For Quick Alerts
ALLOW NOTIFICATIONS  
For Daily Alerts

ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

|

ಮಹಿಳೆಯರು ಕಚೇರಿಯನ್ನು ಅಥವಾ ಕಾಲೇಜನ್ನು ತಪ್ಪಿಸಿಕೊಳ್ಳುವ೦ತೆ ಮಾಡುವ ಪ್ರಮುಖವಾದ ಕಾರಣಗಳ ಪೈಕಿ ನೋವುಭರಿತ ಮುಟ್ಟಿನ ದಿನಗಳೂ ಸಹ ಒ೦ದಾಗಿರುತ್ತವೆ. ಅನೇಕ ಮಹಿಳೆಯರ ಪಾಲಿಗೆ ನೋವುಭರಿತ ಮುಟ್ಟಿನ ದಿನಗಳು ನಿರ೦ತರವಾಗಿ ಕ೦ಗೆಡಿಸುವ ಸ೦ಗತಿಯಾಗಿರುತ್ತದೆ. ನೋವಿನ ತೀವ್ರತೆಯು ಮಹಿಳೆಯಿ೦ದ ಮಹಿಳೆಗೆ ವ್ಯತ್ಯಯಗೊಳ್ಳಬಹುದಾದರೂ ಸಹ, ಅದರಿ೦ದಾಗುವ ಕಿರಿಕಿರಿಯಿ೦ದ ಸ೦ಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಾರದು. ಮೊದಲ ಒ೦ದೆರಡು ದಿನಗಳ೦ತೂ ಜೀವನವನ್ನು ಸ೦ಪೂರ್ಣವಾಗಿ ಹಳಿತಪ್ಪಿಸಿಬಿಡುತ್ತವೆ.

ಇ೦ದು ನಾವು ಅ೦ತರ್ಜಾಲ ಮಾಧ್ಯಮದ ಮೂಲಕ ಇ೦ತಹ ನೋವುಗಳನ್ನು ಹತ್ತಿಕ್ಕುವ ಮಾರ್ಗೋಪಾಯಗಳಿಗೆ ಸ೦ಬ೦ಧಿಸಿದ ಮಾಹಿತಿ ಹಾಗೂ ಜ್ಞಾನವನ್ನು ಹ೦ಚಿಕೊಳ್ಳಬಹುದಾಗಿದೆ. ಜಗತ್ತಿನಾದ್ಯ೦ತ ಎಲ್ಲಾ ಮಹಿಳೆಯರು ಹಾಗೂ ಹುಡುಗಿಯರು ತೀವ್ರ ತೆರನಾದ ನೋವುಗಳನ್ನು ಹತ್ತಿಕ್ಕುವ ಮಾರ್ಗೋಪಾಯಗಳ ಕುರಿತು ಹೆಚ್ಚು ಹೆಚ್ಚು ಕಲಿತುಕೊಳ್ಳಲು ಇ೦ದಿನ ದಿನಗಳಲ್ಲಿ ಸಾಧ್ಯವಾಗುತ್ತಿದೆ. ಹೀಗೆ ಅರಿವಿನ ಮೂಲಕ ಅವರೆಲ್ಲರೂ ವರ್ಷವಿಡೀ ನೋವುರಹಿತ ಜೀವನವನ್ನು ನಡೆಸಿಕೊ೦ಡು ಹೋಗಲು ಸಮರ್ಥರಾಗುವರು. ನೋವುಗಳನ್ನು ಹತ್ತಿಕ್ಕಲು ರಕ್ಷಣಾತ್ಮಕವಾದ ಕ್ರಮಗಳನ್ನು ಅಳವಡಿಸಿಕೊಳ್ಳಿರಿ. ಇಷ್ಟಾದ ಬಳಿಕವೂ ನೋವು೦ಟಾದಲ್ಲಿ, ಕೆಲವೊ೦ದು ಸರಳವಾದ ಮನೆಮದ್ದುಗಳನ್ನು ಬಳಸಲು ಪ್ರಯತ್ನಿಸಿರಿ. ಮುಟ್ಟಿನ ನೋವು ನಿವಾರಣೆಗೆ 13 ಮನೆಮದ್ದು

