For Quick Alerts
ALLOW NOTIFICATIONS  
For Daily Alerts

ನಮ್ಮನ್ನು ಅನಾರೋಗ್ಯಕ್ಕೆ ತಳ್ಳುವ ದೈನಂದಿನ ಅಭ್ಯಾಸಗಳು

By Super
|

ನಾಲ್ಕು ಜನರ ನಡುವೆ ಇರುವಾಗ ಹೇಗೆ ನಡೆದುಕೊಳ್ಳಬೇಕು, ನಡೆದುಕೊಳ್ಳಬಾರದು ಎಂಬ ಕಟ್ಟುಪಾಡುಗಳನ್ನು ಹೇರುತ್ತಾ ಹೋದಂತೆಲ್ಲಾ ನಾವು ಒಂದು ರೀತಿಯ ನಿಯಂತ್ರಣಕ್ಕೆ ಒಳಗಾಗುತ್ತಾ ಬಂದಿದ್ದೇವೆ. ಆದರೆ ಇವುಗಳಲ್ಲಿ ಹಲವಾರು ನಿಸರ್ಗದ ವಿರುದ್ಧವಾಗಿದ್ದು ಆರೋಗ್ಯಕ್ಕೆ ಮಾರಕವಾಗಿವೆ. ಧೂಮಪಾನ,ಮದ್ಯಪಾನ ಮಾತ್ರವಲ್ಲ, ಇವೂ ಕೆಟ್ಟ ಚಟಗಳೇ

ಉದಾಹರಣೆಗೆ ಮೂತ್ರವನ್ನು ಬಹಳಹೊತ್ತು ತಡೆದು ಹಿಡಿದುಕೊಳ್ಳುವುದು. ಕೆಲವೊಮ್ಮೆ ಉದ್ಯೋಗಸ್ಥ ಮಹಿಳೆಯರು ಕೆಲಸದ ಸ್ಥಳದಲ್ಲಿ ಸೂಕ್ತ ಶೌಚದ ವ್ಯವಸ್ಥೆ ಇಲ್ಲದ ಕಾರಣ ಬಹಳಹೊತ್ತು ನಿಸರ್ಗದ ಕರೆಗೆ ಓಗೊಡುವುದೇ ಇಲ್ಲ. ಕೆಲವೆಡೆ ಮನೆಯಲ್ಲಿ ಶೌಚದ ವ್ಯವಸ್ಥೆ ಇಲ್ಲದೇ ರಾತ್ರಿಯಾಗುವವರೆಗೆ ಕಾಯಬೇಕಾದ ಪರಿಸ್ಥಿತಿ ಇರುವ ಸಾವಿರಾರು ಹಳ್ಳಿಗಳು ಭಾರತದಲ್ಲಿವೆ. ಇಂದು ಇಂತಹ ನಮ್ಮ ಕೆಲವು ಅನಾರೋಗ್ಯಕರ ಅಭ್ಯಾಸಗಳನ್ನು ನೋಡೋಣ.

ಕಣ್ಣುಗಳನ್ನು ಉಜ್ಜಿಕೊಳ್ಳುವುದು

ಕಣ್ಣುಗಳನ್ನು ಉಜ್ಜಿಕೊಳ್ಳುವುದು

ನಮ್ಮ ದೇಹದ ಅತಿಮುಖ್ಯ ಮತ್ತು ಅತಿ ಸೂಕ್ಷ್ಮ ಅಂಗಗಳೆಂದರೆ ಕಣ್ಣುಗಳು. ಕೆಲವೊಮ್ಮೆ ಧೂಳು, ಹೊಗೆ ಇತ್ಯಾದಿಗಳು ಕಣ್ಣಿಗೆ ಬಿದ್ದರೆ ಕೊಂಚ ಉರಿಯನ್ನು ನಿವಾರಿಸಲು ನಾವು ಕಣ್ಣುಗಳನ್ನು ಉಜ್ಜಿಕೊಳ್ಳುತ್ತೇವೆ. ಈ ಒತ್ತಡ ಹೆಚ್ಚಾದರೆ ಮತ್ತು ಪದೇ ಪದೇ ಉಜ್ಜಿಕೊಳ್ಳುವುದರಿಂದ ಕಣ್ಣಿನ ದೃಷ್ಟಿನರ, ಕಣ್ಣಿನ ಪಾಪೆ ಅಥವಾ ಕಾರ್ನಿಯಾ ಮತ್ತು ರೆಟಿನಾ ಅಥವಾ ಕಣ್ಣಿನ ಪೊರೆಗೆ ಘಾಸಿಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಣ್ಣುಗಳನ್ನು ಉಜ್ಜಿಕೊಳ್ಳುವುದು

