For Quick Alerts
ALLOW NOTIFICATIONS  
For Daily Alerts

ಸುಡು ಬಿಸಿಲಿಗೆ ಕಾಡುವ ಒಣ ಕೆಮ್ಮಿಗೆ ಕಾರಣ ತಿಳಿದುಕೊಳ್ಳಿ

|

ಬೇಸಿಗೆ ಸುಡುತ್ತಲಿದೆ. ಈ ಕಾಲದಲ್ಲಿ ನಾವು ಕರೆಯದಿದ್ದರು ಕಾಯಿಲೆಗಳು ನಮ್ಮ ಮನೆಯೊಳಗೆ ನುಗ್ಗಿ, ನಮ್ಮಲ್ಲಿಯು ನೆಲೆಗೊಂಡು ಬಿಡುತ್ತದೆ. ಅದರಲ್ಲಿಯೂ ಈ ಅವಧಿಯಲ್ಲಿ ಒಣ ಹವೆಯಿಂದಾಗಿ ನಮಗೆ ಶ್ವಾಸಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಪ್ರಮುಖ ಕಾರಣಗಳು ನಾವು ಬೇಸಿಗೆಯಲ್ಲಿ ಹಲವಾರು ಅಲರ್ಜಿಗಳಿಗೆ ಗುರಿಯಾಗುತ್ತೇವೆ. ಪ್ರಾಣ ಹಿಂಡುವ ಕೆಮ್ಮಿಗೆ ರಾಮಬಾಣವಾಗಿರುವ 10 ಸಿದ್ಧೌಷಧಗಳು

ಇದರ ಜೊತೆಗೆ, ಕೆಲವೊಂದು ಅಭ್ಯಾಸಗಳು ಮತ್ತು ರಾಸಾಯನಿಕಗಳು ಸಹ ಕೆಮ್ಮಿಗೆ ಕಾರಣವಾಗುತ್ತ ಇರುತ್ತವೆ. ನಮ್ಮಲ್ಲಿ ಬಹುತೇಕ ಮಂದಿ ಈ ಅವಧಿಯಲ್ಲಿ ಸನ್‍ಸ್ಕ್ರೀನ್ ಲೋಷನ್ ಕ್ರೀಮ್‌ಗಳನ್ನು ಸಿದ್ಧಪಡಿಸಿಕೊಂಡು ಇರುತ್ತಾರೆ. ಆರೋಗ್ಯ ತಜ್ಞರ ಪ್ರಕಾರ ಬೇಸಿಗೆಯ ತಿಂಗಳುಗಳಲ್ಲಿ, ಒಣ ಕೆಮ್ಮು ಅಧಿಕವಾಗಿ ಕಾಡುತ್ತದೆಯಂತೆ.

ಈ ಅವಧಿಯಲ್ಲಿ ನೀವು ಈಜಾಡಲು ಹೋದರೆ, ಮನೆಗೆ ಬಂದ ತಕ್ಷಣ ಕೈಗಳನ್ನು ತೊಳೆದುಕೊಂಡು ಬನ್ನಿ. ಇದರಿಂದ ಕೀಟಾಣುಗಳು ಮತ್ತಷ್ಟು ಹರಡುವುದನ್ನು ತಪ್ಪಿಸಬಹುದು. ಜೊತೆಗೆ ಇತರರ ಜೊತೆಗೆ ಪಾನೀಯಗಳನ್ನು ಹಂಚಿಕೊಳ್ಳಬೇಡಿ. ಬನ್ನಿ ಈ ಬೇಸಿಗೆಯಲ್ಲಿ ಕೆಮ್ಮು ಬರಲು ಇರುವ ಕಾರಣಗಳ ಕುರಿತು ತಿಳಿದುಕೊಳ್ಳೋಣ.

ಅಲರ್ಜಿ

ಅಲರ್ಜಿ

ಅಲರ್ಜಿಯು ಕೆಮ್ಮು, ಸೀನು ಮತ್ತು ಮೂಗು ಕಟ್ಟುವಿಕೆಯನ್ನು ಉಂಟು ಮಾಡುತ್ತದೆ. ಬೇಸಿಗೆಯಲ್ಲಿ ಒಣ ಹವೆಯಿಂದಾಗಿ ಕೆಮ್ಮು ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಪರಾಗ ರೇಣುಗಳ ಅಲರ್ಜಿ ಇರುವವರಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಿರುತ್ತದೆ.

