For Quick Alerts
ALLOW NOTIFICATIONS  
For Daily Alerts

ವಾವ್! ಬಿಸಿಲ ಝಳಕ್ಕೆ ಕೂಲ್ ಕೂಲ್ ವೆಜ್ಜೀಸ್!

|

ಬೇಸಿಗೆಯಲ್ಲಿ ಕೇವಲ ತಂಪು ತಂಪು ಪಾನೀಯಗಳು ಮಾತ್ರವಲ್ಲದೆ ಬೇರೆ ಆಹಾರಗಳೂ ನಮ್ಮ ದೇಹಕ್ಕೆ ಅತ್ಯವಶ್ಯಕ. ಅವುಗಳು ದೇಹದ ತಾಪವನ್ನು ನೀಗಿಸಿ ನಮ್ಮನ್ನು ಆರೋಗ್ಯವಾಗಿರಿಸಬೇಕು. ತರಕಾರಿ ಹಣ್ಣುಗಳ ಸೇವನೆ ಈ ನಿಟ್ಟಿನಲ್ಲಿ ನಾವು ಸೇವಿಸಲೇಬೇಕು. ಕೇವಲ ಹಣ್ಣುಗಳೂ ಮಾತ್ರವಲ್ಲದೆ ತರಕಾರಿಗಳೂ ಕೂಡ ದೇಹದ ಶಾಖವನ್ನು ಶಮನಗೊಳಿಸಿ ಬೇಸಿಗೆಯಲ್ಲಿ ಕೂಲ್ ಅನುಭವವನ್ನು ನಮ್ಮ ದೇಹಕ್ಕೆ ಉಂಟುಮಾಡುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ:ಮಾವಿನ ಹಣ್ಣಿನಲ್ಲಿ ಕಮ್ಮಿಯೆಂದರೂ 14 ಗುಣಗಳಿವೆ!

ಮಾರುಕಟ್ಟೆಯಲ್ಲಂತೂ ವೈವಿಧ್ಯಮಯ ತರಕಾರಿಗಳು ಈ ಬೇಸಿಗೆಯಲ್ಲಿ ಲಭ್ಯ. ಆದರೆ ಅವುಗಳನ್ನು ಶೇಖರಿಸಿ ಆಹಾರ ತಯಾರಿಯ ನಂತರ ದೀರ್ಘ ಸಮಯದವರೆಗೆ ಇರಿಸುವುದು ಆಹಾರವನ್ನು ಹಾಳುಗೆಡವುತ್ತವೆ. ಇದು ಬೇಸಿಗೆಯಲ್ಲಿ ನಿರಂತರ ನಡೆಯುವ ಸಂಭವವೇ. ಒಂದು ರೀತಿಯಲ್ಲಿ ತರಕಾರಿಗಳ ಶೇಖರಣೆ ಮತ್ತು ಆಹಾರ ತಯಾರಿ ಹರಸಾಹಸದ ಕೆಲಸವೇ ಸರಿ.

ಬೇಸಿಗೆಯಲ್ಲೂ ಕೆಲವು ಸಮಯದವರೆಗೆ ಹಾಳಾಗದೇ ಪೋಷಣೆಯನ್ನು ನೀಡುವ ತರಕಾರಿಗಳು ಇವೆ. ಇವು ಬೇಸಿಗೆಯಲ್ಲೂ ತಂಪನ್ನು ಉಂಟುಮಾಡಿ ನಮ್ಮ ದೇಹವನ್ನು ನೈಸರ್ಗಿಕವಾಗಿ ಆರೋಗ್ಯಪೂರ್ಣವಾಗಿರಿಸುವಲ್ಲಿ ನೆರವು ನೀಡುತ್ತವೆ. ಮುಳ್ಳುಸೌತೆಯಂತೂ ಈ ಬೇಸಿಗೆಯಲ್ಲಿ ಕಲ್ಪವೃಕ್ಷದಂತೆ ನಮ್ಮನ್ನು ಬಿಸಿಲ ಝಳದಿಂದ ಕಾಪಾಡುತ್ತದೆ.