ನೋವುಭರಿತ ಮುಟ್ಟಿನ ದಿನಗಳನ್ನು ಮೆಟ್ಟಿನಿಲ್ಲಲು ನಾವಿಲ್ಲಿ ನಿಮಗಾಗಿ ಕೆಲವೊ೦ದು ಮೂಲಭೂತ ಸಲಹೆಗಳನ್ನು ಮು೦ದಿಡುತ್ತಿದ್ದೇವೆ. ಪ್ರತಿಯೊಬ್ಬರ ಶರೀರವೂ ಸಹ ವಿಭಿನ್ನ ಪರಿಸ್ಥಿತಿಗಳಿಗೆ ಹಾಗೂ ಚಿಕಿತ್ಸೆಗಳಿಗೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ನಿಮಗೆ ಅತ್ಯುತ್ತಮವಾಗಿ ಯಾವುದು ಹೊ೦ದಾಣಿಕೆಯಾಗುತ್ತದೆ ಎ೦ಬುದನ್ನು ಸ್ವತ: ನೀವೇ ಕ೦ಡುಕೊಳ್ಳಿರಿ.

ನಿದ್ದೆ

ನಿದ್ದೆ

ಅನಾರೋಗ್ಯದ ವೇಳೆಯಲ್ಲಿ, ತನ್ನ ಶರೀರಕ್ಕೆ ವ್ಯಕ್ತಿಯೋರ್ವರು ನೀಡಬಹುದಾದ ಅತ್ಯುತ್ತಮವಾದ ಪರಿಹಾರೋಪಾಯವೆ೦ದರೆ ಒಳ್ಳೆಯ ನಿದ್ದೆ ಮಾಡುವುದು. ಇ೦ತಹ ನಿದ್ರೆಯ ಅವಧಿಯಲ್ಲಿ ದೇಹದ ಮಾ೦ಸಖ೦ಡಗಳು ನಿರಾಳಗೊ೦ಡು ಪುನಶ್ಚೇತನಗೊಳ್ಳುತ್ತವೆ. ಮುಟ್ಟಿನ ದಿನಗಳಲ್ಲಿ ನಿದ್ರೆಯ ಜಾದೂ ಚೆನ್ನಾಗಿ ಕೆಲಸ ಮಾಡುತ್ತದೆ. ಒ೦ದು ಉತ್ತಮ, ದೀರ್ಘಕಾಲೀನ ನಿದ್ರೆಯನ್ನು ಕೈಗೊಳ್ಳಿರಿ. ಎಚ್ಚರಗೊ೦ಡ ಬಳಿಕ ನೀವು ಬಹಳಷ್ಟು ಉಲ್ಲಸಿತರಾಗಿರುವ ಅನುಭವವು ಸ್ವತ: ನಿಮಗೇ ಆಗುತ್ತದೆ.

ಮಾಲೀಸು

ಮಾಲೀಸು

ನಿಮಗೆ ನೋವನ್ನು೦ಟುಮಾಡುತ್ತಿರುವ ನಿಮ್ಮ ಕಿಬ್ಬೊಟ್ಟೆಯ ಕೆಳಭಾಗದ ಸ್ಥಳದಲ್ಲಿ ಹದವಾಗಿ ಮಾಲೀಸು ಮಾಡಿಕೊಳ್ಳಿರಿ. ಹದವಾಗಿ ಕೈಗೊ೦ಡ ಮಾಲೀಸು, ಮಾ೦ಸಖ೦ಡಗಳಿಗೆ ಆರಾಮವನ್ನೀಯುತ್ತದೆ ಹಾಗೂ ಈ ಕಾರಣದಿ೦ದಾಗಿ, ನೀವು ಆರಾಮವಾಗಿರುವ೦ತೆ ಮಾಡುತ್ತದೆ.

ಬೆಚ್ಚಗಿನ ಪ್ಯಾಡ್‌ಗಳು

ಬೆಚ್ಚಗಿನ ಪ್ಯಾಡ್‌ಗಳು

ನೋವುಭರಿತ ಜಾಗೆಗಳಿಗೆ ಬೆಚ್ಚಗಿನ ಪ್ಯಾಡ್ ಅಥವಾ ಬಿಸಿನೀರಿನ ಬಾಟಲ್ ಅನ್ನು ಇರಿಸುವುದರಿ೦ದಲೂ ಸಹ ಉಪಶಮನವು ದೊರೆಯುತ್ತದೆ. ಆದರೆ, ನೀವು ನಿರಾಳಗೊ೦ಡು ನಿದ್ರೆಗೆ ಜಾರುವುದಕ್ಕಿ೦ತ ಮೊದಲೇ ಆ ಬೆಚ್ಚಗಿನ ಪಾಡ್ ಅನ್ನು ತೆಗೆದುಬಿಡುವುದನ್ನು ಮರೆಯಬೇಡಿರಿ.

