For Quick Alerts
ALLOW NOTIFICATIONS  
For Daily Alerts

ಹೊಟ್ಟೆ ತುಂಬಾ ತಿಂದರೂ, ಮತ್ತೆ ಹಸಿವು! ಕಾರಣವೇನು?

By manu
|

ಹಸಿವಾದಾಗ ಯಾವ ಊಟವೂ ರುಚಿಸುತ್ತದಂತೆ. ಅಂತೆಯೇ ಹೆಚ್ಚು ಹಸಿವಾಗಿದ್ದಾಗ ಹೆಚ್ಚು ಪ್ರಮಾಣದಲ್ಲಿ ಊಟ ಮಾಡುವುದು ಸಾಮಾನ್ಯ. ಆದರೆ ಒಮ್ಮೆ ಹೊಟ್ಟೆ ತುಂಬಿದೆ ಎಂಬ ಸೂಚನೆ ಬಂದ ಬಳಿಕ ಇನ್ನೇನನ್ನೂ ತಿನ್ನಲು ಮನ ಬಯಸುವುದಿಲ್ಲ. ಇದು ನಮ್ಮ ದೇಹದ ಒಂದು ರಕ್ಷಣಾ ವ್ಯವಸ್ಥೆಯಾಗಿದೆ. ಊಟ ಮಾಡಿದವರು ಕುತ್ತಿಗೆಯವರೆಗೆ ಊಟ ಮಾಡಿದೆವು ಎಂದು ಹೇಳುವುದು ಅಪ್ಪಟ ಉತ್ಪ್ರೇಕ್ಷೆಯಾಗಿದೆ.

ಏಕೆಂದರೆ ಕುತ್ತಿಗೆಯವರೆಗೆ ಆಹಾರವನ್ನು ತುಂಬಿಸಬೇಕಾದರೆ ಅನ್ನನಾಳದಲ್ಲಿಯೂ ಆಹಾರವನ್ನು ತುಂಬಬೇಕು, ಇದು ಸಾಧ್ಯವೇ ಇಲ್ಲದ ಮಾತು. ಜಠರದಲ್ಲಿ ಆಹಾರ ಸಂಗ್ರಹವಾದಷ್ಟೂ ಜಠರ ಕೊಂಚವಾಗಿ ಹಿಗ್ಗುತ್ತದೆಯೇ ವಿನಃ ಅನ್ನನಾಳಕ್ಕೆ ಬರಬಾರದು. ಆದರೆ ಕೆಲವರಿಗೆ ಊಟ ಮಾಡಿದ ಕೊಂಚ ಹೊತ್ತಿಗೇ ಮತ್ತೆ ಹಸಿವಾದಂತಾಗಿ ಏನನ್ನಾದರೂ ತಿನ್ನಲು ಪ್ರಾರಂಭಿಸುತ್ತಾರೆ. ಒಂದು ವೇಳೆ ಈ ಸ್ಥಿತಿ ಕಂಡುಬಂದರೆ ಅವರ ಜೀರ್ಣವ್ಯವಸ್ಥೆಯಲ್ಲಿ ಏನಾದರೂ ತೊಂದರೆ ಇರಬಹುದು ಎಂದು ತಿಳಿದುಕೊಳ್ಳಬಹುದು. ಪ್ರತಿದಿನವು ಒಪ್ಪೊತ್ತಿನ ಊಟ ತ್ಯಜಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ!

 

ಈ ಸ್ಥಿತಿಗೆ ಪ್ರಮುಖವಾದ ಕಾರಣವೆಂದರೆ ಲಗುಬಗನೇ ಊಟಮಾಡುವುದು. ಇದರಿಂದ ಬಾಯಿಯಲ್ಲಿ ಪೂರ್ಣವಾಗಿ ಆಹಾರ ಜಗಿಯಲ್ಪಡದೇ ಇಡಿಯಿಡಿಯಾಗಿ ಜಠರಕ್ಕೆ ತಲುಪುತ್ತದೆ. ಅಲ್ಲದೇ ಬೇಗ ಬೇಗ ಬಂದ ಆಹಾರ ಬೇಗಬೇಗನೇ ಜೀರ್ಣವಾಗಿ ಹೊಟ್ಟೆ ಇನ್ನಷ್ಟು ಕೊಡಿ ಎಂಬ ಸೂಚನೆ ನೀಡುತ್ತದೆ. ಇನ್ನೊಂದು ಸಾಧ್ಯತೆಯೆಂದರೆ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಆಹಾರವನ್ನು ಸೇವಿಸದೇ ಇರುವುದು. ರಾತ್ರಿ ಊಟ ಮಾಡಿದ ತಕ್ಷಣ ಮಾಡಬಾರದ 10 ಕಾರ್ಯಗಳು!