ಕಣ್ಣುಗಳನ್ನು ಉಜ್ಜಿಕೊಳ್ಳುವುದು

ಕಣ್ಣಿಗೆ ಕಸ, ಧೂಳು ಬಿದ್ದರೆ ಉಜ್ಜಿಕೊಳ್ಳುವ ಬದಲು ಕಣ್ಣುಗಳನ್ನು ಮಿಟುಕಿಸುವುದು, ನೀರಿನಿಂದ ತೊಳೆದುಕೊಳ್ಳುವುದು, ಉರಿ ಹೆಚ್ಚಾಗಿದ್ದರೆ ವೈದ್ಯರನ್ನು ಕಾಣುವುದು ಉತ್ತಮ. ಅದರಲ್ಲೂ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ಕಣ್ಣುಗಳನ್ನು ಉಜ್ಜದಿರಲು ಸರ್ವಥಾ ಪ್ರಯತ್ನಿಸಬೇಕು ಮತ್ತು ವಿಶೇಷ ಕಾಳಜಿ ವಹಿಸಬೇಕು.

 ಮೂತ್ರವನ್ನು ತಡೆದು ಹಿಡಿಯುವುದು

ಮೂತ್ರವನ್ನು ತಡೆದು ಹಿಡಿಯುವುದು

ಪ್ರಯಾಣದ ಅವಧಿಯಲ್ಲಿ ಮುಂದಿನ ನಿಲ್ದಾಣ ಬರುವವರೆಗೂ ಮೂತ್ರ ತಡೆದು ಹಿಡಿದಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಕೆಲವೊಮ್ಮೆ ಕೆಲವು ಪರಿಸ್ಥಿತಿಗಳು ನಿತ್ಯವೂ ಈ ಅಭ್ಯಾಸವನ್ನು ಅನಿವಾರ್ಯವಾಗಿಸುತ್ತವೆ. ಇದರಿಂದ ಮೂತ್ರದ ಒತ್ತಡ ಮೂತ್ರಕೋಶದ ಮೇಲೆ ಹೆಚ್ಚುತ್ತಾ ಮೂತ್ರ ವ್ಯವಸ್ಥೆಯ ಸೂಕ್ಷ್ಮ ಅಂಗಗಳ ಮೇಲೆ ಒತ್ತಡ ಹೆಚ್ಚಿಸುತ್ತಾ ಹೋಗುತ್ತವೆ. ಇದು ಸಂಕಟ ಹೆಚ್ಚಿಸುವುದು ಮಾತ್ರವಲ್ಲ, ಸೋಂಕನ್ನು ಹೆಚ್ಚಿಸಲೂ ಕಾರಣವಾಗುತ್ತದೆ. ಆದ್ದರಿಂದ ನಿಸರ್ಗದ ಕರೆಯನ್ನು ತಡೆದು ಹಿಡಿದಿಟ್ಟುಕೊಳ್ಳುವುದನ್ನು ಬಿಟ್ಟು ಕರೆಗೆ ಓಗೊಡುವತ್ತ ಚಿತ್ತ ಹರಿಸಿ.

ಅಪಾನವಾಯುವನ್ನು ತಡೆದು ಹಿಡಿಯುವುದು

ಅಪಾನವಾಯುವನ್ನು ತಡೆದು ಹಿಡಿಯುವುದು

ನಾಲ್ಕು ಜನರ ನಡುವೆ ಇರುವಾಗ ಅಪಾನವಾಯುವನ್ನು ಹಿಡಿದಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಇದನ್ನು ಬಲವಂತವಾಗಿ ಹಿಡಿದಿಟ್ಟುಕೊಳ್ಳುವ ಮೂಲಕ ಜೀರ್ಣಾಂಗಗಳ ಕಡೆಯ ಭಾಗಗಳಲ್ಲಿ ಆಂತರಿಕ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಈ ಸ್ಥಿತಿಗೆ "diverticula" ಎಂದು ಕರೆಯುತ್ತಾರೆ. ಇದು ಕೆಳಹೊಟ್ಟೆಯಲ್ಲಿ ನೋವು ಮತ್ತು ಇತರ ತೊಂದರೆಗಳನ್ನು ತಂದಿಡುತ್ತದೆ. ಆದ್ದರಿಂದ ಸಾವಧಾನವಾಗಿ ಯಾವುದಾದರೊಂದು ನೆವ ತೆಗೆದು ಜನಜಂಗುಳಿಯಿಂದ ದೂರಾಗಿ ಒತ್ತಡದಿಂದ ಹೊರಬರುವುದು ಅಗತ್ಯವಾಗಿದೆ.

