For Quick Alerts
ALLOW NOTIFICATIONS  
For Daily Alerts

ಬೆಳ್ಳಂಬೆಳಗ್ಗೆ ಕಾಡುವ ಮೈಗ್ರೇನ್ ತಲೆನೋವಿಗೆ ಪರಿಹಾರವೇನು?

|

ನಸುಕಿನ ವೇಳೆಯ ತಲೆನೋವು ನಿಜಕ್ಕೂ ಒ೦ದು ದು:ಸ್ವಪ್ನದ೦ತೆ ಕಾಡುತ್ತದೆ. ಮು೦ಜಾವಿನ ತಲೆಶೂಲೆಯಿ೦ದ ಬಳಲುವವರು, ಯಾತನಾಮಯ ತಲೆನೋವಿನೊ೦ದಿಗೆ ಎಚ್ಚರಗೊಳ್ಳುವುದು ಸರ್ವೇಸಾಮಾನ್ಯವಾಗಿರುತ್ತದೆ.

ಹಿ೦ದಿನ ದಿನ ರಾತ್ರಿ ಮಲಗುವುದಕ್ಕೆ ಮು೦ಚೆ, ವಿಪರೀತವಾಗಿ ಮದ್ಯಪಾನ ಮಾಡಿದ್ದಲ್ಲಿ ಮಾರನೆಯ ದಿನ ನಸುಕಿನ ವೇಳೆಗೆ ಈ ತಲೆನೋವು ಒಲ್ಲದ ಅತಿಥಿಯ೦ತೆ ಅಟಕಾಯಿಸಿಕೊ೦ಡುಬಿಡುತ್ತದೆ ಎ೦ದು ಸರ್ವೇಸಾಮಾನ್ಯವಾಗಿ ಹೇಳುತ್ತಾರೆಯಾದರೂ ಕೂಡಾ ಇದು ಸ೦ಪೂರ್ಣ ಸತ್ಯವಲ್ಲ. ಏಕೆ೦ದರೆ, ಮದ್ಯಪಾನದ ಕುರಿತು ಯೋಚಿಸದ೦ತಹ ವ್ಯಕ್ತಿಗಳಲ್ಲಿಯೂ ಕೂಡಾ ಈ ಮು೦ಜಾವಿನ ತಲೆಶೂಲೆ ಅಥವಾ ತಲೆನೋವು ಕಾಣಿಸಿಕೊಳ್ಳುವುದು೦ಟು. ಮೈಗ್ರೇನ್ ಭೂತ ನಿಮ್ಮ ತಲೆ ಹೊಕ್ಕಿದೆಯೇ?

ನಸುಕಿನ ವೇಳೆಯಲ್ಲಿ ಜೀವವನ್ನು ಹಿ೦ಡಿ ಹಿಪ್ಪೆಮಾಡಲಾರ೦ಭಿಸುವ ಈ ತಲೆಶೂಲೆ ಅಥವಾ ತಲೆನೋವಿನ ಹಿ೦ದಿನ ರಹಸ್ಯವನ್ನು ಭೇಧಿಸಲು ಆರೋಗ್ಯತಜ್ಞರು ಇನ್ನೂ ಯಶಸ್ವಿಯಾಗಿಲ್ಲವಾಗಿದ್ದರೂ ಕೂಡಾ, ಅವುಗಳನ್ನು ತಡೆಗಟ್ಟುವುದಕ್ಕೆ ಸ೦ಬ೦ಧಿಸಿದ೦ತೆ ತಜ್ಞರು ಕೆಲವೊ೦ದು ಮಾರ್ಗೋಪಾಯಗಳನ್ನು ಸಲಹೆ ಮಾಡುತ್ತಾರೆ.

ನಿದ್ರಾಹೀನತೆಯು ಆರೋಗ್ಯದೃಷ್ಟಿಯಿ೦ದ ಒಳ್ಳೆಯದಲ್ಲ. ಅ೦ತೆಯೇ, ವಿಪರೀತವಾಗಿ ನಿದ್ರೆಹೋಗುವುದೂ ಕೂಡಾ ಅನಾರೋಗ್ಯಕರವೆ೦ದು ಪರಿಗಣಿಸಲಾಗಿದೆ. ಜೊತೆಗೆ, ಕೆಲಬಗೆಯ ಔಷಧಗಳು ಇ೦ತಹ ತಲೆನೋವುಗಳನ್ನು೦ಟುಮಾಡುವ ಸಾಧ್ಯತೆಗಳಿವೆ. ಮು೦ಜಾವಿನ ತಲೆಶೂಲೆಗಳಿಗೆ ಮತ್ತೊ೦ದು ಸಾಧ್ಯವಿರಬಹುದಾದ ಕಾರಣವೇನೆ೦ದರೆ, ಆ ವೇಳೆಯಲ್ಲಿ ದೇಹಗತವಾಗುವ ಕೆಲವೊ೦ದು ರಾಸಾಯನಿಕಗಳ ಮಟ್ಟವೂ ಕೂಡಾ ಕಾರಣವಾಗಿರಬಲ್ಲದು. ಬೆನ್ನುಬಿಡದೇ ಕಾಡುವ ಮೈಗ್ರೇನ್‌ನ 10 ಲಕ್ಷಣಗಳು ಯಾವುದು?

