For Quick Alerts
ALLOW NOTIFICATIONS  
For Daily Alerts

ಹಾಗಲಕಾಯಿ ಜ್ಯೂಸ್‌ನಲ್ಲಿದೆ 15 ಆರೋಗ್ಯಕರ ಪ್ರಯೋಜನಗಳು

By manu
|

ದೂರದ ಸೌದಿ ಅರೇಬಿಯಾದಲ್ಲಿ ಪೈಂಟರ್ ಕೆಲಸದಲ್ಲಿದ್ದ ಆಗಸ್ಟಿನ್ ಒಮ್ಮೆ ಕೆಲಸದಲ್ಲಿದ್ದಾಗ ದಿಢೀರನೇ ಕುಸಿದು ಬಿದ್ದ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ಇದಕ್ಕೆ ಮಧುಮೇಹ ಕಾರಣ, ಕೂಡಲೇ ಮಧುಮೇಹಕ್ಕೆ ಅಗತ್ಯವಾದ ಮದ್ದು ತೆಗೆದುಕೊಳ್ಳಬೇಕು ಹಾಗೂ ಸಕ್ಕರೆ ತಿನ್ನಲೇಬಾರದು ಎಂದು ಅಪ್ಪಣೆ ನೀಡಿದರು.

ಆದರೆ ಇದಕ್ಕೆ ಅಗತ್ಯವಾದ ಔಷಧಿಗಳು ಕಾರ್ಮಿಕನಾಗಿದ್ದ ಆಗಸ್ಟಿನ್ ನ ವಿಮಾ ಪಾಲಿಸಿಯಲ್ಲಿ ಇರದೇ ಇದ್ದುದರಿಂದ ಅವುಗಳನ್ನು ಹಣಕೊಟ್ಟು ಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು. ಅತ್ಯಂತ ದುಬಾರಿಯಾಗಿದ್ದ ಈ ಔಷಧಿಗಳನ್ನು ಕೊಳ್ಳಲು ಇಡಿಯ ವೇತನವನ್ನೇ ವ್ಯಯಿಸಬೇಕಾಗಿ ಬಂದ ಆಗಸ್ಟಿನ್ ಔಷಧಿಗಳನ್ನು ಕೊಳ್ಳದೇ ತನ್ನ ಊರಿನ ನಾಟಿ ವೈದ್ಯರ ಬಳಿ ತನ್ನ ಕಾಯಿಲೆಯ ವಿವರಗಳನ್ನು ನೀಡಿದ. ಆರೋಗ್ಯಕ್ಕೆ ಸಿಹಿ-ಕಹಿ ಹಾಗಲಕಾಯಿ

ಆಯುರ್ವೇದದಲ್ಲಿ ಪಾರಾಂಗತರಾದ ವೈದ್ಯರು ವಿವರಗಳನ್ನೆಲ್ಲಾ ಸವಿವರವಾಗಿ ಆಲಿಸಿ ಆತನಿಗೆ ಕೊಟ್ಟಿದ್ದು ಒಂದೇ ಔಷಧಿ-ಅದೇ ಹಾಗಲಕಾಯಿ (ಹಸಿಯಾಗಿ) ತಿನ್ನು ಎಂಬುವುದು. ಇದನ್ನು ಶಿರಸಾವಹಿಸಿ ಪಾಲಿಸಿದ ಆಗಸ್ಟಿನ್ ಬೆಳಿಗ್ಗೆ, ಮಧ್ಯಾಹ್ನ ವೈದ್ಯರಲ್ಲಿ ತಪಾಸಣೆ ಮಾಡಿಸಿದಾಗ ರಕ್ತದಲ್ಲಿನ ಸಕ್ಕರೆಯ ಅಂಶ ಸರಿಸುಮಾರು ಸಾಮಾನ್ಯ ಸ್ಥಿತಿಗೆ ಮರಳಿರುವುದು ಖಾತರಿಯಾಯಿತು.

