For Quick Alerts
ALLOW NOTIFICATIONS  
For Daily Alerts

ತುಳಸಿ-ಗ್ರೀನ್ ಟೀಯ ಜೋಡಿ-ಮಾಡಲಿದೆ ಕಮಾಲಿನ ಮೋಡಿ

By manu
|

ನಾವೆಲ್ಲಾ ಚಹಾ ಕಾಫಿಗಳಿಗೆ ಎಷ್ಟೊಂದು ಒಗ್ಗಿ ಹೋಗಿದ್ದೇವೆಂದರೆ ಹಾಲು ಮತ್ತು ಸಕ್ಕರೆ ಇಲ್ಲದ ಚಹಾ ಮತ್ತು ಕಾಫಿ ಗಂಟಲಿನಲ್ಲಿ ಇಳಿಯುವುದೇ ಇಲ್ಲ. ರುಚಿಗಾಗಿ ಸೇರಿಸುವ ಹಾಲು ಮತ್ತು ಸಕ್ಕರೆ ರುಚಿಯ ಜೊತೆ ಅನಗತ್ಯವಾದ ಕೊಬ್ಬು ಮತ್ತು ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುತ್ತದೆ. ಇವು ಆರೋಗ್ಯವನ್ನು ವೃದ್ಧಿಸುವ ಬದಲು ಸ್ಥೂಲಕಾಯವನ್ನು ಹೆಚ್ಚಿಸುತ್ತವೆ.

ಇದಕ್ಕೆ ಉತ್ತಮ ಪರಿಹಾರವೆಂದರೆ ಹಾಲು ಸೇರಿಸಿದ ಕಪ್ಪು ಚಹಾದ ಸ್ಥಳದಲ್ಲಿ ಹಸಿರು ಟೀ (ಗ್ರೀನ್ ಟೀ) ಸೇವಿಸುವುದು. ಹಸಿರು ಟೀ ಸೇವನೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪೂರಕವಾಗಿದೆ. ಇದರಲ್ಲಿರುವ ಜೈವಿಕಕ್ರಿಯಾಶೀಲ ಸಂಯುಕ್ತಗಳು ಆರೋಗ್ಯವನ್ನು ಹಲವು ರೀತಿಯಲ್ಲಿ ಉತ್ತಮಗೊಳಿಸುತ್ತವೆ. ಒಂದು ವೇಳೆ ಇದಕ್ಕೆ ಕೆಲವು ತುಳಸಿ ಎಲೆಗಳನ್ನು ಸೇರಿಸಿದರೆ ಈ ಪ್ರಯೋಜನಗಳು ದುಪ್ಪಟ್ಟಿಗೂ ಮಿಗಿಲಾಗಿ ಹೆಚ್ಚುತ್ತವೆ. ತುಳಸಿ ಎಂಬ ಪ್ರಾಚೀನ ಆಂಟಿ ವೈರಸ್

ತುಳಸಿ ಎಲೆಗಳ ಪ್ರಯೋಜನಗಳ ಬಗ್ಗೆ ಆಯುರ್ವೇದದಲ್ಲಿ ಹಲವೆಡೆ ಉಲ್ಲೇಖಿಸಲಾಗಿದ್ದು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ವಿವಿಧ ಸಂಶೋಧನೆಗಳ ಮೂಲಕ ಇದೊಂದು ಅತ್ಯುತ್ತಮವಾದ adaptogenic (ಒತ್ತಡ ಮತ್ತು ಮಾನಸಿಕ ಉದ್ವೇಗದಿಂದ ಉತ್ಪತ್ತಿಯಾಗುವ ಹಾನಿಕಾರಕ ಕಣಗಳನ್ನು ತಡೆದು ಶರೀರವನ್ನು ರಕ್ಷಿಸುವ ಮತ್ತು ಸಾಮಾನ್ಯವಾದ ಜೀವರಾಸಾಯನಿಕ ಕ್ರಿಯೆಗಳು ನಡೆಯಲು ಸಹಕರಿಸುವ ನಿರಪಾಯಕಾರಿ ಔಷಧಿ) ಎಂದು ಕಂಡುಬಂದಿದೆ. ಆರೋಗ್ಯದ ವಿಷಯದಲ್ಲಿ ಗ್ರೀನ್ ಟೀ ಎಂದಿಗೂ ಎವರ್ ಗ್ರೀನ್!

