For Quick Alerts
ALLOW NOTIFICATIONS  
For Daily Alerts

ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

|

ಬೆಳಿಗ್ಗೆದ್ದ ಕೂಡಲೇ ಪ್ರಾತಃವಿಧಿಗಳನ್ನು ಮುಗಿಸಿದ ಬಳಿಕ ಕಾಫಿ ಅಥವಾ ಟೀ ಕುಡಿಯುವುದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಬ್ರಿಟಿಷರು ಈ ಕಾಫಿ ಟೀ ಗಳನ್ನು ಬಲವಂತವಾಗಿ ಪರಿಚಯಿಸುವ ಮೊದಲು ನಮ್ಮ ಹಿರಿಯರು ಕಷಾಯ ಅಥವಾ ಶುಂಠಿ ಬೆರೆಸಿದ ಹಾಲನ್ನು ಕುಡಿಯುತ್ತಿದ್ದರು. ಶುಂಠಿಯ ಆರೋಗ್ಯಕರ ಪೋಷಕಾಂಶಗಳ ಕಾರಣ ಅವರ ಆಯಸ್ಸು ಮತ್ತು ಆರೋಗ್ಯ ಇಂದಿನವರಿಗಿಂತ ಹೆಚ್ಚಿತ್ತು.

ಶುಂಠಿಯಲ್ಲಿರುವ ಜೀವಿರೋಧಿ (antibacterial), ಉರಿಯೂತ ನಿವಾರಕ (anti inflammatory) ಮತ್ತು ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೆರವಾಗುತ್ತವೆ. ಶುಂಠಿ ಚಹಾದ ರುಚಿ ಸವಿದಿದ್ದೀರಾ...?

ಪ್ರತಿದಿನ ಶುಂಠಿ ಬೆರೆಸಿದ ಚಹಾ ಅಥವಾ ಹಾಲನ್ನು ಕುಡಿಯುವುದರಿಂದ ಇಡಿಯ ದಿನ ಉಲ್ಲಾಸದಿಂದಿರುವುದು ಮಾತ್ರವಲ್ಲ ಚೈತನ್ಯವನ್ನೂ ನೀಡುತ್ತದೆ. ಅಲ್ಲದೆ ಮಹಿಳೆಯರಿಗೆ ಅವರ ಮಾಸಿಕ ದಿನಗಳಲ್ಲಿ ಹೆಚ್ಚಿನ ಶಕ್ತಿ ನೀಡಲೂ ಈ ಪೇಯ ನೆರವಾಗುತ್ತದೆ. ಬನ್ನಿ, ಇದರ ಔಷಧೀಯ ಗುಣಗಳಲ್ಲಿ ಪ್ರಮುಖವಾದ ಗುಣಗಳನ್ನು ನೋಡೋಣ...

ಕೆಮ್ಮು ಶೀತ ಮತ್ತು ಗಂಟಲುಬೇನೆಗೆ

ಕೆಮ್ಮು ಶೀತ ಮತ್ತು ಗಂಟಲುಬೇನೆಗೆ

ಕೆಮ್ಮು ಶೀತ ಮತ್ತು ಗಂಟಲುಬೇನೆಗೆ ಉತ್ತಮ ಪರಿಹಾರ ನೀಡುತ್ತದೆ ಶೀತ ಮತ್ತು ಕೆಮ್ಮುಗಳು ವಾಸ್ತವವಾಗಿ ಕಾಯಿಲೆಗಳಲ್ಲ, ಅವು ನಮ್ಮ ದೇಹದ ರೋಗ ನಿರೋಧಕ ಶಕ್ತಿ ವೈರಸ್ಸುಗಳನ್ನು ದೇಹದಿಂದ ಹೊರಹಾಕಲು ಕೈಗೊಳ್ಳುವ ಕ್ರಮಗಳು. ಶುಂಠಿ ಈ ಕ್ರಮಕ್ಕೆ ತನ್ನ ಸಹಕಾರವನ್ನು ನೀಡಿ ಕೆಮ್ಮು ಶೀತ ಬೇಗನೇ ವಾಸಿಯಾಗುವಂತೆ ಮಾಡುತ್ತದೆ. ಶುಂಠಿಯ ಪೇಯ ಬೆಳಿಗ್ಗೆ ಕುಡಿಯುವುದರಿಂದ ಮೂಗು, ಗಂಟಲು ಮತ್ತು ಬಾಯಿಯ ಹಿಂಭಾಗದಲ್ಲಿ ಹೆಚ್ಚಿನ ಪ್ರಮಾಣದ ದ್ರವ ಸ್ರವಿಸಿ ವೈರಸ್ಸುಗಳು ಮತ್ತು ಅಂಟಿಕೊಂಡಿದ್ದ ಕ್ರಿಮಿಗಳು ಶೀಘ್ರವಾಗಿ ಹೊರಹಾಕಲ್ಪಡುತ್ತವೆ. ಶುಂಠಿಯ ಅಲರ್ಜಿನಿವಾರಕ (antihistamine) ಗುಣದ ಕಾರಣ ಶೀತದ ದೆಸೆಯಿಂದ ಉಂಟಾಗಬಹುದಾಗಿದ್ದ ಅಲರ್ಜಿಯಾಗುವುದನ್ನೂ ತಡೆಯುತ್ತದೆ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆ ಎರಡು ಲೋಟ ಕುಡಿಯುವುದು ಉತ್ತಮ.