ಸುಲಭದರದಲ್ಲಿ ಸಿಕ್ಕ ಹಾಗಲಕಾಯಿಯಿಂದ ದುಬಾರಿಯಾದ ಔಷಧಿಗಳನ್ನು ಕೊಳ್ಳದೇ ವೇತನವನ್ನು ಉಳಿಸಿಕೊಳ್ಳಲು ಆಗಸ್ಟಿನ್‌ಗೆ ಸಾಧ್ಯವಾಯಿತು. ಕೊಂಚ ದಿನಗಳ ನಂತರ ಊರಿಗೆ ತೆರಳಿ ಸೂಕ್ತ ಚಿಕಿತ್ಸೆಯೊಡನೆ ಮಧುಮೇಹವನ್ನು ನಿಯಂತ್ರಣಕ್ಕೆ ತಂದು ಇಂದು ಆರೋಗ್ಯಕರ ಜೀವನ ನಡೆಸುತ್ತಿದ್ದಾನೆ. (ಇದು ನಿಜಘಟನೆ) ಹಾಗಲಕಾಯಿ:ಆರೋಗ್ಯಕ್ಕೆ ಸಿಹಿ, ರೋಗ ರುಜಿನಗಳಿಗೆ ಕಹಿ!

ಹಾಗಾದರೆ ಮಧುಮೇಹವನ್ನು ನಿಯಂತ್ರಿಸಲು ಹಾಗಲಕಾಯಿ ರಾಮಬಾಣವೇ? ಹೌದು ಎನ್ನುತ್ತದೆ ಆಯುರ್ವೇದ. ಇಂದಿನ ವೈಜ್ಞಾನಿಕ ವಿಶ್ಲೇಷಣೆಗಳು ಸಹಾ ಇದನ್ನು ಖಾತರಿಪಡಿಸುತ್ತವೆ. ತನ್ನ ಕಹಿರುಚಿಯಿಂದಾಗಿ ಹೆಚ್ಚಿನವರ ಮೆಚ್ಚಿಗೆ ಪಾತ್ರನಾಗದ ಈ ಮುಳ್ಳುಮುಳ್ಳಾದ ತರಕಾರಿ ನಿಜಕ್ಕೂ ಆರೋಗ್ಯವನ್ನು ವೃದ್ಧಿಸುವ ಅದ್ಭುತ ಪೋಷಕಾಂಶಗಳ ಆಗರವಾಗಿದೆ. ಹಸಿಯಾಗಿ ಅಥವಾ ಜ್ಯೂಸ್ ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ ಒಂದು ಲೋಟ ಕುಡಿದರೆ ಲಭ್ಯವಾಗುವ ಅಪಾರ ಪ್ರಯೋಜನಗಳಲ್ಲಿ ಪ್ರಮುಖವಾದ ಐದು ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ...

ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ತಗ್ಗಿಸುತ್ತದೆ

ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ತಗ್ಗಿಸುತ್ತದೆ

ಪ್ರತಿದಿನ ಬೆಳಿಗ್ಗೆ ಒಂದು ಲೋಟ ಹಾಗಲಕಾಯಿಯ ರಸವನ್ನು ಖಾಲಿಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ ಮೂರೇ ದಿನದಲ್ಲಿ ತಹಬಂದಿಗೆ ಬರುತ್ತದೆ. ಇದಕ್ಕೆ ಕಾರಣ ಹಾಗಲಕಾಯಿಯಲ್ಲಿರುವ momorcidin ಮತ್ತು charatin ಎಂಬ ವಿಶೇಷ ನಿವಾರಕಗಳು (anti-hyperglycemic compounds) ಕಾರಣವಾಗಿವೆ. ವಾಸ್ತವಾಗಿ ರಕ್ತದಲ್ಲಿನ ಸಕ್ಕರೆ ಉಪಯೋಗಿಸಲ್ಪಡದೇ ವಿಸರ್ಜಿಸಲಾಗಲು ಇನ್ಸುಲಿನ್ ಪ್ರಮಾಣ ಮಹತ್ವದ ಪಾತ್ರ ವಹಿಸುತ್ತದೆ. ಈ ಪೋಷಕಾಂಶಗಳು ಇನ್ಸುಲಿನ್ ಕೊರತೆಯಾಗದಂತೆ ನೋಡಿಕೊಳ್ಳುವುದೇ ಹಾಗಲಕಾಯಿಯ ಈ ಸಾಮರ್ಥ್ಯಕ್ಕೆ ಕಾರಣವಾಗಿದೆ.

