For Quick Alerts
ALLOW NOTIFICATIONS  
For Daily Alerts

ಅಬ್ಬಾ..! ಪುಟ್ಟ ಸಾಸಿವೆಯಲ್ಲೂ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?

By Super Admin
|

ಭಾರತೀಯ ಅಡುಗೆಗಳಲ್ಲಿ, ಅದರಲ್ಲೂ ಸಾರು, ಪಲ್ಯ ಮೊದಲಾದ ಖಾದ್ಯಗಳಲ್ಲಿ ಒಗ್ಗರಣೆ ಇಲ್ಲದೇ ರುಚಿಯೇ ಇರುವುದಿಲ್ಲ. ಒಗ್ಗರಣೆಗೆ ಅಗತ್ಯವಾದ ಸಾಮಾಗ್ರಿ ಎಂದರೆ ಸಾಸಿವೆ ಕಾಳು. ರಾಗಿಯಂತೆಯೇ ಕಾಣುವ ಆದರೆ ರಾಗಿಗಿಂತ ಕೊಂಚ ದೊಡ್ಡದಾಗಿರುವ ಈ ಪುಟ್ಟ ಕಾಳು ಹಲವು ಪೋಷಕಾಂಶಗಳ ಆಗರವೂ ಆಗಿದೆ. ಸಾಸಿವೆ ಎಣ್ಣೆ- ಆರೋಗ್ಯಕ್ಕೂ ಸೈ, ಅಡುಗೆಗೂ ಜೈ

ಜೊತೆಗೇ ಇದರಿಂದ ತೆಗೆದ ಎಣ್ಣೆಯೂ ಆರೋಗ್ಯಕ್ಕೆ ಉತ್ತಮವಾಗಿದ್ದು ಅಡುಗೆಯಲ್ಲಿಯೂ ಸುರಕ್ಷಿತವಾಗಿ ಬಳಸಬಹುದಾಗಿದೆ. ನಮ್ಮ ಆರೋಗ್ಯವನ್ನು ವೃದ್ದಿಸುವಲ್ಲಿ ಈ ಪುಟ್ಟ ಸಾಸಿವೆಯ ಹತ್ತು ದೊಡ್ಡಗುಣಗಳನ್ನು ಇಲ್ಲಿ ನೀಡಲಾಗಿದೆ, ಮುಂದೆ ಓದಿ...

ಕರುಳಿನ ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ

ಕರುಳಿನ ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ

ಸಾಸಿವೆ ಕಾಳಿನಲ್ಲಿ phytonutrient ಎಂಬ ಪೋಷಕಾಂಶಗಳಿವೆ. ಇವು ವಿಶೇಷವಾಗಿ ಕರುಳು ಮತ್ತು ಜೀರ್ಣಾಂಗಗಳಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಜೀರ್ಣಾಂಗಗಳಲ್ಲಿ ಈಗಾಗಲೇ ಇರುವ ಕ್ಯಾನ್ಸರ್ ಕಾರಕ ಕಣಗಳ ಪ್ರಭಾವವನ್ನು ಸಾಸಿವೆಯ ಪೋಷಕಾಂಶಗಳು ಕಡಿಮೆಗೊಳಿಸುತ್ತವೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ತನ್ಮೂಲಕ ಬರಬಹುದಾಗಿದ್ದ ಕ್ಯಾನ್ಸರ್ ನಿಂದ ತಡೆಗಟ್ಟುತ್ತದೆ.

ಅಸ್ತಮಾ ರೋಗದಿಂದ ಮುಕ್ತಿ ದೊರಕುತ್ತದೆ

ಅಸ್ತಮಾ ರೋಗದಿಂದ ಮುಕ್ತಿ ದೊರಕುತ್ತದೆ

ಸಾಸಿವೆಯಲ್ಲಿ ಸೆಲೆನಿಯಂ ಮತ್ತು ಮೆಗ್ನೀಶಿಯಂ ಧಾತುಗಳು ಹೇರಳವಾಗಿವೆ. ಇವೆರಡರ ಸಂಯೋಜನೆ ಉರಿಯೂತಕ್ಕೆ ಪ್ರತಿರೋಧ ನೀಡುವ ಗುಣವಿದೆ. ನಿಯಮಿತ ಸೇವನೆಯಿಂದ ಈ ಧಾತುಗಳು ಶ್ವಾಸನಾಳದಲ್ಲಿ ಆಗಿರುವ ಸೋಂಕು ನಿವಾರಿಸಿ ಅಸ್ತಮಾ, ಶೀತ, ಮತ್ತು ಕಫ ಕಟ್ಟಿರುವ ಎದೆಗೂಡನ್ನು ತೆರವುಗೊಳಿಸಲು ನೆರವಾಗುತ್ತವೆ. ಪರಿಣಾಮವಾಗಿ ಶ್ವಾಸಸಂಬಂಧಿ ರೋಗಗಳು ದೂರವಾಗುತ್ತವೆ.

