For Quick Alerts
ALLOW NOTIFICATIONS  
For Daily Alerts

ಸಂಧಿವಾತಕ್ಕೆ ಪ್ರಾಕೃತಿಕ ಗಿಡಮೂಲಿಕೆಗಳಿಂದ ಪರಿಹಾರಗಳು

By Viswanath S
|

ಆಧುನಿಕ ಔಷಧಿಗಳು ಅಸ್ತಿತ್ವಕ್ಕೆ ಬರುವ ಮೊದಲು ಜನರು ನೈಸರ್ಗಿಕವಾಗಿ ಬೆಳೆಯುತ್ತಿದ್ದ ಪ್ರಾಕೃತಿಕ ಸಸ್ಯಗಳು ಮತ್ತು ಮೂಲಿಕೆಗಳ ಸಹಾಯದಿಂದ ಎಲ್ಲಾ ಕಾಯಿಲೆಗಳಿಗೆ ಪರಿಹಾರಗಳನ್ನು ಕಂಡುಕೊಂಡಿದ್ದರು. ಈ ನೈಸರ್ಗಿಕ ಪರಿಹಾರವು ಕೇವಲ ಪರಿಹಾರಕೊಡುತ್ತಿದ್ದಲ್ಲದೇ ಅವು ಸುರಕ್ಷಿತ ಮತ್ತು ಸುಭದ್ರವಾಗಿಯೂ ಇರುತ್ತಿದ್ದವು.

ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಸಂಧಿವಾತ ಕಂಡು ಬರುವುದು. ಪ್ರೊಟೀನ್ ತುಂಬಾ ಅವಶ್ಯಕವಾದ ಪೋಷಕಾಂಶವಾದರೂ ದೇಹದಲ್ಲಿ ಪ್ರೊಟೀನ್ ಅಂಶ ಅತ್ಯಧಿಕವಾದರೆ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾಗುತ್ತದೆ. ಕಿಡ್ನಿ ಅತ್ಯಧಿಕವಾದ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರಹಾಕಲು ವಿಫಲವಾಗುತ್ತದೆ. ಇದರಿಂದಾಗಿ ಸಂಧಿವಾತ ಉಂಟಾಗುವುದು. ಈ ದಿಸೆಯಲ್ಲಿ ಸಂಧಿವಾತದ ಪರಿಹಾರಕ್ಕೆ ಅತ್ಯುತ್ತಮ ನೈಸರ್ಗಿಕ ಪರಿಹಾರಗಳನ್ನು ನಾವು ಇಲ್ಲಿ ನಿಮ್ಮ ಮುಂದಿಟ್ಟಿದ್ದೇವೆ.

ಸಂಧಿವಾತಕ್ಕೆ ಕೆಲ ಪ್ರಮುಖ ಕಾರಣಗಳು

ಶುಂಠಿ

ಶುಂಠಿ

ಶುಂಟಿಯು ಮನೆಯ ಒಂದು ಚಿರಪರಿಚಿತ ಪರಿಪೂರ್ಣ ಔಷಧಿ ಮತ್ತು ಅದರಿಂದ ಅನೇಕ ಉಪಯೋಗಗಳಿವೆ. ಕೀಲುನೋವುಗಳನ್ನು ಶುಂಠಿಯಿಂದ ನಿವಾರಿಸಲ್ಪಟ್ಟಿದೆಯೆಂದು ಅನೇಕ ಪ್ರಯೋಗಗಳಿಂದ ತಿಳಿದಿವೆ. ನಿಮ್ಮ ದೈನಂದಿನ ಆಹಾರಗಳಲ್ಲಿ ಶುಂಠಿಯನ್ನು ಸೇರಿಸಿ ಸೇವಿಸಬಹುದು. ಅದನ್ನು ವಿಶೇಷ ಅಡುಗೆಗಳಲ್ಲಿ ಸೇರ್ಪಡೆಮಾಡಬಹುದು. ಬಹಳ ಜನರು ಶುಂಠಿಯಬೇರನ್ನು ನೀರಲ್ಲಿ ಟೀ ಸೊಪ್ಪಿನ (ಪುಡಿಯ) ಜೊತೆ ಸೇರಿಸಿ ಕುದಿಸಿ ಟೀ ಮಾಡುತ್ತಾರೆ. ಶುಂಠಿಯನ್ನು ಅರೆದು ಪೇಸ್ಟ್ ಮಾಡಿ ನೋವಿನ ಜಾಗಗಳಮೇಲೆ ಹಚ್ಚಿದರೆ ಜಂಟಿನೋವು ಶೀಘ್ರಪರಿಹಾರವಾಗುತ್ತದೆ.

