ವಯಾಗ್ರಾ ಮಾತ್ರೆ ನುಂಗುವ ಮೊದಲು ಸ್ವಲ್ಪ ಆಲೋಚಿಸಿ!

By: Arshad
Subscribe to Boldsky

1998ರಲ್ಲಿ ಬಿಡುಗಡೆಯಾದ ವಯಾಗ್ರಾ ಮಾತ್ರೆ ಇಡಿಯ ವಿಶ್ವದಲ್ಲಿ ಸಂಚಲನೆ ಉಂಟುಮಾಡಿತ್ತು. ಪುರುಷರಲ್ಲಿ ಪೌರುಷವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿರುವ ಮಾತ್ರೆ ಎಂದು ಪ್ರಚಾರ ಮಾಡಿದ್ದೇ ತಡ, ವಿಶ್ವದ ಇತಿಹಾಸದಲ್ಲಿಯೇ ಹಿಂದೆಂದೂ ಮಾರಾಟವಾಗದಷ್ಟು ಪ್ರಮಾಣದಲ್ಲಿ ಜನರು ಮುಗಿಬಿದ್ದು ಖರೀದಿಸಿದ್ದು ಒಂದು ವಿಶ್ವದಾಖಲೆಯಾಗಿತ್ತು.

sildenafil citrate ಎಂಬ ರಾಸಾಯನಿಕವನ್ನು ಪ್ರಮುಖವಾಗಿ ಹೊಂದಿರುವ ಈ ಮಾತ್ರೆ ಲಕ್ಷಗಟ್ಟಲೇ ಜನರ ಆತ್ಮವಿಶ್ವಾಸವನ್ನಂತೂ ಹೆಚ್ಚಿಸಿತ್ತು. ಇಂದಿಗೂ ನಿಮಿರುದೌರ್ಬಲ್ಯವನ್ನು ಹೊಂದಿರುವ ಪುರುಷರು ಅತಿ ಹೆಚ್ಚಾಗಿ ಬಳಸುತ್ತಿರುವ ಮಾತ್ರೆಯಾಗಿದೆ.

ಯಾವುದೇ ಔಷಧಿಯಲ್ಲಿ ಕೆಲವು ಅಡ್ಡಪರಿಣಾಮಗಳಿರುವಂತೆ ವಯಾಗ್ರದಲ್ಲಿಯೂ ಕೆಲವು ಅಡ್ಡಪರಿಣಾಮಗಳಿವೆ. ಈ ಮಾತ್ರೆಯನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ. ಏಕೆಂಬ ನಿಮ್ಮ ಕುತೂಹಲ ತಣಿಸಲು ಎಂಟು ಮಹತ್ವದ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ವಯಾಗ್ರದಂತೆ ಕೆಲಸ ಮಾಡುವ 10 ಅದ್ಭುತ ಆಹಾರಗಳು

ನಿಮ್ಮ ದೃಷ್ಟಿಯನ್ನು ಕುಂಠಿತಗೊಳಿಸಬಹುದು

ನಿಮ್ಮ ದೃಷ್ಟಿಯನ್ನು ಕುಂಠಿತಗೊಳಿಸಬಹುದು

sildenafil ರಾಸಾಯನಿಕ ಒಂದೆಡೆ ಪುರುಷರ ಶಕ್ತಿಯನ್ನು ಹೆಚ್ಚಿಸುತ್ತಿದ್ದಂತೆಯೇ ಇನ್ನೊಂದೆಡೆ ದೃಷ್ಟಿನರದ ಕ್ಷಮತೆಯನ್ನು ಕುಗ್ಗಿಸುತ್ತದೆ. ಕಣ್ಣಿನ ಅಕ್ಷಿಪಟಲದಿಂದ ಹೊರಟ ಸಂಕೇತಗಳು ಮೆದುಳಿಗೆ ತಲುಪಲು ಈ ರಾಸಾಯನಿಕ ತಡೆ ಒಡ್ಡುವುದು ಪ್ರಮುಖವಾದ ಅಡ್ಡಪರಿಣಾಮವಾಗಿದೆ. ನಿಯಮಿತವಾಗಿ ಈ ಮಾತ್ರೆಯನ್ನು ನೇವಿಸುವವರ ದೃಷ್ಟಿ ಕುಂಠಿತವಾಗಿರುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವವರ ದೃಷ್ಟಿ ಮಂಜಾಗುವುದೂ, ಪ್ರಖರ ಬೆಳಕನ್ನು ನೋಡಲು ಅಸಾಧ್ಯವಾಗುವುದೂ, ಬಣ್ಣಗಳನ್ನು ಗುರುತಿಸಲು ಅಸಾಧ್ಯವಾಗುವುದೂ ಮೊದಲಾದ ತೊಂದರೆಗಳು ಎದುರಾಗುತ್ತವೆ.