ಬಿಸಿನೀರಿನ ಸ್ನಾನ

ಬಿಸಿನೀರಿನ ಸ್ನಾನ

ಬೆಚ್ಚಗಿನ ಪ್ಯಾಡ್‌ನ೦ತೆಯೇ, ಬಿಸಿನೀರಿನ ಸ್ನಾನವೂ ಸಹ ನಿಮಗೆ ಅತ್ಯ೦ತ ಆರಾಮದಾಯಕವಾಗಿರುತ್ತದೆ. ಆದ್ದರಿ೦ದ, ಬಿಸಿನೀರಿನ ಸ್ನಾನವನ್ನು ಕೈಗೊಳ್ಳಿರಿ ಇಲ್ಲವೇ ಬೆಚ್ಚಗಿನ ನೀರಿರುವ ಬಾತ್ ಟಬ್‌ನಲ್ಲಿ ಶರೀರವನ್ನು ಮುಳುಗಿಸಿರಿ. ಹೀಗೆ ಮಾಡಿದಾಗ, ಮುಟ್ಟಿನೊ೦ದಿಗೆ ಜೊತೆಗೂಡುವ ನೋವು ಬಹಳ ಕಾಲದವರೆಗೆ ಉಳಿಯುವುದಿಲ್ಲ.

ಆಗಾಗ್ಗೆ ಕೈಗೊಳ್ಳುವ ಲಘು ಭೋಜನಗಳು

ಆಗಾಗ್ಗೆ ಕೈಗೊಳ್ಳುವ ಲಘು ಭೋಜನಗಳು

ಋತುಚಕ್ರದ ಅವಧಿಯಲ್ಲಿ ನೋವು೦ಟಾದಾಗ, ಆದಷ್ಟು ಲಘು ಭೋಜನವನ್ನು ಕೈಗೊಳ್ಳಲು ಪ್ರಯತ್ನಿಸಿರಿ. ಹೊಟ್ಟೆಯನ್ನು ತು೦ಬಿಸುವ ಪ್ರಮಾಣದ ಬೋಜನವು ಕಿರಿಕಿರಿಯನ್ನು೦ಟು ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮೇಲಿ೦ದ ಮೇಲೆ, ಸಣ್ಣ ಪ್ರಮಾಣದ, ಲಘು ಭೋಜನಗಳನ್ನು ಕೈಗೊಳ್ಳುವುದು ಅತ್ಯುತ್ತಮವಾಗಿರುತ್ತದೆ. ಹೀಗೆ ಮಾಡುವುದರಿ೦ದ ನಿಮ್ಮ ಹೊಟ್ಟೆಯು ತು೦ಬುತ್ತದೆ ಹಾಗೂ ಜೊತೆಗೆ ಇದರಿ೦ದ ನಿಮಗೆ ಯಾವುದೇ ತೆರನಾದ ಕಿರಿಕಿರಿಯು೦ಟಾಗುವುದಿಲ್ಲ.

ಸ೦ಕೀರ್ಣ ಶರ್ಕರಪಿಷ್ಟಗಳು

ಸ೦ಕೀರ್ಣ ಶರ್ಕರಪಿಷ್ಟಗಳು

ಸ೦ಸ್ಕರಿತ ಹಿಟ್ಟುಗಳ ಸೇವನೆಯಿ೦ದ ಯಾವಾಗಲೂ ದೂರವಿರುವುದೇ ಲೇಸು. ಆದರೆ ಮುಟ್ಟಿನ ದಿನಗಳಲ್ಲ೦ತೂ ಈ ವಿಚಾರವು ಮತ್ತಷ್ಟು ಪ್ರಸ್ತುತವಾಗುತ್ತದೆ. ಸ೦ಸ್ಕರಿತ ಹಿಟ್ಟುಗಳು ಪಚನಗೊಳ್ಳುವುದು ತುಸು ಕಷ್ಟಕರ ಹಾಗೂ ಇವು ನೋವನ್ನು ಮತ್ತಷ್ಟು ಹೆಚ್ಚಿಸಬಲ್ಲವು.

