For Quick Alerts
ALLOW NOTIFICATIONS  
For Daily Alerts

ಮಲೇರಿಯಾ ರೋಗ ನಿಯಂತ್ರಣಕ್ಕೆ ಸೂಕ್ತ ಸಲಹೆಗಳು

|

ಮಳೆಗಾಲದಲ್ಲಿ ನೀವು ಆಗಾಗ್ಗೆ ಕಾಯಿಲೆಗೆ ತುತ್ತಾಗುತ್ತೀದ್ದೀರಾ? ಮಳೆಗಾಲವು ತನ್ನೊಂದಿಗೆ ಇಳೆಗೆ ತಂಪನ್ನು ತರುವುದರ ಜೊತೆಗೆ ಕೆಲವೊಂದು ಕಾಯಿಲೆಗಳನ್ನು ತರುತ್ತದೆ ಎಂಬುದು ಸಾಮಾನ್ಯ ಸಂಗತಿ.

ಬೇಸಿಗೆಯ ಬೇಗೆಯನ್ನು ಸಹಿಸಿ ಒಮ್ಮೆ ಮಳೆ ಬಂದರೆ ಸಾಕು ಎಂಬ ನಿರೀಕ್ಷೆಯೊಂದಿಗೆ ಜಾತಕ ಪಕ್ಷಿಯಂತೆ ಕಾದು ಮಳೆರಾಯನನ್ನು ಸ್ವಾಗತಿಸುತ್ತೇವೆ. ಆದರೆ ಮಳೆಗಾದಲ್ಲಿ ಸಾಮಾನ್ಯ ಕಾಯಿಲೆಗಳಾದ ಶೀತ, ಜ್ವರ, ತಲೆನೋವಿನಿಂದ ಹಿಡಿದು ದೊಡ್ಡ ರೋಗಗಳಾದ ಮಲೇರಿಯಾ, ಡೆಂಗ್ಯೂ ಕೆಲವೊಂದು ಮಾರಕ ಭಯಾನಕ ರೋಗಗಳು ಸಾಮಾನ್ಯವಾಗಿ ಕಂಡುಬರುತ್ತಿರುತ್ತದೆ.

ಮಳೆಗಾಲದಲ್ಲಿ ಕಂಡುಬರುವ ಕೆಲವೊಂದು ಕಾಯಿಲೆಗಳಾದ ಜೀರ್ಣಕ್ರಿಯೆ ಸಮಸ್ಯೆಗಳು, ಆಹಾರ ಕಲುಷಿತಗೊಳ್ಳುವಿಕೆ, ಭೇದಿ, ಟೈಫಾಯಿಡ್, ಜ್ವರ, ಕೆಮ್ಮು, ಶೀತ, ವೈರಲ್ ಜ್ವರ, ಗಂಟಲು ನೋವು, ಅತಿಸಾರವನ್ನು ಮಳೆಗಾಲ ಒಳಗೊಂಡಿರುತ್ತದೆ. ಈ ಕಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಯಿಲೆ ಎಂದರೆ ಮಲೇರಿಯಾ ಆಗಿದೆ. ವರ್ಷ ಪೂರ್ತಿ ಮಳೆಗಾಲ ಕಾಡುವಂತಹ ರೋಗವಾಗಿದೆ. ಆದರೆ ಮಳೆಗಾಲದಲ್ಲಿ ಈ ರೋಗವನ್ನು ಹೆಚ್ಚು ಊಹಿಸಬಹುದಾಗಿದೆ.

ಭಾರೀ ಮಳೆ ಮತ್ತು ನಿಂತ ಕಲುಷಿತ ನೀರು ಸೊಳ್ಳೆಗಳ ಬೆಳವಣಿಗೆಗೆ ಉತ್ತಮ ವೇದಿಕೆಯನ್ನು ಏರ್ಪಡಿಸುತ್ತವೆ. ಇದು ಮಲೇರಿಯಾಗೆ ಕಾರಣವಾಗುತ್ತದೆ. ಮಲೇರಿಯಾ ಸೋಂಕುಳ್ಳ ಸೊಳ್ಳೆಯ ಕಡಿತದಿಂದ ಉಂಟಾಗುವ ರೋಗವಾಗಿದ್ದು ಸೋಂಕಿತ ಸೊಳ್ಳೆಯು ಕಚ್ಚುವುದದಿಂದ ಈ ರೋಗ ಉಂಟಾಗುತ್ತದೆ.

