For Quick Alerts
ALLOW NOTIFICATIONS  
For Daily Alerts

ಇದು ಮಾಮೂಲಿ ಕಾಫಿ ಅಲ್ಲ-ಸಕ್ಕರೆ ರಹಿತ ಬ್ಲ್ಯಾಕ್ ಕಾಫಿ!

By C.M.Prasad
|

ಕಾಫಿ ಭಾರತಕ್ಕೆ ಹೇಗೆ ಬಂದಿತು ಎಂಬ ಬಗ್ಗೆ ಒಂದು ಕುತೂಹಲಕರ ಕಥೆಯಿದೆ. ಬಾಬಾ ಬುಡನ್‌ರವರು ಅರೇಬಿಯಾದಿಂದ ಹಿಂದಿರುಗಿ ಬರುವಾಗ ಕೆಲವು ಕಾಫಿಬೀಜಗಳನ್ನು ತಮ್ಮ ಜೋಳಿಗೆಯಲ್ಲಿ ತಂದು ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯಲ್ಲಿ ನೆಟ್ಟಿದ್ದರಂತೆ. ಆದ್ದರಿಂದಲೇ ನಮ್ಮಲ್ಲಿ ಬಹುತೇಕ ಬೆಳೆಯಲಾಗುತ್ತಿರುವ ತಳಿಗೆ 'ಅರೇಬಿಕಾ' ಎಂಬ ಹೆಸರೇ ಇದೆ. ಆದರೆ ಕಾಫಿಯನ್ನು ಜನಪ್ರಿಯಗೊಳಿಸುವಲ್ಲಿ ನೈಜ ಶ್ರಮ ಬ್ರಿಟಿಷರದ್ದಾಗಿದೆ.

ಕಷಾಯದ ಹೊರತಾಗಿ ಬೇರೇನನ್ನೂ ಕುಡಿಯದ ನಮ್ಮ ಹಿರಿಯರಿಗೆ ಅಂದಿನ ದಿನಗಳಲ್ಲಿ ಪುಕ್ಕಟೆ ಕಾಫಿಯನ್ನು ಕುಡಿಸಿ ಕುಡಿಸಿಯೇ ಕಾಫಿಗೆ ದಾಸರನ್ನಾಗಿಸಿದ ಬಳಿಕವೇ ಮಾರಾಟಕ್ಕೆ ಹೊರತಂದರಂತೆ. ಆದರೆ ಕಾಫಿ ಕುಡಿಯುವುದು ಒಳ್ಳೆಯದಲ್ಲ ಎಂದು ಹಲವರು ಅಭಿಪ್ರಾಯ ಪಡುತ್ತಾರೆ. ಒಂದೇ ಮಾತಿನಲ್ಲಿ ವಿಶ್ವದ ಜನಪ್ರಿಯ ಪೇಯವಾದ ಕಾಫಿಯನ್ನು ತ್ಯಜಿಸುವುದುಂಟೇ? ಖಂಡಿತ ಇಲ್ಲ ಅಲ್ಲವೇ? ಬ್ಲ್ಯಾಕ್ ಕಾಫಿ VS ಸಾಮಾನ್ಯ ಕಾಫಿ ಇದರಲ್ಲಿ ಯಾವುದು ಆರೋಗ್ಯಕಾರಿ?

ಅದರಲ್ಲೂ ಸಕ್ಕರೆ ರಹಿತ ಬ್ಲ್ಯಾಕ್ ಕಾಫಿಯನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ ನಿಜಕ್ಕೂ ಆರೋಗ್ಯಕ್ಕೆ ಉತ್ತಮ. ಇದರಲ್ಲಿರುವ ಆರೋಗ್ಯಕರ ಅಂಶವುಳ್ಳ ಕೆಫೀನ್ ಜೊತೆ caffeic acid, ferulic acid ಮತ್ತು chlorogenic acid ಎಂಬ ಪೋಷಕಾಂಶಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ನೆರವಾಗುತ್ತವೆ. ಮುಖ್ಯವಾಗಿ ನಮ್ಮ ಚಟುವಟಿಕೆಗಳು ಕುಂಠಿತವಾಗಲು ಕಾರಣವಾಗುವ adrenal fatigue ಎಂಬ ಸುಸ್ತನ್ನು ಹೋಗಲಾಡಿಸಲು ಈ ಪೋಷಕಾಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಷ್ಟೇ ಅಲ್ಲದೆ ಇದರಲ್ಲಿನ ಉತ್ಕರ್ಷಣ ನಿರೋಧಕ ಶಕ್ತಿಯು ಹೃದಯದ ಆರೋಗ್ಯವನ್ನು ಹೆಚ್ಚಿಸುವುದಲ್ಲದೆ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುತ್ತದೆ. ಮಧುಮೇಹಿಗಳಿಗೂ ಸಹ ಇದು ವರದಾನವಾಗಿದೆ.

