For Quick Alerts
ALLOW NOTIFICATIONS  
For Daily Alerts

ಸಿಹಿ ಜೇನುತುಪ್ಪವೇ, ಏನು ನಿನ್ನ ಹನಿಗಳ ಲೀಲೆ..!

|

ಯಾವುದೇ ತರಹದ ಅಡ್ಡಪರಿಣಾಮಗಳಿಲ್ಲದೆ ದೇಹದ ಆರೋಗ್ಯವನ್ನು ಮತ್ತು ತ್ವಚೆಯ ಸೌಂದರ್ಯವನ್ನು ಉತ್ತಮ ಸ್ಥಿತಿಯಲ್ಲಿರಿಸಿಕೊಳ್ಳಲು ಜೇನು ಅತ್ಯಂತ ಪ್ರಯೋಜನಕಾರಿ ಔಷಧಿ ಗುಣವುಳ್ಳ ಸಿಹಿಯಾದ ಆಹಾರ ಪದಾರ್ಥ. ಪ್ರತಿಯೊಬ್ಬರಿಗೂ ಇಷ್ಟವಾಗುವ ಪ್ರಕೃತಿಯ ಕೊಡುಗೆ ಈ ಜೇನು. ಅದರಲ್ಲೂ ದೇಹದ ತೂಕ ಇಳಿಸಿಕೊಳ್ಳಲು ಹಾತೊರೆಯುವ ಜನರಿಗಂತೂ ಇದು ಹೇಳಿ ಮಾಡಿಸಿದ ಮನೆಮದ್ದು.

ಹೌದು, ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನು ಹಾಗೂ ನಾಲ್ಕು ಹನಿ ಲಿಂಬೆರಸ ಸೇರಿಸಿ ಸೇವಿಸುವುದರಿಂದ, ದೇಹದ ಕೊಬ್ಬು ಕಡಿಮೆಯಾಗಿ, ತೂಕ ಕಡಿಮೆಯಾಗುವುದರ ಜೊತೆಗೆ, ರಕ್ತ ಶುದ್ಧಿಯಾಗಿ ಆರೋಗ್ಯದಲ್ಲಿಯೂ ಸುಧಾರಣೆ ಕಂಡುಬರುತ್ತದೆ. ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!

ಜೇನು ಸವಿಯುವುದು ಜೇನುಹುಳಗಳ ಆಹಾರವನ್ನು ಕದ್ದಂತೆ ಎಂಬ ಅಪವಾದವೂ ಇದೆ. ವೈಜ್ಞಾನಿಕವಾಗಿ ಜೇನು ಮಾನವನ ದೇಹಕ್ಕೆ ಉತ್ತಮವಾದ ಆಹಾರದ ಜೊತೆ ಉತ್ತಮವಾದ ಔಷಧಿಯೂ ಆಗಿದೆ. ಇದರ ಸರಿಯಾದ ಬಳಕೆಯಿಂದ ಹಲವು ರೋಗಗಳನ್ನು ಬರದಂತೆ ತಡೆಗಟ್ಟಬಹುದು. ಮುಖ್ಯವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೇನು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು

ಅಬ್ಬಬ್ಬಾ ಇಷ್ಟೆಲ್ಲಾ ಗುಣಗಳನ್ನು ಹೊಂದಿರುವ ಜೇನು ನಿಜಕ್ಕೂ ಪ್ರಕೃತಿಯ ಅಚ್ಚರಿಯೇ ಸರಿ. ಹೀಗೆ ಚಿಕಿತ್ಸಕ ಹಾಗು ನೈಸರ್ಗಿಕ ಗುಣಗಳನ್ನು ಹೊಂದಿರುವ ಜೇನುತುಪ್ಪವನ್ನು ಒಟ್ಟಾರೆ ಉತ್ತಮ ಸ್ವಾಸ್ಥ್ಯಕ್ಕೆ ಹಾಗು ತ್ವಚೆಯ ಆರೈಕೆಗೆ ಆದಿ ಕಾಲದಿಂದಲೂ ಬಳಸಲಾಗುತ್ತಿದೆ. ಇಂತಹ ಒಂದು ಅದ್ಭುತವಾದ ಆಹಾರ ಪದಾರ್ಥದ ಪ್ರಯೋಜನಗಳೇನು ಎಂಬುದನ್ನು ನೋಡೋಣ...

