For Quick Alerts
ALLOW NOTIFICATIONS  
For Daily Alerts

ಬಾಟಲಿ ನೀರು ನಲ್ಲಿ ನೀರಿಗಿಂತಲೂ ಹೆಚ್ಚು ಅಪಾಯಕಾರಿ!

|

ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಗಳನ್ನು ಬರಮಾಡಿಕೊಳ್ಳಲು ಬಳಸಲಾಗುವ ಕುಡಿಯುವ ನೀರು ಈಗ ಪುಕ್ಕಟೆ ವಸ್ತುವಾಗಿ ಉಳಿದಿಲ್ಲ. ಇದೊಂದು ಭಾರೀ ಆದಾಯ ತರುವ ಸರಕಾಗಿದೆ. ಕುಡಿಯುವ ನೀರನ್ನು ಸರಕಿನಂತೆ ಮಾರಲು ನಿಜವಾದ ಕಾರಣಗಳೇನೆಂದರೆ ಒಂದು ಊರಿನ ನೀರು ಇನ್ನೊಂದು ಊರಿನ ಜನರಿಗೆ ಗಂಟಲಲ್ಲಿ ಸೋಂಕು ಬರಿಸಬಹುದು.

ಇದರಲ್ಲಿರುವ ಕಲ್ಮಶಗಳನ್ನು ನಿವಾರಿಸಿ ಅಗತ್ಯ ಲವಣಗಳನ್ನು ಸೇರಿಸಿ ಶುದ್ಧೀಕರಿಸಿ ಕೊಟ್ಟರೆ ಅದೇ ಈಗ ಅಂಗಡಿಗಳಲ್ಲಿ ಸಿಗುತ್ತಿರುವ ಕುಡಿಯುವ ಬಾಟಲಿ ನೀರು. ಆದರೆ ಈ ನೀರನ್ನು ಕುಡಿಯದಿರಲು ಸಲಹೆ ನೀಡಲು ನೀರನ್ನು ತುಂಬಿಸಿರುವ ಬಾಟಲಿ ಅಥವಾ ಸಂಗ್ರಹಿಸಿದ ವಿಧಾನ ಅಥವಾ ಶುದ್ಧೀಕರಿಸಲು ಉಪಯೋಗಿಸಿದ ವಿಧಾನ, ಗುಣಮಟ್ಟ ಕಾಪಾಡಲು ತೋರುವ ಅಸಡ್ಡೆ ಮೊದಲಾದವು ಕಾರಣವಾಗಿವೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರು ಸುರಕ್ಷಿತವೇ?

ಬಹುತೇಕ ಪಾರದರ್ಶಕ ಪ್ಲಾಸ್ಟಿಕ್ಕಿನಿಂದ ತಯಾರಿಸಿದ ಈ ಬಾಟಲಿಗಳನ್ನು ನಿರ್ಮಿಸುವಾಗ, ಸಂಗ್ರಹಿಸುವಾಗ ಮತ್ತು ನೀರು ತುಂಬಿಸಿದ ಬಳಿಕ ಪಾಲಿಸಬೇಕಾದ ನಿಯಮಗಳ ಪಟ್ಟಿಯೇ ಇದೆ. ಆದರೆ ನಿಮ್ಮ ಕೈಗೆ ಈ ಬಾಟಲಿ ನೀರು ಬಂದಿರುವಾಗ ಎಷ್ಟರ ಮಟ್ಟಿಗೆ ಆ ನಿಯಮಗಳನ್ನು ಪಾಲಿಸಿಯೇ ಬಂದಿದೆ ಎಂದು ಖಡಾಖಂಡಿತವಾಗಿ ಹೇಳಲಾಗುವುದಿಲ್ಲ. ಇದರಲ್ಲಿ ಪ್ರಮುಖವಾದುದು ಈ ಬಾಟಲಿಯ ಮೇಲೆ ಬಿಸಿಲು ಬೀಳಬಾರದು ಎಂಬ ನಿಯಮ. ಬಿಸ್ಲೇರಿ ನೀರಿಗಿಂತ ನಲ್ಲಿ ನೀರು ಸುರಕ್ಷಿತವೇ?

