For Quick Alerts
ALLOW NOTIFICATIONS  
For Daily Alerts

ಕಿತ್ತಳೆ- ಬಾಳೆಹಣ್ಣಿನ ಸಿಪ್ಪೆಯ ಪವರ್‌ಗೆ ಬೆರಗಾಗಲೇಬೇಕು..!

By Arshad
|

ಹಣ್ಣುಗಳು ಆರೋಗ್ಯಕ್ಕೆ ಎಷ್ಟು ಅಗತ್ಯ ಎಂಬ ಬಗ್ಗೆ ನಾವೆಲ್ಲರೂ ಅರಿತಿದ್ದೇವೆ. ಆದರೆ ಇವುಗಳ ಸಿಪ್ಪೆಗಳನ್ನು ಮಾತ್ರ ನೇರವಾಗಿ ಕಸದ ಬುಟ್ಟಿಗೆಸೆಯುತ್ತೇವೆ. ವಾಸ್ತವವಾಗಿ ಹಣ್ಣುಗಳ ತಿರುಳಿನಲ್ಲಿದ್ದಷ್ಟೇ ಉಪಯೋಗ ಈ ಸಿಪ್ಪೆಗಳಿಂದಲೂ ಇದೆ ಎಂದು ನಿಮಗೆ ಈ ಮೊದಲು ತಿಳಿದಿತ್ತೇ? ಎಲ್ಲಾ ಹಣ್ಣುಗಳ ಸಿಪ್ಪೆಗಳು ಹೆಚ್ಚಿನ ಉಪಯೋಗಕ್ಕೆ ಬರದೇ ಇರಬಹುದು, ಆದರೆ ಬಾಳೆಹಣ್ಣು ಮತ್ತು ಕಿತ್ತಳೆಯ ಸಿಪ್ಪೆಗಳು ಮಾತ್ರ ಆರೋಗ್ಯಕ್ಕೆ ಪೂರಕವಾಗಿವೆ.

ಕಿತ್ತಳೆ ಸಿಪ್ಪೆಯಿಂದಂತೂ ಜಾಮ್ ಮಾಡಿ ಮಾರುಕಟ್ಟೆಗೆ ಕಿತ್ತಳೆ ಜಾಮ್ ಎಂದೇ ಪರಿಚಯಿಸುತ್ತಾರೆ. (orange marmalde). ಮುಂದಿನ ಬಾರಿ ಈ ಸಿಪ್ಪೆಗಳನ್ನು ತಿಪ್ಪೆಗೆಸೆಯುವ ಮುನ್ನ ಇದರ ಉತ್ತಮ ಗುಣಗಳನ್ನು ಕೊಂಚ ಜ್ಞಾಪಿಸಿಕೊಳ್ಳಿ. ಆದರೆ ಈ ಸಿಪ್ಪೆಗಳನ್ನು ಉಪಯೋಗಿಸುವ ಮುನ್ನ ಚೆನ್ನಾಗಿ, ವಿಶೇಷವಾಗಿ ಹೊರಭಾಗವನ್ನು ತೊಳೆಯುವುದು ಅವಶ್ಯ. ಏಕೆಂದರೆ ಬೆಳೆಗಾರರು ಬೆಳೆಯನ್ನು ರಕ್ಷಿಸಿಕೊಳ್ಳಲು ಕೀಟನಾಶಕಗಳನ್ನು ಸಿಂಪಡಿಸುವ ಕಾರಣ ಇವು ಸಿಪ್ಪೆಯಲ್ಲಿ ಹೆಚ್ಚಾಗಿ ಅಂಟಿಕೊಂಡಿರುತ್ತವೆ.