ಸೇಬು

ಸೇಬು

ಕೀಲುನೋವುಗಳನ್ನು ನಿವಾರಿಸಲು ಸೇಬು ಒಂದು ಉತ್ತಮ ಹಣ್ಣು. ಸೇಬನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿದ್ದರೆ ಖಂಡಿತವಾಗಿಯೂ ಸಂಧಿವಾತದ ಚಿಕಿತ್ಸೆಗೆ ಸಹಾಯವಾಗುತ್ತದೆ.

ಸೇಬಿನಿಂದ ತಯಾರಿಸಿದ ಮದ್ಯಸಾರೀಯ ಪೇಯ (ಆಪಲ್ ಸೈಡರ್ ವಿನೇಗರ್)

ಸೇಬಿನಿಂದ ತಯಾರಿಸಿದ ಮದ್ಯಸಾರೀಯ ಪೇಯ (ಆಪಲ್ ಸೈಡರ್ ವಿನೇಗರ್)

ಸೇಬಿನಿಂದ ತಯಾರಿಸಿದ ಮದ್ಯಸಾರೀಯ ಪೇಯ ಅಥವ ACV (ಆಪಲ್ ಸೈಡರ್ ವಿನೇಗರ್), ಕೀಲುನೋವುಗಳನ್ನು ನಿವಾರಿಸಲು ಒಂದು ಉತ್ತಮ ಪೇಯ. ಒಂದು ಟೇಬಲ್ ಸ್ಪೂನ್ ಪೇಯವನ್ನು ಒಂದು ಲೋಟದತುಂಬ ನೀರಿನಲ್ಲಿ ಸೇರಿಸಿ ಪ್ರತಿದಿನವೂ ಸೇವಿಸಿ.

ಅಡಿಗೆ ಸೋಡಾ

ಅಡಿಗೆ ಸೋಡಾ

ಒಂದು ಚಮಚದ ತುಂಬ ಅಡಿಗೆಸೋಡಾ ತೆಗೆದುಕೊಂಡು ನೀರಿನಲ್ಲಿ ಬೆರಸಿ ಕುಡಿದರೆ ಸಂಧಿವಾತದ ನೋವನ್ನು ಕಡಿಮೆಮಾಡಬಹುದು. ಆದಾಗ್ಯೂ, ರಕ್ತದೊತ್ತಡವಿರುವವರು ಇದನ್ನು ಸೇವಿಸಬಾರದು.

ನಿಂಬೆ ಹಣ್ಣಿನ ರಸ

ನಿಂಬೆ ಹಣ್ಣಿನ ರಸ

ನಿಂಬೆ ಹಣ್ಣಿನ ಪಾನೀಯವು ಸಂಧಿವಾತದ ಲಕ್ಷಣಗಳಿಗೆ ಒಂದು ಪರಿಣಾಮಕಾರಿ ಮತ್ತು ಸರಳ ಚಿಕಿತ್ಸೆ. ಅರ್ಧ ನಿಂಬೆಹಣ್ಣಿನ ರಸವನ್ನು ಒಂದು ಗ್ಲಾಸ್ ನೀರಿಗೆ ಬೆರಸಿ ದಿನಕ್ಕೆ ಮೂರುಬಾರಿ ಸವೆದು ನಿಮ್ಮ ನೋವಿನಲ್ಲಾಗುವ ವ್ಯತ್ಯಾಸವನ್ನು ಗಮನಿಸಿರಿ. ಇದರ ಬದಲು, ನಿಂಬೆಹಣ್ಣಿನ ಪಾನೀಯಕ್ಕೆ ಅರ್ಧ ಚಮಚ ಅಡಿಗೆಸೋಡಾ ಬೆರಸಿ ಕುಡಿಯಿರಿ.

