For Quick Alerts
ALLOW NOTIFICATIONS  
For Daily Alerts

ಜ್ವರದ ಬಳಿಕ ಕಾಡುವ ಮೈ ಕೈ ನೋವಿಗೆ ಸಮರ್ಪಕ ಮನೆಮದ್ದು

By Arshad
|

ಸಂಧಿವಾತ ಅಥವಾ ಗಂಟುಗಳ ನೋವಿಗೆ ವಿವಿಧ ಕಾರಣಗಳಿವೆ. ಅಪಘಾತ ಅಥವಾ ಯಾವುದೋ ಕಾರಣದಿಂದ ಪೆಟ್ಟಾಗಿ ಉಂಟಾಗುವ ನೋವು, ಮೂಳೆಸಂದುಗಳಲ್ಲಿ ಸೋಂಕು ಮತ್ತು ವಯಸ್ಸಾದಂತೆ ಸಂದುಗಳು ಸವೆದು ನಡುವಣ ಎಣ್ಣೆಯಂತಹ ಜಿಡ್ದು ಕಡಿಮೆಯಾಗುವುದು ಮೊದಲಾದ ಕಾರಣಗಳಿವೆ.

ಕ್ರೀಡಾಪಟುಗಳು ಮತ್ತು ನಿತ್ಯವೂ ಅತಿಹೆಚ್ಚು ವ್ಯಾಯಾಮ ಮಾಡುವವರು ಸಹಾ ಈ ತೊಂದರೆಗೆ ಹೆಚ್ಚಾಗಿ ಒಳಗಾಗುತ್ತಾರೆ. ಇದಕ್ಕೆ ಇನ್ನೊಂದು ಕಾರಣವೆಂದರೆ ವೈರಲ್ ಜ್ವರ ಬಂದು ಇಳಿದ ಬಳಿಕ ಎದುರಾಗುವ ನೋವು. ಇತ್ತೀಚೆಗೆ ವ್ಯಾಪಕವಾಗಿ ಹರಡಿದ ಜ್ವರದ ಪರಿಣಾಮವಾಗಿ ಶೇಖಡಾ ಐವತ್ತರಷ್ಟು ಜನರು ಈ ತೊಂದರೆಯಿಂದ ಈಗ ಬಳಲುತ್ತಿದ್ದಾರೆ.

ತೀವ್ರತರಕ್ಕೆ ಏರಿದ ಜ್ವರ ಇಳಿದ ಬಳಿಕವೂ ಇಡಿಯ ಮೈ ನೋವಿನಿಂದ ಪರಿತಪಿಸುತ್ತದೆ. ವಿಶೇಷವಾಗಿ ಮಣಿಕಟ್ಟು, ಮೊಣಗಂಟು, ಪಾದದ ಗಂಟು, ಭುಜ, ಮೊಣಕೈ ಮತ್ತು ಸೊಂಟದ ಭಾಗದ ಸಂದುಗಳು ಅತಿ ಹೆಚ್ಚಿನ ನೋವು ನೀಡುತ್ತವೆ. ಪ್ರತಿ ಗಂಟಿನೊಳಗೂ ಸಾವಿರಾರು ಹುಳಗಳು ಸೇರಿ ನಿಮ್ಮ ಮೂಳೆಯ ಗಂಟುಗಳನ್ನು ತಿನ್ನುತ್ತಿರುವ ಭಾಸವಾಗುತ್ತದೆ.

ಈ ನೋವಿಗೆ ಸೂಕ್ತವಾದ ಮನೆಮದ್ದುಗಳಿವೆ. ಆದರೆ ಇವನ್ನು ಜ್ವರ ಇಳಿದ ತಕ್ಷಣ ಪ್ರಾರಂಭಿಸುವುದು ಜಾಣತನ. ಇದು ನೋವನ್ನು ತೀವ್ರತರಕ್ಕೆ ಕೊಂಡುಹೋಗದೇ ಕೊಂಚವಾಗಿ ಮಾತ್ರ ಏರಿಸಿ ಶೀಘ್ರದಲ್ಲಿಯೇ ಇಳಿಸಿಬಿಡುತ್ತದೆ.

