For Quick Alerts
ALLOW NOTIFICATIONS  
For Daily Alerts

ವಾರಂತ್ಯದ ಸಲಹೆ; ದೇಹದೊಳಗಿನ ಕಲ್ಮಶ ಹೊರಹಾಕುವ ಮನೆಮದ್ದುಗಳು

By Super Admin
|

ಶುದ್ಧ ಗಾಳಿ, ಅಪ್ಪಟ ಆಹಾರ ತಿನ್ನುವ ಕಾಲ ನಮ್ಮ ಹಿರಿಯರ ಕಾಲಕ್ಕೆ ಮುಗಿದಿದೆ. ಈಗ ನಾವು ಸೇವಿಸುತ್ತಿರುವುದೇನಿದ್ದರೂ ವಾಹನಗಳ ಹೊಗೆಯಿಂದ ಕಲುಶಿತಗೊಂಡ ಗಾಳಿ ಹಾಗೂ ವ್ಯಾಪಾರ ವೈಭವೀಕರಣದ ಭರದಲ್ಲಿ ಹಲವು ರಾಸಾಯನಿಕಗಳನ್ನು ಒಳಹೊರಗೆ ಅಂಟಿಸಿಕೊಂಡು ಸಿಗುತ್ತಿರುವ ಆಹಾರಗಳು. ನಾವು ಪ್ರತಿದಿನ ಉಣ್ಣುವ ಹಲವು ಆಹಾರಗಳ ಮೂಲಕ ಅನೈಚ್ಛಿಕವಾಗಿ ಹಲವು ನಂಜುಪದಾರ್ಥಗಳು ನಮ್ಮ ಹೊಟ್ಟೆ ಸೇರಿ ನಮಗರಿವಿಲ್ಲದಂತೆಯೇ ನಿಧಾನಕ್ಕೆ ನಮ್ಮ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ.

ಬದಲಾದ ಜೀವನ ಶೈಲಿಯೂ ಇದಕ್ಕೆ ಇನ್ನೊಂದು ಪರ್ಯಾಯ ಕಾರಣವಾಗಿದೆ. ಮದ್ಯಪಾನ, ತೂಕ ಇಳಿಸಲು ಅಥವಾ ಹೆಚ್ಚಿಸಲು ತೆಗೆದುಕೊಳ್ಳುವ ಔಷಧಿಗಳು, ಬೇರೆ ಯಾವುದೋ ಕಾರಣದಿಂದ ವೈದ್ಯರು ಕೊಟ್ಟ ಔಷಧಿಗಳ ಮೂಲಕವೂ ಹಲವು ವಿಷಕಾರಿ ವಸ್ತುಗಳು ನಮ್ಮ ಹೊಟ್ಟೆ ಸೇರುತ್ತಿವೆ.

ನಾವು ಸೇವಿಸುತ್ತಿರುವ ಗಾಳಿಯಲ್ಲೂ ಕಾರ್ಖಾನೆಗಳ ಹೊಗೆ, ಬೇರೆ ಪ್ರದೇಶದಿಂದ ತಂದು ನಮ್ಮ ನಾಡಿನಲ್ಲಿ ನೆಟ್ಟ ಮರಗಳ ಹೂವುಗಳ ಪರಾಗ (ಉದಾಹರಣೆಗೆ ಅಕೇಶಿಯಾ), ಧೂಮಪಾನಿಗಳು ಬಿಟ್ಟ ಹೊಗೆ ಮೊದಲಾದವು ನೆಲ ಮಟ್ಟದಲ್ಲಿಯೇ ಇರುವುದರಿಂದ ಶ್ವಾಸಸಂಬಂಧಿ ಕಾಯಿಲೆಗಳಿ ಆಹ್ವಾನ ನೀಡುತ್ತಿದ್ದೇವೆ. ಅಹಾರದಲ್ಲಿ ಬಣ್ಣ ಮತ್ತು ರುಚಿಗಾಗಿ ಸೇರಿಸುವ ಹಲವು ರಾಸಾಯನಿಕ ವಸ್ತುಗಳು (ಉದಾಹರಣೆಗೆ ಅಜಿನೋಮೋಟೋ) ನಮ್ಮ ಕರುಳುಗಳಲ್ಲಿ ಉಳಿದು ಕ್ಯಾನ್ಸರ್ ಗೆ ಆಹ್ವಾನ ನೀಡುತ್ತಿವೆ. ಕರುಳುಗಳಲ್ಲಿ ಸೇರಿರುವ ಕಲ್ಮಶ ಹೊರಹಾಕುವ ಮನೆಮದ್ದು