ನಮ್ಮ ಶರೀರಕ್ಕೆ ಇದು ಕಡಿಮೆ ಎನಿಸಿದರೆ ಪೂರ್ಣ ಆಹಾರ ಜೀರ್ಣಗೊಳ್ಳುವ ಮುನ್ನವೇ ಇನ್ನೊಂದು ಸೂಚನೆ ಕಳಿಸಬಹುದು. ಇದು ಹೆಚ್ಚಿನ ಪ್ರಮಾಣದಲ್ಲಿ ತಿನ್ನಲು ಕಾರಣವಾಗಿರಬಹುದು. ಇದಕ್ಕೂ ಹೊರತಾಗಿ ಏಕಾಗಿ ನಾವು ಊಟದ ಬಳಿಕ ಇನ್ನೂ ಹೆಚ್ಚಿನ ಆಹಾರವನ್ನು ಸೇವಿಸಲು ಬಯಸುತ್ತೇವೆ ಎಂಬ ಕುರಿತ ಕೆಲವು ಕಾರಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.

ಶರೀರದಲ್ಲಿ ನೀರಿನ ಕೊರತೆ

ಶರೀರದಲ್ಲಿ ನೀರಿನ ಕೊರತೆ

ನಿತ್ಯದ ಚಟುವಟಿಕೆ, ಸೆಖೆ ಮತ್ತು ಇತರ ಕಾರಣಗಳಿಂದ ದೇಹದಿಂದ ದ್ರವ ಹೆಚ್ಚಾಗಿ ಹೊರಹೋದರೆ ಮತ್ತು ಅಷ್ಟೇ ಪ್ರಮಾಣದಲ್ಲಿ ನೀರನ್ನು ಸೇವಿಸದೇ ಇದ್ದರೆ ಊಟದ ಬಳಿಕವೂ ಹಸಿವಾಗುವುದು ಖಚಿತ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶರೀರದಲ್ಲಿ ನೀರಿನ ಕೊರತೆ

ಶರೀರದಲ್ಲಿ ನೀರಿನ ಕೊರತೆ

ವಾಸ್ತವವಾಗಿ ಇದು ಬಾಯಾರಿಕೆಯೇ ಆಗಿದ್ದು ಹಸಿವಿನ ರೂಪದಲ್ಲಿ ನಾವು ಅರ್ಥೈಸಿಕೊಳ್ಳುತ್ತೇವೆ. ಈ ಸಮಯದಲ್ಲಿ ಘನ ಆಹಾರದ ಬದಲು ಸಾಕಷ್ಟು ನೀರು ಕುಡಿದರೆ ಹಸಿವು ಮಾಯವಾಗುತ್ತದೆ.

ಊಟದೊಂದಿಗೆ ಬುರುಗು ಬರಿಸುವ ಪಾನೀಯ ಕುಡಿಯುವುದು
 

ಊಟದೊಂದಿಗೆ ಬುರುಗು ಬರಿಸುವ ಪಾನೀಯ ಕುಡಿಯುವುದು

ಕೆಲವರಿಗೆ ಊಟದೊಂದಿಗೆ ಲಘು ಪಾನೀಯಗಳನ್ನು ಸೇವಿಸುವ ಅಭ್ಯಾಸವಿರುತ್ತದೆ. ಇದು ಕೇವಲ ಪ್ರತಿಷ್ಠೆಯ ವಿಷಯವಾಗಿದ್ದು ಆರೋಗ್ಯಕ್ಕೆ ಯಾವುದೇ ನಿಟ್ಟಿನಲ್ಲಿ ಪ್ರಯೋಜನವಿಲ್ಲ. ಏಕೆಂದರೆ ಬುರುಗು ಬರಲು ಬಳಸುವ ಇಂಗಾಲದ ಡೈ ಆಕ್ಸೈಡ್ ನಮಗೆ ಬೇಡವೆಂದೇ ನಾವು ಉಸಿರಿನಿಂದ ಹೊರಗೆ ಹಾಕುತ್ತಿದ್ದು ಬಲವಂತವಾಗಿ ಈಗ ನೀರಿನಲ್ಲಿ ಕರಗಿಸಿ ಕುಡಿಯುತ್ತಿದ್ದೇವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಊಟದೊಂದಿಗೆ ಬುರುಗು ಬರಿಸುವ ಪಾನೀಯ ಕುಡಿಯುವುದು

