For Quick Alerts
ALLOW NOTIFICATIONS  
For Daily Alerts

ರಕ್ತಹೀನತೆಯ ಸಮಸ್ಯೆಯೇ..?ಇಲ್ಲಿದೆ ನೋಡಿ ಪರಿಹಾರ

By Super
|

ರಕ್ತ ಎಂದರೆ ನಮ್ಮ ಕಣ್ಣಿಗೆ ಕಟ್ಟುವುದು ಕೆಂಪು ಬಣ್ಣ. ಈ ಬಣ್ಣಕ್ಕೆ ಕಾರಣ ರಕ್ತದಲ್ಲಿರುವ ಹೀಮೋಗ್ಲೋಬಿನ್ ಎಂಬ ಕಬ್ಬಿಣ ಆಧಾರಿತ ಪ್ರೋಟೀನು. ರಕ್ತದ ಮುಖ್ಯ ಕೆಲಸವೆಂದರೆ ಶ್ವಾಸಕೋಶಗಳಿಂದ ಹೀರಲ್ಪಟ್ಟ ಆಮ್ಲಜನಕವನ್ನು ಕೊಂಡು ಹೃದಯದ ಒತ್ತಡದಿಂದ ನರಮಂಡಲದ ಮೂಲಕ ದೇಹದ ಪ್ರತಿ ಜೀವಕೋಶದ ಬಳಿ ಸಾಗಿ ಆಮ್ಲಜನಕ ನೀಡಿ ಅಲ್ಲಿಂದ ಇಂಗಾಲದ ಡೈ ಆಕ್ಸೈಡ್ ಅನ್ನು ಹಿಂದೆ ತಂದು ಶ್ವಾಸಕೋಶಕ್ಕೆ ಮರಳಿಸಿ ದೇಹದಿಂದ ಹೊರಹೋಗುವಂತೆ ಮಾಡುವುದು. ಆದ್ದರಿಂದ ರಕ್ತದಲ್ಲಿ ಹೀಮೋಗ್ಲೋಬಿನ್ ಪ್ರಮಾಣ ಆರೋಗ್ಯಕರ ಮಟ್ಟದಲ್ಲಿರುವುದು ಅತ್ಯಂತ ಅವಶ್ಯವಾಗಿದೆ. ರಕ್ತಹೀನತೆ ಸಮಸ್ಯೆ ಬೀಟ್ರೂಟ್ ನಿಂದ ದೂರ

ಸಾಮಾನ್ಯವಾಗಿ ನಮ್ಮ ಮೂಳೆಗಳ ತುದಿಭಾಗಗಳ ಒಳಗಿರುವ ಅಸ್ಥಿಮಜ್ಜೆ (bone marrow)ಯಲ್ಲಿ ಈ ಕೆಂಪು ರಕ್ತಕಣಗಳು ಉತ್ಪತ್ತಿಯಾಗುತ್ತವೆ. ಕೆಲವು ಕಾರಣಗಳಿಂದ ಸಾಕಷ್ಟು ಪ್ರಮಾಣದಲ್ಲಿ ಕೆಂಪು ರಕ್ತಕಣಗಳು ಉತ್ಪತ್ತಿಯಾಗದೇ ಇದ್ದರೆ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಶ್ವಾಸಕೋಶಗಳಿಂದ ಆಮ್ಲಜನಕ ಮತ್ತು ಶಕ್ತಿಯನ್ನು ದೇಹದ ವಿವಿಧ ಭಾಗಗಳಿಗೆ ತಲುಪಿಸಲು ವಿಫಲವಾಗುತ್ತದೆ. ಇದನ್ನೇ ರಕ್ತಹೀನತೆ ಎಂದು ಕರೆಯುತ್ತೇವೆ.