ಮಹಿಳೆಯರಿಗೆ ಮಾಸಿಕ ದಿನಗಳ ನೋವಿನಿಂದ ಮುಕ್ತಿ

ಮಹಿಳೆಯರಿಗೆ ಮಾಸಿಕ ದಿನಗಳ ನೋವಿನಿಂದ ಮುಕ್ತಿ

ಶುಂಠಿಯಲ್ಲಿರುವ ಜಿಂಜರಾಲ್ ತೈಲ ಮಹಿಳೆಯರಿಗೆ ಮಾಸಿಕ ದಿನಗಳ ಸ್ರಾವದ ಬಳಿಕ ಕಾಡುವ ನೋವಿನಿಂದ ಶೀಘ್ರವೇ ಮುಕ್ತಿ ನೀಡುತ್ತದೆ. ಜೊತೆಗೇ ದೇಹದಲ್ಲಿರುವ ಪಿತ್ತವನ್ನೂ ಕಡಿಮೆಗೊಳಿಸುತ್ತದೆ. ಪಿತ್ತದ ಕಾರಣ ಹೊಟ್ಟೆ ಮತ್ತು ಕೆಳಹೊಟ್ಟೆಯಲ್ಲಿ ತೀವ್ರತರದ ಸೆಡೆತ ಉಂಟಾಗುವುದನ್ನು ಇದರಿಂದ ತಡೆಯಬಹುದು. ಉತ್ತಮ ಪರಿಣಾಮಕ್ಕಾಗಿ ಮಾಸಿಕ ದಿನಗಳು ಪ್ರಾರಂಭವಾಗುವ ಮೂರು ಅಥವಾ ನಾಲ್ಕು ದಿನಗಳ ಮೊದಲಿನಿಂದಲೇ ಶುಂಠಿಯ ಪೇಯ ಕುಡಿಯಲು ಪ್ರಾರಂಭಿಸುವುದರಿಂದ ಋತುಚಕ್ರ ನಿಗದಿತ ದಿನಕ್ಕೇ ಸಂಭವಿಸಿ ಅತಿ ಕಡಿಮೆ ನೋವನ್ನು ಅನುಭವಿಸಲು ಸಾಧ್ಯವಾಗುತ್ತದೆ.

ವಾಕರಿಕೆ ನಿವಾರಿಸಲು

ವಾಕರಿಕೆ ನಿವಾರಿಸಲು

ಪ್ರಯಾಣಕ್ಕೆ ಮೊದಲು ಒಂದು ಲೋಟ ಶುಂಠಿ ಕುಡಿದರೆ ಚಲನೆಯ ಕಾಯಿಲೆ (ಮೋಶನ್ ಸಿಕ್ನೆಸ್) ಅನಾರೋಗ್ಯಕ್ಕೆ ಸಂಬಂಧಿಸಿದ ವಾಕರಿಕೆ ಮತ್ತು ವಾಂತಿ ತಡೆಗಟ್ಟಲು ಸಹಾಯ ಮಾಡಬಹುದು. ನೀವು ವಾಕರಿಕೆಯ ಮೊದಲ ಲಕ್ಷಣ ನಿವಾರಿಸಲು ಇದನ್ನು ಕುಡಿಯಬಹುದು

