ಸೀಬೆ ಹಣ್ಣಿನ ನ೦ಬಲಸಾಧ್ಯವಾದ ಆರೋಗ್ಯವರ್ಧಕ ಗುಣಗಳು

Posted By:
Subscribe to Boldsky

ಸೀಬೆ ಹಣ್ಣು ಅತ್ಯ೦ತ ಜನಪ್ರಿಯ ಹಣ್ಣುಗಳ ಪೈಕಿ ಒ೦ದಾಗಿದ್ದು, ಇದು ಸುಲಭವಾಗಿ ದೊರೆಯುವ೦ತಹ ಹಣ್ಣೂ ಕೂಡ ಹೌದು. ಮುಖ್ಯವಾಗಿ, ವರ್ಷದ ಈ ಅವಧಿಯು ಸೀಬೆ ಹಣ್ಣು ದೊರಕುವ ಕಾಲಾವಧಿಯಾಗಿದ್ದು, ಈ ಲೇಖನದ ಮುಖ್ಯ ಉದ್ದೇಶವು ಸೀಬೆ ಹಣ್ಣಿನಿ೦ದ ಸಿಗಬಹುದಾದ ಆರೋಗ್ಯ ಲಾಭಗಳ ಕುರಿತು ಬೆಳಕು ಚೆಲ್ಲುವುದೇ ಆಗಿದೆ. ನಿಮಗಿದು ತಿಳಿದಿದೆಯೋ, ಇಲ್ಲವೋ ಅ೦ತೂ ಸೀಬೆ ಹಣ್ಣು ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊ೦ದಿದೆ.            ಆರೋಗ್ಯ ವರ್ಧಿಸುವ ಸೀಬೆಹಣ್ಣು ಎಲೆಗಳ ಅದ್ಭುತ ಚಿಕಿತ್ಸಾ ಗುಣಗಳು

ಯಾಕೆ೦ದರೆ, ಮಾನವನ ಶರೀರಕ್ಕೆ ಬೇಕಾಗುವ ಅವಶ್ಯಕ ಪೋಷಕಾ೦ಶಗಳ ಸ೦ಯೋಜನೆಯನ್ನೇ ಈ ಸೀಬೆ ಹಣ್ಣು ಹೊ೦ದಿದೆ. ಹಾಗಿದ್ದರೆ, ಈ ಸೀಬೆ ಹಣ್ಣಿನಲ್ಲಿ ಅ೦ಥದ್ದೇನಿರಬಹುದು ಎ೦ದು ಯೋಚಿಸುತ್ತಿರುವಿರಾ? ಸ೦ಕ್ಷಿಪ್ತವಾಗಿ ಹೇಳಬೇಕೆ೦ದರೆ, ಅನೇಕ ಆರೋಗ್ಯದಾಯಕ ಖನಿಜಗಳು ಹಾಗೂ ವಿಟಮಿನ್‌ಗಳು. ಉದಾಹರಣೆಗೆ, ಸೀಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ಯು ಅತ್ಯ೦ತ ಸಾಮಾನ್ಯವಾದ ಕಾಯಿಲೆಗಳಿ೦ದ ನಿಮ್ಮ ದೇಹವನ್ನು ದೂರವಿಟ್ಟು ಅವುಗಳಿ೦ದ ಒದಗಬಹುದಾದ ಯಾತನೆಯಿ೦ದ ನಿಮ್ಮನ್ನು ರಕ್ಷಿಸುತ್ತದೆ....

ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತ್ಯ೦ತ ಪುಷ್ಟಿದಾಯಕವಾದ ಆಹಾರವಸ್ತುಗಳ ಪೈಕಿ ಸೀಬೆ ಹಣ್ಣೂ ಸಹ ಒ೦ದು. ಸೀಬೆ ಹಣ್ಣಿನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ಯು ಶರೀರದ ರೋಗನಿರೋಧಕ ವ್ಯವಸ್ಥೆಗೆ ಬಲವನ್ನೊದಗಿಸುತ್ತದೆ ಹಾಗೂ ತನ್ಮೂಲಕ ರೋಗಗಳ ವಿರುದ್ಧ ಸೆಣಸಾಡುವ ನಿಮ್ಮ ಶರೀರದ ಸಾಮರ್ಥ್ಯವನ್ನು ಸುಧಾರಿಸುತ್ತದೆ.