ನಮ್ಮ ದೇಹದಲ್ಲಿ ರಕ್ತ ಮತ್ತು ಜೀರ್ಣವಾದ ಆಹಾರವನ್ನು ಸೋಸಿ ಈ ವಿಷಗಳಿಂದ ರಕ್ಷಿಸುವ ಅಂಗಗಳೆಂದರೆ ಮೂತ್ರಪಿಂಡ (ಕಿಡ್ನಿ) ಮತ್ತು ದೊಡ್ಡಕರುಳು. ಆದರೆ ಈ ಅಂಗಗಳಿಗೂ ತಮ್ಮದೇ ಆದ ಮಿತಿ ಇದೆ. ಆ ಮಿತಿಗಿಂತ ಹೆಚ್ಚಾಗಿ ಕಾರ್ಯನಿರ್ವಹಿಸಲು ಒತ್ತಡ ಹೇರಿದಾಗ ಮೂತ್ರಪಿಂಡದಲ್ಲಿ ಕಲ್ಲುಗಳು, ದೊಡ್ಡಕರುಳಿನ ಕ್ಯಾನ್ಸರ್ ಮೊದಲಾದ ತೊಂದರೆಗಳು ಪ್ರಾರಂಭವಾಗುತ್ತವೆ. ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ನಮ್ಮ ಅಂಗಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಬದಲು ಮನೆಯಲ್ಲಿಯೇ ಅನುಸರಿಸಬಹುದಾದ ಸುಲಭ ವಿಧಾಗಳಿಂದ ದೇಹದ ನಂಜುಗಳನ್ನು ನಿವಾರಿಸಿ ಉತ್ತಮ ಆರೋಗ್ಯವನ್ನು ಪಡೆಯಬಹುದು.

ಲಿಂಬೆ

ಲಿಂಬೆ

ಲಿಂಬೆಹಣ್ಣಿನಲ್ಲಿ ಹೇರಳವಾದ ವಿಟಮಿನ್ ಸಿ ಹಾಗೂ ಸುಮಾರು ಶೇಖಡಾ ಆರರಷ್ಟು ಸಿಟ್ರಿಕ್ ಆಮ್ಲವಿದೆ. ಹೆಚ್ಚಿನ ನಂಜುಕಾರಕ ವಸ್ತುಗಳು ಕ್ಷಾರಯುಕ್ತ (alkali) ವಾದುದರಿಂದ ಆಮ್ಲದೊಡನೆ ಸಂಯೋಜನೆಗೊಂಡು ನೀರು ಮತ್ತು ಉಪ್ಪಿನಲ್ಲಿ ಪರಿವರ್ತಿತವಾಗುತ್ತವೆ. ಉಪ್ಪನ್ನು ಕಿಡ್ನಿಗಳು ಸೋಸಿ ಮೂತ್ರದ ಮೂಲಕ ದೇಹದಿಂದ ಹೊರಕಳಿಸುತ್ತದೆ. ಈ ಮೂಲಕ ದೇಹದ ಪಿಎಚ್ ಮಟ್ಟ (ಆಮ್ಲ-ಕ್ಷಾರ ದ ಅನುಪಾನ ನೀಡುವ ಕೋಷ್ಟಕ) ಸುಸ್ಥಿತಿಯಲ್ಲಿರಿಸಲು ಸಹಕರಿಸುತ್ತದೆ. ವಾರಕ್ಕೆ ಎರಡರಿಂದ ಮೂರು ಲಿಂಬೆಹಣ್ಣಿನ ರಸ ದೇಹಕ್ಕೆ ಅನುಕೂಲಕರ. ಅತಿ ಹೆಚ್ಚಿನ ಸೇವನೆ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಿಟ್ರಿಕ್ ಆಮ್ಲವನ್ನು ಶೇಖರಿಸುವುದರಿಂದ ದೇಹದಲ್ಲಿ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ, ಉದಾಹರಣೆಗೆ ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಕೆ

ಗೋಜಿ ಬೆರ್ರಿ ಹಣ್ಣುಗಳು

ಗೋಜಿ ಬೆರ್ರಿ ಹಣ್ಣುಗಳು

ಈ ಹಣ್ಣಿನಲ್ಲಿ ಕಬ್ಬಿಣ, ಬೀಟಾ ಕ್ಯಾರೋಟಿನ್ ಗಳು ಹೇರಳವಾಗಿರುವುದರಿಂದ ದೇಹದ ಕಲ್ಮಶಗಳನ್ನು ಹೊರಹಾಕಲು ಸಹಕರಿಸುವುದರ ಜೊತೆಗೆ ಕ್ಯಾನ್ಸರ್ ಹಾಗೂ ಹೃದಯಸಂಬಂಧಿ ಕಾಯಿಲೆಗಳಿಂದಲೂ ರಕ್ಷಣೆ ನೀಡುತ್ತದೆ.

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು

ದಾಳಿಂಬೆಯಲ್ಲಿ ಫ್ಲೇವನಾಯ್ಡ್ ಎಂಬ ಆಂಟಿ ಆಕ್ಸಿಡೆಂಟುಗಳು ಹೇರಳವಾಗಿರುವುದರಿಂದ ರಕ್ತದಲ್ಲಿ ಅಮ್ಮಜನಕದ ಸರಬರಾಜು ಉತ್ತಮಗೊಂಡು ದೇಹದ ನಂಜುಗಳನ್ನು ಯಶಸ್ವಿಯಾಗಿ ಹೊರಹಾಕಲು ಸಹಕರಿಸುತ್ತದೆ.

ವಿವಿಧ ಸೊಪ್ಪುಗಳು

ವಿವಿಧ ಸೊಪ್ಪುಗಳು

ನಮ್ಮ ಊಟದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಸೊಪ್ಪುಗಳನ್ನು ಅಳವಡಿಸಿಕೊಳ್ಳುವುದರಿಂದ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರಗದ ನಾರು ಲಭ್ಯವಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುವುದು ಮಾತ್ರವಲ್ಲದೇ ಮಲವಿಸರ್ಜನೆಯೂ ಸುಗಮವಾಗಿ ದೇಹದಿಂದ ವಿಷಕಾರಕ ವಸ್ತುಗಳು ಹೊರಹಾಕಿದಂತಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಗೆ ವಿಶಿಷ್ಟವಾದ ವಾಸನೆ ಹಾಗೂ ರುಚಿ ಬರಲು ಅದರಲ್ಲಿರುವ ಆಲಿಸಿನ್ (allicin) ಎಂಬ ಪೋಷಕಾಂಶ ಕಾರಣವಾಗಿದೆ. ಇದು ರಕ್ತದಲ್ಲಿ ಸೇರಿದ ಬಳಿಕ allyl thiosulfinate ಎಂಬ ರಸಾಯನಿಕವಾಗಿ ಪರಿವರ್ತಿತವಾಗುತ್ತದೆ. ಈ ರಸಾಯನಿಕ ರಕ್ತದಲ್ಲಿರುವ ಬ್ಯಾಕ್ಟೀರಿಯಾಗಳು ಹಾಗೂ ವೈರಸ್ಸುಗಳನ್ನು ಸದೆಬಡಿದು ದೇಹದ ಆರೋಗ್ಯ ಕಾಪಾಡಲು ನೆರವಾಗುತ್ತದೆ. ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಹೆಚ್ಚಳಗೊಂಡು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆದರೆ ಖಾಲಿಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿದರೆ ಸಣ್ಣಕರುಳಿನೊಳಗೆ ಹುಣ್ಣುಗಳಾಗುವ ಸಾಧ್ಯತೆ ಇರುವುದರಿಂದ ಊಟದ ಬಳಿಕ ಮೂರು ನಾಲ್ಕು ಬೆಳ್ಳುಳ್ಳಿಯ ಹಸಿ ಎಸಳುಗಳನ್ನು ಸೇವಿಸುವುದು ಒಳಿತು.

