For Quick Alerts
ALLOW NOTIFICATIONS  
For Daily Alerts

ಮೌನ ಕೊಲೆಗಾರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಸೂತ್ರ

By Super
|

ಸುಮಾರು ಹತ್ತು ವರ್ಷಗಳ ಕೆಳಗೆ ಕೊಲೆಸ್ಟ್ರಾಲ್ ಅಂದರೇನೆಂದೇ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಆದರೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ, ಸಂಶೋಧನೆಗಳ ಮೂಲಕ ಒಳ್ಳೆಯ ಕೆಟ್ಟ ಆಹಾರ, ಪದ್ಧತಿಗಳ ಬಗ್ಗೆ ಅರಿವು ಮೂಡುತ್ತಿದ್ದಂತೆ ನಾವು ಮಾಡುತ್ತಿದ್ದ ತಪ್ಪುಗಳೆಲ್ಲಾ ಒಂದೊಂದಾಗಿ ಹೊರಬರತೊಡಗಿದವು.

ಅದರಲ್ಲಿ ಪ್ರಮುಖವಾದುದು ಡಾಲ್ಡಾ ಅಥವಾ ವನಸ್ಪತಿಯನ್ನು ಕೈಬಿಟ್ಟಿದ್ದು. ಏಕೆಂದರೆ ಇದರಲ್ಲಿ ಕೆಟ್ಟ ಕೊಲೆಸ್ಟ್ರಾಲ್(LDL- Low density lipoproteins) ಎಂಬ ಜಿಡ್ಡು ಪದಾರ್ಥ ಆರೋಗ್ಯಕ್ಕೆ ಮಾರಕವಾಗಿದ್ದು ದೇಹದಲ್ಲಿ ಸಂಗ್ರಹಗೊಳ್ಳುತ್ತಾ ಹೋಗುತ್ತದೆ. ಹೃದಯಾಘಾತಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್ ಬಗ್ಗೆ ಎಚ್ಚರವಿರಲಿ!

ನಮ್ಮ ರಕ್ತ ಹರಿಯಲು ಇನ್ನೊಂದು ತರಹದ ಕೊಲೆಸ್ಟ್ರಾಲ್ ಅಗತ್ಯವಿದೆ, ಅದೇ (HDL-High density lipoproteins). ನಾವು ಸೇವಿಸುವ ಆಹಾರಗಳ, ಅದರಲ್ಲೂ ವಿಶೇಶವಾಗಿ ಎಣ್ಣೆಗಳ ಮೂಲಕ ದೇಹಕ್ಕೆ ಆಗಮಿಸುವ ಕೊಲೆಸ್ಟ್ರಾಲ್ ಗಳಲ್ಲಿ ಎರಡೂ ರೀತಿಯವು ಇರುತ್ತವೆ. ಆದರೆ ಇದರಲ್ಲಿ ಉತ್ತಮ ಕೊಲೆಸ್ಟ್ರಾಲ್ ಬಳಕೆಯಾಗಿ ವಿಸರ್ಜನೆಗೊಂಡರೆ ಕೆಟ್ಟ ಕೊಲೆಸ್ಟ್ರಾಲ್ ಮಾತ್ರ ರಕ್ತದ ಮೂಲಕ ರಕ್ತನಾಳಗಳ ಒಳಗೆ ಹರಿಯುತ್ತಾ ಕವಲು, ತಿರುವುಗಳಿರುವ ಮೂಲೆಗಳಲ್ಲಿ ಅಂಟಿಕೊಂಡುಬಿಡುತ್ತದೆ.