ತಜ್ಞರ ಪ್ರಕಾರ ಆರೋಗ್ಯವಂತ ಶರೀರಕ್ಕೆ ಪ್ರತಿದಿನ 8 ರಿಂದ 10 ಮಿಲಿಗ್ರಾಂ ಕಬ್ಬಿಣದ ಅಂಶ ಬೇಕು. ಆದರೆ ಹದಿಮೂರರಿಂದ ನಲವತ್ತೈದರ ನಡುವಣ ಮಹಿಳೆಯರಿಗೆ ದಿನಕ್ಕೆ ಇಪ್ಪತ್ತು ಮಿಲಿಗ್ರಾಂ ಕಬ್ಬಿಣದ ಅವಶ್ಯಕತೆಯಿದೆ. ಏಕೆಂದರೆ ತಿಂಗಳ ನಿಸರ್ಗನಿಯಮದ ಕ್ರಿಯೆಯಲ್ಲಿ ಹೆಚ್ಚಿನ ರಕ್ತ ಸೋರಿಹೋಗುವ ಕಾರಣ ಅವರಿಗೆ ಹೆಚ್ಚಿನ ಕಬ್ಬಿಣದ ಅವಶ್ಯಕತೆಯಿದೆ. ನಮ್ಮ ಆಹಾರದಲ್ಲಿ ಕಬ್ಬಿಣ ಇದ್ದರೂ ಅದನ್ನು ರಕ್ತ ಹೀರಿಕೊಳ್ಳುವಂತಾಗಲು ವಿಟಮಿನ್ ಸಿ ಬೇಕು. ಆದ್ದರಿಂದ ಕಬ್ಬಿಣ ಹೆಚ್ಚಿರುವ ಆಹಾರಗಳ ಜೊತೆಗೇ ಸಾಕಷ್ಟು ವಿಟಮಿನ್ ಸಿ ಇರುವ ಆಹಾರಗಳನ್ನೂ ಸೇವಿಸುವುದು ಅಗತ್ಯ. ರಕ್ತದಲ್ಲಿನ ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುವುದು ಹೇಗೆ?

ಈ ಅಗತ್ಯವನ್ನು ಕಿತ್ತಳೆ ಜಾತಿಯ ಹಣ್ಣುಗಳು ಪೂರೈಸುತ್ತವೆ. ರಕ್ತಹೀನತೆಯಿಂದ ದಿನದ ಚಟುವಟಿಕೆಯಲ್ಲಿ ಸುಸ್ತು, ತಲೆಸುತ್ತುವಿಕೆ ಮೊದಲಾದ ಪರಿಣಾಮಗಳು ಎದುರಾಗುತ್ತವೆ. ಅಲಕ್ಷ್ಯ ಹೆಚ್ಚಾದರೆ ಕೆಲವು ಪ್ರಮುಖ ಮತ್ತು ಸೂಕ್ಷ್ಮ ಅಂಗಗಳು ವಿಫಲಗೊಳ್ಳಬಹುದು. ಆದ್ದರಿಂದ ರಕ್ತಹೀನತೆಗೆ ಒಳಗಾಗದಿರಲು ಸೂಕ್ತ ಆಹಾರಗಳನ್ನು ಸೇವಿಸುತ್ತಿರುವುದು ಜಾಣರ ಲಕ್ಷಣ. ಜಾಣರಾಗಲು ಕೆಳಗಿನ ಸ್ಲೈಡ್ ಶೋ ನಿಮಗೆ ನೆರವು ನೀಡುತ್ತದೆ...

ಕಬ್ಬಿಣ ಹೆಚ್ಚಿರುವ ಆಹಾರ ಸೇವಿಸಿ

ಕಬ್ಬಿಣ ಹೆಚ್ಚಿರುವ ಆಹಾರ ಸೇವಿಸಿ

ರಕ್ತಹೀನತೆಗೆ ಹಸಿರು ಸೊಪ್ಪುಗಳು ಹೇಳಿ ಮಾಡಿಸಿದ ಆಹಾರವಾಗಿದೆ. ಅದರಲ್ಲೂ ಬಸಲೆ ಸೊಪ್ಪು ಅತ್ಯಂತ ಸೂಕ್ತವಾದ ಆಹಾರ. ಇನ್ನುಳಿದಂತೆ ಪಾಲಕ್, ಹರಿವೆ ಸೊಪ್ಪು, ಬೀನ್ಸ್, ಕೆಂಪು ಮಾಂಸ, ಒಣದ್ರಾಕ್ಷಿ, ಒಣ ಪೀಚ್ ಹಣ್ಣು, ಮೊಟ್ಟೆಯ ಹಳದಿ ಭಾಗ ಇತ್ಯಾದಿಗಳು ರಕ್ತಹೀನತೆಯನ್ನು ಸಾಕಷ್ಟು ಕಡಿಮೆಗೊಳಿಸುತ್ತವೆ.

