For Quick Alerts
ALLOW NOTIFICATIONS  
For Daily Alerts

ಹಸು ಹಾಲಿಗಿಂತ ಆಡಿನ ಹಾಲು ಪರಿಪೂರ್ಣ ಏಕೆ?

By Arpitha Rao
|

ನೀವು ಆಡಿನ ಹಾಲನ್ನು ಕುಡಿದಿದ್ದೀರಾ? ಬಹುಶಃ ಹೆಚ್ಚಿನ ಜನ ಇಲ್ಲ ಎನ್ನಬಹುದು. ಆದರೆ ನೀವು ತಿಳಿಯಬೇಕಾದ ವಿಷಯವೆಂದರೆ ಆಡಿನ ಹಾಲು ಹಸುವಿನ ಹಾಲಿಗಿಂತ ಹೆಚ್ಚು ಪೋಷಕಾಂಶವನ್ನು ಹೊಂದಿದೆ ಮತ್ತು ಆರೋಗ್ಯಕರ. ಪ್ರತಿದಿನ ಆಡಿನ ಹಾಲನ್ನು ಕುಡಿಯುವುದರಿಂದ ನೀವು ಹೆಚ್ಚು ಶಕ್ತಿಯುತವಾಗುತ್ತೀರಿ ಮತ್ತು ಇದು ಅನೇಕ ರೋಗಗಳು ಬರದಂತೆ ತಡೆಯುತ್ತದೆ.

ನೀವು ಪ್ರತಿದಿನ ಹಸುವಿನ ಹಾಲನ್ನು ಕುಡಿಯುತ್ತಿದ್ದು ಆದರೂ ಆರೋಗ್ಯಕರವಾಗಿಲ್ಲದಿದ್ದರೆ ಅದರರ್ಥ ನೀವೀಗ ಆಡಿನ ಹಾಲನ್ನು ಕುಡಿಯಲು ಪ್ರಾರಂಭಿಸಬೇಕು. ಹಸುವಿನ ಹಾಲಿಗಿಂತ ಆಡಿನ ಹಾಲು ಹೇಗೆ ಅಷ್ಟೊಂದು ಆರೋಗ್ಯಕರ ಎಂದು ನಿಮಗೆ ಆಶ್ಚರ್ಯವಾಗುತ್ತಿದ್ದರೆ ಈ ಕೆಳಗೆ ನೀಡಿರುವ ಮಾಹಿತಿಯನ್ನು ಓದಿ ನೋಡಿ. ಆಡಿನ ಹಾಲು ಮತ್ತು ಹಸುವಿನ ಹಾಲಿಗೆ ಇರುವ ವ್ಯತ್ಯಾಸ :-

ಈ ಕೆಳಗೆ ಹಸುವಿನ ಹಾಲಿಗಿಂತ ಆಡಿನ ಹಾಲು ಏಕೆ ಒಳ್ಳೆಯದು ಎಂಬುದಕ್ಕೆ ಐದು ಕಾರಣಗಳನ್ನು ನೀಡಲಾಗಿದೆ.

ಸುಲಭವಾಗಿ ಜೀರ್ಣಿಸಿಕೊಳ್ಳಬಹುದು

ಕೆಲವರಿಗೆ ಹಸುವಿನ ಹಾಲನ್ನು ಕುಡಿಯುವುದರಿಂದ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಕಾಣಿಸಿಕೊಳ್ಳಬಹುದು.ಈ ರೀತಿಯ ಸೂಕ್ಷ್ಮ ಹೊಟ್ಟೆ ಹೊಂದಿದವರಿಗೆ ಆಡಿನ ಹಾಲು ಸಹಾಯಕ. ಏಕೆಂದರೆ ಆಡಿನ ಹಾಲಿನಲ್ಲಿರುವ ಕೊಬ್ಬಿನ ಅಣುಗಳು ಹಸುವಿನ ಹಾಲಿಗೆ ಹೋಲಿಸಿದರೆ ಕಡಿಮೆ ಇರುತ್ತದೆ. ಜೊತೆಗೆ ಆಡಿನ ಹಾಲಿನಲ್ಲಿರುವ ಪೊಟ್ಯಾಶಿಯಂ ಅಂಶ ಮಾನವನ ದೇಹದಲ್ಲಿ ಕ್ಷಾರೀಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಹಸುವಿನ ಹಾಲಿನಲ್ಲಿ ಈ ಪೋಷಕಾಂಶ ಇಲ್ಲದೇ ಅಸಿಡಿಟಿ ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಸ್ವಾಭಾವಿಕವಾಗಿ ಏಕರೂಪ ಸ್ಥಿರತೆ ಹೊಂದಿದೆ

