For Quick Alerts
ALLOW NOTIFICATIONS  
For Daily Alerts

ದುಂಡಗಿನ ಮುಖಕ್ಕೆ ಸೂಕ್ತವಾಗಿರುವ 7 ಮೇಕಪ್ ಸಲಹೆಗಳು

|

ಮೇಕಪ್ ಎಂಬುದು ಹೆಂಗಸರ ಆತ್ಮೀಯ ಸಂಗಾತಿ. ಆದರೆ ಇದನ್ನು ಹೆಚ್ಚಾಗಿ ಮಾಡಲು ಹೋದರೆ ಈ ಸಂಗಾತಿಯೇ ನಿಮ್ಮ ಶತ್ರು ಆಗುವುದರಲ್ಲಿ ಸಂಶಯವಿಲ್ಲ! ಮೇಕಪ್ ಮಾಡಿಕೊಳ್ಳಲು ಹಲವಾರು ಮೂಲ ಸುಲಭೋಪಾಯಗಳು ಇವೆ. ಅವುಗಳನ್ನು ನೀವು ಪಾಲಿಸಬಹುದು. ನೆನಪಿಡಿ - ಸಾಮಾನ್ಯವಾದ ಮತ್ತು ಸುಲಭವಾದ ಮೇಕಪ್‍ಗಳು ನಿಮ್ಮ ತ್ವಚೆಯ ಬಗೆ, ತ್ವಚೆಯ ಬಣ್ಣ ಮತ್ತು ಮುಖದ ಲಕ್ಷಣಗಳ ಮೇಲೆ ಅವಲಂಬಿತವಾಗಿರುತ್ತದೆ.

ನೀವು ನಿಮ್ಮ ಮುಖಕ್ಕೆ ಹೊಂದುವ ಮೇಕಪನ್ನು ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದೀರಾ? ನಿಮ್ಮ ಮೇಕಪ್ ಸಾಧನಗಳನ್ನು ಹುಡುಕುವುದು ಎಂಬುದು ನಿಮಗೆ ದುಃಸ್ವಪ್ನವಾಗಿ ಕಾಡುತ್ತಿದೆಯಾ? ಚಿಂತೆ ಮಾಡಬೇಡಿ ಮಾನಿನಿಯಾರೇ, ನಿಮ್ಮ ಸಹಾಯಕ್ಕೆ ನಾವಿದ್ದೇವೆ! ನಿಮಗಾಗಿ ನಾವು ಕೆಲವೊಂದು ಮೇಕಪ್ ಸಲಹೆಗಳನ್ನು ಪಟ್ಟಿ ಮಾಡಿದ್ದೇವೆ, ಇವುಗಳು ನಿಸ್ಸಂಶಯವಾಗಿ ನಿಮ್ಮ ದುಂಡಗಾಗಿರುವ ಮುಖಕ್ಕೆ ಸ್ವಲ್ಪ ಕಳೆಯನ್ನು ನೀಡುತ್ತದೆ!