ಊಟದೊಂದಿಗೆ ಬುರುಗು ಬರಿಸುವ ಪಾನೀಯ ಕುಡಿಯುವುದು

ಇದು ಹೊಟ್ಟೆಯಲ್ಲಿ ಜೀರ್ಣಕ್ರಿಯೆಯನ್ನು ಬಾಧಿಸುತ್ತದೆ. ಊಟದ ಕೊಂಚ ಹೊತ್ತಿನ ಬಳಿಕ ಎಲ್ಲಾ ಗಾಳಿ ಹೊರಗೆ ಹೋದ ಮೇಲೆ ಅಲ್ಲಿದ್ದ ಖಾಲಿಜಾಗವನ್ನು ಆಕ್ರಮಿಸಿಕೊಳ್ಳಲು ಹೊಟ್ಟೆ ಹೆಚ್ಚಿನ ಆಹಾರ ಕಳಿಸಿ ಎಂದು ಸೂಚನೆ ನೀಡುತ್ತದೆ.

ಮನೆಯೂಟಕ್ಕಿಂತಲೂ ಹೊರಗಿನ ಊಟಕ್ಕೇ ಪ್ರಾಶಸ್ತ್ಯ ನೀಡುವುದು

ಮನೆಯೂಟಕ್ಕಿಂತಲೂ ಹೊರಗಿನ ಊಟಕ್ಕೇ ಪ್ರಾಶಸ್ತ್ಯ ನೀಡುವುದು

ಮನೆಯೂಟಕ್ಕೆ ಮತ್ತು ಹೋಟೆಲಿನ ಊಟಕ್ಕೆ ಪ್ರಮುಖ ವ್ಯತ್ಯಾಸವೆಂದರೆ ಮನೆಯೂಟದಲ್ಲಿ ವ್ಯಾಪಾರಿ ಬುದ್ದಿ ಇರುವುದಿಲ್ಲ. ಹೋಟೆಲಿನ ಊಟ ಪಕ್ಕಾ ವ್ಯಾಪಾರಿ ವ್ಯವಹಾರವಾದುದರಿಂದ ಗ್ರಾಹಕರನ್ನು ಸೆಳೆಯಲು ಏನೇನು ಕ್ರಮ ಕೈಗೊಳ್ಳುತ್ತಾರೋ ಅರಿವಿರುವುದಿಲ್ಲ. ಅಗ್ಗ ಎಂಬ ಕಾರಣಕ್ಕೆ ಬಳಸುವ ಅನಾರೋಗ್ಯಕರ ಪಾಮ್ ಅಥವಾ ಡಾಲ್ಡಾ, ನಾಲಿಗೆಯ ರುಚಿ ಹೆಚ್ಚಿಸಿ ಆರೋಗ್ಯವನ್ನು ಕಡಿಮೆಗೊಳಿಸುವ ಅಜಿನೋಮೋಟೋ, ಹೆಚ್ಚು ಕಾಲ ತಾಜಾವಿರಿಸಲು ಬಳಸಲಾಗುವ bisphenol-A ಎಂಬ ಸಂರಕ್ಷಕ ಮೊದಲಾದವು ಹೋಟೆಲಿನ ಆಹಾರವನ್ನು ರುಚಿಕರವಾಗಿಸಿದರೂ ಆರೋಗ್ಯಕರವಾಗಿಸುವುದಿಲ್ಲ.

ಮನೆಯೂಟಕ್ಕಿಂತಲೂ ಹೊರಗಿನ ಊಟಕ್ಕೇ ಪ್ರಾಶಸ್ತ್ಯ ನೀಡುವುದು

ಮನೆಯೂಟಕ್ಕಿಂತಲೂ ಹೊರಗಿನ ಊಟಕ್ಕೇ ಪ್ರಾಶಸ್ತ್ಯ ನೀಡುವುದು

ಈ ಸಂರಕ್ಷಕ ಹೊಟ್ಟೆಯಲ್ಲಿ ಪ್ರಚೋದನೆಯುಂಟುಮಾಡಿ ಲೆಪ್ಟಿನ್ ಎಂಬ ಕಿಣ್ವವನ್ನು ಹೆಚ್ಚು ಸ್ರವಿಸಲು ಕಾರಣವಾಗುತ್ತದೆ. ಇದು ಕೃತಕವಾದ ಸೂಚನೆಯನ್ನು ನೀಡಿ ತಪ್ಪಾದ ಹಸಿವಾಗಿದೆ ಎಂಬ ಸೂಚನೆಯನ್ನು ಮೆದುಳಿಗೆ ನೀಡುತ್ತದೆ.

