For Quick Alerts
ALLOW NOTIFICATIONS  
For Daily Alerts

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯೋಗಾಭ್ಯಾಸ

|

ಯೋಗಾಭ್ಯಾಸವನ್ನು ನಿತ್ಯವೂ ಅನುಸರಿಸುವುದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಆರೋಗ್ಯಕ್ಕೆ ಪೂರಕವಾದ ಹಲವು ಅಂಶಗಳಿವೆ. ಇಂದಿನ ದೈನಂದಿನ ಒತ್ತಡವನ್ನು ಕಡಿಮೆಗೊಳಿಸುವಲ್ಲಿ ಸಾವಿರಾರು ವರ್ಷಗಳಿಂದ ಆಚರಿಸುತ್ತಾ ಬಂದಿರುವ ಯೋಗವೇ ಅತ್ಯುತ್ತಮ ಪರಿಹಾರ. ಯೋಗಾಭ್ಯಾಸವನ್ನು ನಿತ್ಯವೂ ಅನುಸರಿಸುವವರನ್ನು ಸಂಶೋಧನೆಗೊಳಪಡಿಸಿದಾಗ ಅವರ ದೇಹದಲ್ಲಿ ಮನಸ್ಸಿನ ಬೇಗುದಿ, ಒತ್ತಡಕ್ಕೆ ಕಾರಣವಾದ ಕಾರ್ಟಿಸೋಲ್ ಎಂಬ ರಸದೂತದ ಪರಿಣಾಮವನ್ನು ನೈಸರ್ಗಿಕವಾಗಿ ಕಡಿಮೆಗೊಳಿಸಿರುವುದು ಕಂಡುಬಂದಿದೆ.

ಯೋಗಾಭ್ಯಾಸದಿಂದ ಮನಸ್ಸಿನ ಬೇಗುದಿ ಕಡಿಮೆಯಾಗುವುದು ಮಾತ್ರವಲ್ಲ, ನರವ್ಯವಸ್ಥೆಯ ಮೂಲಕ ಚುರುಕಾಗಿ ನಿರ್ವಹಿಸಬೇಕಾದ ಅರಿಮೆ, ಗಮನವನ್ನು ಕೇಂದ್ರೀಕರಿಸುವುದು, ಥಟ್ಟನೇ ಪ್ರತಿಕ್ರಿಯಿಸುವುದು, ಇಂದ್ರಿಯಗಳು ಚುರುಕಾಗಿ ಸ್ಪಂದಿಸುವುದು ಮತ್ತು ರಕ್ತಸಂಚಾರ ಉತ್ತಮಗೊಳ್ಳುವುದು ಮೊದಲಾದ ಇತರ ಅನುಕೂಲಗಳೂ ಇವೆ. ನಿಮ್ಮ ದೇಹ ಉತ್ತಮವಾದ ಸೆಳೆತವನ್ನು ಪಡೆದು ವೃದ್ಧಾಪ್ಯವನ್ನು ದೂರ ಮಾಡಲು ನೆರವಾಗುತ್ತದೆ. ನಿಮ್ಮ ಭಾವನೆಗಳ ಮೇಲೆ ಮತ್ತು ತೂಕದ ಮೇಲೆ ನಿಯಂತ್ರಣ ಸಾಧಿಸಲು ನಿಮ್ಮಿಂದ ಸಾಧ್ಯವಾಗುವಂತಾಗಲು ಇಂದಿನಿಂದಲೇ ನಿತ್ಯವೂ ಯೋಗಾಸನಗಳನ್ನು ಅನುಸರಿಸಲು ಪ್ರಾರಂಭಿಸಿ.

Does Yoga Enhance Immunity?

ಯೋಗಾಸನಗಳನ್ನು ನಿತ್ಯವೂ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವವರ ಅನುಭವದ ಪ್ರಕಾರ ಮಾನಸಿಕ ನೆಮ್ಮದಿ ಮತ್ತು ಶಾಂತಿ ದೊರಕುತ್ತದೆ. ಆದರೆ ಯೋಗಾಸನಗಳ ಬಗ್ಗೆ ಸರಿಯಾಗಿ ಅರಿಯದೇ ಆಚರಿಸಿದರೆ ತೊಂದರೆಗಳು ಎದುರಾಗಬಹುದು. ಇದನ್ನು ನುರಿತ ಯೋಗಪಟುಗಳ ಮಾರ್ಗದರ್ಶನದಲ್ಲಿ ಪ್ರಾರಂಭದಿಂದ ಹಂತಹಂತವಾಗಿ ಅನುಸರಿಸಬೇಕೇ ವಿನಃ ಯಾವುದೋ ಕಾರ್ಯಕ್ರಮದಲ್ಲಿ ಯೋಗಾಸನದ ಭಂಗಿಯನ್ನು ನೋಡಿ ಅದನ್ನು ಒಮ್ಮೆಲೇ ಅನುಸರಿಸಲು ಹೋಗದಿರಿ. ಈ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ದೈಹಿಕ ಸ್ವಾಸ್ಥ್ಯಕ್ಕಾಗಿ ಯೋಗ ಮಾಡಿ ಜಿಮ್ ಬಿಡಿ

