For Quick Alerts
ALLOW NOTIFICATIONS  
For Daily Alerts

ಮಾನಸಿಕ ಸಮಸ್ಯೆ ಮಹಿಳೆಯರ ಸಂಖ್ಯೆಯೇ ಜಾಸ್ತಿ! ಯಾಕಿರಬಹುದು?

|

ಮಹಿಳೆಯರ ಜೀವನವು ಕೆಲಸ ಮತ್ತು ಕುಟುಂಬ ಜೀವನದ ವಿಚಾರಕ್ಕೆ ಬಂದರೆ, ಪುರುಷರ ಜೀವನಕ್ಕಿಂತ ಹೆಚ್ಚು ಸವಾಲಿನಿಂದ ಕೂಡಿರುತ್ತದೆ. ಆಗ ಆಕೆಯು ಕಚೇರಿಯ ಕೆಲಸಗಳಿಂದ ಹಿಡಿದು ಮನೆಯ ಕೆಲಸದವರೆಗೆ ಎಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ. ಜೊತೆಗೆ ಮಕ್ಕಳು, ಅತ್ತೆ-ಮಾವ ಮತ್ತು ಗಂಡನನ್ನು ನೋಡಿಕೊಳ್ಳುವ ಕೆಲಸವು ಸಹ ಆಕೆಯ ಮೇಲೆ ಇರುತ್ತದೆ. ಇದನ್ನೆಲ್ಲ ಆಕೆ ನಗುನಗುತ್ತಲೆ ಮಾಡುತ್ತಾಳೆ. ಆದರೆ ಅದೇ ನಗುವಿನ ಪ್ರತ್ಯುತ್ತರವು ಆಕೆಗೆ ತುಂಬಾ ಕಡಿಮೆ ದೊರೆಯುತ್ತದೆ.

ಬಹುತೇಕ ಮಹಿಳೆಯರು ಆದಷ್ಟು ತಾಳ್ಮೆ ಮತ್ತು ಪ್ರೀತಿಯ ವರವನ್ನು ಪಡೆದಿರುತ್ತಾರೆ. ಆದರೂ ಆಕೆಯು ಸಹ ಮನುಷ್ಯಳಾಗಿರುವುದರಿಂದಾಗಿ, ಆಕೆಗೂ ಅನಾರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ಕಾಡುತ್ತವೆ. ಈಕೆಗೆ ಬರುವ ಹಲವಾರು ಮಾನಸಿಕ ಸಮಸ್ಯೆಗಳಿಗೆ, ಈ ಪುರುಷ ಪ್ರಧಾನ ಸಮಾಜದಲ್ಲಿ ದೊರೆಯುವ ಕಡಿಮೆ ಆತ್ಮಗೌರವವೇ, ಕಾರಣ. ಈ ಎಲ್ಲದರ ನಡುವೆ ಆಕೆ ಚೆನ್ನಾಗಿ ಕಾಣಬೇಕು ಮತ್ತು ಇತರರು ಚೆನ್ನಾಗಿರುವಂತೆ ನೋಡಿಕೊಳ್ಳಬೇಕು, ಸಮಸ್ಯೆಗಳು ಇಲ್ಲಿಗೆ ಮುಗಿಯುವುದಿಲ್ಲ. ಮಹಿಳೆಯರು ಖಿನ್ನತೆ ರೋಗಕ್ಕೆ ಗುರಿಯಾಗಲು ಕಾರಣಗಳೇನು?

ಮಹಿಳೆಯು ಮಾನಸಿಕ ಮತ್ತು ದೈಹಿಕ ಅನಾರೋಗ್ಯಕ್ಕೆ ಸಾಮಾನ್ಯವಾಗಿ ತುತ್ತಾಗುವುದಿಲ್ಲ. ವಿಧವೆಯರು ಮತ್ತು ವಿಚ್ಛೇಧಿತ ಮಹಿಳೆಯರು ಹಣಕಾಸಿನ ಸಮಸ್ಯೆಗಳನ್ನು ಎದರಿಸಬಹುದು. ಇದು ಸಹ ಅವರ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಭಾರತೀಯ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ.