ಮಕ್ಕಳ ಆರೋಗ್ಯಕ್ಕೆ

ಮಕ್ಕಳ ಆರೋಗ್ಯಕ್ಕೆ

ಹಿರಿಯರು ಕಂಡುಕೊಂಡ ಪ್ರಕಾರ ಮಕ್ಕಳಿಗೆ ದಿನಕ್ಕೆ ಮೂರು ಬಾರಿ ಒಂದೊಂದು ಚಿಕ್ಕ ಚಮಚ ಜೇನು, ಹಾಗೂ ವಯಸ್ಕರಿಗೆ ದಿನಕ್ಕೆ ಮೂರು ಬಾರಿ ಒಂದೊಂದು ದೊಡ್ಡ ಚಮಚ ಜೇನು ತಿನ್ನಿಸುವುದು ಆರೋಗ್ಯಕ್ಕೆ ಉತ್ತಮ.

ಅಜೀರ್ಣದ ತೊಂದರೆಗೆ

ಅಜೀರ್ಣದ ತೊಂದರೆಗೆ

ಜಠರ ಮತ್ತು ಕರುಳುಗಳಲ್ಲಿ ಸಾಕಷ್ಟು ಪ್ರಮಾಣದ ಜಠರರಸ ಉತ್ಪತ್ತಿಯಾಗದೇ ಅಜೀರ್ಣದ ತೊಂದರೆ ಅನುಭವಿಸುವವರು ಊಟಕ್ಕೂ ಮೊದಲು ಕೊಂಚ ಜೇನು ಸೇವಿಸುವುದರಿಂದ ಉತ್ತಮ ಪರಿಹಾರ ದೊರಕುತ್ತದೆ.

ಆರೋಗ್ಯಕ್ಕೆ ಪೂರಕ

ಆರೋಗ್ಯಕ್ಕೆ ಪೂರಕ

ಕೊಂಚ ನೀರು ಮತ್ತು ಲಿಂಬೆರಸದಲ್ಲಿ ಚಿಕ್ಕ ಪ್ರಮಾಣದ (ಸುಮಾರು ಅರ್ಧ ಚಿಕ್ಕ ಚಮಚ) ಜೇನನ್ನು ನಿತ್ಯವೂ ಊಟದ ಜೊತೆಯಲ್ಲಿ ನೀರಿನ ಬದಲಿಗೆ ಸೇವಿಸುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ಕೆಲವರು ಊಟದೊಂದಿಗೆ ವೈನ್ ಸೇವಿಸುತ್ತಾರೆ. ಆರೋಗ್ಯಕ್ಕೆ ಮಾರಕವಾದ ಈ ಅಭ್ಯಾಸವನ್ನು ತೊಡೆಯಲು ಜೇನು, ಲಿಂಬೆರಸ ಸೇರಿಸಿದ ಪೇಯ ನೆರವಿಗೆ ಬರುತ್ತದೆ.

ಜೇನು ತುಪ್ಪದ ಶಾಂಪೂ

ಜೇನು ತುಪ್ಪದ ಶಾಂಪೂ

ನೀರು ಮತ್ತು ಜೇನು ತುಪ್ಪದಿಂದ ಮಾಡಿದ ಶಾಂಪೂ ತನ್ನಲ್ಲಿರುವ ಸ್ವಾಭಾವಿಕ ತೈಲಗಳ ದೆಸೆಯಿಂದ ನಿಮ್ಮ ಕೂದಲನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಅಲ್ಲದೆ ಕೂದಲು ಸಿಕ್ಕಾಗದಂತೆ ಮತ್ತು ತಲೆ ಹೊಟ್ಟು ಬರದಂತೆ ಕಾಪಾಡಿ, ನಿಮ್ಮ ಕೂದಲನ್ನು ಮೃದುವಾಗಿ, ರೇಷ್ಮೆಯಂತೆ ಹೊಳಪಿನಿಂದ ಕಂಗೊಳಿಸುವಂತೆ ಮಾಡುತ್ತದೆ. ಇದನ್ನು ಕೇಳಿದರೆ ನಿಮಗೆ ಈ ಶಾಂಪೂವಿನ ಮೇಲೆ ಅಕ್ಕರೆ ಬರುವುದಿಲ್ಲವೇನು?

 ಮೃದುವಾದ ತ್ವಚೆ ಮತ್ತು ತುಟಿಯ ಅಂದಕ್ಕೆ ಜೇನು ಬಳಸಿ

ಮೃದುವಾದ ತ್ವಚೆ ಮತ್ತು ತುಟಿಯ ಅಂದಕ್ಕೆ ಜೇನು ಬಳಸಿ

ಇದು ಉತ್ತಮ ಸ್ಕಿನ್ ಮಾಶ್ಚರೈಸರ್ ಆಗಿ ಕೆಲಸ ಮಾಡಿ ತ್ವಚೆಯನ್ನು ಕಾಪಾಡಿ ಬಣ್ಣ ತಿಳಿಯಾಗಲು ಕಾರಣವಾಗುತ್ತದೆ. ಅಲ್ಲದೆ ಜೇನನ್ನು ತುಟಿಗೆ ಹಚ್ಚುವುದರಿಂದ ಒಡೆದ, ಸುಕ್ಕುಗಟ್ಟಿದ ತುಟಿಗಳು ನಯವಾಗಿ ಮತ್ತು ಮೃದುವಾಗಿರುತ್ತವೆ.