ಕ್ಯಾನ್ಸರ್‌ನಿಂದ ಕಾಪಾಡುತ್ತದೆ

ಕ್ಯಾನ್ಸರ್‌ನಿಂದ ಕಾಪಾಡುತ್ತದೆ

ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾಗಲು ಕ್ಯಾನ್ಸರ್ ಗೆ ತುತ್ತಾಗಿ ಬಾಡಲಿಯ ಕಾರ್ಯಕ್ಷಮತೆ ಕುಸಿಯುವುದು ಪ್ರಮುಖ ಕಾರಣವಾಗಿದೆ. ಹಾಗಲಕಾಯಿಯಲ್ಲಿರುವ ಪೋಷಕಾಂಶಗಳು ಈ ಕ್ಯಾನ್ಸರ್ ಗೆ ಕಾರಣವಾದ ಅಪಾಯಕಾರಿ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ಪರಿಣಾಮವಾಗಿ ಬಾಡಲಿ ಸುಕ್ಷಮವಾಗಿ ಕಾರ್ಯನಿರ್ವಹಿಸಿ ರಕ್ತಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸಿಕೊಡಲು ಸಾಧ್ಯವಾಗುತ್ತದೆ.

ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ

ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ

ಕೆಲವೊಮ್ಮೆ ಆಹಾರ ಜೀರ್ಣಗೊಳ್ಳಲು ಸಾಮಾನ್ಯಕ್ಕಿಂತಲೂ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುವುದರಿಂದ ಹೊಟ್ಟೆಯಲ್ಲಿಯೇ ಉಳಿದು ಹಲವು ವಾಯುಗಳು ಉತ್ಪತ್ತಿಯಾಗಿ ಉರಿ ತರಿಸುತ್ತವೆ. ಅಜೀರ್ಣವ್ಯಾಧಿ (dyspepsia) ಎಂದು ಕರೆಯಲಾಗುವ ಈ ತೊಂದರೆಗೆ ಹಾಗಲಕಾಯಿಯ ರಸ ಅತ್ಯಂತ ಪರಿಣಾಮಕಾರಿಯಾಗಿದೆ. ಈ ರಸ ಹೊಟ್ಟೆಯಲ್ಲಿಳಿದ ಬಳಿಕ ಜೀರ್ಣರಸಗಳನ್ನು ಅಗತ್ಯಪ್ರಮಾಣದಲ್ಲಿ ಸ್ರವಿಸಲು ಜಠರಕ್ಕೆ ಪ್ರಚೋದನೆ ನೀಡುತ್ತದೆ. ಪರಿಣಾಮವಾಗಿ ಹುಳಿತೇಗು, ಗ್ಯಾಸ್ಟ್ರಿಕ್, ಹೊಟ್ಟೆಯ ಹುಣ್ಣು ಮೊದಲಾದ ತೊಂದರೆಗಳಿಂದ ಕಾಪಾಡಿದಂತಾಗುತ್ತದೆ. ವಾರಕ್ಕೊಮ್ಮೆ ಬೆಳಿಗ್ಗೆದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಹಾಗಲಕಾಯಿಯ ರಸವನ್ನು ಸೇವಿಸುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ.

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಹಾಗಲಕಾಯಿಯ ರಸದಲ್ಲಿ ಬೀಟಾ-ಕ್ಯಾರೋಟೀನ್ ಮತ್ತು ವಿಟಮಿನ್ ಎ ಪೋಷಕಾಂಶಗಳು ಹೇರಳವಾಗಿರುವುದರಿಂದ ಕಣ್ಣಿಗೆ ಅಗತ್ಯವಾದ ಪೋಷಕಾಂಶಗಳು ದೊರೆತು ಕಣ್ಣಿನ ತೊಂದರೆಗಳಿಂದ ರಕ್ಷಣೆ ನೀಡಿದಂತಾಗುತ್ತದೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳು ಮಧುಮೇಹದ ಕಾರಣದಿಂದಾಗಿ ಉತ್ಪತ್ತಿಯಾಗುವ ದೃಷ್ಟಿದೋಷದಿಂದ (oxidative stress) ಕಣ್ಣುಗಳನ್ನು ಕಾಪಾಡುತ್ತವೆ. ಹಾಗಲಕಾಯಿಯ ನಿಯಮಿತ ಸೇವನೆಯಿಂದ ಕಣ್ಣುಗಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ.