ಹೆಚ್ಚೂ ಕಡಿಮೆ ಶಾಶ್ವತವಾಗಿ ಅಲ್ಲಿಯೇ ಅಂಟಿಕೊಂಡಿರುವ ಇದು ನಂತರ ರಕ್ತದೊಡನೆ ಬರುವ ಇತರ ಕೊಲೆಸ್ಟ್ರಾಲ್ ಕಣಗಳನ್ನು ತನ್ನೊಂದಿಗೆ ಅಂಟಿಸಿಕೊಂಡು ಬಿಡುತ್ತದೆ. ಹೀಗೇ ವರ್ಷಗಟ್ಟಲೆ ಸಂಗ್ರಹವಾಗುವ ಕೊಲೆಸ್ಟ್ರಾಲ್ ರಕ್ತನಾಳಗಳ ಒಳಗಣ ವ್ಯಾಸವನ್ನು ಕಿರಿದುಗೊಳಿಸುತ್ತಾ ಅದರ ಮೂಲಕ ರಕ್ತ ಹರಿಯಲು ಅಡ್ಡಿಪಡಿಸುತ್ತದೆ. ಹೃದಯಕ್ಕೆ ಇದರ ಮೂಲಕ ಹೆಚ್ಚಿನ ಒತ್ತಡದಲ್ಲಿ ರಕ್ತವನ್ನು ನೂಕಬೇಕಾಗುತ್ತದೆ.

ಪರಿಣಾಮ: ಹೃದಯಾಘಾತ ಮತ್ತು ಹೃದಯಸಂಬಂಧಿ ಕಾಯಿಲೆಗಳ ಆಗಮನ. ಅದರಲ್ಲೂ ಪ್ರಾಣಿಗಳ ಮೆದುಳನ್ನು (ಭೇಜಾ ಫ್ರೈ) ತಿನ್ನುವವರ ದೇಹದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇರುತ್ತದೆ. ಬನ್ನಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ನೋಡೋಣ.. ಕೊಲೆಸ್ಟ್ರಾಲ್ ನಿಯಂತ್ರಿಸಲು ಕೆಲವೊಂದು ಸಲಹೆಗಳು

ಕೊಂಚ ಕಪ್ಪು ಚಾಕಲೇಟು ತಿನ್ನಿ

ಕೊಂಚ ಕಪ್ಪು ಚಾಕಲೇಟು ತಿನ್ನಿ

ಕಪ್ಪು ಚಾಕಲೇಟು ಅಧಿಕ ಪೌಷ್ಟಿಕಾಂಶ ಮತ್ತು ಕೊಬ್ಬಿನಿಂದ ಕೂಡಿದ್ದರೂ ಇದರಲ್ಲಿ ಹೇರಳವಾಗಿರುವ ಫ್ಲೇವನಾಯ್ಡುಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸುವ ಗುಣ ಹೊಂದಿವೆ. ಆದರೆ ಇದರಲ್ಲಿ ಸಕ್ಕರೆಯ ಪ್ರಮಾಣವೂ ಹೆಚ್ಚಾಗಿರುವುದರಿಂದ ಕೊಂಚವೇ ಪ್ರಮಾಣದಲ್ಲಿ ತಿಂದರೆ ಉತ್ತಮ ಪರಿಣಾಮ ಪಡೆಯಬಹುದು. ಒಂದು ವೇಳೆ ನೀವು ಮಧುಮೇಹಿಗಳಾಗಿದ್ದಲ್ಲಿ ಈ ಚಾಕಲೇಟಿನ ಬದಲು ಸಕ್ಕರೆರಹಿತವಾದ ಕೋಕೋ ಪುಡಿಯನ್ನು ನಿಮ್ಮ ಅಡುಗೆಯಲ್ಲಿ ಬಳಸುವ ಮೂಲಕವೂ ಕಪ್ಪು ಚಾಕಲೇಟಿಗೆ ಸಮನಾದ ಪರಿಣಾಮವನ್ನು ಪಡೆಯಬಹುದು.