ಸೂರ್ಯನ ಕಿರಣಗಳಿಂದ ರಕ್ಷಣೆ

ಸೂರ್ಯನ ಕಿರಣಗಳಿಂದ ರಕ್ಷಣೆ

ನೈಸರ್ಗಿಕ ಆಂಟಿ ಆಕ್ಲಿಡೆಂಟ್‌ಗಳನ್ನು ಜೇನು ಒಳಗೊಂಡಿರುವುದರಿಂದ ಚರ್ಮವನ್ನು ಅಲ್ಟ್ರಾ ವಯೊಲೆಟ್ (ಅತಿನೇರಳೆ) ರಶ್ಮಿಗಳಿಂದ ಆಗುವ ಹಾನಿಯಿಂದ ಕಾಪಾಡುತ್ತದೆ. ಅತಿಯಾಗಿ ತ್ವಚೆಯನ್ನು ಸೂರ್ಯನ ಕಿರಣಗಳಿಗೆ ಒಡ್ಡುವುದರಿಂದ ತ್ವಚೆ ಹಾನಿಗೊಳಗಾಗಿ ವಯಸ್ಸಿಗೆ ಮುನ್ನ ಮುಪ್ಪು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಲು ಜೇನನ್ನು ಸನ್ ಸ್ಕ್ರೀನಾಗಿ ಬಳಸಬಹುದು

ಜೇನಿನಲ್ಲಿರುವ ವಿಟಮಿನ್‌ಗಳು

ಜೇನಿನಲ್ಲಿರುವ ವಿಟಮಿನ್‌ಗಳು

ಜೇನು ಗ್ಲುಕೋಸ್ ಮತ್ತು ಫ್ರಕ್ಟೋಸ್ ನಂಥ ಸಕ್ಕರೆ ಅಂಶಗಳನ್ನು, ಮ್ಯಾಗ್ನೇಶಿಯಂ, ಪೊಟ್ಯಾಶಿಯಂ, ಕ್ಯಾಲ್ಶಿಯಂ, ಸೋಡಿಯಂ ಕ್ಲೋರೈಡ್, ಸಲ್ಫರ್, ಕಬ್ಬಿಣ ಮತ್ತು ಫಾಸ್ಫೇಟ್ ಗಳಂಥ ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಜೊತೆಗೆ ವಿಟಾಮಿನ್ ಗಳಾದ ಬಿ, ಬಿ2, ಸಿ, ಬಿ6, ಬಿ5 ಮತ್ತು ಬಿ3ಗಳನ್ನು ಹೊಂದಿದೆ. ಇದರ ಗುಣಮಟ್ಟ ಆಯಾ ಮಕರಂದ ಮತ್ತು ಫೊಲೆನ್ ಮೇಲೆ ಅವಲಂಬಿಸಿರುತ್ತದೆ. ಇದರಲ್ಲಿ ಸಣ್ಣ ಪ್ರಮಾಣದ ತಾಮ್ರ, ಜಿಂಕ್ ಮತ್ತು ಐಯೋಡಿನ್ ಅಂಶಗಳೂ ಒಳಗೊಂಡಿರುತ್ತವೆ.

ತೂಕ ಇಳಿಸಲು ಸಹಕಾರಿ

ತೂಕ ಇಳಿಸಲು ಸಹಕಾರಿ

ಜೇನು ಬೆರೆಸಿದ ಬಿಸಿನೀರು ಕುಡಿಯಿರಿ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಜೇನು ಮತ್ತು ಎರಡು ದೊಡ್ಡಚಮಚ ಲಿಂಬೆ ರಸ ಸೇರಿಸಿ. ಈ ಪೇಯವನ್ನು ಬೆಳಿಗ್ಗೆದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಸೇವಿಸಿ. ಇದು ಸಹಾ ತೂಕ ಇಳಿಸುವ ಕ್ರಿಯೆಯನ್ನು ಶೀಘ್ರಗೊಳಿಸುತ್ತದೆ

English summary

Benefits of Honey and its Various Uses

Honey has always been a very popular culinary delicacy as well as an important medical remedy for many millennia. Across the globe, our ancestors seemed to be well aware of the many health benefits of honey. the ancient, traditional systems of medicine. In ancient Egypt, it was used in managing skin and eye diseases, and also as a natural bandage applied on wounds and burns. Several other cultures have also used honey for various medical purposes. so have a look the benefits of honey
Story first published: Wednesday, October 14, 2015, 9:44 [IST]
X
Desktop Bottom Promotion