ಹಸುವಿನ ಹಾಲಿನಲ್ಲಿ ಮೇಲೆ ಕೆನೆಕಟ್ಟಿ ನಿಂತಿರುವುದು ಗಮನಿಸಿದ್ದೀರಾ? ಇದಕ್ಕೆ ಕಾರಣ ಹಸುವಿನ ಹಾಲಿನಲ್ಲಿರುವ ಓಮೋಜಿನೇಶನ್ ಎಂಬ ಅಂಶವು ಕೊಬ್ಬನ್ನು ಕರಗುತ್ತದೆ. ಇದರಿಂದ ಹಾಲು ಕ್ರೀಂ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.ಆದರೆ ಓಮೋಜಿನೇಶನ್ ತನ್ನದೇ ಆದ ಕುಂದುಕೊರತೆಗಳನ್ನು ಹೊಂದಿದೆ. ಇದು ಹಾಲಿನಲ್ಲಿ ರಾಡಿಕಲ್ಸ್ ಅನ್ನು ಉತ್ಪತ್ತಿ ಮಾಡುತ್ತದೆ ಮತ್ತು ಇದನ್ನು ಸೇವಿಸಿದ ದೇಹದಲ್ಲೂ ಕೂಡ ರಾಡಿಕಲ್ಸ್ ಉತ್ಪತ್ತಿಯಾಗುತ್ತದೆ.ಫ್ರೀ ರಾಡಿಕಲ್ಸ್ ಸೇರಿಕೊಂಡು ನಂತರದ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟುಮಾಡುತ್ತದೆ. ಆಡಿನ ಹಾಲು ಹಸಿಯಾಗಿರುವಾಗ ಕೂಡ homogenized ಆಗಿದ್ದು ಸ್ವಾಭಾವಿಕವಾಗಿರುತ್ತದೆ. ಆದ್ದರಿಂದ ಆಡಿನ ಹಾಲನ್ನು ಬಳಸುವುದರಿಂದ ಏಕರೂಪಸ್ಥಿರತೆಯಿಂದಾಗುವ ತೊಂದರೆಯನ್ನು ತಡೆಯಬಹುದು.

ಕಡಿಮೆ ಅಲರ್ಜಿ

ಹಸುವಿನ ಹಾಲಿನಲ್ಲಿ ಹಾಲಿನ ಪ್ರೋಟೀನ್ ಆದ ಕ್ಯಾಸೀನ್ ಅಂಶ ಅಧಿಕವಾಗಿರುತ್ತದೆ. ಕೆಲವು ಮಕ್ಕಳು ಈ ಪ್ರೋಟೀನ್ ಗೆ ಅಲರ್ಜಿಯಾಗಿ ವಾಂತಿ, ಭೇದಿ, ಕೆರೆತ ಮುಂತಾದವುಗಳು ಕಾಣಿಸಿಕೊಳ್ಳುತ್ತದೆ. ಈ ರೀತಿಯ ಅಲರ್ಜಿ ಉಂಟಾದಾಗ ಆಡಿನ ಹಾಲು ಸಹಾಯಕ. ಆಡಿನ ಹಾಲಿನಲ್ಲಿ ಕ್ಯಾಸೀನ್ ಅಂಶ ಕಡಿಮೆ ಪ್ರಮಾಣದಲ್ಲಿದ್ದು ಆರೋಗ್ಯಕರವಾಗಿರುತ್ತದೆ. ತ್ವಚೆಯ ಅಂದವನ್ನು ಹೆಚ್ಚಿಸುವ ಜೇನು ಮತ್ತು ಹಾಲಿನ ಪ್ಯಾಕ್