ಆದರೆ ಎಷ್ಟು ಸಂದರ್ಭಗಳಲ್ಲಿ ಈ ಬಾಟಲಿ ಬಿಸಿಲಿಗೆ ಬೀಳದೇ ಇರುತ್ತದೆ? ಇಂದಿಗೂ ಎಷ್ಟೋ ಲಾರಿಗಳು ಇವನ್ನು ತೆರೆದ (ಅಂದರೆ ಬಿಸಿಲಿಗೆ ಒಡ್ಡಿರುವ) ಸ್ಥಿತಿಯಲ್ಲಿಯೇ ಊರಿಂದೂರಿಗೆ ಸಾಗಿಸುತ್ತವೆ. ಸೂರ್ಯನ ಅತಿನೇರಳೆ ಕಿರಣಗಳು ಪ್ಲಾಸ್ಟಿಕ್ಕಿನ ಕೆಲವು ಹಾನಿಕಾರಕ ರಾಸಾಯನಿಕಗಳನ್ನು ಈಗ ನೀರಿಗೆ ಸೇರಿಸುತ್ತದೆ. ಇದು ನಮ್ಮ ಆರೋಗ್ಯಕ್ಕೆ ಮಾರಕವಾಗಿವೆ. ಬೆಚ್ಚಿಬಿದ್ದಿರಾ? ಈ ಬಗ್ಗೆ ಇನ್ನೂ ಹಲವಾರು ಭಯಾನಕ ಸತ್ಯಗಳಿದ್ದು ಅವುಗಳಲ್ಲಿ ಪ್ರಮುಖವಾದ ಅಪಾಯಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ....

ಬಾಟಲಿ ನೀರು ಅಗ್ಗವಲ್ಲ

ಬಾಟಲಿ ನೀರು ಅಗ್ಗವಲ್ಲ

ಇಂದಿಗೂ ಯಾವುದೇ ಮನೆಗೆ ಹೋಗಿ ನೀರು ಕೇಳಿದರೆ ಕೊಡದಿರುವ ಒಂದೇ ಒಂದು ಭಾರತೀಯ ಕುಟುಂಬವಿಲ್ಲ. ಆದರೆ ನೀರು ಕೇಳಲಿಕ್ಕೆ ಮುಜುಗರವಾಗುವ ನಮಗೆ ಸಿದ್ದರೂಪದಲ್ಲಿ ಸಿಗುವ ಬಾಟಲಿ ನೀರೇ ಹೆಚ್ಚು ಪ್ರಿಯ. ಆದರೆ ಇದಕ್ಕೆ ನಾವು ತೆರುತ್ತಿರುವ ಬೆಲೆಯಾದರೂ ಏನು? ಮೂಲಬೆಲೆಗೂ ಮಾರಾಟ ಬೆಲೆಗೂ ತಾಳಮೇಳವೇ ಇಲ್ಲದ ಬೆಲೆ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತದೆ. ಮುಂದೆ ಓದಿ

ಬಾಟಲಿ ನೀರು ಅಗ್ಗವಲ್ಲ

ಬಾಟಲಿ ನೀರು ಅಗ್ಗವಲ್ಲ

ಕೇವಲ ಪೈಸೆಗಳಲ್ಲಿ ಸಿದ್ಧವಾಗುವ ಈ ನೀರಿಗೆ, ಇನ್ನೂ ಕೆಲವು ಪೈಸೆಗಳಲ್ಲಿ ತಯಾರಾಗುವ ಬಾಟಲಿಗೆ ಕೋಟ್ಯಂತರ ರೂಪಾಯಿಯ ಜಾಹೀರಾತು ಹಾಕಿಸಿ ಆ ಖರ್ಚನ್ನೆಲ್ಲಾ ನಿಮ್ಮ ಜೇಬಿಗೆ ವರ್ಗಾಯಿಸುವ ಮೂಲಕ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆಯುವ ಅವಕಾಸ ಇರುವುದರಿಂದಲೇ ದೊಡ್ಡ ದೊಡ್ಡ ಸಂಸ್ಥೆಗಳೂ ಈಗ ನೀರಿನ ಉದ್ಯಮಕ್ಕೆ ಇಳಿದಿವೆ.

