For Quick Alerts
ALLOW NOTIFICATIONS  
For Daily Alerts

ಸಮೃದ್ಧ ಪೋಷಕಾಂಶಗಳ ಆಗರ-ಬಹುಪಯೋಗಿ 'ಅಣಬೆ'

By Super
|

ಪ್ರಕೃತಿದತ್ತವಾಗಿ ಸಿಗುವಂತಹ ಕೆಲವೊಂದು ಆಹಾರಗಳಲ್ಲಿ ಸಹಜವಾಗಿಯೇ ಮನುಷ್ಯನಿಗೆ ಬೇಕಾಗಿರುವಂತಹ ಪೌಷ್ಠಿಕಾಂಶಗಳಿರುತ್ತದೆ. ಅಂತಹ ಆಹಾರಗಳಲ್ಲಿ ಅಣಬೆ ಕೂಡ ಒಂದು. ಇಂದಿನ ದಿನಗಳಲ್ಲಿ ಅಣಬೆಯನ್ನು ಅದರ ಬೇಡಿಕೆಗೆ ಅನುಗುಣವಾಗಿ ಕೃತಕವಾಗಿ ಬೆಳೆಯಲಾಗುತ್ತಿದೆ. ಅಣಬೆ ಇಂದು ಜನಪ್ರಿಯ ಆಹಾರವಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಅಣಬೆಯಲ್ಲಿ ವಿವಿಧ ರೀತಿಯ ಪ್ರಮುಖ ಪೌಷ್ಠಿಕಾಂಶಗಳು ಮತ್ತು ನಾರಿನಾಂಶವು ಅದ್ಭುತವಾಗಿದ್ದು, ಇದನ್ನು ಶತಮಾನಗಳಿಂದಲೂ ಔಷಧಿಗಾಗಿ ಬಳಸಲಾಗುತ್ತಿದ್ದು. ಇದರಲ್ಲಿರುವ ನಾರಿನಾಂಶವು ದೈನಂದಿನ ಆಹಾರಕ್ರಮಕ್ಕೆ ಮಹತ್ವದ್ದಾಗಿದೆ. ಇತರ ಯಾವುದೇ ಆಹಾರದಲ್ಲಿ ಇರದಂತಹ ಖನಿಜಾಂಶಗಳು ಮತ್ತು ವಿಟಮಿನ್‌ಗಳು ಅಣಬೆಯಲ್ಲಿರುವುದು ಇದರ ಹೆಗ್ಗಳಿಕೆ. ಮಶ್ರೂಮ್ ನಲ್ಲಿದೆ ಮಹತ್ವದ ಉಪಯೋಗ

ಅಣಬೆಯಲ್ಲಿ ವಿಟಮಿನ್ ಬಿ, ಡಿ, ಪೊಟಾಶಿಯಂ, ಸತು, ಕಬ್ಬಿಣ ಮತ್ತು ಸೆಲೆನಿಯಂ ಎನ್ನುವ ಖನಿಜಾಂಶವಿದೆ. ನಮ್ಮ ದೇಹದಲ್ಲಿನ ಸ್ನಾಯುಗಳ ಚಲನೆ, ಕಲಿಕೆ ಮತ್ತು ಜ್ಞಾನಶಕ್ತಿಗೆ ಅತೀ ಅಗತ್ಯವಿರುವ ಚೊಲೈನ್ ಎನ್ನುವ ಪೌಷ್ಠಿಕಾಂಶವು ಅಣಬೆಯಲ್ಲಿದೆ. ಅತ್ಯಂತ ರುಚಿಕರವಾಗಿರುವ ಅಣಬೆಯು ಕೇವಲ ಆರೋಗ್ಯಕರವಲ್ಲದೆ ಹಲವಾರು ರೀತಿಯ ರೋಗಗಳ ನಿವಾರಣೆಗೆ ಇದು ನೆರವಾಗುತ್ತದೆ. ಇದರ ಬಗ್ಗೆ ತಿಳಿಯಲು ಮುಂದೆ ಓದಿ. ಅಣಬೆಯಲ್ಲಿದೆ ಸ್ತನ ಕ್ಯಾನ್ಸರ್ ತಡೆಯುವ ಶಕ್ತಿ

ಉತ್ಕರ್ಷಣ ನಿರೋಧಕದಿಂದ ಸಮೃದ್ಧ

ಉತ್ಕರ್ಷಣ ನಿರೋಧಕದಿಂದ ಸಮೃದ್ಧ

ಅಣಬೆಯಲ್ಲಿ ಉತ್ಕರ್ಷಣ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳು ಸಮೃದ್ಧವಾಗಿದೆ. ಇದರಲ್ಲಿ ಇರ್ಗೊಥಿಯೊನೈನೆ ಎನ್ನುವ ಉತ್ಕರ್ಷಣ ನಿರೋಧಕ ಅಂಶವಿದ್ದು, ಉತ್ಕರ್ಷಣ ನಿರೋಧಕವು ವಯಸ್ಸಾಗುವುದನ್ನು ತಡೆಯಲು, ಉರಿಯೂತ ಮತ್ತು ತೂಕ ಕಳಕೊಳ್ಳಲು ಪ್ರಮುಖಪಾತ್ರ ವಹಿಸುತ್ತದೆ.

