ಆ ದಿನಗಳ ಅತಿಯಾದ ರಕ್ತಸ್ರಾವಕ್ಕೆ ನೈಸರ್ಗಿಕ ಪರಿಹಾರಗಳು..

By: Su.Ra
Subscribe to Boldsky

ಮುಟ್ಟಿನ ದಿನಗಳು ಅಂದ್ರೆ ಅದು ನಿಜಕ್ಕೂ ಹೆಣ್ಣಿನ ಪಾಲಿಗೆ ನರಕಯಾತನೆಯ ದಿನಗಳು ಅಂತಲೇ ಹೆಚ್ಚಿನ ಮಹಿಳೆಯರು ಭಾವಿಸ್ತಾರೆ, ಅದ್ರಲ್ಲೂ ಯುವತಿಯರಲ್ಲಿ ಮತ್ತು ಮುಟ್ಟು ಸಾರಿಸುವ ದಿನಗಳು ಅಂದ್ರೆ ಮುಟ್ಟು ಕೊನೆಗೊಳ್ಳುವ ವಯಸ್ಕ ಮಹಿಳೆಯರಲ್ಲಿ ವಿಪರೀತ ನೋವು ಜೊತೆಗೆ ಅತಿಯಾದ ರಕ್ತಸ್ರಾವ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಎಷ್ಟು ಪ್ಯಾಡ್ ಚೇಂಜ್ ಮಾಡಿದ್ರೂ ಒದ್ದೆಒದ್ದೆಯಂತಹ ಅನುಭವ..ಕಿರಿಕಿರಿ. ಕೆಲವರಿಗೆ ಕೇವಲ ರಕ್ತಸ್ರಾವ ಮಾತ್ರ ಇರುವುದಿಲ್ಲ. ಕೆಟ್ಟ ವಾಸನೆ ಮತ್ತು ಮಾನಸಿಕ ಹಿಂಸೆಯ ಅನುಭವವಾಗ್ತಾ ಇರುತ್ತೆ. ಸರಿಯಾಗಿ ನಿದ್ದೆಯೂ ಬರುವುದಿಲ್ಲ. ಮುಟ್ಟಿನಲ್ಲಿ ಅತಿಯಾಗಿ ರಕ್ತಸ್ರಾವವಾಗುತ್ತಿದೆಯೇ?

ಇಂತಹ ಸಂದರ್ಭದಲ್ಲಿ ಮಹಿಳೆಯನ್ನು ತಾನು ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ ಅಂತ ಭಾವಿಸುವಷ್ಟು ಹೀನಾಯ ಮನಸ್ಥಿತಿಗೆ ತಲುಪಿಸಿಬಿಡುತ್ತೆ. ಹಾಗಂತ ಮನಸ್ಥಿತಿ ಹಾಳು ಮಾಡಿಕೊಂಡ್ರೆ ಯಾವ ಸಮಸ್ಯೆಗೂ ಪರಿಹಾರ ಸಿಗಲಾರದು. ನೀವು ಎಷ್ಟು ಮಾನಸಿಕವಾಗಿ ಸದೃಢರಾಗ್ತೀರೋ ಅಷ್ಟು ಆರೋಗ್ಯವಾಗಿರಲು ಸಾಧ್ಯ. ಜೊತೆಗೆ ಸರಿಯಾದ ಆಹಾರ ಕ್ರಮಗಳನ್ನು ಅನುಸರಿಸಿದ್ರೆ ಖಂಡಿತ ಸಮಸ್ಯೆಯನ್ನು ಸ್ವಲ್ಪಮಟ್ಟಿಗಾದ್ರೂ ಕಡಿಮೆ ಮಾಡಿಕೊಳ್ಳಬಹುದು. ಒಂದು ವೇಳೆ ಅತಿಯಾಗಿ ರಕ್ತಸ್ರಾವವಾಗ್ತಾ ಇದ್ದಲ್ಲಿ ನೀವು ಅದನ್ನು ಕೇವಲ ಪ್ಯಾಡ್ ಬದಲಾಯಿಸಿಕೊಂಡು, ನೋವು ಅನುಭವಿಸಿಕೊಂಡು ಸಹಿಸಿಕೊಂಡು ಇರೋದಕ್ಕಿಂತ ಸ್ವಲ್ಪ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಉತ್ತಮ. ಅತಿಯಾಗಿ ರಕ್ತಸ್ರಾವವಾಗುವ ಮುಟ್ಟಿನ ದಿನಗಳಲ್ಲಿ ಏನು ಮಾಡ್ಬೇಕು ಅನ್ನೋದಕ್ಕೆ ಈ ಸ್ಟೋರಿಯ ಮುಂದಿನ ಭಾಗ ಓದಲೇಬೇಕು.