ವೃದ್ಧರ ದೃಷ್ಟಿ ನಾಶವಾಗಬಹುದು

ವೃದ್ಧರ ದೃಷ್ಟಿ ನಾಶವಾಗಬಹುದು

86ರ ಹರೆಯದ ವೃದ್ಧರೊಬ್ಬರು 2012ರಿಂದ ಸತತವಾಗಿ ವಯಾಗ್ರಾ ಸೇವಿಸಿದುದರ ಪರಿಣಾಮವಾಗಿ ತಮ್ಮ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ತಾನು ಬಳಸಲು ಪ್ರಾರಂಭಿಸಿದ ಬಳಿಕ ನಿಧಾನವಾಗಿ ದೃಷ್ಟಿ ಕಳೆದುಕೊಳ್ಳುತ್ತಾ ಬಂದಿದ್ದು ಈಗ ದೃಷ್ಟಿಯೇ ಹೋಗಿಬಿಟ್ಟಿದೆ, ಈಗ ತನಗೆ ಎರಡು ಮಿಲಿಯನ್ ಡಾಲರ್ ಪರಿಹಾರ ಬೇಕು ಮತ್ತು ಬೇರೆಯವರಿಗೆ ಈ ತೊಂದರೆ ಎದುರಾಗಬಾರದೆಂದು ಈ ಮಾತ್ರೆಯ ನಿರ್ಮಾಣವನ್ನೇ ಸ್ಥಗಿತಗೊಳಿಸಬೇಕು ಎಂದು ಈ ವೃದ್ದರು ನ್ಯಾಯಾಲಯದ ಮೊರೆ ಹೋಗಿರುವುದು ವಿಶ್ವದ ಗಮನ ಸೆಳೆದಿದೆ.

ಕೇವಲ ದೈಹಿಕ ಪ್ರಾಬಲ್ಯವನ್ನು ಮೆರೆಯುತ್ತದೆ

ಕೇವಲ ದೈಹಿಕ ಪ್ರಾಬಲ್ಯವನ್ನು ಮೆರೆಯುತ್ತದೆ

ಯಾವುದೇ ಮಿಲನದಲ್ಲಿ ದೈಹಿಕ ಸಂಪರ್ಕಕ್ಕಿಂತಲೂ ಮಾನಸಿಕವಾಗಿ ದಂಪತಿಗಳು ಸಂವೇದನೆಯನ್ನು ಅನುಭವಿಸುವುದು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ವಯಾಗ್ರಾ ಸೇವನೆಯಿಂದ ಕೇವಲ ಪುರುಷರ ಅಂಗದಲ್ಲಿ ಹೆಚ್ಚಿನ ರಕ್ತ ಪರಿಚಲನೆ ನೀಡುವ ಮೂಲಕ ನಿಮಿರು ದೌರ್ಬಲ್ಯವನ್ನು ತಡೆಯಬಹುದೇ ವಿನಃ ಮೆದುಳಿನಿಂದ ಸಿಗಬೇಕಾದ ಸಂವೇದನೆಯಲ್ಲಿ ಯಾವುದೇ ಪರಿಣಾಮವಿಲ್ಲದಿರುವುದರಿಂದ ಸಂಪರ್ಕ ಕೇವಲ ಯಾಂತ್ರಿಕವಾಗುತ್ತದೆಯೇ ವಿನಃ ಪ್ರೇಮದ ಭಾವನೆ ಮೂಡುವುದಿಲ್ಲ. ಪ್ರೇಮವಿಲ್ಲದ ಮಿಲನವನ್ನು ಒಂದು ಬಗೆಯ ಬಲಾತ್ಕಾರವೆಂದೇ ಪರಿಗಣಿಸಬಹುದು.