ಗೆಡ್ಡೆ-ಪ್ರತಿರೋಧಕ ಗುಣಲಕ್ಷಣಗಳನ್ನು ಹೊ೦ದಿದೆ

ಗೆಡ್ಡೆ-ಪ್ರತಿರೋಧಕ ಗುಣಲಕ್ಷಣಗಳನ್ನು ಹೊ೦ದಿದೆ

ಸೀಬೆ ಹಣ್ಣು ಮಹತ್ತರವಾದ ಗೆಡ್ಡೆ ಪ್ರತಿರೋಧಕ ಗುಣಲಕ್ಷಣಗಳನ್ನು ಹೊ೦ದಿದ್ದು, ಅವು ಶರೀರದಲ್ಲಿ ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತವೆ. ಟೊಮೇಟೊಗಳಲ್ಲಿ ಕ೦ಡುಬರುವ lycopene ಎ೦ದು ಕರೆಯಲ್ಪಡುವ ಒ೦ದು ಪ್ರಮುಖ ಘಟಕವನ್ನು ಸೀಬೆ ಹಣ್ಣು ಹೊ೦ದಿದೆ. ಹಾಗಾಗಿ ಇದೊ೦ದು ಜನಪ್ರಿಯವಾದ ಗೆಡ್ಡೆ-ಪ್ರತಿರೋಧಕ ಗುಣಲಕ್ಷಣವುಳ್ಳ ಅತ್ಯ೦ತ ಪರಿಣಾಮಕಾರಿ ಮೂಲಾ೦ಶಗಳ ಪೈಕಿ ಒ೦ದಾಗಿದೆ.

ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ

ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ

ಆ೦ಟಿ ಆಕ್ಸಿಡೆ೦ಟ್‌ಗಳ೦ತಹ ಅನೇಕ ಘಟಕಗಳ ಮಿಶ್ರಣವು ಈ ಸೀಬೆ ಹಣ್ಣಿನಲ್ಲಿರುವುದರಿ೦ದ, ಸೀಬೆ ಹಣ್ಣು ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಅತ್ಯ೦ತ ಪರಿಣಾಮಕಾರಿ ಆಹಾರವಸ್ತುಗಳ ಪೈಕಿ ಒ೦ದಾಗಿದೆ. ಸೀಬೆ ಹಣ್ಣಿನಲ್ಲಿರುವ ಅಗಾಧ ಪ್ರಮಾಣದಲ್ಲಿರುವ ವಿಟಮಿನ್ ಸಿ ಯು, ಕ್ಯಾನ್ಸರ್ ರೋಗವನ್ನು ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳನ್ನು ಉ೦ಟುಮಾಡುವ ಸಾಮರ್ಥ್ಯವುಳ್ಳ "ಆಮ್ಲಜನಕ ಮುಕ್ತ ರಾಡಿಕಲ್" ಗಳನ್ನು ತಟಸ್ಥಗೊಳಿಸುತ್ತದೆ.

ರಕ್ತದೊತ್ತಡವನ್ನು ಸರಿಯಾಗಿ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ

ರಕ್ತದೊತ್ತಡವನ್ನು ಸರಿಯಾಗಿ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ

ರಕ್ತದೊತ್ತಡವನ್ನು ಸ್ಥಿರವಾಗಿ ಕಾಪಾಡಿಕೊಳ್ಳುವ ಅತ್ಯ೦ತ ಶ್ಲಾಘನೀಯ ಗುಣವನ್ನು ಸೀಬೆ ಹಣ್ಣು ಹೊ೦ದಿದೆ. ಸೀಬೆ ಹಣ್ಣಿನಲ್ಲಿ ಹೇರಳವಾಗಿರುವ ಪೊಟ್ಯಾಸಿಯ೦ ನ ಅ೦ಶವು ರಕ್ತದೊತ್ತಡವನ್ನು ನಿರ್ವಹಿಸಲು ಶರೀರಕ್ಕೆ ಸಹಕರಿಸುತ್ತದೆ ಹಾಗೂ ದೇಹದ ರಕ್ತದೊತ್ತಡವನ್ನು ಏರುಪೇರಾಗಿಸಬಲ್ಲ ಬಾಹ್ಯ ಪ್ರಭಾವಗಳಿ೦ದಲೂ ಕೂಡ ನಿಮ್ಮ ಶರೀರವನ್ನು ರಕ್ಷಿಸುತ್ತದೆ.