ಬೆಣ್ಣೆ ಹಣ್ಣು ತಿನ್ನಿ

ಬೆಣ್ಣೆ ಹಣ್ಣು ತಿನ್ನಿ

ಹಲವೆಡೆ ಬಟರ್ ಫ್ರೂಟ್ ಎಂದೂ ಕರೆಯಲ್ಪಡುವ ಬೆಣ್ಣೆಹಣ್ಣು (avocado) ಒಂದು ಪರಿಪೂರ್ಣ ಹಣ್ಣಾಗಿದ್ದು ದೇಹಕ್ಕೆ ಹಲವು ರೀತಿಯಲ್ಲಿ ಉಪಯೋಗಕಾರಿಯಾಗಿದೆ. ಇದರ ತಿರುಳನ್ನು ನೀರುಳ್ಳಿ ಮತ್ತಿತರ ಸಾಮಾಗ್ರಿಗಳನ್ನು ಸೇರಿಸಿ ಮಾಡಿದ guacamole ಎಂಬ ಸಿಹಿಹುಳಿ ಪದಾರ್ಥದ ಸೇವನೆ ಹಸಿವನ್ನು ತಣಿಸುವ ಜೊತೆಗೇ ಆರೋಗ್ಯವನ್ನೂ ವೃದ್ಧಿಸುತ್ತದೆ. ಇದರಲ್ಲಿರುವ ಓಲಿಕ್ ಅಮ್ಲ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಡಿಲಗೊಳಿಸಿ ನಿವಾರಿಸುವ ಗುಣ ಹೊಂದಿದೆ. ಇದರ ತಿರುಳನ್ನು ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ ಅಥವಾ ಇದರ ಒಣಫಲಗಳನ್ನು ಹಿಂಡಿತೆಗೆದ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವ ಮೂಲಕವೂ ಕೆಟ್ಟ ಕೊಲೆಸ್ಟ್ರಾಲ್‌ಗಳಿಗೆ ತಕ್ಕ ಪಾಠ ಕಲಿಸಿ ಹೊರಗಟ್ಟಬಹುದು.

ಸುಲೇಮಾನಿ ಟೀ ಕುಡಿಯಿರಿ

ಸುಲೇಮಾನಿ ಟೀ ಕುಡಿಯಿರಿ

ಕಪ್ಪು ಚಹಾವನ್ನು ಹಾಲಿಲ್ಲದೇ ಮಾಡಿದರೆ ಅದು ಸುಲೇಮಾನಿ ಟೀ ಆಗುತ್ತದೆ. ಈ ಚಹಾದಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟುಗಳಿರುವ ಕಾರಣ ಇವು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತದೆ. ಆದರೆ ಕಪ್ಪು ಚಹಾ ಕೊಂಚ ಕಹಿಯಾಗುವುದರಿಂದ ಹೆಚ್ಚಿನ ಸಕ್ಕರೆ ಸೇರಿಸಿದರೆ ಇದರ ಗುಣ ಕೊಂಚ ಕಡಿಮೆಯಾಗಬಹುದು. ಬದಲಿಗೆ ಹಸಿರು ಚಹಾದಲ್ಲಿ ಕೊಂಚ ಸಕ್ಕರೆ ಮತ್ತು ಕ್ರೀಂ ಸೇರಿಸಿ ಕುಡಿಯುವುದರಿಂದಲೂ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸಬಹುದು.

ಒಣಫಲಗಳನ್ನು ಸೇವಿಸಿ

ಒಣಫಲಗಳನ್ನು ಸೇವಿಸಿ

ಉತ್ತಮ ಪ್ರಮಾಣದ ಕ್ಯಾಲೋರಿಗಳ ಆಗರವಾದ ಒಣಫಲಗಳಲ್ಲಿ polyunsaturated fatty acids ಎಂಬ ಆಮ್ಲಗಳಿದ್ದು ಇವು ಕೊಲೆಸ್ಟ್ರಾಲ್ ಕಣಗಣಲ್ಲಿ ಸಡಿಲಗೊಳಿಸಲು ನೆರವಾಗುತ್ತವೆ. ಬಾದಾಮಿ, ಅಕ್ರೋಟು, ಪಿಸ್ತಾ ಮೊದಲಾದ ಒಣಫಲಗಳು ಉತ್ತಮ ಫಲ ನೀಡುತ್ತವೆ. ಇವುಗಳನ್ನು ಹಾಗೇ ಅಥವಾ ಚಿಕ್ಕದಾಗಿ ಪುಡಿಗೊಳಿಸಿ ನಿಮ್ಮ ನೆಚ್ಚಿನ ಸಾಲಾಡ್ ಅಥವಾ ತಿನಿಸುಗಳಲ್ಲಿ ಸಿಂಪಡಿಸಿ ಸೇವಿಸುವುದರಿಂದ ಖಾದ್ಯದ ರುಚಿ ಹೆಚ್ಚುವುದರೊಂದಿಗೇ ಆರೋಗ್ಯವೂ ವೃದ್ಧಿಯಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಉಪ್ಪು ಸವರಿದ ಫಲಗಳೂ ಸಿಗುತ್ತವೆ. ತಪ್ಪಿಯೂ ಇವನ್ನು ಖರೀದಿಸಬೇಡಿ.

