For Quick Alerts
ALLOW NOTIFICATIONS  
For Daily Alerts

ಅಜೀರ್ಣ ಸಮಸ್ಯೆಗೆ ಒಂದಿಷ್ಟು ಸರಳೋಪಾಯಗಳು

|

ಆಧುನಿಕ ಸೌಲಭ್ಯಗಳು ನಮ್ಮ ಜೀವನವನ್ನು ಸುಲಭಗೊಳಿಸಿತ್ತಿದ್ದಂತೆಯೇ ಇನ್ನೊಂದೆಡೆ ನಮ್ಮ ಶರೀರಗಳನ್ನು ಶಿಥಿಲವಾಗಿಸುತ್ತಿದೆ. ಹಿಂದೆ ಸೌಲಭ್ಯಗಳು ಕಡಿಮೆಯಿದ್ದಾಗ ದಿನನಿತ್ಯದ ಚಟುವಟಿಕೆಗಳ ಕಾರಣ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಿ ಆರೋಗ್ಯ ವೃದ್ಧಿಸುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ವ್ಯಾಯಾಮಕ್ಕೆಂದೇ ಹಣ ಕೊಟ್ಟು ಕೃತಕವಾಗಿ ದೇಹ ದಂಡಿಸುವಂತಾಗಿದೆ. ನೈಸರ್ಗಿಕ ಆಹಾರಗಳ ಬದಲಾಗಿ ಸಿದ್ಧ ಆಹಾರಗಳು ಮನೆ ತಲುಪುತ್ತಿವೆ. ಪರಿಣಾಮವಾಗಿ ಇತ್ತೀಚೆಗೆ ಹಲವಾರು ಜಡತ್ವದ ಕಾರಣದ ತೊಂದರೆಗಳು ಸಮಾಜವನ್ನು ಕಾಡುತ್ತಿದೆ.

ಸ್ಥೂಲಕಾಯ, ಹೆಚ್ಚಿನ ಹೃದಯದೊತ್ತಡ, ಶರೀರದಲ್ಲಿ ಕಸುವು ಇಲ್ಲದೇ ಇರುವುದು (ಅಂದರೆ ಕೊಂಚ ದೂರ ನಡೆದರೂ ಅತೀವ ಸುಸ್ತಾಗುವುದು), ಅಜೀರ್ಣ, ಚಿಕ್ಕ ವಯಸ್ಸಿನಲ್ಲಿಯೇ ವೃದ್ಧಾಪ್ಯದ ಕುರುಹುಗಳು ಮೊದಲಾದವು. ಇದರಲ್ಲಿ ಆಹಾರ ಸೇವನೆಯಲ್ಲಿ ಆಗುವ ಏರುಪೇರಿನ ಮೂಲಕ ಕಾಡುವ ಅಜೀರ್ಣ (dyspepsia) ಹೊಟ್ಟೆಯುಬ್ಬರ, ಹುಳಿತೇಗು, ಹೊಟ್ಟೆಯಲ್ಲಿ ಉರಿ, ಮಲಬದ್ಧತೆ, ವಾಯುಪ್ರಕೋಪ, ಕರುಳಿನಲ್ಲಿ ಹುಣ್ಣು (ಅಲ್ಸರ್) ಮೊದಲಾದವುಗಳಿಗೆ ಆಹ್ವಾನ ನೀಡುತ್ತದೆ. ಅಜೀರ್ಣ ಸಮಸ್ಯೆ ಬೆನ್ನು ಬಿಡದೆ ಕಾಡುತ್ತಿದೆಯೇ? ಇಲ್ಲಿದೆ ಪರಿಹಾರ

ಇದಕ್ಕೆ ಪ್ರಧಾನವಾದ ಕಾರಣ ಸರಿಯಾಗಿ ನಾವು ನೀರು ಕುಡಿಯದೇ ಇರುವುದು. ಜಠರದಲ್ಲಿರುವ ಆಹಾರವನ್ನು ಜೀರ್ಣಿಸಲು ಅತಿ ಪ್ರಬಲವಾದ (ಆಮ್ಲೀಯ) ಜಠರರಸಕ್ಕೆ ನೀರು ಅಗತ್ಯವಿದೆ. ಒಂದು ವೇಳೆ ದಿನದ ವಿವಿಧ ಸಮಯದಲ್ಲಿ ಸುಮಾರು ಎಂಟು ಲೋಟ ನೀರು ಕುಡಿಯದೇ ಹೋದರೆ ಜಠರರಸ ಆಹಾರವನ್ನು ಪೂರ್ಣವಾಗಿ ಜೀರ್ಣಿಸಲು ಸಾಧ್ಯವಾಗದೇ ಅಜೀರ್ಣತೆ ಎದುರಾಗುತ್ತದೆ. ಒಳ್ಳೆಯ ಸುದ್ದಿಯೆಂದರೆ ಈ ತೊಂದರೆಗೆ ಆಯುರ್ವೇದದಲ್ಲಿ ಸೂಕ್ತ ಪರಿಹಾರವಿದೆ. ಅದರಲ್ಲೂ ಸರಿಸುಮಾರು ತೊಂಭತ್ತುಭಾಗದ ಪರಿಹಾರ ನಿಮ್ಮ ಅಡುಗೆ ಮನೆಯಲ್ಲಿರುವ ಸುಲಭ ಆಹಾರವಸ್ತುಗಳಿಂದಲೇ ಸಾಧ್ಯವಿದೆ.