ಸಾಧ್ಯವಾದರೆ ಸಾವಯವ ಕೃಷಿಯಿಂದ ಬೆಳೆದ ಹಣ್ಣು ಹಂಪಲುಗಳನ್ನೇ ಆರಿಸಿಕೊಳ್ಳಿ. ಏಕೆಂದರೆ ಇವನ್ನು ಬೆಳೆಯುವಾಗ ರಾಸಾಯನಿಕಗಳು ಅಥವಾ ಕೀಟನಾಶಕಗಳನ್ನು ಬಳಸಿರದ ಕಾರಣ ಹಣ್ಣುಗಳಂತೆಯೇ ಸಿಪ್ಪೆಯೂ ಆರೋಗ್ಯಕರವಾಗಿದೆ. ಹಣ್ಣುಗಳ ತಿರುಳುಗಳಲ್ಲಿರುವುದಕ್ಕಿಂದ ಕೊಂಚ ಭಿನ್ನವಾದ, ಆದರೆ ದೇಹಕ್ಕೆ ಉಪಯುಕ್ತವಾದ ಪೋಷಕಾಂಶಗಳು ಮತ್ತು ವಿಶೇಷವಾಗಿ ಕರಗದ ನಾರು ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಕಿತ್ತಳೆ ಸಿಪ್ಪೆಯನ್ನು ಆಹಾರದ ರೂಪದಲ್ಲಿ ಸೇವಿಸಲೂ, ರಸ ಹಿಂಡಿ ಚರ್ಮದ ಪೋಷಣೆಗೂ ಉಪಯೋಗಿಸಬಹುದು.

Most Read: ಹಣ್ಣು ಮಾತ್ರವಲ್ಲ, ಅದರ ಸಿಪ್ಪೆಯೂ ಆರೋಗ್ಯದ ಕೀಲಿ ಕೈ

ಕಿತ್ತಳೆ ಸಿಪ್ಪೆಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ನೀರಿನೊಂದಿಗೆ ಬೆರೆಸಿ ಕುಡಿಯುವ ಮೂಲಕ ಹಲವು ವ್ಯಾಧಿಗಳಿಂದ ಗುಣಮುಖರಾಗಬಹುದು. ಕಿತ್ತಳೆ ಸಿಪ್ಪೆಯನ್ನು ಜಜ್ಜಿ ಹಿಂಡಿ ತೆಗೆದ ರಸವನ್ನು ಸ್ನಾನದ ನೀರಿನಲ್ಲಿ ಬೆರೆಸಿ ಸ್ನಾನ ಮಾಡಿದರೆ ನಿದ್ರಾಹೀನತೆ ಮತ್ತು ಒತ್ತಡದಿಂದ ಪಾರಾಗಬಹುದು. ಇದುವರೆಗೆ ನಿಮಗೆ ತಿಳಿದಿರದೇ ಇದ್ದ ಇಂತಹ ಹಲವು ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.

ಅಜೀರ್ಣ ಮತ್ತು ವಾಕರಿಕೆ ಕಡಿಮೆಗೊಳಿಸುತ್ತದೆ

ಅಜೀರ್ಣ ಮತ್ತು ವಾಕರಿಕೆ ಕಡಿಮೆಗೊಳಿಸುತ್ತದೆ

ಆಯುರ್ವೇದದಲ್ಲಿ ಕಿತ್ತಳೆ ಸಿಪ್ಪೆಗೆ ತಿಕ್ತ ಎಂಬ ಹೆಸರಿದೆ. ಕಹಿ ಎಂಬ ಅರ್ಥ ಬರುವ ಈ ಸಿಪ್ಪೆಯಲ್ಲಿ ಹಲವು ಆರೋಗ್ಯಕರ ಗುಣವಿದೆ. ಮೊದಲಿಗೆ ಕಿತ್ತಳೆ ಸಿಪ್ಪೆಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಜೀರ್ಣ ಮತ್ತು ವಾಕರಿಕೆ ಕಡಿಮೆಗೊಳಿಸುತ್ತದೆ