ಇದರ ಜೊತೆಗೆ ಮುಟ್ಟು ನಿಲ್ಲುವ ಅವಧಿಯಲ್ಲಿ ಕಂಡು ಬರುವ ಹಾರ್ಮೋನುಗಳ ಅಸಮತೋಲನಗಳು, ಗರ್ಭಧಾರಣೆ, ಗರ್ಭ ಧಾರಣೆಯ ನಂತರದ ಅವಧಿ, ಮುಂತಾದ ಸಮಸ್ಯೆಗಳು, ಮಹಿಳೆಯರ ಮಾನಸಿಕ ಸಮಸ್ಯೆಗಳಿಗೆ ಕೊಡುಗೆಯನ್ನು ನೀಡುತ್ತವೆ. ಬನ್ನಿ ಮಹಿಳೆಯರನ್ನು ಕಾಡುವ ಮಾನಸಿಕ ಸಮಸ್ಯೆಗಳಿಗೆ ಕಾರಣಗಳೇನು ಎಂದು ನೋಡೋಣ.

ಒತ್ತಡ

ಒತ್ತಡ

ಮಹಿಳೆಯರು ಗಂಡಸರಿಗಿಂತ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ವಿಜ್ಞಾನಿಗಳು ತಿಳಿಸುತ್ತಾರೆ. ಈ ಒತ್ತಡವು ಮಹಿಳೆಯರ ಮೆದುಳಿನಲ್ಲಿ ಖಿನ್ನತೆಗಳನ್ನುಂಟು ಮಾಡುವ ಹಲವಾರು ರಾಸಾಯನಿಕ ಬದಲಾವಣೆಗಳನ್ನು ತರುತ್ತದೆ. ಇದಕ್ಕಾಗಿ ಮಹಿಳೆಯರು ದೀರ್ಘಾವಧಿ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ.

ಗರ್ಭಪಾತಗಳು

ಗರ್ಭಪಾತಗಳು

ಒಂದು ಅಧ್ಯಯನದ ಪ್ರಕಾರ ಗರ್ಭಪಾತಗಳು ಮಹಿಳೆಯರಲ್ಲಿ, ಹೃದಯಾಘಾತವನ್ನುಂಟು ಮಾಡುವ ಸಾಧ್ಯತೆಯನ್ನು ದುಪ್ಪಟ್ಟು ಮಾಡುತ್ತದೆಯಂತೆ. ಒಂದು ಅಧ್ಯಯನದ ಪ್ರಕಾರ ಹತ್ತರಲ್ಲಿ ಒಬ್ಬ ಮಹಿಳೆಯಲ್ಲಿ ಈ ಕಾರಣದಿಂದಾಗಿ ಮಾನಸಿಕ ಸಮಸ್ಯೆ ಕಂಡು ಬರುತ್ತದೆಯಂತೆ.

ಮುಟ್ಟು ನಿಲ್ಲುವ ಅವಧಿ

ಮುಟ್ಟು ನಿಲ್ಲುವ ಅವಧಿ

ಇದು ಸಹ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿದೆ. ಈ ಅವಧಿಯಲ್ಲಿ ಮಹಿಳೆಗೆ ಖಿನ್ನತೆ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಅವರ ದೇಹದಲ್ಲಿ ಹಲವಾರು ಹಾರ್ಮೋನ್‌ಗಳ ಬದಲಾವಣೆಯನ್ನು ತರುತ್ತದೆ. ಹಾಟ್ ಫ್ಲಾಷ್‌ಗಳು, ಒಣ ತ್ವಚೆ, ಆಸ್ಟಿಯೊಪೊರೊಸಿಸ್ ಮತ್ತು ಮೂಡ್ ಬದಲಾವಣೆಯಂತಹ ಮಾನಸಿಕ ಬದಲಾವಣೆಗಳು, ಕೋಪ, ಕಿರಿಕಿರಿ ಮತ್ತು ಖಿನ್ನತೆಗು ಸಹ ಬೀಳುವಂತಹ ಸಮಸ್ಯೆಗಳು ಇದರಿಂದ ಕಾಣಿಸಿಕೊಳ್ಳುತ್ತದೆ.