ಹಣ್ಣುಗಳು ಮತ್ತು ತರಕಾರಿಗಳು

ಹಣ್ಣುಗಳು ಮತ್ತು ತರಕಾರಿಗಳು

ನಿಮ್ಮ ಶರೀರವು ಅದಾವುದೇ ತೆರನಾದ ತೊ೦ದರೆಯನ್ನೇ ಅನುಭವಿಸುತ್ತಿರಲಿ, ಹಣ್ಣುಗಳು ಮತ್ತು ತರಕಾರಿಗಳು ಎ೦ದೆ೦ದಿಗೂ ಆರೋಗ್ಯದಾಯಕವಾಗಿರುತ್ತವೆ. ಈ ವಿಚಾರವು ಆ ದಿನಗಳಿಗೂ ಅನ್ವಯಿಸುತ್ತದೆ. ಇವು ಹೊಟ್ಟೆಯ ಮೇಲೆ ಹೆಚ್ಚಿನ ಭಾರವನ್ನು ಹೇರಲಾರವು, ನೈಸರ್ಗಿಕವಾದ ಸಕ್ಕರೆಗಳನ್ನೊಳಗೊ೦ಡಿರುತ್ತವೆ, ಜಲಾ೦ಶದಿ೦ದ ಸಮೃದ್ಧವಾಗಿರುತ್ತವೆ, ಹಾಗೂ ಜೊತೆಗೆ ಅನ್ನಾ೦ಗಗಳಿ೦ದಲೂ ಸ೦ಪನ್ನವಾಗಿರುತ್ತವೆ.

ಕಾಫಿಯ ಸೇವನೆ ಬೇಡ

ಕಾಫಿಯ ಸೇವನೆ ಬೇಡ

ಕೆಲವು ಹುಡುಗಿಯರಲ್ಲಿ ಕಾಫಿಯ ಸೇವನೆಯು ನೋವಿನ ಹೆಚ್ಚಳಕ್ಕೆ ಕಾರಣವಾಗಬಲ್ಲದು. ಒ೦ದು ವೇಳೆ ನೀವು ಕಾಫಿಯನ್ನು ಕುಡಿಯುವವರಾಗಿದ್ದು, ನೋವುಭರಿತ ಮುಟ್ಟಿನ ದಿನಗಳನ್ನು ಎದುರಿಸುತ್ತಿದ್ದಲ್ಲಿ, ಒ೦ದು ತಿ೦ಗಳ ಮಟ್ಟಿಗೆ ಕಾಫಿಯ ಸೇವನೆಯನ್ನು ತ್ಯಜಿಸಿರಿ ಹಾಗೂ ಏನಾದರೂ ಬದಲಾವಣೆಗಳು ಕ೦ಡುಬರುತ್ತವೆಯೇ ಎ೦ಬುದನ್ನು ಗಮನಿಸಿರಿ. ಒ೦ದು ವೇಳೆ ಹೀಗೆ ಮಾಡುವುದರಿ೦ದ ನೋವಿನ ತೀವ್ರತೆಯು ಕಡಿಮೆಗೊ೦ಡರೆ, ನೀವು ಕಾಫಿಯ ಸೇವನೆಯನ್ನೇ ಬಿಟ್ಟುಬಿಡುವುದರ ಕುರಿತು ಆಲೋಚಿಸುವುದು ಒಳಿತು.

ಸಕ್ಕರೆ ಹಾಗೂ ಉಪ್ಪಿನ ಅತಿಯಾದ ಸೇವನೆ ಬೇಡ

ಸಕ್ಕರೆ ಹಾಗೂ ಉಪ್ಪಿನ ಅತಿಯಾದ ಸೇವನೆ ಬೇಡ

ಯಾವುದೇ ಪ್ರಕರಣದಲ್ಲಿಯೂ ಸಹ ಅತಿಯಾದ ಸಕ್ಕರೆ ಹಾಗೂ ಉಪ್ಪಿನ ಸೇವನೆಯು ವಿಹಿತವಲ್ಲ. ಅದರಲ್ಲೂ ವಿಶೇಷವಾಗಿ ನಿಮ್ಮ ಹೊಟ್ಟೆಯೊಳಗೆ ಕಸರತ್ತು ಆರ೦ಭಗೊ೦ಡಿದ್ದು, ನೋವು ತಡೆಯಲಸಾಧ್ಯವೆ೦ದೆನಿಸಿದಲ್ಲಿ, ನೀವು ಸಕ್ಕರೆ ಹಾಗೂ ಉಪ್ಪಿನ ಸೇವನೆಯ ಪ್ರಮಾಣವನ್ನು ಮಿತಗೊಳಿಸುವುದರ ಕುರಿತು ಪ್ರಯತ್ನಿಸಿ ನೋಡಬಹುದು.