ಬಿದಿರಿನ ಎಲೆಗಳು

ಬಿದಿರಿನ ಎಲೆಗಳು

ಪೇಟೆ ಮಂದಿಗೆ ಬಿದಿರು ಸಿಗೋದು ಅಪರೂಪವೇ. ಆದ್ರೆ ಹಳ್ಳಿಯವರಿಗೆ ಅದ್ರಲ್ಲೂ ಮಲೆನಾಡಿನವ್ರಿಗೆ ಬಿದಿರಿನ ಎಲೆಗಳು ಆರಾಮಗಿ ಕೈಗೆಟುಕುತ್ತೆ. ಒಂದು ವೇಳೆ ನೀವೇನಾದ್ರೂ ಋತುಚಕ್ರದ ಸಂದರ್ಭದಲ್ಲಿ ಅತಿಯಾಗಿ ರಕ್ತಸ್ರಾವವಾಗ್ತಾ ಇದ್ದಲ್ಲಿ ಒಂದಷ್ಟು ಬಿದಿರಿನ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಅದ್ರ ಡಿಕಾಕ್ಷನ್ ತಯಾರಿಸಿಕೊಂಡು ಒಂದೆರಡು ಬಾರಿ ಕುಡಿಯಿರಿ. ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ಪ್ರಸಿದ್ಧವಾದ ಮನೆಮದ್ದಿದು..

ಶುಂಠಿ

ಶುಂಠಿ

ಒಂದೆರಡು ಶುಂಠಿಯ ತುಂಡನ್ನು ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೆಲವು ನಿಮಿಷಗಳವರೆಗೆ ಹಾಗೆಯೇ ಕಾಯಿಸಿದ ನಂತ್ರ ಅದ್ರ ಡಿಕಾಕ್ಷನ್ ತೆಗೆದುಕೊಳ್ಳಿ ಆರಿಸಿ ಕುಡಿಯಿರಿ. ಹಾಗೆಯೇ ಕುಡಿಯಲು ಸಾಧ್ಯವಾಗಿಲ್ಲ ಅಂದ್ರೆ ಜೇನುತುಪ್ಪ ಇಲ್ಲ ಸಕ್ಕರೆ ಅಥ್ವಾ ಬೆಲ್ಲ ಸೇರಿಸಿಯೂ ಸೇವಿಸ್ಬಹುದು. ಆ ದಿನಗಳಲ್ಲಿ ನಿಮ್ಮನ್ನ ಅತಿಯಾಗಿ ಕಾಡುವ ರಕ್ತಸ್ರಾವ ಸಮಸ್ಯೆಗೆ ಇದು ಕೂಡ ಉತ್ತಮ ರೀತಿಯಲ್ಲಿ ಪರಿಹಾರ ನೀಡಬಲ್ಲದು.

ಚಕ್ಕೆ

ಚಕ್ಕೆ

ಒಂದೆರಡು ಚಕ್ಕೆಯನ್ನು ಸ್ವಲ್ಪ ಕುಟ್ಟಿ ಪುಡಿಮಾಡಿಕೊಳ್ಳಿ, ಅದನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ.. ಡಿಕಾಕ್ಷನ್ ತಯಾರಿಸಿ ಕಾದಾರಿದ ನಂತರ ದಿನಕ್ಕೆ ಎರಡು ಬಾರಿ ಸೇವಿಸ್ಬೇಕು. ಬೇಕಿದ್ರೆ ಲಿಂಬೆರಸ ಮತ್ತು ಕಲ್ಲುಸಕ್ಕರೆ ಸೇರಿಸಿ ಕುಡಿಯಿರಿ,.

