ವಯಾಗ್ರದಂತೆ ಕೆಲಸ ಮಾಡುವ 10 ಅದ್ಭುತ ಆಹಾರಗಳು

Posted By:
Subscribe to Boldsky

ವಯಾಗ್ರ ಎಂಬ ಹೆಸರು ಯಾರು ಕೇಳಿಲ್ಲ. ತಮ್ಮ ಲೈಂಗಿಕ ಬಯಕೆಯನ್ನು ಉತ್ಕಂತಭರಿತವನ್ನಾಗಿ ಮಾಡುವ ಮತ್ತು ಲೈಂಗಿಕ ಆರೋಗ್ಯವನ್ನು ಸಾಧ್ಯವಾದಷ್ಟು ಹೆಚ್ಚಿಸುವ ಇದರ ಕುರಿತಾಗಿ ಬಹುತೇಕರು ಕೇಳಿಯೇ ಇರುತ್ತಾರೆ. ಈ ಔಷಧಿಯು ಗಂಡಸರಲ್ಲಿ ನಪುಂಸಕತೆಯನ್ನು ಮತ್ತು ಶಿಶ್ನ ನಿಮಿರುವಿಕೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೀಗೆ ಈ ಔಷಧಿಯು ಗಂಡಸರಲ್ಲಿ ಸಾಮಾನ್ಯವಾಗಿ ಕಂಡು ಬರುವ ಶಿಶ್ನ ನಿಮಿರುವಿಕೆಯಲ್ಲಿನ ತೊಂದರೆಗಳನ್ನು ಹಾರ್ಮೋನ್‍ಗಳನ್ನು ಉದ್ಧೀಪಿಸುವ ಮೂಲಕ ನಿವಾರಿಸುತ್ತದೆ.

ಆದರೆ ಒಂದು ಮಾತು ನೆನಪಿರಲಿ, ವಯಾಗ್ರದ ಹೊರತಾಗಿ ಹಲವಾರು ಪರಿಣಾಮಕಾರಿಯಾದ ಆಹಾರ ಪದಾರ್ಥಗಳು ನಿಮ್ಮ ಲೈಂಗಿಕ ಆರೋಗ್ಯವನ್ನು ಮತ್ತು ತುಡಿತವನ್ನು ಉದ್ಧೀಪನಗೊಳಿಸುತ್ತವೆ. ಇವುಗಳು ಯಾವುದೇ ಅಡ್ಡ ಪರಿಣಾಮವಿಲ್ಲದೆ ನಿಮ್ಮ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತವೆ. ಇದಕ್ಕಿಂತ ಉತ್ತಮವೇ ಹಾಗಾದರೆ ಅವು ಯಾವುವು ಎಂದು ತಿಳಿದುಕೊಳ್ಳಲು ನಿಮಗೆ ಕಾತರವೇ? ಮನೆಯಲ್ಲೇ ನೈಸರ್ಗಿಕ ವಯಾಗ್ರ ತಯಾರಿಸಿ

ಇಲ್ಲಿ ಪಟ್ಟಿಮಾಡಲಾದ ಆಹಾರ ಪದಾರ್ಥಗಳು ನಿಮ್ಮ ಜನನಾಂಗಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ. ಜೊತೆಗೆ ಇವುಗಳು ನಿಮ್ಮ ರಕ್ತದೊತ್ತಡವನ್ನು ಅಧಿಕಗೊಳಿಸುತ್ತವೆ ಮತ್ತು ಅದರ ಜೊತೆಗೆ ನಿಮ್ಮ ಜನನಾಂಗವನ್ನು ಸಹ ಶಕ್ತಿಯುತವಾಗಿ ನಿಮಿರುವಂತೆ ಮಾಡುತ್ತವೆ. ಹಾಗಾಗಿ ಇಲ್ಲಿ ವರ್ಗೀಕರಿಸಲಾಗಿರುವ ಆಹಾರಗಳು ವಯಾಗ್ರದಂತೆಯೇ ವರ್ತಿಸುತ್ತವೆ. ಬನ್ನಿ ಹಾಗಾದರೆ ವಯಾಗ್ರದಂತೆ ವರ್ತಿಸುವ ಈ ಆಹಾರ ಪದಾರ್ಥಗಳನ್ನು ಒಮ್ಮೆ ನೋಡಿಕೊಂಡು ಬರೋಣ. ಬನ್ನಿ ನಿಮ್ಮ ಲೈಂಗಿಕ ಆರೋಗ್ಯವನ್ನು ಮತ್ತು ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚು ಮಾಡುವ 10 ಆಹಾರ ಪದಾರ್ಥಗಳು ಇಲ್ಲಿವೆ, ಮುಂದೆ ಓದಿ....