ಈ ಗುಣದ ಕಾರಣ ಆಹಾರದ ಮೂಲಕ ಆಗಮಿಸಿದ ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಹಸಿರು ಟೀ ಯಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ತುಳಸಿಯ ಈ ಗುಣ ಮೇಳೈಸಿದಾಗ ಇದಕ್ಕಿಂತ ಆರೋಗ್ಯಕರ ಪೇಯ ಇನ್ನೊಂದು ಸಿಗಲಾರದು. ಈ ಎರಡೂ ಶಕ್ತಿಗಳಿರುವ ತುಳಸಿ ಹಸಿರು ಟೀ ಸೇವನೆ ಯಾವ ಯಾವ ತರಹದಲ್ಲಿ ಪ್ರಯೋಜನಕರವಾಗಿದೆ ಎಂದು ಪಟ್ಟಿ ಮಾಡಿದರೆ ಇದಕ್ಕೆ ಕೊನೆಯೇ ಇರಲಾರದು. ಇದಕ್ಕಾಗಿ ನಿಮ್ಮ ನಿತ್ಯದ ಹಾಲಿನ ಟೀ ಬದಲಿಗೆ ತುಳಸಿ ಎಲೆ ಬೆರೆಸಿದ ಹಸಿರು ಟೀ ಸೇವಿಸಿದರೆ ಸಾಕು. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ

ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ

ತುಳಸಿಯ ಆರೋಗ್ಯಕಾರಿ ಗುಣಗಳಲ್ಲಿ ಇದು ಪ್ರಮುಖವಾಗಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ತುಳಸಿ ಮತ್ತು ಹಸಿರು ಟೀ ಯಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳಿದ್ದು ಇವುಗಳು ಕಾನ್ಸರ್ ಕಾರಕ ಕಣಗಳನ್ನು(carcinogenic) ವಿರೋಧಿಸುವ ಗುಣ ಹೊಂದಿವೆ. ಇವು ಶರೀರದಲ್ಲಿ ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್ಯಾಡಿಕಲ್ ಎಂಬ ಕಣಗಳನ್ನು ತಡೆದು ಕ್ಯಾನ್ಸರ್ ಬರುವುದರಿಂದ ತಡೆಯುತ್ತದೆ. ಅದರಲ್ಲೂ ಇದು ಸ್ತನ ಕ್ಯಾನ್ಸರ್ ತಡೆಯಲು ಅತ್ಯುತ್ತಮವಾಗಿದೆ ಎಂದು ಸಂಶೋಧನೆಗಳಿಂದ ಖಚಿತವಾಗಿದೆ.

ತೂಕ ಕಡಿಮೆಗೊಳಿಸಲು ನೆರವಾಗುತ್ತದೆ

ತೂಕ ಕಡಿಮೆಗೊಳಿಸಲು ನೆರವಾಗುತ್ತದೆ

ತೂಕ ಕಡಿಮೆಗೊಳಿಸಲು ಕೊಬ್ಬು ಕರಗಬೇಕು. ತುಳಸಿ ಎಲೆಗಳನ್ನು ಬೆರೆಸಿದ ಗ್ರೀನ್ ಟೀಯಲ್ಲಿ ಹಲವಾರು ಪೋಷಕಾಂಶಗಳಿದ್ದು ಇವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಕರಗಿಸಕೊಳ್ಳಬಹುದು. ಪರಿಣಾಮವಾಗಿ ದೇಹದ ಹೆಚ್ಚುವರಿ ಕೊಬ್ಬು ನಿಧಾನವಾಗಿ ಕರಗುತ್ತಾ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಜೊತೆಗೇ ಜೀವರಾಸಾಯನಿಕ ಕ್ರಿಯೆಯೂ ಉತ್ತಮಗೊಳ್ಳುವ ಕಾರಣ ಆರೋಗ್ಯ ವೃದ್ಧಿಸುತ್ತದೆ.

ಒತ್ತಡವನ್ನು ಕಡಿಮೆಗೊಳಿಸುತ್ತದೆ

ಒತ್ತಡವನ್ನು ಕಡಿಮೆಗೊಳಿಸುತ್ತದೆ

ಹಸಿರು ಟೀ ಒತ್ತಡ ಕಡಿಮೆಗೊಳಿಸಲು ಅತ್ಯುತ್ತಮವಾದ ಪೇಯವಾಗಿದೆ. ಇದರಲ್ಲಿ ಕೆಲವು ತುಳಸಿ ಎಲೆಗಳನ್ನು ಸೇರಿಸುವ ಮೂಲಕ ಒತ್ತಡ ಕಡಿಮೆಗೊಳಿಸುವ ಶಕ್ತಿ ಇನ್ನಷ್ಟು ಹೆಚ್ಚುತ್ತದೆ. ತುಳಸಿಯಲ್ಲಿರುವ ಆರೋಗ್ಯಕರ ಕಣಗಳು ಮೆದುಳಿನ ಒತ್ತಡಕ್ಕೆ ಪ್ರಭಾವ ಬೀರುವ ಕಾರ್ಟಿಸೋಲ್ ಎಂಬ ಹಾರ್ಮೋನುಗಳನ್ನು ನಿಯಂತ್ರಿಸಿ ಒತ್ತಡವನ್ನು ನಿವಾರಿಸುತ್ತದೆ.