ಚಹಾ ವಿರಾಮ ತೆಗೆದುಕೊಳ್ಳದೇ ಇರುವುದು

ಚಹಾ ವಿರಾಮ ತೆಗೆದುಕೊಳ್ಳದೇ ಇರುವುದು

ಎರಡು ಊಟಗಳ ನಡುವೆ ಒಂದು ಚಹಾ ವಿರಾಮ ತೆಗೆದುಕೊಳ್ಳುವುದು ಆರೋಗ್ಯಕರ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಬೆಳಿಗ್ಗೆ ಹನ್ನೊಂದು ಮತ್ತು ಸಂಜೆ ನಾಲ್ಕು ಗಂಟೆಯ ವೇಳೆಗೆ ಚಹಾ ಸೇವಿಸುವುದರಿಂದ ಈಗ ತಾನೇ ಖಾಲಿಯಾಗಿದ್ದ ಜಠರಕ್ಕೆ ಕೊಂಚ ಆಹಾರ ದೊರೆತಂದಾಗಿ ಜೀರ್ಣಕ್ರಿಯೆ ಮುಂದುವರೆಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚಹಾ ವಿರಾಮ ತೆಗೆದುಕೊಳ್ಳದೇ ಇರುವುದು

ಚಹಾ ವಿರಾಮ ತೆಗೆದುಕೊಳ್ಳದೇ ಇರುವುದು

ಇಲ್ಲದಿದ್ದರೆ ಖಾಲಿ ಹೊಟ್ಟೆ ಹಾಗೇ ಮುಂದುವರೆದು ಊಟದ ಹೊತ್ತಿನಲ್ಲಿ ಅಗತ್ಯಕ್ಕೂ ಹೆಚ್ಚು ತಿನ್ನಲು ಕಾರಣವಾಗುತ್ತದೆ.

ಬೆಳಗ್ಗಿನ ಉಪಾಹಾರ ಸೇವಿಸದೇ ಇರುವುದು

ಬೆಳಗ್ಗಿನ ಉಪಾಹಾರ ಸೇವಿಸದೇ ಇರುವುದು

ಖಂಡಿತಾ ಗಮನಿಸಿ: ದಿನದ ಮೂರೂ ಹೊತ್ತಿನ ಆಹಾರಗಳಲ್ಲಿ ಅತ್ಯಗತ್ಯವಾದ ಮತ್ತು ತಪ್ಪಿಸಿಕೊಳ್ಳಲೇಬಾರದ ಆಹಾರವೆಂದರೆ ಬೆಳಗ್ಗಿನ ಉಪಾಹಾರ. ಏಕೆಂದರೆ ರಾತ್ರಿಯ ಉಪಾವಾಸದ ಬಳಿಕ ಮೆದುಳಿಗೆ ಹೆಚ್ಚಿನ ರಕ್ತದ ಅವಶ್ಯಕತೆಯಿದ್ದು ಉಪಾಹಾರದಿಂದ ಇದು ಲಭ್ಯವಾಗುತ್ತದೆ.

ಬೆಳಗ್ಗಿನ ಉಪಾಹಾರ ಸೇವಿಸದೇ ಇರುವುದು

ಬೆಳಗ್ಗಿನ ಉಪಾಹಾರ ಸೇವಿಸದೇ ಇರುವುದು

ಇಲ್ಲದಿದ್ದರೆ ಮೆದುಳಿನ ಕ್ಷಮತೆ ಕುಗ್ಗುತ್ತದೆ ಹಾಗೂ ಮಧ್ಯಾಹ್ನದ ಊಟದಲ್ಲಿ ಅಗತ್ಯಕ್ಕಿಂತಲೂ ಭಾರೀ ಪ್ರಮಾಣದಲ್ಲಿ ಹೆಚ್ಚಿನ ಆಹಾರ ಸೇವಿಸಿ ಹಲವಾರು ತೊಂದರೆಗಳನ್ನು ಆಹ್ವಾನಿಸಿದಂತಾಗುತ್ತದೆ.