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಇತ್ತೀಚಿನ ಸಂಶೋಧನೆಯ ಪ್ರಕಾರ ಯೋಗಾಭ್ಯಾಸವನ್ನು ನಿಯಮಿತವಾಗಿ ನಿತ್ಯವೂ ಅನುಸರಿಸುತ್ತಿರುವವರ ದೇಹದ ಪ್ರತಿ ಜೀವಕೋಶವೂ ಉತ್ತಮ ಆರೋಗ್ಯದಿಂದ ಕೂಡಿದ್ದು ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರುವುದು ಕಂಡುಬಂದಿದೆ. ಅಭ್ಯಾಸದ ಹೊತ್ತಿನಲ್ಲಿ ಪೂರ್ಣವಾದ ಉಸಿರು ಎಳೆದುಕೊಳ್ಳುವುದು, ಸ್ನಾಯುಗಳನ್ನು ಅದರ ಮಿತಿಯವರೆಗೆ ಸೆಳೆಯುವುದು ಮೊದಲಾದವು ರಕ್ತಸಂಚಾರವನ್ನು ಉತ್ತಮಗೊಳಿಸಲು ಸಹಕಾರಿಯಾಗಿವೆ. ಯೋಗಾಭ್ಯಾಸದಿಂದ ಇಡಿಯ ದೇಹದ ಒಟ್ಟಾರೆ ಆರೋಗ್ಯ (ಮಾನಸಿಕ ಮತ್ತು ದೈಹಿಕ) ಉತ್ತಮಗೊಳ್ಳುತ್ತದೆ. ದೇಹ ಕೃಶವೆಂದು ಕಂಡುಬಂದರೂ ವೃದ್ದಿಗೊಂಡ ರೋಗನಿರೋಧಕ ಶಕ್ತಿ ಉತ್ತಮ ಆಯಸ್ಸನ್ನು ದೊರಕಿಸಲು ಖಂಡಿತಾ ನೆರವಾಗುತ್ತದೆ.

Does Yoga Enhance Immunity?

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕದ ಹೆಚ್ಚಳಕ್ಕೆ ಮಾನಸಿಕವಾಗಿ ದುರ್ಬಲರಾಗಿರುವುದೇ ಮುಖ್ಯ ಕಾರಣ. ಯೋಗಾಭ್ಯಾಸದಿಂದ ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಸಾಧ್ಯವಾದುದರಿಂದ ಆಹಾರವನ್ನು ಸೇವಿಸಲು ಹಾತೊರೆಯುವ ಮನಕ್ಕೆ ಕಡಿವಾಣ ಹಾಕಲು ಸಾಧ್ಯ. ಇದರಿಂದ ಆಹಾರದ ಪ್ರಮಾಣದ ಮೇಲೆ ಹತೋಟಿ ಸಾಧಿಸಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಕಳೆದುಕೊಂಡ ತೂಕ ಉತ್ತಮ ಆರೋಗ್ಯಕ್ಕೆ ನಾಂದಿಯಾಗಿದೆ. ದೈಹಿಕ ಸ್ವಾಸ್ಥ್ಯಕ್ಕಾಗಿ ಯೋಗ ಮಾಡಿ ಜಿಮ್ ಬಿಡಿ

ತಲೆನೋವನ್ನು ಕಡಿಮೆಗೊಳಿಸುತ್ತದೆ

Does Yoga Enhance Immunity?

ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ಎಂತಹ ಜಟ್ಟಿಯನ್ನಾದರೂ ನೆಲಕ್ಕುರುಳಿಸುವ ಸಾಮರ್ಥ್ಯ ಹೊಂದಿದೆ. ಈ ಭಯಂಕರ ನೋವನ್ನು ಬರದಂತೆ ಮಾಡಲು ಯೋಗಾಸನದ ಕೆಲವು ಆಸನಗಳು ಮ್ರೈಗ್ರೇನ್ ಕಡಿಮೆಗೊಳಿಸಲು ನೆರವಾಗುತ್ತವೆ. ಅಧೋಮುಖ ಶ್ವಾನಾಸನ, ಪ್ರಸಾರಿತ ಪಡೋತ್ತಾನಾಸನ, ಉತ್ತನಾಸನ, ಜನುಶೀರ್ಷಾಸನ, ಪಶ್ಚಿಮೋತ್ತಾಸನ, ಮತ್ಸೇಂದ್ರಾಸನ, ಊರ್ಧ್ವಮುಖ ಶ್ವಾನಾಸನ, ಸೇತುಬಂಧ, ಮತು ಶವಾಸನಗಳು ತಲೆನೋವು ಕಡಿಮೆಗೊಳಿಸಲು ನೆರವಾಗುತ್ತವೆ. ಈ ಭಂಗಿಗಳಲ್ಲಿ ಮೆದುಳಿಗೆ ಹರಿಯುವ ರಕ್ತದ ಪ್ರಮಾಣ ಹೆಚ್ಚುವುದರಿಂದ ತಲೆನೋವು ಸ್ವಾಭಾವಿಕವಾಗಿ ಕಡಿಮೆಯಾಗಲು ಸಾಧ್ಯವಾಗುತ್ತದೆ.

English summary

Does Yoga Enhance Immunity?

Yoga has many health benefits. In fact it is the best alternative to beat the stress in your daily life. Research says that yoga can play an important role in reducing the levels of cortisol which is a stress hormone. Now let us discuss about other benefits of yoga.
Story first published: Wednesday, June 24, 2015, 10:04 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X