ಮುಪ್ಪು ಪ್ರತಿರೋಧಕ (Anti-Ageing)

ಮುಪ್ಪು ಪ್ರತಿರೋಧಕ (Anti-Ageing)

ವಯಸ್ಸಾಗುವ ಪ್ರಕ್ರಿಯೆಯನ್ನು ಮು೦ದೂಡುವ ಯಾವುದಾದರೂ ಶಕ್ತಿಶಾಲಿಯಾದ ಆಹಾರಪದಾರ್ಥದ ಹುಡುಕಾಟದಲ್ಲಿ ನೀವೇನಾದರೂ ತೊಡಗಿದ್ದರೆ, ನಿಮ್ಮ ಹುಡುಕಾಟವು ಸೀಬೆ ಹಣ್ಣಿನೊ೦ದಿಗೆ ಪರ್ಯವಸಾನಗೊಳ್ಳುತ್ತದೆ. ಸೀಬೆ ಹಣ್ಣಿನಲ್ಲಿ ಸಮೃದ್ಧವಾಗಿರುವ ಆ೦ಟಿ ಆಕ್ಸಿಡೆ೦ಟ್ ಗಳು ಮುಕ್ತ ರಾಡಿಕಲ್ ಗಳನ್ನು ತಟಸ್ಥಗೊಳಿಸುತ್ತವೆ ಹಾಗೂ ಮಾಲಿನ್ಯದ ಕಾರಣದಿ೦ದ ಉ೦ಟಾಗುವ ಅತಿಯಾದ Oxidative stress (ಮುಕ್ತ ರಾಡಿಕಲ್ ಗಳ ಉತ್ಪಾದನೆ ಹಾಗೂ ಅವುಗಳ ಹಾನಿಕಾರಕ ಪರಿಣಾಮಗಳನ್ನು ಪ್ರತಿಬ೦ಧಿಸಲು ಶರೀರದ ಸಾಮರ್ಥ್ಯದ ನಡುವಿನ ಅಸಮತೋಲನ) ನ ಸ೦ಭವನೀಯತೆಯನ್ನು ತಡೆಗಟ್ಟುತ್ತದೆ.

ಮಧುಮೇಹಿಗಳಿಗೊ೦ದು ನೈಸರ್ಗಿಕ ಪರಿಹಾರ

ಮಧುಮೇಹಿಗಳಿಗೊ೦ದು ನೈಸರ್ಗಿಕ ಪರಿಹಾರ

ಸೀಬೆ ಹಣ್ಣಿನಲ್ಲಿರುವ ಅತಿಯಾದ ನಾರಿನ೦ಶವು ಮಧುಮೇಹಿಗಳಿಗೊ೦ದು ನೈಸರ್ಗಿಕವಾದ ಪರಿಹಾರವನ್ನೊದಗಿಸುತ್ತದೆ. ಮಧುಮೇಹಿಗಳಲ್ಲಿ ಸಕ್ಕರೆಯ ಅ೦ಶವು ಸ೦ಚಯಗೊಳ್ಳುವುದನ್ನು ಸೀಬೆ ಹಣ್ಣು ತಡೆಯುತ್ತದೆ. ಇದೊ೦ದು ವೈದ್ಯಕೀಯವಾಗಿ ಧೃಢೀಕರಿಸಲ್ಪಟ್ಟ ವಿಷಯವಾಗಿದೆ.

ತ್ವಚೆಯ ಆರೋಗ್ಯಕ್ಕೆ

ತ್ವಚೆಯ ಆರೋಗ್ಯಕ್ಕೆ

ಸೀಬೆ ಹಣ್ಣಿನಲ್ಲಿರುವ ವಿಟಮಿನ್ ಎ ಯು ಸಮೃದ್ಧವಾಗಿದ್ದು, ಇದು ತ್ವಚೆಯ ಆರೋಗ್ಯವನ್ನು ಹೆಚ್ಚಿಸುವ ಒ೦ದು ಪ್ರಮುಖ ವಿಟಮಿನ್ ಆಗಿದೆ. ಸೀಬೆ ಹಣ್ಣಿನಲ್ಲಿರುವ ಆ೦ಟಿ ಆಕ್ಸಿಡೆ೦ಟ್ ಗಳು ತ್ವಚೆಯು ತಾರುಣ್ಯಪೂರ್ಣವಾಗಿ ಕಾಣವ೦ತಾಗಲು ಸಹಕರಿಸುತ್ತವೆ.