ಕೊತ್ತಂಬರಿ ಬೀಜ

ಕೊತ್ತಂಬರಿ ಬೀಜ

20 ಗ್ರಾಂ ಬೀಜವನ್ನು 200ಎಮ್ ಎಲ್ ನಷ್ಟು ನೀರಿನಲ್ಲಿ ಹಾಕಿ ಆ ನೀರು 100 ಎಮ್ ಎಲ್ ಗೆ ಬರುವಷ್ಟು ಕುದಿಸಿ ಡಿಕಾಕ್ಷನ್ ತಯಾರಿಸಿಕೊಂಡು ಕುಡಿಯೋದ್ರಿಂದ ಕೂಡ ಸಮಸ್ಯೆ ನಿವಾರಿಸಿಕೊಳ್ಳಬಹುದು.

ಬಾಳೆಹೂವು

ಬಾಳೆಹೂವು

ಬಾಳೆಹೂವನ್ನು ಬೇಯಿಸಿ ಮೊಸರು ಸೇರಿಸಿ ಸೇವಿಸೋದ್ರಿಂದ ಪ್ರೊಜೆಸ್ಟ್ರಾನ್ ಲೆವೆಲ್ ಅಧಿಕವಾಗಿ, ರಕ್ತಸ್ರಾವ ನಿಲ್ಲುವಲ್ಲಿ ಸಹಾಯ ಮಾಡಲಿದೆ.

ಅಲೋವೆರಾ ಅಥವಾ ಲೋಳೆಸರ

ಅಲೋವೆರಾ ಅಥವಾ ಲೋಳೆಸರ

ಚರ್ಮದ ಆರೋಗ್ಯಕ್ಕೆ ಅಲವೀರಾ ಸಹಕಾರಿ ಅನ್ನೋದು ಹೆಚ್ಚಿನವ್ರಿಗೆ ಗೊತ್ತು. ಆದ್ರೆ ಅಲೋವೆರಾ ಜ್ಯೂಸ್ ಸೇವಿಸೋದ್ರಿಂದ ಮುಟ್ಟಿನ ದಿನಗಳಲ್ಲಾಗುವ ಅಧಿಕ ರಕ್ತಸ್ರಾವವನ್ನು ತಡೆಗಟ್ಟಿಕೊಳ್ಳಬಹುದು ಅನ್ನುವ ಸತ್ಯ ಹೆಚ್ಚಿನ ಮಹಿಳೆಯರಿಗೆ ತಿಳಿದಿಲ್ಲ. ಪ್ರತಿದಿನ ಸ್ವಲ್ಪವೇ ಸ್ವಲ್ಪ ಅಲವೀರಾ ಜಲ್‌ನಿಂದ ಜ್ಯೂಸ್ ತಯಾರಿಸಿಕೊಂಡು ಸೇವಿಸಿದ್ರೆ ಮುಟ್ಟಿನ ದಿನಗಳನ್ನು ಆರಾಮದಾಯಕವಾಗಿ ಕಳೀಬಹುದು.

ಮೂಸಂಬಿ ಜ್ಯೂಸ್

ಮೂಸಂಬಿ ಜ್ಯೂಸ್

ಫ್ರೆಶ್ ಜ್ಯೂಸ್ ಯಾವಾಗಲೂ ಕೂಡ ಆರೋಗ್ಯಕ್ಕೆ ಉತ್ತಮವೇ. ಮೂಸಂಬಿರಸಕ್ಕೆ ಎರಡು ಟೇಬಲ್ ಸ್ಪೂನ್ ಲಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ, ದಿನಕ್ಕೆ ನಾಲ್ಕರಿಂದ ಐದು ಬಾರಿ ಸೇವಿಸಿ. ಮೂಸಂಬಿ ರಸದಲ್ಲಿ ನಿಮ್ಗೆ ವಿಟಮಿನ್ ಸಿ ಲಭ್ಯವಾಗುತ್ತೆ ಮತ್ತು ಅದಕ್ಕೆ ಸೇರಿಸಿದ ಲಿಂಬೆಯ ರಸ ಹೆಚ್ಚಿನ ರಕ್ತಸ್ರಾವವವನ್ನು ತಡೆಗಟ್ಟಿ ಆರಾಮದಾಯಕವಾಗಿರುವಂತೆ ಮಾಡುತ್ತೆ.