ಪ್ರತಿರೋಧಕ ಶಕ್ತಿ ಬಲಪಡಿಸುತ್ತದೆ

ಪ್ರತಿರೋಧಕ ಶಕ್ತಿ ಬಲಪಡಿಸುತ್ತದೆ

ಇದರಲ್ಲಿನ ಉತ್ಕರ್ಷಣ ನಿರೋಧಕ ಅಂಶವು ದೇಹದಲ್ಲಿನ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸಿ ಜ್ವರ, ಶೀತ, ನೆಗಡಿಯಂತಹ ಸಣ್ಣ ರೋಗಗಳನ್ನು ದೂರವಿಡುತ್ತದೆ. ಅಣಬೆಯಲ್ಲಿ ಸೆಲೆನಿಯಂ ಪ್ರತಿರೋಧಕ ಪ್ರಕ್ರಿಯೆ ಉತ್ತಮಪಡಿಸಿ ಟಿ ಕೋಶಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ವಿಟಮಿನ್ ಡಿಯಿಂದ ಸಮೃದ್ಧ

ವಿಟಮಿನ್ ಡಿಯಿಂದ ಸಮೃದ್ಧ

ಅಣಬೆಗಳು ಸೂರ್ಯನ ಬೆಳಕಿನಿಂದ ನೈಸರ್ಗಿಕವಾಗಿ ವಿಟಮಿನ್ ಡಿಯನ್ನು ಪಡೆಯುತ್ತದೆ. ಅಣಬೆಯಲ್ಲಿರುವ ವಿಟಮಿನ್ ಡಿಯಿಂದ ಎಲುಬಿನ ಆರೋಗ್ಯ ಉತ್ತಮವಾಗುತ್ತದೆ. ದೇಹಕ್ಕೆ ಒಂದು ದಿನಕ್ಕೆ ಬೇಕಾಗಿರುವ ಶೇ.20ರಷ್ಟು ವಿಟಮಿನ್ ಡಿ ಅಣಬೆಯಲ್ಲಿದೆ.

ರಕ್ತದ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ

ರಕ್ತದ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ

ಅಣಬೆಯಲ್ಲಿ ಕಾರ್ಬೋಹೈಡ್ರೇಟ್ಸ್ ಮಟ್ಟವು ತುಂಬಾ ಕಡಿಮೆಯಾಗಿರುವ ಕಾರಣ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅಧ್ಯಯನಗಳ ಪ್ರಕಾರ ಅಣಬೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ದೇಹದ ತೂಕ ನಿಯಂತ್ರಣಕ್ಕೆ

ದೇಹದ ತೂಕ ನಿಯಂತ್ರಣಕ್ಕೆ

ಅಣಬೆಯಲ್ಲಿ ತುಂಬಾ ಕಡಿಮೆ ಕೊಲೆಸ್ಟ್ರಾಲ್ ಹಾಗೂ ಕೊಬ್ಬು ರಹಿತವಾಗಿರುವುದರಿಂದ ಇದು ದೇಹದ ತೂಕ ಕಡಿಮೆ ಮಾಡಲು ಪ್ರಮುಖ ಆಹಾರವಾಗಿದೆ. ಅಣಬೆಯು ಹಸಿವಿಗೆ ತೃಪ್ತಿಯಾಗುವಂತೆ ಮಾಡಿ ಕಡಿಮೆ ತಿನ್ನುವಂತೆ ಮಾಡುತ್ತದೆ.

ಚರ್ಮ ಮತ್ತು ಕೂದಲಿಗೆ ಒಳ್ಳೆಯದು

ಚರ್ಮ ಮತ್ತು ಕೂದಲಿಗೆ ಒಳ್ಳೆಯದು

ನಿಮ್ಮ ಆಹಾರ ಕ್ರಮದಲ್ಲಿ ಅಣಬೆಯನ್ನು ಸೇರಿಸುವುದರಿಂದ ಮೊಡವೆಗಳ ತೊಂದರೆಯಿಂದ ಪಾರಾಗಬಹುದು. ಅಲ್ಲದೆ ಇದರಲ್ಲಿರುವ ಹಲವಾರು ರೀತಿಯ ಅಂಶಗಳನ್ನು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ.ಅಣಬೆಯಲ್ಲಿರುವ ಸೆಲೆನಿಯಂ ಎನ್ನುವ ಖನಿಜಾಂಶವು ತಲೆಹೊಟ್ಟು ಬರದಂತೆ ತಡೆದು ಕೂದಲು ಉದುರುವಿಕೆಯನ್ನು ನಿಲ್ಲಿಸುತ್ತದೆ.

English summary

Reasons To Eat Mushrooms

Mushroom has immense amounts of essential nutrients. It is also an excellent source of fiber. Mushrooms have been used as a medicine from times immemorial. It is a low calorie food. Mushrooms contribute to the daily intake of fiber. It also has plenty of minerals and vitamins which cannot be obtained from any other foods.
Story first published: Saturday, August 29, 2015, 18:23 [IST]
X
Desktop Bottom Promotion