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

ನಮ್ಮ ದೇಹದ ಅಷ್ಟೂ ರಕ್ತ (ಸುಮಾರು ಐದೂವರೆ ಲೀಟರ್) ಸತತವಾಗಿ ದೇಹದ ಧಮನಿಗಳಲ್ಲಿ ಹರಿಯುತ್ತಾ ಆಮ್ಲಜನಕವನ್ನು ಪೂರೈಸುತ್ತಾ, ವಿಷಕಾರಿ ವಸ್ತುಗಳನ್ನು ವಿಸರ್ಜಿಸುತ್ತಾ ಇರಬೇಕಾಗುತ್ತದೆ. ಆದರೆ ದೇಹವನ್ನು ಪ್ರವೇಶಿಸುವ ಫ್ರೀ ರಾಡಿಕಲ್ (free radicals) ಎಂಬ ವಿಷಕಾರಿ ವಸ್ತುಗಳು ರಕ್ತದೊಡನೆ ಮಿಳಿತಗೊಂಡು ರಕ್ತದ ಕ್ಷಮತೆಯನ್ನು ಕುಂಠಿತಗೊಳಿಸುತ್ತವೆ. ಇದರ ನೇರ ಪರಿಣಾಮವನ್ನು ಚರ್ಮದ (ವಿಶೇಷವಾಗಿ ಮುಖದ) ಮೇಲಿನ ಮೊಡವೆ, ಚರ್ಮದುರಿತದ ಮೂಲಕ ನೋಡಬಹುದು.

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಹಾಗಲಕಾಯಿ ರಸವನ್ನು ಸೇವಿಸುವುದರಿಂದ ರಕ್ತ ಶುದ್ಧಿಗೊಂಡು ಚರ್ಮದ ವಿವಿಧ ತೊಂದರೆಗಳು ಮಾಯವಾಗಿ ಕಾಂತಿಯುಕ್ತ ಚರ್ಮ ಪಡೆಯಲು ಸಾಧ್ಯವಾಗುತ್ತದೆ. ಶುದ್ದೀಕರಣಗೊಂಡ ರಕ್ತದ ಮೂಲಕ ಇಡಿಯ ಶರೀರ ಆರೋಗ್ಯದಿಂದ ಕಂಗೊಳಿಸುತ್ತದೆ.

ಮಧುಮೇಹ

ಮಧುಮೇಹ

ಮಧುಮೇಹವನ್ನು ಗುಣಪಡಿಸಲು ಹಾಗಲಕಾಯಿಯ ಜ್ಯೂಸ್ ಅತಿ ಸಾಮಾನ್ಯವಾದ, ಜನಪ್ರಿಯ ಪರಿಹಾರವಾಗಿದೆ. insulin ಗೆ ಸಮನಾದ ಕೆಲವು ರಾಸಾಯನಿಕಗಳು ಹಾಗಲಕಾಯಿಯಲ್ಲಿದ್ದು, ಅವು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತವೆ.

ಹೃದಯ ಸಂಬಂಧೀ ರೋಗಗಳಿಗೆ

ಹೃದಯ ಸಂಬಂಧೀ ರೋಗಗಳಿಗೆ

ಹಾಗಲಕಾಯಿಯು ಹೃದಯದ ಆರೋಗ್ಯಕ್ಕೆ ಹಲವು ವಿಧದಲ್ಲಿ ಅತ್ಯುತ್ತಮವಾಗಿದೆ. ರಕ್ತನಾಳಗಳಲ್ಲಿ ತಡೆಯನ್ನುಂಟು ಮಾಡುವ ಕೆಟ್ಟ ಕೊಲೆಸ್ಟ್ರಾಲ್ (bad cholesterol) ನ ಪ್ರಮಾಣವನ್ನು ತಗ್ಗಿಸುತ್ತದೆ ಹಾಗೂ ಹೃದಯಾಘಾತದ ಸಾಧ್ಯತೆಯನ್ನು ಕ್ಷೀಣಗೊಳಿಸುತ್ತದೆ. ಮಾತ್ರವಲ್ಲದೇ, ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನೂ ಸಹ ತಗ್ಗಿಸುವುದರ ಮೂಲಕ ಹೃದಯವನ್ನು ಸ್ವಸ್ಥವಾಗಿರಿಸುತ್ತದೆ.