ಮೆಂತೆ, ಜೀರಿಗೆ, ಕೊತ್ತೊಂಬರಿ, ಕಾಳುಮೆಣಸು, ಇಂಗು ಮೊದಲಾದವು ಅಜೀರ್ಣತೆಯನ್ನು ಕಡಿಮೆಗೊಳಿಸುವುದು. ತರಕಾರಿಗಳಾದ ಹಸಿಮೆಣಸು, ಹಸಿಶುಂಠಿ, ಲಿಂಬೆ, ಪುದಿನಾ ಸೊಪ್ಪುಗಳನ್ನು ಗೊಟಾಯಿಸಿ ತಯಾರಿಸಿದ ಜ್ಯೂಸ್ ಸಹಾ ಉತ್ತಮ. ಶುಂಠಿಯ ಚಿಕ್ಕ ತುಂಡಿಗೆ ಕಪ್ಪು ಉಪ್ಪು ಮತ್ತು ಲಿಂಬೆರಸದ ಕೆಲವು ಹನಿಗಳನ್ನು ಚಿಮುಕಿಸಿ ಸೇವಿಸಿದರೆ ಹೊಟ್ಟೆಯುಬ್ಬರ ತಕ್ಷಣ ಕಡಿಮೆಯಾಗುತ್ತದೆ. ಮಜ್ಜಿಗೆ ನೀರಿಗೆ ಹುರಿದು ಪುಡಿಮಾಡಿದ ಜೀರಿಗೆ ಮತ್ತು ಕೊತ್ತಂಬರಿ ಪುಡಿಗಳನ್ನು ಸೇರಿಸಿ ಕುಡಿದರೂ ಹೊಟ್ಟೆಯುರಿ ಕಡಿಮೆಯಾಗುತ್ತದೆ. ಇಂತಹ ಇನ್ನೂ ಹಲವಾರು ಸುಲಭ ಪರಿಹಾರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಮುಂದೆ ಓದಿ...

ಕೊತ್ತಂಬರಿ ಕಾಳುಗಳು

ಕೊತ್ತಂಬರಿ ಕಾಳುಗಳು

ಒಂದು ಹಿಡಿಯಷ್ಟು ಧನಿಯ (ಕೊತ್ತಂಬರಿ) ಕಾಳುಗಳನ್ನು ದಪ್ಪತಳದ ಬಾಣಲೆಯಲ್ಲಿ ಚಿಕ್ಕ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಕೆಂಪಗಾಗುತ್ತಲೇ ಬಾಣಲೆಯಿಂದ ಒಂದು ತಟ್ಟೆಯಲ್ಲಿ ಹರಡಿ. ಇದನ್ನು ಕೊಂಚ ಜಜ್ಜಿ (ಎರಡು ಬಟ್ಟೆಗಳ ನಡುವೆ ಇರಿಸಿ ಲಟ್ಟಣಿಗೆಯಿಂದ ಲಟ್ಟಿಸಿ) ಒಂದು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ. ಊಟವಾದ ಬಳಿಕ ಮಜ್ಜಿಗೆಯಲ್ಲಿ ಈ ಪುಡಿಯನ್ನು ಸೇರಿಸಿ (ಒಂದು ಲೋಟಕ್ಕೆ ಒಂದು ಚಿಕ್ಕ ಚಮಚ) ಕುಡಿದರೆ ಹೊಟ್ಟೆಯುರಿ, ಉಬ್ಬರ ಕಡಿಮೆಯಾಗುತ್ತದೆ. ಹೊಟ್ಟೆಯುಬ್ಬರ ಮತ್ತು ಉರಿ ಜಾಸ್ತಿ ಇದ್ದರೆ ಕೆಲವು ಏಲಕ್ಕಿ, ಲವಂಗ ಮತ್ತು ಹಸಿಶುಂಠಿಯ ಚಿಕ್ಕ ತುಂಡುಗಳನ್ನು ಸೇರಿಸಿ ನಯವಾಗಿ ಅರೆದು ಮಜ್ಜಿಗೆಗೆ ಸೇರಿಸಿ ಕುಡಿಯಿರಿ.(ಇದು ಮಧ್ಯಾಹ್ನ ಮತ್ತು ರಾತ್ರಿ ಊಟದ ಬಳಿಕ ಮಾತ್ರ, ಬೆಳಗ್ಗಿನ ಹೊತ್ತಿಗೆ ಉತ್ತಮವಲ್ಲ)