ಮೂಗಿನೊಳಗೆ ಬೆರಳು ಹಾಕುವುದು

ಮೂಗಿನೊಳಗೆ ಬೆರಳು ಹಾಕುವುದು

ಮೂಗಿನೊಳಗೆ ಬೆರಳು ಹಾಕಿ ಒಳಗಿನ ಮೇಣದಂತಹ ಜಿಡ್ಡನ್ನು ಹೊರತೆಗೆಯುತ್ತಾ ಇರುವುದು ಕೆಲವರಿಗೆ ಅಭ್ಯಾಸವಾಗಿರುತ್ತದೆ. (ಕುಚೋದ್ಯಕ್ಕೆ ಕೆಲವರು ಇದಕ್ಕೆ ಎಸ್ ಟಿ ಡಿ ಡಯಲ್ ಮಾಡುವುದು ಎಂದು ಕರೆಯುತ್ತಾರೆ). ಆದರೆ ಇದರಿಂದ ಮೂಗಿನ ಒಳಗಿನ ಸೂಕ್ಷ್ಮ ಚರ್ಮಕ್ಕೆ ಘಾಸಿಯಾಗುವ ಸಂಭವವಿದೆ. ಕೆಲವೊಮ್ಮೆ ಚರ್ಮ (nasal septum) ಹರಿದು ರಕ್ತ ಬರುವುದೂ ಉಂಟು.

ಬೆಳಗ್ಗಿನ ಉಪಾಹಾರ ಬಿಡುವುದು

ಬೆಳಗ್ಗಿನ ಉಪಾಹಾರ ಬಿಡುವುದು

ಕೆಲವರು ಬೆಳಗ್ಗಿನ ಸವಿನಿದ್ದೆಯನ್ನು ಹೆಚ್ಚು ಅನುಭವಿಸುವ ಹುಮ್ಮಸ್ಸಿನಲ್ಲಿ ತಡವಾಗಿ ಕಛೇರಿ ಅಥವಾ ತಮ್ಮ ಕಾರ್ಯಸ್ಥಳ ತಲುಪುವ ಧಾವಂತದಲ್ಲಿ ಬೆಳಗ್ಗಿನ ಉಪಾಹಾರವನ್ನೇ ತ್ಯಜಿಸುತ್ತಾರೆ. ಆದರೆ ಇದೊಂದು ಅತ್ಯಂತ ಅಪಾಯಕಾರಿಯಾದ ಅಭ್ಯಾಸವಾಗಿದೆ. ದಿನದ ಯಾವುದೋ ಹೊತ್ತಿನ ಊಟ ಬಿಟ್ಟರೂ ಬೆಳಗ್ಗಿನ ಉಪಾಹಾರ ಮಾತ್ರ ಸರ್ವಥಾ, ಬಿಡಕೂಡದು. ಏಕೆಂದರೆ ರಾತ್ರಿಯ ನಿದ್ದೆಯ ಬಳಿಕ ಬೆಳಿಗ್ಗೆ ಅತಿ ಹೆಚ್ಚಿನ ರಕ್ತಪೂರೈಕೆಯ ಅಗತ್ಯ ಮೆದುಳಿಗಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೆಳಗ್ಗಿನ ಉಪಾಹಾರ ಬಿಡುವುದು