ಆಸಿಡ್ ರಿಫ್ಲಕ್ಸ್

ಆಸಿಡ್ ರಿಫ್ಲಕ್ಸ್

ಬೇಸಿಗೆ ಕಾಲದಲ್ಲಿ ಆಲ್ಕೋಹಾಲ್‍ನಿಂದ ದೂರವಿರುವುದು ಒಳ್ಳೆಯದು. ಇದು ಈ ಅವಧಿಯಲ್ಲಿ ನಮ್ಮ ದೇಹದಲ್ಲಿ ಆಸಿಡ್ ರಿಫ್ಲಕ್ಸ್ ಉಂಟು ಮಾಡುತ್ತದೆ. ನಿಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳಲು ನೀರನ್ನು ಕುಡಿಯಿರಿ.

ಮಾಲಿನ್ಯ

ಮಾಲಿನ್ಯ

ಮಾಲಿನ್ಯದಿಂದ ನಮಗೆ ಒಣ ಕೆಮ್ಮು ಬರುತ್ತದೆ ಎಂದು ಬಹುತೇಕರು ಅರ್ಥ ಮಾಡಿಕೊಳ್ಳುವುದಿಲ್ಲ. ನೀವು ದ್ವಿಚಕ್ರ ವಾಹನದಲ್ಲಿ ಸಾಗುವಾಗ, ಮಾಲಿನ್ಯಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ಟ್ರಾಫಿಕ್‌ನಲ್ಲಿ ನಿಂತಾಗ, ಬಸ್ಸಿನಲ್ಲಿ ಬರುವಾಗ ಹೀಗೆ ಮಾಲಿನ್ಯವು ಸರ್ವಂತರ್ಯಾಮಿಯಾಗಿ ನಿಮ್ಮನ್ನು ಕಾಡುತ್ತದೆ. ಇಂತಹ ಮಾಲಿನ್ಯಯುತವಾದ ಗಾಳಿಯನ್ನು ಸೇವಿಸದೆ ಇರಲು ಮಾಸ್ಕ್ ಧರಿಸಲು ಮರೆಯಬೇಡಿ.

ಶೀತ

ಶೀತ

ನಿಮ್ಮ ಕೈಗಳನ್ನು ಹೊರಗಿನಿಂದ ಮನೆಗೆ ಬಂದ ಕೂಡಲೆ ತೊಳೆಯಿರಿ. ಶೀತಕ್ಕೆ ಬೇಸಿಗೆಯಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಈ ಅವಧಿಯಲ್ಲಿ ನೆಗಡಿ ಬಂದರೆ, ಅದರ ಹಿಂದೆ ಒಣ ಕೆಮ್ಮು ಬರುತ್ತದೆ. ಇದಕ್ಕಾಗಿ ನೀವು ಇನ್‍ಫೆಕ್ಷನ್‍ನಿಂದ ದೂರ ಇರುವ ಪ್ರಯತ್ನ ಮಾಡಿ.

ಸೈನಸೈಟಿಸ್

ಸೈನಸೈಟಿಸ್

ಒಂದು ವೇಳೆ ನೀವು ಸೈನಸೈಟಿಸ್‌ನಿಂದ ಬಳಲುತ್ತಿದ್ದಲ್ಲಿ, ಬೇಸಿಗೆಯಲ್ಲಿ ನಿಮಗೆ ತಲೆನೋವು ಕಾಡಬಹುದು. ಅದಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ. ಅಗತ್ಯಬಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ.

English summary

Reasons For Dry Cough In Summer

Summer season can expose you to certain minor health issues. Most of us are not aware of the fact that respiratory issues are more prevalent in the dry season. The reason for this could be exposure to certain types of allergens that are prevalent in the dry summer air. Now, let us discuss about certain reasons for cough in summer.
Story first published: Tuesday, April 28, 2015, 19:33 [IST]
X
Desktop Bottom Promotion