ಸೊಳ್ಳೆಯು ಪ್ಲಾಸ್ಲೋಡಿಯಮ್ ಪ್ಯಾರಾಸೈಟ್ ಸೋಂಕನ್ನು ಕೆಂಪು ರಕ್ತ ಕಣದಲ್ಲಿ ಬೆಳೆಸುತ್ತದೆ ಇದರಿಂದ ಪರಿಸ್ಥಿತಿ ಇನ್ನೂ ಹದಗೆಡುತ್ತದೆ. ಮಲೇರಿಯಾ ನೇರವಾಗಿ ರೋಗವನ್ನು ಹರಡದೆ, ರೋಗವಾಹಕ ಸೋಂಕುಕಾರಕಗಳ ಮೂಲಕ ಈ ರೋಗವು ಹರಡುತ್ತದೆ. ಹೆಚ್ಚಾಗಿ ಮಲೇರಿಯಾ ಅನಾಫಿಲೀಸ್‌ ಸೊಳ್ಳೆಗಳ ಮೂಲಕ

ಹರಡುತ್ತವೆ. ಪರೋಪಜೀವಿಗಳು ರಕ್ತದಲ್ಲಿ ಸೋಂಕನ್ನು ಉಂಟುಮಾಡಿ, ಕೆಂಪು ರಕ್ತಕಣದಲ್ಲಿ ದ್ವಿಗುಣಗೊಂಡು, ರಕ್ತಹೀನತೆಯೇ ಮೊದಲಾದ (ತಲೆ ಭಾರವಾಗುವುದು, ಉಸಿರು ಕಟ್ಟುವುದು, ಹೃದಯ ತೀವ್ರವಾಗಿ ಬಡಿದುಕೊಳ್ಳುವುದು ಇತ್ಯಾದಿ) ಮಲೇರಿಯಾ ರೋಗ ಲಕ್ಷಣಗಳನ್ನು ಉಂಟುಮಾಡುತ್ತವೆ.

ಸೊಳ್ಳೆಯ ಸಾಮರ್ಥ್ಯವನ್ನು ನಿರ್ಲಕ್ಷಿಸಿದರೆ ಜೋಕೆ!

ರೋಗಕ್ಕೆ ಸೂಕ್ತವಾದ ಮದ್ದನ್ನು ಆರೈಕೆಯನ್ನು ಮಾಡಿಲ್ಲದಿದ್ದಲ್ಲಿ ಇದು ಉಲ್ಬಣಗೊಳ್ಳುತ್ತದೆ. ಒಟ್ಟಾರೆ ನಾಲ್ಕು ಬಗೆಯ ಮಲೇರಿಯಾ ಪರಾವಲಂಬಿಗಳಿದ್ದು ಅವುಗಳೆಂದರೆ ಪ್ಲಾಸ್ಮೋಡಿಯಮ್ ಫಾಲ್ಸೀಪಾರುಮ್, ವಿವಾಕ್ಸ್, ಪಿ. ಒವಾಲೆ, ಮತ್ತು ಪಿ. ಮಲೇರಿಯಾ ಆಗಿದೆ. ಈ ಮಾರಣಾಂತಿಕ ರೋಗದ ಲಕ್ಷಣಗಳೆಂದರೆ ಜ್ವರ, ಚಳಿ, ವಾಂತಿ, ವಾಕರಿಕೆ, ಮೈಕೈ ನೋವು, ತಲೆನೋವು, ಕೆಮ್ಮು ಮತ್ತು ಭೇದಿಯಾಗಿದೆ.

ಇದಕ್ಕೆ ಸೂಕ್ತ ಔಷಧೋಪಚಾರವನ್ನು ಮಾಡದೇ ಹಾಗೆಯೇ ಬಿಟ್ಟರೆ ಇದು ರಕ್ತಹೀನತೆ, ಕಾಮಾಲೆ, ನಿರ್ಜಲೀಕರಣ, ಮೆದುಳಿನ ಮಲೇರಿಯಾ, ಯಕೃತ್ತಿನ ವೈಫಲ್ಯ ಮತ್ತು ಕಿಡ್ನಿ ವೈಫಲ್ಯದಂತಹ ಸಮಸ್ಯೆಗಳನ್ನು ತಂದೊಡ್ಡಬಹುದು. ಹಾಗಿದ್ದರೆ ಈ ರೋಗ ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಹೇಗೆ ಎಂಬುದನ್ನು ಕೂಡ ಈ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಆ ಅಂಶಗಳನ್ನು ತಿಳಿದುಕೊಳ್ಳಿ.