ಸ್ವಾಭಾವಿಕ ಫೌಂಡೇಶನ್

ನೀವು ನಿಮ್ಮ ದುಂಡಗಿನ ಮುಖಕ್ಕೆ ಹೊಂದುವ ಫೌಂಡೇಶನ್‍ಗಳನ್ನು ವೆಬ್‍ನಲ್ಲಿ ಹುಡುಕುವಾಗ ನಿಮಗೆ ನಿರಾಸೆಯೇ ಕಾದಿರುತ್ತದೆಯೇ, ಸಿಕ್ಕಿತು ಎಂದು ಅಂತಿಂತಹ ಕುಂಟು ನೆಪವನ್ನು ಹೇಳುತ್ತ ಹೊಸ ಫೌಂಡೇಶನ್‍ಗಳನ್ನು ನಂಬಿ ಬಳಸಲು ಹೋಗಬೇಡಿ. ನೀವು ಈಗ ಬಳಸುತ್ತಿರುವ ಫೌಂಡೇಶನ್‍ಗಳನ್ನು ಬದಲಾಯಿಸುವ ಮೂಲಕ ನಿಮ್ಮ ಒಟ್ಟಾರೆ ಅಂದವನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ!. ಒಂದು ವೇಳೆ ನಿಮಗೆ ದುಂಡಗಿನ ದ ಮುಖವಿದ್ದಲ್ಲಿ, ನಿಮ್ಮ ತ್ವಚೆಯ ಬಣ್ಣಕ್ಕೆ ಹೊಂದುವ ಫೌಂಡೇಶನ್‍ ಅನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಹೌದು, ನಿಮ್ಮ ಮೈ ಬಣ್ಣಕ್ಕೆ ಹೊಂದುವ ಫೌಂಡೇಶನ್ ನಿಮಗೆ ಅಗತ್ಯವಿದೆಯೇ ಹೊರತು, ನಿಮ್ಮ ಮುಖದ ಆಕಾರಕ್ಕೆ ಹೊಂದುವ ಬಣ್ಣದ ಫೌಡೇಶನ್ ಅಲ್ಲ ಎಂಬುದನ್ನು ಮೊದಲು ಅರಿಯಿರಿ. ತರಹೇವಾರಿ ಬ್ರ್ಯಾಂಡ್‍ಗಳನ್ನು ಬಳಸಲು ಹೋದಲ್ಲಿ ನಿಮಗೆ ನಷ್ಟ ಕಟ್ಟಿಟ್ಟ ಬುತ್ತಿ! ಮಳೆಗಾಲದ ಮದುವಣಗಿತ್ತಿಗಾಗಿ ಅದ್ಭುತ ಶೃಂಗಾರ ಸಲಹೆಗಳು

ಲಿಪ್ ಆರ್ಟ್

ನಿಮ್ಮ ದುಂಡಗಿನ ಮುಖದಲ್ಲಿರುವ ತುಟಿಯನ್ನು ಎದ್ದು ಕಾಣುವಂತೆ ಮಾಡಬಾರದು ಎಂಬ ಸಲಹೆಯನ್ನು ನಿಮಗೆ ಯಾರಾದರು ನೀಡಿದ್ದಾರಾ? ನಿಮ್ಮ ಮುಖದಲ್ಲಿ ಮೇಕಪ್ ಮಾಡಿಕೊಳ್ಳುವಾಗ ನಿಮ್ಮ ತುಟಿಗೆ ಮಾಡಿದ ಮೇಕಪ್ ಅಸ್ವಾಭಾವಿಕವಾಗಿದೆ ಮತ್ತು ಅತಿಯಾಗಿದೆ ಎಂಬ ವಿಮರ್ಶೆಯನ್ನು ನೀವು ಎದುರಿಸಿದ್ದೀರಾ? ಉತ್ತರ ಹೌದು ಎಂದಾದಲ್ಲಿ, ನೀವು ಮೊದಲು ನಿಮ್ಮ ತುಟಿ ಹಾಗು ಕಣ್ಣುಗಳನ್ನು ಎದ್ದು ಕಾಣುವಂತೆ ಮಾಡುವ ಮೇಕಪ್ ಮಾಡಿಕೊಳ್ಳುವ ಬದಲಿಗೆ ಆಕರ್ಷಕವಾಗಿ ಮತ್ತು ನಿಮ್ಮ ಮುಖಕ್ಕೆ ಒಪ್ಪುವಂತೆ ಕಾಣುವಂತೆ ಮಾಡಲು ಆಲೋಚಿಸಬೇಕು. ತುಟಿ ಮತ್ತು ಕಣ್ಣುಗಳು ಒಟ್ಟಿಗೆ ಎದ್ದು ಕಾಣುವಂತೆ ಮೇಕಪ್ ಮಾಡಿಕೊಡರೆ ಅದರ ಮುಖದ ಅಂದವೇ ಬದಲಾಗಿ ಹೋಗುತ್ತದೆ. ಬೇಕಾದರೆ ನಿಮ್ಮ ತುಟಿಗೆ ಸ್ವಲ್ಪ ಡಾರ್ಕ್ ಆಗಿರುವ ಬಣ್ಣಗಳನ್ನು, ಆಕರ್ಷಕವಾದ ಗ್ಲಾಸ್ಸಿಗಳು ಮತ್ತು ಸ್ಪಾರ್ಕಲ್‍ಗಳನ್ನು ಲೇಪಿಸಿ ನಾಟಕೀಯ ಸ್ಪರ್ಶವನ್ನು ನೀಡಬಹುದು. ಇವೆಲ್ಲವನ್ನು ಮಾಡಬೇಕಾದರೆ ನೀವು ಒಂದು ವಿಚಾರವನ್ನು ಗಮನದಲ್ಲಿರಿಸಿಕೊಳ್ಳಬೇಕು. ಅದೇನೆಂದರೆ ಯಾವುದೇ ಕಾರಣಕ್ಕು ನಿಮ್ಮ ತುಟಿಯನ್ನು ಎದ್ದುಕಾಣುವಂತೆ ಮಾಡುವಾಗ, ಕಣ್ಣುಗಳ ಮೇಕಪ್ ಸರಳವಾಗಿರಬೇಕು.