ತೂಕ ಇಳಿಸಲು ಸಹಕರಿಸುತ್ತದೆ

ತೂಕ ಇಳಿಸಲು ಸಹಕರಿಸುತ್ತದೆ

ಸಾಸಿವೆಯಲ್ಲಿ ಹಲವು ಬಿ-ಕಾಂಪ್ಲೆಕ್ಸ್ ವಿಟಮಿನ್ನುಗಳಿವೆ. ಇದರಲ್ಲಿ ಫೋಲೇಟ್, ನಿಯಾಸಿನ್, ಥಿಯಾಮಿನ್, ರೈಬೋಫ್ಲೋವಿನ್ ಮೊದಲಾದವು ಪ್ರಮುಖವಾಗಿವೆ. ಈ ವಿಟಮಿನ್ನುಗಳು ಶರೀರದ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಚುರುಕುಗೊಂಡ ಈ ಕ್ರಿಯೆ ಸರಾಗವಾಗಿ ನೆರವೇರಲು ಶರೀರದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಬಳಕೆಯಾಗುತ್ತದೆ. ಪರಿಣಾಮವಾಗಿ ಕೊಬ್ಬು ಕರಗಿ ತೂಕ ಇಳಿಯಲು ಸಾಧ್ಯವಾಗುತ್ತದೆ.

ವೃದ್ಧಾಪ್ಯವನ್ನು ದೂರವಿಡುತ್ತದೆ

ವೃದ್ಧಾಪ್ಯವನ್ನು ದೂರವಿಡುತ್ತದೆ

ಸಾಸಿವೆ ಕಾಳಿನಲ್ಲಿ ಕ್ಯಾರೋಟೀನ್, ಝಿಯಾಕ್ಸಾಥಿನ್ (zeaxanthin) ಮತ್ತು ಲೂಟಿನ್ ವಿಟಮಿನ್ ಎ, ಸಿ, ಮತ್ತು ಕೆ (lutein vitamin A,C and K) ಹೇರಳವಾಗಿವೆ. ಈ ಎಲ್ಲಾ ಪೋಷಕಾಂಶಗಳು ದೇಹದ ಸಮಗ್ರ ಬೆಳವಣಿಗೆಯಲ್ಲಿ ಸಹಕರಿಸಿ ಸವೆತವನ್ನು ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ವೃದ್ದಾಪ್ಯವನ್ನು ದೂರವಿರಿಸುತ್ತದೆ.

ಸಂಧಿವಾತ ಮತ್ತು ಸ್ನಾಯುಸೆಳೆತದ ನೋವನ್ನು ಕಡಿಮೆಗೊಳಿಸುತ್ತದೆ

ಸಂಧಿವಾತ ಮತ್ತು ಸ್ನಾಯುಸೆಳೆತದ ನೋವನ್ನು ಕಡಿಮೆಗೊಳಿಸುತ್ತದೆ

ಸಾಸಿವೆಯಲ್ಲಿ ಸೆಲೆನಿಯಂ ಮತ್ತು ಮೆಗ್ನೀಶಿಯಂ ಅಂಶಗಳು ಹೇರಳವಾಗಿವೆ. ಇವು ಉತ್ತಮ ಉರಿಯೂತವ ನಿವಾರಕಗಳಾಗಿವೆ ಹಾಗೂ ಶರೀರದಲ್ಲಿ ಶಾಖವನ್ನು ಉತ್ಪತ್ತಿಸಲು ನೆರವಾಗುತ್ತವೆ. ಇದೇ ಕಾರಣದಿಂದ ಸಾಸಿವೆ ಎಣ್ಣೆಯನ್ನು ಮೈಗೆ ಹಚ್ಚಿಕೊಂಡಾಗ ಮೈ ಬಿಸಿಯೇರುತ್ತದೆ. ಈ ಶಾಖದ ಕಾರಣ ಸ್ನಾಯುಗಳು ಸಡಿಲಗೊಂಡು ಹೆಚ್ಚಿನ ರಕ್ತಸಂಚಾರ ಸಾಧ್ಯವಾಗುತ್ತದೆ. ಈ ಮೂಲಕ ಸ್ನಾಯುಗಳ ನೋವು ಕಡಿಮೆಯಾಗುತ್ತದೆ. ಸಾಸಿವೆ ಎಣ್ಣೆ ಸಂಧಿವಾತಕ್ಕೂ ಉತ್ತಮ ಪರಿಹಾರ ನೀಡುತ್ತದೆ. ಜೊತೆಗೇ ಯೋಗಾಭ್ಯಾಸದ ಸೂಕ್ತ ಆಸನಗಳನ್ನು ಅನುಸರಿಸುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ.

