For Quick Alerts
ALLOW NOTIFICATIONS  
For Daily Alerts

ವಾರಕ್ಕೊಮ್ಮೆ ತಲೆ ಮಸಾಜ್-ಇದರ ಅನುಭವವೇ ಬೇರೆ!

By Super
|

ಶರೀರಕ್ಕೆ ಮಸಾಜ್ ಮಾಡುವಂತೆಯೇ ತಲೆಗೂ ಮಸಾಜ್ ಮಾಡಬಹುದು. ಒತ್ತಡದಿಂದ ನಲುಗಿರುವ ಶರೀರವನ್ನು ನಿರಾಳಗೊಳಿಸಲು ತಲೆಯ ಮಸಾಜ್ ಒಂದು ಉತ್ತಮ ಕ್ರಮವಾಗಿದೆ. ಆದರೆ ಈ ಮಸಾಜ್ ಅನ್ನು ನುರಿತ ಮತ್ತು ಅನುಭವಿ ಜನರಿಂದಲೇ ಮಾಡಿಸಿಕೊಳ್ಳುವುದು ಅಗತ್ಯ.

ಈ ಮಸಾಜ್ ನೀಡುವ ತಜ್ಞರ ಪ್ರಕಾರ ಸರಿಯಾದ ಕ್ರಮದಲ್ಲಿ ತಲೆಯ ಮಸಾಜ್ ಆಗಾಗ ಮಾಡಿಸಿಕೊಳ್ಳುತ್ತಿದ್ದರೆ ಕಾರ್ಯದ ಒತ್ತಡದಿಂದ ಮೆದುಳು ನಿರಾಳವಾಗಿ ಖಿನ್ನತೆ, ಉದ್ವಿಗ್ನತೆ, ನಿದ್ರಾಹೀನತೆ ಮೊದಲಾದ ತೊಂದರೆಗಳಿಂದ ದೂರವಿರಲು ಸಹಕಾರಿಯಾಗಿದೆ. ವಾರಕ್ಕೊಂದು ಬಾರಿ ಬಿಸಿ ಎಣ್ಣೆ ಉಪಯೋಗಿಸಿ ಮಾಡುವ ತಲೆ ಮಸಾಜ್ ಅತ್ಯುತ್ತಮ ಫಲ ನೀಡುತ್ತದೆ. ಕೂದಲಿಗೆ ಬಿಸಿ ಎಣ್ಣೆ ಮಸಾಜ್ ನಿಂದ 7 ಲಾಭ

ತಲೆ ಮಸಾಜ್ ಸೇವೆ ಪಡೆಯಲು ಈ ಕ್ಷೇತ್ರದಲ್ಲಿ ನುರಿತ ಸ್ಪಾ ಅಥವಾ ಆಯುರ್ವೇದ ಕೇಂದ್ರವನ್ನು ಭೇಟಿಯಾಗುವುದು ಅತ್ಯುತ್ತಮವಾಗಿದೆ. ಆದರೆ ಇದಕ್ಕೆ ಸಮಯವಿಲ್ಲದವರು ಮನೆಯಲ್ಲಿ ತಮಗೆ ತಾವೇ ಮಸಾಜ್ ಮಾಡಿಕೊಳ್ಳಬಹುದು. ಇದಕ್ಕಾಗಿ ಸುಲಭವಾದ ಮೂರು ಹಂತಗಳ ಕ್ರಮವಿದೆ. ಮೊದಲು ಸುಮಾರು ನಾಲ್ಕರಿಂದ ಐದು ದೊಡ್ಡ ಚಮಚ ಅಪ್ಪಟ ಕೊಬ್ಬರಿಎಣ್ಣೆಯನ್ನು ಕೊಂಚ ಬಿಸಿಮಾಡಿ. ಬಳಿಕ ಬೆರಳುಗಳ ತುದಿಯನ್ನು ಎಣ್ಣೆಯಲ್ಲಿ ಮುಳುಗಿಸಿ ತಲೆಕೂದಲ ಬುಡಕ್ಕೆ ಹಚ್ಚುತ್ತಾ ಬನ್ನಿ. ಆರೋಗ್ಯವಂತ ಕೇಶಕ್ಕಾಗಿ ಪರಿಪೂರ್ಣ ಹೇರ್ ಮಸಾಜ್ ಸಲಹೆಗಳು

