ಬೆಳಗಿನ ಉಪಹಾರದಲ್ಲಿ ಮಾಡಬಾರದ 9 ತಪ್ಪುಗಳು

By: Arpitha Rao
Subscribe to Boldsky

ಬೆಳಗ್ಗಿನ ತಿಂಡಿಯನ್ನು ಸಾಕಷ್ಟು ಜನ ಸ್ಕಿಪ್ ಮಾಡಿಬಿಡುತ್ತಾರೆ.ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿಯೋ ಇನ್ನಾವುದೋ ಕಾರಣಕ್ಕೆ ತಿಂಡಿ ತಿನ್ನುವುದು ಸಾಧ್ಯವಾಗದಿರಬಹುದು ಆದರೆ ಇದರಿಂದ ಸಾಕಷ್ಟು ತೊಂದರೆಗಳು ಕಾಣಿಸಿಕೊಳ್ಳುತ್ತದೆ.ಅರೋಗ್ಯ ಹದಗೆಡಲು ಇದು ಕೂಡ ಒಂದು ಕಾರಣವಿರಬಹುದು.ಪ್ರತಿದಿನ ಬೆಳಗ್ಗೆ ತಿಂಡಿ ತಿನ್ನುವುದು ರೂಡಿಸಿಕೊಂಡಲ್ಲಿ ಈ ರೀತಿಯ ಸಮಸ್ಯೆಗಳಿಂದ ದೂರವಿರಬಹುದು.

ಬೆಳಗ್ಗಿನ ತಿಂಡಿ ತಿನ್ನುವುದು ದಿನದ ಪ್ರಾರಂಭಕ್ಕೆ ಮತ್ತು ಆರೋಗ್ಯವಾಗಿರಲು ಬಹಳ ಮುಖ್ಯವಾಗುತ್ತದೆ.ಆದರೆ ಸಾಕಷ್ಟು ಜನರು ಬೆಳಗಿನ ತಿಂಡಿಯನ್ನು ತಿನ್ನದೇ ಇರುವುದರಿಂದ ತೂಕವನ್ನು ಕಳೆದುಕೊಳ್ಳಬಹುದು ಎಂಬ ತಪ್ಪು ತಿಳುವಳಿಕೆಯನ್ನು ಹೊಂದಿರುತ್ತಾರೆ.

ನೊಂದಾಯಿತ ಆಹಾರ ಪದ್ಧತಿ ಮತ್ತು ಆಹಾರ ಬ್ಲಾಗರ್ ಆಗಿರುವ ಆಕಾಂಕ್ಷಾ ಝಾಲಾನಿ ದಿನದ ಪ್ರಮುಖ ಭಾಗವಾಗಿರುವ ಬೆಳಗ್ಗಿನ ತಿಂಡಿಯ ಬಗ್ಗೆ ಇರುವ ಕೆಲವು ತಪ್ಪು ತಿಳುವಳಿಕೆಗಳ ಬಗ್ಗೆ ತಿಳಿಸಿ ಬೆಳಗ್ಗಿನ ತಿಂಡಿಯನ್ನು ತಪ್ಪದೇ ಸೇವಿಸಬೇಕು ಮತ್ತು ಹೇಗೆ ಅದನ್ನು ಆನಂದಿಸಬೇಕು ಎಂಬುದನ್ನು ತಿಳಿಸುತ್ತಾರೆ.ಅದರ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

ಸಾಮಾನ್ಯವಾಗಿ ಮಾಡುವ ತಪ್ಪುಗಳು:

ಸಾಮಾನ್ಯವಾಗಿ ಮಾಡುವ ತಪ್ಪುಗಳು:

1.ಕಿತ್ತಳೆ ಹಣ್ಣಿನಲ್ಲಿ ವಿಟಮಿನ್,ಖನಿಜಾಂಶ ಮತ್ತು ನಾರಿನಂಶಗಳಿರುತ್ತವೆ ಆದರೆ ಅದನ್ನು ಬ್ಲೆಂಡರ್ ನಲ್ಲಿ ಹಾಕಿ ಜ್ಯೂಸ್ ಮಾಡಲು ಬಳಸಿದಾಗ ಈ ಅಂಶಗಳನ್ನೆಲ್ಲ ಕಳೆದುಕೊಳ್ಳುತ್ತವೆ ಎಂದು ತಿಳಿಸುತ್ತಾರೆ.ಆದ್ದರಿಂದ ನೀವು ಒಂದು ಲೋಟ ನೀರನ್ನು ಕುಡಿದು ಹಣ್ಣು ತಿನ್ನುವುದು ಒಳಿತು ಇದರಿಂದ ಅರೋಗ್ಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ಸಾಮಾನ್ಯವಾಗಿ ಮಾಡುವ ತಪ್ಪುಗಳು:

ಸಾಮಾನ್ಯವಾಗಿ ಮಾಡುವ ತಪ್ಪುಗಳು:

2.ಸಣ್ಣ ಪ್ರಮಾಣದಲ್ಲಿ ತಿಂಡಿ ತಿನ್ನುವುದು ಅಥವಾ ಏನಾದರೊಂದು ತಿನ್ನುವುದು ಇದರಿಂದ ನಿಮ್ಮ ಕ್ಯಾಲೋರಿ ಕಡಿಮೆ ಆಗಲಾರದು.ಉಪವಾಸ ಮಾಡಿ ನಂತರ ಮನಸ್ಸಿಗೆ ಇಷ್ಟವಾದ ಏನನ್ನಾದರೂ ತಿನ್ನಬಹುದು ಇದರಿಂದ ಕ್ಯಾಲೋರಿ ಹೆಚ್ಚುವುದಿಲ್ಲ ಎಂಬುದು ತಪ್ಪು ತಿಳುವಳಿಕೆ.ಎಣ್ಣೆಯುಕ್ತ ಪರೋಟ,ಉಳಿದ ತಂಗಳು ಪದಾರ್ಥ ಇವುಗ್ಲಳನ್ನು ತಿನ್ನುವುದರಿಂದ ಕ್ಯಾಲೋರಿ ಹೆಚ್ಚುತ್ತದೆ.

ಸಾಮಾನ್ಯವಾಗಿ ಮಾಡುವ ತಪ್ಪುಗಳು:

ಸಾಮಾನ್ಯವಾಗಿ ಮಾಡುವ ತಪ್ಪುಗಳು:

3.ಬೆಳಗ್ಗಿನ ತಿಂಡಿಗೆ ಡೋನಟ್ ಅಥವಾ ಮಫ್ಫಿನ್ ನೋಡಿದಾಗ ನಿಮಗೆ ಆಸೆ ಹೆಚ್ಚಬಹುದು ಆದರೆ ಆದಷ್ಟು ಅದನ್ನು ನಿರ್ಲಕ್ಷಿಸಿ ಮತ್ತು ತಿನ್ನದಿರುವುದು ಆರೋಗ್ಯ ವೃದ್ಧಿಸಿಕೊಳ್ಳಲು ಸೂಕ್ತ.

ಸಾಮಾನ್ಯವಾಗಿ ಮಾಡುವ ತಪ್ಪುಗಳು:

ಸಾಮಾನ್ಯವಾಗಿ ಮಾಡುವ ತಪ್ಪುಗಳು:

4.ಪ್ರತಿದಿನ ಮುಂಜಾನೆ ಒಂದು ಕಪ್ ಕಾಫಿ ಅಥವಾ ಟೀ ಕುಡಿಯುವುದರಿಂದ ನಿಮ್ಮ ಉತ್ಸಾಹ ಹೆಚ್ಚಬಹುದು.ಆದರೆ ಒಂದಕ್ಕಿಂತ ಹೆಚ್ಚು ಲೋಟ ಕಾಫಿ ಅಥವಾ ಟೀ ಕುಡಿಯುವುದನ್ನು ರೂಡಿ ಮಾಡಿಕೊಳ್ಳಬೇಡಿ.ಇದು ಕೂಡ ನಿಮ್ಮ ಕ್ಯಾಲೋರಿ ಹೆಚ್ಚಲು ಕಾರಣವಾಗಬಹುದು.

ಸಾಮಾನ್ಯವಾಗಿ ಮಾಡುವ ತಪ್ಪುಗಳು:

ಸಾಮಾನ್ಯವಾಗಿ ಮಾಡುವ ತಪ್ಪುಗಳು:

5.ಅನಾರೋಗ್ಯಕರವಾದ ತಿಂಡಿಗಳನ್ನು ಬೆಳಗ್ಗೆ ತಿನ್ನುವುದು ತಪ್ಪಿಸಿ: ಒಂದು ತಟ್ಟೆ ತುಂಬಾ ಕಾರ್ನ್ ಫ್ಲೆಕ್ಸ್ ,ಅಥವಾ ಹಣ್ಣುಗಳನ್ನು ತಿನ್ನಿ ಅದರ ಬದಲು ಮಫ್ಫಿನ್,ಪ್ಯಾನ್ ಕೇಕ್ ಇವುಗಳನ್ನೆಲ್ಲ ತಿಂದರೆ ಕ್ಯಾಲೋರಿ ಅಧಿಕವಾಗುವುದು ಖಚಿತ.ಅಧಿಕ ಕೊಬ್ಬಿನ ಅಂಶವಿರುವ ಆಹಾರವನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ.ಸಕ್ಕರೆ ಅಂಶ ಹೆಚ್ಚುವುದರಿಂದ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಸಾಮಾನ್ಯವಾಗಿ ಮಾಡುವ ತಪ್ಪುಗಳು:

ಸಾಮಾನ್ಯವಾಗಿ ಮಾಡುವ ತಪ್ಪುಗಳು:

6.ಕೆಲವೊಮ್ಮೆ ಹಿಂದಿನ ದಿನ ತಡವಾಗಿ ಊಟ ಮಾಡಿದ್ದರಿಂದ ಅಥವಾ ಬೆಳಿಗ್ಗೆ ಬೇಗ ಕೆಲಸಕ್ಕೆ ಹೊರಡಬೇಕು ಎಂಬ ಕಾರಣಕ್ಕೆ ಬ್ರೇಕ್ ಫಾಸ್ಟ್ ಮಾಡದೇ ಇರುವುದು ಅಥವಾ ಸ್ವಲ್ಪ ಮಾತ್ರ ತಿಂದು ಓಡುವುದು ಇದು ಕೂಡ ಸರಿಯಲ್ಲ.ಬೆಳಗ್ಗಿನ ತಿಂಡಿಯನ್ನು ತಿನ್ನದಿರುವುದರಿಂದ ನಮ್ಮ ಚಯಾಪಚಯ ಕ್ರಿಯೆ ಕುಂಟಿತವಾಗುತ್ತದೆ.ಗೋದಿಯ ಟೋಸ್ಟ್ ಅಥವಾ ಬ್ರೆಡ್ (ಅಥವಾ ಯಾವುದೇ ಭಾರತೀಯ ತಿಂಡಿ) ಜೊತೆಗೆ ಸ್ವಲ್ಪ ಹಣ್ಣು ತಿಂದಲ್ಲಿ ದಿನದ ಆರಂಭ ಉತ್ತಮವಾಗಿರುತ್ತದೆ.

ಸಾಮಾನ್ಯವಾಗಿ ಮಾಡುವ ತಪ್ಪುಗಳು:

ಸಾಮಾನ್ಯವಾಗಿ ಮಾಡುವ ತಪ್ಪುಗಳು:

7.ಬೆಳಗ್ಗೆಯೇ ವಿವಿಧ ರೀತಿಯ ತಿಂಡಿಗಳನ್ನು ಮಾಡಿ ಬಫೆ ತಿನ್ನುವುದನ್ನು ರೂಡಿಸಿಕೊಳ್ಳಬೇಡಿ ಇದರಿಂದ ಅಧಿಕವಾಗಿ ತಿನ್ನುವಂತಾಗುತ್ತದೆ.ಸಕ್ಕರೆ ಅಂಶ ಹೆಚ್ಚಿರುವ ಆಹಾರಗಳನ್ನು ಬೆಳಗ್ಗಿನ ತಿಂಡಿಗೆ ತಿನ್ನುವುದನ್ನು ತಪ್ಪಿಸಿ.ಅದರ ಬದಲು ಹಾಲು,ಹಣ್ಣು,ತೆಳುವಾದ ಮಾಂಸ ಅಥವಾ ಮೊಟ್ಟೆ ಬಳಸಿ.

ಸಾಮಾನ್ಯವಾಗಿ ಮಾಡುವ ತಪ್ಪುಗಳು:

ಸಾಮಾನ್ಯವಾಗಿ ಮಾಡುವ ತಪ್ಪುಗಳು:

8.ನೀವು ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇರಬೇಕು ಎಂದು ಬಯಸಿದಲ್ಲಿ ಪ್ರತಿದಿನ ಬೆಳಗ್ಗೆ ಮೊದಲು ಒಂದು ಲೋಟ ಬಿಸಿ ನೀರನ್ನು ಕುಡಿಯಿರಿ.ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ,ಹೊಟ್ಟೆಯಲ್ಲಿ ಗ್ಯಾಸ್ ತೊಂದರೆ ಬರದಂತೆ ತಡೆಯುತ್ತದೆ ಜೊತೆಗೆ ಹೊಟ್ಟೆ ಬೇಗ ತುಂಬಿದಂತೆ ಅನ್ನಿಸುತ್ತದೆ.

ಸಾಮಾನ್ಯವಾಗಿ ಮಾಡುವ ತಪ್ಪುಗಳು:

ಸಾಮಾನ್ಯವಾಗಿ ಮಾಡುವ ತಪ್ಪುಗಳು:

9.ದಿನನಿತ್ಯ ಆರೋಗ್ಯಯುತವಾದ ಆಹಾರ ತಿನ್ನುವುದು ಉತ್ತಮ ಇದರಿಂದ ಅರೋಗ್ಯ ಸುಧಾರಿಸುತ್ತದೆ.ಗ್ರೀನ್ ಟೀ ಜೊತೆಗೆ ಲೆಮನ್ ವೆಡ್ಜ್,ಓಟ್ಸ್ ಜೊತೆಗೆ ಅರ್ಧ ಬಾಳೆಹಣ್ಣು,ಮೊಟ್ಟೆ ಜೊತೆಗೆ ಟೋಸ್ಟ್ ಇವುಗಳೆಲ್ಲ ಆರೋಗ್ಯಕ್ಕೆ ಉತ್ತಮವಾದುದು.

English summary

Top 9 breakfast mistakes to avoid

Breakfast is the most important meal of the day, but what people do not know about this meal is that if they skip this meal, it could have an adverse effect on their weight.
Please Wait while comments are loading...
Subscribe Newsletter