ಇದರೊಂದಿಗೆ ಆಯುರ್ವೇದೀಯ ಮಸಾಜ್ ಮಾಡಿಸಿಕೊಳ್ಳುವುದು ಇನ್ನೂ ಉತ್ತಮ. ಈ ಸೇವೆ ನೀಡುವ ಆಯುರ್ವೇದ ಕೇಂದ್ರಗಳಲ್ಲಿ ಕೆಲವು ವಿಶೇಷ ಚಿಕಿತ್ಸೆಗಳು ಲಭ್ಯವಿದ್ದು ನೋವು ಶೀಘ್ರವಾಗಿ ಕಡಿಮೆಯಾಗಲು ನೆರವಾಗುತ್ತದೆ. ನೋವು ಕಡಿಮೆಯಾಗಲು ಕೆಳಗಿನ ಮನೆಮದ್ದುಗಳಲ್ಲಿ ನಿಮಗೆ ಸೂಕ್ತವಾದುದನ್ನು ಅನುಸರಿಸಿ...

ಬಿಸಿ ಮತ್ತು ತಣ್ಣಗಿನ ಚಿಕಿತ್ಸೆ

ಬಿಸಿ ಮತ್ತು ತಣ್ಣಗಿನ ಚಿಕಿತ್ಸೆ

ಒಂದು ಅಗಲವಾದ ಪಾತ್ರೆಯಲ್ಲಿ ಉಗುರುಬೆಚ್ಚನೆಯ ನೀರಿಗಿಂತ ಕೊಂಚ ಹೆಚ್ಚು ಬಿಸಿಯಿರುವ ನೀರನ್ನು ಹಾಕಿ ಪಾದಗಳನ್ನು ಬಿಟ್ಟು ಕುಳಿತುಕೊಳ್ಳಿ. ಸ್ವಚ್ಛವಾದ ಟವೆಲ್ ಅಥವಾ ಹತ್ತಿಯ ಬಟ್ಟೆಯನ್ನು ತೆಗೆದುಕೊಂಡು ಬಿಸಿನೀರಿನಲ್ಲಿ ಮುಳುಗಿಸಿ ಹಿಂಡಿ ನೋವಿರುವ ಭಾಗವನ್ನು ಆವರಿಸುವಂತೆ ಸುತ್ತಿ. ಸಾಧ್ಯವಾದಷ್ಟು ಬಿಸಿಯನ್ನು ದೇಹ ಹೀರಿಕೊಳ್ಳುವಂತೆ ಮಾಡಿ... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಿಸಿ ಮತ್ತು ತಣ್ಣಗಿನ ಚಿಕಿತ್ಸೆ

ಬಿಸಿ ಮತ್ತು ತಣ್ಣಗಿನ ಚಿಕಿತ್ಸೆ

ಸುಮಾರು ಹದಿನೈದು ನಿಮಿಷ ಬಿಟ್ಟು ಇದೇ ವಿಧಾನವನ್ನು ಮತ್ತೊಮ್ಮೆ ಅನುಸರಿಸಿ, ಆದರೆ ಈ ಬಾರಿ ತಣ್ಣೀರು ಬಳಸಿ. ಹೀಗೇ ದಿನಕ್ಕೆರಡು ಬಾರಿ ಮಾಡುವುದರಿಂದ ನೋವು ಒಂದೆರಡು ದಿನದಲ್ಲಿಯೇ ಕಡಿಮೆಯಾಗುತ್ತದೆ.

