For Quick Alerts
ALLOW NOTIFICATIONS  
For Daily Alerts

ಸಾರ್ವಜನಿಕ ಶೌಚಾಲಯ ಬಳಸುವಾಗ ಜಾಗರೂಕರಾಗಿರಿ!

By Super
|

ಕಾರ್ಯನಿಮಿತ್ತ ಪರ ಊರಿಗೆ ಹೋದಾಗ ಊಟ ತಿಂಡಿ ವಸತಿಗೆ ಹೆಚ್ಚು ಕಷ್ಟಪಡಬೇಕಾಗಿಲ್ಲ. ಆದರೆ ನಿಸರ್ಗದ ಕರೆ ಬಂದಾಗ ಮಾತ್ರ ಪರದಾಡಬೇಕಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ತುಂಬಾ ಕಷ್ಟಕರವಾದ ಪರಿಸ್ಥಿತಿ ಎದುರಾಗುತ್ತದೆ. ಇದನ್ನು ಮನಗಂಡ ಸ್ವಯಂಸೇವಾ ಸಂಘಟನೆಗಳು ಮತ್ತು ಸರ್ಕಾರದ ನೆರವಿನಿಂದ ಇಂದು ನಗರ ಮತ್ತು ಪಟ್ಟಣಗಳಲ್ಲಿ ಜನನಿ ಬಿಡ ಸ್ಥಳಗಳಲ್ಲಿ ಶೌಚಾಲಯವನ್ನು ನಿರ್ಮಿಸಲಾಗಿದೆ.

ಹಿಂದೆ ಕೇವಲ ಬಸ್ ನಿಲ್ದಾಣಗಳಲ್ಲಿ ಮಾತ್ರ ಸಾರ್ವಜನಿಕ ಶೌಚಾಲಯವಿತ್ತು. ಇಂದು ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆ ಮತ್ತಿತರ ಸಂಸ್ಥೆಗಳು ಕೊಂಚ ದರ ವಿಧಿಸಿ ಉತ್ತಮ ಶೌಚಾಲಯದ ವ್ಯವಸ್ಥೆಯನ್ನು ಮಾಡಿ ಜನರಿಗೆ ನೆರವು ನೀಡಿದೆ. ಆದರೆ ಮನೆಯ ಶೌಚಾಲಯದ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಾರ್ವಜನಿಕ ಶೌಚಾಲಯವನ್ನು ಕಾಪಾಡಿಕೊಳ್ಳುವುದು ಅಸಾಧ್ಯ. ಏಕೆಂದರೆ ಸತತವಾಗಿ ಬಂದು ಹೋಗುತ್ತಿರುವ ಜನರಿಂದಲೇ ಹಲವು ಕ್ರಿಮಿಗಳ ಆಗಮನವಾಗುತ್ತದೆ. ಶೌಚಾಲಯದ ಒಳಗಿನ ಕಮೋಡ್ ಮೇಲ್ಭಾಗ, ಮೂಲೆಗಳು, ಬಾಗಿಲ ಹಿಡಿಕೆ, ಚಿಲಕ ಎಲ್ಲಾ ಸ್ಥಳಗಳಲ್ಲಿ ಕ್ರಿಮಿಗಳು ರಾರಾಜಿಸುತ್ತಿರುತ್ತವೆ. ಸ್ವಚ್ಛಗೊಳಿಸುವವರು ದಿನಕ್ಕೆ ಹತ್ತು ಬಾರಿ ತೊಳೆದರೂ ನಾಲ್ಕು ಜನರು ಬಂದು ಹೋದ ಬಳಿಕ ಅಷ್ಟೇ ಕ್ರಿಮಿಗಳು ಮತ್ತೆ ಗುಂಪುಗೂಡುತ್ತವೆ. ಹಾಗಾಗಿ ಪ್ರತಿ ಶೌಚಾಲಯವನ್ನು ನಿಗದಿತ ಅವಧಿಗೆ ಸ್ವಚ್ಛಗೊಳಿಸುತ್ತಲೇ ಇರಲು ವೇಳಾಪಟ್ಟಿಯನ್ನು ಇಡಲಾಗಿದೆ. ಮನೇಲಿ ಟಾಯ್ಲೆಟ್ ಇಲ್ಲದಿದ್ದರೂ ಕೈಲಿ ಮೊಬೈಲ್!