ನಿಮ್ಮ ಕಣ್ಣುಗಳಿಗೆ ನಾಟಕೀಯ ಸ್ಪರ್ಶ

ದುಂಡಗಿನ ಮುಖವು ಕಣ್ಣುಗಳಿಗೆ ಆದಷ್ಟು ನಾಟಕೀಯ ಸ್ಪರ್ಶವನ್ನು ನೀಡಿರುತ್ತದೆ. ನೀವು ಎಲ್ಲಾ ಹೆಂಗಸರಂತೆ ಕಣ್ಣಿನ ಮೇಕಪ್ ಪ್ರಿಯರಾಗಿದ್ದಲ್ಲಿ, ಕ್ರೀಮಿ ಶಾಡೋಗಳು ಮತ್ತು ಥಿಕ್ ಲ್ಯಾಶ್‍ಗಳ ಮೂಲಕ ನಿಮ್ಮ ಕಣ್ಣುಗಳಿಗೆ ಒಂದು ಮೆರಗನ್ನು ನೀಡಬಹುದು. ಒಂದು ವೇಳೆ ನೀವು ನೀವು ಕಣ್ಣಿನ ಮೇಕಪ್ ಅನ್ನು ಹೆಚ್ಚಾಗಿ ಮಾಡಿಕೊಳ್ಳುವುದರಿಂದ ಮುಜುಗರಕ್ಕೆ ಗುರಿಯಾಗಿದ್ದಲ್ಲಿ, ಅದಕ್ಕಾಗಿ ಚಿಂತೆ ಮಾಡಬೇಡಿ. ಏಕೆಂದರೆ ನಿಮ್ಮ ಮುಖದ ವಿಚಾರದಲ್ಲಿ ಅದು ತಪ್ಪೂ ಅಲ್ಲ. ಒಂದೇ ಸಮಯಕ್ಕೆ ಕಣ್ಣು ಮತ್ತು ತುಟಿಗಳನ್ನು ಎದ್ದು ಕಾಣುವಂತೆ ಮಾಡುವ ಬದಲಿಗೆ, ಮೊದಲೇ ತಿಳಿಸಿದಂತೆ ಕಣ್ಣು ಅಥವಾ ತುಟಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಳ್ಳಿ. ಆದರೆ ನೆನಪಿಡಿ ಈ ಎರಡರಲ್ಲಿ ಏಕ ಕಾಲದಲ್ಲಿ ಪ್ರಯೋಗ ಮಾಡಲು ಹೋಗಬೇಡಿ! ಮೇಕಪ್ ತುಂಬಾ ಹೊತ್ತು ಕಾಪಾಡಿಕೊಳ್ಳಲು ಸೂಕ್ತ ಸಲಹೆಗಳು