ಇಡಿಯ ಧಾನ್ಯಗಳು ಮತ್ತು ಅವುಗಳ ಉತ್ಪನ್ನಗಳನ್ನೇ ಬಳಸಿ

ಇಡಿಯ ಧಾನ್ಯಗಳು ಮತ್ತು ಅವುಗಳ ಉತ್ಪನ್ನಗಳನ್ನೇ ಬಳಸಿ

ಮೈದಾ ಮತ್ತು ಮೈದಾ ಆಧಾರಿತ ಆಹಾರಗಳು ನೋಡಲು ಚೆನ್ನವೇ ಹೊರತು ಆರೋಗ್ಯಕ್ಕಲ್ಲ. ಮೈದಾ ಬದಲಿಗೆ ಇಡಿಯ ಧಾನ್ಯಗಳಾದ ಗೋಧಿ, ಓಟ್ಸ್, ಕಂದು ಅಥವಾ ಪಾಲಿಷ್ ಮಾಡದ ಅಕ್ಕಿ ಉತ್ತಮ ಆಯ್ಕೆಯಾಗಿದೆ. ಇವುಗಳಲ್ಲಿ ಉತ್ತಮ ಪ್ರಮಾಣದ ಕರಗುವ ನಾರುಗಳಿದ್ದು ಇವು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತವೆ. ನಿಮ್ಮ ನಿತ್ಯದ ಆಹಾರಗಳಲ್ಲಿ ನಾರುಹೆಚ್ಚಿರುವ ಸಾಮಾಗ್ರಿಗಳನ್ನು, ಹಸಿರು ತರಕಾರಿ ಹಣ್ಣುಗಳನ್ನು ಸೇವಿಸುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆ ಸುಲಭವಾಗುತ್ತದೆ.

ಮೀನು ಸೇವಿಸಿ

ಮೀನು ಸೇವಿಸಿ

ಒಮೆಗಾ 3 ಕೊಬ್ಬಿನ ತೈಲವಿರುವ ಮೀನುಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸುವುದರಿಂದಲೂ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುವುದು ಕಂಡುಬಂದಿದೆ. ಸಾಲ್ಮನ್, albacore tuna, ಬಂಗಡೆ, ಭೂತಾಯಿ, ಹಲೀಬುತ್ (halibut) ಮೊದಲಾದ ಮೀನುಗಳಲ್ಲಿ ಈ ಆಮ್ಲ ಹೆಚ್ಚಿನ ಪ್ರಮಾಣದಲ್ಲಿದೆ. ಒಂದು ವಾರಕ್ಕೆ ಸುಮಾರು ಎಂಟು ಔನ್ಸುಗಳಷ್ಟು ಹಸಿಮೀನನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟ ಗಣನೀಯವಾಗಿ ಕಡಿಮೆಯಾಗುತ್ತದೆ. ಆದರೆ ಮೀನನ್ನು ಸಾರು ಮಾಡಿ ಬೇಯಿಸಿ ತಿಂದರೆ ಉತ್ತಮ. ಹುರಿದ ಮೀನು ತನ್ನ ಗುಣಗಳನ್ನು ಕಳೆದುಕೊಳ್ಳುತ್ತದೆ.

