For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಾಂತಿಗೆ, ಅಡುಗೆ ಮನೆಯ ಉತ್ಪನ್ನಗಳೇ ಸಾಕು

By Manu
|

ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ, ಎಷ್ಟೇ ಹಣ ವ್ಯಯಿಸಲು ಕೂಡ ನಾವು ಸಿದ್ಧರಾಗಿರುತ್ತೇವೆ. ಹಾಗಾಗಿ ಜನರಲ್ಲಿ ಹೆಚ್ಚುತ್ತಿರುವ ಸೌಂದರ್ಯ ಪ್ರಜ್ಞೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಕಂಪೆನಿಗಳು ಅವರ ಬೇಡಿಕೆಗಳನ್ನು ಪೂರೈಸಲು ಮಾರುಕಟ್ಟೆಯಲ್ಲಿ ತರಹೇವಾರಿ ಉತ್ಪನ್ನವನ್ನು ಬಿಟ್ಟು ಅಥವಾ ಟಿವಿಗಳಲ್ಲಿ ಒಂದೇ ರೀತಿಯ ಜಾಹೀರಾತುಗಳನ್ನು ಪದೇ ಪದೇ ತೋರಿಸಿ ಜನರನ್ನು ಆದಷ್ಟು ಮರಳು ಮಾಡಿ ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮಳೆಗಾಲದಲ್ಲಿ ಚರ್ಮದ ಸಮಸ್ಯೆಗಳಿಗೆ ಫಲಪ್ರದ ಸಲಹೆ

ಆದರೆ ಇಂತಹ ಉತ್ಪನ್ನಗಳಲ್ಲಿ ರಾಸಾಯನಿಕಗಳು ಅಧಿಕವಾಗಿದ್ದು, ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ಅದಕ್ಕಾಗಿ ನಾವು ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಸ್ವಾಭಾವಿಕ ಪರಿಹಾರಗಳ ಕಡೆಗೆ ಗಮನ ಹರಿಸಬೇಕಾದ ಕಾಲ ಬಂದಿದೆ. ಅದ್ದರಿಂದ ರಾಸಾಯನಿಕ ವಸ್ತುಗಳನ್ನು ಬಳಸಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ಮುಖಕ್ಕೆ ಹಚ್ಚುವುದನ್ನು ತಪ್ಪಿಸಿ ನೈಸರ್ಗಿಕವಾಗಿ ದೊರೆಯುವ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ವಸ್ತುಗಳನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ.

/img/300x100/2015/06/09-1433825384-cover2.jpg

ಹೌದು ದುಬಾರಿ ಕ್ರೀಮ್, ಲೋಶನ್, ಫೇಸ್ ಪ್ಯಾಕ್ ಬಳಸಲು ಸಾಧ್ಯವಾಗದ ಜನ ಸಾಮಾನ್ಯರಿಗೆ ಸುಲಭ ರೀತಿಯಲ್ಲಿ ಚರ್ಮ ರಕ್ಷಣೆ ಮಾಡಿಕೊಳ್ಳಬಹುದಾದ ವಿಧಾನ ಇಲ್ಲಿದೆ. ಮನೆಯ ಅಡುಗೆಮನೆಯಲ್ಲಿರುವ ಕೆಲವೊಂದು ಉತ್ಪನ್ನಗಳ ಸಹಾಯದಿಂದ ಮುಖದ ತ್ವಚೆಯನ್ನು ಮೃದುವಾಗಿ ಹೊಳೆಯುವಂತೆ ಮಾಡಿಕೊಳ್ಳಬಹುದು. ಯಾವುದೇ ಅಡ್ಡ ಪರಿಣಾಮದ ಭಯವಿಲ್ಲದೆ ನೈಸರ್ಗಿಕ ವಿಧಾನ ಬಳಕೆಯಿಂದ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಒಂದಿಷ್ಟು ಸಮಯ ವ್ಯಯಿಸಿದರೆ ಸಾಕು. ಬನ್ನಿ ತ್ವಚೆಯ ಅಂದವನ್ನು ಹೆಚ್ಚಿಸುವ ಬಗೆ ಹೇಗೆ ಎಂಬುದನ್ನು ನೋಡೋಣ..