ಇನ್ನು ಬ್ಲ್ಯಾಕ್ ಕಾಫಿಯು ನಿಮ್ಮ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಲು ಕಾರಣವೇನೆಂದರೆ, ಅದರ ಒಂದು ಕಪ್‌ನಲ್ಲಿ ಶೇಖಡಾ 60 ರಷ್ಟು ಪೌಷ್ಠಿಕಾಂಶಗಳು, 20 ರಷ್ಟು ವಿಟಮಿನ್, 10 ರಷ್ಟು ಕ್ಯಾಲೋರಿ ಮತ್ತು 10 ರಷ್ಟು ಖನಿಜ ಸತ್ವಗಳು ಒಳಗೊಂಡಿದ್ದು, ದೇಹದ ಸಾಮರ್ಥ್ಯವನ್ನು ಹೆಚ್ಚಿಸಿ ಸದೃಢಗೊಳಿಸುತ್ತದೆ. ಅದರಲ್ಲಿನ ಕಫೇನ್ ಅಂಶವು ದೇಹವನ್ನು ಹೆಚ್ಚು ಚುರುಕುಗೊಳಿಸುತ್ತದೆ. ಆದರೆ ಅದನ್ನು ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಅಷ್ಟೇ ಹಾನಿಕರ. ಆದ್ದರಿಂದ ಮಿತವಾಗಿ ಅಂದರೆ ದಿನಕ್ಕೆ 2 ಕಪ್ ನಂತೆ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಸಕ್ಕರೆ ರಹಿತ ಬ್ಲ್ಯಾಕ್ ಕಾಫಿಯಿಂದ ದೇಹದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ನೀವು ಕೇಳಿರದ ಕೆಲವು ಸರಳ ವಿಧಾನಗಳನ್ನು ನಿಮಗಾಗಿ ನಾವು ನೀಡುತ್ತಿದ್ದೇವೆ. ಮುಂದೆ ಓದಿ...

ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ

ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ

ಬ್ಲ್ಯಾಕ್ ಕಾಫಿಯು ಮನಸ್ಸಿನ ಆರೋಗ್ಯಕ್ಕೆ ಸದಾ ಉತ್ತಮ. ಇದು ಮೆದುಳನ್ನು ಸಹ ಸದಾ ಚುರುಕಾಗಿರುವಂತೆ ಮಾಡುತ್ತದೆ. ಇದರಿಂದ ಜ್ಞಾಪಕ ಶಕ್ತಿಯು ತಾನಾಗೇ ಹೆಚ್ಚುತ್ತದೆ. ಹಾಗೆಯೇ ನರಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸಿ, ವಯಸ್ಸಾದಂತೆ ಬರುವ ಬುದ್ಧಿಮಾಂದ್ಯತೆಯನ್ನು ತಡೆಯುವ ಉತ್ತಮ ಸಾಧನವಾಗಿದೆ.

ನಿಮ್ಮನ್ನು ಸದಾ ಬುದ್ಧಿವಂತಗೊಳಿಸುತ್ತದೆ

ನಿಮ್ಮನ್ನು ಸದಾ ಬುದ್ಧಿವಂತಗೊಳಿಸುತ್ತದೆ

ಇದರಲ್ಲಿರುವ ಕೆಫೀನ್ ಅಂಶವು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸತ್ವದಿಂದ ಕೂಡಿದ್ದು, ಇದು ದೇಹದೊಂದಿಗೆ ಪ್ರತಿಕ್ರಯಿಸಿ ಮಾನಸಿಕ ಸ್ಥಿತಿಯನ್ನು ದೃಢಗೊಳಿಸುತ್ತದೆ. ಅರಿವಿನ ಶಕ್ತಿ ಹಾಗೂ ಮೆದುಳಿನ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತದೆ. ದಿನಕಳೆದಂತೆ ಆತ/ಆಕೆಯನ್ನು ಇತರರಿಗಿಂತ ಹೆಚ್ಚು ಚತುರರನ್ನಾಗಿಸುತ್ತದೆ.