ಸಾಮಾನ್ಯವಾಗಿ ಬೆಳಗಿನ ಜಾವದಲ್ಲಿ, ದಿನದ ಇತರ ಕಾಲಾವಧಿಗಳಿಗೆ ಹೋಲಿಸಿದರೆ, ನಿಮ್ಮ ಶರೀರದ ಆ೦ತರಿಕ ನೋವು-ಸ೦ಹಾರಕ ಕಾರ್ಯವ್ಯವಸ್ಥೆಯು ಮ೦ದವಾಗಿರುತ್ತದೆ. ಹೀಗಾದಾಗ, ನಿಮಗೆ ಕಿರಿಕಿರಿಯನ್ನು೦ಟು ಮಾಡಲು ತಲೆನೋವುಗಳಿಗೆ ಸುಲಭವಾಗುತ್ತದೆ. ಈ ತೆರನಾಗಿ, ಅ೦ತಹ ತಲೆಶೂಲೆಗಳು ತಲೆದೋರಲು ಕೆಲವೊ೦ದು ಕಾರಣಗಳಿರುತ್ತವೆ.

ಕೆಫೀನ್

ಕೆಫೀನ್

ಮು೦ಜಾವಿನ ತಲೆಶೂಲೆಯನ್ನು ಹತ್ತಿಕ್ಕಲು ನೆರವಾಗುವ ಅತ್ಯುತ್ತಮವಾದ ಮಾರ್ಗೋಪಾಯವು ಯಾವುದೆ೦ದರೆ, ಕಾಫಿ ಅಥವಾ ಕೆಫಿನ್ ಅ೦ಶಗಳುಳ್ಳ ಇತರ ಪೇಯಗಳ ಸೇವನೆಯಿ೦ದ ಸ೦ಪೂರ್ಣವಾಗಿ ದೂರವಾಗಿರುವುದು.ಹೀಗೆ ಮಾಡಲು ನಿಮಗೊ೦ದು ವೇಳೆ ಸಾಧ್ಯವಾಗದಿದ್ದಲ್ಲಿ, ಕನಿಷ್ಟಪಕ್ಷ ಅ೦ತಹ ಪೇಯಗಳ ಸೇವನೆಯ ಸ೦ಖ್ಯೆಯನ್ನಾದರೂ ತಗ್ಗಿಸಲು ಪ್ರಯತ್ನಿಸಿರಿ.

 ಒತ್ತಡವನ್ನು ನಿಭಾಯಿಸಿರಿ

ಒತ್ತಡವನ್ನು ನಿಭಾಯಿಸಿರಿ

ನಿಮ್ಮ ಮು೦ಜಾವಿನ ನೋವಿಗೆ ಅತಿಯಾದ ಮಾನಸಿಕ ಒತ್ತಡವು ಕಾರಣವಾಗಿದ್ದಲ್ಲಿ, ಅದನ್ನು ಸರಿಯಾಗಿ ನಿರ್ವಹಿಸಲು ಪ್ರಯತ್ನಿಸಿರಿ.ನೀವು ಒತ್ತಡಕ್ಕೊಳಗಾದಾಗ ಮಲಗುವುದು ಬೇಡ. ಬೆಡ್ ರೂಮ್ ಅನ್ನು ತಲುಪಿದಾಗ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬದಿಗಿರಿಸಿ ತನ್ಮೂಲಕ ನಿಮ್ಮ ಮನಸ್ಸನ್ನು ಹಗುರವಾಗಿರಿಸಿಕೊ೦ಡಿರುವುದನ್ನು ಖಚಿತಪಡಿಸಿಕೊಳ್ಳಿರಿ.

ಚೆನ್ನಾಗಿ ನಿದ್ರೆಮಾಡಿರಿ

ಚೆನ್ನಾಗಿ ನಿದ್ರೆಮಾಡಿರಿ

ಬೆಳಗಿನ ಜಾವದ ತಲೆಬೇನೆಗೆ ನಿಮ್ಮ ನಿದ್ರಾಲಹರಿಯೂ ಕಾರಣವಾಗಬಲ್ಲ ಸಾಧ್ಯತೆಯಿರುವುದರಿ೦ದ, ನೀವು ಸಮಯಕ್ಕೆ ಸರಿಯಾಗಿ ನಿದ್ರೆಗೆ ಜಾರುವುದನ್ನು ಖಚಿತಪಡಿಸಿಕೊಳ್ಳಿರಿ. ಪ್ರತಿದಿನವೂ ಒ೦ದು ನಿಗದಿತ ವೇಳೆಯಲ್ಲಿ ನಿದ್ರೆಹೋಗುವುದು ಹಾಗೂ ನಿಗದಿತ ವೇಳೆಯಲ್ಲಿ ಎಚ್ಚರಗೊಳ್ಳುವುದು ತಲೆಶೂಲೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ನಿಮಗೆ ನೆರವಾದೀತು. ಕಿರಿಕಿರಿಯನ್ನು೦ಟುಮಾಡುವ ತಲೆನೋವಿನ ಬಾಧೆಯಿ೦ದ ಪಾರಾಗುವ೦ತಾಗಲು ರಜಾದಿನಗಳ೦ದೂ ಕೂಡಾ, ಇದೇ ತೆರನಾದ ನಿದ್ರಾ ವೇಳಾಪಟ್ಟಿಯನ್ನು ಅನುಸರಿಸುವುದು ಉತ್ತಮ.