ಅಜೀರ್ಣ ಮತ್ತು ವಾಕರಿಕೆ ಕಡಿಮೆಗೊಳಿಸುತ್ತದೆ

ಅಜೀರ್ಣ, ವಾಕರಿಕೆ, ಹುಳಿತೇಗು, ಹೊಟ್ಟೆಯಲ್ಲಿ ಗುಡುಗುಡುವಿಕೆ, ಹೊಟ್ಟೆಯುಬ್ಬರ ಮೊದಲಾದ ತೊಂದರೆ ಎದುರಾದಾಗ ಒಂದು ಲೋಟ ತಣ್ಣೀರಿಗೆ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಚಮಚ ಈ ಪುಡಿಯನ್ನು ಸೇರಿಸಿ ನೇರವಾಗಿ ಕುಡಿಯಿರಿ. ಕೊಂಚ ಕಹಿ ಎನಿಸಿದರೂ ಕೊಂಚವೇ ಹೊತ್ತಿನಲ್ಲಿ ಹೊಟ್ಟೆಯ ತೊಂದರೆಗಳು ಇಲ್ಲವಾಗುತ್ತವೆ. ಅಲ್ಲದೇ ಇದು ಹಸಿವನ್ನೂ ಹೆಚ್ಚಿಸುತ್ತದೆ.

ಕಫ ಕರಗಿಸುತ್ತದೆ ಮತ್ತು ಕೆಮ್ಮು ನಿವಾರಿಸತ್ತದೆ

ಕಫ ಕರಗಿಸುತ್ತದೆ ಮತ್ತು ಕೆಮ್ಮು ನಿವಾರಿಸತ್ತದೆ

ಕೆಮ್ಮು, ಶೀತ ಆವರಿಸಿದ್ದಾಗ ಗಂಟಲಲ್ಲಿ ಕಫ ಕಟ್ಟಿಕೊಂಡು ಯಾತನೆ ಅನುಭವಿಸುವ ವೇಳೆಯಲ್ಲಿ ಕಿತ್ತಳೆ ಸಿಪ್ಪೆಯ ಪುಡಿ ಬೆರೆಸಿದ ಉಗುರುಬೆಚ್ಚನೆಯ ನೀರು ಆಪತ್ಭಾಂಧವನಾಗಿ ಕಂಡುಬರುತ್ತದೆ. ಇದು ಕಫವನ್ನು ಸಡಿಲಗೊಳಿಸಿ ಶ್ವಾಸನಾಳಗಳಿಂದ ಹೊರಹಾಕಲು ನೆರವಾಗುತ್ತದೆ.

ಕಫ ಕರಗಿಸುತ್ತದೆ ಮತ್ತು ಕೆಮ್ಮು ನಿವಾರಿಸತ್ತದೆ

ಕಫ ಕರಗಿಸುತ್ತದೆ ಮತ್ತು ಕೆಮ್ಮು ನಿವಾರಿಸತ್ತದೆ

ಪರಿಣಾಮವಾಗಿ ಕೆಮ್ಮು ಸಹಾ ಕಡಿಮೆಯಾಗುತ್ತದೆ. ಶ್ವಾಸನಾಳಗಳ ಒಳಭಾಗದ ಸೋಂಕನ್ನು ಸಹಾ ದೂರವಾಗಿಸುತ್ತದೆ. ಇದು ಕಿತ್ತಳೆ ಸಿಪ್ಪೆಯ ಪುಡಿಯ ಪ್ರಯೋಜನಗಳಲ್ಲಿ ಅತ್ಯುತ್ತಮವಾದ ಪ್ರಯೋಜನವಾಗಿದೆ.

