For Quick Alerts
ALLOW NOTIFICATIONS  
For Daily Alerts

ಮರೆವಿನ ಕಾಯಿಲೆ: ಮೈಮರೆತರೆ ಆಪತ್ತು ಕಟ್ಟಿಟ್ಟ ಬುತ್ತಿ

By Deepak m
|

ಸಾಮಾನ್ಯವಾಗಿ, ಅಲ್ಜೈಮರ್ಸ್ ಕಾಯಿಲೆ (ಮರೆವಿನ ಕಾಯಿಲೆ) ಯನ್ನು ತಡೆಯಲು, ಹಲವಾರು ಪ್ರೋಟೀನ್ ಮತ್ತು ಖನಿಜಾಂಶಗಳು ಇರುವ ಆಹಾರಗಳು ಇಂದು ನಮಗೆ ಮಾರಕಟ್ಟೆಯಲ್ಲಿ ದೊರೆಯುತ್ತಿದ್ದರೂ ಕೂಡ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಮಾತ್ರ ಸಾಧ್ಯವಿಲ್ಲ. ಅಲ್ಜೈಮರ್ಸ್ ಎಂಬುದು ಎಲ್ಲರನ್ನು ಭಯಪಡಿಸುವ ಕಾಯಿಲೆಯಾಗಿದೆ. ಈ ಕಾಯಿಲೆಯು ಒಮ್ಮೆ ಬಂದರೆ ಸಾಕು ಅದು ಆ ವ್ಯಕ್ತಿಯಲ್ಲಿರುವ ಕಾರಣ ನೀಡುವ ಸಾಮರ್ಥ್ಯ ಮತ್ತು ಚಿಂತಿಸುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ.

ಇನ್ನೂ ಆತಂಕಕಾರಿ ವಿಷಯವೇನೆಂದರೆ, ಇತ್ತೀಚೆಗೆ ಈ ಕಾಯಲೆ ಎಳೆ ಮಕ್ಕಳಲ್ಲಿ ಸಾಮಾನ್ಯವಾಗುತ್ತಿದೆ. ಮುಖ್ಯವಾಗಿ ಅಲ್ಜೈಮರ್ಸ್ ಕಾಯಿಲೆಯು ವಂಶವಾಹಿಗಳ ಪ್ರಭಾವದಿಂದ ಬರುತ್ತವೆ. ಆದರೆ ಆರೋಗ್ಯ ತಙ್ಞರು ಈ ಕಾಯಿಲೆ ಬರಲು ಇರುವ ಇನ್ನಿತರ ಕಾರಣಗಳ ಬಗ್ಗೆ ಪಟ್ಟಿ ನೀಡುತ್ತಾರೆ. ಅವುಗಳಲ್ಲಿ ಪೋಷಕಾಂಶಗಳು, ಶಿಕ್ಷಣ, ಮಧುಮೇಹ, ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳು ಸೇರಿವೆ.

ಅಲ್ಜೈಮರ್ಸ್ ಬಂದರೆ ಅದಕ್ಕೆ ನಮ್ಮ ಮೇಲೆ ಯಾವುದೇ ಮುಲಾಜು ಇರುವುದಿಲ್ಲ. ಇದರ ವಿಚಾರಕ್ಕೆ ಬಂದಾಗ ಚಿಕಿತ್ಸೆಗಿಂತ ನಿಯಂತ್ರಣವೇ ಒಳ್ಳೆಯದು. ಏಕೆಂದರೆ ಇದಕ್ಕೆ ಯಾವುದೇ ಚಿಕಿತ್ಸೆಯು ಇನ್ನೂ ಸರಿಯಾಗಿ ಲಭ್ಯವಾಗಿಲ್ಲ. ಹಾಗಾಗಿ ಅಲ್ಜೈಮರ್ಸ್ ಕಾಯಿಲೆಗೆ ಯಾವುದೇ ಚಿಕಿತ್ಸೆಯನ್ನು ವೈದ್ಯರು ನೀಡಿದರು ಕೂಡ ಅದರಿಂದ ಫಲಪ್ರದವಾದ ಫಲ ಸಿಗುವುದಿಲ್ಲ. ಹಾಗಾಗಿ ನಿಯಂತ್ರಣವೇ ಇದಕ್ಕೆ ಪ್ರಸ್ತುತ ಇರುವ ಮದ್ದಾಗಿದೆ. ಹಾಗಾದರೆ ಅಲ್ಜೀಮರ್ ಅನ್ನು ಹೇಗೆ ನಿಯಂತ್ರಿಸಬಹುದು? ಎಂಬುದು ನಿಮ್ಮ ಪ್ರಶ್ನೆಗೆ ಉತ್ತರವೇ ಈ ಲೇಖನ. ಈ ಅಪಾಯಕಾರಿ ಮರೆವಿನ ಕಾಯಿಲೆ ತಡೆಗಟ್ಟಿ