ಕೆಲವು ಔಷಧಿಗಳ ಅಡ್ಡಪರಿಣಾಮಗಳು

ಕೆಲವು ಔಷಧಿಗಳ ಅಡ್ಡಪರಿಣಾಮಗಳು

ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ ಕೆಲವು ಔಷಧಿಗಳಲ್ಲಿ prednisone ನಂತಹ ಲಘು ಸ್ಟೆರಾಯ್ಡ್ (corticosteroid) ಇದ್ದರೆ ಇದು ಹಸಿವನ್ನು ಹೆಚ್ಚಿಸುವಂತಹ ಅಡ್ಡಪರಿಣಾಮವನ್ನು ಹೊಂದಿರುತ್ತದೆ. ಇದು ಊಟದ ಬಳಿಕವೂ ಇನ್ನೂ ಹೆಚ್ಚು ತಿನ್ನಲು ಪ್ರೇರೇಪಿಸುತ್ತದೆ. ಇದಕ್ಕೆ ವೈದ್ಯಕೀಯ ಸಲಹೆ ಅಗತ್ಯ.

ಅತಿ ಹೆಚ್ಚಿನ ವ್ಯಾಯಮ

ಅತಿ ಹೆಚ್ಚಿನ ವ್ಯಾಯಮ

ಯಾವುದೇ ಕ್ರಿಯೆಯನ್ನು ಅತಿ ಹೆಚ್ಚಾಗಿ ಮಾಡಿದರೆ ಅದರ ಪರಿಣಾಮ ಯಾವತ್ತೂ ಕೆಟ್ಟದ್ದೇ ಆಗಿರುತ್ತದೆ. ಇದು ವ್ಯಾಯಾಮಕ್ಕೂ ಅನ್ವಯಿಸುತ್ತದೆ. ನಿಮ್ಮ ಸಾಮರ್ಥ್ಯ ಮತ್ತು ಅಗತ್ಯಕ್ಕೆ ತಕ್ಕಷ್ಟು ಮಾತ್ರ ವ್ಯಾಯಾಮ ಮಾಡಿದರೆ ಸಾಕು.

ಅತಿ ಹೆಚ್ಚಿನ ವ್ಯಾಯಮ

ಅತಿ ಹೆಚ್ಚಿನ ವ್ಯಾಯಮ

ಬದಲ್ಲಿಗೆ ಹಠಕಟ್ಟಿ ಅತಿಹೆಚ್ಚಿನ ವ್ಯಾಯಾಮ ಮಾಡಿದರೆ ಆ ಮೂಲಕ ವ್ಯಯವಾಗುವ ಕ್ಯಾಲೋರಿಗಳನ್ನು ಮತ್ತೆ ತುಂಬಿಸಿಕೊಳ್ಳಲು ಹಸಿವಿನ ಸೂಚನೆ ನೀಡುವುದು ಶರೀರಕ್ಕೆ ಅನಿವಾರ್ಯವಾಗುತ್ತದೆ. ಆದ್ದರಿಂದ ಅತಿಹೆಚ್ಚಿನ ವ್ಯಾಯಾಮ ಬೇಡ, ಅದರಿಂದ ಪ್ರಯೋಜನವೂ ಇಲ್ಲ.

ಮಾನಸಿಕ ಒತ್ತಡವೂ ಕಾರಣವಾಗಬಹುದು

ಮಾನಸಿಕ ಒತ್ತಡವೂ ಕಾರಣವಾಗಬಹುದು

ಚಿಂತೆಯು ಜೀವಂತ ವ್ಯಕ್ತಿಯನ್ನೇ ಸುಡುತ್ತದೆ ಎಂದು ಗಾದೆಯೇ ಇದೆ. ಮಾನಸಿಕ ಒತ್ತಡದಲ್ಲಿರುವವರು ಸಾಮಾನ್ಯವಾಗಿ ತೂಕವನ್ನು ಕಳೆದುಕೊಳ್ಳುತ್ತಾರೆ, ಏಕೆಂದರೆ ಅವರ ಚಿಂತನೆಗಳು ದೇಹದ ಹಸಿವಿನ ಸೂಚನೆಗಳನ್ನು ಗಮನಿಸದಷ್ಟು ಗಾಢವಾಗಿರುತ್ತವೆ.