ಬೆಳಗ್ಗಿನ ಉಪಾಹಾರ ಬಿಡುವುದು

ಅಲ್ಲದೆ ಉಪಾಹಾರವಿಲ್ಲದಿದ್ದರೆ ಮೆದುಳಿಗೆ ತಲುಪುವ ರಕ್ತದಲ್ಲಿ ಸಾಕಷ್ಟು ಆಮ್ಲಜನಕ ಇರದೇ ಮೆದುಳಿನ ಕಾರ್ಯಕ್ಷಮತೆ ತಗ್ಗುತ್ತದೆ. ಪರೋಕ್ಷವಾಗಿ ಸ್ಥೂಲಕಾಯ, ಮಧುಮೇಹ ಆವರಿಸುವ ಸಾಧ್ಯತೆಗಳು ಅತಿಯಾಗಿ ಹೆಚ್ಚುತ್ತವೆ. ಅಲ್ಪ ಉಪಾಹಾರದ ಮೂಲಕ ಮೆದುಳಿನ ಕ್ಷಮತೆ ಹೆಚ್ಚುವ ಮೂಲಕ ನಿತ್ಯದ ಚಟುವಟಿಕೆ ಸುಲಲಿತವಾಗುತ್ತದೆ. ಆದರೆ ಉಪಾಹಾರ ಅಲ್ಪವಾಗಿರುವುದು ಅಗತ್ಯ. ಅತಿ ಹೆಚ್ಚಾದರೆ ಇದು ಬೇರೆಯೇ ರೀತಿಯಲ್ಲಿ ಅಪಾಯಕಾರಿಯಾಗಬಹುದು.

ಮುಖದ ಮೊಡವೆ, ಬ್ಲಾಕ್ ಹೆಡ್ ಮೊದಲಾದವುಗಳನ್ನು ಚಿವುಟುವುದು

ಮುಖದ ಮೊಡವೆ, ಬ್ಲಾಕ್ ಹೆಡ್ ಮೊದಲಾದವುಗಳನ್ನು ಚಿವುಟುವುದು

ಹೆಚ್ಚಿನ ಜನರು ಮಾಡುವ ದೊಡ್ಡ ತಪ್ಪೆಂದರೆ ಮೂಗು, ಗದ್ದ, ಕೆನ್ನೆಗಳ ಮೇಲಿರುವ ಮೊಡವೆ, ಬ್ಲಾಕ್ ಹೆಡ್, ಚಿಕ್ಕ ಚಿಕ್ಕ ಚುಕ್ಕಿಗಳು ಮೊದಲಾದವುಗಳನ್ನು ಚಿವುಟಿ ಒಡೆಯುವುದು. ವಾಸ್ತವವಾಗಿ ಮುಖದ ಮೇಲೆ ಕಾಣುವ ಈ ಚುಕ್ಕೆಗಳು ಕೇವಲ ಮೇಲಿನ ಪದರದಲ್ಲಿ ಮಾತ್ರ ಇರುತ್ತವೆ. ಕೆಳಚರ್ಮದಲ್ಲಿ ಇರುವ ಇದರ ಬುಡ ಹಾಗೇ ಇರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮುಖದ ಮೊಡವೆ, ಬ್ಲಾಕ್ ಹೆಡ್ ಮೊದಲಾದವುಗಳನ್ನು ಚಿವುಟುವುದು

ಮುಖದ ಮೊಡವೆ, ಬ್ಲಾಕ್ ಹೆಡ್ ಮೊದಲಾದವುಗಳನ್ನು ಚಿವುಟುವುದು

ಚಿವುಟುವ ಮೂಲಕ ಮೇಲ್ಪದರದಲ್ಲಿರುವ ಭಾಗವನ್ನು ನಿವಾರಿಸುತ್ತದೆಯೇ ವಿನಃ ಬುಡವನ್ನಲ್ಲ. ಇದರಿಂದ ಸೋಂಕು ಹಚ್ಚಿಸಲು ಕೈಯಾರ ಮೊಡವೆಯ ಮೇಲಿನ ಭಾಗವನ್ನು ತೆರೆದು ಕೊಟ್ಟಂತಾಗುತ್ತದೆ. ಇದು ಮೊಡವೆ ಮಾಗಿದ ಬಳಿಕವು ಕಲೆ ಉಳಿಯಲು ಕಾರಣವಾಗುತ್ತದೆ. ಆದ್ದರಿಂದ ಮೊಡವೆಗಳನ್ನು ಒಡೆಯುವ ಬದಲು ಇತರ ಸುರಕ್ಷಿತ ಆರೈಕೆಯ ವಿಧಾನವನ್ನು ಅನುಸರಿಸುವುದು ಉತ್ತಮ.