ಸೋಂಕು ತಗಲುವುದರಿಂದ ರಕ್ಷಿಸುತ್ತದೆ

ಸೋಂಕು ತಗಲುವುದರಿಂದ ರಕ್ಷಿಸುತ್ತದೆ

ಕಿತ್ತಳೆ ಸಿಪ್ಪೆಯಲ್ಲಿಯೂ ಹಲವು ಅವಶ್ಯಕ ತೈಲಗಳಿವೆ. ಇವು ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ನಿರೋಧಕ ಗುಣಗಳನ್ನು ಹೊಂದಿದೆ. ಈ ಪುಡಿಯನ್ನು ಸೇರಿಸಿದ ನೀರನ್ನು ಕುಡಿಯುವ ಮೂಲಕ ಹೊಟ್ಟೆಯಲ್ಲಿ ಮತ್ತು ಕರುಳುಗಳಲ್ಲಿ ಮನೆಮಾಡಿಕೊಂಡಿದ್ದ ಕ್ರಿಮಿಗಳನ್ನು ನಿವಾರಿಸಲು ಮತ್ತು ಅವುಗಳ ಮೂಲಕ ತಗಲಬಹುದಾಗಿದ್ದ ಸೋಂಕಿನಿಂದ ರಕ್ಷಣೆ ಪಡೆದಂತಾಗುತ್ತದೆ. ಅವಶ್ಯಕ ತೈಲಗಳ ಹೊರತಾಗಿ ಈ ಸಿಪ್ಪೆಯಲ್ಲಿರುವ d-limonene ಎಂಬ ಪೋಷಕಾಂಶ ಹೊಟ್ಟೆಯಲ್ಲಿ ಆಮ್ಲೀಯತೆಯಾಗುವುದನ್ನು ತಪ್ಪಿಸುತ್ತದೆ ಹಾಗೂ ಮಲಬದ್ಧತೆಯಾದಂತೆ ತಡೆಯುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಇತ್ತೀಚಿನ ಸಂಶೋಧನೆಗಳ ಪ್ರಕಾರ ಕಿತ್ತಳೆ ಸಿಪ್ಪೆಯಲ್ಲಿ ಟ್ರೈಗ್ಲಿಸರೈಡ್ ಮತ್ತು ಕೊಲೆಸ್ಟ್ರಾಲ್‌ಗಳನ್ನು ಕರಗಿಸಿಕೊಳ್ಳಬಲ್ಲ ಶಕ್ತಿಯಿದೆ. ಇದು ಈ ಹಾನಿಕಾರಕ ಕಣಗಳನ್ನು ನಿವಾರಿಸಿ ದೇಹದಿಂದ ಹೊರಹಾಕುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ಯಕೃತ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಕರುಳಿನ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ

ಕರುಳಿನ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ

ಕಿತ್ತಳೆ ಸಿಪ್ಪೆಯಲ್ಲಿ hesperidine ಎಂಬ ಫ್ಲೇವನಾಯ್ಡುಗಳಿದ್ದು ಇವು ಕರುಳಿನ ಕ್ಯಾನ್ಸರ್ ತರುವ ಕಣಗಳನ್ನು ನಿವಾರಿಸುತ್ತದೆ. ಈಗಾಗಲೇ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿದ್ದರೆ ಅವನ್ನು ಗುಣಪಡಿಸಲು ಹಾಗೂ ಮತ್ತೆ ಆವರಿಸದಂತೆ ತಡೆಯಲು ಸಹಕರಿಸುತ್ತದೆ. ಅಲ್ಲದೇ ಮೂಳೆಗಳು ಟೊಳ್ಳಾಗುವ osteoporosis ಎಂಬ ಸ್ಥಿತಿಯಿಂದಲೂ ರಕ್ಷಿಸುತ್ತದೆ.

ಒತ್ತಡ ಮತ್ತು ಉದ್ವೇಗದಿಂದ ನಿರಾಳಗೊಳಿಸುತ್ತದೆ

ಒತ್ತಡ ಮತ್ತು ಉದ್ವೇಗದಿಂದ ನಿರಾಳಗೊಳಿಸುತ್ತದೆ

ಕಿತ್ತಳೆ ಸಿಪ್ಪೆಯಲ್ಲಿರುವ ಹಲವು ಅವಶ್ಯಕ ತೈಲಗಳು ನರಗಳನ್ನು ಸಡಿಲಿಸುವ ಮೂಲಕ ಮೆದುಳಿಗೆ ನಿರಾಳ ಭಾವವನ್ನು ನೀಡುವಲ್ಲಿ ಸಹಕರಿಸುತ್ತವೆ. ಇದಕ್ಕಾಗಿ ಸ್ನಾನದ ಬಿಸಿನೀರಿನಲ್ಲಿ ಕಿತ್ತಳೆ ಸಿಪ್ಪೆಯ ಪುಡಿಯನ್ನು ಅಥವಾ ಕಿತ್ತಳೆ ಸಿಪ್ಪೆಯನ್ನು ಅರೆದು ಹಿಂಡಿದ ರಸವನ್ನು ಸೇರಿಸಿ ಸ್ನಾನ ಮಾಡಿದರೆ ಉತ್ತಮ ಪರಿಣಾಮ ಲಭ್ಯವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒತ್ತಡ ಮತ್ತು ಉದ್ವೇಗದಿಂದ ನಿರಾಳಗೊಳಿಸುತ್ತದೆ