ನಿಮ್ಮ ಬೇಸಿಗೆ ಡಯೆಟ್‌ನಲ್ಲಿ ನೀವು ಸೇರಿಸಲೇಬೇಕಾದ ಕೆಲವೊಂದು ತರಕಾರಿಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ಇವುಗಳು ಕೂಲ್ ಕೂಲ್ ತಂಪು ತಂಪು ಗುಣವನ್ನು ಹೊಂದಿದ್ದು ಬಿರು ಬೇಸಿಗೆಯಲ್ಲಿ ತಂಪನ್ನೀಯುತ್ತವೆ. ತಮ್ಮದೇ ನ್ಯೂಟ್ರೀಶನ್ ಸಪ್ಲಿಮೆಂಟ್‌ಗಳನ್ನು ಪೂರೈಸುವ ಈ ತರಕಾರಿಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ನೀವು ಬಳಸಲೇಬೇಕು. ಅವು ಯಾವುವು ಎಂಬುದನ್ನು ನೋಡಲು ಮುಂದೆ ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬೇಸಿಗೆಯ ಕಾಲದಲ್ಲಿ ದೇಹವನ್ನು ತಂಪಾಗಿಸುವ ಹಣ್ಣುಗಳು

ಮುಳ್ಳುಸೌತೆ:

ಮುಳ್ಳುಸೌತೆ:

ನಿಮ್ಮ ಆಹಾರದಲ್ಲಿ ಪ್ರಧಾನವಾಗಿ ಇರಲೇಬೇಕಾದ ಬೇಸಿಗೆ ತರಕಾರಿ ಮುಳ್ಳು ಸೌತೆಯಾಗಿದೆ. ದೇಹಕ್ಕೆ ತಂಪನ್ನು ನೀಡುವ ಮುಳ್ಳುಸೌತೆ ನೀರಿನಂಶವನ್ನು ಅಧಿಕವಾಗಿ ಹೊಂದಿದ್ದು, ಕಡಿಮೆ ಕ್ಯಾಲೋರಿಯುಕ್ತ ತರಕಾರಿ.

ಸಿಲೆರಿ:

ಸಿಲೆರಿ:

ಡೀಹೈಡ್ರೇಶನ್ ಉಂಟುಮಾಡದೇ, ದೇಹದಲ್ಲಿ ತೂಕವನ್ನು ಉಂಟುಮಾಡುವ ಅಧಿಕ ಪ್ರಮಾಣದ ನೀರನ್ನು ಹೊರಹಾಕುತ್ತದೆ. ಕರುಳನ್ನು ಆರೋಗ್ಯವಾಗಿರಿಸುವ ಗುಣವನ್ನು ಹೊಂದಿರುವ ಸಿಲೆರಿ ಕಿಡ್ನಿಯನ್ನು ಸ್ವಚ್ಛಗೊಳಿಸುತ್ತದೆ.

ಅವೊಕಾಡೋ:

ಅವೊಕಾಡೋ:

ವರ್ಷ ಪೂರ್ತಿ ಸಿಗುವ ಅವೊಕಾಡೋ ನಿಮ್ಮ ಬೇಸಿಗೆ ಡಯೆಟ್‌ನಲ್ಲಿ ಇರಲೇಬೇಕು. ಆರೋಗ್ಯಪೂರ್ಣ ಕೊಬ್ಬುಗಳನ್ನು ಒಳಗೊಂಡಿರುವ ಅವೊಕಾಡೋ ದೇಹವನ್ನು ತಂಪಾಗಿರಿಸುತ್ತದೆ. ತ್ವಚೆಗೂ ಇದು ಪರಿಣಾಮಕಾರಿ.

ಎಗ್‌ಪ್ಲಾಂಟ್ (ಬದನೆ):

ಎಗ್‌ಪ್ಲಾಂಟ್ (ಬದನೆ):

ಇದೊಂದು ಬೇಸಿಗೆ ತರಕಾರಿಯಾಗಿದ್ದು ನೇರಳೆ, ಕಪ್ಪು, ಹಸಿರು ಅಥವಾ ಬಿಳಿ ಬಣ್ಣಗಳಲ್ಲಿ ಲಭ್ಯ.

ಝುಚ್ಚಿನಿ:

ಝುಚ್ಚಿನಿ:

ಮೇಯಿಂದ ಜುಲೈವರೆಗೆ ಈ ತರಕಾರಿ ಲಭ್ಯ. ಈ ಹಸಿರು ತರಕಾರಿ ವಿಟಮಿನ್ ಬಿ ಯನ್ನು ಯಥೇಚ್ಛವಾಗಿ ಹೊಂದಿದೆ. ಪೊಟ್ಯಾಶಿಯಂ, ಒಮೆಗಾ - 3, ಫ್ಯಾಟಿ ಏಸಿಡ್ಸ್, ಕೋಪರ್, ಫೋಲೇಟ್, ಫೋಸ್‌ಫೋರಸ್ ಇದರಲ್ಲಿ ಹೇರಳವಾಗಿದೆ. ಮುಳ್ಳುಸೌತೆ ಗಾತ್ರದ ಹಸಿರು ಅಥವಾ ಹಳದಿ ಬಣ್ಣದ ಝುಚ್ಚನಿಯನ್ನು ಆಯ್ಕೆಮಾಡಿಕೊಳ್ಳಿ.