ಕಣ್ಣುಗಳ ಆರೋಗ್ಯಕ್ಕೆ

ಕಣ್ಣುಗಳ ಆರೋಗ್ಯಕ್ಕೆ

ಮತ್ತೊಮ್ಮೆ, ಸೀಬೆ ಹಣ್ಣಿನ ಸೋಜಿಗವೆ೦ದೆನಿಸುವಷ್ಟು ವಿಟಮಿನ್ ಎ ಯು ಸಮೃದ್ಧವಾಗಿದ್ದು, ಇದರಲ್ಲಿ ವಿಟಮಿನ್ ಎ ಶೇ. 21 ಇದ್ದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ಇರುಳು ಕುರುಡು ಉಂಟಾಗದಂತೆ ಕಣ್ಣನ್ನು ರಕ್ಷಣೆ ಮಾಡುತ್ತದೆ.

ಜೀರ್ಣಶಕ್ತಿಯನ್ನು ಸುಧಾರಿಸುವಲ್ಲಿ ಅತ್ಯುತ್ತಮವಾಗಿದೆ

ಜೀರ್ಣಶಕ್ತಿಯನ್ನು ಸುಧಾರಿಸುವಲ್ಲಿ ಅತ್ಯುತ್ತಮವಾಗಿದೆ

ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಮಲಬದ್ಧತೆ ಸಮಸ್ಯೆ ಇರುವವರು ಹಣ್ಣಾದ ಸೀಬೆಕಾಯಿಯನ್ನು ಪ್ರತೀದಿನ ತಿನ್ನಿ, ಉತ್ತಮ ಫಲಿತಾಂಶ ಕಾಣುವಿರಿ.

ರಕ್ತಧಾತುಗಳ ಸ೦ಖ್ಯೆಯನ್ನು ಹೆಚ್ಚಿಸುತ್ತದೆ

ರಕ್ತಧಾತುಗಳ ಸ೦ಖ್ಯೆಯನ್ನು ಹೆಚ್ಚಿಸುತ್ತದೆ

ಈಗಾಗಲೇ ಉಲ್ಲೇಖಿಸಲಾಗಿರುವ ಖನಿಜಗಳು ಹಾಗೂ ವಿಟಮಿನ್ ಜೊತೆಗೆ; ತಾಮ್ರ, ಆಮ್ಲ ಇವೇ ಮೊದಲಾದ ಖನಿಜಗಳ ಹೊರತಾಗಿಯೂ ಕೂಡ ಪೇರಲವು ವಿಟಮಿನ್ ಸಿ ಮತ್ತು ಕೆ ಗಳನ್ನೂ ಸಹ ಒಳಗೊ೦ಡಿದೆ. ಇವೆಲ್ಲವೂ ರಕ್ತಧಾತುಗಳ ಸ೦ಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗಿವೆ.

ಮೊಡವೆ ರಹಿತ ತ್ವಚೆಗಾಗಿ

ಮೊಡವೆ ರಹಿತ ತ್ವಚೆಗಾಗಿ

ಹದಿಹರೆಯದವರಲ್ಲಿ ಕಂಡು ಬರುವ ಅತೀ ದೊಡ್ಡ ಸೌಂದರ್ಯ ಸಮಸ್ಯೆಯೆಂದರೆ ಮೊಡವೆ ಬರುವುದು. ಇದನ್ನು ತಿನ್ನಿ ಹಾಗೂ ಒಂದು ಚಿಕ್ಕ ತುಂಡು ಹಣ್ಣಾದ ಸೀಬೆಕಾಯಿಯನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ಮೊಡವೆ ಕಡಿಮೆಯಾಗುವುದು.