ಈ ಲೇಖನದಲ್ಲಿ ಅಲ್ಜೈಮರ್ಸ್ ಕಾಯಿಲೆ ಬರುವ ಅಪಾಯವನ್ನು ಸ್ವಲ್ಪ ಮಟ್ಟಿಗಾದರೂ ನಿಯಂತ್ರಿಸುವ ಆಹಾರಗಳನ್ನು ನಾವು ನೀಡಿದ್ದೇವೆ. ಇದನ್ನು ಸೇವಿಸುವುದರಿಂದ ನಿಮಗೆ ಅಲ್ಜೈಮರ್ಸ್ ಸ್ಥಿತಿ ಬರುವುದನ್ನು ತಡೆಯಬಹುದು. ಈ ಆರೋಗ್ಯಕರ ಆಹಾರಗಳು ಮೆದುಳಿನ ಕೋಶಗಳು ವೇಗವಾಗಿ ಸಾಯುವುದನ್ನು ತಪ್ಪಿಸುತ್ತವೆ. ಏಕೆಂದರೆ ಮೆದುಳಿನ ಕೋಶಗಳು ಸಾಯುವುದರಿಂದಲೇ ಅಲ್ಜೈಮರ್ಸ್ ಕಾಯಿಲೆಯು ಬರುತ್ತದೆ. ಬನ್ನಿ ಆ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದೆಯಲ್ಲವೇ? ಬನ್ನಿ ಮುಂದೆ ಓದಿ.

ಹಸಿರು ಸೊಪ್ಪುಗಳು
ಪಾಲಕ್ ಮತ್ತು ಹಸಿರು ಸೊಪ್ಪುಗಳು ಅಲ್ಜೈಮರ್ಸ್ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಎತ್ತಿದ ಕೈ. ಅಷ್ಟೇ ಅಲ್ಲದೆ, ಆರೋಗ್ಯವನ್ನು ಹೆಚ್ಚಿಸುವ ಗುಣಗಳನ್ನು ಕೂಡ ತಮ್ಮಲ್ಲಿ ಒಳಗೊಂಡಿವೆ. ಅಲ್ಜೀಮರ್ ಕಾಯಿಲೆಯನ್ನು ತಡೆಯುವ ನಿಟ್ಟಿನಲ್ಲಿ ನೀವು ಪ್ರತಿದಿನ ನಾರಿನಂಶ ಅಧಿಕವಾಗಿರುವ ಆಹಾರವನ್ನು, ಆಂಟಿ ಆಕ್ಸಿಡೆಂಟ್‌ಗಳನ್ನು, ಹಸಿರು ಸೊಪ್ಪುಗಳನ್ನು, ತರಕಾರಿಗಳನ್ನು ಸೇವಿಸಬೇಕು. ಇವುಗಳು ಮೆದುಳಿನ ಕೋಶಗಳನ್ನು ಬಲಗೊಳಿಸುತ್ತವೆ.

Foods That Reduce The Risk Of Alzheimer's

ಜೊತೆಗೆ ಅವುಗಳನ್ನು ಆರೋಗ್ಯಕರವಾಗಿ ಮತ್ತು ಚಟುವಟಿಕೆಯಿಂದ ಸಹ ಇರುವಂತೆ ಮಾಡುತ್ತವೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಒಂದು ಒಂದು ಅಮೂಲ್ಯ ಅಂಶವಾಗಿದ್ದು ಡಿಮೆನ್ಶಿಯಾ ಬರದಂತೆ ತಡೆಯಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇತ್ತೀಚಿಗೆ ತುಂಬಾ ಮರೆವು? ಅಲ್ಜೈಮರ್ಸ್ ಇರಬಹುದೇ?