ಇಡಿಯ ತಲೆಗೆ ಎಣ್ಣೆ ಹಚ್ಚಿಕೊಂಡ ಬಳಿಕ ವೃತ್ತಾಕಾರದಲ್ಲಿ ಬೆರಳುಗಳಿಂದ ಇಡಿಯ ತಲೆಯನ್ನು ನೇವರಿಸುತ್ತಾ ಬನ್ನಿ. ಅಗತ್ಯವಿದ್ದಷ್ಟು ಒತ್ತಡ ಹಾಕಿ. ಸುಮಾರು ಆರು ನಿಮಿಷಗಳ ಕಾಲ ಹೀಗೇ ಮಸಾಜ್ ಮಾಡುತ್ತಿರಬೇಕು. ಬಳಿಕ ಕೊಂಚ ಕಾಲ ವಿರಾಮ ನೀಡಿ ಇನ್ನೊಂದು ಆರು ನಿಮಿಷಗಳ ಕಾಲ ಮಸಾಜ್ ಮಾಡಿ. ಈ ಮಸಾಜ್‌ನ ಉಪಯೋಗಗಳೇನು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ತಿಳಿದುಕೊಳ್ಳೋಣ..

ಮೈಗ್ರೇನ್ ಬರುವುದನ್ನು ತಡೆಯುತ್ತದೆ

ಮೈಗ್ರೇನ್ ಬರುವುದನ್ನು ತಡೆಯುತ್ತದೆ

ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ತಲೆನೋವು ಬರುವ ಸಂಭವವನ್ನು ಕಡಿಮೆಗೊಳಿಸುತ್ತದೆ. ಒಂದು ವೇಳೆ ತಲೆನೋವಿದ್ದರೆ ಉಗುರುಬೆಚ್ಚನೆಯ ಬಿಸಿಯಿರುವ ಕೊಬ್ಬರಿ ಎಣ್ಣೆಯನ್ನು ಎರಡು ಬೆರಳುಗಳಿಗೆ ಹಚ್ಚಿ ತಲೆಯ ಭಾಗಕ್ಕೆ ಚಿವುಟುವಂತೆ ಹಚ್ಚುತ್ತಾ ಬನ್ನಿ. ಇದು ತಲೆನೋವನ್ನು ಕಡಿಮೆಗೊಳಿಸಲು ಸಹಕರಿಸುತ್ತದೆ.

ತಲೆನೋವನ್ನು ಶಮನಗೊಳಿಸುತ್ತದೆ

ತಲೆನೋವನ್ನು ಶಮನಗೊಳಿಸುತ್ತದೆ

ತಲೆನೋವಿಗೆ ಮಸಾಜ್ ಉತ್ತಮವಾದ ಪರಿಹಾರ ನೀಡುತ್ತದೆ. ಒಂದು ವೇಳೆ ತಲೆನೋವು ದಿನವೂ ಕಾಣಿಸಿಕೊಳ್ಳುತ್ತಿದ್ದರೆ ಕೊಬ್ಬರಿ ಎಣ್ಣೆಯ ಬದಲಾಗಿ ಅವಶ್ಯಕ ತೈಲ (essential oils) ಬಳಸಿ ಮಸಾಜ್ ಮಾಡುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಮುಂದೆ ಓದಿ

ತಲೆನೋವನ್ನು ಶಮನಗೊಳಿಸುತ್ತದೆ

ತಲೆನೋವನ್ನು ಶಮನಗೊಳಿಸುತ್ತದೆ

ಮಸಾಜ್ ವೇಳೆ ಈ ಎಣ್ಣೆಯ ಸುವಾಸನೆಯನ್ನು ಸಾಧ್ಯವಾದಷ್ಟು ಆಳವಾಗಿ ಒಳಗೆಳೆದುಕೊಳ್ಳುವುದರಿಂದ ನೋವು ಕಡಿಮೆಯಾಗಲು ಹೆಚ್ಚಿನ ಸಹಕಾರ ಸಿಗುತ್ತದೆ.