ಕಿವಿಮಾತು: ಸಾಸಿವೆ ಎಣ್ಣೆಯ ಮಸಾಜ್ ಸಾಧ್ಯವಾಗದಿದ್ದರೆ ಒಂದು ಬಟ್ಟೆಯಲ್ಲಿ ಸಾಸಿವೆ ಕಾಳುಗಳನ್ನು ಹಾಕಿ ಜಜ್ಜಿ ಸ್ನಾನ ಮಾಡುವ ನೀರಿನಲ್ಲಿ ಮುಳುಗಿಸಿ, ಆ ನೀರಿನಲ್ಲಿ ಸ್ನಾನ ಮಾಡುವುದರಿಂದಲೂ ಉತ್ತಮ ಪರಿಣಾಮವನ್ನು ನಿರೀಕ್ಷಿಸಬಹುದು.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಸಾಸಿವೆಯಲ್ಲಿ ನಿಯಾಸಿನ್ ಅಥವಾ ವಿಟಮಿನ್ ಬಿ ೩ ಹೇರಳವಾಗಿದೆ. ಇದು ರಕ್ತವನ್ನು ಸೇರಿದ ಬಳಿಕ ರಕ್ತನಾಳಗಳ ಒಳಗೆ ಕವಲೊಡೆದಿರುವಲ್ಲಿ ಅಥವಾ ತಿರುವಿರುವ ಭಾಗದಲ್ಲಿ ಅಂಟಿಕೊಂಡು ಕುಳಿತಿದ್ದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸಲು ನೆರವಾಗುತ್ತದೆ. ಜೊತೆಗೇ ರಕ್ತಸಂಚಾರ ಸುಗಮಗೊಳ್ಳಲು ನೆರವಾಗುತ್ತದೆ ಮತ್ತು ರಕ್ತದ ಅಧಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ.

ಕೂದಲ ಬೆಳವಣಿಗೆಯನ್ನು ವೃದ್ಧಿಸುತ್ತದೆ

ಕೂದಲ ಬೆಳವಣಿಗೆಯನ್ನು ವೃದ್ಧಿಸುತ್ತದೆ

ವಾರಕ್ಕೊಮ್ಮೆ ಸಾಸಿವೆ ಎಣ್ಣೆಯನ್ನು ಕೂದಲ ಬುಡಕ್ಕೆ ಮಸಾಜ್ ಮಾಡುವುದರಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು ಹಾಗೂ ತಲೆಹೊಟ್ಟನ್ನೂ ನಿವಾರಿಸಬಹುದು. ತಲೆಯ ಚರ್ಮ ಕೊಂಚ ಬಿಸಿಯಾಗಿ ರಕ್ತಸಂಚಾರ ಹೆಚ್ಚುವುದರಿಂದ ಒತ್ತಡವೂ ಕಡಿಮೆಯಾಗುತ್ತದೆ. ಸಾಸಿವೆ ಎಣ್ಣೆ ಹಚ್ಚಿದ ಬಳಿಕ ಉತ್ತಮ ಪರಿಣಾಮಕ್ಕಾಗಿ ತಲೆಗೂದಲನ್ನು ತೆಳುವಾದ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿಕೊಂಡರೆ ಹೆಚ್ಚು ಎಣ್ಣೆಯನ್ನು ಚರ್ಮ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಅರ್ಧ ಅಥವಾ ಮುಕ್ಕಾಲು ಘಂಟೆಯ ಬಳಿಕ ಈ ಹಾಳೆಯನ್ನು ನಿವಾರಿಸಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೌಮ್ಯ ಶಾಂಪೂ ಬಳಸಿ. ಈ ಎಣ್ಣೆಯ ಘಾಟು ಕೊಂಚ ಕಟುವಾಗಿರುವುದರಿಂದ ಶಾಂಪೂವನ್ನು ಎರಡು ಅಥವಾ ಮೂರು ಬಾರಿ ಬಳಸಬೇಕಾಗಬಹುದು.