ದೃಷ್ಟಿ ದೋಷಗಳನ್ನು ಸರಿಪಡಿಸುತ್ತದೆ

ದೃಷ್ಟಿ ದೋಷಗಳನ್ನು ಸರಿಪಡಿಸುತ್ತದೆ

ತುಳಸಿ ಟೀ ಯಲ್ಲಿ ಉತ್ತಮ ಪ್ರಮಾಣದಲ್ಲಿ ವಿಟಮಿನ್ ಎ ಇರುವ ಕಾರಣ ದೃಷ್ಟಿಯನ್ನು ಉತ್ತಮಗೊಳಿಸಲು ನೆರವಾಗುತ್ತದೆ. ವಿಶೇಷವಾಗಿ ರಾತ್ರಿಯ ಕುರುಡುತನವನ್ನು ಸರಿಪಡಿಸಲು ತುಳಸಿ ಟೀ ಉತ್ತಮವಾದ ಮನೆ ಮದ್ದಾಗಿದೆ. ತುಳಸಿಯ ಪ್ರಯೋಜನಗಳಲ್ಲಿ ಇದೊಂದು ಅತ್ಯುತ್ತಮವಾದ ಪ್ರಯೋಜನವಾಗಿದೆ.

ಹೃದಯರಕ್ತನಾಳಗಳ ತೊಂದರೆಯನ್ನು ನಿವಾರಿಸುತ್ತದೆ

ಹೃದಯರಕ್ತನಾಳಗಳ ತೊಂದರೆಯನ್ನು ನಿವಾರಿಸುತ್ತದೆ

ತುಳಸಿ ಟೀ ಯಲ್ಲಿ ಉತ್ತಮ ಪ್ರಮಾಣದ ಮೆಗ್ನೀಶಿಯಂ ಇದೆ. ಇದು ರಕ್ತನಾಳಗಳನ್ನು ದೃಢಗೊಳಿಸುವ ಮೂಲಕ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೇ ರಕ್ತದಲ್ಲಿರುವ ಮತ್ತು ರಕ್ತನಾಳಗಳ ಒಳಗಿರುವ ಕೊಲೆಸ್ಟ್ರಾಲ್ ಕಣಗಳನ್ನು ಸಡಿಲಗೊಳಿಸಿ ರಕ್ತಪರಿಚಲನೆಯನ್ನು ಸುಗಮಗೊಳಿಸುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಇತರ ತೊಂದರೆಗಳನ್ನು ಕಡಿಮೆಯಾಗಿಸುತ್ತದೆ.

ಜ್ವರ ಕಡಿಮೆಗೊಳಿಸುತ್ತದೆ

ಜ್ವರ ಕಡಿಮೆಗೊಳಿಸುತ್ತದೆ

ತುಳಸಿ ಟೀ ಜ್ವರವನ್ನು ಇಳಿಸಲೂ ಸಕ್ಷಮವಾಗಿದೆ. ಇದರಲ್ಲಿ ಅತಿಸೂಕ್ಷ್ಮ ಜೀವಿಗಳ ಧಾಳಿಯನ್ನು ರಕ್ಷಿಸುವ ಗುಣವಿರುವ ಕಾರಣ ಚಿಕ್ಕಪುಟ್ಟ ಜ್ವರಗಳನ್ನು ಶೀಘ್ರವಾಗಿ ಕಡಿಮೆಗೊಳಿಸುತ್ತದೆ. ಅಲ್ಲದೇ ಮಲೇರಿಯಾ ಡೆಂಗ್ಯೂ ಮೊದಲಾದ ತೀವ್ರತರದ ಜ್ವರಗಳನ್ನೂ ಬೇಗನೇ ಕಡಿಮೆಯಾಗಿಸಲು ನೆರವಾಗುತ್ತದೆ.

ಉಸಿರಾಟದ ವ್ಯವಸ್ಥೆ ಉತ್ತಮಗೊಳ್ಳುತ್ತದೆ

ಉಸಿರಾಟದ ವ್ಯವಸ್ಥೆ ಉತ್ತಮಗೊಳ್ಳುತ್ತದೆ

ಶೀತ ಮತ್ತು ನೆಗಡಿಯಾದಾಗ ತುಳಸಿ ಸೇರಿಸಿದ ಟೀ ಕುಡಿಯುವುದು ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಅಸ್ತಮಾ ಮತ್ತು ಬ್ರಾಂಕೈಟಿಸ್ ಮೊದಲಾದ ಕಾಯಿಲೆಗಳಿಗೂ ತುಳಸಿ ರಾಮಬಾಣವಾಗಿದೆ. ತುಳಸಿ ಟೀಯಲ್ಲಿ ವೈರಸ್ ನಿರೋಧಕ, ಬ್ಯಾಕ್ಟೀರಿಯಾ ನಿರೋಧಕ ಮತ್ತು ಶಿಲೀಂಧ್ರ ನಿರೋಧಕ ಗುಣಗಳು ವೈರಸ್ಸು ಮತ್ತು ಬ್ಯಾಕ್ಟೀರಿಯಾಗಳ ಧಾಳಿಯಿಂದ ರಕ್ಷಿಸುತ್ತದೆ. ಇದು ಉಸಿರಾಟ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

English summary

How Basil Green Tea Benefts Your Health

A cup of tea can give you an energetic start. Also, you can hang out with your friends over cups of tea. But, have you ever thought how milk and sugar in your tea are hampering your health? So, if you’re addicted to tea, it is better to go for green tea. Here are some health benefits of basil green tea. Read on to know more-
X
Desktop Bottom Promotion