ಮಾನಸಿಕ ಒತ್ತಡವೂ ಕಾರಣವಾಗಬಹುದು

ಮಾನಸಿಕ ಒತ್ತಡವೂ ಕಾರಣವಾಗಬಹುದು

ಇನ್ನೊಂದೆಡೆ ಮಾನಸಿಕ ಒತ್ತಡವನ್ನು ತಾಳಲಾರದೇ ಹೆಚ್ಚಿನವರು ಏನನ್ನಾದರೂ ತಿನ್ನುವ ಅಭ್ಯಾಸಕ್ಕೆ ಒಳಗಾಗುತ್ತಾರೆ. ಇಂತಹವರ ತೂಕ ಬೇಗನೇ ಏರುತ್ತದೆ.

ಆಹಾರದ ಪರಿಮಳ ತಾಳಲಿಕ್ಕೆ ಸಾಧ್ಯವಿಲ್ಲದಿರುವುದು

ಆಹಾರದ ಪರಿಮಳ ತಾಳಲಿಕ್ಕೆ ಸಾಧ್ಯವಿಲ್ಲದಿರುವುದು

ಉಪ್ಪಿನಕಾಯಿಯನ್ನು ನೆನೆಸಿಕೊಂಡರೇ ನಾಲಿಗೆಯಲ್ಲಿ ನೀರೂರುವಂತೆ ಕೆಲವು ಆಹಾರಗಳ ಪರಿಮಳವೇ ಆ ಆಹಾರವನ್ನು ತಿನ್ನಲು ಪ್ರಚೋದಿಸುತ್ತದೆ. ಅಂತೆಯೇ ಬೇಕರಿ ಮೊದಲಾದೆಡೆ ಬ್ರೆಡ್ಡಿನ ನವಿರು ಪರಿಮಳ ಯಾವಾಗಲೂ ಗ್ರಾಹಕರಿದ್ದೆಡೆ ಪಸರಿರುವಂತೆ ನೋಡಿಕೊಳ್ಳಲಾಗುತ್ತದೆ. ಈ ಪರಿಮಳ ಊಟವಾದ ಬಳಿಕವೂ ಏನನ್ನಾದರೂ ತಿನ್ನಲು ಪ್ರೇರಣೆ ನೀಡುತ್ತದೆ.

ಮದ್ಯಪಾನ ಆಹಾರಕ್ಕೆ ಆಹ್ವಾನ ನೀಡುತ್ತದೆ

ಮದ್ಯಪಾನ ಆಹಾರಕ್ಕೆ ಆಹ್ವಾನ ನೀಡುತ್ತದೆ

ಮದ್ಯ ಹೊಟ್ಟೆಗೆ ಹೋದಷ್ಟೂ ಹಸಿವು ಹೆಚ್ಚಾಗುತ್ತದೆ. ಮದ್ಯಪಾನವೇ ಆರೋಗ್ಯಕ್ಕೆ ಮಾರಕ, ಮದ್ಯದ ಬಳಿಕ ಆಹಾರ ತಿನ್ನುವುದು ಇನ್ನೂ ಹಾನಿಕಾರಕ. ಕೆಲವರಿಗೆ ಇದು ಹೊಟ್ಟೆ ತೊಳೆಸಿದಂತಾಗಿ ವಾಂತಿಯಾಗುತ್ತದೆ.

ಮದ್ಯಪಾನ ಆಹಾರಕ್ಕೆ ಆಹ್ವಾನ ನೀಡುತ್ತದೆ

ಮದ್ಯಪಾನ ಆಹಾರಕ್ಕೆ ಆಹ್ವಾನ ನೀಡುತ್ತದೆ

ಅದರಲ್ಲೂ ಅತಿ ಹೆಚ್ಚಾಗಿ ಮದ್ಯಪಾನ ಸೇವಿಸಿದವರು ಹೊಟ್ಟೆ ತುಂಬಿದ್ದರೂ ಇನ್ನೇನಾದರೂ ತಿನ್ನಲು ಕಾತುರರಾಗಿರುತ್ತಾರೆ. ಆರೋಗ್ಯ ಬೇಕೇ, ಮದ್ಯಪಾನದಿಂದ ಹೊರಬನ್ನಿ, ಉತ್ತಮ ಆಹಾರ ಸೇವಿಸಿ ಆರೋಗ್ಯವಂತರಾಗಿ.

English summary

Reasons Why You Feel Hungry After Eating Healthy!

It is human tendency to stuff our faces galore when we are hungry. Some of us even gulp food right after a healthy meal. This consistent habit of eating again after a healthy meal is not good. Experts state that if you feel hungry right after eating a good meal, there must be something wrong with your digestive system. here are some of the reasons we think why you feel hungry after eating healthy, take a look:
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more