ಆದರೆ ಎಲ್ಲಾ ಶೌಚಾಲಯಗಳಲ್ಲಿಯೂ ಈ ವ್ಯವಸ್ಥೆ ಇರುತ್ತದೆ ಎಂದು ಖಡಾಖಂಡಿತವಾಗಿ ಹೇಳಲು ಬರುವುದಿಲ್ಲ. ನಮ್ಮ ಭಾರತದ ಬಹುತೇಕ ಸ್ಥಳಗಳಲ್ಲಿ ದಿನಕ್ಕೊಮ್ಮೆ ಶೌಚಾಲಯವನ್ನು ಸ್ವಚ್ಛಗೊಳಿಸುವ ವ್ಯವಸ್ಥೆಯಿದೆ. ಇನ್ನುಳಿದಂತೆ ಜನರೇ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆದರೆ ಹೆಚ್ಚಿನವರಿಗೆ ಬಾಗಿಲ ಹಿಡಿಕೆಯಲ್ಲಿಯೂ ಕ್ರಿಮಿಗಳಿರುವ ಬಗ್ಗೆ ಅರಿವೇ ಇಲ್ಲ. ಬಾಗಿಲು ತೆರೆದು ನೇರವಾಗಿ ಹೋಟೆಲಿಗೆ ಹೋಗಿ ಅದೇ ಕೈಗಳಿಂದ ತಿಂಡಿ ತಿಂದಾಗ ಈ ಕ್ರಿಮಿಗಳು ದೇಹ ಪ್ರವೇಶಿಸಲು ಮುಕ್ತ ಅವಕಾಶ ನೀಡುತ್ತಾರೆ. ಅಥವಾ ಗಾಳಿಯಲ್ಲಿಯೇ ಹಾರಾಡುತ್ತಿರುವ ಕ್ರಿಮಿಗಳು ಮೂತ್ರದ್ವಾರದ ಮೂಲಕ ಮೂತ್ರನಾಳ ಪ್ರವೇಶಿಸಿ ಮೂತ್ರಕೋಶದಲ್ಲಿ ಸೋಂಕು ಉಂಟುಮಾಡಬಹುದು.

ಇನ್ನುಳಿದಂತೆ ಪ್ರಮುಖವಾಗಿ ಕರುಳಿನ ಸೋಂಕು, ಶೀತ ಜ್ವರ, ಅಷ್ಟೇ ಏಕೆ ಎಚ್ಚರ ತಪ್ಪಿದರೆ ಏಡ್ಸ್ ಸಹಾ ಸೋಂಕಬಹುದು. (ಕುಳಿತುಕೊಳ್ಳುವ ಭಾಗದಲ್ಲಿ ಗಾಯವಾಗಿದ್ದು ಏಡ್ಸ್ ಇರುವ ವ್ಯಕ್ತಿ ಈ ಮೊದಲೇ ಶೌಚಾಲಯವನ್ನು ಉಪಯೋಗಿಸಿ ಸ್ವಚ್ಛಗೊಳಿಸದೇ ಹೋಗಿದ್ದು ಆ ಸ್ಥಳದಲ್ಲಿ ಗಾಯ ತಾಕಿದರೆ ರಕ್ತದ ಮೂಲಕ ಏಡ್ಸ್ ವೈರಾಣುಗಳು ಪ್ರವೇಶ ಪಡೆಯುವ ಸಾಧ್ಯತೆ ಇದೆ) ಶೌಚಾಲಯವನ್ನು ಉಪಯೋಗಿಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ಇಲ್ಲಿ ನೀಡಲಾಗಿದೆ...