ಬಾಳೆಹಣ್ಣು

ಬಾಳೆಹಣ್ಣು

ವಿಟಮಿನ್ ಸಿ ಬಾಳೆಹಣ್ಣಿನಲ್ಲಿ ಅಧಿಕವಾಗಿ ದೊರೆಯುತ್ತದೆ. ಬಾಳೆಹಣ್ಣು ತಿನ್ನುವುದರಿಂದ ಕೀಲುನೋವುಗಳನ್ನು ನಿವಾರಿಸಲು ಸಹಾಯವಾಗುತ್ತದೆ. ಬಾಳೆಹಾಣ್ಣಿನಲ್ಲಿರುವ ಸಮೃದ್ಧ ಅಂಶಗಳು ದೇಹದಲ್ಲಿರುವ ಯೂರಿಕ್ ಆಮ್ಲದ ಸ್ಫಟಿಕಗಳನ್ನು ದುರ್ಬಲಗೊಳಿಸಿ ದ್ರವರೂಪಕ್ಕೆ ತರುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅದರಿಂದ ಸಂಧಿವಾತದ ನೋವು ನಿವಾರಣೆಯಾಗಲು ಸಹಾಯಮಾಡುತ್ತದೆ.

ಚೆರ್ರಿ ಹಣ್ಣು

ಚೆರ್ರಿ ಹಣ್ಣು

ಸಂಧಿವಾತದ ನೋವಿಗೆ ಚೆರ್ರಿ ಹಣ್ಣು ಒಂದು ಉತ್ತಮ ಪರಿಹಾರವನ್ನು ನೀಡುತ್ತದೆ. ನಿಯಮಿತವಾಗಿ ಸುಮಾರು 20 ತಾಜ ಚೆರ್ರಿಹಣ್ಣನ್ನು ಸೇವಿಸಿ ನೋವಿನಲ್ಲಾಗುವ ವ್ಯತ್ಯಾಸವನ್ನು ಗಮನಿಸಿ. ಇದಕ್ಕೆ ಬದಲು ಚೆರ್ರಿಹಣ್ಣಿನ ರಸವನ್ನೂ ಸಹ ಕುಡಿದರೆ ಅದೇ ಫಲಿತಾಂಶ ಹೊಂದಬಹುದು.

ತಣ್ಣೀರು

ತಣ್ಣೀರು

ಜಂಟಿನೋವಿನ ಶೀಘ್ರಪರಿಹಾರಕ್ಕೆ ನಿಮ್ಮ ಕೀಲುಗಳಮೇಲೆ ಐಸನ್ನು ಹರಡಿರಿ. ಆದರೆ ಐಸನ್ನು ಜಂಟಿಗಳಮೇಲೆ ನೇರವಾಗಿ ಹಾಕಬಾರದು. ಅದನ್ನು ಒಂದು ದಪ್ಪಗಿರುವ ಟೊವೆಲ್ಲಿನಲ್ಲಿ ಸುತ್ತಿ ನೋವಿನಭಾಗಗಳಮೇಲೆ ಸುಮಾರು 10 ನಿಮಿಷಗಳು ಇಡಿ. ಹೀಗೆ ಮಾಡುವುದರಿಂದ ಊತ ಮತ್ತು ನೋವು ಕಡಿಮೆಯಾಗುತ್ತದೆ. ಐಸಿನ ಬದಲು ತಣ್ಣಗಿರುವ ನೀರನ್ನೂ ಸಹ ಉಪಯೋಗಿಸಬಹುದು. ಪಾದಗಳ ಕೀಲುಗಲ್ಲಿ ಕಾಣುವ ನೋವನ್ನು ಕಡಿಮೆಮಾಡಲು ಈ ಕ್ರಮ ವಿಶೇಷವಾದದ್ದು.