ಈ ಬಾಟಲಿಗಳು ಮಾಲಿನ್ಯವನ್ನು ಹೆಚ್ಚಿಸುತ್ತವೆ

ಈ ಬಾಟಲಿಗಳು ಮಾಲಿನ್ಯವನ್ನು ಹೆಚ್ಚಿಸುತ್ತವೆ

ಎಲ್ಲೋ ಕೆಲವರು ಮಾತ್ರ ತಾವು ಕುಡಿದ ನೀರಿನ ಬಾಟಲಿಗಳನ್ನು ಕಸದ ತೊಟ್ಟಿಯಲ್ಲಿಯೇ ಎಸೆದರೂ ಈ ಮನಃಸ್ಥಿತಿಗೆ ಇನ್ನೂ ಬಂದಿರದ ಸುಮಾರು ಒಂದು ಕೋಟಿ ಭಾರತೀಯರು ನೀರು ಕುಡಿದು ಮುಗಿಸಿದ ಸ್ಥಳದಲ್ಲಿಯೇ ಎಸೆದು ಮಾಲಿನ್ಯಕ್ಕೆ ಕಾರಣರಾಗುತ್ತಾರೆ...ಮುಂದೆ ಓದಿ

ಈ ಬಾಟಲಿಗಳು ಮಾಲಿನ್ಯವನ್ನು ಹೆಚ್ಚಿಸುತ್ತವೆ

ಈ ಬಾಟಲಿಗಳು ಮಾಲಿನ್ಯವನ್ನು ಹೆಚ್ಚಿಸುತ್ತವೆ

ಈ ಪ್ಲಾಸ್ಟಿಕ್ ಕೊಳೆಯದೇ, ಕರಗದೇ ಶಾಶ್ವತವಾಗಿ ಉಳಿದು ಪರೋಕ್ಷವಾಗಿ ಹತ್ತು ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಮಳೆನೀರಿನಲ್ಲಿ ತೇಲಿಕೊಂಡು ಹೋಗುತ್ತಾ ಗಟಾರ, ಚರಂಡಿಗಳಲ್ಲಿ ಚಿಕ್ಕದಾದ ತೂತು ಅಥವಾ ಪೈಪು ಇದ್ದಲ್ಲಿ ಸಿಕ್ಕಿಕೊಂಡು ನೀರಿನ ಹರಿವಿಗೆ ಅಡ್ಡಿಮಾಡಿ ರಸ್ತೆಯಲ್ಲೆಲ್ಲಾ ಮಲಿನ ನೀರು ಹರಿಯುವಂತೆ ಮಾಡುತ್ತದೆ.

ಕೆಲವು ಸಂಸ್ಥೆಗಳು ನಲ್ಲಿನೀರನ್ನೇ ತುಂಬಿಸುತ್ತವೆ!

ಕೆಲವು ಸಂಸ್ಥೆಗಳು ನಲ್ಲಿನೀರನ್ನೇ ತುಂಬಿಸುತ್ತವೆ!

ನೀರನ್ನು ಒದಗಿಸುವ ಸಂಸ್ಥೆಗಳು ಇದನ್ನು ಉತ್ಪಾದಿಸುವಾಗ ಕಠಿಣವಾದ ಪರೀಕ್ಷೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅಗತ್ಯ. ಆದರೆ ಖರೀದಿಸುವವರು ಇದನ್ನೇನು ಪರೀಕ್ಷೆ ಮಾಡಿ ಕುಡಿಯುತ್ತಾರೆಯೇ ಎಂಬ ಉಡಾಫೆಯಿಂದ ಕೆಲವು ಸಂಸ್ಥೆಗಳು ನಲ್ಲಿನೀರನ್ನೇ ಸೋಸಿ ಸುಂದರವಾದ ಬಾಟಲಿಗಳಲ್ಲಿ ತುಂಬಿಸಿ ನೀಡುತ್ತವೆ. ಮುಂದೆ ಓದಿ

ಕೆಲವು ಸಂಸ್ಥೆಗಳು ನಲ್ಲಿನೀರನ್ನೇ ತುಂಬಿಸುತ್ತವೆ!

ಕೆಲವು ಸಂಸ್ಥೆಗಳು ನಲ್ಲಿನೀರನ್ನೇ ತುಂಬಿಸುತ್ತವೆ!

ಈ ನೀರು ನೋಡಲು ಅಪ್ಪಟವೆಂದು ಕಂಡು ಬಂದರೂ ಆರೋಗ್ಯಕರ ಎಂದು ಖಡಾಖಂಡಿತವಾಗಿಹೇಳಲಾಗುವುದಿಲ್ಲ.