ಗಲ್ಲದ ತುತ್ತ ತುದಿ

ನಿಮ್ಮ ದುಂಡಗಿನ ಮುಖಕ್ಕೆ ಮೆರಗನ್ನು ಒದಗಿಸುವ ಭರ್ಜರಿ ಉಪಾಯವು ಬ್ರಾಂಜರ್ ಅನ್ನು ಬಳಸುವ ಕಲೆಯಲ್ಲಿ ಅಡಗಿದೆ. ನೀವು ಬೇಕಾದಲ್ಲಿ ಸರಳವಾದ ಶೇಡ್‍ಗಳು ಅಥವಾ ಎದ್ದು ಕಾಣುವಂತಹ ಶೇಡ್‍ಗಳನ್ನು ಬಳಸಬಹುದು. ಆದರೆ ಇದಕ್ಕಾಗಿ ನೀವು ಅಲ್ಪ ಪ್ರಮಾಣದ ಬ್ರಾಂಜರ್‌ ಅನ್ನು ಬಳಸಬೇಕಾಗುತ್ತದೆ. ಬ್ರಾಂಜರ್ ಅನ್ನು ದಪ್ಪನಾಗಿ ಲೇಪಿಸಿದಲ್ಲಿ ನೀವು ನಿಮ್ಮ ಒಟ್ಟಾರೆ ಅಂದವನ್ನು ಹಾಳು ಮಾಡಿಕೊಳ್ಳುತ್ತೀರಿ. ದುಂಡಗಿನ ದ ಮುಖದಲ್ಲಿನ ಗಲ್ಲಕ್ಕೆ ಸ್ವಲ್ಪ ಟಚ್‍ಅಪ್‍ನ ಅಗತ್ಯವಿರುತ್ತದೆಯಷ್ಟೇ. ಬ್ರಾಂಜರ್ ಅನ್ನು ತುಸು ಮಾತ್ರ ಲೇಪಿಸುವುದರಿಂದ ಅತ್ಯುತ್ತಮ ಪರಿಣಾಮವನ್ನು ಕಾಣಬಹುದು. ಏಕೆಂದರೆ ಗಲ್ಲದ ಮೂಳೆಗಳು ನಿಮ್ಮ ದುಂಡಗಿನ ದ ಮುಖದಲ್ಲಿ ಬಹುಪಾಲು ಭಾಗವನ್ನು ಆಕ್ರಮಿಸಿಕೊಂಡಿರುತ್ತವೆ. ಈ ಸಲಹೆಯು ನಿಮ್ಮ ಸೌಂದರ್ಯಕ್ಕೆ ಒಂದು ಹೊಸ ಭಾಷ್ಯವನ್ನು ಬರೆಯಬಹುದು ಎಂಬುದನ್ನು ನೆನಪಿಡಿ.

ಶೇಡ್‍ಗಳನ್ನು ಅದಲು ಬದಲು ಮಾಡಿ

ನಿಮ್ಮ ದುಂಡಗಿನ ಮುಖಕ್ಕೆ ಒಂದೇ ಶೇಡ್‍ನ ಬ್ರಾಂಜರ್ ಮತ್ತು ಹೈಲೈಟರ್‌ಗಳನ್ನು ಬಳಸಬೇಡಿ. ಒಂದು ವೇಳೆ ನೀವು ಡಾರ್ಕರ್ ಬ್ರಾಂಜರ್ ಬಳಸಿದಲ್ಲಿ, ಅದಕ್ಕೆ ಪ್ರತಿಯಾಗಿ ಲೈಟರ್ ಹೈಲೈಟರ್ ಬಳಸಿ. ಒಂದೇ ಬಣ್ಣದ ಡಾರ್ಕರ್ ಮತ್ತು ಹೈಲೈಟರ್‌ಗಳು ನಿಮ್ಮ ಮುಖವನ್ನು ನೀವು ಬಯಸಿದಂತೆ ಇರಲು ಬಿಡುವುದಿಲ್ಲ!.