ಖಿನ್ನತೆ

ಖಿನ್ನತೆ

ಒಂದು ಅಧ್ಯಯನದ ಪ್ರಕಾರ ಪ್ರತಿ ನಾಲ್ಕು ಜನ ಮಹಿಳೆಯರಲ್ಲಿ, ಒಬ್ಬರಿಗೆ ಖಿನ್ನತೆ ಇರುತ್ತದೆಯಂತೆ. ಇದು ಪುರುಷರಿಗಿಂತ ಹೆಚ್ಚು ಎಂಬುದು ಉಲ್ಲೇಖಾರ್ಹ. ಮಹಿಳೆಯರಿಗೆ ಖಿನ್ನತೆ ಬರಲು ಹಲವಾರು ಕಾರಣಗಳು ಇರುತ್ತವೆ. ಗರ್ಭಾವಧಿ, ಬಡತನ, ಒಂಟಿತನ ಮತ್ತು ಹಾರ್ಮೋನುಗಳ ಬದಲಾವಣೆಯಂತಹ ಸಮಸ್ಯೆಗಳು ಇದಕ್ಕೆ ಕಾರಣವಾಗುತ್ತವೆ.

ಫೋಬಿಯಾ

ಫೋಬಿಯಾ

ಫೋಬಿಯಾಗಳು ನಮ್ಮ ಮನಸ್ಸಿನಲ್ಲಿ ಕಂಡು ಬರುವ ವಿಚಿತ್ರ ಭಯಗಳಾಗಿರುತ್ತವೆ. ಫೋಬಿಯಾದಿಂದ ನರಳುವಂತಹವರು, ಕಿರಿಕಿರಿ, ತಳಮಳಕ್ಕೆ ಒಳಗಾಗುವುದು, ನೋವು ಮತ್ತು ತಿರಸ್ಕಾರಗೊಳಗಾಗುತ್ತಾರೆ. ಫೋಬಿಯಾ ಎಂಬುದು ಒಂದು ವಿಸ್ತ್ರುತ ಸ್ಥಿತಿಯಾಗಿದ್ದು, ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತ ಇರುತ್ತದೆ. ಮಹಿಳೆಯರು ಇಂತಹ ಮಾನಸಿಕ ರೋಗಕ್ಕೆ ಸುಲಭವಾಗಿ ತುತ್ತಾಗುತ್ತಾರೆ.

ಅಪಘಾತದ ನಂತರದ ಒತ್ತಡ

ಅಪಘಾತದ ನಂತರದ ಒತ್ತಡ

ಮಹಿಳೆಯರ ಮೇಲೆ ಭಾರತದಲ್ಲಿ ಸುಲಭವಾಗಿ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳು ಉಂಟಾಗುತ್ತವೆ. ಇದರ ಪರಿಣಾಮದಿಂದ ಅವರು ಹೊರಗೆ ಬರಲು ಸಾಧ್ಯವಾಗದೆ ನರಳುತ್ತಾರೆ. ಅಪಘಾತವಾದ ನಂತರ ಸುಧಾರಿಸಿಕೊಂಡರು ಸಹ, ಅದರ ಆಘಾತದಿಂದ ಅವರು ಜರ್ಜರಿತಗೊಂಡಿರುತ್ತಾರೆ. ಕೆಲವೊಂದು ಫೋಬಿಯಾಗಳು, ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಮತ್ತು ಖಿನ್ನತೆಗಳು ಅವರನ್ನು ಈ ಅವಧಿಯಲ್ಲಿ ಹಿಂಡಿ ಹಿಪ್ಪೆ ಮಾಡುತ್ತದೆ.

English summary

Causes Of Mental Issues In Women

A women's life is more challenging than men when it comes to work and family life. She has to manage everything starting from official work to household chores. She manages kids, her husband and her in-laws as well. She keeps that beautiful smile always on her lips, that rarely reaches to her eyes. All women are gifted with abundant patience and love.
Story first published: Saturday, May 9, 2015, 14:31 [IST]
X
Desktop Bottom Promotion