ಜೀರಿಗೆ

ಜೀರಿಗೆ

ಎರಡು ಟೇಬಲ್ ಸ್ಪೂನ್ ಜೀರಿಗೆಯನ್ನು ನೀರಿಗೆ ಸೇರಿಸಿ ಮತ್ತು ಚೆನ್ನಾಗಿ ಕುದಿಸಿ. ಹಳದಿ ಬಣ್ಣಕ್ಕೆ ತಿರುಗಿದ ನಂತ್ರ ಬೇಕು ಅನ್ನಿಸಿದರೆ ಸಕ್ಕರೆ ಮತ್ತು ಸ್ವಲ್ಪ ಹಾಲು ಸೇರಿಸಿ ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ,. ನಿಮ್ಮ ಸಮಸ್ಯೆ ಖಂಡಿತ ನಿವಾರಣೆಯಾಗುತ್ತೆ.

ಬ್ರುಕೋಲಿ

ಬ್ರುಕೋಲಿ

ಫ್ರೆಶ್ ಬ್ರಕೋಲಿಯನ್ನು ಮಿಕ್ಸಿ ಮಾಡಿಕೊಂಡು ಜ್ಯೂಸ್ ತಯಾರಿಸಿಕೊಳ್ಳಿ. ಜೊತೆಗೆ ಸೇಬುಹಣ್ಣನ್ನು ಕೂಡ ಜ್ಯೂಸ್ ಮಾಡಿಕೊಂಡು ಎರಡನ್ನು ಮಿಶ್ರಣ ಮಾಡಿ ಕುಡಿಯಿರಿ. ಇದು ಅಷ್ಟು ಟೇಸ್ಟಿ ಅನ್ನಿಸದೇ ಇದ್ರೂ ಆರೋಗ್ಯದ ದೃಷ್ಟಿಯಿಂದ ತುಂಬಾ ಹಿತವಾಗಿರುತ್ತೆ.

ಮೂಲಂಗಿ

ಮೂಲಂಗಿ

ಸ್ವಲ್ಪ ನೀರು ಸೇರಿಸಿ ಎರಡರಿಂದ ಮೂರು ಮೂಲಂಗಿಯನ್ನು ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ಒಂದು ಗ್ಲಾಸ್ ಮಜ್ಜಿಗೆಯನ್ನು ಸೇರಿಸಿ. ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿ. ಅತಿಯಾದ ರಕ್ತಸ್ರಾವವನ್ನು ಕಂಟ್ರೋಲ್ ಮಾಡಿ ಆರಾಮದಾಯಕ ಫೀಲಿಂಗ್ ನೀಡಲು ಇದು ನೆರವಾಗುತ್ತೆ.

ಸಿಹಿಗುಂಬಳ ಇಲ್ಲವೇ ಚೀನಿಕಾಯಿ

ಸಿಹಿಗುಂಬಳ ಇಲ್ಲವೇ ಚೀನಿಕಾಯಿ

ನೈಸರ್ಗಿಕವಾಗಿ ದೊರಕುವ ಮನೆಮದ್ದುಗಳಲ್ಲಿ ಇದೂ ಕೂಡ ಒಂದು. ಸಿಹಿಗುಂಬಳ ಅಥ್ವಾ ಹಳದಿ ಬಣ್ಣದಲ್ಲಿ ಬರುವ ಚೀನಿಕಾಯಿಯ ತಿರುಳನ್ನು ತೆಗೆದುಕೊಂಡು ರೂಮ್ ಟೆಂಪರೇಚರ್ ನಲ್ಲಿ ಸ್ವಲ್ಪ ಒಣಗಲು ಬಿಡಿ. ನಂತ್ರ ಅದನ್ನು ಮಿಕ್ಸಿ ಮಾಡ್ಕೊಂಡು ಸಕ್ಕರೆ ಮತ್ತು ಹಾಲು ಇಲ್ಲವೇ ಸಕ್ಕರೆ ಮತ್ತು ಮೊಸರು ಸೇರಿಸಿ ಪ್ರತಿದಿನ ಸೇವಿಸೋದ್ರಿಂದ ಋತುಚಕ್ರದ ಸಂದರ್ಬದಲ್ಲಿ ಅತಿಯಾದ ರಕ್ತಸ್ರಾವದಿಂದ ಬಳಲುವುದನ್ನು ತಪ್ಪಿಸಿಕೊಳ್ಳಬಹುದು.

