ಲಿಂಬೆ ಹಣ್ಣು ಉಪಯೋಗದ ಹಿಂದಿರುವ ರಹಸ್ಯವೇನು?

Posted By:
Subscribe to Boldsky

ನೈಸರ್ಗಿಕವಾಗಿ ದೊರೆಯುವ ತರಕಾರಿ ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಸಮ್ಮಿಳಿತವಾಗಿದೆ. ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತಿಂಗಳ ಮುಟ್ಟಿನ ತಡವಾಗುವಿಕೆಗಾಗಿ ಮನೆಮದ್ದುಗಳು

ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ ಸೇವನೆಯಿಂದ ನಮಗೆ ಲಾಭವೇ ಹೆಚ್ಚು ಹೊರತು ನಷ್ಟವಲ್ಲ. ಇಂದು ನಾವು ಹೇಳಹೊರಟಿರುವ ಅಂತಹ ತರಕಾರಿ ಹಣ್ಣು ಲಿಂಬೆ ಹಣ್ಣಾಗಿದೆ. ಇದು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಆರೋಗ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ.ಲಿಂಬೆಯಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ.

ಪ್ರಾತಃ ಕಾಲದಲ್ಲಿ ಲಿಂಬೆ ಬೆರೆಸಿದ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಲಿಂಬೆ ಸತ್ವದ ನೀರು ಬ್ಯಾಕ್ಟಿರಿಯಾ ಮತ್ತು ವೈರಸ್ ವಿರುದ್ಧ ಹೋರಾಡುವ ಅಂಶಗಳನ್ನು ಒಳಗೊಂಡಿದೆ. ಲಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್, ಕ್ಯಾಲ್ಶಿಯಂ, ಮೆಗ್ನೇಶಿಯಂ, ವಿಟಮಿನ್ ಸಿ ಮತ್ತು ರೋಗದ ವಿರುದ್ಧ ಹೋರಾಡುವ ಸತ್ವಗಳನ್ನು ಒಳಗೊಂಡಿದೆ. ಶುದ್ಧವಾದ ಲಿಂಬೆನೀರಿನಿಂದ ಹಲವಾರು ಪ್ರಯೋಜನಗಳಿವೆ ಅದು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅನಿಯಮಿತ ಮುಟ್ಟು: ನಿಮ್ಮ ದೇಹ ಏನನ್ನು ಹೇಳುತ್ತದೆ?

ಜೀರ್ಣಕ್ರಿಯೆ:

ಜೀರ್ಣಕ್ರಿಯೆ:

ದೇಹದಲ್ಲಿರುವ ವಿಷಕಾರಿ ಅಂಶವನ್ನು ಲಿಂಬೆ ನಿರು ಹೊರಹಾಕುತ್ತದೆ. ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಕಂಡುಬರುವ ವಿಷಕಾರಿ ಅಂಶವನ್ನು ಹೋಗಲಾಡಿಸಲು ಲಿಂಬೆ ನೀರು ಅಗತ್ಯ. ಕ್ಯಾನ್ಸರ್ ರೋಗಿಗಳಲ್ಲಿ ಕರುಳಿನ ಚಲನೆಗಳು ಸುಧಾರಣೆಗೊಳ್ಳಲು ವೈದ್ಯರು ಲಿಂಬೆ ನೀರನ್ನು ಸೂಚಿಸುತ್ತಾರೆ.

ಸ್ವಚ್ಛಕಾರಿ:

ಸ್ವಚ್ಛಕಾರಿ:

ಮೂತ್ರವನ್ನು ನಿರ್ಬಂಧಿಸುವ ಅನಗತ್ಯ ಸಾಮಾಗ್ರಿಗಳು ಮತ್ತು ವಿಷಕಾರಿ ಅಂಶಗಳನ್ನು ಲಿಂಬೆ ನೀರು ಹೊರದೂಡುತ್ತದೆ. ಬೆಳಗ್ಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸುವುದು ದೇಹದಲ್ಲಿ ಮೂತ್ರವಿಸರ್ಜನೆಯನ್ನು ಹೆಚ್ಚು ಮಾಡುತ್ತದೆ.

ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಲಿಂಬೆ ವಿಟಮಿನ್ ಸಿ ಮತ್ತು ಪೊಟಾಶಿಯಂ ಸತ್ವಗಳಿಂದ ಕೂಡಿದ್ದು ಮೆದುಳು ಹಾಗೂ ನರ ರಚನೆಗಳನ್ನು ಸುದೃಢಗೊಳಿಸುತ್ತದೆ. ವಿಟಮಿನ್ ಸಿ ಯನ್ನು ಅಸ್ತಮಾ ಮತ್ತು ಇತರ ಉಸಿರಾಟ ತೊಂದರೆಗಳ ನಿವಾರಣೆಗೆ ಔಷಧವಾಗಿದೆ. ಲಿಂಬೆ ನೀರನ್ನು ನಿತ್ಯವೂ ಸೇವಿಸುವುದರಿಂದ ದೇಹದಲ್ಲಿರುವ ಏಸಿಡಿಟಿ ದೂರಾಗುತ್ತದೆ.

ಶುದ್ಧ ತ್ವಚೆ:

ಶುದ್ಧ ತ್ವಚೆ:

ತ್ವಚೆಯಲ್ಲಿರುವ ನೆರಿಗೆ ಮೊಡವೆಗಳನ್ನು ಹೋಗಲಾಡಿಸಲು ಲಿಂಬೆಯಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಯೋಕ್ಸಿಡೆಂಟ್ ಸಹಕಾರಿಯಾಗಿದೆ. ಇದು ತ್ವಚೆಯಲ್ಲಿರುವ ಕೊಳೆಯನ್ನು ಹೋಗಲಾಡಿಸಿ ತ್ವಚೆಯನ್ನು ಶುಭ್ರಗೊಳಿಸುತ್ತದೆ.

ನಿಮ್ಮ ಮೂಡ್ ಅನ್ನು ಸರಿಪಡಿಸುತ್ತದೆ:

ನಿಮ್ಮ ಮೂಡ್ ಅನ್ನು ಸರಿಪಡಿಸುತ್ತದೆ:

ನಿಮ್ಮ ಒತ್ತಡಗಳನ್ನು ದೂರಮಾಡುವ ಶಕ್ತಿ ಲಿಂಬೆ ನೀರಿಗಿದೆ ಎಂಬುದು ನಿಮಗೆ ತಿಳಿದಿದೆಯೇ? ಜೀರ್ಣಕ್ರಿಯೆಯನ್ನು ಸುಧಾರಿಸುವ ಅಂಶ ಲಿಂಬೆ ನೀರಿಗಿದೆ ಇದರಿಂದ ನಮ್ಮ ದೇಹಕ್ಕೆ ಶಕ್ತಿ ಉಂಟಾಗಿ ಮನಸ್ಸು ಪ್ರಫುಲ್ಲಗೊಳ್ಳುತ್ತದೆ.

ತೂಕ ಇಳಿಸಲು ಸಹಕಾರಿ:

ತೂಕ ಇಳಿಸಲು ಸಹಕಾರಿ:

ಲಿಂಬೆ ನೀರನ್ನು ಜೇನಿನೊಂದಿಗೆ ಮಿಶ್ರ ಮಾಡಿ ಮುಂಜಾನೆ ಖಾಲೀ ಹೊಟ್ಟೆಯಲ್ಲಿ ಸೇವಿಸುವುದರಿಂದ ತೂಕ ಇಳಿದು ಸುಂದರ ಕಾಯ ನಿಮ್ಮದಾಗುತ್ತದೆ.

English summary

Why you should drink Lemon water in the morning

There are lot of Health benefits of Lemon. The main preferable reason of lemon juice in the morning is it has rich in antibacterial, antiviral and immune boosting Power.
Please Wait while comments are loading...
Subscribe Newsletter