ಮಹಿಳೆಯರಿಗೆ ವಯಾಗ್ರಾ ತರವಲ್ಲ

ಮಹಿಳೆಯರಿಗೆ ವಯಾಗ್ರಾ ತರವಲ್ಲ

ಮಹಿಳೆಯರಿಗೆಂದೇ ವಿಶೇಷವಾಗಿ ಪ್ರತ್ಯೇಕವಾಗಿ ವಯಾಗ್ರಾ ಮಾತ್ರೆಯನ್ನು ತಯಾರಿಸಲಾಗಿದ್ದು ಸಂಸರ್ಗವನ್ನು ಇನ್ನಷ್ಟು ಸಂವೇದನಾಶಾಲಿಯಾಗಿ ಮಾಡುವುದು ಎಂದು ಪ್ರಚಾರ ನೀಡಲಾಗಿತ್ತು. ಆದರೆ ಸಂಸ್ಥೆಯ ಪ್ರಚಾರಕ್ಕೂ ವಾಸ್ತವಕ್ಕೂ ಯಾವುದೇ ತಾಳಮೇಳವಿಲ್ಲದಿರುವುದು ನಿರಾಸೆ ಮೂಡಿಸುತ್ತದೆ. ವಾಸ್ತವವೆಂದರೆ ವಿಶ್ವದ ಆಹಾರ ಮತ್ತು ಔಷಧಿಗಳ ನಿಯಂತ್ರಣಾ ಸಂಸ್ಥೆ (FDA-Food and Drug Administration) ಮಹಿಳೆಯರ ವಯಾಗ್ರಾವನ್ನು ಇದುವರೆಗೆ ಅನುಮೋದಿಸಿಲ್ಲ. ಏಕೆಂದರೆ ಮಹಿಳೆಯರಲ್ಲಿ ರಕ್ತಸಂಚಾರವನ್ನು ಹೆಚ್ಚಿಸಿ ಸುಖದ ಸಂವೇದನೆಯನ್ನು ಹೆಚ್ಚಿಸುವ ಬಗ್ಗೆ ಯಾವುದೇ ಪ್ರಯೋಗಗಳು ವಯಾಗ್ರವನ್ನು ಸಾಬೀತುಪಡಿಸಿಲ್ಲ. ಅಷ್ಟೇ ಏಕೆ, ವಿಶ್ವದಲ್ಲಿಯೇ ದೃಢೀಕರಿಣಗೊಂಡ ಮಹಿಳೆಯರಿಗಾಗಿಯೇ ಪ್ರತ್ಯೇಕವಾದ ಯಾವ ಮಾತ್ರೆಯೂ ಇಲ್ಲ.