ಎಪ್ಸಮ್ ಸಾಲ್ಟ್(ಮೆಗ್ನೀಸಿಯಮ್ ಸಲ್ಫೇಟ್)

ಎಪ್ಸಮ್ ಸಾಲ್ಟ್(ಮೆಗ್ನೀಸಿಯಮ್ ಸಲ್ಫೇಟ್)

ಎಪ್ಸಮ್ ಉಪ್ಪು ಬಿಸಿಬಿಸಿ ನೀರಲ್ಲಿ ಬೆರಸಿ ಸ್ನಾನ ಮಾಡಿದರೆ ನೋವು ಮತ್ತು ಸಂಧಿವಾತದಿಂದಾಗುವ ಅನಾನುಕೂಲಗಳನ್ನು ಕಡಿಮೆಮಾಡಿಕೊಳ್ಳಬಹುದು. ಸುಮಾರು ಎರಡು ಕಪ್ ಎಪ್ಸಮ್ ಉಪ್ಪನ್ನು ಬಿಸಿಬಿಸಿ ನೀರಲ್ಲಿ ಬೆರಸಿ ಸ್ನಾನಮಾಡಿದರೆ ನೀವು ಬಯಸಿದ ಪರಿಣಾಮವನ್ನು ಹೊಂದಬಹುದು. ಹೀಗೆ ಮಾಡುವುದನ್ನು ವಾರದಲ್ಲಿ 2 ರಿಂದ 3 ಬಾರಿ ಪುನರಾವರ್ತಿಸಿ.

ಇದ್ದಿಲು ಪುಡಿ

ಇದ್ದಿಲು ಪುಡಿ

ಇದ್ದಿಲುಪುಡಿಯನ್ನು ಬಿಸಿ ನೀರಿನಲ್ಲಿ ಬೆರಸಿ ಸ್ನಾನ ಮಾಡಿದರೆ ಸಂದಿನೋವುಗಳನ್ನು ನಿವಾರಿಸುವಲ್ಲಿ ಸಹಾಯಮಾಡಬಹುದು. ಇದು ಸಾಕಷ್ಟು ಪರಿಣಾಮಕಾರಿ ಪರಿಹಾರವಾಗಿದೆ. ಇದ್ದಿಲುಪುಡಿಯನ್ನು ಅರೆದು ಪೇಸ್ಟ್ ಮಾಡಿ ಸ್ನಾನಮಾಡುವ ನೀರಿನಲ್ಲಿ ಚೆನ್ನಾಗಿ ಕದಡಿ, ಪೇಸ್ಟ್ ಸಮವಾಗಿ ಹರಡಲು ಬಿಡಬೇಕು. ನಿಮ್ಮ ತೀವ್ರ ನೋವನ್ನು ನಿವಾರಿಸಲು ಸಕ್ರಿಯ ಇದ್ದಿಲನ್ನು ಉಪಯೋಗಿಸಿ. ಆದರೆ ಇದರ ಪ್ರಮಾಣವು ಕಡಿಮೆಯಾಗಿರಬೇಕು.

ಅನಾನಸ್.

ಅನಾನಸ್.

ಅನಾನಸ್ ಹಣ್ಣು ಅಥವ ಅನಾನಸ್ ಪಾನಕ ಸೇವಿಸುವುದರಿಂದ ಸಂಧಿನೋವುಗಳನ್ನು ಗುಣಪಡಿಸಬಹುದು.

ನೀರು

ನೀರು

ಆದಷ್ಟು ತುಂಬಾ ನೀರು ಕುಡಿಯಿರಿ. ನಿಮ್ಮ ಶರೀರದಲ್ಲಿ ನೀರಿನಾಂಶ ಸರಿಯಾಗಿದ್ದರೆ ನಿಮಗೆ ಸಂಧಿವಾತದ ಲಕ್ಷಣಗಳು ಹೆಚ್ಚಾಗಿರುವುದಿಲ್ಲ.