ಶೀತ ಉಂಟಾದರೆ ಸೀಬೆಕಾಯಿ ತಿನ್ನಿ

ಶೀತ ಉಂಟಾದರೆ ಸೀಬೆಕಾಯಿ ತಿನ್ನಿ

ಸಾಮಾನ್ಯವಾಗಿ ಶೀತ ಉಂಟಾದರೆ ಸೀಬೆಕಾಯಿ ತಿನ್ನಬಾರದು ಅನ್ನುವುದನ್ನು ನೀವು ಕೇಳಿರಬಹುದು. ಆದರೆ ಶೀತ ಉಂಟಾದರೆ ಸೀಬೆಕಾಯಿ ತಿನ್ನುವುದು ಒಳ್ಳೆಯದು. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಹಾಗೂ ಕಬ್ಬಿಣದಂಶವಿದ್ದು ಶೀತವನ್ನು ಕಡಿಮೆ ಮಾಡುತ್ತದೆ.

ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ

ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ

ಇದರಲ್ಲಿ ಮ್ಯಾಗ್ನಿಷಿಯಂ ಇರುವುದರಿಂದ ಸ್ನಾಯುಗಳಲ್ಲಿರುವ ಒತ್ತಡವನ್ನು ಕಡಿಮೆ ಮಾಡಿ ಅದಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ಇದರಿಂದ ಮೈಕೈ ಸೆಳೆತ ಕಡಿಮೆಯಾಗುವುದು.

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಬಿ ಗುಂಪಿನ ವಿಟಮಿನ್‌ಗಳು ಮೆದುಳಿಗೆ ಅವಶ್ಯಕ. ಸೀಬೆಕಾಯಿಯಲ್ಲಿ ಬಿ3 ಹಾಗೂ ಬಿ6 ವಿಟಮಿನ್ ಇದ್ದು ಮೆದುಳಿನ ನರಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ತ್ವಚೆಗೆ ಒಳ್ಳೆಯದು

ತ್ವಚೆಗೆ ಒಳ್ಳೆಯದು

ಸೀಬೆಕಾಯಿಯಲ್ಲಿ ವಿಟಮಿನ್ ಇ ಇದೆ. ತ್ವಚೆ ರಕ್ಷಣೆಯಲ್ಲಿ ವಿಟಮಿನ್ ಇ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದು

ಗರ್ಭಿಣಿಯರಿಗೆ ಒಳ್ಳೆಯದು

ಇದರಲ್ಲಿ ಫಾಲಿಕ್ ಆಸಿಡ್ ಹಾಗೂ ಇತರ ಖನಿಜಾಂಶಗಳು ಇರುವುದರಿಂದ ಗರ್ಭಿಣಿಯರಿಗೆ ಸೂಕ್ತವಾದ ಆಹಾರವಾಗಿದೆ.

ವಯಸ್ಸಿಗೆ ಸಂಬಂಧಿಸಿದ ಸಮಸ್ಯೆ

ವಯಸ್ಸಿಗೆ ಸಂಬಂಧಿಸಿದ ಸಮಸ್ಯೆ

ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಾದ ಮರೆವು, ಮಂದ ದೃಷ್ಟಿ ಮತ್ತು ಸಂಧಿವಾತವನ್ನೂ ನಿವಾರಿಸುವಲ್ಲಿ ಸೀಬೆ ಹಣ್ಣು ಸಹಕಾರಿ.

ಕೊಲೆಸ್ಟ್ರಾಲ್ ನಿಯಂತ್ರಣ

ಕೊಲೆಸ್ಟ್ರಾಲ್ ನಿಯಂತ್ರಣ

ತೂಕ ಕಡಿಮೆಮಾಡಿಕೊಳ್ಳಬೇಕೆಂದಿದ್ದರೆ ಸೀಬೆ ಒಳ್ಳೆ ಆಯ್ಕೆ. ಸೀಬೆಯಲ್ಲಿ ಅವಶ್ಯಕ ಕಾರ್ಬೊ ಹೈಡ್ರೇಡ್ ಮತ್ತು ಫೈಬರ್ ಇರುವುದರಿಂದ ಬೊಜ್ಜನ್ನೂ ನಿಯಂತ್ರಿಸುತ್ತದೆ. ಸೀಬೆ ಹಣ್ಣನ್ನು ನಿಮ್ಮ ಡಯಟ್ ನಲ್ಲಿರಿಸಿಕೊಂಡರೆ ಕೊಲೆಸ್ಟ್ರಾಲ್ ನಿಯಂತ್ರಣ ಸಾಧ್ಯವಿದೆ.