ನಿಮ್ಮ ವಸ್ತುಗಳನ್ನು ಶೌಚಾಲಯದ ಒಳಗೆ ಕೊಂಡೊಯ್ಯಬೇಡಿ

ನಿಮ್ಮ ವಸ್ತುಗಳನ್ನು ಶೌಚಾಲಯದ ಒಳಗೆ ಕೊಂಡೊಯ್ಯಬೇಡಿ

ನಿಮ್ಮ ಕೈಯಲ್ಲಿರುವ ಚೀಲ ಅಥವಾ ಸೂಟ್ ಕೇಸ್ ಮೊದಲಾದವುಗಳನ್ನು ಶೌಚಾಲಯದೊಳಕ್ಕೆ ಕೊಂಡೊಯ್ಯಬೇಡಿ. ಏಕೆಂದರೆ ಶೌಚಾಲಯದ ನೆಲದಲ್ಲಿ ಬಹಳಷ್ಟು ಕ್ರಿಮಿಗಳಿರುತ್ತವೆ. ಅವು ಚೀಲದೊಂದಿಗೆ ಮನೆ ಸೇರಬಹುದು. ಬದಲಿಗೆ ನಿಮ್ಮೊಂದಿಗೆ ಬಂದಿದ್ದ ಸ್ನೇಹಿತ ಅಥವಾ ಪರಿಚಿತರ ಕೈಯಲ್ಲಿ ನೀಡಿ. ಒಬ್ಬರೇ ಇದ್ದಾಗ ಮಾತ್ರ ನಿಮ್ಮ ಚೀಲದ ಕಾಳಜಿ ವಹಿಸಬಲ್ಲವರು ಯಾರೂ ಇಲ್ಲದಿದ್ದಂತಹ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಒಳಗೆ ಕೊಂಡು ಹೋಗಿ, ನೇತು ಹಾಕಲು ಮೊಳೆ ಇದ್ದರೆ ಅದರಲ್ಲಿ ನೇತುಹಾಕಿ. ಅದೂ ಇಲ್ಲದಿದ್ದ ಪಕ್ಷದಲ್ಲಿ ಹಳೆಯ ವೃತ್ತಪತ್ರಿಕೆಯನ್ನು ಇಡಿಯಾಗಿ ನೆಲದ ಮೇಲಿಟ್ಟು ಅದರ ಮೇಲೆ ನಿಮ್ಮ ವಸ್ತುಗಳನ್ನಿಡಿ. ಬಳಿಕ ಇಡಿಯ ಪತ್ರಿಕೆಯನ್ನೇ ಕಸದ ಬುಟ್ಟಿಗೆ ಹಾಕಿ.