ತ್ವಚೆಯ ಸುಕ್ಕುಗಳನ್ನು ನಿವಾರಿಸಲು ಅರಿಶಿನ ಪುಡಿ


ಸುಕ್ಕುಗಳನ್ನು ನಿವಾರಿಸುವುದರಲ್ಲಿ ಸಹ ಅರಿಶಿನ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸ್ವಲ್ಪ ಅಕ್ಕಿಪುಡಿಯ ಜೊತೆಗೆ ಒಂದು ಚಮಚ ಅರಿಶಿನ ಪುಡಿಯನ್ನು ಬೆರೆಸಿಕೊಳ್ಳಿ. ಇದಕ್ಕೆ ಒಂದು ಚಮಚ ಟೊಮೇಟೊ ರಸ ಹಾಗು ಒಂದು ಚಮಚ ಹಾಲನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖದಲ್ಲಿರುವ ಸುಕ್ಕುಗಳ ಮೇಲೆ ಲೇಪಿಸಿ. ನಂತರ ಇದನ್ನು 20 ನಿಮಿಷಗಳ ಕಾಲ ಬಿಟ್ಟು, ಬಿಸಿ ನೀರಿನಿಂದ ತೊಳೆಯಿರಿ. ಈ ಪರಿಹಾರವನ್ನು ವಾರಕ್ಕೊಮ್ಮೆ ಮಾಡಿ. ಆಗ ನೋಡಿ, ನಿಮ್ಮ ಸುಕ್ಕಿಗೆ ಪರಿಹಾರ ದೊರೆಯಿತೆ ಇಲ್ಲವೇ, ಎಂದು. ಅಲ್ಲದೆ ಅರಿಶಿನದಲ್ಲಿರುವ ಆಂಟಿ-ಸೆಪ್ಟಿಕ್ ಮತ್ತು ಆಂಟಿ-ಬ್ಯಾಕ್ಟೀರಿಯಾ ಗುಣಗಳು ಹೆಚ್ಚಾಗಿರುವುದರಿಂದ ಇದನ್ನು ಮೊಡವೆಗಳ ನಿವಾರಣೆಗಾಗಿ ಫೇಸ್‌ ಪ್ಯಾಕ್‌ನಂತೆ ಕೂಡ ಬಳಸಬಹುದು. ಸುಂದರವಾಗಿ ಕಾಣಲು ಯದ್ವಾ-ತದ್ವಾ ಕ್ರೀಮ್‌‌ ಬಳಸಬೇಡಿ!

ತ್ವಚೆಯ ಮೇಲಿನ ಕಲೆಯನ್ನು ನಿವಾರಿಸಲು ಅಕ್ಕಿ ನೀರು
ತ್ವಚೆಯ ಮೇಲಿನ ಕಲೆಗಳನ್ನು ಅಕ್ಕಿಯ ನೀರಿನೊ೦ದಿಗೆ ತಿಳಿಗೊಳಿಸಿಕೊಳ್ಳಿರಿ. ನಿಮ್ಮ ಮುಖವನ್ನು ಅಕ್ಕಿನೀರಿನಿ೦ದ ತೊಳೆದುಕೊಳ್ಳುವುದಕ್ಕೆ ಮೊದಲು ಅದಕ್ಕೆ ಚಿಟಿಕೆಯಷ್ಟು ಅರಿಶಿನವನ್ನು ಸೇರಿಸಿಕೊಳ್ಳಿರಿ. ಇದರಿ೦ದ ಅಕ್ಕಿ ನೀರಿನಿ೦ದಾಗಬಹುದಾದ ಪ್ರಯೋಜನವು ಮತ್ತಷ್ಟು ಹೆಚ್ಚಾಗುತ್ತದೆ. ಅಷ್ಟೇ ಏಕೆ ಅಕ್ಕಿ ನೀರನ್ನು ಒ೦ದು ಫೇಸ್ ವಾಶ್‌ನ ರೂಪದಲ್ಲಿ ನಿಯಮಿತವಾಗಿ ಬಳಸಿದ್ದೇ ಆದಲ್ಲಿ, ಅದು ಮೊಡವೆಗಳ ನಿವಾರಣೆಗೆ ನೆರವಾಗುತ್ತದೆ. ಆದರೂ ಸಹ, ಅಕ್ಕಿ ನೀರಿನ ನಿಯಮಿತ ಬಳಕೆಯು ನಿಮ್ಮ ತ್ವಚೆಯನ್ನು ಮಾತ್ರ ಶುಷ್ಕಗೊಳಿಸಿಬಿಡುತ್ತದೆ.