ಅಗಸೆ ಬೀಜ (Flax seeds)

ಅಗಸೆ ಬೀಜ (Flax seeds)

ಅಗಸೆ ಬೀಜದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಮ್ಯಾಂಗನೀಸ್ ಹಾಗೂ ಕರಗದ ನಾರು ದೇಹದಲ್ಲಿ ನೈಸರ್ಗಿಕ ನಂಜಿನಿವಾರಕವಾಗಿ ಕಾರ್ಯನಿರ್ವಹಿಸುತ್ತವೆ. ವಾರಕ್ಕೊಂದು ಹೊತ್ತು ಅಗಸೆಬೀಜದ ವ್ಯಂಜನದ ಸೇವನೆ ಆರೋಗ್ಯಕ್ಕೆ ಪೂರಕವಾಗಿದೆ.

ಕಂದು ಅಕ್ಕಿ ಅಥವಾ ಕುಚ್ಚಲಕ್ಕಿ

ಕಂದು ಅಕ್ಕಿ ಅಥವಾ ಕುಚ್ಚಲಕ್ಕಿ

ಬೇಯಲು ಸುಮಾರು ಮುಕ್ಕಾಲು ಘಂಟೆಗೂ ಹೆಚ್ಚು ಕಾಲ ತೆಗೆದುಕೊಳ್ಳುವ ಕುಚ್ಚಲಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಬಿ, ಪ್ರೋಟೀನು ಹಾಗೂ ಮ್ಯಾಂಗನೀಸ್ ಇದೆ. ವಾರದಲ್ಲಿ ಒಂದು ಅಥವಾ ಎರಡು ಹೊತ್ತು ಕುಚ್ಚಿಗೆ ಅಕ್ಕಿಯ ಊಟ ಮಾಡುವುದರಿಂದ ಶರೀರದ ನಂಜುಗಳನ್ನು ಹೊರಹಾಕಲು ನೆರವಾಗುತ್ತದೆ.

ಅಕ್ರೋಟು (Walnut)

ಅಕ್ರೋಟು (Walnut)

ಅಕ್ರೋಟಿನಲ್ಲಿ ಮೆಲಟೋನಿನ್, ಎಲಾಜಿಕ್ ಆಸಿಡ್ ಮತ್ತು ವಿಟಮಿನ್ ಇ ಗಳು ಹೇರಳವಾಗಿದ್ದು ಆಹಾರದಲ್ಲಿರುವ ನಂಜುಗಳನ್ನು ನಿವಾರಿಸಲು ನೆರವಾಗುತ್ತವೆ.

ಅರಿಶಿನ

ಅರಿಶಿನ

ಕರುಳಿನಲ್ಲಿ ಶೇಖರವಾಗಿರುವ ನಂಜುಗಳನ್ನು ಹೊರಹಾಕಲು ಅರಿಶಿನ ಸಹಕಾರಿಯಾಗಿದೆ. ಇದರಲ್ಲಿರುವ curcumin ಎಂಬ ಪದಾರ್ಥ ಉತ್ತಮ ಉರಿಯೂತ ತಡೆಯುವ ಪೋಷಕಾಂಶವಾಗಿದ್ದು ದೇಹದಲ್ಲಿರುವ ವೈರಸ್ಸುಗಳಿಂದ ರಕ್ಷಣೆ ಒದಗಿಸುತ್ತದೆ.