ವಿವಿಧ ಹಣ್ಣುಗಳನ್ನು ಸೇವಿಸಿ

ವಿವಿಧ ಹಣ್ಣುಗಳನ್ನು ಸೇವಿಸಿ

ಸೇಬು ಮತ್ತು ಮರಸೇಬುಗಳಲ್ಲಿ ಪೆಕ್ಟಿನ್ ಎಂಬ ಪೋಷಕಾಂಶವಿದೆ. ಇದೊಂದು ರೀತಿಯ ನಾರು ಆಗಿದ್ದು ಕೊಲೆಸ್ಟ್ರಾಲ್ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೆ ಸಿಟ್ರಿಕ್ ಆಮ್ಲ ಹೆಚ್ಚಿರುವ ಲಿಂಬೆ, ಕಿತ್ತಳೆ, ಮೂಸಂಬಿ, ಬೆರ್ರಿಗಳು ಸಹಾ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತವೆ. ಮರಸೇಬು ಮತ್ತು ಹಸಿ ಈರುಳ್ಳಿಯ ಸಲಾಡ್ ಊಟದೊಂದಿಗೆ ಸೇವಿಸುವ ಮೂಲಕ ಅಥವಾ ವಿವಿಧ ಬೆರ್ರಿಗಳು ಮತ್ತು ಲಿಂಬೆರಸ ಸೇರಿಸಿದ ಜ್ಯೂಸ್ ಮುಂಜಾನೆ ಆಫೀಸ್‌ಗೆ ಹೊರಡುವ ಮೊದಲು ಕುಡಿದರೆ ಉತ್ತಮ ಪರಿಣಾಮ ದೊರಕುತ್ತದೆ.

ಸಾಕಷ್ಟು ಹಸಿ ತರಕಾರಿಗಳನ್ನು ಸೇವಿಸಿ

ಸಾಕಷ್ಟು ಹಸಿ ತರಕಾರಿಗಳನ್ನು ಸೇವಿಸಿ

ಯಾವ ತರಕಾರಿ ಹಸಿಯಾಗಿ ಸೇವಿಸಲು ಸಾಧ್ಯವೋ, ಅವನ್ನೆಲ್ಲಾ ಹಸಿಯಾಗಿ ಮತ್ತು ಉಳಿದ ತರಕಾರಿಗಳನ್ನು ಬೇಯಿಸಿ ಸೇವಿಸಿ. ಅಂದರೆ ನಿಮ್ಮ ದಿನದ ಆಹಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ವಿಧದ ತರಕಾರಿಗಳಿರಲಿ. ಏಕೆಂದರೆ ವಿವಿಧ ತರಕಾರಿಗಳ ಮೂಲಕ ಲಭ್ಯವಾದ ಭಿನ್ನವಾದ ನಾರುಗಳ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ತಗ್ಗುತ್ತದೆ.

ಕಿತ್ತಳೆ ರಸ ಕುಡಿಯಿರಿ

ಕಿತ್ತಳೆ ರಸ ಕುಡಿಯಿರಿ

ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಕಿತ್ತಳೆ ರಸ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು. ಬೆಳಿಗ್ಗೆ ಪ್ರಥಮವಾಗಿ ಕುಡಿಯುವುದರಿಂದ ಮತ್ತು ಬೇರೇನನ್ನೂ ಸೇವಿಸದಿರುವುದರಿಂದ ಹೊಟ್ಟೆಯ ಮೂಲಕ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ರಕ್ತಸೇರಿ ಅತಿವೇಗದಲ್ಲಿ ದೇಹದ ಇತರೆಡೆ ಹರಡುತ್ತವೆ. ಈ ಪೋಷಕಾಂಶಗಳು ತೀಕ್ಷ್ಣವಾಗಿರುವುದರಿಂದ ರಕ್ತನಾಳಗಳ ಒಳಗೆ ಅಂಟಿಕೊಂಡಿದ್ದ ಕೊಲೆಸ್ಟ್ರಾಲ್ ಕಣಗಳನ್ನು ಸಡಿಲ ಮಾಡುತ್ತಾ ಹೋಗುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಿತ್ತಳೆ ರಸ ಕುಡಿಯಿರಿ