ಬಾಗಿಲ ಹಿಡಿಕೆಯಲ್ಲಿಯೂ ಕ್ರಿಮಿಗಳಿರುತ್ತವೆ

ಬಾಗಿಲ ಹಿಡಿಕೆಯಲ್ಲಿಯೂ ಕ್ರಿಮಿಗಳಿರುತ್ತವೆ

ಜನರು ಸತತವಾಗಿ ಬಾಗಿಲನ್ನು ತೆರೆಯಲು ಮತ್ತು ಮುಚ್ಚಲು ಉಪಯೋಗಿಸುವ ಬಾಗಿಲ ಹಿಡಿಕೆಯೂ ಕ್ರಿಮಿಗಳ ಆಗರವಾಗಿದೆ. ಬಾಗಿಲ ಹಿಡಿಕೆ ಮಾತ್ರವಲ್ಲ, ಸಾಮಾನ್ಯವಾಗಿ ಜನರು ಕೈಗಳಿಂದ ಮುಟ್ಟುವ ಬಾಗಿಲ ಅಂಚಿನ ಭಾಗ, ಮೇಜಿನ ಒಂದು ಮೂಲೆ, ಒಳಗಿನ ಚಿಲಕ, ವಿದ್ಯುತ್ ದೀಪದ ಸ್ವಿಚ್ಚು ಮೊದಲಾದವೆಲ್ಲಾ ಕ್ರಿಮಿಗಳಿಂದ ತುಂಬಿ ತುಳುಕುತ್ತಿರುತ್ತವೆ. ಆದ್ದರಿಂದ ಈ ಸ್ಥಳಗಳನ್ನು ಮುಟ್ಟುವುದನ್ನು ಆದಷ್ಟು ತಪ್ಪಿಸಿ.ಹಿಡಿಯಲೇ ಬೇಕಾದರೆ ಮಾತ್ರ ಅನಿವಾರ್ಯವಾಗಿ ಮುಟ್ಟಿ ತಕ್ಷಣ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಅಲ್ಲಿ ಕೈತೊಳೆಯಲು ವ್ಯವಸ್ಥೆ ಇಲ್ಲದೇ ಇದ್ದರೆ hand sanitizer ಎಂದು ಔಷಧಿ ಅಂಗಡಿಯಲ್ಲಿ ದೊರಕುವ ಮಾರ್ಜಕದಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಬಳಿಕ ಮುಂದೆಲ್ಲಾದರೂ ನೀರಿನ ವ್ಯವಸ್ಥೆ ಇದ್ದಲ್ಲಿ ಸ್ವಚ್ಛವಾಗಿ ತೊಳೆದುಕೊಳ್ಳಿ.

ಅಪ್ಪಿ ತಪ್ಪಿಯೂ ಪಾದರಕ್ಷೆಗಳನ್ನು ಕಳಚಬೇಡಿ

ಅಪ್ಪಿ ತಪ್ಪಿಯೂ ಪಾದರಕ್ಷೆಗಳನ್ನು ಕಳಚಬೇಡಿ

ಶೌಚಾಲಯದ ನೆಲ ಈಗತಾನೇ ತೊಳೆದು ಸ್ಪಟಿಕದಿಂತಿದ್ದರೂ ಎಂದಿಗೂ ಪಾದರಕ್ಷೆಗಳನ್ನು ಕಳಚಿಡುವ ಪ್ರಯತ್ನವನ್ನೇ ಮಾಡದಿರಿ. ಏಕೆಂದರೆ ಈಗ ತಾನೇ ಸ್ವಚ್ಛಗೊಳಿಸಿದ ನೆಲದಲ್ಲಿಯೂ ಅತಿಸೂಕ್ಷ್ಮ ಕ್ರಿಮಿಗಳಿರುತ್ತವೆ. ತೇವದ ಮೂಲಕ ಪಾದಗಳಿಗೆ ಅಂಟಿಕೊಂಡು ಕಾಲಿನ ಬೆರಳಿನ ಸಂದು, ಉಗುರು ಸಂದು ಮೊದಲಾದ ಸ್ಥಳಗಳಿಂದ ದೇಹ ಪ್ರವೇಶಿಸುವ ಸಾಧ್ಯತೆಗಳಿವೆ.