ಆಲಿವ್ ಎಣ್ಣೆ ಮತ್ತು ಸೇಬಿನ ಶಿರ್ಕಾ ಬಳಸಿ

ಆಲಿವ್ ಎಣ್ಣೆ ಮತ್ತು ಸೇಬಿನ ಶಿರ್ಕಾ ಬಳಸಿ

ನೋವನ್ನು ಸಮರ್ಥವಾಗಿ ಕಡಿಮೆಗೊಳಿಸಲು ಇನ್ನೊಂದು ಸಮರ್ಥವಾದ ವಿಧಾನವೆಂದರೆ ಆಲಿವ್ ಎಣ್ಣೆ ಮತ್ತು ಸೇಬಿನ ಶಿರ್ಕಾ (apple cider vinegar)ದ ಮಿಶ್ರಣ ಬಳಸುವುದು. ಮೊದಲು ಎಲ್ಲೆಲ್ಲಿ ನೋವಿದೆಯೋ ಅಲ್ಲೆಲ್ಲಾ ಸಮಪ್ರಮಾಣದ ಆಲಿವ್ ಎಣ್ಣೆ ಮತ್ತು ಸೇಬಿನ ಶಿರ್ಕಾದ ಮಿಶ್ರಣದಿಂದ ನಯವಾಗಿ ಸುಮಾರು ಹದಿನೈದು ನಿಮಿಷಗಳ ವರೆಗೆ ಮಸಾಜ್ ಮಾಡಿಕೊಳ್ಳಿ.

ಆಲಿವ್ ಎಣ್ಣೆ ಮತ್ತು ಸೇಬಿನ ಶಿರ್ಕಾ ಬಳಸಿ

ಆಲಿವ್ ಎಣ್ಣೆ ಮತ್ತು ಸೇಬಿನ ಶಿರ್ಕಾ ಬಳಸಿ

ಹತ್ತು ನಿಮಿಷ ಬಿಟ್ಟು ಅರ್ಧ ಲೋಟದಷ್ಟು ಲಿಂಬೆ ಮತ್ತು ಶಿರ್ಕಾ ಬೆರೆಸಿದ ಮಿಶ್ರಣವನ್ನು ಕೊಂಚ ನೀರಿನೊಂದಿಗೆ ಸೇರಿಸಿ ಕುಡಿಯಿರಿ. ಇದು ಸಂಧಿನೋವಿಗೆ ಒಂದು ಉತ್ತಮ ಪರಿಹಾರವಾಗಿದೆ.

ಅರಿಶಿನದ ಲೇಪನ ಬಳಸಿ

ಅರಿಶಿನದ ಲೇಪನ ಬಳಸಿ

ನೋವಿರುವ ಭಾಗಕ್ಕೆಲ್ಲಾ ಅರಿಶಿನ ಮತ್ತು ಉರ್ಗುರುಬೆಚ್ಚನೆಯ ನೀರನ್ನು ಸೇರಿಸಿ ಮಾಡಿದ ಲೇಪನವನ್ನು ಹಚ್ಚಿ. ಇದು ನೋವನ್ನು ಶೀಘ್ರವಾಗಿ ಕಡಿಮೆಗೊಳಿಸುತ್ತದೆ. ಹಚ್ಚಿದ ಸುಮಾರು ಇಪ್ಪತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ದಿನಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಿ.

ಬೆರ್ರಿಹಣ್ಣುಗಳನ್ನು ಸೇವಿಸಿ

ಬೆರ್ರಿಹಣ್ಣುಗಳನ್ನು ಸೇವಿಸಿ

ವಿವಿಧ ಬೆರ್ರಿ (ಸ್ಟಾಬೆರಿ, ಬ್ಲೂಬೆರಿ ಇತ್ಯಾದಿ) ಹಣ್ಣುಗಳನ್ನು ದಿನಕ್ಕೆ ಹಲವಾರು ಬಾರಿ ಸೇವಿಸಿ. ಇದರಲ್ಲಿರುವ ವಿಟಮಿನ್ ಸಿ ನೋವಿಗೆ ಕಾರಣವಾದ ಕೀಟಾಣುಗಳನ್ನು ಕೊಲ್ಲಲು ನೆರವಾಗುತ್ತದೆ. ಈ ವಿಧಾನ ಕೊಂಚ ನಿಧಾನವಾಗಿದ್ದರೂ ಪರಿಣಾಮಪಕಾರಿಯಾಗಿದೆ.