ಹೆಚ್ಚಾದ ತೂಕವನ್ನು ಕಳೆದುಕೊಳ್ಳಲು

ಹೆಚ್ಚಾದ ತೂಕವನ್ನು ಕಳೆದುಕೊಳ್ಳಲು

ಹಾಗಲಕಾಯಿಯಲ್ಲಿರುವ antioxidant ಗಳು, ನಿಮ್ಮ ಶರೀರದ ಎಲ್ಲಾ ಕಾರ್ಯಾಂಗ ವ್ಯೂಹಗಳನ್ನು ಶುದ್ಧಗೊಳಿಸುತ್ತವೆ. ಇದರಿಂದ ನಿಮ್ಮ ಚಯಾಪಚಯ ಹಾಗೂ ಜೀರ್ಣಾಂಗವ್ಯೂಹಗಳು ಉತ್ತಮಗೊಳ್ಳುತ್ತವೆ ಹಾಗೂ ತನ್ಮೂಲಕ ನೀವು ಹೆಚ್ಚಾದ ನಿಮ್ಮ ಶರೀರದ ತೂಕವನ್ನು ಬೇಗನೆ ನಿವಾರಿಸಿಕೊಳ್ಳುವುದರಲ್ಲಿ ಸಹಕಾರಿಯಾಗಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಸೋಂಕುಗಳ ವಿರುದ್ಧ ಹೋರಾಡಲು, ಹಾಗಲಕಾಯಿ ಗಿಡದ ಎಲೆಗಳನ್ನು ಅಥವಾ ಹಣ್ಣುಗಳನ್ನು ನೀರಿನಲ್ಲಿ ಕುಡಿಸಿ ಪ್ರತಿದಿನ ಸೇವಿಸಿರಿ. ಇದು ನಿಮ್ಮ ರೋಗನಿರೋಧಕ ಶಕ್ತಿಯ ವರ್ಧನೆಗೆ ಸಹಕಾರಿ.

ಯಕೃತ್ ನ ಸಮಸ್ಯೆಗಳಿಗೆ

ಯಕೃತ್ ನ ಸಮಸ್ಯೆಗಳಿಗೆ

ಯಕೃತ್ ನ ಸಮಸ್ಯೆಗಳನ್ನು ಗುಣಪಡಿಸಲು ಪ್ರತಿದಿನ ಒಂದು ಲೋಟದಷ್ಟು ಹಾಗಲಯಿಯ ಜ್ಯೂಸ್ ನ್ನು ಕುಡಿಯಿರಿ. ಫಲಿತಾಂಶವನ್ನು ಮನಗಾಣಲು ಒಂದು ವಾರದವರೆಗೆ ನಿರಂತರವಾಗಿ ಕುಡಿಯಿರಿ.

ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ

ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ

ತಾಜಾ ಹಾಗಲಕಾಯಿಯು ಶ್ವಾಸಕೋಶ ಸಂಬಂಧಿ ಸಮಸ್ಯೆಗಳಾದ ಆಸ್ತಮಾ, ಶೀತ, ಕೆಮ್ಮು ಮುಂತಾದವುಗಳಿಗೆ ಅತ್ಯುತ್ತಮ ಪರಿಹಾರವಾಗಿದೆ.

ಮಲಬದ್ಧತೆ (Constipation)

ಮಲಬದ್ಧತೆ (Constipation)

ಹಾಗಲಕಾಯಿಯ ನಾರಿನ ಗುಣಗಳು, ಪಚನಕ್ರಿಯೆಯಲ್ಲಿ ಸಹಕಾರಿಯಾಗಿವೆ. ಇದರಿಂದಾಗಿ ಆಹಾರವು ಸುಲಭವಾಗಿ ಪಚನವಾಗುತ್ತದೆ ಹಾಗೂ ತ್ಯಾಜ್ಯವು ಸುಲಲಿತವಾಗಿ ಹೊರಗೆಸೆಯಲ್ಪಡುತ್ತದೆ ಹಾಗೂ ತನ್ಮೂಲಕ ಅಜೀರ್ಣ ಹಾಗೂ ಮಲಬದ್ಧತೆಯನ್ನು ನಿವಾರಿಸುತ್ತವೆ.

ಮೊಡವೆಗಳಿಗೆ (acne)

ಮೊಡವೆಗಳಿಗೆ (acne)

ಹಾಗಲಕಾಯಿಯ ಸೇವನೆಯು ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ ಮಾತ್ರವಲ್ಲದೇ ಆಳವಾದ ಚರ್ಮದ ಸೋಂಕುಗಳಿಗೂ ಶಮನಕಾರಿಯಾಗಿದೆ. ಹಾಗಲಕಾಯಿಯ ರಸವನ್ನು ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ, ಪ್ರತಿದಿನ ಖಾಲಿ ಹೊಟ್ಟೆಗೆ 6 ತಿಂಗಳುಗಳ ಕಾಲ ಸೇವಿಸಿರಿ ಇಲ್ಲವೇ ನಿಮ್ಮ ನಿರೀಕ್ಷಿತ ಫಲಿತಾಂಶ ದೊರೆಯುವವರೆಗೆ ಸೇವನೆಯನ್ನು ಮುಂದುವರೆಸಿರಿ.