ಬಾದಾಮಿ, ವಾಲ್‌ನಟ್‌ಗಳು ಮತ್ತು ಹೆಜಲ್‌ನಟ್‌ಗಳು
ಬಾದಾಮಿ, ವಾಲ್‌ನಟ್‌ಗಳು ಮತ್ತು ಹೆಜಲ್‌ನಟ್‌ಗಳಲ್ಲಿ ಒಮೆಗಾ-3 ಕೊಬ್ಬಿನ ಆಮ್ಲಗಳು ಇರುತ್ತವೆ. ಇವು ಮತ್ತು ಇವುಗಳಲ್ಲಿರುವ ಕೊಬ್ಬುಗಳು ಸಹ ಆರೋಗ್ಯಕರವಾಗಿರುತ್ತವೆ, ಹಾಗಾಗಿ ಇವುಗಳು ಮೆದುಳಿನ ಆರೋಗ್ಯಕ್ಕೆ ಅತ್ಯಂತ ಮುಖ್ಯವಾದ ಆಹಾರಗಳಾಗಿರುತ್ತವೆ.


ಕ್ಯಾಲಿಫೋರ್ನಿಯಾದ ಅಗ್ರ ಸಂಶೋಧನಾ ಸಂಸ್ಥೆಯು ನಡೆಸಿದ ಅಧ್ಯಯನದ ಪ್ರಕಾರ, ವಾಲ್‌ನಟ್‌ಗಳನ್ನು ಸೇವಿಸಲು ನೀಡಿದ ಇಲಿ ಮರಿಗಳು ಅಧಿಕ ದೈಹಿಕ ಕ್ಷಮತೆ ಮತ್ತು ಸ್ಮರಣೆಯ ಸಾಮರ್ಥ್ಯವನ್ನು ತೋರಿಸಿದವಂತೆ.

ಬೆರ್ರಿಗಳು

ಇದರಲ್ಲಿ ಪಾಲಿಫೆನಾಲ್ ಎಂಬ ಅತ್ಯಗತ್ಯವಾದ ಆಂಟಿಆಕ್ಸಿಡೆಂಟ್ ಇರುತ್ತದೆ. ಬೆರ್ರಿಗಳು ಮೆದುಳಿನಲ್ಲಿ ಕಾಣಿಸಿಕೊಳ್ಳುವ ಉರಿಯೂತದ ಅಪಾಯವನ್ನು ಸಹ ಕಡಿಮೆ ಮಾಡುತ್ತವೆ ಹಾಗೂ ಮೆದುಳಿನ ಕೋಶಗಳನ್ನು ಆರೋಗ್ಯಕರವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತವೆ.

ಅರಿಶಿನ

ಅಧ್ಯಯನಗಳ ಪ್ರಕಾರ ಅರಿಶಿನದಲ್ಲಿ ಕ್ಯುರ್ಕುಮಿನ್ ಎಂಬ ಅಂಶವಿರುತ್ತದೆ. ಇದು ಅಲ್ಜೈಮರ್ಸ್ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುವ ಗುಣವನ್ನು ಹೊಂದಿರುತ್ತದೆ. ಅರಿಶಿನವು ಮೆದುಳಿನಲ್ಲಿ ಪ್ಲಾಕ್ ಜೊತೆಗೆ ಅಮೈನೊ ಆಮ್ಲಗಳು ಶೇಖರಣೆಗೊಳ್ಳುವುದನ್ನು ತಡೆಯುತ್ತವೆ, ಆ ಮೂಲಕ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಇದು ಹೊಂದಿರುತ್ತದೆ.
English summary

Foods That Reduce The Risk Of Alzheimer's

There are quite a few foods that are rich in proteins and minerals that can help reduce the risk of Alzheimer's.In this article, we look at foods that reduce the risk of Alzheimer's. Consuming these foods is the best way to ward off the condition. These healthy foods preclude and disallow the rapid death of brain cells, the primary element that triggers the condition of Alzheimer's. Here are 6 foods that reduce the risk of Alzheimer's.
Story first published: Monday, September 21, 2015, 14:56 [IST]
X
Desktop Bottom Promotion