ದ್ರಾಕ್ಷಿ

ದ್ರಾಕ್ಷಿ

ದ್ರಾಕ್ಷಿಯು ಸಂಧಿವಾತಕ್ಕೆ ಒಂದು ಅದ್ಭುತ ನೋವು ನಿವಾರಕ.

ಜಲಚಿಕಿತ್ಸೆ

ಜಲಚಿಕಿತ್ಸೆ

ಬೆಚ್ಚಗಿನ ನೀರಿನಲ್ಲಿ ಸ್ನಾನಮಾಡಿದರೆ ನಿಮ್ಮ ಸ್ನಾಯು ಮತ್ತು ಕೀಲುಗಳು ಸಡಿಲವಾಗಿ ನೋವು ನಿವಾರಣೆಗೆ ಸಹಾಯಮಾಡಬಹುದು. ಇದರಿಂದ ತಾತ್ಕಾಲಿಕವಾಗಿ ಮಾತ್ರ ನೋವು ನಿವಾರಣೆಯಾಗಬಹುದು.

ಜ್ಯೂನಿಪರ್ ಎಣ್ಣೆ

ಜ್ಯೂನಿಪರ್ ಎಣ್ಣೆ

ಜ್ಯೂನಿಪರ್ ಬೆರ್ರಿಯಿಂದ ತಯಾರಿಸಿದ ಎಣ್ಣೆ ಲೇಪನ ಮಾಡಿದರೆ ಸಂಧಿವಾತದ ನೋವು ಗುಣವಾಗುತ್ತದೆ.

ಡೆವಿಲ್ಸ್ ಕ್ಲಾ

ಡೆವಿಲ್ಸ್ ಕ್ಲಾ

ಡೆವಿಲ್ಸ್ ಕ್ಲಾ, ಅಂದರೆ ಒಂದು ವಿಚಿತ್ರ ಜಾತಿಗೆ ಸೇರಿದ ದಕ್ಷಿಣ ಆಫ್ರಿಕಾದಲ್ಲಿ ಬೆಳೆಯುವ 'ಮರ ಜೇಡ' ಎಂಬ ಸಸ್ಯಗಳನ್ನು ಉಪಯೋಗಿಸಿ ಸಾಂಪ್ರದಾಯಿಕವಾಗಿ ನೋವು ಮತ್ತು ಶೂಲೆಗಳನ್ನು ಗುಣಪಡಿಸಲು ಬಳಸಲಾಗುತ್ತಿತ್ತು. ಇದರಿಂದ ಸಂಧಿವಾತವನ್ನೂ ಪರಿಣಾಮಕಾರಿಯಾಗಿ ಗುಣಪಡಿಸಬಹುದೆಂದು ಕಂಡುಬಂದಿದೆ. ಆದರೆ ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಈ ಚಿಕಿತ್ಸೆ ಉಪಯೋಗವಾಗುವುದಿಲ್ಲ.

ಎಲ್ಮ್ ಎಲೆ ಚಹಾ

ಎಲ್ಮ್ ಎಲೆ ಚಹಾ

ಎಲ್ಮ್ ಎಲೆಯನ್ನು ಉಪಯೋಗಿಸಿ ಮಾಡಿದ ಚಹಾ ತೀವ್ರ ಸಂಧಿವಾತದ ನೋವಿಗೆ ಒಂದು ಶೀಘ್ರ ಪರಿಹಾರವಾಗಿದೆ.

ಕುಸುಬೆ ಹೂವಿನ ಬೀಜ

ಕುಸುಬೆ ಹೂವಿನ ಬೀಜ

ನೋವನ್ನು ಗುಣಪಡಿಸಲು ಕುಸುಬೆ ಕಾಪ್ಸೂಲ್ ಉಪಯೋಗಿಸಬಹುದು. ಕುಸುಬೆ ಹೂವಿನ ಬೀಜದಿಂದ ತಯಾರಿಸಿದ ಔಷಧಿಯಿಂದ ಸಂಧಿವಾತವನ್ನು ಪರಿಣಾಮಕಾರಿಯಾಗಿ ಗುಣಪಡಿಸಬಹುದೆಂದು ಕಂಡುಬಂದಿದೆ.

