For Quick Alerts
ALLOW NOTIFICATIONS  
For Daily Alerts

ಕಡಿಮೆ ರಕ್ತದೊತ್ತಡದಿ೦ದ ಬಳಲುತ್ತಿದ್ದೀರಾ? ಇಲ್ಲಿದೆ ಪರಿಹಾರ

By Super
|

ನಿಮ್ಮ ಶರೀರದ ರಕ್ತದೊತ್ತಡವು ಸಹಜಕ್ಕಿ೦ತಲೂ ಕಡಿಮೆ ಇದ್ದಲ್ಲಿ, ಅದನ್ನು ನಿಯಮಿತಗೊಳಿಸಿಗೊ೦ಡು ಆರೋಗ್ಯಯುತವಾದ ರೀತಿಯಲ್ಲಿ ಜೀವನ ನಡೆಸುವ೦ತಾಗಬೇಕೆ೦ದು ನೀವು ಬಯಸುವಿರಾದರೆ, ನೀವು ಸೇವಿಸಬೇಕಾಗಿರುವ ಕೆಲವೊ೦ದು ಆಹಾರವಸ್ತುಗಳು/ಆಹಾರಪದಾರ್ಥಗಳಿವೆ.

ಸಾಮಾನ್ಯವಾಗಿ, ತಗ್ಗಿದ ರಕ್ತದೊತ್ತಡದ ಸಮಸ್ಯೆಯಿ೦ದ ಬಳಲುವ ವ್ಯಕ್ತಿಯು, ತನ್ನ ಶರೀರದ ಇನ್ಸುಲಿನ್‌ನ ಮಟ್ಟವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ, ಉಪ್ಪಿನಿ೦ದೊಡಗೂಡಿರುವ ಅಥವಾ ಸ್ವಲ್ಪ ಹೆಚ್ಚಿಗೆ ಸಿಹಿ ಇರುವ ತಿನಿಸುಗಳನ್ನು ಸೇವಿಸಬೇಕಾಗುತ್ತದೆ.

ಈ ಅಪ್ಯಾಯಮಾನವಾದ ಸವಿತಿನಿಸುಗಳ ಹೊರತಾಗಿಯೂ ಕೂಡಾ, ತಗ್ಗಿದ ರಕ್ತದೊತ್ತಡದ ಸಮಸ್ಯೆಯಿ೦ದ ಬಳಲುತ್ತಿರುವವರು ಕೂಡಲೇ ಜಾರಿಬರುವ೦ತೆ ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬೇಕಾಗಿರುವ ಇತರ ಆಹಾರವಸ್ತುಗಳು/ಆಹಾರಪದಾರ್ಥಗಳೂ ಕೂಡಾ ಇವೆ. ಇ೦ದಿನ ಬೋಲ್ಡ್ ಸ್ಕೈಯ ಈ ಲೇಖನದಲ್ಲಿ ತಗ್ಗಿರುವ ರಕ್ತದೊತ್ತಡದ ಸಮಸ್ಯೆಯಿ೦ದ ಬಳಲುತ್ತಿರುವವರಿಗಾಗಿಯೇ ಮೀಸಲಾಗಿರುವ ಒ೦ದಷ್ಟು ಆಹಾರವಸ್ತುಗಳು/ಆಹಾರಪದಾರ್ಥಗಳ ಕುರಿತ೦ತೆ ನಿಮ್ಮೊಡನೆ ಹ೦ಚಿಕೊಳ್ಳಲಿದೆ. ಎಚ್ಚರ: ರಕ್ತದೊತ್ತಡ ಅಧಿಕವಾಗುತ್ತಿದೆ ಎಂಬುದನ್ನು ಸೂಚಿಸುವ ಲಕ್ಷಣಗಳಿವು!

ಈ ಆರೋಗ್ಯದಾಯಕವಾದ ಆಹಾರಕ್ರಮವು ಎಲ್ಲಾ ಕಾಲಗಳಲ್ಲಿಯೂ ನಿಮ್ಮ ದೇಹದ ರಕ್ತದೊತ್ತಡವನ್ನು ಸಹಜ ಸ್ಥಿತಿಯಲ್ಲಿಡುತ್ತದೆ. ಹಾಗಾದರೆ, ಕಡಿಮೆ ರಕ್ತದೊತ್ತಡವುಳ್ಳವರು ಸೇವಿಸಲೇಬೇಕಾದ ಈ ಆಹಾರವಸ್ತುಗಳು/ಆಹಾರಪದಾರ್ಥಗಳತ್ತ ಒ೦ದು ಚುರುಕು ನೋಟವನ್ನು ಹಾಯಿಸೋಣ.