ಫೋಲಿಕ್ ಆಮ್ಲ ನೀಡುವ ಆಹಾರ ಸೇವಿಸಿ

ಫೋಲಿಕ್ ಆಮ್ಲ ನೀಡುವ ಆಹಾರ ಸೇವಿಸಿ

ವಿಟಮಿನ್ B9 ಅಥವ ಫೋಲಿಕ್ ಆಮ್ಲ (Folic acid) ಕೆಂಪುರಕ್ತಕಣಗಳನ್ನು ಉತ್ಪಾದಿಸಲು ಅತ್ಯಂತ ಅಗತ್ಯವಾದ ಪೋಷಕಾಂಶವಾಗಿದೆ. ಈ ಆಮ್ಲ ಹೆಚ್ಚಿರುವ ಆಹಾರಗಳೆಂದರೆ ಬಸಲೆ ಸೊಪ್ಪು, ಪಾಲಕ್ ಸೊಪ್ಪು, ಕೇಲ್ ಎಲೆಗಳು, ಒಣಫಲಗಳು, ಬಟಾಣಿಗಳು ಮತ್ತು ವಿವಿಧ ದ್ವಿದಳಧಾನ್ಯಗಳು.

ವಿಟಮಿನ್ ಬಿ12 ಹೆಚ್ಚಿರುವ ಆಹಾರ ಸೇವಿಸಿ

ವಿಟಮಿನ್ ಬಿ12 ಹೆಚ್ಚಿರುವ ಆಹಾರ ಸೇವಿಸಿ

ರಕ್ತಕಣಗಳ ಉತ್ಪಾದನೆಗೆ ಅಗತ್ಯವಿರುವ ಇನ್ನೊಂದು ಪೋಷಕಾಂಶವೆಂದರೆ ವಿಟಮಿನ್ ಬಿ12. ಮೀನು, ಮೊಟ್ಟೆಗಳು, ಡೈರಿ ಉತ್ಪನ್ನಗಳು ಮತ್ತು ಗೋವಿನ ಯಕೃತ್ ಗಳಲ್ಲಿ ಈ ಪೋಷಕಾಶಗಳು ಉತ್ತಮ ಪ್ರಮಾಣದಲ್ಲಿರುತ್ತವೆ.

ದಪ್ಪ ಎಲೆಗಳ ತರಕಾರಿಗಳನ್ನು ಸೇವಿಸಿ

ದಪ್ಪ ಎಲೆಗಳ ತರಕಾರಿಗಳನ್ನು ಸೇವಿಸಿ

ದಪ್ಪ ಎಲೆಗಳ ತಕಾರಿಗಳನ್ನು ಸೇವಿಸುವುದರ ಅನುಕೂಲತೆಯೆಂದರೆ ಇವು ಹೊಟ್ಟೆಯನ್ನು ಸಾಕಷ್ಟು ತುಂಬಿಸುವ ಜೊತೆಗೇ ತೂಕ ಹೆಚ್ಚಳವಾಗದಂತೆ ನೋಡಿಕೊಳ್ಳುತ್ತದೆ ಹಾಗೂ ರಕ್ತದ ಕಣಗಳ ಉತ್ಪತ್ತಿಗೆ ಪೂರಕವಾದ ಕಬ್ಬಿಣ, ಪ್ರೋಟೀನುಗಳು, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಸಹಾ ದೊರಕುತ್ತವೆ. ಇದರಿಂದ ಒಟ್ಟಾರೆ ಆರೋಗ್ಯವೂ ಉತ್ತಮಗೊಳ್ಳುತ್ತದೆ.