ಒತ್ತಡ ಮತ್ತು ಉದ್ವೇಗದಿಂದ ನಿರಾಳಗೊಳಿಸುತ್ತದೆ

ಇದರ ಸುವಾಸನೆ ಮನದ ಬೇಗುದಿ ಮತ್ತು ಒತ್ತಡವನ್ನು ಕಡಿಮೆ ಮಾಡಿ ನಿದ್ರಾಹೀನತೆಯ ತೊಂದರೆಯನ್ನೂ ನಿವಾರಿಸುತ್ತದೆ.

ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಾಳೆಸಿಪ್ಪೆಯ ಬಳಕೆ

ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಾಳೆಸಿಪ್ಪೆಯ ಬಳಕೆ

ಬಾಳೆಸಿಪ್ಪೆಯ ಒಳಭಾಗದಿಂದ ನಿಮ್ಮ ಹಲ್ಲುಗಳನ್ನು ದಿನಕ್ಕೆರಡು ಬಾರಿ ಉಜ್ಜಿಕೊಂಡರೆ ಕ್ರಮೇಣವಾಗಿ ಹಲ್ಲುಗಳು ಬಿಳುಪು ಮತ್ತು ಹೊಳಪನ್ನು ಪಡೆಯುತ್ತವೆ. ಒಂದು ವೇಳೆ ಕೀಟಗಳ ಕಡಿತದಿಂದ ಉರಿಯಾಗುತ್ತಿದ್ದರೆ ಬಾಳೆಯ ಸಿಪ್ಪೆಯಡಿಯಿಂದ ಉಜ್ಜಿಕೊಳ್ಳುವ ಮೂಲಕ ಉರಿ ಕಡಿಮೆಯಾಗುತ್ತದೆ.

ಚರ್ಮದ ಗಂಟುಗಳನ್ನು ನಿವಾರಿಸುತ್ತದೆ

ಚರ್ಮದ ಗಂಟುಗಳನ್ನು ನಿವಾರಿಸುತ್ತದೆ

ಆಣಿ, ಮೊಳೆ ಅಥವಾ ನರಹುಲಿ ಎಂದೂ ಕರೆಯುವ (Wart) ಚಿಕ್ಕ ಗಂಟುಗಳನ್ನು ನಿವಾರಿಸಲು ಬಾಳೆಸಿಪ್ಪೆ ಸಮರ್ಥವಾಗಿದೆ. ಅಲ್ಲದೇ ಮುಂದೆ ಬರದಂತೆಯೂ ತಡೆಯುತ್ತದೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಗಂಟನ್ನು ಆವರಿಸುವಷ್ಟು ಅಗಲವಾದ ಸಿಪ್ಪೆಯನ್ನು ಕತ್ತರಿಸಿ ಗಂಟಿನ ಮೇಲಿಟ್ಟು ಬಟ್ಟೆಯ ಪಟ್ಟಿ ಕಟ್ಟಿಕೊಂಡು ಇಡಿಯ ರಾತ್ರಿ ಕಳೆದು ಮರುದಿನ ನಿವಾರಿಸಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮದ ಗಂಟುಗಳನ್ನು ನಿವಾರಿಸುತ್ತದೆ