ಮೈಗ್ರೇನ್ ಮತ್ತು ಒತ್ತಡದಿಂದ ಬರುವ ತಲೆನೋವಿಗೆ

ಮೈಗ್ರೇನ್ ಮತ್ತು ಒತ್ತಡದಿಂದ ಬರುವ ತಲೆನೋವಿಗೆ

ಶುಂಠಿಯ ಉರಿಯೂತ ನಿವಾರಕ (anti inflammatory) ಗುಣ ವಿವಿಧ ನೋವುಗಳನ್ನು ನಿವಾರಿಸಲು ನೆರವಾಗುತ್ತದೆ. ಅದರಲ್ಲೂ ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ತಲೆನೋವಿಗೆ ಶುಂಠಿ ಉತ್ತಮ ಪರಿಹಾರ ನೀಡುತ್ತದೆ. ಸಂಶೋಧನೆಯ ಪ್ರಕಾರ ತಲೆನೋವಿಗೆ ಮುಖ್ಯ ಕಾರಣ prostaglandins ಎಂಬ ಮೂಲವಸ್ತುಗಳು ಮೆದುಳಿನ ನರಗಳಲ್ಲಿ ಉರಿಯುಂಟು ಮಾಡುತ್ತವೆ. ಶುಂಠಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಈ ಮೂಲವಸ್ತುವಿನೊಂದಿಗೆ ಸಂಯೋಜನೆಗೊಂಡು ಅದನ್ನು ನಿಯಂತ್ರಿಸುತ್ತದೆ. ಇದೇ ಕಾರಣದಿಂದ ತಲೆನೋವು ಕಡಿಮೆಯಾಗುತ್ತದೆ. ಈ ತಲೆನೋವಿನ ಅಡ್ಡಪರಿಣಾಮಗಳಾದ ವಾಕರಿಕೆ, ಸುಸ್ತು, ತಲೆಸುತ್ತುವುದು ಮೊದಲಾದ ತೊಂದರೆಗಳೂ ನಿವಾರಣೆಯಾಗುತ್ತದೆ. ಕಾಳಜಿ ವಹಿಸಬೇಕಾದ ವಿಷಯವೆಂದರೆ ಈ ಮೂಲವಸ್ತುಗಳು ತಮ್ಮ ಪ್ರಭಾವವನ್ನು ಮೆದುಳಿನ ಮೇಲೆ ತೋರಿಸುವ ಮುನ್ನವೇ ಶುಂಠಿಯ ಪೇಯ ಕುಡಿಯುವುದು ಉತ್ತಮ.

ಶುಂಠಿ ಚಹಾ ತಯಾರಿಸುವ ವಿಧಾನ

ಶುಂಠಿ ಚಹಾ ತಯಾರಿಸುವ ವಿಧಾನ

ಸುಮಾರು ಮಧ್ಯಮಗಾತ್ರದ ಶುಂಠಿಯನ್ನು ತೊಳೆದು ಸಿಪ್ಪೆ ಸುಲಿಯಿರಿ. ಇದನ್ನು ತೆಂಗಿನಕಾಯಿ ತುರಿದಂತೆ ಚಿಕ್ಕ ಚಿಕ್ಕ ಎಳೆಗಳಾಗಿ ತುರಿಯಿರಿ ಅಥವಾ ಸಾಧ್ಯವಾದಷ್ಟು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ. ಇದನ್ನು ಒಂದು ಲೋಟದಷ್ಟು ಕುದಿಸಿದ ನೀರಿಗೆ ಹಾಕಿ ಮುಚ್ಚಳ ಮುಚ್ಚಿ ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ (ಮತ್ತೆ ಕುದಿಸಬಾರದು) ಈ ನೀರು ನಿಧಾನವಾಗಿ ತಣ್ಣಗಾಗಲು ಬಿಡಿ. ಬಳಿಕ ಈ ನೀರನ್ನು ನೋಸಿ ಕುಡಿಯಿರಿ. ರುಚಿಗೆ ಸ್ವಲ್ಪ ಜೇನು, ತುಳಸಿ ಎಲೆಗಳು ಅಥವಾ ಲಿಂಬೆರಸವನ್ನೂ ಸೇರಿಸಿ ಸವಿಯಬಹುದು. ಸ್ವಲ್ಪ ಒಗರು ಅನಿಸಿದರೆ ಸ್ವಲ್ಪ ಬೆಲ್ಲವನ್ನೂ ಸೇರಿಸಬಹುದು.

English summary

Proven Health Benefits of Ginger tea

Ginger tea is used to relieve a variety of problems, and additional ingredients such as honey, lemon or orange can improve the taste of ginger tea, as well as its health benefits. So boldsky share some health benefits of ginger tea have a look
Story first published: Monday, November 2, 2015, 23:21 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more