ಮಹಿಳೆಯರ ಮಾಸಿಕ ಚಕ್ರದ ಸಮಯದಲ್ಲಿ ಅನುಭವಕ್ಕೆ ಬರದ ನೋವು

ಮಹಿಳೆಯರ ಮಾಸಿಕ ಚಕ್ರದ ಸಮಯದಲ್ಲಿ ಅನುಭವಕ್ಕೆ ಬರದ ನೋವು

ವಯಾಗ್ರದಲ್ಲಿರುವ ಪ್ರಮುಖ sildenafil citrate ಮಹಿಳೆಯರಲ್ಲಿ ಮಾಸಿಕ ಚಕ್ರದ ನೋವನ್ನು ಕಡಿಮೆಮಾಡಲು ನೆರವಾಗುತ್ತದೆ. ಜನನಾಂಗದ ಮೂಲಕ ನೇರವಾಗಿ ನೀಡಲಾದ ದ್ರವರೂಪದ ಔಷಧಿ ರಕ್ತನಾಳಗಳನ್ನು ಹಿಗ್ಗಿಸಿ ರಕ್ತಪರಿಚಲನೆಯನ್ನು ಹೆಚ್ಚಿಸುವ ಮೂಲಕ ಕೆಳಹೊಟ್ಟೆಯ ನೋವನ್ನು ಕಡಿಮೆಮಾಡುತ್ತದೆ. ಅಲ್ಲದೇ ಪ್ರಯೋಗಗಳ ಮೂಲಕ ಯಾವುದೇ ಪ್ರಮುಖ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಆದರೆ ಇದೇ ವೇಳೆ ಮಿಲನದ ಸಂವೇದನೆಯನ್ನೂ ಕಡಿಮೆಗೊಳಿಸುತ್ತದೆ. ಈ ಕಾರಣದಿಂದ ನೋವನ್ನು ಕಡಿಮೆಮಾಡುವ ಈ ಗುಣವನ್ನು ಧನಾತ್ಮಕವಾಗಿ ಸ್ವೀಕರಿಸಬೇಕೋ ಋಣಾತ್ಮಕವಾಗಿ ಸ್ವೀಕರಿಸಬೇಕೋ ಎಂಬ ಗೊಂದಲ ಎದುರಾಗುತ್ತದೆ.

ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ

ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ

ವಯಾಗ್ರಾದ ಒಂದು ಉತ್ತಮ ಸಂಗತಿ ಎಂದರೆ ಹೊಟ್ಟೆಯ ಸುತ್ತ ಇರುವ ಕೊಬ್ಬನ್ನು ಕರಗಿಸುವುದು. ಇಲಿಗಳ ಮೇಲೆ ಪ್ರಯೋಗಿಸಲಾದ ಪ್ರಯೋಗಗಳಲ್ಲಿ ತೊಡೆ ಮತ್ತು ಹೊಟ್ಟೆಯ ಸುತ್ತ ಸಂಗ್ರಹವಾಗಿದ್ದ ಭಾರೀ ಪ್ರಮಾಣದ ಕೊಬ್ಬು ವಯಾಗ್ರಾ ಸೇವಿಸಿದ ಬಳಿಕ beige cells ಎಂಬ ಕಣಗಳಾಗಿ ಮಾರ್ಪಾಡು ಹೊಂದುತ್ತವೆ. ಈ ಕಣಗಳು ದೇಹವನ್ನು ಬಿಸಿಮಾಡಿ ಉರಿದು ಹೋಗುವುದರಿಂದ ನಿಧಾನವಾಗಿ ಕೊಬ್ಬಿನ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಸಾಮಾನ್ಯ ವ್ಯಾಯಾಮಗಳ ಮೂಲಕ ಅತಿ ಕಷ್ಟದಲ್ಲಿ ಕರಗುವ ಹೊಟ್ಟೆಯ ಕೊಬ್ಬು ಈ ಮಾತ್ರೆಯ ಸೇವನೆಯ ಬಳಿಕ ಹೆಚ್ಚಿನ ಶ್ರಮವಿಲ್ಲದೇ ಕರಗುವುದು ನಿಜಕ್ಕೂ ಒಂದು ಉತ್ತಮ ಪರಿಣಾಮವಾಗಿದೆ.