ಕಲ್ಲಂಗಡಿ

ಕಲ್ಲಂಗಡಿ

ಇತ್ತೀಚಿಗಿನ ಅಧ್ಯಯನಗಳ ಪ್ರಕಾರ, ಕಲ್ಲಂಗಡಿ ಹಣ್ಣುಗಳು ವಯಾಗ್ರದಂತೆಯೇ ವರ್ತಿಸುತ್ತವೆಯಂತೆ. ಕಲ್ಲಂಗಡಿ ಹಣ್ಣುಗಳ ಒಂದು ತುಂಡು, ಅದರ ತ್ವಚೆಯ ಸ್ವಲ್ಪ ಒಳಗೆ ಇರುವ ಹಸಿರು ಭಾಗವು ಅತ್ಯಧಿಕವಾದ ಸಿಟ್ರುಲಿನ್ ಎಂಬ ಅಂಶವನ್ನು ಒಳಗೊಂಡಿದೆ. ಸಿಟ್ರುಲಿನ್ ರಾಸಾಯನಿಕವು ನಮ್ಮ ದೇಹದಲ್ಲಿ ಅರ್ಜಿನೈನ್ ಮತ್ತು ನೈಟ್ರಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ನೈಟ್ರಿಕ್ ಆಮ್ಲವು ಗಂಡಸರಲ್ಲಿ ಲೈಂಗಿಕತೆಯ ಕುರಿತಾಗಿ ತುಡಿತ ಬರಲು ಮತ್ತು ಸದೃಢವಾದ ಜನನಾಂಗದ ನಿಮಿರುವಿಕೆಗೆ ಸಹಾಯ ಮಾಡುತ್ತದೆ.

ವಾಲ್‍ನಟ್‍ಗಳು

ವಾಲ್‍ನಟ್‍ಗಳು

ಒಣ ಹಣ್ಣುಗಳು ಯಾವಾಗಲು ಸದೃಢವಾದ ನಿಮಿರುವಿಕೆಗೆ ಸಹಾಯ ಮಾಡುವ ಆಹಾರ ಪದಾರ್ಥಗಳಾಗಿವೆ. ಇವುಗಳು ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಮತ್ತು ವಿಟಮಿನ್ ಬಿ 3ಗಳನ್ನು ಒಳಗೊಂಡಿರುತ್ತವೆ. ಇವುಗಳು ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತವೆ ಮತ್ತು ಗಂಡಸರ ಜನನಾಂಗಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಗಳು ಸಹ ಜನನಾಂಗದ ನಿಮಿರುವಿಕೆಗೆ ಸಹಾಯ ಮಾಡುವ ಒಂದು ಅದ್ಭುತವಾದ ಆಹಾರವಾಗಿದೆ. ವಿಟಮಿನ್ ಡಿ, ಬಿ5 ಮತ್ತು ಬಿ6 ಈ ಎಲ್ಲಾ ಅಂಶಗಳು ಲೈಂಗಿಕ ತುಡಿತವನ್ನು ಉದ್ಧೀಪನ ಮಾಡುವ ಮತ್ತು ದೇಹದಲ್ಲಿನ ರಕ್ತ ನಾಳಗಳಿಗೆ ವಿಶ್ರಾಂತಿಯನ್ನು ನೀಡುವ ಅಂಶಗಳಾಗಿವೆ. ಇವುಗಳು ನಿಮ್ಮ ಸಂಗಾತಿಯೊಂದಿಗೆ ನಿಮಗೆ ಒಂದು ಮಧುರವಾದ ರತಿಕ್ರೀಡೆಗೆ ಅನುವು ಮಾಡಿಕೊಡುತ್ತದೆ.

ಪಾಲಾಕ್

ಪಾಲಾಕ್

ಪ್ರಪಂಚದಲ್ಲಿಯೇ ಅತ್ಯಂತ ಆರೊಗ್ಯಕರವಾದ ಆಹಾರ ಪದಾರ್ಥ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇದರಲ್ಲಿ ವಿಟಮಿನ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಪಾಲಾಕ್ ಸಹ ವಯಾಗ್ರದಂತೆ ಕಾರ್ಯ ನಿರ್ವಹಿಸುತ್ತದೆ. ಸ್ಪೈನಚ್ ಕಬ್ಬಿಣಾಂಶ, ಮ್ಯೆಗ್ನಿಶಿಯಂ ಮತ್ತು ಅತ್ಯುಪಯುಕ್ತವಾದ ವಿಟಮಿನ್ ಇಯನ್ನು ಹೊಂದಿರುತ್ತದೆ. ಆದ್ದರಿಂದಲೆ ಇದು ಸಹ ವಯಾಗ್ರದಂತೆ ಕೆಲಸ ಮಾಡುತ್ತದೆ.

ಡಾರ್ಕ್ ಚಾಕೋಲೆಟ್

ಡಾರ್ಕ್ ಚಾಕೋಲೆಟ್

ಡಾರ್ಕ್ ಚಾಕೋಲೆಟ್ ಮೂಡ್‍ಗೆ ಒಳ್ಳೆಯ ಬೆಂಬಲ ನೀಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದೊಂದು ಒಳ್ಳೆಯ ಆಹಾರವಾಗಿದ್ದು, ಇದು ಸೇವಿಸುವವರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಬ್ರೊಮೆಲೈನ್ ಎಂಬ ಕಿಣ್ವಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಸಹ ಸ್ವಾಭಾವಿಕವಾಗಿ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತವೆ. ಬಾಳೆಹಣ್ಣುಗಳಲ್ಲಿ ಪೋಷಾಕಾಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳಲ್ಲಿ ಪೊಟಾಶಿಯಂ ಮತ್ತು ಮ್ಯೆಗ್ನಿಶಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವುಗಳು ಲೈಂಗಿಕ ತುಡಿತದ ಜೊತೆಗೆ ಹಲವಾರು ಪ್ರಯೋಜನಗಳನ್ನು ನಿಮಗೆ ನೀಡುತ್ತದೆ.