ದೊಡ್ಡ ಜೀರಿಗೆ (Fennel seeds)

ದೊಡ್ಡ ಜೀರಿಗೆ (Fennel seeds)

ಸಾಧಾರಣವಾಗಿ ಎಲ್ಲಾ ಹೋಟೆಲುಗಳಲ್ಲಿ ಊಟದ ಬಳಿಕ ತಿನ್ನಲು ನೀಡುವ ದೊಡ್ಡ ಜೀರಿಗೆಯಲ್ಲಿ ಉತ್ತಮ ಪ್ರಮಾಣದಲ್ಲಿ ಕರಗದ ನಾರು ಹಾಗೂ ಆಹಾರದ ಪಚನಕ್ಕೆ ಸಹಕಾರಿಯಾದ ಹಲವು ಪೋಷಕಾಂಶಗಳಿವೆ. ಊಟದ ಬಳಿಕದ ಸೇವನೆಯಿಂದ ಮೂತ್ರಶೇಖರಣೆ ತ್ವರಿತವಾಗಿ ಜರುಗಿ ದೇಹದಿಂದ ವಿಷಕಾರಿ ವಸ್ತುಗಳು ವಿಸರ್ಜಿಸಲ್ಪಡಲು ಸಹಕರಿಸುತ್ತದೆ.

ಸೇಬು ಹಣ್ಣು

ಸೇಬು ಹಣ್ಣು

ಸೇಬು ಎಂದಾಕ್ಷಣ ದಿನಕ್ಕೊಂದು ಸೇಬು ವೈದ್ಯರನ್ನು ದೂರವಿರಿಸುವುದು ಎಂಬ ನಾಣ್ಣುಡಿ ನೆನಪಿಗೆ ಬರುತ್ತದೆ. ವಾರಾಂತ್ಯದಲ್ಲಿ ಒಂದೆರಡು ಸೇಬು ಹಣ್ಣುಗಳನ್ನು ಸಿಪ್ಪೆ ಸಹಿತವಾಗಿ ತಿನ್ನುವುದರಿಂದ ಯಕೃತ್ತು ಮತ್ತು ಮೂತ್ರಪಿಂಡಗಳ ಕಾರ್ಯವಿಧಾನದಲ್ಲಿ ಹೆಚ್ಚಳವಾಗಿ ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ.

ಚಕ್ಕೋತ ಹಣ್ಣು (Grapefruit)

ಚಕ್ಕೋತ ಹಣ್ಣು (Grapefruit)

ಚಕ್ಕೋತ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇರುವ ಕಾರಣ ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಕಾರಿಯಾಗಿದೆ. ಇದರಲ್ಲಿರುವ ಲೈಕೋಪಿನ್ (Lycopene) ಎಂಬ ಪೋಷಕಾಂಶ ದೇಹದಲ್ಲಿ ಗಡ್ಡೆಗಳಾಗದಂತೆ ತಡೆಯುತ್ತದೆ. ಆದರೆ ಇದು ಬಿಳಿ ಚಕ್ಕೋತದಲ್ಲಿರಿದರೆ ಕೆಂಪು ಮತ್ತು ಗುಲಾಬಿ ಚಕ್ಕೋತದಲ್ಲಿ ಮಾತ್ರ ಕಂಡುಬರುತ್ತದೆ.

ಈರುಳ್ಳಿ

ಈರುಳ್ಳಿ

ಸಾಧಾರಣವಾಗಿ ಎಲ್ಲಾ ಅಡುಗೆಗಳಲ್ಲಿ ಈರುಳ್ಳಿಯನ್ನು ಬಳಸಿದರೂ ಹಸಿಯಾಗಿ ಈರುಳ್ಳಿಯನ್ನು ತಿನ್ನುವುದು ಕಡಿಮೆ. ಹಸಿ ನೀರುಳ್ಳಿಯಲ್ಲಿರುವ ಗಂಧಕಯುಕ್ತ ಅಮೈನೋ ಆಮ್ಲಗಳು ಜೀರ್ಣಕ್ರಿಯೆಯನ್ನು ಪ್ರಚೋದಿಸಿ ವಿಷಕಾರಿ ವಸ್ತುಗಳನ್ನು ದೇಹದಿಂದ ಹೊರಹಾಕಲು ನೆರವಾಗುತ್ತವೆ.