ವಯಾಗ್ರಾ ಐಸ್ ಕ್ರೀಂ

ವಯಾಗ್ರಾ ಐಸ್ ಕ್ರೀಂ

ಹೌದು, ಕೆಲವು ಶ್ರೀಮಂತ ದೇಶಗಳಲ್ಲಿ ವಯಾಗ್ರಾ ಐಸ್ ಕ್ರೀಮ್ ಮತ್ತು ಶಾಂಪೇನ್ ಗಳ ಮೂಲಕವೂ ಮಾರಾಟವಾಗುತ್ತಿವೆ. ಬ್ರಿಟನ್ನಿನ ಒಂದು ಸಂಸ್ಥೆ ಅರೌಸಲ್ (‘Arousal') ಎಂಬ ಹೆಸರಿನಲ್ಲಿ ಒಂದು ಐಸ್ ಕ್ರೀಂ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಬ್ರಿಟನ್ನಿನ ಕೇವಲ ಖ್ಯಾತನಾಮರಿಗೆ, ಅದೂ ಆನ್ಲೈನ್ ಮೂಲಕ ವಿಶೇಷವಾಗಿ ಸೂಚನೆ ನೀಡಿ ತರಿಸಿದವರಿಗೆ ಮಾತ್ರ ಲಭ್ಯವಿದೆ. ಪ್ರತಿ ಐಸ್ ಕ್ರೀಂ ನಲ್ಲಿ 25 ಮಿಲಿಗ್ರಾಂ ನಷ್ಟು ವಯಾಗ್ರಾ ಇರುವುದರಿಂದ ಮಾತ್ರೆ ಸೇವಿಸಿದ ಪರಿಣಾಮವನ್ನೇ ಪಡೆಯಬಹುದು ಎಂದು ಸಂಸ್ಥೆ ಪ್ರಚಾರ ನೀಡುತ್ತದೆ. ಅಲ್ಲದೇ ಕೊಂಚ ಶಾಂಪೇನ್ ಅನ್ನೂ ಸೇರಿಸಿರುವುದರಿಂದ ಐಸ್ ಕ್ರೀಂ ಗೆ ವಿಶಿಷ್ಟ ರುಚಿಯನ್ನೂ ನೀಡಲಾಗಿದೆ ಎಂದು ಪ್ರಚಾರದಲ್ಲಿ ತಿಳಿಸಲಾಗಿದೆ.

ವಯಾಗ್ರಾದ ಇತರ ಅಡ್ಡಪರಿಣಾಮಗಳು

ವಯಾಗ್ರಾದ ಇತರ ಅಡ್ಡಪರಿಣಾಮಗಳು

ವಯಾಗ್ರಾ ಸೇವನೆಯ ಇತರ ಅಡ್ಡಪರಿಣಾಮಗಳೆಂದರೆ ತಲೆನೋವು, ತಲೆಸುತ್ತು, ಹೃದಯಾಘಾತ,ಅಜೀರ್ಣ ಮತ್ತು ದೃಷ್ಟಿಯಲ್ಲಿ ಕುಂಠಿತತೆ. ಒಂದು ವೇಳೆ ವಯಾಗ್ರಾವನ್ನು ಸೇವಿಸುವ ವೇಳೆ ಹೃದಯ ತೊಂದರೆ ಮತ್ತು ಇತರ ಖಾಯಿಲೆಗಳಿಗೆ ಉಪಯೋಗಿಸುವ ಮಾತ್ರೆಗಳಲ್ಲಿ ನೈಟ್ರೇಟುಗಳ ಸಂಯೋಜನೆ ಇದ್ದರೆ ಈ ಅಡ್ಡಪರಿಣಾಮಗಳು ಅತಿಹೆಚ್ಚಾಗಿರುವುದು ಪ್ರಯೋಗಗಳ ಮೂಲಕ ಕಂಡುಬಂದಿದೆ. ಒಂದು ವೇಳೆ ಹೃದಯ ಸಂಬಂಧಿ ಕಾಯಿಲೆಗಳಿಗೆ ನಿಯಮಿತ ಮಾತ್ರೆಗಳನ್ನು ಸೇವಿಸುತ್ತಿರುವವರು ವೈದ್ಯರ ಸಲಹೆ ಪಡೆಯದೇ ವಯಾಗ್ರಾ ಸೇವಿಸಿದರೆ ಪ್ರಾಣಾಪಾಯವನ್ನೂ ಎದುರಿಸಬೇಕಾಗಿ ಬರಬಹುದು. ಆದ್ದರಿಂದ ವಯಾಗ್ರಾ ಸಹಿತ ಯಾವುದೇ ಔಷಧಿಯನ್ನು ಸೇವಿಸುವ ಮೊದಲು ವೈದ್ಯರನ್ನು ಭೇಟಿಯಾಗಿ ಅವರ ಸಲಹೆಯ ಮೇರೆಗೆ ಮಾತ್ರ ಸೇವಿಸುವುದು ಅತ್ಯಂತ ಅಗತ್ಯವಾಗಿದೆ.

English summary

8 things you didn't know about viagra

Viagra was launched in 1998. The blue diamond-shaped tablets (which have the chemical name sildenafil) became the fastest-selling drug in history . Viagra known as the drug that has spiced up the sex life of many, is the most widely used drugs to treat erectile dysfunction.
Subscribe Newsletter