ನಿಮ್ಮ ಕೈಗಳನ್ನು ತೊಳೆದುಕೊಳ್ಳುತ್ತಾ ಇರಿ

ನಿಮ್ಮ ಕೈಗಳನ್ನು ತೊಳೆದುಕೊಳ್ಳುತ್ತಾ ಇರಿ

ಕೈಗಳನ್ನು, ಅದರಲ್ಲೂ ಹಸ್ತಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುತ್ತಾ ಇರುವುದು ಸ್ವಚ್ಛತೆಯ ಪರಮಾದ್ಯತೆಯಾಗಿದೆ. ಏಕೆಂದರೆ ಕ್ರಿಮಿಗಳು ಒಬ್ಬರಿಂದೊಬ್ಬರಿಗೆ ಹರಡಲು ಕ್ರಿಮಿಗಳಿರುವ ಸ್ಥಳಗಳನ್ನು ಮುಟ್ಟುವುದೇ ಆಗಿದೆ. ಆದರೆ ನಿತ್ಯದ ಕೆಲಸದಲ್ಲಿ ಏನನ್ನೂ ಮುಟ್ಟದೇ ಇರಲು ಸಾಧ್ಯವೇ ಇಲ್ಲ. ಜನರು ಕೈಗಳನ್ನು ಮುಟ್ಟುವ ಸ್ಥಳಗಳನ್ನು ಮುಟ್ಟಿದರೆ ಹಸ್ತಗಳಲ್ಲಿ ಕ್ರಿಮಿಗಳು ಆಗಮಿಸುವ ಸಾಧ್ಯತೆ ಹೆಚ್ಚು. ಹಾಗಾಗಿ ಸಾಧ್ಯವಿದ್ದಾಗಲೆಲ್ಲಾ ಎರಡೂ ಹಸ್ತಗಳನ್ನು ಸೋಪು ಹಚ್ಚಿಕೊಂಡು ತೊಳೆದುಕೊಳ್ಳುತ್ತಾ ಇರಿ. ಹಸ್ತದ ಮುಂಭಾಗ, ಹಿಂಭಾಗ, ಬೆರಳ ಸಂದಿ, ಉಗುರು ಸಂದಿ, ಹೆಬ್ಬೆರಳ ಹಿಂಭಾಗಗಳಿಗೆ ಚೆನ್ನಾಗಿ ಸೋಪು ಹಾಕಿ ತೊಳೆದುಕೊಳ್ಳಿ. ಬಳಿಕ ಸ್ವಚ್ಛ ಬಟ್ಟೆಯಿಂದ ಒರೆಸಿಕೊಳ್ಳಿ. ಸಾಧ್ಯವಾದಷ್ಟು ಒಣದಾಗಿರಿರಿ.

ಕೈಗಳನ್ನು ಒಣಗಿಸುವ ಯಂತ್ರವನ್ನು ಬಳಸದಿರಿ

ಕೈಗಳನ್ನು ಒಣಗಿಸುವ ಯಂತ್ರವನ್ನು ಬಳಸದಿರಿ

ಕೈ ತೊಳೆದಾದ ಬಳಿಕ ಕೈಗಳನ್ನು ಒಣಗಿಸಲು ವಿವಿಧ ಯಂತ್ರಗಳು ಇಂದು ಲಭ್ಯವಿವೆ. ಇವುಗಳಿಂದ ಬಿಸಿಗಾಳಿ ಒತ್ತಡದಲ್ಲಿ ಚಿಮ್ಮುತ್ತಿರುವಾಗ ಕೈಗಳನ್ನು ಅಡ್ಡ ಹಿಡಿದರೆ ಶೀಘ್ರದಲ್ಲಿಯೇ ಕೈಗಳು ಒಣಗುತ್ತವೆ. ಆದರೆ ಚಿಮ್ಮುತ್ತಿರುವ ಗಾಳಿಯೇ ಕೈಗಳಲ್ಲಿರುವ ಕ್ರಿಮಿಗಳನ್ನು ಊದಿ ಇಡಿಯ ಕೋಣೆಯ ತುಂಬಾ ಹರಡುತ್ತದೆ. ಶೌಚಾಲಯಕ್ಕೆ ಬರುವ ಎಲ್ಲರೂ ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡಿರುತ್ತಾರೆ ಎಂದು ಹೇಳಲಾಗದು. ಈ ಯಂತ್ರದ ಬಳಿ ಬಂದಾಗ ಅನೈಚ್ಛಿಕವಾಗಿ ಕ್ರಿಮಿಗಳ ಧಾಳಿಗೆ ತುತ್ತಾಗಬಹುದು.