ಅಣಬೆ:

ಅಣಬೆ:

ಈ ಪ್ರೋಟೀನ್ ನ್ಯೂಟ್ರೀನ್ ಒಳಗೊಂಡ ತರಕಾರಿ ಅಣಬೆ ನಿಮಗೆ ವರ್ಷಪೂರ್ತಿ ಲಭ್ಯ. ಫೈಬರ್ ಅಧಿಕವಾಗಿರುವ ಕೊಬ್ಬು ಕಡಿಮೆ ಪ್ರಮಾಣದಲ್ಲಿರುವ ಅಣಬೆ ನಿಮ್ಮ ಬೇಸಿಗೆ ಊಟವನ್ನು ಸ್ವಾದಿಷ್ಟವನ್ನಾಗಿ ಮಾಡುವುದು ಖಂಡಿತ.

ಬೀಟ್‌ರೂಟ್:

ಬೀಟ್‌ರೂಟ್:

ಬೀಟ್‌ರೂಟ್‌ನಲ್ಲಿ ಹಲವಾರು ಆರೋಗ್ಯಕಾರಿ ಅಂಶಗಳಿವೆ. ತಾಜಾ ತುಂಡರಿಸಿದ ಅಥವಾ ಸ್ಟೀಮ್ ಮಾಡಿದ ಬೀಟ್‌ರೂಟ್ ಅನ್ನು ನಿಮ್ಮ ಬೇಸಿಗೆ ಸಲಾಡ್‌ಗಳಲ್ಲಿ ಬಳಸಿ ಮತ್ತು ಆರೋಗ್ಯಪೂರ್ಣರಾಗಿರಿ.

 ಬ್ರಕೋಲಿ:

ಬ್ರಕೋಲಿ:

ಈ ಹಸಿರು ತರಕಾರಿ ಬ್ರಕೋಲಿ ಹೆಚ್ಚು ಪ್ರೊಟೀನ್ ನ್ಯೂಟ್ರೀನ್‌ನಿಂದ ಭರಿತವಾಗಿದೆ.

ಸ್ಪಿನಾಚ್:

ಸ್ಪಿನಾಚ್:

ಈ ಹಸಿರು ತಂಪಿನ ಸೊಪ್ಪನ್ನು ಬೇಸಿಗೆಯಲ್ಲಿ ನಿಮಗೆ ಆಸ್ವಾದಿಸಬಹುದು. ಈ ಹಸಿರು ಸೊಪ್ಪಿನ ಸಲಾಡ್ ನಿಮ್ಮನ್ನು ಆರೋಗ್ಯಪೂರ್ಣವಾಗಿರಿಸುವುದಲ್ಲದೆ ಅಧಿಕ ತೂಕವನ್ನು ನಿಯಂತ್ರಿಸುತ್ತದೆ.

ಶಾಲೋಟ್ಸ್:

ಶಾಲೋಟ್ಸ್:

ಈರುಳ್ಳಿ ಕುಟುಂಬದಲ್ಲೇ, ಶಾಲ್ಲೋಟ್ಸ್ ಹೇರಳ ಉತ್ಕರ್ಷಣ ನಿರೋಧಿಯಾಗಿದೆ. ಬ್ಯಾಕ್ಟೀರಿಯಾ, ಅಲರ್ಜಿ ವಿರುದ್ಧ ಹೋರಾಡುವ ಅಭೂತಪೂರ್ವ ಗುಣವನ್ನು ಶಾಲ್ಲೋಟ್ಸ್ ಹೊಂದಿದೆ. ಈ ಬೇಸಿಗೆಯಲ್ಲಿ ಇದೊಂದು ಪರಿಪೂರ್ಣ ತರಕಾರಿಯಾಗಿದೆ.

English summary

Top 10 Healthy Summer Vegetables

During summers, do not just rely on the chilling drinks to beat the heat. You also need to focus on your diet and make sure that you eat healthy as well. There are many summer vegetables that can be consumed to reduce body heat and beat the scorching heat of the sun.
Story first published: Thursday, March 27, 2014, 17:22 [IST]
X
Desktop Bottom Promotion