ಲ್ಯಾಕ್ಟೋಸ್ ಅಸಹಿಷ್ಣುತೆ

ಲ್ಯಾಕ್ಟೋಸ್ ಅನ್ನು ಹಾಲಿನಲ್ಲಿರುವ ಸಕ್ಕರೆಗೆ ಕರೆಯಲಾಗುತ್ತದೆ. ಮಾನವನ ದೇಹವು ಈ ಲ್ಯಾಕ್ಟೋಸ್ ಅನ್ನು ಕರಗಿಸಲು ಲ್ಯಾಕ್ಟೆಸ್ ಎಂಬ ಅಂಶವನ್ನು ಬಿಡುಗಡೆ ಮಾಡುತ್ತದೆ. ಲ್ಯಾಕ್ಟೆಸ್ ಅಂಶ ಕಡಿಮೆ ಇರುವವರಿಗೆ ಲ್ಯಾಕ್ಟೋಸ್ ಅನ್ನು ಜೀರ್ಣ ಮಾಡಲು ಆಗುವುದಿಲ್ಲ. ಆಡಿನ ಹಾಲಿನಲ್ಲಿ ಹಸುವಿನ ಹಾಲಿಗಿಂತ ಕಡಿಮೆ ಪ್ರಮಾಣದ ಲ್ಯಾಕ್ಟೋಸ್ ಇರುತ್ತದೆ ಮತ್ತು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು.

ಹೇರಳ ಪೋಷಕಾಂಶಗಳು

Is Goat Milk A Better Alternative To Cow Milk?

ಆಡಿನ ಹಾಲಿನಲ್ಲಿ ವಿಟಮಿನ್ ಎ ಅಂಶವಿದ್ದು ಮಾನವನು ಸುಲಭವಾಗಿ ಅದನ್ನು ಹೀರಿಕೊಳ್ಳಬಲ್ಲ.ಆಡಿನ ಹಾಲಿನಲ್ಲಿ ವಿಟಮಿನ್ ಬಿ ೨ ಅಧಿಕವಾಗಿದ್ದು ಸುಲಭವಾಗಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಜೀರ್ಣಿಸಿಕೊಳ್ಳುತ್ತದೆ.ಆಡಿನ ಹಾಲು ಪ್ರೋಟೀನ್,ಕ್ಯಾಲ್ಸಿಯಂ ಮತ್ತು ಸತುವಿನ ಅಂಶವನ್ನು ಹೇರಳವಾಗಿ ಹೊಂದಿರುತ್ತದೆ.ಇಮ್ಯೂನಿಟಿಯನ್ನು ಹೆಚ್ಚಿಸುತ್ತದೆ.ಆಡಿನ ಹಾಲಿನಲ್ಲಿ ಜೀರ್ಣಕ್ರಿಯೆಗೆ ಸಹಾಯಕವಾಗುವ ಬಯೋಆರ್ಗ್ಯಾನಿಕ್ ಸೋಡಿಯಂ ಹೇರಳವಾಗಿದೆ. ನಿಜವಾಗಿಯೂ ಹಸುವಿನ ಹಾಲು ಮಗುವಿಗೆ ಆರೋಗ್ಯಕಾರಿಯೇ?

ಆಡಿನ ಹಾಲಿನಲ್ಲಿ ಇಷ್ಟೆಲ್ಲಾ ಅನುಕೂಲತೆಗಳಿದ್ದರೂ ಕೂಡ ಕೆಲವರಿಗೆ ಇದರ ರುಚಿ ಇಷ್ಟವಾಗದೇ ಇರಬಹುದು. ಹಾಗಿದ್ದಲ್ಲಿ ಚೀಸ್, ಆಡಿನ ಹಾಲಿನ ಚೀಸ್, ಮೊಸರು ಮತ್ತು ಆಡಿನ ಹಾಲಿನ ಐಸ್ ಕ್ರೀಂ ಇವುಗಳನ್ನು ಬಳಸಿ. ತಾಜಾ ಆಡಿನ ಹಾಲು ನೀವಿರುವ ಸ್ಥಳದಲ್ಲಿ ಸಿಗದಿದ್ದಲ್ಲಿ ಈಗ ಮಾರುಕಟ್ಟೆಯಲ್ಲಿ ಪ್ಯಾಕ್ ಆಗಿರುವ ಆಡಿನ ಹಾಲು ದೊರಕುತ್ತದೆ ಅದನ್ನು ಬಳಸಬಹುದು. ಆರೋಗ್ಯಕರ ಮತ್ತು ಸಂತೋಷಕರ ಜೀವನ ನಿಮ್ಮದಾಗಲು ಆಡಿನ ಹಾಲನ್ನು ಇಂದಿನಿಂದಲೇ ಬಳಸಲು ಪ್ರಾರಂಭಿಸಿ.

English summary

Is Goat Milk A Better Alternative To Cow Milk?

When was the last time you drank goat milk? I guess not in a thousand years, right? But are you aware that goat milk is richer in nutrients and healthier than cow’s milk? Do you know that drinking goat milk everyday can actually make you stronger and eliminate most health ailments?
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more