ಪ್ರತಿ ಬಾರಿ ಫ್ಲಶ್ ಮಾಡಲು ಟಿಶ್ಯೂ ಕಾಗದ ಉಪಯೋಗಿಸಿ

ಪ್ರತಿ ಬಾರಿ ಫ್ಲಶ್ ಮಾಡಲು ಟಿಶ್ಯೂ ಕಾಗದ ಉಪಯೋಗಿಸಿ

ಕಮೋಡಿನ ಫ್ಲಶ್ ಒತ್ತುವ ತಿರುಗಣೆಯನ್ನೂ ಜನರು ಸತತವಾಗಿ ಮುಟ್ಟುತ್ತಿರುವುದರಿಂದ ಇಲ್ಲಿಯೂ ಕ್ರಿಮಿಗಳು ಹೇರಳವಾಗಿರುತ್ತವೆ. ಈ ತಿರುಗಣೆಯನ್ನು ಅಥವಾ ಮೇಲಿನ ಗುಂಡಿಯನ್ನು ನೇರವಾಗಿ ಒತ್ತದೇ ಒಂದು ಟಿಶ್ಯೂ ಕಾಗದವವನ್ನು ಹರಡಿ ಅದರ ಮೇಲಿನಿಂದ ಒತ್ತಿ. ಬಳಿಕ ಈ ಕಾಗದವನ್ನು ಕಸದ ಬುಟ್ಟಿಗೆಸೆಯಿರಿ. ಇದಕ್ಕಾಗಿ ಜೇಬಿನಲ್ಲಿ ಅಥವಾ ಪರ್ಸ್ ನಲ್ಲಿ ಚಿಕ್ಕ ಟಿಶ್ಯೂ ಕಾಗದಗಳ ಪೊಟ್ಟಣವನ್ನು ಸದಾ ಇಟ್ಟುಕೊಂಡಿರಿ.

ಫ್ಲಶ್ ಮಾಡುವಾಗ ಮುಚ್ಚಳವನ್ನು ಮುಚ್ಚಿ

ಫ್ಲಶ್ ಮಾಡುವಾಗ ಮುಚ್ಚಳವನ್ನು ಮುಚ್ಚಿ

ಪಾಶ್ಚಾತ್ಯ ಕಮೋಡ್ ನಲ್ಲಿ ಫ್ಲಶ್ ಮಾಡುವಾಗ ಮುಚ್ಚಳವನ್ನು ಮುಚ್ಚಿ. ಏಕೆಂದರೆ ಫ್ಲಶ್ ಆಗುವ ಭರದಲ್ಲಿ ಮೇಲೆ ಚಿಮ್ಮುವ ನೀರಿನ ಇರಿಚಲಿನಿಂದಲೂ ಕ್ರಿಮಿಗಳು ಹರಡುತ್ತವೆ. ಮುಚ್ಚಳ ಮುಚ್ಚಿದಾಗ ಈ ಧಾರೆಗೆ ತಡೆ ಒಡ್ಡಿದಂತಾಗುತ್ತದೆ.

ಸಾಧ್ಯವಿದ್ದಲ್ಲಿ ಭಾರತೀಯ ಶೈಲಿಯ ಶೌಚಾಲಯವನ್ನೇ ಆಯ್ಕೆ ಮಾಡಿಕೊಳ್ಳಿ

ಸಾಧ್ಯವಿದ್ದಲ್ಲಿ ಭಾರತೀಯ ಶೈಲಿಯ ಶೌಚಾಲಯವನ್ನೇ ಆಯ್ಕೆ ಮಾಡಿಕೊಳ್ಳಿ

ಭಾರತೀಯ ಶೈಲಿ ಕೊಂಚ ಅನಾನುಕೂಲಕರ ಎಂದು ಕಂಡುಬಂದರೂ ಆಯುರ್ವೇದದ ಪ್ರಕಾರ ಶೌಚಕ್ಕೆ ಸೂಕ್ತವಾದ ಭಂಗಿಯಾಗಿದೆ. ಮುಖ್ಯವಾಗಿ ಈ ವ್ಯವಸ್ಥೆಯಲ್ಲಿ ಶೌಚಾಲಯದ ಯಾವುದೇ ಭಾಗ ದೇಹದ ಯಾವುದೇ ಭಾಗಕ್ಕೆ ಸಂಪರ್ಕವೇ ಆಗದಿರುವುದರಿಂದ ಆ ಮೂಲಕ ಆಗಬಹುದಾದ ಸೋಂಕಿನಿಂದ ತಪ್ಪಿದಂತಾಗುತ್ತದೆ.