ಕಿತ್ತಳೆ ರಸ ಕುಡಿಯಿರಿ

ಹೀಗೇ ದಿನೇದಿನೇ ಕೊಂಚಕೊಂಚವಾಗಿ ಸಡಿಲಗೊಳ್ಳುವ ಕೊಲೆಸ್ಟ್ರಾಲ್ ರಕ್ತದ ಮೂಲಕ ಹರಿದು ಬಳಿಕ ವಿಸರ್ಜನೆಗೊಳ್ಳುತ್ತದೆ. ಆದ್ದರಿಂದ ಸತತವಾಗಿ ಒಂದೆರಡು ತಿಂಗಳಾದರೂ ಸೇವಿಸುವುದು ಉತ್ತಮ. ಇದಕ್ಕೆ ಸಿದ್ದರೂಪದ ಪ್ಯಾಕ್ ಗಿಂತಲೂ ಈಗತಾನೇ ಕಿತ್ತಳೆಹಣ್ಣುಗಳನ್ನು ಹಿಂಡಿ ತೆಗೆದ ರಸವನ್ನು ಸೇವಿಸುವುದು ಹೆಚ್ಚು ಪರಿಣಾಮಕಾರಿ.

ಗೋಧಿಹಿಟ್ಟಿನ ಖಾದ್ಯಗಳು

ಗೋಧಿಹಿಟ್ಟಿನ ಖಾದ್ಯಗಳು

ಇಂದು ಸಿದ್ಧ ಆಹಾರಗಳೆಲ್ಲಾ ಮೈದಾ ಹಿಟ್ಟನ್ನು ಅವಲಂಬಿಸಿವೆ. ವಾಸ್ತವವಾಗಿ ಗೋಧಿಯ ಮೇಲ್ಕವಚ ಮತ್ತು ಮೊಳಕೆಯ ಭಾಗವನ್ನು ನಿವಾರಿಸಿ ಕೇವಲ ಒಳಗಿನ ತಿರುಳನ್ನು ಮಾತ್ರ ನೀಡುವ ಹಿಟ್ಟೇ ಮೈದಾ. ಇದರಲ್ಲಿ ನಾರಿನ ಅಂಶವೇ ಇಲ್ಲದಿರುವುದರಿಂದ ಇದು ಮಲಬದ್ಧತೆಗೆ ಪ್ರಮುಖ ಕಾರಣ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗೋಧಿಹಿಟ್ಟಿನ ಖಾದ್ಯಗಳು

ಗೋಧಿಹಿಟ್ಟಿನ ಖಾದ್ಯಗಳು

ಇದರ ಬದಲಿಗೆ ಇಡಿಯ ಗೋಧಿಯ ಹಿಟ್ಟಿನಿಂದ ಮಾಡಿದ ಖಾದ್ಯ, ಚಪಾತಿ ಮೊದಲಾದ ಆಹಾರಗಳನ್ನು ಸೇವಿಸುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ನಿಗ್ರಹಿಸಬಹುದು. ಅಕ್ಕಿಯನ್ನು ಪಾಲಿಷ್ ಮಾಡದೇ ಅಥವಾ ಕಡಿಮೆ ಪಾಲಿಷ್ ಮಾಡಿದ 'ಕಂದು ಅಕ್ಕಿ' (brown rice) ಯನ್ನು ಉಪಯೋಗಿಸುವುದೂ ಉತ್ತಮ ಆಯ್ಕೆಯಾಗಿದೆ. ಇದರಿಂದ ರಕ್ತದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟಾ ಹೆಚ್ಚುತ್ತದೆ ಹಾಗೂ ರಕ್ತದಲ್ಲಿ triglyceride ಎಂಬ ಇನ್ನೊಂದು ರೀತಿಯ ಕೊಬ್ಬನ್ನೂ ಕಡಿಮೆಗೊಳಿಸುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಕೊಲೆಸ್ಟ್ರಾಲ್ ಇದೆ ಎಂದು ಗೊತ್ತಾದ ಬಳಿಕ ಅತಿಸುಲಭವಾಗಿ ಅನುಸರಿಸಬಹುದಾದ ವಿಧಾನವೆಂದರೆ ನಿಮ್ಮ ಅಡುಗೆ ಎಣ್ಣೆಯನ್ನು ಆಲಿವ್ ಎಣ್ಣೆಗೆ ಬದಲಿಸುವುದು. ಆಲಿವ್ ಎಣ್ಣೆ ಕೊಂಚ ದುಬಾರಿ ಮತ್ತು ರುಚಿಯಲ್ಲಿಯೂ ನಮ್ಮ ಇತರ ಎಣ್ಣೆಗಳಿಗಿಂತ ಭಿನ್ನವಾದುದರಿಂದ ನಿಮಗೆ ಹಿಡಿಸದೇ ಇದ್ದರೂ ಗಟ್ಟಿ ಮನಸ್ಸು ಮಾಡಿ ಬಳಕೆ ಪ್ರಾರಂಭಿಸಿ. ಏಕೆಂದರೆ ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ (ಹುರಿಯುವ ಬದಲು ಚಪಾತಿ ರೊಟ್ಟಿಗಳಿಗೆ ಸವರಿ ಸೇವಿಸುವುದರಿಂದ) ಇದರಲ್ಲಿರುವ monounsaturated fat ಕೊಲೆಸ್ಟ್ರಾಲ್ ಕಣಗಳನ್ನು ಆಕರ್ಷಿಸಿ ತನ್ನೊಂದಿಗೆ ಕರೆದೊಯ್ದು ವಿಸರ್ಜಿಸಿಬಿಡುತ್ತದೆ.