ಅಡಿಕೆ

ಅಡಿಕೆ

ನಿಮ್ಗೆ ನಂಬಿಕೆ ಬರಲಿಕ್ಕಿಲ್ಲ. ಆದ್ರೆ ಇದು ಸತ್ಯ. ಒಂದೆರಡು ಒಣ ಅಡಿಕೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದ್ರ ಡಿಕಾಕ್ಷನ್ ಸೇವಿಸಿ..ನಂತ್ರ ನೀರನ್ನು ತಣಿಸಿ ದಿನಕ್ಕೆ ಎರಡು ಬಾರಿ ಸೇವಿಸಿ. ಇದು ಕೂಡ ರಕ್ತಸ್ರಾವ ಕಡಿಮೆಗೊಳಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಹೀಗೆ ಹೆಚ್ಚಿನ ಔಷಧಿಗಳು ಮನೆಯಲ್ಲೇ ಲಭ್ಯವಿರುತ್ತೆ. ಆದ್ರೆ ನಮಗದು ತಿಳಿದಿರುವುದೇ ಇಲ್ಲ. ಸಮಸ್ಯೆಯನ್ನು ಸಮಸ್ಯೆಯಾಗಿಯೇ ಪರಿಗಣಿಸಿ ನೋವು ತಿನ್ನುವುದಷ್ಟನ್ನೇ ಕಲಿತಿರುತ್ತೇವೆ. ಆದ್ರೆ ಸುಲಭದಲ್ಲಿ ಸಿಗುವ ಪರಿಹಾರದ ಕಡೆಗೆ ಗಮನ ಹರಿಸುವುದೇ ಇಲ್ಲ. ಒಬ್ಬೊಬ್ಬ ಮಹಿಳೆಯ ದೇಹ ಒಂದೊಂದು ರೀತಿ ಇರುತ್ತೆ. ಈ ಮೇಲಿನ ಎಲ್ಲಾ ಔಷಧಿಗಳು ಎಲ್ಲರಿಗೂ ಆಗಬೇಕೆಂದೇನೂ ಇಲ್ಲ. ಕೆಲವರಲ್ಲಿ ಚೆನ್ನಾಗಿ ಕೆಲಸ ಮಾಡ್ಬಹುದು. ಇನ್ನು ಕೆಲವರಿಗೆ ಪರಿಣಾಮ ಬೀರದೇ ಇರಬಹುದು. ಸಹಿಸಲು ಅಸಾಧ್ಯವಾದ ನೋವಿದ್ದು ಅತಿಯಾಗಿ ರಕ್ತಸ್ರಾವವಾಗ್ತಾ ಇದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಒಮ್ಮೆ ಪರಿಶೀಲಿಸಿಕೊಳ್ಳೋದು ಉತ್ತಮ.

English summary

Home Remedies for Heavy Menstrual Bleeding

Heavy menstrual bleeding, medically known as menorrhagia, is characterized by abnormally heavy or prolonged periods.Some of the most common symptoms and signs include menstrual bleeding that lasts longer than 7 days, the need to change your sanitary pad or tampon every 2 to 3 hours repeatedly, menstrual flow with large blood clots, severe and continuous cramping in the lower abdomen during a period, fatigue, shortness of breath, nausea, headaches, mood swings and extreme weakness.
Story first published: Wednesday, December 9, 2015, 12:05 [IST]
Subscribe Newsletter