ನೀರು ಕುಡಿಯುತ್ತಿರಿ

ನೀರು ಕುಡಿಯುತ್ತಿರಿ

ಮಳೆಗಾಲದ ಸಮಯದಲ್ಲಿ ಪೂರ್ತಿಯಾಗಿ ನೀರನ್ನು ಕುಡಿದು ಆರೋಗ್ಯವಾಗಿರುವುದು ಒಂದು ನೈಸರ್ಗಿಕ ಪರಿಹಾರವಾಗಿದೆ. ನಿಮ್ಮ ನೀರಿನ ಬಾಟಲನ್ನು ಯಾವಾಗಲೂ ನಿಮ್ಮ ಜೊತೆಯೇ ಇಟ್ಟುಕೊಳ್ಳಿ ಇದರಿಂದ ನಿರ್ಜಲೀಕರಣದ ಸಮಸ್ಯೆ ನಿಮ್ಮಿಂದ ದೂರವಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸದೇ ಇರುವುದರಿಂದ ನಿಮ್ಮ ದೇಹಕ್ಕೆ ಶಾಖವನ್ನು ಹೊರಕ್ಕೆ ಹಾಕುವ ಶಕ್ತಿ ಇಲ್ಲದೇ ಹೋಗಬಹುದು ಮತ್ತು ದೇಹವು ನಿರ್ಜಲೀಕರಣದಿಂದ ಬಾಡಬಹುದು. ನೀವು ಹೊರಗಡೆ ಇದ್ದಾಗ ಹಣ್ಣಿನ ರಸ, ಅಥವಾ ಎಳನೀರನ್ನು ಸೇವಿಸುವುದನ್ನು ಮರೆಯದಿರಿ.

ಹೊರಗೆ ಹೋಗುವುದನ್ನು ಕಡಿಮೆ ಮಾಡಿ

ಹೊರಗೆ ಹೋಗುವುದನ್ನು ಕಡಿಮೆ ಮಾಡಿ

ಹೆಚ್ಚಿನ ಕೊಳಕು ಮತ್ತು ಕೊಚ್ಚೆ ಪ್ರದೇಶದಲ್ಲಿ ಅಡ್ಡಾಡುವುದನ್ನು ಕಡಿಮೆ ಮಾಡಿ. ಇಂತಹ ಸ್ಥಳಗಳು ಸೊಳ್ಳೆಗಳ ಆವಾಸ ಸ್ಥಾನವಾಗಿರುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ. ಸಂಜೆಯ ನಂತರ ಹೊರಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ.

ಗಾಢ ಬಣ್ಣಗಳನ್ನು ಬಳಸದಿರಿ

ಗಾಢ ಬಣ್ಣಗಳನ್ನು ಬಳಸದಿರಿ

ಮಂದ ಬಣ್ಣದ ಉಡುಗೆಗಳನ್ನು ಧರಿಸುವುದರಿಂದ ಸೊಳ್ಳೆಗಳನ್ನು ನಿಮ್ಮಿಂದ ದೂರ ಇರಿಸಬಹುದಾಗಿದೆ. ಇದು ಮಲೇರಿಯಾದಿಂದ ನಿಮ್ಮನ್ನು ಕಾಪಾಡಿಕೊಳ್ಳುವ ಸ್ವಾಭಾವಿಕ ಮಾರ್ಗವಾಗಿದೆ. ನೀವು ಗಾಢ ವರ್ಣದ ಧಿರಿಸುಗಳನ್ನು ಧರಿಸಿದಾಗ ಸೊಳ್ಳೆಯು ಆಕರ್ಷಿತಗೊಂಡು ನಿಮ್ಮನ್ನು ಸಮೀಪಿಸುತ್ತದೆ ಆದ್ದರಿಂದ ಆದಷ್ಟು ಗಾಢ ವರ್ಣದ ಬಟ್ಟೆಗಳನ್ನು ಬಳಸದಿರಿ.

