For Quick Alerts
ALLOW NOTIFICATIONS  
For Daily Alerts

ಲೋಳೆಸರ ಎಂಬ ಬಹುಮೂಲ್ಯ ಸಸ್ಯ ಸಂಜೀವಿನಿ

By CM.Prasad
|

ಅಲೋವೆರಾ ಅಥವಾ ಲೋಳೆಸರವು ವಿಶಿಷ್ಟ ಹಾಗೂ ವಿಶೇಷ ಗುಣಗಳನ್ನು ಹೊಂದಿದ್ದು, ಇದರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಶಿಷ್ಟ ಸಂಗತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಅಲೋವೆರಾದ ಪ್ರಯೋಜನದ ಬಗ್ಗೆ ಈಗಾಗಲೇ ಸಾಕಷ್ಟು ಜನರಿಗೆ ತಿಳಿದಿದೆ. ಆದರೂ ಸಹ ಕೆಲವರಿಗೆ ಇದರ ಬಗ್ಗೆ ಹೆಚ್ಚಾಗಿ ಅರಿವಿಲ್ಲ. ಹೌದು, ಪ್ರತಿದಿನ ನಿಯಮಿತವಾಗಿ ಅಲೋವೆರಾ ಸೇವಿಸಿದಲ್ಲಿ ನಿಮ್ಮ ಆರೋಗ್ಯಕ್ಕೆ ನಾನಾ ರೀತಿಯ ಪ್ರಯೋಜನವಾಗಲಿದೆ. ಅಲೋವೆರಾ ರಸದಲ್ಲಿ ಪೌಷ್ಠಿಕಾಂಶಗಳು ಸಮತೋಲನದಿಂದ ಕೂಡಿದ್ದು, ಚರ್ಮ ರೋಗದ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಲಿದೆ.

ಇದರಲ್ಲಿರುವ ಎ, ಸಿ, ಡಿ ಮತ್ತು ಇ ವಿಟಮಿನ್ ಗಳು ಯಥೇಚ್ಛವಾಗಿದೆ. ಫೋಲಿಕ್ ಆಸಿಡ್ ಮತ್ತು ನಿಯಾಸಿನ್ ಅಂಶವೂ ಇದರಲ್ಲಿದೆ. ತಾಮ್ರ, ಮೆಗ್ನೀಷಿಯಂ, ಕ್ಯಾಲ್ಸಿಯಂ, ಪೊಟಾಷಿಯಂ, ಜ಼ಿಂಕ್, ಸೋಡಿಯಂ ಮತ್ತು ಕಬ್ಬಿಣದಂತಹ ಖನಿಜ ಸತ್ವಗಳು ಇದರಲ್ಲಿದೆ. ಅಲ್ಲದೇ ನಮ್ಮ ದೇಹಕ್ಕೆ ಅವಶ್ಯವಿರುವ ಅಮೈನೊ ಆಸಿಡ್ ಮತ್ತು ಜೀವಸತ್ವಗಳೂ ಸಹ ಇದರಲ್ಲಿ ಅಡಗಿದೆ.ಆದ್ದರಿಂದ ಅಲೋವೆರಾದಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದಂತಹ ಸಾಕಷ್ಟು ಸತ್ವಗಳು ಅಡಗಿದೆ. ಮಲಬದ್ಧತೆಗೆ ಸಮಸ್ಯೆಗೆ ಮನೆಮದ್ದು-ಲೋಳೆಸರ

ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣವು ದೇಹದ ರೋಗ ಪ್ರತಿಬಂಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯು ಇಮ್ಮಡಿಯಾಗುತ್ತದೆ. ಇತ್ತೀಚಿನ ಸಂಶೋಧನೆಯೊಂದು ಅಲೋವೆರಾ ರಸವು ಮಧುಮೇಹ ರೋಗಿಗಳಿಗೆ ಉಪಯುಕ್ತವೆಂದು ಖಚಿತಪಡಿಸಿದೆ. ನಿಮ್ಮ ನೆಚ್ಚಿನ ಈ ಬೋಲ್ದ್ ಸ್ಕೈ ಜಾಲತಾಣವು ನಿಮಗಾಗಿ ಅಲೋವೆರಾ ಉಪಯೋಗದ ಬಗ್ಗೆ ಕ್ರಮವಾಗಿ ನೀಡುತ್ತಲೇ ಬಂದಿದೆ. ಈ ಲೇಖನವೂ ಸಹ ಅಲೋವೆರಾದ ಬಗ್ಗೆ ನಿಮಗೆ ಸಾಕಷ್ಟು ಸಂಗತಿಗಳನ್ನು ತಿಳಿಸುತ್ತದೆ. ವಿವರಗಳಿಗೆ ಮುಂದೆ ಓದಿ...