ಅವೊಕ್ಯಾಡೊಗಳು

ಅವೊಕ್ಯಾಡೊಗಳು

ಈ ಅದ್ಭುತವಾದ ಆಹಾರ ಪದಾರ್ಥಗಳು ಪೋಷಕಾಂಶದ ವಿಚಾರದಲ್ಲಿ ಈ ಪಟ್ಟಿಯ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇವುಗಳಲ್ಲಿ ಶಕ್ತಿಯನ್ನು ಉದ್ಧೀಪಿಸುವ ಆರೋಗ್ಯಕರವಾದ ಕೊಬ್ಬುಗಳು ಮತ್ತು ವಿಟಮಿನ್ ಬಿ6ಗಳು ಹಾಗು ಇನ್ನಿತರ ಪೋಷಕಾಂಶಗಳು ಇರುತ್ತವೆ. ಅವೊಕ್ಯಾಡೊಗಳು ಉತ್ತಮ ಪೋಷಕಾಂಶಭರಿತ ಆಹಾರವಾಗಿದ್ದು, ಇದು ಗಂಡಸರಲ್ಲಿ ವೀರ್ಯಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಏಲಕ್ಕಿ

ಏಲಕ್ಕಿ

ಏಲಕ್ಕಿಯು ಸಹ ವಯಾಗ್ರದಂತೆ ವರ್ತಿಸುವ ಆಹಾರ ಪದಾರ್ಥಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಆಹಾರ ಪದಾರ್ಥವಾಗಿದೆ. ಇವುಗಳಲ್ಲಿ ಅತ್ಯುಪಯುಕ್ತವಾದ ಸಿನಿಯೋಲ್ ಎಂಬ ಅಂಶವು ಇರುತ್ತದೆ. ಇದು ಜನನಾಂಗಗಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ಜನನಾಂಗದ ನಿಮಿರುವಿಕೆಗೆ ಸಹ ಸಹಾಯ ಮಾಡುವ ಆಹಾರ ಪದಾರ್ಥವಾಗಿದೆ.

ದಾಳಿಂಬೆ

ದಾಳಿಂಬೆ

ದಾಳಿಂಬೆಯಲ್ಲಿ ಹಲವಾರು ಆರೋಗ್ಯಕರವಾದ ಪ್ರಯೋಜನಗಳು ಲಭ್ಯವಿರುತ್ತವೆ. ಇದು ಸಹ ಸ್ವಾಭಾವಿಕವಾದ ವಯಾಗ್ರದಂತೆ ಕಾರ್ಯನಿರ್ವಹಿಸುತ್ತವೆ. ದಾಳಿಂಬೆಗಳು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಜನನಾಂಗದತ್ತ ರಕ್ತ ಪರಿಚಲನೆಯನ್ನು ಅಧಿಕಗೊಳಿಸುತ್ತದೆ. ಇದು ಇಬ್ಬರ ಸಮಾಗಮದ ಉತ್ತುಂಗ ಕಾಲದಲ್ಲಿ ಭಾರಿ ನೆರವನ್ನು ನೀಡುವ ಹಣ್ಣಾಗಿದೆ.

ಶತಾವರಿ

ಶತಾವರಿ

ಫೋಲೆಟ್ ಮತ್ತು ವಿಟಮಿನ್ ಇ ಅಧಿಕವಾಗಿರುವ ಅಸ್ಪಾರಗುಸ್ ಒಂದು ಅದ್ಭುತವಾದ ಆಹಾರ ಪದಾರ್ಥವಾಗಿದೆ. ಇದು ಮಹಿಳೆಯರಲ್ಲಿ ಬಂಜೆತನವನ್ನು ನಿವಾರಿಸುತ್ತದೆ ಮತ್ತು ಸ್ವಾಭಾವಿಕವಾದ ವಯಾಗ್ರದಂತೆ ಕೆಲಸ ಮಾಡುತ್ತದೆ. ಶತಾವರಿನಲ್ಲಿರುವ ಸಮೃದ್ಧವಾದ ಪೋಷಕಾಂಶಗಳು ಹಲವಾರು ಪ್ರಯೋಜನಗಳನ್ನು ನೀಡುತ್ತವೆ.

English summary

10 Excellent Foods That Naturally Act Like Viagra

Viagra is widely talked about when it comes to boosting sexual drive and overall sexual health. The drug sees its application in treating erectile dysfunction and impotency in men. Here are 10 best foods that act like Viagra. These are highly impressive foods that boost sex drive. Read on...
Story first published: Monday, January 12, 2015, 23:31 [IST]
Subscribe Newsletter