 ಕಿತ್ತಳೆ ಹಣ್ಣುಗಳ ಸೇವನೆ ಹೆಚ್ಚಿಸಿ

ಕಿತ್ತಳೆ ಹಣ್ಣುಗಳ ಸೇವನೆ ಹೆಚ್ಚಿಸಿ

ಕಿತ್ತಳೆ ಜಾತಿಯ ಹಣ್ಣುಗಳು ಅಂದರೆ ಮೂಸಂಬಿ, ಕಿತ್ತಳೆ, ಲಿಂಬೆ, ಚಕ್ಕೋತ ಮೊದಲಾದ ಹಣ್ಣುಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳುವ ಜೊತೆಗೇ ಇತರ ಆಹಾರಗಳ ಮೂಲಕ ಸೇವಿಸಿದ್ದ ಕಬ್ಬಿಣವನ್ನು ರಕ್ತಕಣಗಳು ಪಡೆಯಲು ನೆರವಾಗುತ್ತದೆ.

ಬೀನ್ಸ್ (ಅವರೆ ಬೀಜ)

ಬೀನ್ಸ್ (ಅವರೆ ಬೀಜ)

ಕೆಂಪು ಮತ್ತು ಕಪ್ಪು ಬೀನ್ಸ್ ಬೀಜಗಳಲ್ಲಿ ಕಬ್ಬಿಣ, ವಿಟಮಿನ್ ಬಿ ಮತ್ತು ಸಿ ಉತ್ತಮ ಪ್ರಮಾಣದಲ್ಲಿರುವ ಕಾರಣ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುವ ಜೊತೆಗೇ ರಕ್ತದ ಉತ್ಪಾದನೆಗೂ ನೆರವಾಗುತ್ತದೆ.

ನಿತ್ಯದ ವ್ಯಾಯಮ ಹೆಚ್ಚಿಸಿ

ನಿತ್ಯದ ವ್ಯಾಯಮ ಹೆಚ್ಚಿಸಿ

ರಕ್ತಹೀನತೆ ಇದೆ ಎಂದು ಚಟುವಟಿಕೆ ಇಲ್ಲದೇ ಕುಳಿತುಕೊಳ್ಳುವುದು ತರವಲ್ಲ. ಏಕೆಂದರೆ ವ್ಯಾಯಾಮದ ಮೂಲಕ ರಕ್ತಪರಿಚಲನೆ ಅಗತ್ಯಪ್ರಮಾಣದಲ್ಲಿ ನಡೆಯುತ್ತದೆ ಹಾಗೂ ಹೊಸ ರಕ್ತಕಣಗಳನ್ನು ಉತ್ಪಾದಿಸಲು ಪ್ರಚೋದನೆ ನೀಡುತ್ತದೆ. ರಕ್ತಹೀನತೆ ಇದ್ದರೂ ಸಾಮರ್ಥ್ಯಕ್ಕೆ ತಕ್ಕ ವ್ಯಾಯಾಮ ಮತ್ತು ಚಟುವಟಿಕೆಗಳನ್ನು ಮಾಡುತ್ತಿರುವುದು ಉತ್ತಮವಾಗಿದೆ.

ಅನಾರೋಗ್ಯಕರ ಅಭ್ಯಾಸಗಳನ್ನು ತ್ಯಜಿಸಿ

ಅನಾರೋಗ್ಯಕರ ಅಭ್ಯಾಸಗಳನ್ನು ತ್ಯಜಿಸಿ

ಕೆಲವು ವ್ಯಸನಗಳು ರಕ್ತದ ಉತ್ಪಾದನೆಯ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಮದ್ಯಪಾನ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಮದ್ಯದ ಸೇವನೆ ರಕ್ತದ ಉತ್ಪಾದನೆಗೆ ತಡೆ ಒಡ್ಡುತ್ತದೆ. ಆದ್ದರಿಂದ ಅನಾರೋಗ್ಯಕರವಾದ ಯಾವುದೇ ವ್ಯಸನಗಳನ್ನು ಬಿಡುವತ್ತ ಮನವನ್ನು ಗಟ್ಟಿಗೊಳಿಸಿ.

English summary

How To Improve Your Blood

Do you know what makes your blood red? Well, it is a protein called hemoglobin. Your body needs enough iron to maintain hemoglobin levels. Your bone marrow produces blood cells but these cells generally die after a particular period of time. So, how to improve blood in body? Well, you can help your body produce more of these red blood cells by consuming certain foods.
Story first published: Monday, October 19, 2015, 19:56 [IST]
X
Desktop Bottom Promotion