ಎಲ್ಲಾ ಸಂಸ್ಥೆಗಳು ಗುಣಮಟ್ಟವನ್ನು ಕಾಯ್ದುಕೊಳ್ಳುವುದಿಲ್ಲ

ಎಲ್ಲಾ ಸಂಸ್ಥೆಗಳು ಗುಣಮಟ್ಟವನ್ನು ಕಾಯ್ದುಕೊಳ್ಳುವುದಿಲ್ಲ

ನೀರಿನ ಉತ್ಪಾದನೆಯ ಘಟಕದಲ್ಲಿ ಎಲ್ಲಾ ಕಡೆಗಳಲ್ಲೂ ಗುಣಮಟ್ಟವನ್ನು ಕಾಯ್ದುಕೊಳ್ಳಲೇ ಬೇಕು. ಆದರೆ ಈ ಕೆಲಸದಲ್ಲಿ ಖರ್ಚು ಇರುವುದರಿಂದ ಕೆಲವು ಸಂಸ್ಥೆಗಳು ಆ ಖರ್ಚು ಉಳಿಸಲು ಗುಣಮಟ್ಟದಲ್ಲಿ ಕೊಂಚ ಸಡಿಲ ಬಿಡುತ್ತವೆ. ಇನ್ನು ಕೆಲವು ಕಡೆಗಳಲ್ಲಂತೂ ಬಾವಿಯ, ಬೋರ್ ವೆಲ್‌ನ ನೀರನ್ನೇ ನೇರವಾಗಿ, ಅಂದರೆ ಒಂದೂ ಬಾರಿ ಶೋಧಿಸದೇ ಸುಂದರ ಬಾಟಲಿಗಳಲ್ಲಿ ಪ್ಯಾಕ್ ಮಾಡಿ ಮಾರಾಟಕ್ಕೆ ಇಟ್ಟಿರುವುದನ್ನು ಗಮನಿಸಲಾಗಿದೆ.

ಇದರಲ್ಲಿ ವಿಷಕಾರಿ ರಾಸಾಯನಿಕಗಳಿರಬಹುದು

ಇದರಲ್ಲಿ ವಿಷಕಾರಿ ರಾಸಾಯನಿಕಗಳಿರಬಹುದು

ನೀರಿನ ಬಾಟಲಿ ಸರ್ವಥಾ ನೇರವಾದ ಬಿಸಿಲಿಗೆ ಒಡ್ಡಕೂಡದು. ಏಕೆಂದರೆ ಈ ಪ್ಲಾಸ್ಟಿಕ್ಕಿನ ಬಾಟಲಿ ಬಿಸಿಲಿಗೆ ಒಡ್ಡಿದಾಕ್ಷಣ ಹಲವು ಅಪಾಯಕಾರಿ ರಾಸಾಯನಿಕಗಳು ಬಿಡುಗಡೆಯಾಗಿ ನೀರಿನಲ್ಲಿ ಕರಗುತ್ತವೆ. antimony and bisphenol A- ಅಥವಾ BPA ಎಂಬ ಈ ರಾಸಾಯನಿಕ ಕ್ಯಾನ್ಸರ್, ಹೃದಯ ತೊಂದರೆ, ಮತ್ತು ದೇಹದ ಹಾರ್ಮೋನುಗಳ ಸ್ರಾವದಲ್ಲಿ ಮೂಗು ತೂರಿಸಿ ಏರುಪೇರು ಮಾಡುತ್ತದೆ. ಅಮೇರಿಕಾದಲ್ಲಿ (ಫ್ಲೋರಿಡಾ) ಇದನ್ನು ಈಗಾಗಲೇ ನಿಷೇಧಿಸಲಾಗಿದ್ದು ಗಾಜಿನ ಅಥವಾ ಬೇರೆ ಗುಣಮಟ್ಟದ ಕಚ್ಚವಸ್ತುಗಳನ್ನು ಉಪಯೋಗಿಸಲಾಗುತ್ತಿದೆ.