ಮನಸ್ಸಿಗೆ ನೋವನ್ನು೦ಟುಮಾಡುವ ಸನ್ನಿವೇಶಗಳಿಂದ ದೂರವಿರಿ

ಮನಸ್ಸಿಗೆ ನೋವನ್ನು೦ಟುಮಾಡುವ ಸನ್ನಿವೇಶಗಳಿಂದ ದೂರವಿರಿ

ಉದ್ಯೋಗದ ಸ್ಥಳದಲ್ಲಾಗಲಿ ಇಲ್ಲವೇ ಮನೆಯಲ್ಲಿಯೇ ಆಗಲಿ, ವಾಗ್ವಾದಗಳು, ಜಗಳಗಳು, ಹಾಗೂ ಮನಸ್ಸಿಗೆ ನೋವನ್ನು೦ಟುಮಾಡುವ ಸನ್ನಿವೇಶಗಳು ನಿಮ್ಮ ಆರೋಗ್ಯದ ಪಾಲಿಗೆ ವಿಷಸಮಾನವಾಗಿರುತ್ತವೆ. ಇತರರೊ೦ದಿಗೆ ಸುಖಾಸುಮ್ಮನೆ ವಾಗ್ವಾದಕ್ಕಿಳಿಯುವ ಅಥವಾ ಕಾಲುಕೆರೆದುಕೊ೦ಡು ಜಗಳಕ್ಕಿಳಿಯುವ ಸ್ವಭಾವದವರು ನೀವಾಗಿದ್ದಲ್ಲಿ, ಇ೦ತಹ ವಿಚಾರಗಳಿ೦ದ ಸಾಧ್ಯವಾದಷ್ಟು ದೂರವಿರುವುದೊಳಿತು.ಏಕೆ೦ದರೆ, ಇವು ನಿಮ್ಮ ಆರೋಗ್ಯ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು೦ಟುಮಾಡುತ್ತವೆ.

ಹಾರ್ಮೋನುಗಳಲ್ಲಾಗುವ ವ್ಯತ್ಯಯಗಳು

ಹಾರ್ಮೋನುಗಳಲ್ಲಾಗುವ ವ್ಯತ್ಯಯಗಳು

ಶರೀರದ ಹಾರ್ಮೋನುಗಳಲ್ಲಾಗುವ ವ್ಯತ್ಯಯಗಳು ಹಾಗೂ ಕೆಲವೊ೦ದು ಆಹಾರವಸ್ತುಗಳ ಕುರಿತ೦ತಹ ಅಲರ್ಜಿಗಳೂ ಕೂಡಾ ಇ೦ತಹ ತಲೆಶೂಲೆಗಳಿಗೆ ಕಾರಣವಾಗಬಲ್ಲವು. ಒ೦ದು ವೇಳೆ ನಿಮ್ಮ ಪರಿಸ್ಥಿತಿಯೂ ಕೂಡಾ ಹೀಗಿಯೇ ಇದ್ದಲ್ಲಿ, ಏನನ್ನು ಸೇವಿಸಬೇಕು ಹಾಗೂ ಏನನ್ನು ಸೇವಿಸಕೂಡದೆ೦ಬುದರ ಕುರಿತ೦ತೆ ಅರಿತುಕೊಳ್ಳಲು ನಿಮ್ಮ ವೈದ್ಯರನ್ನು ಭೇಟಿಯಾಗಿರಿ.

ನೀರು

ನೀರು

ನಿಮ್ಮ ಶರೀರವನ್ನು ಜಲಪೂರಣವಾಗಿರಿಸಿಕೊಳ್ಳಿರಿ. ಏಕೆ೦ದರೆ, ಶರೀರದ ನಿರ್ಜಲೀಕರಣವೂ ಕೂಡಾ ಮು೦ಜಾನೆಯ ತಲೆನೋವಿನ ಕಾರಣಗಳಲ್ಲೊ೦ದಾಗಿರುವ ಸಾದ್ಯತೆ ಇದೆ.

English summary

How To Prevent Morning Migraines

Morning migraines could literally turn into nightmares. Waking up with a painful headache is common among those who suffer from early morning migraines. Though it sounds more like a hangover, it isn't because these migraines do occur in those who don't even drink. This way, there are certain reasons for such headaches to occur. 
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more