ಕೊಬ್ಬಿನಾಮ್ಲ ಅಧಿಕವಿರುವ ಆಹಾರಗಳನ್ನು ಬಳಸಿ

ಕೊಬ್ಬಿನಾಮ್ಲ ಅಧಿಕವಿರುವ ಆಹಾರಗಳನ್ನು ಬಳಸಿ

ಕೆಟ್ಟ ಕೊಲೆಸ್ಟ್ರಾಲ್ ನ್ನು ಅತ್ಯುತ್ತಮ ರೀತಿಯಲ್ಲಿ ನಿಯಂತ್ರಿಸಲು ಒಮೆಗಾ-3 ಕೊಬ್ಬಿನಾಮ್ಲ ಅಧಿಕವಿರುವ ಆಹಾರಗಳನ್ನು ಬಳಸಿ. ನೀವು ಮೀನನ್ನು ಪ್ರೀತಿಸುತ್ತಿದ್ದರೆ ಸಾಲ್ಮೊನ್, ಟುನಾ ಮತ್ತು ಬಂಗುಡೆ ತಿನ್ನಿ. ಇದರಲ್ಲಿನ ಒಮೆಗಾ-3 ಕೊಬ್ಬಿನಾಮ್ಲವು ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ, ಹಾಲು ಮತ್ತು ಆಕ್ರೋಟಾದಲ್ಲೂ ಈ ಅಂಶವು ಸಮೃದ್ಧವಾಗಿದೆ.

ಕೊಬ್ಬಿನ ಆಹಾರಗಳಿಂದ ದೂರವಿರಿ

ಕೊಬ್ಬಿನ ಆಹಾರಗಳಿಂದ ದೂರವಿರಿ

ಕೊಬ್ಬಿನ ಆಹಾರಗಳಾದ ಕುಕ್ಕೀಸ್ ಮತ್ತು ಫ್ರೈಸ್ ನಲ್ಲಿ ಟ್ರಾನ್ಸ್ ಫ್ಯಾಟ್ ಹೆಚ್ಚಿರುತ್ತದೆ. ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಇದನ್ನು ಕಡಿಮೆ ಮಾಡಿ. ನೀವು ಇಂತಹ ಯಾವುದೇ ಆಹಾರವನ್ನು ಖರೀದಿಸುವ ಮೊದಲು ಅದಕ್ಕೆ ಬಳಸಲಾಗಿರುವ ಪದಾರ್ಥಗಳನ್ನು ತಿಳಿದುಕೊಳ್ಳಬಹುದು. ಇದರಲ್ಲಿ ಟ್ರಾನ್ಸ್ ಫ್ಯಾಟ್ ಇದೆಯೆಂದು ಬರೆದಿದ್ದರೆ ಅದರಿಂದ ದೂರವಿರಿ.