ಮೂತ್ರಪಿಂಡ (kidney) ಮತ್ತು ಮೂತ್ರಕೋಶದ ಆರೋಗ್ಯಕ್ಕೆ

ಮೂತ್ರಪಿಂಡ (kidney) ಮತ್ತು ಮೂತ್ರಕೋಶದ ಆರೋಗ್ಯಕ್ಕೆ

ಮೂತ್ರಪಿoಡ ಮತ್ತು ಮೂತ್ರಕೋಶಗಳನ್ನು ಆರೋಗ್ಯಪೂರ್ಣವಾಗಿ ಕಾಪಿಟ್ಟುಕೊಳ್ಳಲು, ಹಾಗಳಕಾಯಿಯು ಸಹಕಾರಿ. ಕಿಡ್ನಿಯ ಕಲ್ಲುಗಳ ನಿವಾರಣೆಯಲ್ಲಿಯೂ ಇದು ಉಪಯುಕ್ತ.

ಹಾಗಲಕಾಯಿ ಜ್ಯೂಸ್‌ ಮಾಡುವ ವಿಧಾನ

ಹಾಗಲಕಾಯಿ ಜ್ಯೂಸ್‌ ಮಾಡುವ ವಿಧಾನ

ತಾಜಾ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆಯಿರಿ ಹಾಗೂ ಇದನ್ನು ಮಧ್ಯಭಾಗದಲ್ಲಿ ಕತ್ತರಿಸಿ ಬೀಜವನ್ನು ಚಮಚದ ಮೂಲಕ ತೆಗೆಯಿರಿ. ಸಿಪ್ಪೆಯ ಕಹಿಯನ್ನು ನೀವು ಸಹಿಸಿಕೊಳ್ಳಬಲ್ಲಿರೆ೦ದಾದಲ್ಲಿ ಅದನ್ನು ತೆಗೆಯುವ ಅಗತ್ಯವಿಲ್ಲ. ಅನೇಕರು ಹಾಗಲಕಾಯಿಯ ಮೇಲ್ಭಾಗದ ಸಿಪ್ಪೆಯನ್ನು ತೆಗೆಯುವ ಗೋಜಿಗೇ ಹೋಗುವುದಿಲ್ಲ. ಇನ್ನು ಹರಿತವಾದ ಚಾಕುವನ್ನು ಬಳಸಿ ಹಾಗಲಕಾಯಿಯನ್ನು ಸಣ್ಣದಾಗಿ ತುಂಡರಿಸಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಮತ್ತು ನೀರಿನಲ್ಲಿ 30 ನಿಮಿಷಗಳ ಕಾಲ ಹಾಗಲಕಾಯಿಯನ್ನು ಮುಳುಗಿಸಿಡಿ. ಬೇಕಾದಲ್ಲಿ ಸ್ವಲ್ಪ ಉಪ್ಪು ಅಥವಾ ಲಿಂಬೆ ರಸವನ್ನು ಸೇರಿಸಿ ಇದರಿಂದ ಇದರ ಕಹಿ ನಿವಾರಣೆಯಾಗುತ್ತದೆ. ಅನ೦ತರ ಇವುಗಳನ್ನು ಮಿಕ್ಸರ್ ನಲ್ಲಿ ಹಾಕಿರಿ ಜೊತೆಗೆ ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿರಿ. ಬಳಿಕ ಮಿಕ್ಸಿಯನ್ನು ಮಧ್ಯಮ ವೇಗದಲ್ಲಿ ತಿರುಗಿಸುವುದರ ಮೂಲಕ ಕಹಿ ಜ್ಯೂಸ್ ಅನ್ನು ಪಡೆದುಕೊಳ್ಳಿರಿ.

English summary

15 Healthy reasons to drink bittergourd or karela juice!

Drink one glass of karela juice in the morning an empty stomach once in three days to keep your blood glucose levels under control. The presence of momorcidin and charatin, two anti-hyperglycemic compounds, in karela juice plays a key role in transportation of blood sugar levels to the muscles. have a look....
X
Desktop Bottom Promotion