ಹಾನಿಕಾರಕ ಅಂಶಗಳನ್ನು ಹೊರಹಾಕುತ್ತದೆ

ಹಾನಿಕಾರಕ ಅಂಶಗಳನ್ನು ಹೊರಹಾಕುತ್ತದೆ

ಕಾಫಿ ಒಂದು ರೀತಿಯ ಮೂತ್ರವರ್ಧಕ ಎಂದರೆ ತಪ್ಪಾಗಲಾರದು. ಸಕ್ಕರೆ ಹಾಕದೆ ಸೇವಿಸುವ ಬಾಕ್ ಕಾಫಿಯಿಂದ ದೇಹದಲ್ಲಿರುವ ವಿಷಕಾರಿ ಹಾಗೂ ಹಾನಿಕಾರಕ ಬ್ಯಾಕ್ಟೀರಿಯಾ ಅಂಶಗಳನ್ನು ಮೂತ್ರದ ಮೂಲಕ ಹೊರಹಾಕಲು ನೆರವಾಗುತ್ತದೆ. ಇದರಿಂದ ಹೊಟ್ಟೆಯ ಭಾಗವನ್ನು ಸ್ವಚ್ಛಗೊಳಿಸಿ ವಿವಿಧ ಕಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ.

ದೇಹದ ತೂಕ ಇಳಿಸಲು ರಾಮಬಾಣ

ದೇಹದ ತೂಕ ಇಳಿಸಲು ರಾಮಬಾಣ

ಕಡಿಮೆ ಅವಧಿಯಲ್ಲಿ ದೇಹದ ತೂಕವನ್ನು ಸಕ್ಕರೆ ರಹಿತ ಬ್ಲ್ಯಾಕ್ ಕಾಫಿ ಸೇವನೆಯಿಂದ ಇಳಿಸಬಹುದು. ಇದು ನಿಮ್ಮ ದೇಹದ ಸಂಚಲನ ವ್ಯವಸ್ಥೆಯನ್ನು ಶೇಖಡಾ 50 ರಷ್ಟು ಸದೃಢಗೊಳಿಸಲು ನೆರವಾಗಿ, ಹೆಚ್ಚು ವ್ಯಾಯಮ ಮಾಡುವಂತೆ ಪ್ರೇರೇಪಿಸುತ್ತದೆ. ಇದು ಹೊಟ್ಟೆಯ ಕೆಳಿಗಿನ ಭಾಗದಲ್ಲಿರುವ ಬೊಜ್ಜನ್ನು ಕರಗಿಸಲು ಸಹ ಬಳಸುತ್ತಾರೆ. ಆದ್ದರಿಂದ ಇದನ್ನು ಬೊಜ್ಜು ಕರಗಿಸುವ ಸಾಧನವೆನ್ನಬಹುದು.

ಹೃದಯ ಸಂಬಂಧಿ ರೋಗಗಳು ಬರುವುದಿಲ್ಲ

ಹೃದಯ ಸಂಬಂಧಿ ರೋಗಗಳು ಬರುವುದಿಲ್ಲ

ಸಕ್ಕರೆ ಹಾಕದೆ ಸೇವಿಸುವ ಬ್ಲ್ಯಾಕ್ ಕಾಫಿಯು ಹೃದಯಕ್ಕೆ ಬಹಳ ಉಪಯುಕ್ತಕರ. ದೇಹದಲ್ಲಿನ ಹೆಚ್ಚಿನ ಉಷ್ಣಾಂಶವನ್ನು ತಗ್ಗಿಸಿ, ಸಂಭವಿಸಬಹುದಾದ ಹೃದಯ ಸಂಬಂಧಿ ಕಾಯಿಲೆಯ ಪ್ರಮಾಣವನ್ನು ಸಾಧ್ಯವಾದಷ್ಟು ನಿಯಂತ್ರಿಸುತ್ತದೆ.

English summary

Health Benefits Of Black Coffee Without Sugar

Coffee is one of the best beverages to drink when compared to tea. Coffee has properties that will help boost your memory, improve metabolism that aids in weight loss, and, most importantly, coffee helps to keep your body fit. Experts suggest that adults should drink at least two cups of black coffee without sugar every day, that is, once in the morning after breakfast and one cup in the evening. Black coffee benefits the heart.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more