ಹೇರಳ ವಿಟಮಿನ್ ಸಿ

ಹೇರಳ ವಿಟಮಿನ್ ಸಿ

ವಿಟಮಿನ್ ಸಿ ಇರುವ ಉತ್ತಮ ಹಣ್ಣನ್ನು ಹುಡುಕುತ್ತಿದ್ದರೆ ಸೀಬೆಹಣ್ಣು ತುಂಬಾ ಒಳ್ಳೆಯ ಆಯ್ಕೆ. ಕಿತ್ತಳೆಯಲ್ಲಿ 69 ಮಿ.ಗ್ರಾಂ ವಿಟಮಿನ್ ಸಿ ಇದ್ದರೆ ಸೀಬೆಯಲ್ಲಿ 165 ಮಿ.ಗ್ರಾಂ ವಿಟಮಿನ್ ಸಿ ಇದೆ ಎಂದು ತಿಳಿದುಬಂದಿದೆ.

ಚರ್ಮದ ಪೋಷಣೆ

ಚರ್ಮದ ಪೋಷಣೆ

ಸೀಬೆ ಸೇವನೆ ಚರ್ಮವನ್ನೂ ಹದವಾಗಿಡುತ್ತದೆ. ಅನೇಕ ತ್ವಚೆ ಸಂಬಂಧಿ ಸಮಸ್ಯೆಗಳನ್ನು ದೂರವಿರಿಸುತ್ತದೆ. ದಿನಕ್ಕೊಂದು ಸೀಬೆ ತಿಂದರೆ ಸಾಕು, ಅಗತ್ಯವಾದ ಕಬ್ಬಿಣಾಂಶ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಫೈಬರ್, ಪ್ರೊಟೀನ್, ಕಾರ್ಬೊಹೈಡ್ರೇಡ್, ವಿಟಮಿನ್ ಎ, ಬಿ, ಮತ್ತು ಸಿ ಎಲ್ಲವನ್ನೂ ನೀಡುತ್ತದೆ.

ಪುರುಷರಿಗೆ ಅಗತ್ಯ

ಪುರುಷರಿಗೆ ಅಗತ್ಯ

ವೀರ್ಯೋತ್ಪತ್ತಿ ಕಡಿಮೆಯಿದ್ದ ಪುರುಷರು ಸೀಬೆಹಣ್ಣನ್ನು ಸೇವಿಸುವುದರಿಂದ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನಲಾಗಿದೆ.

ತೆಳ್ಳಗಾಗಲು ಡಯಟ್

ತೆಳ್ಳಗಾಗಲು ಡಯಟ್

ಸೀಬೆಕಾಯಿಯಲ್ಲಿ ನಾರಿನಂಶ ಹಾಗೂ ಖನಿಜಾಂಶಗಳು ಅಧಿಕವಿದ್ದು ಇದನ್ನು ತಿಂದರೆ ದೇಹಕ್ಕೆ ಅಗತ್ಯದ ಪೋಷಕಾಂಶ ದೊರೆಯುತ್ತದೆ, ಹೊಟ್ಟೆಯೂ ತುಂಬುವುದು. ತೆಳ್ಳಗಾಗಲು ಡಯಟ್ ಮಾಡುವವರು ಇದನ್ನು ಸೇರಿಸುವುದು ಒಳ್ಳೆಯದು.

ಜೀರ್ಣಕ್ರಿಯೆಗೆ ಒಳ್ಳೆಯದು

ಜೀರ್ಣಕ್ರಿಯೆಗೆ ಒಳ್ಳೆಯದು

ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಮಲಬದ್ಧತೆ ಸಮಸ್ಯೆ ಇರುವವರು ಹಣ್ಣಾದ ಸೀಬೆಕಾಯಿಯನ್ನು ಪ್ರತೀದಿನ ತಿನ್ನಿ, ಉತ್ತಮ ಫಲಿತಾಂಶ ಕಾಣುವಿರಿ.

 

English summary

Incredible Health Benefits Of Guava

Guava is one of the most popular fruits and easily available as well. This being the prime season for the fruit, our focus in this article is on the health benefits of guava. o what does guava contain?
Subscribe Newsletter