 ಬೀನ್ಸ್

ಬೀನ್ಸ್

ನಿಯಮಿತವಾಗಿ ಒಂದು ತಿಂಗಳು ಪ್ರೆಂಚ್ ಬೀನ್ಸಿನಿಂದ ತಯಾರು ಮಾಡಿದ ರಸವನ್ನು ಸೇವಿಸಿದರೆ ಸಂಧಿವಾತದ ನೋವಿನಿಂದ ಚೇತರಿಸಿಕೊಳ್ಳಬಹುದು.

 ಜೇನು ತುಪ್ಪ

ಜೇನು ತುಪ್ಪ

ಜೇನು ತುಪ್ಪ ಮತ್ತು ಆಪಲ್ ಸೈಡರ್ ವಿನೇಗರ್ ಎರಡನ್ನೂ ಮಿಶ್ರಮಾಡಿ ಸೇವಿಸಿದರೆ ಸಂಧಿವಾತವನ್ನು ಗುಣಪಡಿಸಲು ಸಾಧ್ಯವಾಗುತ್ತದೆ. ಈ ಮಿಶ್ರಣವನ್ನು ದಿನಕ್ಕೆ ಎರಡುಬಾರಿ ತೆಗೆದುಕೊಳ್ಳಬೇಕು.

ಸಾಸಿವೆ

ಸಾಸಿವೆ

ನಮ್ಮ ನರಗಳಮೇಲೆ ಸಾಸಿವೆ ಒಂದು ಹಿತವಾದ ಪರಿಣಾಮವನ್ನು ಬೀರುವ ಗುಣಗಳನ್ನು ಹೊಂದಿದೆ. ಸಾಸಿವೆ ಪುಡಿ ಮತ್ತು ಗೋಧಿ ಹಿಟ್ಟು ಇವೆರಡರ ಮಿಶ್ರಣವನ್ನು ನೀರಿನಿಂದ ಪೇಸ್ಟ್ ಮಾಡಿಕೊಂಡು ನೋವಿರುವ ಸ್ಥಳಗಳಮೇಲೆ ರಾತ್ರಿ ಮಲಗುವ ಮುನ್ನ ಲೇಪಿಸಿ. ಹೀಗೆ ಒಂದು ರಾತ್ರಿ ಬಿಟ್ಟನಂತರ ನಿಮಗೆ ನೋವು ತ್ವರಿತವಾಗಿ ಪರಿಹಾರಗೊಂಡಿರುವುದನ್ನು ಅನುಭವಿಸುತ್ತೀರಿ.

ಜ್ಯೂಸ್ (ಪಾನಕ)

ಜ್ಯೂಸ್ (ಪಾನಕ)

ಸೌತೆಕಾಯಿ, ಬೀಟ್ರೂಟ್ ಮತ್ತು ಕ್ಯಾರಟ್ ಇವುಗಳ ಮಿಶ್ರಣದ ಜ್ಯೂಸನ್ನು ಸೇವಿಸಿರಿ. ಈ ತರಕಾರಿಗಳು ಕೀಲುನೋವನ್ನು ಗುಣಪಡಿಸುವ ಸಾಮರ್ಥ್ಯಹೊಂದಿವೆ.

ಹರಳೆಣ್ಣೆ

ಹರಳೆಣ್ಣೆ

ಹರಳೆಣ್ಣೆಯನ್ನು ಕಾಯಿಸಿ ನೋವಿರುವ ಕೀಲುಗಳಮೇಲೆ ಲೆಪಿಸಿದರೆ ನೋವು ಕಡಿಮೆಯಾಗುತ್ತದೆ.

English summary

Natural Herbal Remedies For Gout

These natural remedies were not only effective but also safe and secure. Listed below are some of the best natural remedies for treating gout.
X
Desktop Bottom Promotion