ಚರ್ಮದ ಗಂಟುಗಳನ್ನು ನಿವಾರಿಸುತ್ತದೆ

ಇದನ್ನು ಒಂದು ವಾರದವರೆಗೆ ಪ್ರತಿದಿನ ಆಚರಿಸಬೇಕು. ಅಲ್ಲದೇ ದಿನದ ಹೊತ್ತಿನಲ್ಲಿ ಗಂಟಿನ ಮೇಲೆ ಬಾಳೆಸಿಪ್ಪೆಯ ಒಳಭಾಗದಿಂದ ಆಗಾಗ ಉಜ್ಜಿಕೊಳ್ಳುತ್ತಾ ಇರಬೇಕು. ಇದು ನಿಧಾನವಾಗಿ ಗಂಟನ್ನು ಕರಗಿಸುತ್ತಾ ಕೆಲವೇ ದಿನಗಳಲ್ಲಿ ಇಲ್ಲವಾಗಿಸುತ್ತದೆ.

ಚರ್ಮದಲ್ಲಿ ಚುಚ್ಚಿಕೊಂಡಿದ್ದ ಮುಳ್ಳುಗಳನ್ನು ನಿವಾರಿಸುತ್ತದೆ

ಚರ್ಮದಲ್ಲಿ ಚುಚ್ಚಿಕೊಂಡಿದ್ದ ಮುಳ್ಳುಗಳನ್ನು ನಿವಾರಿಸುತ್ತದೆ

ಕೆಲವೊಮ್ಮೆ ಮುಳ್ಳು, ಮರದ ಚೆಕ್ಕೆ ಮೊದಲಾದವು ಚರ್ಮದಡಿಗೆ ಚುಚ್ಚಿಕೊಂಡು ಅರ್ಧಭಾಗ ಒಳಗಿದ್ದಂತೆಯೇ ಮುರಿದುಬಿಡುತ್ತವೆ. ಇವನ್ನು ಹೊರತೆಗೆಯುವುದು ಅಷ್ಟು ಸುಲಭವಲ್ಲ. ಆದರೆ ಇದಕ್ಕೆ ಪರಿಹಾರ ಬಾಳೆಸಿಪ್ಪೆಯಲ್ಲಿದೆ. ಬಾಳೆಸಿಪ್ಪೆಯ ಒಳಭಾಗ ಮುಳ್ಳು ಹೊಕ್ಕ ಸ್ಥಳ ಆವರಿಸುವಂತೆ ಕೊಂಚ ಕಾಲ ಇಟ್ಟು ಬಳಿಕ ಸ್ವಚ್ಛವಾದ ಸೂಜಿಯ ಮೂಲಕ ಪ್ರಯತ್ನಿಸಿ ನೋಡಿ, ಹೆಚ್ಚಿನ ಶ್ರಮವಿಲ್ಲದೇ ಮುಳ್ಳು ಸುಲಭವಾಗಿ ಹೊರಬರುತ್ತದೆ.

ತಲೆನೋವು ನಿವಾರಿಸುತ್ತದೆ

ತಲೆನೋವು ನಿವಾರಿಸುತ್ತದೆ

ತಲೆನೋವು ಅತಿಯಾಗಿದ್ದರೆ ಬಾಳೆಹಣ್ಣಿನ ಸಿಪ್ಪೆಯನ್ನು ಹಣೆಗೆ ಅಡ್ಡಲಾಗಿಟ್ಟು ಒಂದು ಬಟ್ಟೆಯಿಂದ ಅತಿ ಬಿಗಿಯಿಲ್ಲದಂತೆ ಕಟ್ಟಿಕೊಳ್ಳಿ. ಕೊಂಚ ಸಮಯದ ಬಳಿಕ ತಲೆನೋವು ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತಿರುವುದು ನಿಮ್ಮ ಅನುಭವಕ್ಕೆ ಬರುತ್ತದೆ.

read in english - 10 Health Benefits Of Orange And Banana Peels

English summary

Health Benefits Of Orange And Banana Peels

Fruits, as we all know are good for our health in every way. Do you know that peels also have many beneficial properties for your health? Among them are orange and banana peels. These mighty peels have many health benefits. Now you will never throw the peels away after knowing their immense benefits. Have a look at some unknown health of orange and banana peels.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more