ಮಲಬದ್ಧತೆ ಕಡಿಮೆಗೊಳಿಸುತ್ತದೆ ಮತ್ತು ಮೂಲವ್ಯಾಧಿಯಿಂದ ರಕ್ಷಿಸುತ್ತದೆ

ಮಲಬದ್ಧತೆ ಕಡಿಮೆಗೊಳಿಸುತ್ತದೆ ಮತ್ತು ಮೂಲವ್ಯಾಧಿಯಿಂದ ರಕ್ಷಿಸುತ್ತದೆ

ಮಲಬದ್ಧತೆಯಾಗಿದ್ದರೆ ಒಂದು ಚಮಚ ಸಾಸಿವೆ ಎಣ್ಣೆಯನ್ನು ನೇರವಾಗಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸುವುದರಿಂದ ಉತ್ತಮ ಪರಿಣಾಮ ಪಡೆಯಬಹುದು. ಮಲವಿಸರ್ಜನೆಗೆ ಅಗತ್ಯವಾದ ಜಾರುಕದಂತೆ ಸಾಸಿವೆ ಎಣ್ಣೆ ಬಳಸಲ್ಪಡುವುದರಿಂದ ವಿಸರ್ಜನೆ ಸರಾಗವಾಗಿ ನಡೆದು ಮೂಲವ್ಯಾಧಿಯಾಗುವುದರಿಂದ ರಕ್ಷಣೆ ನೀಡುತ್ತದೆ.

ಚರ್ಮದ ಸೋಂಕಿನಿಂದ ರಕ್ಷಿಸುತ್ತದೆ

ಚರ್ಮದ ಸೋಂಕಿನಿಂದ ರಕ್ಷಿಸುತ್ತದೆ

ಸಾಸಿವೆ ಎಣ್ಣೆಯಲ್ಲಿ ಗಂಧಕ ಉತ್ತಮ ಪ್ರಮಾಣದಲ್ಲಿರುವುದರಿಂದ ಚರ್ಮದ ಸೋಂಕು ತಡೆಯಲು ಸಹಕಾರಿಯಾಗಿದೆ. ವಾಸ್ತವವಾಗಿ ಗಂಧಕ ಚರ್ಮಕ್ಕೆ ತುರಿಕೆಯುಂಟು ಮಾಡುವ ಗುಣ ಹೊಂದಿದೆ. ಆದರೆ ಇದೇ ಗುಣ ದೇಹ ತನ್ನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ (ಹೋಮಿಯೋಪಥಿ ವೈದ್ಯ ವಿಜ್ಞಾನ ಇದೇ ಸೂತ್ರವನ್ನು ಅನುಸರಿಸುತ್ತದೆ). ಸಾಸಿವೆ ಎಣ್ಣೆಯ ಜೀವಿರೋಧಿ (anti bacterial) ಮತ್ತು ವೈರಸ್ ವಿರೋಧಿ (anti viral) ಗುಣಗಳೂ ಚರ್ಮದ ಸಾಮಾನ್ಯ ತೊಂದರೆಗಳನ್ನು ನಿವಾರಿಸಿ ಚರ್ಮ ಸಹಜಕಾಂತಿಯನ್ನು ಪಡೆಯಲು ಸಹಕರಿಸುತ್ತದೆ.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಸಾಸಿವೆ ಪುಟ್ಟದಾದರೂ ಇದರಲ್ಲಿರುವ ಖನಿಜಗಳ ಸಂಖ್ಯೆ ದೊಡ್ಡರು, ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮೊದಲಾದ ಖನಿಜಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ತನ್ಮೂಲಕ ವಿವಿಧ ವ್ಯಾಧಿಗಳಿಂದ ದೇಹಕ್ಕೆ ರಕ್ಷಣೆ ನೀಡುತ್ತದೆ.

ವಿಶೇಷ ಸೂಚನೆ

ವಿಶೇಷ ಸೂಚನೆ

ಅತಿಯಾದರೆ ಅಮೃತವೂ ವಿಷ ಎಂಬಂತೆ ಸಾಸಿವೆಯಲ್ಲಿ ಇಷ್ಟೆಲ್ಲಾ ಉತ್ತಮ ಗುಣಗಳಿದ್ದರೂ ಪ್ರತಿದಿನ ಸೇವಿಸಬೇಕಾದ ಪ್ರಮಾಣ ಮಾತ್ರ ಅತ್ಯಂತ ಕಡಿಮೆ ಇರಬೇಕಾದುದು ಅವಶ್ಯವಾಗಿದೆ. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಇದೇ ಉತ್ತಮ ಗುಣಗಳು ವಿರುದ್ಧವಾಗಿ ಕೆಲಸ ಮಾಡಬಲ್ಲವು. ಸಾಸಿವೆಯನ್ನು ಔಷಧಿಯಾಗಿ ಸೇವಿಸುವ ಮುನ್ನ ನಿಮ್ಮ ಕುಟುಂಬ ವೈದ್ಯರ ಅಥವಾ ಆಯುರ್ವೇದ ಪರಿಣಿತರಲ್ಲಿ ಸಮಾಲೋಚಿಸಿ ಅವರ ಸಲಹೆಯನ್ನು ಅನುಸರಿಸಿ.

English summary

10 Health benefits of mustard seeds

Mustard seeds are widely used in Indian households and are an integral part of Indian cooking as they impart a very rich taste to food. The underlying reason for using mustard seeds is the huge number of medicinal properties they have..
X
Desktop Bottom Promotion