ಇದರಲ್ಲಿ ವಿಷಕಾರಿ ರಾಸಾಯನಿಕಗಳಿರಬಹುದು

ಇದರಲ್ಲಿ ವಿಷಕಾರಿ ರಾಸಾಯನಿಕಗಳಿರಬಹುದು

ಬೇಸರದ ಸಂಗತಿ ಎಂದರೆ ನಮ್ಮಲ್ಲಿ ಈ ಪರೀಕ್ಷೆಗಳು ನಡೆಯುವುದೇ ಇಲ್ಲ! ಆದ್ದರಿಂದ ನೀರಿನ ಹಲವು ಸಂಸ್ಥೆಗಳು ರಾಜಾರೋಷವಾಗಿ ತೆರೆದ ಟ್ರಕ್ ಗಳಲ್ಲಿ ಸಾವಿರಾರು ನೀರಿನ ಬಾಟಲಿಗಳನ್ನು ಸಾಗಾಟ ಮಾಡುತ್ತಾರೆ. ಅಂಗಡಿಯವರು ಬಿಸಿಲಿನಲ್ಲಿಯೇ ಸಂಗ್ರಹಿಸಿಡುತ್ತಾರೆ. ಯಾರಿಗೂ ಕಾಳಜಿಯೇ ಇಲ್ಲ. ಹೀಗಿದ್ದಾಗ ನೀವು ಈಗತಾನೇ ಫ್ರಿಜ್ಜಿನಿಂದ ಕೊಂಡು ತಂದಿರುವ ತಂಪಾದ ಪಾನೀಯ ಹಿಂದಿನ ದಿನಗಳಲ್ಲಿ ಬಿಸಿಲಿಗೆ ಒಡ್ಡಿಲ್ಲ ಎಂಬ ಯಾವ ಖಾತರಿಯಿದೆ?

ಕೃತಕ ವಿಧಾನದಿಂದ ಶೋಧಿಸಲಾಗಿರುವ ನೀರು ಅಪಾಯಕರವಾಗಿರಬಹುದು

ಕೃತಕ ವಿಧಾನದಿಂದ ಶೋಧಿಸಲಾಗಿರುವ ನೀರು ಅಪಾಯಕರವಾಗಿರಬಹುದು

ನೀರನ್ನು ಶೋಧಿಸಲು ಹಲವು ವಿಧಾನಗಳಿವೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಘಟಕಗಳಿವೆ. ಆದರೆ ಕೆಲವು ಸಂಸ್ಥೆಗಳು ಅತಿದೊಡ್ಡ ಬಂಡವಾಳವನ್ನು ಹಾಕದೇ ಸುಲಭ ವಿಧಾನದಲ್ಲಿ ನೀರನ್ನು ಶೋಧಿಸಲು ಕೃತಕ ಅಥವಾ ಪರ್ಯಾಯ ವಿಧಾನವನ್ನು ಅನುಸರಿಸುತ್ತವೆ. ಉದಾಹರಣೆಗೆ ಕಲ್ಲಿದ್ದಲಿನ ಮೂಲಕ ಶೋಧಿಸಲಾದ ನೀರು...ಮುಂದೆ ಓದಿ

ಕೃತಕ ವಿಧಾನದಿಂದ ಶೋಧಿಸಲಾಗಿರುವ ನೀರು ಅಪಾಯಕರವಾಗಿರಬಹುದು

ಕೃತಕ ವಿಧಾನದಿಂದ ಶೋಧಿಸಲಾಗಿರುವ ನೀರು ಅಪಾಯಕರವಾಗಿರಬಹುದು

ಮೊದಮೊದಲು ಇದರಿಂದ ಅಪ್ಪಟ ನೀರು ದೊರೆತರೂ ಕಲ್ಲಿದ್ದಲು ಹೀರಿಕೊಳ್ಳಬಹುದಾದ ಸಾಮರ್ಥ್ಯ ಮುಗಿದ ಬಳಿಕ ನೀರಿನಿಂದ ಕಲ್ಮಶಗಳನ್ನು ಹೀರುವುದಿರಲಿ, ಹಿಂದೆ ಹೀರಿದ್ದ ಕಲ್ಮಶಗಳನ್ನೇ ಈ ನೀರಿಗೆ ಬಿಟ್ಟುಕೊಡಲೂ ಸಾಕು. ಈ ನೀರು ನಲ್ಲಿನೀರಿಗಿಂತಲೂ ಹೆಚ್ಚು ಅಪಾಯಕಾರಿಯಾಗಿರಬಹುದು. ಅಥವಾ ಇದಕ್ಕೆ ಉಪಯೋಗಿಸಿದ ಇತರ ರಾಸಾಯನಿಕಗಳು ನೀರಿನೊಂದಿಗೆ ಬೆರೆತಿರಬಹುದು.


English summary

Serious Side Effects of Drinking Bottled Water

All the advertisements of bottled water make us believe that it is a healthier option than your tap water but health experts have a different opinion. So, what do they say? Is bottled water bad? Well, there is no straight forward answer as some companies do not follow standards.
Story first published: Friday, July 31, 2015, 14:49 [IST]
X
Desktop Bottom Promotion