ಬೆನ್ನು ನೋವನ್ನು ಕಡಿಮೆಗೊಳಿಸುತ್ತದೆ

ಬೆನ್ನು ನೋವನ್ನು ಕಡಿಮೆಗೊಳಿಸುತ್ತದೆ

ವಿಶೇಷವಾಗಿ ತಲೆಯ ಹಿಂಭಾಗ ಮತ್ತು ಕುತ್ತಿಗೆಯ ಮೇಲ್ಭಾಗದಲ್ಲಿ ಮಸಾಜ್ ಮಾಡುವುದರಿಂದ ಬೆನ್ನುಹುರಿಗೆ ಸಾಕಷ್ಟು ಪ್ರಮಾಣದಲ್ಲಿ ರಕ್ತಪರಿಚಲನೆಯಾಗುವ ಮೂಲಕ ಕುತ್ತಿಗೆಯ ಹಿಂಭಾಗ, ಬೆನ್ನು ಮತ್ತು ಕೆಳಬೆನ್ನಿನ ನೋವುಗಳು ಕಡಿಮೆಯಾಗುತ್ತವೆ.

ಬೆನ್ನು ನೋವನ್ನು ಕಡಿಮೆಗೊಳಿಸುತ್ತದೆ

ಬೆನ್ನು ನೋವನ್ನು ಕಡಿಮೆಗೊಳಿಸುತ್ತದೆ

ಆದರೆ ಈ ಮಸಾಜ್ ಅನ್ನು ಸ್ವತಃ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ಸ್ಪಾ ಅಥವಾ ಆಯುರ್ವೇದ ಮಸಾಜ್ ಕೇಂದ್ರಕ್ಕೆ ಭೇಟಿ ನೀಡುವುದು ಉತ್ತಮ.

ನಿದ್ರಾಹೀನತೆಯನ್ನು ನಿವಾರಿಸುತ್ತದೆ

ನಿದ್ರಾಹೀನತೆಯನ್ನು ನಿವಾರಿಸುತ್ತದೆ

ಒಂದು ವೇಳೆ ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಸಂಜೆಯ ಬಳಿಕ ತಲೆಯ ಮಸಾಜ್ ಮಾಡಿಸಿಕೊಳ್ಳುವ ಮೂಲಕ ನಿದ್ದೆ ಬೇಗನೇ ಬರಲು ಸಾಧ್ಯವಾಗುತ್ತದೆ. ತಜ್ಞರ ಪ್ರಕಾರ ಸೂರ್ಯಾಸ್ತದ ಬಳಿಕ ಸುಮಾರು ಒಂದು ಗಂಟೆಯ ಅವಧಿಯಲ್ಲಿ ತಡೆತಡೆದು ಮಾಡುವ ತಲೆ ಮಸಾಜ್ ಮತ್ತು ಸಾಧ್ಯವಾದರೆ ಶಿರೋಧಾರ (ತಲೆಯ ಮೇಲೆ ಉಗುರುಬೆಚ್ಚನೆಯ ಬಿಸಿ ಇರುವ ಎಣ್ಣೆ ಸುರಿಯುತ್ತಿರುವಂತೆ ಮಾಡುವುದು) ನಡೆಸಿದ ಬಳಿಕ ತಣ್ಣೀರಿನಿಂದ ಸ್ನಾನ ಮಾಡಿ.

ನಿದ್ರಾಹೀನತೆಯನ್ನು ನಿವಾರಿಸುತ್ತದೆ

ನಿದ್ರಾಹೀನತೆಯನ್ನು ನಿವಾರಿಸುತ್ತದೆ

ಸುಮಾರು ಒಂದು ಗಂಟೆ ಬಿಟ್ಟು ರಾತ್ರಿಯ ಊಟ, ನಂತರ ಸುಮರು ಅರ್ಧ ಗಂಟೆಯ ಅಡ್ಡಾಟದ ಬಳಿಕ ಪಾದಗಳನ್ನು ತಣ್ಣೀರಿನಿಂದ ತೊಳೆದುಕೊಂಡು ಮಲಗುವುದರಿಂದ ನಿದ್ರೆ ಬೇಗನೇ ಆವರಿಸುತ್ತದೆ.

ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ

ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ

ತಲೆಮಸಾಜ್ ವೇಳೆಯಲ್ಲಿ ಬಿಸಿ ಎಣ್ಣೆಯ ಕಾರಣ ತಲೆಗೆ ಹರಿಯುವ ರಕ್ತದ ಪ್ರಮಾಣ ಹೆಚ್ಚಾಗಬೇಕಾಗುತ್ತದೆ.

ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ

ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ

ಪರಿಣಾಮವಾಗಿ ಹೃದಯದಿಂದ ಹೊರಹರಿಯುವ ರಕ್ತವೂ ಹೆಚ್ಚುವುದರಿಂದ ಒಟ್ಟಾರೆ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಇದು ಹೃದಯಾಘಾತದ ಸಂಭವವನ್ನು ಕಡಿಮೆಗೊಳಿಸುತ್ತದೆ.

ಏಕಾಗ್ರತೆಯನ್ನು ಹೆಚ್ಚಿಸುತ್ತದೆ

ಏಕಾಗ್ರತೆಯನ್ನು ಹೆಚ್ಚಿಸುತ್ತದೆ

ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಅವಶ್ಯಕತೆಯಿದೆ. ಒಂದು ವೇಳೆ ಮಕ್ಕಳಲ್ಲಿ ಏಕಾಗ್ರತೆಯ ಕೊರತೆಯಿಂದಾಗಿ ಓದಿನಲ್ಲಿ ಹಿಂದೆ ಬಿದ್ದಿದ್ದರೆ ವಾರಕ್ಕೊಮ್ಮೆ ತಲೆಗೆ ಮಸಾಜ್ ಮಾಡುವ ಮೂಲಕ ಅವರಲ್ಲಿ ಓದುವ ಹಂಬಲ ಮತ್ತು ಏಕಾಗ್ರತೆ ಹೆಚ್ಚಿಸಲು ಸಾಧ್ಯವಾಗುತ್ತದೆ.

ಒತ್ತಡವನ್ನು ಕಡಿಮೆಗೊಳಿಸುತ್ತದೆ

ಒತ್ತಡವನ್ನು ಕಡಿಮೆಗೊಳಿಸುತ್ತದೆ

ಮಾನಸಿಕ ಒತ್ತಡದಿಂದ ಬಳಲುತ್ತಿರುವವರಿಗೆ ತಲೆ ಮಸಾಜ್ ಉತ್ತಮ ಪರಿಹಾರ ನೀಡುತ್ತದೆ. ಬೆರಳುಗಳಿಂದ ನಯವಾಗಿ ಮಸಾಜ್ ಮಾಡುತ್ತಿದ್ದರೆ ಮೆದುಳಿಗೆ ಹರಿಯುವ ರಕ್ತದಲ್ಲಿ ಹೆಚ್ಚಳ ಮತ್ತು ಒತ್ತಡವನ್ನು ಕಡಿಮೆ ಮಾಡುವ ಹಾರ್ಮೋನುಗಳು ಲಭ್ಯವಾಗುವುದರಿಂದ ಮೆದುಳು ನೈಸರ್ಗಿಕವಾಗಿ ಒತ್ತಡದಿಂದ ಹೊರಬರಲು ನೆರವಾಗುತ್ತದೆ.

ಶರೀರಕ್ಕೆ ನವಚೈತನ್ಯ ತುಂಬುತ್ತದೆ

ಶರೀರಕ್ಕೆ ನವಚೈತನ್ಯ ತುಂಬುತ್ತದೆ

ತಲೆಗೆ ಮಸಾಜ್ ಮಾಡುವುದರಿಂದ ಕೇವಲ ತಲೆಗೆ ಮಾತ್ರವಲ್ಲದೇ ಇಡಿಯ ಶರೀರಕ್ಕೆ ಉತ್ತಮವಾದ ಪೋಷಣೆ ದೊರಕುತ್ತದೆ. ವಾರದ ಪ್ರಾರಂಭದ ದಿನದಂದು ತಲೆ ಮಸಾಜ್ ಮಾಡಿ ತಣ್ಣೀರಿನ ಸ್ನಾನ ಮಾಡಿ ದಿನವನ್ನು ಪ್ರಾರಂಭಿಸುವ ಮೂಲಕ ಇಡಿಯ ವಾರ ದೇಹ ಚಟುವಟಿಕೆಯಿಂದಿದ್ದು ಚೈತನ್ಯದಿಂದ ಕೂಡಿರಲು ಸಾಧ್ಯವಾಗುತ್ತದೆ.

English summary

Health Benefits Of A Head Massage

Getting a head massage is one of the most amazing things you can do to help relax yourself in a natural way. Massages on the whole help one to feel light and wonderful in body and mind. Experts state that those who are under high pressure at work should get a hot oil head massage at least once in a week. This head massage will help you to de-stress, improve in blood circulation, reduce blood pressure and most of all it will calm your nerves.
Story first published: Friday, August 21, 2015, 12:54 [IST]
X
Desktop Bottom Promotion