ಬಾಯಿಯ ಆರೋಗ್ಯ

ಬಾಯಿಯ ಆರೋಗ್ಯ

ಅಲೋವೆರಾ ದಂತ ಹಾಗೂ ಬಾಯಿಯ ಸಂಬಂಧಿತ ಸಮಸ್ಯಗಳನ್ನು ಪರಿಹರಿಸುತ್ತದೆ. ಈ ರಸದಿಂದ ಬಾಯಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿದರೆ ಬಾಯಿಯ ಹಾಗೂ ಒಸಡಿನ ತಾಜಾತನ ಹೆಚ್ಚುತ್ತದೆ. ಇದರಲ್ಲಿರುವ ಪ್ರತಿಬಂಧಕ ಶಕ್ತಿಯು ಒಸಡಿನ ತೊಂದರೆ ಬರದಂತೆ ಹಾಗೂ ದಂತಗಳು ಹುಳುಕಾಗದಂತೆ ನೋಡಿಕೊಳ್ಳುತ್ತದೆ.

ದೇಹವನ್ನು ಉಲ್ಲಸಿತಗೊಳಿಸುತ್ತದೆ

ದೇಹವನ್ನು ಉಲ್ಲಸಿತಗೊಳಿಸುತ್ತದೆ

ಅಲೋವೆರಾದಲ್ಲಿರುವ ವಿಶೇಷ ಗುಣವು ನಮ್ಮ ದೇಹವನ್ನು ಸದಾ ಕ್ರಿಯಾಶೀಲವಾಗಿ ಹಾಗೂ ಆರೋಗ್ಯವಾಡಲು ಸಹಕಾರಿ. ಅದರ ಸತ್ವಗಳು ನಮ್ಮ ದೇಹದ ವ್ಯವಸ್ಥೆಯನ್ನು ಸದೃಢಗೊಳಿಸುತ್ತದೆ. ಅದರಲ್ಲಿರುವ ವಿಟಮಿನ್ ಹಾಗೂ ಖನಿಜ ಸತ್ವಗಳು ನಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಅಲೋವೆರಾ ರಸವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಪಚನಕ್ರಿಯೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲಿದೆ. ರಕ್ತಚಲನೆ ವ್ಯವಸ್ಥೆಯ ಮೇಲೆ ನಿಗಾವಹಿಸಿ ರಕ್ತ ಚಲನೆಯನ್ನು ಸುಗಮಗೊಳಿಸುತ್ತದೆ. ಒಟ್ಟಾರೆಯಾಗಿ ನಮ್ಮ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಪಚನಶಕ್ತಿ ಇಮ್ಮಡಿಗೊಳಿಸುತ್ತದೆ

ಪಚನಶಕ್ತಿ ಇಮ್ಮಡಿಗೊಳಿಸುತ್ತದೆ

ಪಚನ ವ್ಯವಸ್ಥೆಯಲ್ಲಿನ ಸಣ್ಣ ಕರುಳಿನಿಂದ ಅವಶ್ಯವಿರುವ ಪೌಷ್ಠಿಕಾಂಶಗಳನ್ನು ಸಮರ್ಪಕವಾಗಿ ಹೀರಿಕೊಳ್ಳುವ ಕ್ರಿಯೆಯನ್ನು ಹೆಚ್ಚಿಸಲಿದೆ. ಇದರಿಂದ ಹೊಟ್ಟೆಉರಿ ಹಾಗೂ ಕರುಳು ಬೇನೆ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ. ಪ್ರತಿದಿನ ಕ್ರಮವಾದ ಸೇವನೆಯಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ರೋಗಗಳಿಂದ ದೂರವಿರಬಹುದು.

ಕೀಲು ನೋವಿನ ನಿವಾರಣೆ

ಕೀಲು ನೋವಿನ ನಿವಾರಣೆ

ಅಲೋವೆರಾ ರಸವು ಉರಿಯೂತ ಹಾಗೂ ಕೀಲುನೋವು ನಿವಾರಣೆಗೆ ಸಿದ್ಧ ಸೂತ್ರವಾಗಿದ್ದು, ಸ್ನಾಯು ಸೆಳೆತವನ್ನೂ ಸಹ ಶೀಘ್ರವಾಗಿ ನಿವಾರಿಸಲಿದೆ. ಅಲೋವೆರಾವನ್ನು ಹಾಗೆಯೇ ಕುಡಿದಲ್ಲಿ ದೇಹದೊಳಗಿನ ಉರಿಯೂತ ಹಾಗೂ ಕೀಲುನೋವುಗಳು ಕ್ರಮವಾಗಿ ಕಡಿಮೆಯಾಗುತ್ತದೆ.

English summary

Reasons To Drink Aloe Vera Juice Every Day

Most of us are already aware of the benefits of aloe vera; however, not many of us are aware of the health benefits of consuming aloe vera juice on a regular basis. Consuming aloe vera juice every day has numerous health benefits to your body. Consuming aloe vera juice every day has numerous health benefits to your body
X
Desktop Bottom Promotion