಾಗಿ ಸೇವಿಸಿ.

ಬಾಯಲ್ಲಿ ಒಗರುತನದ ಅನುಭವ

ಬಾಯಲ್ಲಿ ಒಗರುತನದ ಅನುಭವ

ಅನಾನಸ್‌ನಲ್ಲಿ ಹೆಚ್ಚಿನ ಪ್ರಮಾಣದ ಆಮ್ಲತೆ ಇರುವದರಿಂದ ಇದು ಬಾಯಿ ಮತ್ತು ಗಂಟಲಿನಲ್ಲಿ ಜೊಲ್ಲುರಸದ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಅನಾನಸ್ ತಿಂದ ನಂತರ ಗಂಟಲು ಮತ್ತು ಬಾಯಿ ಒಗರಾಗುವ ಸಾಧ್ಯತೆ ಇದೆ. ಕೆಲವು ಜನರಲ್ಲಿ ಹೊಟ್ಟೆ ನೋವಿಗೂ ಕಾರಣವಾಗಬಹುದು.

English summary

Serious Side Effects Of Pineapple

Pineapple can be recognized among various other fruits because of its unique hue, shape and thorny leaves. The vibrant yellow hue of this fruit and its sweet flavour are quite enticing ating in moderation and practicing some cautions are required to evade those adverse effects. Listed below are the 10 side effects of eating pineapple:
X
Desktop Bottom Promotion