ಧೂಮಪಾನ ತ್ಯಜಿಸಿ

ಧೂಮಪಾನ ತ್ಯಜಿಸಿ

ಇದು ನಿಮ್ಮ ಹೃದಯ ಮತ್ತು ಶ್ವಾಸಕೋಶಕ್ಕೆ ತುಂಬಾ ಕೆಟ್ಟದ್ದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಉಂಟುಮಾಡುತ್ತದೆ.

ಈರುಳ್ಳಿ

ಈರುಳ್ಳಿ

ಈರುಳ್ಳಿ ಕುಟುಂಬದ ಸದಸ್ಯರಾದ ಎಳಸು ಈರುಳ್ಳಿ, ಬೆಳ್ಳುಳ್ಳಿ ಮತ್ತು ಸಾಮಾನ್ಯ ಈರುಳ್ಳಿ ನಿಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು. ಇದನ್ನು ನಿಮ್ಮ ಆಹಾರ ಅಥವಾ ಸಲಾಡ್ ಗಳಲ್ಲಿ ಬಳಸಿ. ಸಾಧ್ಯವಾದಷ್ಟು ಮಟ್ಟಿಗೆ ಬೆಳ್ಳುಳ್ಳಿ ಬಳಸಿ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತದೆ.

ತೂಕ ಇಳಿಸಲು ಪ್ರಯತ್ನಿಸಿ

ತೂಕ ಇಳಿಸಲು ಪ್ರಯತ್ನಿಸಿ

ಇದು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಅತ್ಯುತ್ತಮ ವಿಧಾನ. ಆರೋಗ್ಯಕರ ತಿನ್ನುವ ವಾಡಿಕೆ ಅಳವಡಿಸಿ. ಚಾ, ಕಾಫಿ ಮತ್ತು ಫಾಸ್ಟ್ ಫುಡ್ ನಂತಹ ಆಹಾರ ಸೇವನೆ ಕಡಿಮೆ ಮಾಡಿ ಮತ್ತು ನೈಸರ್ಗಿಕ ಮತ್ತು ಆ್ಯಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಆಹಾರಗಳನ್ನು ತಿನ್ನಿ. ತಾಜಾ ಹಣ್ಣುಗಳು, ಬೀನ್ಸ್ ಮತ್ತು ಹಸಿರೆಲೆ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ. ಇದನ್ನು ಪಾಲಿಸಿದರೆ ಮುಂದಿನ ಕೆಲವೇ ದಿನಗಳಲ್ಲಿ ನಿಮ್ಮ ತೂಕ ಮತ್ತು ಕೊಲೆಸ್ಟ್ರಾಲ್ ಮಟ್ಟದಲ್ಲಿ ವ್ಯತ್ಯಾಸ ಕಾಣಬಹುದು.

ಚಹಾ

ಚಹಾ

ಚಹಾವು ಉತ್ಕರ್ಷಣ ವಿರೋಧಿ (antioxidants) ಮತ್ತು ಕಾಫಿಗಿಂತ ಕಡಿಮೆ ಪ್ರಮಾಣದ ಕೆಫೇನ್‌ನ್ನು ಹೊಂದಿರುತ್ತದೆ. ಒಂದು ಲೋಟ ಕಾಫಿ ಸೇವಿಸಿದರೆ 135 ಮಿ.ಗ್ರಾಂ ಕೆಫೇನ್ ದೇಹವನ್ನು ಸೇರುತ್ತದೆ. ಆದರೆ ಚಹ ಕೇವಲ 30-40 ಮಿ.ಗ್ರಾಂ ಅಂಶವನ್ನು ಹೊಂದಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯತ್ರಿಸಲು ಸಹಾಯಮಾಡುತ್ತದೆ.


English summary

Foods That Lower Cholesterol Naturally

The stressful lifestyle that we are exposed to on a daily basis has started taking its toll on this generations health. As a result, most of us suffer from diabetes, obesity and blood pressure issues at a very young age now. All this has led to the problems of high levels of cholesterol in the body, which is alarming. So how to control cholesterol and go about taming this monster? Listed below, you will find some time tested tips to lower down your cholesterol levels and reduce the chances of heart ailments.
X