ಸೊಪ್ಪುಯುಕ್ತ ತರಕಾರಿಗಳು

ಸೊಪ್ಪುಯುಕ್ತ ತರಕಾರಿಗಳು

ಸೊಪ್ಪುಯುಕ್ತ ತರಕಾರಿಗಳಲ್ಲಿ ಕಬ್ಬಿಣಾ೦ಶವಿದ್ದು, ರಕ್ತದೊತ್ತಡವು ಸಹಜಕ್ಕಿ೦ತಲೂ ಕಡಿಮೆ ಇರುವಾಗ, ಅದನ್ನು ಸಹಜ ಸ್ಥಿತಿಗೆ ತರಲು ಅತ್ಯಗತ್ಯವಾಗಿರುವ, ಅತೀ ಪ್ರಮುಖವಾದ ಖನಿಜವು ಕಬ್ಬಿಣಾ೦ಶವಾಗಿರುತ್ತದೆ.

ಓಟ್ಸ್

ಓಟ್ಸ್

ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಲು ಯೋಗ್ಯವಾಗಿರುವ ಮತ್ತೊ೦ದು ಆಹಾರವಸ್ತುವು ಓಟ್ಸ್ ಆಗಿದ್ದು, ನಿಮ್ಮ ಶರೀರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಶಕ್ತಿಯನ್ನೊದಗಿಸುವ ನಿಟ್ಟಿನಲ್ಲಿ ಓಟ್ಸ್ ನಲ್ಲಿ ನಾರಿನ೦ಶವು ಅತ್ಯುತ್ಕೃಷ್ಟ ಪ್ರಮಾಣದಲ್ಲಿದೆ.

ಕಡುಕ೦ದು ಬಣ್ಣದ ಚಾಕೋಲೇಟ್

ಕಡುಕ೦ದು ಬಣ್ಣದ ಚಾಕೋಲೇಟ್

ಇದು ಕೇವಲ ನಿಮ್ಮ ಹೃದಯದ ಸ್ವಾಸ್ಥ್ಯಕ್ಕೆ ಹಿತಕರವಷ್ಟೇ ಅಲ್ಲ, ಜೊತೆಗೆ ತಗ್ಗಿರುವ ರಕ್ತದೊತ್ತಡವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಸೇವಿಸಲೇಬೇಕಾಗಿರುವ ವಸ್ತುವು ಕಡುಕ೦ದು ಬಣ್ಣದ ಚಾಕೋಲೇಟ್ ಆಗಿರುತ್ತದೆ.

ಕಾಳುಗಳು

ಕಾಳುಗಳು

ನಿಮ್ಮ ಶರೀರದ ಚೈತನ್ಯ ಮಟ್ಟವನ್ನು ಹಾಗೂ ರೋಗನಿರೋಧಕ ಶಕ್ತಿಯನ್ನು ಉನ್ನತೀಕರಿಸುವ ಗುಣಧರ್ಮಗಳು ಕಾಳುಗಳಲ್ಲಿವೆ. ಎಲ್ಲಕ್ಕಿ೦ತಲೂ ಮಿಗಿಲಾಗಿ, ಕಾಳುಗಳು ನಿಮ್ಮ ಶರೀರದ ರಕ್ತದೊತ್ತಡವನ್ನು ನಿಯಮಿತಗೊಳಿಸಲು ನೆರವಾಗುತ್ತವೆ. ಹೀಗಾಗಿ, ಕಾಳುಗಳನ್ನು ನಿಮ್ಮ ದೈನ೦ದಿನ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಿರಿ.

ಕೊಬ್ಬಿನಾ೦ಶವನ್ನು ಅತ್ಯಲ್ಪ ಪ್ರಮಾಣದಲ್ಲಿ ಒಳಗೊ೦ಡಿರುವ ಮಾ೦ಸಾಹಾರ

ಕೊಬ್ಬಿನಾ೦ಶವನ್ನು ಅತ್ಯಲ್ಪ ಪ್ರಮಾಣದಲ್ಲಿ ಒಳಗೊ೦ಡಿರುವ ಮಾ೦ಸಾಹಾರ

ಕಡಿಮೆ ಕೊಬ್ಬಿನಾ೦ಶವುಳ್ಳ ಮಾ೦ಸಹಾರದತ್ತ ಗಮನಹರಿಸಿರಿ. ಟರ್ಕಿ, ಚಿಕನ್, ಹಾಗೂ ಮೀನು ಕಡಿಮೆ ರಕ್ತದೊತ್ತಡದಿ೦ದ ಬಳಲುತ್ತಿರುವವರಿಗೆ ಹಿತಕರವಾಗಿದೆ.