ಸೊಳ್ಳೆ ಪರದೆಗಳು

ಸೊಳ್ಳೆ ಪರದೆಗಳು

ಸೊಳ್ಳೆಗಳನ್ನು ಸ್ವಾಭಾವಿಕವಾಗಿ ದೂರಮಾಡಲು ಇರುವ ಒಂದು ವಿಧಾನವೆಂದರೆ ಸೊಳ್ಳೆ ಪರದೆಗಳಾಗಿವೆ. ನಿಮ್ಮ ಮನೆಯ ಕಿಟಕಿಗಳಿಗೆ ನೆಟ್, ಫೈಬರ್ ಗ್ಲಾಸ್‌ಗಳು ಅಥವಾ ಮೆಶ್ ಅನ್ನು ಅಳವಡಿಸಿ. ಅಯಸ್ಕಾಂತದ ಅಂಶವಿರುವ ಪರದೆಗಳನ್ನು ನಿಮ್ಮ ಮನೆಯ ಕಿಟಕಿಗಳಿಗೆ ಅಳವಡಿಸುವ ಮೂಲಕ ಕೂಡ ಸೊಳ್ಳೆಗಳನ್ನು ನಿಯಂತ್ರಿಸಬಹುದಾಗಿದೆ. ನಿಮ್ಮ ಹಾಸಿಗೆಯ ಸುತ್ತಲೂ ಸೊಳ್ಳೆ ಪರದೆಯನ್ನು ಬಳಸುವುದೂ ಕೂಡ ಸೂಕ್ತ ಉಪಾಯವಾಗಿದೆ.

ತಂಪಿನ ವಾತಾವರಣದಲ್ಲಿ ಇರುವುದು

ತಂಪಿನ ವಾತಾವರಣದಲ್ಲಿ ಇರುವುದು

ಹವಾನಿಯಂತ್ರಿತ ಕೋಣೆಗಳಲ್ಲಿ ಇರುವುದೂ ಕೂಡ ಸೊಳ್ಳೆಗಳನ್ನು ನಿಮ್ಮಿಂದ ದೂರ ಇರಿಸುತ್ತದೆ. ಸೊಳ್ಳೆಗಳು ತಂಪಿನ ವಾತಾವರಣದಲ್ಲಿ ಇರುವುದಿಲ್ಲ ಆದ್ದರಿಂದ ನೀವಿರುವ ಜಾಗವನ್ನು ಆದಷ್ಟೂ ತಂಪಾಗಿರುವಂತೆ ನೋಡಿಕೊಳ್ಳಿ.

ಸಿಟ್ರೋನಲ್ಲಾ ಎಣ್ಣೆಯುಕ್ತ ಕ್ರೀಮ್‌ಗಳು

ಸಿಟ್ರೋನಲ್ಲಾ ಎಣ್ಣೆಯುಕ್ತ ಕ್ರೀಮ್‌ಗಳು

ಪೂರ್ಣವಾಗಿ ನಿಮ್ಮ ದೇಹವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದು ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ದೇಹಕ್ಕೆ ಸಿಟ್ರೋನಲ್ಲಾ ಇರುವ ಎಣ್ಣೆ ಅಂಶದ ಕ್ರೀಮ್ ಅನ್ನು ಹಚ್ಚಿಕೊಳ್ಳಿ. ಇದನ್ನು ನೀರಿಗೆ ಬೆರೆಸಿಕೊಂಡು ಮನೆಯ ನೆಲವನ್ನು ಒರೆಸಿ ಇದರಿಂದ ಸೊಳ್ಳೆಗಳು ದೂರ ಇರುತ್ತವೆ. ಸಂಜೆಯ ಸಮಯದಲ್ಲಿ ಸೊಳ್ಳೆಯ ಕಡಿತ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಆದಷ್ಟು ದೇಹವನ್ನು ಬಟ್ಟೆಗಳಿಂದ ಮುಚ್ಚಿಕೊಳ್ಳಿ.

English summary

Ways To Prevent Malaria During Monsoons

Do you often feel unwell during the monsoon season? It is common knowledge that monsoon brings with it a host of illnesses. Most of us look forward to the monsoon season after the blistering heat of summer, Here are a few tips for natural malaria prevention.
Story first published: Tuesday, August 5, 2014, 13:51 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more