ಬ್ಲಷ್ ಚಮತ್ಕಾರ

ಇದು ಕೇವಲ ದುಂಡಗಿನ ಮುಖವನ್ನು ಹೊಂದಿರುವವರಿಗೆ ಮಾತ್ರವಲ್ಲ, ಮೇಕಪನ್ನು ಇಷ್ಟಪಡುವ ಎಲ್ಲಾ ಹೆಂಗಳೆಯರಿಗು ಸಹ ಇದು ಅನ್ವಯವಾಗುತ್ತದೆ. ಮೈಲ್ಡ್ ಕೋರಲ್ ಮತ್ತು ಲೈಟ್ ಗುಲಾಬಿ ಬಣ್ಣದ ಬ್ಲಷ್ ನಿಮ್ಮ ಮುಖದ ಸೌಂದರ್ಯಕ್ಕೆ ಕಳೆಯನ್ನು ಒದಗಿಸಬಲ್ಲದು. ನೆನಪಿಡಿ ಗುಲಾಬಿ ಬಣ್ಣದ ಬ್ಲಷ್ ಪುಡಿಯನ್ನು ಒಳ ಮತ್ತು ಹೊರ ಸ್ಟ್ರೋಕ್‍ಗಳ ಮೂಲಕ ( ಮೃದುವಾಗಿ) ಲೇಪಿಸಿ ನಿಮ್ಮ ಮುಖದ ಮೇಕಪನ್ನು ಪೂರ್ಣಗೊಳಿಸಿ.

ಲಿಪ್ ಗ್ಲಾಸ್ಸ್

ಲಿಪ್ ಗ್ಲಾಸ್ಸ್ ದುಂಡಗಿನ ನಿಮ್ಮ ಮುಖಕ್ಕೆ ಅದ್ಭುತ ಮೆರಗನ್ನು ನೀಡುತ್ತದೆ. ಲಿಪ್ ಸ್ಟಿಕ್‍ಗೆ ಹೋಲಿಸಿದರೆ ಇದರ ಪರಿಣಾಮ ಮತ್ತಷ್ಟು ಅದ್ಭುತ. ದುಂಡಗಿನ ಮುಖವು ಲಿಪ್ ಗ್ಲಾಸ್‍ನಿಂದ ಮಿನುಗುವ ಮೆರಗನ್ನು ಗಳಿಸುತ್ತದೆ. ಒಂದು ವೇಳೆ ನೀವು ಲಿಪ್‍ಸ್ಟಿಕ್ ರಹಿತವಾಗಿ ಮೇಕಪ್ ನಿಭಾಯಿಸಬೇಕೆಂದು ಬಯಸಿದಲ್ಲಿ ಲಿಪ್ ಗ್ಲಾಸ್ಸ್ ನಿಮಗೆ ಸಹಾಯ ಮಾಡುತ್ತದೆ. ಕಣ್ಣುಗಳ ಮೇಕಪ್ ಕುರಿತಾಗಿ ಸ್ವಲ್ಪ ನಾಟಕೀಯತೆಯನ್ನು ಮಾಡಿ ( ಉದಾಹರಣೆಗೆ ಕ್ಯಾಟ್ ಐ ಮೇಕಪ್ ಮಾಡಿ) ಮತ್ತು ಸಂಜೆಯ ಪಾರ್ಟಿಗಳಿಗಾಗಿ ಸಲ್ಟ್ರಿ ಶೈನಿ ಲಿಪ್ ಗ್ಲಾಸ್ಸ್‌ಗಳನ್ನು ಬಳಸಿ.

English summary

7 Best Makeup Tips For Oval Face

Makeup is a woman’s best friend. But if overdone, this friend can easily turn into a foe! There are some basic makeup steps that you need to follow to get your look just right. Remember – the basics of makeup depend on your skin type, skin tone and face cut.
Story first published: Thursday, October 16, 2014, 16:44 [IST]
X
Desktop Bottom Promotion