ಪಾಶ್ಚಾತ್ಯ ಶೈಲಿಯ ಶೌಚಾಲಯ ಉಪಯೋಗಿಸುವಾಗ ಆದಷ್ಟು ನೇರ ಸಂಪರ್ಕ ತಪ್ಪಿಸಿ

ಪಾಶ್ಚಾತ್ಯ ಶೈಲಿಯ ಶೌಚಾಲಯ ಉಪಯೋಗಿಸುವಾಗ ಆದಷ್ಟು ನೇರ ಸಂಪರ್ಕ ತಪ್ಪಿಸಿ

ಪಾಶ್ಚಾತ್ಯ ಶೈಲಿಯ ಶೌಚಾಲಯ ಬಿಟ್ಟರೆ ಬೇರೆ ಯಾವುದೇ ವ್ಯವಸ್ಥೆ ಇಲ್ಲದಿದ್ದ ಪಕ್ಷದಲ್ಲಿ ಸಾಧ್ಯವಾದಷ್ಟು ಚರ್ಮವನ್ನು ಶೌಚಾಲಯದ ಕಮೋಡಿಗೆ ಸ್ಪರ್ಶಿಸುವುದನ್ನು ತಪ್ಪಿಸಿ. ಇಡಿಯ ಕಮೋಡ್ ಆವರಿಸಿದಂತೆ ಕುಳಿತುಕೊಳ್ಳುವ ಬದಲು ಕಡಿಮೆ ಸ್ಥಳ ಆಕ್ರಮಿಸಿ. ಬಳಿಕ ಸ್ವಚ್ಛ ಬಟ್ಟೆ ಅಥವಾ ಟಿಶ್ಯೂ ಕಾಗದದಿಂದ ಕಮೋಡ್‌ಗೆ ತಾಗಿದ್ದ ಭಾಗವನ್ನು ಸ್ವಚ್ಛಗೊಳಿಸಿ.

ಕುಳಿತುಕೊಳ್ಳುವ ಸ್ಥಳವನ್ನು ಟಿಶ್ಯೂ ಕಾಗದ ಉಪಯೋಗಿಸಿ ಸ್ವಚ್ಛಗೊಳಿಸಿ

ಕುಳಿತುಕೊಳ್ಳುವ ಸ್ಥಳವನ್ನು ಟಿಶ್ಯೂ ಕಾಗದ ಉಪಯೋಗಿಸಿ ಸ್ವಚ್ಛಗೊಳಿಸಿ

ಒಂದು ವೇಳೆ ಪಾಶ್ಚಾತ್ಯ ಶೈಲಿಯ ಶೌಚಾಲಯವನ್ನು ಉಪಯೋಗಿಸಲೇಬೇಕಾರೆ ಕುಳಿತುಕೊಳ್ಳುವ ಸ್ಥಳದಲ್ಲಿ ಸಾಕಷ್ಟು ಟಿಶ್ಯೂ ಕಾಗದಗಳನ್ನು ಉಪಯೋಗಿಸಿ ಚೆನ್ನಾಗಿ ಒರೆಸಿಯೇ ಕುಳಿತುಕೊಳ್ಳಿ. ಬಳಿಕ ಹೊಸ ಟಿಶ್ಯೂಗಳ ಕೆಲವು ಪದರಗಳನ್ನು ಕಮೋಡ್ ಮೇಲೆ ಹರಡಿ ಬಳಿಕ ಕುಳಿತುಕೊಳ್ಳಿ. ಇದರಿಂದ ಹಲವು ಸೋಂಕುಗಳಿಂದ ರಕ್ಷಣೆ ಪಡೆಯಬಹುದು.

English summary

How To Use A Public Toilet Safely

Nature's call is an urgency which we have to tend to. If we are outside our house then we have to go a public toilet, a place where various germs infest. You have to take certain precaution while using a public toilet. Have a look at some more necessary precautions that you must take while using a public toilet.
X
Desktop Bottom Promotion