ಅಡುಗೆ ಮನೆಯಲ್ಲಿರುವ ಅಡುಗೆ ಸೋಡಾ
ಅಚ್ಚ ಬಿಳುಪಿನ, ಗೌರವರ್ಣದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ನೀವೇನೂ ದುಬಾರಿಯಾದ ತ್ವಚೆಯ ಆರೈಕೆಗೆ ಸ೦ಬ೦ಧಿಸಿದ೦ತಹ ಉತ್ಪನ್ನಗಳನ್ನೇನೂ ಖರೀದಿಸಬೇಕಾಗಿಲ್ಲ. ಇದಕ್ಕಾಗಿ ನಿಮಗೆ ನಿಮ್ಮ ಅಡುಗೆಕೋಣೆಯಲ್ಲಿರಬಹುದಾದ ಒ೦ದು ಟೀ ಚಮಚದಷ್ಟು ಅಡುಗೆಸೋಡಾವು ಸಾಕಾಗುತ್ತದೆ. ಸಾಮಾನ್ಯವಾಗಿ ತ್ವಚೆಯ ಮೇಲೆ ಕಂಡುಬರುವ ಕಪ್ಪು ಕಲೆಗಳ ನಿವಾರಣೆಗಾಗಿ ಒ೦ದು ಟೀ ಚಮಚದಷ್ಟು ಅಡುಗೆ ಸೋಡಾಗೆ ಒ೦ದು ಟೀ ಚಮಚದಷ್ಟು ಲಿ೦ಬೆಯ ರಸ ಹಾಗೂ ಎರಡು ಟೀ ಚಮಚಗಳಷ್ಟು ಬೆಚ್ಚಗಿನ ನೀರಿನೊ೦ದಿಗೆ ಬೆರೆಸಿರಿ.


ಹತ್ತಿಯ ಉ೦ಡೆಯೊ೦ದನ್ನು ಈ ದ್ರಾವಣದಲ್ಲಿ ಅದ್ದಿ, ಅದನ್ನು ನಿಮ್ಮ ಮುಖದ ಮೇಲೆ ನಯವಾಗಿ ಉಜ್ಜಿರಿ. ಐದು ನಿಮಿಷಗಳ ಬಳಿಕ ಮುಖವನ್ನು ತೊಳೆದುಬಿಡಿರಿ.ತೈಲಾ೦ಶವುಳ್ಳ ಹಾಗೂ ಸುಲಭವಾಗಿ ಮೊಡವೆಗಳಿಗೆ ತುತ್ತಾಗಬಲ್ಲ ಪ್ರಕೃತಿಯುಳ್ಳ ತ್ವಚೆಗೆ ಈ ಪ್ಯಾಕ್ ಹೇಳಿಮಾಡಿಸಿದ೦ತಿರುತ್ತದೆ. ಕ್ಷಣಾರ್ಧದಲ್ಲಿ ಪುರುಷರ ತ್ವಚೆಯ ಕಾಂತಿ ಹೆಚ್ಚಿಸುವ ಬಿಬಿ ಕ್ರೀಮ್!

ತ್ವೆಚೆಯ ಕಾಂತಿಯನ್ನು ಹೆಚ್ಚಿಸಲು ಗಂಧದ ಎಣ್ಣೆ
ತ್ವೆಯ ಕಾಂತಿಯನ್ನು ಹೆಚ್ಚಿಸಲು ಎಲ್ಲರು ಬಯಸುವುದು ಸಹಜ. ಅಂತೆಯೇ ಇದನ್ನು ಸಾಧ್ಯವಾಗಿಸಲು ಗಂಧವನ್ನು ಬಳಸಬಹುದಾಗಿದೆ. ಗಂಧದ ಎಣ್ಣೆಯಿಂದ ಮುಖದ ಮೇಲೆ ಎಣ್ಣೆಯ ಮಸಾಜ್ ಮಾಡುವಾಗ ಎಣ್ಣೆಯ ಜೊತೆಗೆ ಗಂಧದ ಹುಡಿಯನ್ನು ಬಳಸಿ ಮಾಡುವ ಮೂಲಕ ಚರ್ಮವನ್ನು ನಯವಾಗಿ ಇಡಬಹುದು. ಮುಖದ ಮೇಲೆ ಹೀಗೆ ಹಚ್ಚಿನ ಎಣ್ಣೆಯನ್ನು ಹನ್ನೆರಡು ಗಂಟೆಗಳ ಕಾಲ ಹಾಗೆಯೇ ಇಡಬೇಕು. ಹೀಗೆ ಗಂಧವನ್ನು ತ್ವಚೆಯ ಕಾಂತಿಯನ್ನು ಕಾಪಾಡಲು ಬಳಸಬಹುದಾಗಿದೆ.

English summary

Homemade Face Mask For Fair and Glowing skin

Homemade face masks are cheaper and have no side effects. There are many home made remedies for getting fair skin naturally at home,which can found easily around you with the help of which you can made face mask and still homemade face mask yield wonderful results. Following are some face masks that can be used for fair and glowing skin.
X
Desktop Bottom Promotion