ಜೇನು ಮತ್ತು ಲಿಂಬೆರಸ

ಜೇನು ಮತ್ತು ಲಿಂಬೆರಸ

ಒಂದು ಲೋಟ ಕುದಿದು ಅರ್ಧ ತಣಿದಿರುವ ನೀರಿನಲ್ಲಿ ಅರ್ಧ ಟೀ ಚಮಚ ಜೇನು ಮತ್ತೊ ದೊಡ್ಡ ಲಿಂಬೆಯಾದರೆ ಅರ್ಧ ಭಾಗ (ಪುಟಾಣಿ ಲಿಂಬೆಯಾದರೆ ಇಡೀ ಒಂದು) ರಸ ಹಿಂಡಿ ಕಲಕಿ. ಈ ನೀರನ್ನು ಖಾಲಿಹೊಟ್ಟೆಯಲ್ಲಿ ಸೇವಿಸಬೇಕು. ಅಂದರೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೂ ಅರ್ಧಗಂಟೆ ಮೊದಲು ಸೇವಿಸಿದರೆ ಬಳಿಕ ಸೇವಿಸುವ ಆಹಾರದಿಂದ ಅಜೀರ್ಣವಾಗುವ ಸಂಭವ ತಪ್ಪುತ್ತದೆ.

ಬಿಸಿ ನೀರನ್ನು ಕುಡಿಯಿರಿ

ಬಿಸಿ ನೀರನ್ನು ಕುಡಿಯಿರಿ

ನಿಮಗೆ ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾದರೆ ಬಿಸಿ ನೀರನ್ನು ಕುಡಿಯಿರಿ. ಪ್ರತಿದಿನ ಬೆಳಗ್ಗೆ ಅಥವಾ ಊಟಕ್ಕೆ ಅರ್ಧಗಂಟೆ ಮೊದಲು ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ರಸ ಉತ್ಪತ್ತಿಯಾಗುವುದನ್ನು ತಡೆಯುತ್ತದೆ.

ಕೊಬ್ಬಿನಂಶ ಹೆಚ್ಚಿರುವ ಆಹಾರದಿಂದ ದೂರವಿರಿ

ಕೊಬ್ಬಿನಂಶ ಹೆಚ್ಚಿರುವ ಆಹಾರದಿಂದ ದೂರವಿರಿ

ಕೊಬ್ಬಿನಂಶ ಹೆಚ್ಚಿರುವ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ಆ ರೀತಿಯ ಆಹಾರ ತೆಗೆದುಕೊಂಡರೆ ಅಜೀರ್ಣ ತೊಂದರೆ ಪ್ರಾರಂಭವಾಗುತ್ತದೆ.ಕೊಬ್ಬಿನ ಆಹಾರಗಳು ದೇಹಕ್ಕೆ ಅಗತ್ಯ ಕೂಡ ಆದ್ದರಿಂದ ಸಂಪೂರ್ಣವಾಗಿ ಬಿಟ್ಟು ಬಿಡಬೇಡಿ. ಬೇರೆ ಆರೋಗ್ಯಯುತ ಆಹಾರದೊಂದಿಗೆ ಇದನ್ನು ಸೇರಿಸಿ ಸೇವಿಸಿದಲ್ಲಿ ಯಾವುದೇ ತೊಂದರೆ ಇಲ್ಲ.

ಫಾಸ್ಟ್ ಫುಡ್ ನಿಂದ ದೂರವಿರಿ

ಫಾಸ್ಟ್ ಫುಡ್ ನಿಂದ ದೂರವಿರಿ

ಸಾಮಾನ್ಯವಾಗಿ ಫಾಸ್ಟ್ ಫುಡ್‌ನಲ್ಲಿ ಬೊಜ್ಜಿನಂಶವಿರುವ ಆಹಾರದಿಂದ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಸೇರಿಕೊಳ್ಳುವ ಎಣ್ಣೆ ಗ್ಯಾಸ್ ಉತ್ಪತ್ತಿ ಮಾಡಿ ತೇಗು ಉಂಟಾಗಿ ಅಜೀರ್ಣತೆಯಿಂದ ಬಳಲುವಂತಾಗುತ್ತದೆ. ಆದ್ದರಿಂದ ಫಾಸ್ಟ್ ಫುಡ್ ಗಳಾದ ಬರ್ಗರ್, ಫ್ರೆಂಚ್ ಫ್ರೈ, ಆಲೂ ಚಿಪ್ಸ್, ಪಕೋಡಾ, ಬೆಣ್ಣೆ, ಹುರಿದ ಮಾಂಸ ಇವುಗಳಿಂದ ದೂರವಿರುವುದು ಒಳಿತು.

English summary

Effectice home remedies to prevent indigestion

Medically known as dyspepsia, indigestion is a gastrointestinal problem people commonly complaint about. Its symptoms can be bloating, belching, burning sensation and nausea. Gas and indigestion are problems occurring from the secretion of the digestive juices in our stomach. Here are simple yet very effective home remedies you can try out to get some relief from indigestion and gas problems.
Story first published: Saturday, October 24, 2015, 14:57 [IST]
X
Desktop Bottom Promotion