ಎಲೆಕೋಸು

ಎಲೆಕೋಸು

ಎಲೆಕೋಸಿನಲ್ಲಿ glucosinolates ಎಂಬ ಪೋಷಕಾಂಶ, ಗಂಧಕ, ವಿಟಮಿನ್ ಸಿ ಮತ್ತು ಅಯೋಡಿನ್ ಆಹಾರದ ಜೀರ್ಣಕ್ರಿಯೆ ಸರಾಗವಾಗಿ ಆಗಲು ನೆರವಾಗುತ್ತವೆ. ಆದರೆ ಬಿಸಿತಾಗಿದಾಕ್ಷಣ glucosinolates ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುವುದರಿಂದ ಹಸಿಯಾಗಿ ಸಾಲಾಡ್ ಜೊತೆ ಕೋಸನ್ನು ಸೇವಿಸುವುದು ಉತ್ತಮ.

ಬೀಟ್ ರೂಟ್

ಬೀಟ್ ರೂಟ್

ತರಕಾರಿಗಳಲ್ಲೇ ಅತಿ ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ ಬೀಟ್ರೂಟ್ ನಲ್ಲಿ ವಿವಿಧ ವಿಟಮಿನ್ ಗಳು, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟುಗಳಿವೆ. ಇದರಲ್ಲಿರುವ betacyanin ಎಂಬ ಕಿಣ್ವ ಬೀಟ್ ರೂಟ್ ನಲ್ಲಿರುವ ಗಾಢರಕ್ತವರ್ಣಕ್ಕೆ ಕಾರಣವಾಗಿದ್ದು ರಕ್ತದಲ್ಲಿ ಸೇರಿದ ಬಳಿಕ ಬ್ಯಾಕ್ಟೀರಿಯಾಗಳ ವಿರುದ್ಧ ಸೆಣೆಸಿ ನಂಜು ಹೊರಹಾಕಲು ಸಹಕರಿಸುತ್ತದೆ.

ಕುಂಬಳ ಬೀಜಗಳು

ಕುಂಬಳ ಬೀಜಗಳು

ಕುಂಬಳಕಾಯಿಯ ಬೀಜಗಳನ್ನು ಒಣಗಿಸಿ ಸಿಪ್ಪೆ ಸುಲಿದು ತಿನ್ನುವುದರಿಂದ ದೇಹದ ನಂಜುವಸ್ತುಗಳ ವಿಸರ್ಜನೆಗೆ ಉತ್ತಮವಾಗಿದೆ. ಈ ಬೀಜಗಳಲ್ಲಿರುವ ಉತ್ತಮ ಪ್ರಮಾಣದ ಓಲಿಕ್ ಆಮ್ಲ (oleic acid) ರಕ್ತದಲ್ಲಿರುವ ಕೆಟ್ಟ ಕೊಲೆಸ್ಟರಾಲ್ ಅನ್ನು ತೊಲಗಿಸಿ ಉತ್ತಮ ಕೊಲೆಸ್ಟರಾಲ್ ಹೆಚ್ಚಿಸಲು ನೆರವಾಗುತ್ತದೆ. ವಾರಾಂತ್ಯದಲ್ಲಿ ಸಿನೆಮಾ ನೋಡುವಾಗ ಪಾಪ್ ಕಾರ್ನ್ ಬದಲಿಗೆ ಕುಂಬಳದ ಬೀಜಗಳನ್ನು ತಿನ್ನುವುದು ಉತ್ತಮ. ಆದರೆ ಹೆಚ್ಚು ಹೊತ್ತು ಬಾಯಿಯಲ್ಲಿದ್ದರೆ ಕೆನ್ನೆ ಮತ್ತು ತುಟಿಗಳ ಒಳಭಾಗಗಳಲ್ಲಿ ಹುಣ್ಣಾಗುವ ಸಂಭವವಿರುವುದರಿಂದ (Oral aphthae *೨) ಬೇಗನೇ ನುಂಗಿಬಿಡುವುದು ಒಳ್ಳೆಯದು.

English summary

Weekend Detox Diet To Cleanse Your Body

We have something much better for you this weekend than just you heading to the clubs and binging on those tasty high calorie snacks and colourful cocktails. These are the two main organs involved in the detoxification of chemicals and toxins from the body.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more