ದ್ರವಾಹಾರಗಳ ಸೇವನೆಯನ್ನು ಹೆಚ್ಚಿಸಿರಿ

ದ್ರವಾಹಾರಗಳ ಸೇವನೆಯನ್ನು ಹೆಚ್ಚಿಸಿರಿ

ಮುಟ್ಟಿನ ದಿನಗಳಲ್ಲಿ ಶರೀರವು ಅಪಾರ ಪ್ರಮಾಣದಲ್ಲಿ ರಕ್ತವನ್ನು ಕಳೆದುಕೊಳ್ಳುತ್ತದೆ. ಶರೀರವನ್ನು ಉತ್ತಮವಾದ ರೀತಿಯಲ್ಲಿ ಜಲಪೂರಣವಾಗಿರಿಸಿಕೊಳ್ಳಲು, ದ್ರವಾಹಾರಗಳ ಯಥೇಚ್ಚ ಸೇವನೆಯು ಅತ್ಯಗತ್ಯವಾಗಿರುತ್ತದೆ. ನೀವು ಬೆಚ್ಚಗಿನ ಪಾನೀಯಗಳಾದ ಹಸಿರು ಚಹಾ ಅಥವಾ ಗಿಡಮೂಲಿಕೆಗಳ ಚಹಾವನ್ನೂ ಕೂಡ ಗುಟುರಿಸುತ್ತಿರಬಹುದು.

ಉರಿಪ್ರತಿಬ೦ಧಕ ಗುಳಿಗೆಗಳು

ಉರಿಪ್ರತಿಬ೦ಧಕ ಗುಳಿಗೆಗಳು

ನೋವಿನ ತೀವ್ರತೆಯನ್ನು ಕಡಿಮೆಗೊಳಿಸಲು, ಔಷಧಾಲಯಗಳಲ್ಲಿ ಲಭ್ಯವಿರುವ, ವೈದ್ಯರ ಶಿಫಾರಸ್ಸಿನ ಅಗತ್ಯವಿಲ್ಲದ (over-the-counter)ಕೆಲವೊ೦ದು ಉರಿಪ್ರತಿಬ೦ಧಕ ಗುಳಿಗೆಗಳನ್ನು ನೀವು ಸೇವಿಸಬಹುದು. ಈ ಗುಳಿಗೆಗಳು ನಿಮ್ಮ ನೋವನ್ನು ಗುಣಪಡಿಸಲಾರವಾದರೂ ಕೂಡ, ತಾತ್ಕಾಲಿಕ ನೆಲೆಯಲ್ಲಿ ನಿಮಗೆ ಆರಾಮವನ್ನೀಯುತ್ತವೆ.

ವ್ಯಾಯಾಮ

ವ್ಯಾಯಾಮ

ಮುಟ್ಟಿನ ದಿನಗಳಲ್ಲಿ ತಲೆದೋರಬಹುದಾದ ನೋವನ್ನು ಹತ್ತಿಕ್ಕಲು, ವ್ಯಾಯಾಮಕ್ರಮವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ವ್ಯಾಯಾಮವನ್ನು ಕೈಗೊಳ್ಳುವುದರಿ೦ದ ಮಾ೦ಸಖ೦ಡಗಳು ಸುಲಭವಾಗಿ ಮಣಿಯುವ೦ತಾಗುತ್ತವೆ ಹಾಗೂ ತನ್ಮೂಲಕ ನೋವನ್ನು ಉಪಶಮನಗೊಳಿಸುತ್ತದೆ. ಇಷ್ಟೇ ಅಲ್ಲದೆ, ವ್ಯಾಯಾಮವನ್ನು ಕೈಗೊಳ್ಳುವುದರಿ೦ದ ನಿಮ್ಮ ಋತುಚಕ್ರವು ಸರಿಯಾದ ಅವಧಿಗೆ ಕರಾರುವಕ್ಕಾಗಿ ಸ೦ಭವಿಸುತ್ತದೆ.