ಅನಗತ್ಯವಾದ ಒತ್ತಡ ತೆಗೆದುಕೊಳ್ಳುವುದು

ಅನಗತ್ಯವಾದ ಒತ್ತಡ ತೆಗೆದುಕೊಳ್ಳುವುದು

ನಿತ್ಯದ ಚಟುವಟಿಕೆಯಲ್ಲಿ ಹಲವಾರು ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಹಲವು ಜನರನ್ನು ಎದುರಿಸಬೇಕಾಗುತ್ತದೆ. ಪರಿಸ್ಥಿತಿಗಳು ವ್ಯತಿರಿಕ್ತವಾಗುತ್ತವೆ. ಇವು ಮನಸ್ಸಿನ ಮೇಲೆ ಒತ್ತಡ ಹೇರುತ್ತದೆ. ಇದರ ಪರಿಣಾಮ ಹೆಚ್ಚಿನ ಸಮಯದಲ್ಲಿ ಕೋಪದ ರೂಪದಲ್ಲಿ ಹೊರಹೊಮ್ಮುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅನಗತ್ಯವಾದ ಒತ್ತಡ ತೆಗೆದುಕೊಳ್ಳುವುದು

ಅನಗತ್ಯವಾದ ಒತ್ತಡ ತೆಗೆದುಕೊಳ್ಳುವುದು

ಕೋಪದ ಪರಿಣಾಮ ಯಾವ ರೀತಿಯಲ್ಲಿ ಆಗಬಹುದು ಎಂದು ಬಿಡಿಸಿ ಹೇಳಬೇಕಾಗಿಲ್ಲ. ಬದಲಿಗೆ ಇವೆಲ್ಲಾ ನಿತ್ಯದಲ್ಲಿ ಬರುವಂತಹದ್ದೇ ಎಂದು ತಿಳಿದು ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳಲು ಯತ್ನಿಸಿ.

ಮುಖವನ್ನು ಮುಟ್ಟಿಕೊಳ್ಳುತ್ತಾ ಇರುವುದು

ಮುಖವನ್ನು ಮುಟ್ಟಿಕೊಳ್ಳುತ್ತಾ ಇರುವುದು

ವಿಶೇಷವಾಗಿ ಯುವಜನತೆ ಮತ್ತು ಕೆಲವು ಮಹಿಳೆಯರಿಗೆ ತಮ್ಮ ಮೊಡವೆ, ಅಥವಾ ಮುಖದ ಯಾವುದಾದರೊಂದು ಅಂಗವನ್ನು ತುರಿಸುವುದು, ಮೊಡವೆ ಒಡೆಯುವುದು, ಮೂಗಿನೊಳಗೆ ಬೆರಳು ಹಾಕುವುದು ಮೊದಲಾದ ಅಭ್ಯಾಸವಿರುತ್ತದೆ. ಆದರೆ ಇದೊಂದು ಅಪಾಯಕಾರಿ ಅಭ್ಯಾಸವಾಗಿದೆ. ಏಕೆಂದರೆ ಹಲವೆಡೆ ಮುಟ್ಟುವ ಮೂಲಕ ಬೆರಳುಗಳಲ್ಲಿ ಹಲವು ವಿಧದ ರೋಗಾಣುಗಳು ಹತ್ತಿಕೊಂಡಿರುತ್ತವೆ. ಈ ಅಭ್ಯಾಸದಿಂದ ರೋಗಾಣುಗಳನ್ನು ನಮ್ಮ ಕೈಯಾರೆ ಸೋಂಕು ಹರಡಲು ಬಿಟ್ಟಂತಾಗುತ್ತದೆ. ಕಣ್ಣು, ಮೂಗು, ಬಾಯಿ, ಒಡೆದ ಮೊಡವೆಯ ಗಾಯದ ಮೂಲಕ ಈ ರೋಗಾಣುಗಳು ಸುಲಭವಾಗಿ ದೇಹದೊಳಕ್ಕೆ ಪ್ರವೇಶ ಪಡೆಯುತ್ತವೆ.

ಇವೆಲ್ಲಾ ನಿತ್ಯದಲ್ಲಿ ಬರುವಂತಹದ್ದೇ ಎಂದು ತಿಳಿದು ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳಲು ಯತ್ನಿಸಿ. ಇಂತಹ ಇನ್ನೂ ಹಲವಾರು ಅಭ್ಯಾಸಗಳು ಅನಾರೋಗ್ಯಕರವಾಗಿರಬಹುದು, ಇವನ್ನು ಬಿಟ್ಟು ಆರೋಗ್ಯವಂತರಾಗಲು ನಿಮ್ಮನ್ನು ನೀವು ಬದಲಿಸಿಕೊಳ್ಳಿ.

English summary

Health Blunders we Make Every Day in kannada

In the hustle and bustle of daily life, we may make a few health mistakes here and there. Sometimes, the slip-ups happen unknowingly and at times we let them go. There are many common health mistakes that just about everyone makes on a day to day basis; below are some of them.
X