ಎಪ್ಸಮ್ ಉಪ್ಪು (Epsom Salt) ಬಳಸಿ

ಎಪ್ಸಮ್ ಉಪ್ಪು (Epsom Salt) ಬಳಸಿ

ಸೇಂಧಾ ಉಪ್ಪು ಎಂದೂ ಕರೆಯಲಾಗುವ ಎಪ್ಸಮ್ ಉಪ್ಪು ಸಹಾ ನೋವನ್ನು ಕಡಿಮೆಗೊಳಿಸಲು ಉತ್ತಮ ವಿಧಾನವಾಗಿದೆ. ನೀವು ಸ್ನಾನ ಮಾಡುವ ಸ್ನಾನದ ಬೋಗುಣಿ ಅಥವಾ ಟಬ್ ನಲ್ಲಿ ಸುಮಾರು ಎರಡು ದೊಡ್ಡ ಚಮಚ ಎಪ್ಸಮ್ ಉಪ್ಪು ಸೇರಿಸಿ ಬಿಸಿಬಿಸಿ ನೀರಿನಲ್ಲಿ ದೇಹವನ್ನು ಸಾಧ್ಯವಾದಷ್ಟು ಹೆಚ್ಚು ಹೊತ್ತು ಇರಿಸಿ. ಇದು ಒಂದು ವಾರದಲ್ಲಿ ನಿಮ್ಮ ನೋವನ್ನು ಕಡಿಮೆಗೊಳಿಸುತ್ತದೆ.

ಎಪ್ಸಮ್ ಉಪ್ಪು (Epsom Salt) ಬಳಸಿ

ಎಪ್ಸಮ್ ಉಪ್ಪು (Epsom Salt) ಬಳಸಿ

ನೀರನ್ನು ಸುರುವಿಕೊಂಡು ಸ್ನಾನ ಮಾಡುವುದಾದರೆ ಒಂದು ಬಕೆಟ್ಟಿಗೆ ಅರ್ಧ ಚಮಚ ಸಾಕು. ಇದನ್ನು ತಲೆಗೆ ಹೊರತಾಗಿ ಇತರ ಭಾಗಗಳಿಗೆ, ವಿಶೇಷವಾಗಿ ನೋವಿರುವ ಕಡೆಗಳಲ್ಲಿ ಬಿಸಿಬಿಸಿಯಾಗಿ ಸುರುವಿಕೊಳ್ಳಿ.

ಶುಂಠಿಯ ಕಷಾಯ ಕುಡಿಯಿರಿ

ಶುಂಠಿಯ ಕಷಾಯ ಕುಡಿಯಿರಿ

ಸುಮಾರು ಅರ್ಧ ಇಂಚಿನಷ್ಟು ಹಸಿಶುಂಠಿಯನ್ನು ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿ ಸುಮಾರು ಐದರಿಂದ ಆರು ನಿಮಿಷ ಕುದಿಸಿ. ಬಳಿಕ ಇದನ್ನು ಸೋಸಿ ಇದಕ್ಕೆ ಅರ್ಧ ಲಿಂಬೆಹಣ್ಣಿನ ರಸವನ್ನು ಸೇರಿಸಿ ಬಿಸಿಬಿಸಿಯಾಗಿಯೇ ಕುಡಿಯಿರಿ.

ಶುಂಠಿಯ ಕಷಾಯ ಕುಡಿಯಿರಿ

ಶುಂಠಿಯ ಕಷಾಯ ಕುಡಿಯಿರಿ

ದಿನಕ್ಕೆರಡು ಲೋಟ ಕುಡಿಯುವುದರಿಂದ ನೋವು ಶೀಘ್ರವಾಗಿ ಮಾಯವಾಗುವುದಲ್ಲದೇ ಜ್ವರದ ಕಾರಣ ಚರ್ಮದ ಮೇಲೆ ಕಾಣಿಸಿಕೊಂಡಿದ್ದ ಗೆರೆಗಳು ಮತ್ತು ಒರಟಾದ ಭಾಗಗಳು ನಿವಾರಣೆಯಾಗುತ್ತವೆ.

English summary

Put An End To Joint Pain After Viral Fever With Home Remedies

Injury is the most common cause of joint pain, continuous inflammation can cause permanent joint pain and aging too is another cause. Athletics are more prone to this pain and so are gym addicts. But, today almost every second person is down with joint pain especially after viral fever. The advanced type of fever which is raging in the city brings upon pain in the wrist, knees, ankles, shoulders, elbow and even the hips.
X
Desktop Bottom Promotion