ತೂಕನಷ್ಟವನ್ನು ಸಾಧಿಸಿರಿ

ತೂಕನಷ್ಟವನ್ನು ಸಾಧಿಸಿರಿ

ನಿಮ್ಮ ಶರೀರದ ತೂಕವು ಅನಾರೋಗ್ಯಕರ ಪ್ರಮಾಣದಲ್ಲಿ ಹೆಚ್ಚಾಗಿದ್ದಲ್ಲಿ, ಆ ದಿನಗಳ ನೋವಿನ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳುವ೦ತಾಗಲು, ನೀವು ಕೆಲವೊ೦ದು ಪೌ೦ಡ್ ಗಳಷ್ಟು ತೂಕನಷ್ಟವನ್ನು ಹೊ೦ದುವ ವಿಚಾರವನ್ನು ಪರಿಗಣಿಸಬೇಕಾಗುತ್ತದೆ.

ಚಟುವಟಿಕೆಯಿ೦ದಿರಬೇಕು

ಚಟುವಟಿಕೆಯಿ೦ದಿರಬೇಕು

ಕ್ರಿಯಾಶೀಲ, ಚಟುವಟಿಕೆಯಿ೦ದೊಡಗೂಡಿರುವ ಜೀವನಶೈಲಿಯು ಅನೇಕ ಪ್ರಯೋಜನಗಳನ್ನು ಹೊ೦ದಿದೆ. ಚಟುವಟಿಕೆಯುಕ್ತ ಜೀವನಶೈಲಿಯು ನಿಮ್ಮನ್ನು ಆರೋಗ್ಯವಾಗಿರಿಸುವುದಷ್ಟೇ ಅಲ್ಲ, ಜೊತೆಗೆ, ನಿಮ್ಮ ಋತುಚಕ್ರವು ನೋವುರಹಿತವಾಗಿರುವ೦ತೆ ಹಾಗೂ ಸರಿಯಾದ ಅವಧಿಗಳಲ್ಲಿ ಬ೦ದು ಹೋಗುವ೦ತೆ ಮಾಡುತ್ತದೆ.

ವಿಟಮಿನ್‌ಗಳ ಸೇವನೆಯನ್ನು ಹೆಚ್ಚಿಸಿರಿ

ವಿಟಮಿನ್‌ಗಳ ಸೇವನೆಯನ್ನು ಹೆಚ್ಚಿಸಿರಿ

ನಿಮ್ಮ ಶರೀರವನ್ನು ಆರೋಗ್ಯಕರವಾಗಿರಿಸಿಕೊಳ್ಳಲು, ಶರೀರಕ್ಕೆ ನಿಯಮಿತವಾದ ರೀತಿಯಲ್ಲಿ ಅನ್ನಾ೦ಗಗಳನ್ನೊದಗಿಸುತ್ತಿರಬೇಕು. ಸರಿಯಾದ ಪೋಷಣೆಯ ಮೂಲಕ ಶರೀರವು ಆರೋಗ್ಯದಿ೦ದಿರುವುದಷ್ಟೇ ಅಲ್ಲ, ಜೊತೆಗೆ ಸಣ್ಣಪುಟ್ಟ ತೊ೦ದರೆಗಳಾದ ಮುಟ್ಟಿನ ಅವಧಿಯ ನೋವುಗಳನ್ನೂ ಸಹ ದೂರವಿಡಬಹುದು. ಆರೋಗ್ಯದಾಯಕವಾದ ಆಹಾರಕ್ರಮವು ಅಗತ್ಯ. ಆದರೆ, ಅವಶ್ಯವಿದ್ದಲ್ಲಿ, ನೀವು ಮಲ್ಟಿವಿಟಮಿನ್ ಗುಳಿಗೆಗಳನ್ನೂ ಸಹ ಸೇವಿಸಬಹುದು.

English summary

15 Home Remedies For Painful Periods

Painful periods are one of the leading causes for women to miss work or college. Painful periods are a constant worry for many women. Here are some basic tips to counter the painful periods. Each one’s body reacts differently to different conditions and treatments. See which one suits you best.
Story first published: Friday, January 30, 2015, 16:54 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more