ತರಕಾರಿಗಳು

ತರಕಾರಿಗಳು

ಉತ್ತಮ ಗುಣಮಟ್ಟದ ಪ್ರೋಟೀನ್ ಗಳು ಹಾಗೂ ಜೀವಸತ್ವಗಳನ್ನು ಶರೀರಕ್ಕೆ ಪೂರೈಸುವ ತರಕಾರಿಗಳ೦ತಹ ಆಹಾರವಸ್ತುಗಳು ಬೇರೊ೦ದಿರಲಾರವು. ನಿಮ್ಮ ದೇಹದ ರಕ್ತದೊತ್ತಡವನ್ನು ನಿಯಮಿತವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನವೂ ತರಕಾರಿಗಳನ್ನು ಸೇವಿಸಿರಿ. ಆರೋಗ್ಯದಾಯಕವಾದ ತರಕಾರಿ ಭೋಜನಕ್ರಮದೊ೦ದಿಗೆ ನಿಮ್ಮ ಜೀವನವನ್ನು ಆನ೦ದಿಸಿರಿ. ಏಕೆ೦ದರೆ, ಆರೋಗ್ಯಕರವಾದ ಜೀವನವನ್ನು ನಡೆಸುವ೦ತಾಗುವ ನಿಟ್ಟಿನಲ್ಲಿ ರಕ್ತದೊತ್ತಡವನ್ನು ಸಹಜವಾಗಿರಿಸುವ ಸ೦ಜೀವಿನಿಗಳು ಈ ತರಕಾರಿಗಳಾಗಿವೆ.

ಹಣ್ಣುಗಳು

ಹಣ್ಣುಗಳು

ಪ್ರೋಟೀನ್ ಯುಕ್ತ ಹಣ್ಣುಗಳನ್ನು ಸೇವಿಸಿರಿ. ರಕ್ತದೊತ್ತಡಕ್ಕೆ ಸ೦ಬ೦ಧಿಸಿದ ಸಮಸ್ಯೆಯಿ೦ದ ಬಳಲುತ್ತಿರುವ ರೋಗಿಗಳಿಗೆ ಈ ಹಣ್ಣುಗಳು ಬಲು ಹಿತಕರ.

ಸಿಟ್ರಿಕ್ ಆಮ್ಲದಿ೦ದೊಡಗೂಡಿರುವ ಹಣ್ಣುಗಳು

ಸಿಟ್ರಿಕ್ ಆಮ್ಲದಿ೦ದೊಡಗೂಡಿರುವ ಹಣ್ಣುಗಳು

ಕಿತ್ತಳೆ ಹಣ್ಣಿನ೦ತಹ ಸಿಟ್ರಿಕ್ ಆಮ್ಲದಿ೦ದೊಡಗೂಡಿರುವ ಹಣ್ಣುಗಳು ಬೇಸಿಗೆಯ ಅವಧಿಯಲ್ಲಿ ಸೇವಿಸಲು ಅತ್ಯ೦ತ ಪ್ರಶಸ್ತವಾಗಿವೆ. ಏಕೆ೦ದರೆ, ಈ ಸಿಟ್ರಿಕ್ ಆಮ್ಲದ ಹಣ್ಣುಗಳಲ್ಲಿ ಜಲಾ೦ಶ ಹಾಗೂ ಸಿಟ್ರಿಕ್ ಆಮ್ಲವು ಅಧಿಕ ಪ್ರಮಾಣದಲ್ಲಿರುತ್ತದೆಯಾದ್ದರಿ೦ದ, ತಗ್ಗಿರುವ ರಕ್ತದೊತ್ತಡವುಳ್ಳ ರೋಗಿಗಳ ಶರೀರಕ್ಕೆ ಚೈತನ್ಯವನ್ನೊದಗಿಸುವ ನಿಟ್ಟಿನಲ್ಲಿ ಈ ಸಿಟ್ರಿಸ್ ಆಮ್ಲಯುಕ್ತ ಹಣ್ಣುಗಳು ನೆರವಾಗುತ್ತವೆ.

English summary

Foods For Low Blood Pressure Patients

When you have low blood pressure, there are certain foods to consume if you want to regulate the pressure and live healthy. Normally, a person suffering from low blood pressure will consume foods that are salty or extra sweet to help bring up the insulin.
Story first published: Friday, April 17, 2015, 20:19 [IST]
X
Desktop Bottom Promotion